ವಿಷಯದ ವಿವರಗಳಿಗೆ ದಾಟಿರಿ

Posts from the ‘ಸಂಸ್ಕೃತಿ’ Category

17
ನವೆಂ

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೆಳ್ಳಿಮೋಡ ಸೇರಿದಂತೆ ತೆರೆಕಂಡ ೧೬ ಸಿನಿಮಾಗಳು

ಕರುಣಾಕರ ಬಳ್ಕೂರು

ಸಿನಿಮಾ ಅಂದ್ರೆ ಯಾರಿಗೆ ಇಷ್ಟಯಿಲ್ಲ ಹೇಳಿ? ಊಟ-ತಿಂಡಿ ಬಿಟ್ಟು 5-6 ಸಿನಿಮಾಗಳನ್ನು ನೊಡುವವರಿಗೇನು ನಮ್ಮಲ್ಲಿ ಬರವಿಲ್ಲ. ಆದರೆ ಇವತ್ತು ಕಲಾತ್ಮಕ ಸಿನಿಮಾಗಳನ್ನುನೋಡುವವರು ಮಾತ್ರ ಬೆರೆಳಣಿಯಷ್ಟೇ ಜನ ಸಿಗತ್ತಾರೆ? ಆದರೆ ಅವರಿಗೆ ನೋಡುವ ಅವಕಾಶ ಕೊಟ್ಟರೆ ಸಿನಿಮಾ ನೋಡುತ್ತಾರೆ ಎನ್ನುವುದಕ್ಕೆ ಮಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವೇ ಸಾಕ್ಷಿಯಾಯಿತು. ತೆರೆಯ ಮೇಲೆ ಬೆಳ್ಳಿಮೋಡ ಅನಾವರಣ ಕಂಡಾಗ ಪ್ರೇಕ್ಷಕನ ಮೈರೋಮಾಂಚನ ಗೊಂಡಿರುವುದು ಆಶ್ಚರ್ಯದ ಸಂಗತಿ. ಮತ್ತಷ್ಟು ಓದು »

15
ನವೆಂ

ಪೇಟೆ ಸಾಕು, ನಡೀರಿ ಹಳ್ಳಿಗೆ!

ಮಹೇಶಕುಮಾರ್ ನೀರ್ಕಜೆ
ಹಳ್ಳಿ ಮೇಲೋ ಪಟ್ಟಣ ಮೇಲೋ? ಶಾಲೆಗಳ ಚರ್ಚಾಕೂಟಗಳಲ್ಲಿ ಇಂಥಾದ್ದೊಂದು ಚರ್ಚೆ ಸಾಮಾನ್ಯವಾಗಿ ಇರುತ್ತಿತ್ತು. ಈ ಪ್ರಶ್ನೆಗೆ ಆಗ ಪರಿಹಾರ ಸಿಕ್ಕಿತ್ತೇ? ಗೊತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಂತೂ ಉತ್ತರವಿಲ್ಲದಂತಾಗಿದೆ. ನಿಖರವಾದ ಉತ್ತರವೊಂದನ್ನು ನಿರೀಕ್ಷಿಸುವುದು ಸಾಧುವೂ ಅಲ್ಲ. ಯಾಕೆಂದರೆ ಈ ಪ್ರಶ್ನೆಗೆ ಉತ್ತರ ಬಹುತೇಕವಾಗಿ ವೈಯಕ್ತಿಕ ಆಸಕ್ತಿ, ಕುಟುಂಬದ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ ಇತ್ಯಾದಿ ಅಂಶಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಹಳ್ಳೀಲಿ ಯಾರನ್ನಾದರೂ ಈ ಪ್ರಶ್ನೆ ಕೇಳಿದರೆ ನೂರಕ್ಕೆ ತೊಂಭತ್ತರಷ್ಟು ಜನ ಪೇಟೇನೇ ಒಳ್ಳೆದು ಎನ್ನಬಹುದು. ಅದಕ್ಕೆ ಕಾರಣಗಳೂ ಸಾಕಷ್ಟು ಇರಬಹುದು. ಅದೇ ಪಟ್ಟಣಗಳಲ್ಲಿ ವಾಸಿಸುತ್ತಿರುವವರು ಅಲ್ಲಿನ ಜಂಜಾಟದಿಂದ ಬೇಸತ್ತಿರುತ್ತಾರೆ ಮತ್ತು ಹಳ್ಳಿ ಜೀವನದ ಬಗ್ಗೆ ಒಂದು ರೀತಿಯ ಕೃತ್ರಿಮವಾದ ಸುಂದರ ಕಲ್ಪನೆಗಳನ್ನು ಇಟ್ಟುಕೊಂಡಿರುತ್ತಾರೆ. ಈ ಲೇಖನದ ಉದ್ದೇಶ ಹಳ್ಳಿ ಮತ್ತು ಪಟ್ಟಣದ ಮಧ್ಯದ ಆಯ್ಕೆಯ ಬಗ್ಗೆ ಅಲ್ಲ, ಬದಲಾಗಿ ಇತ್ತೀಚೆಗೆ ಭಾರತೀಯ ಸಾಮಾಜದಲ್ಲಿ ಮತ್ತು ಪರಿಸರದಲ್ಲಾದ ಬದಲಾವಣೆಗಳ ಕುರಿತು ಒಂದು ಜಿಜ್ಞಾಸೆ – ಸಮಸ್ಯೆಗಳು, ಪರಿಹಾರಗಳು ಹಾಗೂ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿರುವವರ ಬಗ್ಗೆ ಒಂದಿಷ್ಟು ವಿವರಗಳು.

ಮೊದಲಿಗೆ ಕೆಲವೊಂದು ಸರಳ ಮಾಹಿತಿಗಳು. ೨೦೦೮  ಅಂಕಿ-ಅಂಶಗಳ ಪ್ರಕಾರ, ಭಾರತದ ಒಟ್ಟು ಜನಸಂಖ್ಯೆಯ ಶೇ ೩೦ ರಷ್ಟು ಜನ ಪಟ್ಟಣಗಳಲ್ಲಿ (ಮಹಾನಗರಗಳು, ನಗರಗಳು) ವಾಸಿಸುತ್ತಿದ್ದಾರೆ. ಈ ಸಂಖ್ಯೆ ೨೦೩೦ ರ ಹೊತ್ತಿಗೆ ಶೇ ೪೦ ಏರುತ್ತದೆ. ಈಗಿನ ಗತಿಯಲ್ಲೇ ಜನಸಂಖ್ಯೆ ಏರುತ್ತಿದ್ದರೆ ೨೦೩೦ ಕ್ಕೆ ಒಟ್ಟು ಜನಸಂಖ್ಯೆ ೧೪೭ ಕೋಟಿಗಳಷ್ಟಾಗುತ್ತದೆ ಮತ್ತು ಆ ಹೊತ್ತಿಗೆ ಶೇ ೪೦, ಅಂದರೆ ಸುಮಾರು ೬೦ ಕೋಟಿ ಜನ ಪಟ್ಟಣಗಳಲ್ಲಿ ವಾಸಿಸುತ್ತಾರೆ! ಇದು ಈಗಿನ ಪಟ್ಟಣಿಗರ ಸಂಖ್ಯೆ (ಸುಮಾರು ೩೫ ಕೋಟಿ) ಗಿಂತ ೨೫ ಕೊಟಿ ಹೆಚ್ಚು. ಮತ್ತಷ್ಟು ಓದು »

13
ನವೆಂ

ಕನ್ನಡವೇ ಸತ್ಯ-ನಿತ್ಯ ಸತ್ಯ……

ಅರೆಹೊಳೆ ಸದಾಶಿವ ರಾವ್

ಕನ್ನಡ ಡಿ೦ಡಿಮ ಮತ್ತೆ ಮೊಳಗಿದೆ. ಇಲ್ಲಿ‘ಮತ್ತೆ’ ಯಾಕೆ೦ದರೆ ಪ್ರತೀ ವರ್ಷ ಕನ್ನಡ ಡಿ೦ಡಿಮ ಮೊಳಗುವುದು ಕೇವಲ ನವೆ೦ಬರ್‌ನಲ್ಲಿ ಮಾತ್ರ. ಈ ಒ೦ದು ತಿ೦ಗಳು ಎಲ್ಲೆಡೆಯಲ್ಲಿಯೂ, ಎಲ್ಲರ ಬಾಯಲ್ಲೂ ಕನ್ನಡ.. ಕನ್ನಡ.. ಕನ್ನಡ !ಮತ್ತೆ ಹನ್ನೊ೦ದು ತಿ೦ಗಳು ಆ ಮಾತಿಗೆ ದೀರ್ಘ ರಜೆ. ನವೆ೦ಬರ್ ಕಳೆದು ಡಿಸೆ೦ಬರ್ ಬ೦ದರೆ, ಚಳಿಗಾಲದ ಆರ೦ಭದೊಡನೆ, ಕನ್ನಡ ಚಳಿಹಿಡಿಸಿಕೊ೦ಡ೦ತೆ ಮೂಲೆಗೆ ಕುಳಿತುಕೊಳ್ಳುತ್ತದೆ. ಅದಕ್ಕೆ೦ದೇ ಈ ‘ಮತ್ತೆ’ ಇಲ್ಲಿ ಪ್ರಸ್ತುತ.

ಇದೆಲ್ಲಾ ಯಾಕೆ ಎನ್ನುವುದಕ್ಕೂ ಈ ನವೆ೦ಬರ್‌ನಲ್ಲಿಯೇ ಉತ್ತರದ ಹುಡುಕಾಟ ಆರ೦ಭವಾಗುತ್ತದೆ. ನಮಗೆ ನೇರವಾಗಿ ಸಿಗುವುದು ಸರ್ಕಾರ. ಎಲ್ಲದರ೦ತೆ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ, ಅಭಿಮಾನ ಶೂನ್ಯತೆ, ನಿರ್ವೀರ್ಯತೆ…..ಇತ್ಯಾದಿ ಅರ್ಥಕೋಶದ ಪದಬಳಕೆ ಮಾಡಿ, ಸರ್ಕಾರವನ್ನು ಬೈದು ನವೆ೦ಬರ್ ತಿ೦ಗಳು ಮುಗಿಸಿ, ಮತ್ತೆ ಸುಮ್ಮನಾಗುತ್ತೇವೆ. ನಿಜಕ್ಕೂ ನಮ್ಮ ಭಾಷೆಯ ಬಗ್ಗೆ ನಾವು ತೆಗೆದುಕೊಳ್ಳಬೇಕಾದ ಯಾವ ಜವಾಬ್ದಾರಿಗಳೂ ಇಲ್ಲವೇ ಎ೦ಬುದು ಇ೦ದಿನ ಪ್ರಶ್ನೆ.

ಒ೦ದು ವಿಚಾರವನ್ನು ನಾನಿಲ್ಲಿ ಪ್ರಸ್ತಾಪಿಸಬಯಸುತ್ತೇನೆ. ಈ ಹಿ೦ದೆಯೂ ನಾನಿದರ ಬಗ್ಗೆ ಹೇಳಿದ್ದೆ. ಅ೦ತರಾಷ್ಟ್ರೀಯ ಸ೦ಸ್ಥೆಯೊ೦ದಕ್ಕೆ ನಾನು ಸೇರಿದ ನ೦ತರ ಅಲ್ಲಿ ಒಮ್ಮೆ ಕನ್ನಡದಲ್ಲಿ ಮಾತಾಡುವ ಸುಯೋಗ ಒದಗಿತು. ಹೆಚ್ಚಾಗಿ ಆ೦ಗ್ಲಮಯವಾದ ಆ ಸಭೆಯಲ್ಲಿ ನಾನು ಕನ್ನಡದಲ್ಲಿಯೇ ಮಾತಾಡಿದೆ. ಅದು ತು೦ಬಾ ಜನರನ್ನು ಬಹು ಬೇಗ ಮುಟ್ಟಿತು-ತಟ್ಟಿತು. ಇತ್ತೀಚೆಗೆ ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆ, ಭಾಷಣದ  ಆರೋಗ್ಯಕರ ಬೆಳವಣಿಗೆ ಎಲ್ಲೆಡೆಯಲ್ಲೂ ಆರ೦ಭವಾಗಿದೆ.ಕೇವಲ ಆ೦ಗ್ಲಭಾಷೆಯಲ್ಲಿಯೇ ಇರುತ್ತಿದ್ದ ಹೆಚ್ಚಿನೆಲ್ಲಾ ಕಾರ್ಯಕ್ರಮಗಳು ಕನ್ನಡೀಕರಣಗೊಳ್ಳುತ್ತಾ ಬ೦ದಿವೆ. ಈ ಬೆಳವಣಿಗೆ ‘ನನ್ನಿ೦ದ’ ಆದದ್ದು ಎ೦ದು ನಾನು ಹೇಳುತ್ತಿಲ್ಲ. ಕನ್ನಡ-ಅ೦ದರೆ ನಮ್ಮ ಮಾತ್ರಭಾಷೆ ನಮ್ಮ ಹೃದಯವನ್ನು ತಟ್ಟಿದಷ್ಟು ಬೇಗನೇ, ಬೇರೆ ಭಾಷೆ ತಟ್ಟುವುದಿಲ್ಲ. ತಿಳಿದೋ ತಿಳಿಯದೆಯೋ ನಾವು ಬೇರೆ ಭಾಷೆಗಳನ್ನು, ಮುಖ್ಯವಾಗಿ ಆ೦ಗ್ಲವನ್ನು ನೆಚ್ಚಿಕೊ೦ಡಿರುತ್ತೇವೆ. ಮತ್ತಷ್ಟು ಓದು »

30
ಆಕ್ಟೋ

‘ರಾವಣನ ಹೊಸ ಮುಖ ಅನಾವರಣಗೊಳಿಸಿದ ವಿಶಿಷ್ಟ ರಂಗ ಪ್ರಯೋಗ :- ಏಕಾದಶಾನನ ’

ಕರುಣಾಕರ ಬಳ್ಕೂರು

ವೇದವ್ಯಾಸ ರಾಮಾಯಣದ ಸಣ್ಣ ಎಳೆಯೊಂದನ್ನು ತೆಗೆದು ನಾಟಕರಂಗಕ್ಕೆ ಅಳವಡಿಸಿದ ರೀತಿ ಸೃಜನಶೀಲವಾದದ್ದು. ‘ಜಯ ರಾಮ ಜಯ ಜಯ ರಾಮ’ ಎನ್ನುವ ರಾಮ ನಾಮ ಸ್ಮರಣೆಯನ್ನು ಹೊಗಳುತ್ತ ಭಕ್ತರ ಗುಂಪಿನ ಆಗಮನ, ಇಂದು ರಾಮನ ಪಟ್ಟಾಭಿಷೇಕವಂತೆ.., ಭರ್ಜರಿ ಊಟ, ಮನೋರಂಜನೆ ಹಾ.. ಹಾ.. ಎಲ್ಲರ ಮೊಗದಲ್ಲಿಯೂ ಸಂತೋಷದ ಹೂಮಳೆ. ಅಯೋಧ್ಯೆಯ ನಗರಕ್ಕೆ ರಾಜ ಮಹಾರಾಜರು, ಪುರಜನರು, ಬಂಧುಗಳು, ರಾಮನ ಭಕ್ತರು, ಹಿತೈಷಿಗಳು ಹೀಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ದ್ವಾರಪಾಲಕನಂತೂ ಬಂದವರನ್ನು ಸುಧಾರಿಕೆ ಮಾಡುವ ದೊಡ್ಡ ಕೆಲಸವನ್ನು ಲವವಿಕೆಯಿಂದ ನಿಭಾಯಿಸುವುದು ನಾಟಕದ ಆರಂಭಕ್ಕೆ ಮುನ್ನುಡಿಯಾಗಿದೆ.

ಬಂದಿರುವವರ ಕುದುರೆಗಳನ್ನು ಇಲ್ಲಿ ಕಟ್ಟಿ, ಅಲ್ಲಿ ಕಟ್ಟಿ, ದೂರದ ರಾಜರುಗಳಿಗೆ ಉಳಿಯಲು ಅತಿಥಿ ಗೃಹ ಅಲ್ಲಿದೆ, ರಾಮನ ಪಟ್ಟಾಭೀಷೇಕಕ್ಕೆ ಚಿನ್ನ, ಬೆಳ್ಳಿ, ಹಣವನ್ನು ಕಾಣಿಕೆಯಾಗಿ ತಂದವರು ಭಂಡಾರದಲ್ಲಿ ಕೊಟ್ಟು ರಶೀದಿಯನ್ನು ತಪ್ಪದೇ ಪಡೆಯಿರಿ, ಮತ್ತೆ ಊಟ ಮಾಡುವಲ್ಲಿ ನೂಕು ನೂಗ್ಗಲು ಮಾಡದಿರಿ ಎಂದು ಆಗಮಿಸಿರುವ ಸರ್ವರಲ್ಲಿ ಬಿನ್ನೈಸಿಕೊಳ್ಳುತ್ತ ದ್ವಾರಪಾಲಕನು ರಾಮನ ಪಟ್ಟಾಭಿಷೇಕಕ್ಕೆ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾನೆ.

ಎರಡನೆ ದೃಶ್ಯದಲ್ಲಿ ಕೌಸಲ್ಯೆ ಮತ್ತು ರಾಮನು ಕಷ್ಟ-ಸುಖಗಳ ಬಗ್ಗೆ ಕುಳಿತು ಹರಟೆ ಹೊಡೆಯುತ್ತಾರೆ. ಆಗ ರಾಮ, ರಾಮಣನ ಪರವಹಿಸಿ ಮಾತನಾಡಿದಾಗ ಕೌಸಲ್ಯೆ ಕೆಂಡಮಂಡಲವಾಗಿ ರಾವಣನನ್ನು ದೂಷಿಸುತ್ತಾ ಆಕ್ರೋಶವನ್ನು ವ್ಯಕ್ತಪಡಿಸುತ್ತಾಳೆ. ಆದರೆ ರಾಮ, ರಾವಣನ ಅಂತಃಕರಣವನ್ನು ಮನಸಾರೆ ಮೆಚ್ಚಿ ತನ್ನ ಅನುಭವದ ನುಡಿಗಳನ್ನು ಕೌಸಲ್ಯೆಯಲ್ಲಿ ಬಿಚ್ಚಿಡುತ್ತಾನೆ. ನಾಟಕದ ನಡುವೆಯೇ ಹಿಂದೆ ನಡೆದ ಎಲ್ಲಾ ಘಟನೆಗಳು ರಂಗಮಂಟಪದ ಮೇಲೆ ಒಂದರ ಮೇಲೆ ಒಂದರಂತೆ ಚಿತ್ರ ಪಟಲಗಳ ಮೂಲಕ ಬಂದು ಹೋಗುವಾಗ ರಾಮಾಯಣದ ಕಥೆಯು ಅನಾವರಣಗೊಳ್ಳುತ್ತದೆ. ಇದು ನಿರ್ದೇಶಕರ ಕೈಚಳಕದಿಂದ ವಿನೂತನವಾಗಿ ಮೂಡಿಬಂದಿದೆ. ಮತ್ತಷ್ಟು ಓದು »

29
ಆಕ್ಟೋ

ಹೊಯಿ ನಮ್ಮ ಕುಂದಾಪ್ರದ ಅಪ್ಪಟ ಹೆಣ್ಣು ಮಗಳಿಗೆ ‘ಆಳ್ವಾಸ್ ನುಡಿಸಿರಿ’ಯ ಅಧ್ಯಕ್ಷಗಿರಿ

ಕರುಣಾಕರ ಬಳ್ಕೂರು

ಹೋಯಿ ನಮ್ಮ ಕುಂದಾಪ್ರದ ಅಪ್ಪಟ ಹೆಣ್ಣು ಮಗಳಿಗೆ ಆಳ್ವಾಸ್ ನುಡಿಸಿರಿಯ ಅಧ್ಯಕ್ಷಗಿರಿ. ಇದ್ ನಮ್ ಊರಿಗೆ ಬಾರಿ ಖುಷಿ ವಿಷಯ ಕಾಣಿ. ಕುಂದಾಪ್ರ ಹೆನ್ಮಗಳ ಸಾಧನೆಗೆ ಕುಂದಾಪ್ರದಲ್ಲಿ ಸಂಭ್ರಮ, ಸಡಗರ ತುಂಬಿ ತುಳುಕುತ್ತಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ವೈದೇಹಿಯವರ ಹೆಸರು ಇಂದು ಅಗ್ರ ಪಂಥಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ತನ್ನದೇ ಆದ ಭಾವನೆಗಳನ್ನು ಬರವಣಿಗೆಯ ಮೂಲಕ ಬರೆಯುತ್ತಾ ಬಂದವರು. ಈಗಲು ಬರೆಯುತ್ತಿರುವವರು. ಮಾತನಾಡುವ ಶೈಲಿಯಲ್ಲಿ ಅಚ್ಚ ಕುಂದಾಪ್ರಗನ್ನಡದ ಸೊಗಡು, ಸಾಹಿತ್ಯದ ಮೆರಗು ಹೀಗೆ ವೈದೇಹಿ ಅಂದ್ರೆ ಎಲ್ಲರಿಗೂ ಮಸ್ತ್ ಖುಷಿ. ಅವರ ಬರವಣಿಗೆಯಲ್ಲಿ ಮಗುವಿನ ಮುಗ್ಧತೆ, ಎಲ್ಲವನ್ನು ಕುತೂಹಲದಿಂದ ನೊಡುವ ಮನಸ್ಸು, ಭಾವ ಪ್ರಧಾನವಾದ ಅವರ ಆಲೋಚನೆಗಳು ಹೀಗೆ ಎಲ್ಲಾವು ವ್ಯಕ್ತಿತ್ವದಲ್ಲಿ ತುಂಬಿಕೊಂಡಿವೆ. ಮಾತಿಗೆ ಸಿಕ್ಕರಂತು ‘ಇಲ್ಕಾಣಿ’ ಎನ್ನುವ ಕುಂದಾಪ್ರ ಭಾಷೆಯ ಸೊಗಡಿನ ನುಡಿಗಳನ್ನು ಅವರ ಬಾಯಿಂದಲೇ ಕೇಳಲು ಎಷ್ಟೊಂದು ಸೊಗಸು.

ನಗುಮೊಗದಿ, ಸರಳ ಸಜ್ಜಿನಿಕೆಯೊಂದಿಗೆ ಅಚ್ಚ ಕುಂದಾಪ್ರ ಕನ್ನಡದಲ್ಲಿ ಮಾತ್ನಾಡಿಲ್ಲಿಕೆ ಕುಳಿತರೆ ಕಷ್ಟ-ಸುಖದ ಸರಮಾಲೆಗಳ ಮಾತಿನ ಮಂಟಪವನ್ನೆ ಕಟ್ಟುವ ಗುಣವರಲ್ಲಿದೆ. ತನ್ನ ಮನಸಿನ ಭಾವನೆಗಳನ್ನು ಯಾರ ಹಂಗಿ ಇಲ್ಲದೆ, ಸಾಹಿತ್ಯದ ಮೂಲಕ ತೆರೆದಿಡುತ್ತಾ ಬಂದಿದ್ದಾರೆ. ಅವರ ಕೃತಿಗಳಲ್ಲಿ ಮಹಿಳಾ ಸಂವೇಧನೆ ಹಾಸುಹೊಕ್ಕಾಗಿರುವುದರಿಂದ ಅವರನ್ನು ಮಹಿಳಾ ಸಾಹಿತ್ಯ ಕೈ ಬೀಸಿಕರೆದಿದೆ. ಮಹಿಳೆಯರಿಗೆ ಕೂಡ ತನ್ನದೇ ಆದ ಖಾಸಗಿ ಬದುಕಿದೆ ಎನ್ನುವುದನ್ನು ಗುರುತಿಸಿದವರು. ಕನಸನ್ನು ಕಾಣುವ ಸ್ವಾತಂತ್ರ್ಯ ಇದೆ ಎನ್ನುವ ಮೂಲಕ ಸ್ತ್ರೀಲೋಕಕ್ಕೆ ತನ್ನನ್ನು ತೆರೆದುಕೊಳ್ಳುವ ಮೂಲಕ ವಿಮರ್ಶಕರ ಪಾಲಿಗೆ ಹಲವು ದಾರಿಗಳನ್ನು ಮಾಡಿಕೊಟ್ಟಿದ್ದಾರೆ.

ವೈದೇಹಿ ಅವರ ಬರವಣಿಯು ಎಲ್ಲರ ಮನಸ್ಸನ್ನು ಗೆಲುವಲ್ಲಿ ಯಶಸ್ವಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡ ಸಾರಸ್ವತ ಲೋಕದೊಳಗೆ ಹೊಸ ಲೋಕವನ್ನು ಸೃಷ್ಟಿ ಮಾಡಿದ್ದಾರೆ. ‘ಕುಂದಾಪ್ರ’ ಪುಟ್ಟ ಜಗತ್ತನ ಆಚಾರ-ವಿಚಾರ, ಕಲೆ ಸಂಸ್ಕೃತಿ, ಭಾಷೆಗಳೆಲ್ಲವನ್ನೂ ಒಳಗೊಂಡ ಸೂಕ್ಷ್ಮ ಕಸೂತಿ ಎಳೆಗಳ ಹಾಗೆ ಬಿಡಿಸುವ ವೈದೇಹಿಯವರ  ಶೈಲಿ ಅನನ್ಯವಾದದ್ದು. ಹಾಗಾಗೀ ಓದುಗರಿಗೆ ಹೊಸಪ್ರಪಂಚವೇ ಸರಿ. ಮತ್ತಷ್ಟು ಓದು »

28
ಆಕ್ಟೋ

‘ಪುರಭವನದಲ್ಲಿ ಪ್ರೇಕ್ಷಕನಿಗೆ ರಸದೌತಣ, ನಿರುಪಮಾ ರಾಜೇಂದ್ರಾ ಅವರ ಕಥಕ್ ನೃತ್ಯ’

ಕರುಣಾಕರ ಬಳ್ಕೂರು

ರತ ಭೂಮಿಯಲ್ಲಿ ಭಾರತೀಯ ಸಂಸ್ಕೃತಿಗೆ ತನ್ನದೇ ಆದ ವಿಶೇಷತೆಯಿದೆ. ಕಲೆ, ಸಾಹಿತ್ಯ, ಅಭಿನಯ, ನೃತ್ಯ, ಸಂಗೀತ ಹೀಗೆ ಎಲ್ಲವು ಮೆಳೈಯಿಸಿದಾಗ ಸುಂದರ ಲೋಕವೊಂದು ಸೃಷ್ಟಿಯಾಗುವುದರಲ್ಲಿ ಎರಡು ಮಾತಿಲ್ಲ. ರಾಜರ ಆಳ್ವಿಕೆಯಲ್ಲಿ ಕಲೆಗೂ ರಾಜರ ಆಸ್ಥಾನದಲ್ಲಿ ರಾಜನ ಪ್ರೋತ್ಸಾಹದೊಂದಿಗೆ ಬಂದಿರವುದನ್ನು ಕಾಣಬಹುದು. ರಾಜರುಗಳನ್ನು ಮೆಚ್ಚಿಸಲು ಮೇಧಾವಿ, ವಿದ್ವುತ್‌ಗಳನ್ನು ಹೋಂದಿರುವ ಕಲಾವಿದರು ತಮ್ಮ ಕಲಾ ಪ್ರೌಡುಮೆಯನ್ನು ತೋರಿಸುತ್ತಿದ್ದರು. ಭಾರತಿಯ ರಾಜರುಗಳು ಕಲೆಗೆ ನೀಡಿದಷ್ಟೇ ಪ್ರಾಶಸ್ತ್ಯವನ್ನು ಮುಸ್ಲಿಂ ಅರಸುರುಗಳು ನಿಡಿದ್ದಾರೆ. ಮುಸ್ಲಿಂ ಆಳ್ವಿಕೆಯಲ್ಲಿ ಆಸ್ಥಾನದಲ್ಲಿ ತಬಲಗಾರರ ಬಡಿತಕ್ಕೆ ನೃತ್ಯ ಮಾಡುವ ಕಲಾವಿದರು ಇದ್ದರು. ಇರ್ವರ ನಡುವೆಯೂ ಸ್ವರ್ಧೆ ಮಾತ್ರ ಪ್ರಬಲವಾಗಿತು. ಅಲ್ಲಿ ನೊಡುವವರಿಗೆ ಒಂದು ಸುಂದರ ಕಲೆಯನ್ನು ಆಸಾಧ್ವಿಸುವ  ಕ್ಷಣ ಅರದಾಗಿತು. ಇಂದು ಕಲೆಗೆ ಯಾವುದೇ ಪ್ರೋತ್ಸಾಹವು ಇಲ್ಲದಿದ್ದರೂ ನಮ್ಮ ನಾಡಿನಲ್ಲಿ ಅದ್ಭುತ ಕಲಾ ತಂಡಗಳು ಇವೆ. ಬನ್ನಿ ಸಂಗೀತ ಭಾರತಿ ಪ್ರತಿಷ್ಠಾನ ಸಂಯೋಜಿಸಿರುವ ಎಂಆರ್‌ಪಿಎಲ್ ‘ನೂಪುರ ನಿನಾದ’ ಕಾರ್ಯಕ್ರಮ ನೀಡಲು ಬೆಂಗಳೂರಿನ ನಿರುಪಮಾ ಮತ್ತು ರಾಜೇಂದ್ರಾ ಮಂಗಳೂರಿಗೆ ಆಗಮಿಸಿದಾಗ  ತೆರೆದಿಟ್ಟ ಮನದಾಳದ ಮಾತುಗಳು ನಿಮಗಾಗಿ.. ಮತ್ತಷ್ಟು ಓದು »

27
ಆಕ್ಟೋ

” ಸೇವೆಯಲ್ಲೇ ಸಂಘ ದಕ್ಷ”

ರಾಜೇಶ್ ಪದ್ಮಾರ್, ಬೆಂಗಳೂರು

ಅಕ್ಟೋಬರ್ ೨೫ರ ಆರೆಸ್ಸೆಸ್ ಪ್ರಾಂತ ಪ್ರಚಾರಕ್ ಮುಕುಂದ ಅವರ ಲೇಖನಕ್ಕೆ ಪ್ರತಿಯಾಗಿ ನಿನ್ನೆ ಸಚ್ಚಿದಾನಂದ ಜೋಷಿಯವರ ಪ್ರತಿಕ್ರಿಯೆ  ಮೂಡಿಬಂದ ರೀತಿ ನೀರಸ ಮಾತ್ರವಲ್ಲ, ಒಂಥರಾ ಚಡಪಡಿಸುವಿಕೆಯಿಂದ ಜನ್ಮ ತಾಳಿದ ಲೇಖನದಂತೆ ಭಾಸವಾಯಿತು. ಸಾರ್ವಜನಿಕವಾಗಿ ತುಸು ಮೌನಿಯಾಗಿರುವ ಆರೆಸ್ಸೆಸ್ ನಂಥಹಾ ಸಂಘಟನೆಯ ಪ್ರಮುಖರು ಮಂಡಿಸಿದ ಸಂಘಟನಾತ್ಮಕ ಅಭಿಪ್ರಾಯಗಳು ಬಿಜೆಪಿ ಮಾತ್ರವಲ್ಲ,  ರಾಜಕೀಯ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತನಾಗಿರುವ  ಓರ್ವಸಾಮಾನ್ಯ ವ್ಯಕ್ತಿಗೂ ಆಲೋಚನೆಗೀಡುಮಾಡುವ ಅಂಶಗಳನ್ನು ಉದಾಹರಿಸಿತ್ತು.
‘ಸಂಘ ಪ್ರಾರಂಭಿಸಿದ ರಾಜಕೀಯ ಪಕ್ಷ ಹಾಳಾದರೆ ಅದನ್ನು ನಾಶ ಮಾಡುವ ಶಕ್ತಿಯೂ ಸಂಘಕ್ಕೆ ಇದೆ’ ಎಂಬ ಅಂಶವು ಸಣ್ಣ ಮಾತೇನಲ್ಲ. ದಶಕಗಳ ಸಾಮಾಜಿಕ ಸಂಘಟನಾ ಕೌಶಲ್ಯ ಹೊಂದಿರುವ, ಸಾಮಾಜಿಕ ಧ್ಯೇಯಕ್ಕಾಗಿಯೇ ಜೀವನ-ಸಮಯ  ಮೀಸಲಿಟ್ಟ ಆರೆಸ್ಸೆಸ್ ಪೂರ್ಣಾವಧಿ ಕಾರ್ಯಕರ್ತರ ಚಿಂತನೆಯಿಂದ ಮೊಗೆದು ಬಂದ ಧೃಡ ಮಾನಸಿಕತೆಯ ಪ್ರತೀಕ ಅದು. ಸೃಷ್ಟಿ-ನಾಶ-ಮರುಸೃಷ್ಟಿ ಈ ಮೂರೂ ಸಾಧ್ಯ ಎಂದು ಆತ್ಮವಿಶ್ವಾಸದಿಂದಲೇ ಆರೆಸ್ಸೆಸ್ ಪ್ರಮುಖರಾದ ಮುಕುಂದ ಹೇಳಿರುವುದನ್ನು ಲೇಖನದಲ್ಲಿ ಗಮನಿಸಬಹುದು. ಸಾರ್ವಜನಿಕವಾಗಿ ಈ ರೀತಿಯ ಹೇಳಿಕೆ ಕೊಡುವ ಮುಂಚೆ ಖಂಡಿತವಾಗಿಯೂ ತನ್ನ ಶಕ್ತಿ-ಸಾಮರ್ಥ್ಯದ, ಹೇಳಿಕೆ ಮಾಡಬಹುದಾದ ಪರಿಣಾಮಗಳ, ಇತರ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಆರೆಸ್ಸೆಸ್ ಯೋಚಿಸುತ್ತದೆ ಎಂದೇಕೆ ಸಚ್ಚಿದಾನಂದ ಜೋಶಿಯವರಿಗೆ ಅನಿಸದು? ಮತ್ತಷ್ಟು ಓದು »

27
ಆಕ್ಟೋ

ನೆನಪು ನೆನಪಿಸಲೊಂದು ನೆಪ

ಪ್ರವೀಣ ಚಂದ್ರ ಪುತ್ತೂರು

ನಿನಗೆ ಶೇಷಮ್ಮ ಟೀಚರ್‌ನ ನಂಬರ್‌ ಬೇಕಾ? ಅಂತ ಸ್ನೇಹಿತನೊಬ್ಬ ಕೇಳಿದಾಗ ನನಗೆ ಅಚ್ಚರಿ. ಸುಮಾರು 12 ವರ್ಷದ ಹಿಂದೆ ನನಗೆ ಪ್ರಾಥಮಿಕ ಶಿಕ್ಷಣ ಕಲಿಸಿದ ಟೀಚರ್‌ ಅವರು. ಬಾಲ್ಯವೆಂದರೆ ಹಾಗೇ ತಾನೇ. ಅಲ್ಲಿ ಟೀಚರ್‌, ಮೇಸ್ಟ್ರು, ಊರು, ಕಾಡುಗುಡ್ಡ,  ಅಮ್ಮನ ಪ್ರೀತಿ, ಗುರುಗಳು ನೀಡಿದ್ದ ಬೆತ್ತದ ಏಟು, ಸ್ನೇಹಿತನ ಮುನಿಸು, ತಂಟೆ, ತಕರಾರು ಹೀಗೆ ನೆನಪುಗಳ ಜಾತ್ರೆ. ಎಲ್ಲರ ಭೀತಿಯಂತೆ ನನಗೆ ನನ್ನೂರು ಏನೋ ಕಳೆದುಕೊಂಡಂತೆ ಅನಿಸುತ್ತಿಲ್ಲ. ಊರು ವೃದ್ಧಾಶ್ರಮವೂ ಆಗಿಲ್ಲ. ಒಂದಿಷ್ಟು ಅಭಿವೃದ್ಧಿ ಬಿಟ್ಟರೆ ಹಿಂದಿನ ಹಾಗೇ ಇದೆ.

ಬಾಲ್ಯದ ಕನವರಿಕೆಯಿಂದ ಶೇಷಮ್ಮ ಟೀಚರ್‌ಗೆ ಫೋನ್‌ ಮಾಡಿದೆ. ಮನಸಿನ ತುಂಬಾ ಬಾಲ್ಯದ ಪ್ರವೀಣನೇ ತುಂಬಿಕೊಂಡಿದ್ದ. ಹೆಸರು ಹೇಳಿದಾಕ್ಷಣ ಗುರುತು ಹಿಡಿದು ಮಾತನಾಡಿದ್ದೇ ಮಾತನಾಡಿದ್ದು. ಅಮ್ಮ ಹೇಗಿದ್ದಾರೆ? ಅವರು ಹೇಗಿದ್ದಾರೆ? ಇವರು ಹೇಗಿದ್ದಾರೆ ಅಂತ ಇಡೀ ನನ್ನೂರಿನ ಆರೋಗ್ಯ ವಿಚಾರಿಸಿಕೊಂಡರು. ನಾನು ತಲುಪಿದ ನೆಲೆಯನ್ನು ಕೇಳಿ ಸಂತೋಷ ಪಟ್ಟರು. ಎಲ್ಲ ಅಬ್ಬೆಪಾರಿಯಾಗುತ್ತನೆಂದುಕೊಂಡಿದ್ದ  ಹುಡುಗ ಇವನೇನಾ ಅಂತ ಅನಿಸಿರಬೇಕು.

ಶೇಷಮ್ಮ ಟೀಚರ್‌ ಎಂದರೆ ಮನದಲ್ಲಿ ಮೂಡುವುದು ಹಲವು ಮುಖಗಳು. ಕೋಪಗೊಂಡಾಗ ದುರ್ಗೆ. ಪ್ರೀತಿಯಿಂದ ಮಾತನಾಡುವಾಗ ಅಮ್ಮ. ಲೆಕ್ಕ ಹೇಳಿಕೊಡುವುದರಲ್ಲಿ ಸರಸ್ವತಿ. ಕ್ಲಾಸ್‌ನಲ್ಲಿ ನಾನು ಏನು ತಪ್ಪು ಮಾಡಿದರೂ ಮನೆಗೆ ಬಂದು ದೂರು ಹೇಳುತ್ತಿದ್ದರು. ನಾನು ಏಳನೇ ತರಗತಿ ಮುಗಿಸೋವರೆಗೂ ಅವರಿಗೆ ಮದುವೆಯಾಗಿರಲ್ಲಿಲ್ಲ. ನಂತರ ಮದುವೆಯಾಗಿ ದೂರದೂರಿಗೆ ಟ್ರಾನ್ಸ್‌ಫಾರ್‌ ಆಗಿದ್ದರು.  ಇನ್ನು ಇವರು ನೋಡಲು ಸಿಗಲಾರರು ಅಂತ ಅಂದುಕೊಂಡಿದ್ದೆ. 10-12 ವರ್ಷಗಳ ನಂತರ ಮಾತನಾಡುವ ಅವಕಾಶ ಒದಗಿ ಬಂದಿತ್ತು. ಹೊಡೆಯುವುದನ್ನು ಹೊರತು ಪಡಿಸಿದರೆ  ಶೇಷಮ್ಮ ಟೀಚರ್‌ ಕೆಟ್ಟವರಾಗಿರಲ್ಲಿಲ್ಲ. ಶಾರದ ಪೂಜೆಯಂದು ಅವರ ಮಡಿಲಲ್ಲಿ ಕುಳಿತುಕೊಂಡು ಅಕ್ಕಿಯ ಮೇಲೆ ಮೊದಲಾಕ್ಷರ ಕಲಿತಿದ್ದೆ. ಪ್ರವೀಣ್‌ ಅನ್ನೋ ಹೆಸರಿಗೆ ಚಂದ್ರನನ್ನು ಸೇರಿಸಿದ್ದು ಕೂಡ ಇವರೇ. ಮತ್ತಷ್ಟು ಓದು »

20
ಆಕ್ಟೋ

ದೇವರು, ಧರ್ಮ ಮತ್ತವನ ಜಾತಿ. – ಸರಣಿ ೨

ಅರವಿಂದ್

ಕ್ರಿ.ಪೂ. ೧೦೦೦

ದೇವರು ಹುಟ್ಟಿದ್ದು ಹೇಗೆ ?

ಹಳೆಶಿಲಾಯುಗದ ಕಾಲದಲ್ಲಿ ಮನುಷ್ಯ ತನ್ನ ಹೊಟ್ಟೆಪಾಡಿಗಾಗಿ ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದದ್ದು, ಪಠ್ಯಪುಸ್ತಕಗಳಲ್ಲಿ ಓದಿಯೇ ಇರುತ್ತೀರಿ. ಅದು ಅವನ ಅಂದಿನ ಅವಶ್ಯಕತೆ. ಆದರೆ ಮನುಷ್ಯನಿಗೆ ತನ್ನ ಸುತ್ತಮುತ್ತಲಿನ ನಿಸರ್ಗದ ವ್ಯೆಪರೀತ್ಯಗಳು, ಒಮ್ಮೊಮ್ಮೆ ವಿಚಿತ್ರವಾಗಿ ಉಂಟಾಗುವ ಗುಡುಗು, ಮಿಂಚು, ಭೂಕಂಪ ಅವನನ್ನು ಗೊಂದಲಕ್ಕೀಡು ಮಾಡುತ್ತಿತ್ತೇನೋ ? ಈ ವಿಚಿತ್ರಗಳ ಅನುಭವದಿಂದ ಮನುಷ್ಯ ತನ್ನನ್ನು ಮೀರಿ ಮತ್ತೊಬ್ಬ ಶಕ್ತಿವಂತನಿರಬಹುದು. ಆ ವ್ಯಕ್ತಿ ಇವೆಲ್ಲವನ್ನು ಮಾಡುತ್ತಿರಬಹುದೇನೋ ಎಂಬ ಭ್ರಾಂತಿಗೆ ಬಂದ ? ನಿಸರ್ಗದ ದೃಷ್ಠಿಯಲ್ಲಿ ಮನುಷ್ಯ ಕಂಡ ಪ್ರತಿ ಬದಲಾವಣೆಗಳನ್ನು ನಂತರದ ದಿನಗಳಲ್ಲಿ ದೇವರು ಎಂಬ ಹೆಸರಿನಲ್ಲಿ ಕರೆದಿರಬಹುದು.

ಇಂಥ ದೇವರುಗಳನ್ನು ಕಾಲಕ್ರಮೇಣ ಪ್ರತಿ ಪಂಗಡದಲ್ಲೂ ಅವರ ಕಲ್ಪನೆಯ ಅನುಸಾರ ಮೂರ್ತರೂಪ ಕೊಟ್ಟು, ಆ ಗುಂಪಿನ ನಾಯಕ ತನಗೆ ಏನು ತೋಚುತ್ತಿತ್ತೋ ಹಾಗೆ ಪೂಜೆಯನ್ನೋ ಅಥವಾ ಮತ್ತಿನ್ಯಾವುದೋ ರೀತಿ ಮನವಿಯನ್ನೋ ಮಾಡುತ್ತಿದ್ದುದು ಇನ್ನಿತರ ಸದಸ್ಯರುಗಳಿಗೆ ಅದೇ ಸರಿ ಮತ್ತು ನಾಯಕನ ಮಾತಿನಂತೆ ಮತ್ತವನು ಮಾಡುತ್ತಿದ್ದ ಪೂಜೆಯೆಂಬ ಹೆಸರಿನ ಪ್ರಕಾರವೇ ದೇವರನ್ನು ಒಲಿಸುವುದು ಎಂಬ ಭಾವನೆ ಬಂದಿರಬಹುದು. ಹೀಗೆ ನಡೆಸುವ ಪೂಜೆ-ಪುನಸ್ಕಾರಗಳ ನಂತರ ಅವರ ಕಷ್ಟಗಳು ಆಕಸ್ಮಿಕವಾಗಿ ನಿವಾರಣೆಯಾದಾಗ ದೇವರು ನಮ್ಮ ಇಷ್ಟಾರ್ಥವನ್ನು ಸಿದ್ಧಿಸುವ ವ್ಯಕ್ತಿ ಮತ್ತು ನಾವು ಆ ಕಾಣದ ವ್ಯಕ್ತಿಗೆ ಯಾವತ್ತೂ ಅಭಾರಿಯಾಗಿರಬೇಕೆನ್ನಿಸಿತೇನೋ ? ಮತ್ತಷ್ಟು ಓದು »

20
ಆಕ್ಟೋ

ದೇವರು, ಧರ್ಮ ಮತ್ತವನ ಜಾತಿ. – ಸರಣಿ ೧

ದೇವರು, ಧರ್ಮ ಮತ್ತವನ ಜಾತಿ

ಅರವಿಂದ್

ದೇವರು ಎಂಬ ಪದ ಸಾರ್ವಜನಿಕವಾಗಿ ಒಮ್ಮೆ ಚರ್ಚೆಗೆ ಬಂದರೆ ಅಲ್ಲಿ ತನ್ನ ಪರಮ ಪ್ರಿಯ ದೇವರೇ ಶ್ರೇಷ್ಠ. ಮತ್ತೆಲ್ಲವೂ ನಿಕೃಷ್ಟ, ಎಂಬಂತೆ ವಾದ ಮಂಡಿಸುವ ಭಕ್ತ ಸಮೂಹ ಎಲ್ಲಿಲ್ಲ ಹೇಳಿ. ಅದರಲ್ಲೂ ವಾದಿಸುವವ ತಾನು ಪೂಜಿಸುವ ದೇವರು ಹೇಗೆಲ್ಲ ಶ್ರೇಷ್ಠ ಎಂಬುದನ್ನು ಸಾಬೀತುಪಡಿಸಲಿಕ್ಕೆ, ಆ ದೇವರ ಕುರಿತಾದ ಕಥೆಗಳು, ಉಪಮೆಗಳು, ಮತ್ತು ಆಧಾರಗಳು, ಮತ್ಯಾವುದೋ ಮಹಿಮೆ, ಅವತಾರಗಳ ಪಟ್ಟಿಯನ್ನೇ ಕೊಟ್ಟುಬಿಡುತ್ತಾನೆ. ನಿಜಕ್ಕೂ ದೇವರೇ ಕೇಳಿಸಿಕೊಂಡರು (ಇದ್ದಲ್ಲಿ) ಈ ಪರಿಯ ವಿಚಾರಗಳು ಅವನಿಗೂ ತಿಳಿದಿರುತ್ತದೋ ಇಲ್ಲವೋ, ಆದರೆ ಹಟಕ್ಕೆ ಬೀಳುವ ಭಕ್ತ ಅದನ್ನು ಹೇಗಾದರೂ ಸರಿಯೇ ಪ್ರಾಬಲ್ಯಕ್ಕೆ ಕಟ್ಟು ಬೀಳುವ ಹಾಗೆ ವಾದಿಸುತ್ತಾನೆ.

ಅಸಲಿಗೆ ದೇವರಿಗೂ ಧರ್ಮಕ್ಕೂ ವಾದಿಸುವ ವ್ಯಕ್ತಿಗೆ ಅಸಲಿಗೆ ಪ್ರತ್ಯಕ್ಷ ದೇವರೇ ಎದುರಿಗೆ ಬಂದರೂ ನಂಬುವುದಿಲ್ಲ, ಇಂತಹ ಪರಿಸ್ಥಿತಿಯಲ್ಲೂ ದೇವರೆಂಬ ದೇವರೇ ಏನು ಮಾಡಲಾಗದಿರುವಾಗ, ಇಲ್ಲ ಸಲ್ಲದ ವಾದ ವಿವಾದಗಳಲ್ಲಿ ತಲೆತೂರಿಸಿ ತನ್ನ ವಾದಶಕ್ತಿಯಿಂದಲೇ ಮತ್ತೊಬ್ಬನನ್ನು ಮರುಳು ಮಾಡುತ್ತೇನೆಂದು ನಿಂತವನಿಗೆ ಮತ್ತೆಲ್ಲವೂ ಗೌಣ್ಯ.

ಎಲ್ಲರೂ ದೇವರು!!!!!!!!!!! ದೇವರು!!!!!!!!!! ಎನ್ನುವ ಈ ದೇವರು ನಿಜಕ್ಕೂ ಯಾರು ? ಮತ್ತು ಯಾವುದು ?

ದೇವರು ಯಾರು ? ಎಂದರೆ (ಧರ್ಮಗಳ ಬಗ್ಗೆ ಮುಂದೆ ದಿನ ಚರ್ಚೆ ಮಾಡೋಣ) ಹಿಂದೂ ಎಂಬ ಹಣೆಪಟ್ಟಿಯಲ್ಲಿ ಬೆಳೆದವನು ಅಟ್ಟಿ ಲಕ್ಕಮ್ಮನಿಂದ ಹಿಡಿದು ಬ್ರಹ್ಮ, ವಿಷ್ಣು, ಮಹೇಶ್ವರಾದಿಗಳವರೆಗೂ ದೊಡ್ಡ ಪಟ್ಟಿಯನ್ನು ಕೊಡುತ್ತಾನೆ. ಇನ್ನು ಮುಸ್ಲಿಂ ಹಣೆಪಟ್ಟಿಯಡಿ ದೇವರುಗಳ ಸಂಖ್ಯೆ ಚಿಕ್ಕದಾದರೂ ಆತ ಯಾವುದನ್ನೂ ಬಿಡದೆ ತಿಳಿಸುತ್ತಾನೆ. ಇನ್ನು ಕ್ರ್ಯೆಸ್ತ, ಜ್ಯೆನ, ಬೌದ್ದ, ಇನ್ನಿತರ ಹಣೆಪಟ್ಟಿಯಡಿ ಬರುವ ಪ್ರಪಂಚದ ದೇವರುಗಳು ತಮ್ಮವೇ ದೇವರುಗಳ ಪ್ರವರ ನೀಡಿ, ಏನನ್ನೋ ಸಾಧಿಸಿಬಿಟ್ಟನೆಂಬಂತೆ ಒಮ್ಮೆ ಬೀಗುತ್ತಾರೆ.

ದೇವರು ಪರಿಕಲ್ಪನೆಯಲ್ಲಿ ಒಂಥರಾ ರಿಮೋಟ್ ಇದ್ದ ಹಾಗೆ, ಅವನ ಟಿವಿಯಲ್ಲಿ ಬರೋಬ್ಬರಿ ೬೦೦ ಕೋಟಿ ಹೆಚ್ಚು ಚಾನೆಲ್ಗಳು ಅಡಕ. ಹಾಗಿರುವ ದೇವರಿಗೆ ಭಕ್ತನ ಪ್ರತಿ ಹೆಜ್ಜೆಯೂ ಆಲೋಚನೆಗಳು ಮತ್ತವನ ನಡುವಳಿಕೆಗಳು, ಒಳ್ಳೆಯದು ಕೆಟ್ಟದ್ದು ಎಲ್ಲವೂ ತಿಳಿದಿರುವ ದೇವರಿಗೆ, ಈ ಉಪಮೆಗಳು ಯಾವತ್ತೂ ದೇವರ ಅಸ್ತಿತ್ವದಲ್ಲಿದ್ದಾನೆಂಬ ನಂಬಿಕೆಗಷ್ಟೆ ಅರ್ಹ. ನಿಜಕ್ಕೂ ದೇವರು ಎಂಬುದು ಇಂದಿನ ಬಹುಜನರ ಪ್ರಶ್ನಾರ್ಥಕ ಚಿಹ್ನೆ, ಇದರ ಉತ್ತರ ಬಿಡಿಸಲು ಹೋದ ಪ್ರತಿಯೋರ್ವನು ನಿರಾಶೆಯಿಂದ ಪ್ರಯತ್ನ ಬಿಟ್ಟಿರುತ್ತಾನೆ. ಹಾಗಂತ ಎಲ್ಲೂ ದೇವರಿಲ್ಲ ಎಂಬ ಮಾತಿಗೆ ಅವನ ವಿರೋಧ ಇದ್ದೇ ಇರುತ್ತದೆ.