ಕಾರಂತ ಸಾಹಿತ್ಯ: ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೩)
– ದೇವು ಹನೆಹಳ್ಳಿ
ಬಂಡಿಮಠ, ಹನೆಹಳ್ಳಿ ಗ್ರಾಮ,
ಬಾರಕೂರು, ಉಡುಪಿ ತಾಲೂಕು-ಜಿಲ್ಲೆ.
ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೧)
ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೨)
ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಇಬ್ಬರು, ಅಪ್ಪಳಸ್ವಾಮಿ ಮತ್ತು ಆರೋಕ್ಯಸ್ವಾಮಿ ಎಂಬ ಅಧಿಕಾರಿಗಳ ಹುನ್ನಾರದಲ್ಲಿ ಸಹ್ಯಾದ್ರಿಯ ಮಲೆ, ಇಳಿಜಾರು ಮತ್ತು ತಪ್ಪಲಿನ ಅರಣ್ಯವೆಲ್ಲ ಕೇರಳೀಯರ ವಶವಾದ ಪ್ರಸ್ತಾಪದೊಂದಿಗೆ ನಿರೂಪಣೆ ಮುಖ್ಯ ಮಜಲನ್ನು ತಲುಪುತ್ತದೆ. ಇದಕ್ಕೆ ಎರಡು ಮುಖ. ಒಂದು, ಅರಣ್ಯ ನಾಶ ಇನ್ನೊಂದು, ಸ್ಥಳೀಯರಿಗಾಗುವ ವಂಚನೆ. ಈ ಹಿಂದೆ ಹೇಳಿದ ಸೌಂದರ್ಯ, ಪರಿಪೂರ್ಣತೆ, ಪಂಥಾಹ್ವಾನ ಈ ಯಾವ ಸೆಲೆ, ಸೆಳೆತವೂ ಇಲ್ಲದ, ಲಾಭಕೋರತನವೊಂದೇ ಮಾರ್ಗದರ್ಶಿಯಾಗಿರುವ ರೂಕ್ಷ ಪ್ರಪಂಚದ ಒಂದು ಬೀಭತ್ಸ ಚಿತ್ರಣವನ್ನು ಈ ಕಾದಂಬರಿಯಲ್ಲಿ ಕಾಣುತ್ತೇವೆ. ಕಾರಂತರು ಬಳಸುವ ಅವರ ಇಷ್ಟದ ಪದ `ಚೆಲುವು’ ಒಮ್ಮೆಯೂ ಈ ಕಾದಂಬರಿಯಲ್ಲಿ ಬಂದಿಲ್ಲ. ಪರಿಸರ ನಾಶದ ಜತೆಗೆ ಹೊರಗಿನ ಜನರ ಅವ್ಯಾಹತ ನುಸುಳುವಿಕೆಯಿಂದ ಜನಸಂಖ್ಯಾನುಪಾತ demography, ಏರುಪೇರಾಗಿ ಸಾಂಸ್ಕೃತಿಕ ಅವನತಿಯನ್ನೂ ಕಾಣುತ್ತೇವೆ. ನಿಸರ್ಗವೆಂದರೆ ವಿಶ್ವಾತ್ಮಕ ವ್ಯಕ್ತಿತ್ವವೆಂಬ ಭಾವ ಅಳಿದು ಅದು ಕೇವಲ ಒಂದು ಕಚ್ಚಾವಸ್ತುಗಳ ಮಂಡಿ ಎಂದಾಯಿತು. ಮತ್ತಷ್ಟು ಓದು 
ಇಸ್ರೇಲಿನಲ್ಲಿ ಮೈಸೂರಿನ ಅಶ್ವಾರೂಢರ ಅಟ್ಟಹಾಸ
– ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com
1914 ರಲ್ಲಿ ಮೈಸೂರಿನ ಮಹರಾಜರಾದ ನಾಲ್ಮಡಿ ಕೃಷ್ಣರಾಜ ಒಡೆಯರ ಸೈನ್ಯದಲ್ಲಿ ಒಂದು ವಿಶೇಷ ಅಶ್ವಾರೂಢರ ದಳವಿತ್ತು. 29 ಸೈನ್ಯಾಧಿಕಾರಿಗಳ, 444 ಅಶ್ವಯೋಧರೊಂದಿಗೆ 526 ಶ್ರೇಷ್ಠ ಅರಬ್ಬೀ ಕುದುರೆಗಳ ಈ ಪಡೆಗೆ ವಿಶೇಷ ಗೌರವವಿತ್ತು. ಆಗಾಗಲೇ ಫಿರಂಗಿಗಳ, ಮಷೀನುಗನ್ನುಗಳ ಆಗಮನವಾಗಿ, ಕುದುರೆಗಳ ನಾಗಾಲೋಟದ, ಖರಪುಟದ ಶಬ್ದದ ಕಾಲ ಮುಗಿದೇ ಬಿಡ್ತೇನೋ ಎನ್ನುವ ಸಮಯವದು. ಹೈದ್ರಾಬಾದಿನ ನಿಜಾಮರ ಮತ್ತು ರಾಜಾಸ್ಥಾನದ ರಾಜರ ಸೈನ್ಯಗಳನ್ನು ಹೊರತು ಪಡಿಸಿದರೆ ಬೇರೆಲ್ಲೆಡೂ ಆಶ್ವಾರೂಢದ ದಳವೇ ಇರಲಿಲ್ಲ. ಮತ್ತಷ್ಟು ಓದು 
ಎಚ್ಚರ..! ನಿಮ್ಮ ಸುತ್ತಲೂ ಇರುವರಿವರು…
– ಸುಜಿತ್ ಕುಮಾರ್
ಆ ವಯಸ್ಸೇ ಹಾಗೆ. ಅರೆ ಬರೆ ಬೆಂದ ಬಿಸಿನೆಸ್ ಪ್ಲಾನ್ ಗಳನ್ನೇ ಕನಸಿನ ಕೋಟೆಯನ್ನಾಗಿಸಿಕೊಂಡು ಅನುಷ್ಠಾನಗೊಳಿಸಲು ಸದ್ಯಕ್ಕಂತೂ ಸಾಧ್ಯವಿಲ್ಲದಿದ್ದರೂ ಮಾಡೇ ತೀರುತ್ತೇನೆಂಬ ಹೆಬ್ಬಯಕೆ. ತಿಂಗಳಿಗೆ ಒಂದಿಷ್ಟು ಪಾಕೆಟ್ ಮನಿ, ತಲೆಯ ತುಂಬೆಲ್ಲಾ ಬ್ರಾಂಡೆಡ್, ಹೈಗ್ರೇಡ್ ವಸ್ತುಗಳ ಕಾರುಬಾರು, ಊರು ಸುತ್ತಲು ಗೆಳೆಯನ ಸೆಕೆಂಡ್ ಹ್ಯಾಂಡ್ ಬೈಕು ಹಾಗು ಕ್ಲಾಸಿಗೆ ಬಂಕು ಹೀರೋಗಿರಿಗೆ ಸೊಂಪು! ಅಚ್ಚುಕಟ್ಟಾಗಿ ಓದಿ ಸ್ವಂತ ಕಾಲಮೇಲೆ ನಿಲ್ಲುವ ಕನಸ್ಸನ್ನು ಕಟ್ಟಿ ಹೆಗಲೇರಿಸಿ ಕಳುಹಿಸುವ ಪೋಷಕರ ವಾರಕ್ಕೋ ತಿಂಗಳಿಗೋ ತಳ್ಳುವ ಒಂದಿಷ್ಟು ಹಣವನ್ನು ‘ಇಂದು ಇಂದಿಗೆ.. ನಾಳೆ ನಾಳೆಗೆ’ ಎಂಬಂತೆ ಭಕ್ಷಿಸಿ, ತಿಂಗಳಾಂತ್ಯದ ವೇಳೆಗೆ ಅತಂತ್ರದ ಸ್ಥಿತಿಯ ಮುಸಿಯನಂತೆ ಪಿಳಿ ಪಿಳಿ ಕಣ್ಣುಗಳನ್ನು ಬಿಡುತ್ತಾ ಪಕ್ಕದ ಗೂಡಂಗಡಿಯ ಟೀ ಬನ್ನುಗಳನ್ನೇ ಎರಡೊತ್ತಿನ ಆಹಾರವನ್ನಾಗಿ ಮಾಡಿಕೊಂಡು ‘ಏನಾದ್ರು ಬಿಸಿನೆಸ್ ಮಾಡ್ಬೇಕು ಮಗಾ’ ಎನ್ನುತ ಕ್ಷಣಮಾತ್ರದಲ್ಲಿ ಅಂಬಾನಿಗಳಾಗಲು ಹವಣಿಸುತ್ತಾ ದಿನಕಳೆಯುವ ಯುವಕರೇ ಈ ಮಹಾ ಷಡ್ಯಂತ್ರದ ಸುಲಭದ ಬಲಿಪಶುಗಳು! ಮತ್ತಷ್ಟು ಓದು 
ರಾಜೀವ್ ಮಲ್ಹೋತ್ರ ಸಂವಾದ : ಭಾಗ ೨
ಆಂಗ್ಲಮೂಲ : ಶ್ರೀ ರಾಜೀವ್ ಮಲ್ಹೋತ್ರ
ಕನ್ನಡ ಅನುವಾದ : ಶ್ರೀ ಹುಲ್ಲುಮನೆ ಶ್ರೀಧರ
ರಾಜೀವ್ ಮಲ್ಹೋತ್ರ ಸಂವಾದ : ಅಯೋಧ್ಯೆ,ಸತಿ ಪದ್ಧತಿ ಮತ್ತಿತರ ವಿಷಯಗಳು – 1
ಉದಾರವಾದಿಗಳು ಮತ್ತು ಕ್ರಿಶ್ಚಿಯನ್ ಮತಕ್ಕೆ ಸೇರಿಸಿಕೊಳ್ಳುವ/ ಪ್ರಚಾರಕರ (ಇವಾನ್ಜಲಿಸ್ಟ್‌ಗಳ) ನಡುವೆ ಹೊಂದಾಣಿಕೆ:
ಬ್ರಿಟಿಷ್ ಸಂಸತ್ತಿನಲ್ಲಿ ಎಡ್ವಿನ್ ಬೆರ್ಕ್ ಸ್ಪಷ್ಟವಾಗಿ ಹೇಳಿದ್ದಿದೆ- ’ಓಕ್ ಮರಗಳನ್ನು ಥೇಮ್ಸ್ ನದಿಯ ದಂಡೆಯಿಂದ ತೆಗೆದುಕೊಂಡು ಹೋಗಿ ಗಂಗಾನದಿಯ ದಂಡೆಯುದ್ದಕ್ಕೂ ನೆಡಲಾಗದು’ ಎಂದು. ಭಾರತೀಯ ಸಂಸ್ಥಾನಗಳು ಭಾರತೀಯರ ಅಗತ್ಯಗಳನ್ನು ಪೂರೈಸುತ್ತಿದ್ದವು. ಆ ಸಂಸ್ಥೆಗಳಲ್ಲಿ ಪುನರುಜ್ಜೀವನದ ಅಗತ್ಯವಿತ್ತೇ ವಿನಃ ಅವುಗಳನ್ನು ಬದಲಿಸುವ ಅಗತ್ಯವಿರಲಿಲ್ಲ. ಆಂಗ್ಲರಲ್ಲಿ, ಸಂಸತ್ತಿನಲ್ಲಿ ಹಾಗೂ ಭಾರತದ ಆಂಗ್ಲ ಅಧಿಕಾರಿಗಳಲ್ಲಿ ಒಂದು ಬಲವಾದ ಗುಂಪಿದ್ದು ಅವರು ಭಾರತೀಯ ಸಂಸ್ಥಾನಗಳನ್ನು ಮರುನಿರ್ಮಾಣ ಮಾಡಲಿಚ್ಛಿಸಿದ್ದರು. ನಮ್ಮ ಕುತೂಹಲಕ್ಕೆ ’ಸಂಪ್ರದಾಯವಾದಿಗಳು’ (ಕನ್ಸರ್ವೇಟಿವ್‌ಗಳು) ಗಂಭೀರತೆಯಿಂದ ಭಾರತೀಯ ಸಂಸ್ಥಾನಗಳನ್ನು ಹೇಗಿದ್ದವೋ ಹಾಗೆಯೇ ಬಿಡಬೇಕೆನ್ನುತ್ತಿದ್ದರು. ’ಆಂಗ್ಲ ಉದಾರವಾದಿಗಳು’ ಭಾರತದ ಸಂಸ್ಥಾನಗಳನ್ನು ಗೊಂದಲಮಯವಾಗಿಸಲು/ ಅವ್ಯವಸ್ಥಿತಗೊಳಿಸಲು ಇಚ್ಛಿಸಿದ್ದರು. ಮತ್ತಷ್ಟು ಓದು 
ರಕ್ತ ಸಿಕ್ತ ಕಮ್ಯುನಿಷ್ಟ ಕುಡುಗೋಲಿಗೆ ಇನ್ನೆಷ್ಟು ಬಲಿ? ಅದನ್ನು ತಡೆಯಲು ಕೇರಳ ಚಲೋ!
ಶಿವಾನಂದ ಶಿವಲಿಂಗ ಸೈದಾಪೂರ
ವಿಭಾಗ ಸಂಚಾಲಕ,
ಎಬಿವಿಪಿ ಬೆಳಗಾವಿ.
ಬರ್ಬರವಾಗಿ ಹತ್ಯೆ ಮಾಡುವ ಜನರಿಂದ ಶಾಂತಿ ಸೌಹಾರ್ದತೆಯನ್ನು ಬಯಸುವುದು ಬಿಡಿ, ಅದರ ಬಗ್ಗೆ ಕನಸಿನಲ್ಲಿಯೂ ಸಹ ನೆನಪಾದರೆ ಬೆಚ್ಚಿ ಬೀಳುವುದು ಸಹಜ. ಜೀವಂತವಾಗಿರುವ ಮನುಷ್ಯನನ್ನು ಎರ್ರಾಬೀರಿ ಇರಿದು ಕೊಲೆ ಮಾಡಿ ಸೌಮ್ಯವಾದದ ಕತೆ ಹೇಳಲು ಬಂದರೆ ಕೇಳಲು ನಿಲ್ಲುವವರಾದರೂ ಯಾರು? ಈ ದೇಶದಲ್ಲಿ ಎಲ್ಲಲ್ಲಿ ಕಮ್ಯುನಿಷ್ಠ ಪಕ್ಷ ಆಡಳಿತದಲ್ಲಿದೆಯೋ ಅಲ್ಲಲ್ಲಿ ಶಾಂತಿ, ಸೌಹಾರ್ದತೆ ರಾತ್ರಿ ಕನಸಿನಲ್ಲಯೂ ಕಾಣುವಂತಿಲ್ಲ. ಸರ್ವರೂ ಸಮಾನರು ಎನ್ನುವ ಕಮ್ಯುನಿಸಂನ ನೀತಿ ಅಧಿಕಾರ ವಹಿಸಿಕೊಂಡು ಕುರ್ಚಿಯಲ್ಲಿ ಕುಳಿತುಕೊಳ್ಳುವವರಿಗೆ ಮಾತ್ರವೇ ಎಂಬುದನ್ನು ಕೇರಳ ನೋಡಿದರೆ ಗೊತ್ತಾಗುತ್ತದೆ. ಒಟ್ಟಾರೆ ಹೇಳಬೇಕೆಂದರೆ ಕಮ್ಯುನಿಷ್ಠ ಆಡಳಿತದಿಂದ ದೇವರ ನಾಡು ನರಹಂತಕರ ನಾಡಾಗಿದೆ. ಮತ್ತಷ್ಟು ಓದು 
ಬುದ್ದಿಜೀವಿ ಮತ್ತು ದೇವರು ಎದುರುಬದುರು
– ಶ್ಯಾಮ್ ಭೀಮಗುಳಿ
ಹಿಂದೊಮ್ಮೆ ಬೆಂಗಳೂರು ಎಂಬ ಮಾಯಾ ನಗರಿಯಲ್ಲಿ ಒಬ್ಬ ‘ಬುದ್ದಿಜೀವಿ’ ಎಂದು ಕರೆಸಿಕೊಳ್ಳುವವ ಇದ್ದನಂತೆ. ಈತ ಬುದ್ದಿಜೀವಿಯಾದ ಕಾರಣ ಚಿಂತಕ, ಪ್ರಗತಿವಾದಿ ಇತ್ಯಾದಿ ವಿಶೇಷಣಗಳು ಜೊತೆಗೆ ಅಂಟಿಕೊಂಡುಬಿಟ್ಟಿತ್ತು. ಈತ ಸಹಜವಾಗಿ ಯಾವುದೇ ವಿಷಯದ ಬಗ್ಗೆ ನಿರರ್ಗಳವಾಗಿ ಮಾತಾಡುತ್ತಿದ್ದ. ಬರೆಯುತ್ತಿದ್ದ. ಈ ತಳಸ್ಪರ್ಶಿ ಸಾಹಿತ್ಯದಲ್ಲಿ ಎಷ್ಟು ಸತ್ವ ಇದೆ ಎಂದು ಅವನ ಜೊತೆಯವರು ನೋಡುತ್ತಿರಲಿಲ್ಲ, ಹಾಗೇ ಯಾವ ಸತ್ವ ಇದೆ ಎಂದೂ ವಿರೋಧಿಗಳು ಹುಡುಕುತ್ತ ಇದ್ದರು. ಆದರೂ ಪ್ರಸಿದ್ಧ ಆದ. ಎಲ್ಲರೂ ಅವನನ್ನು ಸಭೆ ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಕರೆಸುತ್ತಿದ್ದರು. ಸಿಕ್ಕಿದ್ದೇ ಅವಕಾಶ ಎಂದುಕೊಂಡು ದೇವರು, ಧರ್ಮ ,ಆಚಾರ ವಿಚಾರ, ಪರಿಸರ, ಸಾಹಿತ್ಯ , ರಾಜಕೀಯ ಇತ್ಯಾದಿಗಳ ಬಗ್ಗೆ ಅದ್ಭುತವಾಗಿ ಮಾತಾಡುತ್ತಿದ್ದ. ಅದಕ್ಕೆ ತಲೆ ತೂಗುವವರು ಹಲವರು. ಒಟ್ಟಾರೆ ನ್ಯೂಟನ್ ನಿಂದ ನಕ್ಸಲ್ ವರೆಗೆ ಆತನ ಪಾಂಡಿತ್ಯ ಹರಡಿತ್ತು. ಕೆಲವೊಂದು ಸುದ್ದಿವಾಹಿನಿಗಳಿಗೆ ಆತ ನಿಲಯದ ಕಲಾವಿದ ಎನ್ನುವಂತೆ ಆಪ್ತನಾಗಿದ್ದ. ಮತ್ತಷ್ಟು ಓದು 
ಕಾರಂತ ಸಾಹಿತ್ಯ: ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೨)
ದೇವು ಹನೆಹಳ್ಳಿ
ಬಂಡಿಮಠ, ಹನೆಹಳ್ಳಿ ಗ್ರಾಮ,
ಬಾರಕೂರು, ಉಡುಪಿ ತಾಲೂಕು-ಜಿಲ್ಲೆ.
ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೧)
ಬೆಟ್ಟದ ಜೀವ ಕಾದಂಬರಿಯಲ್ಲಿ ಪರಿಸರ ಮನುಷ್ಯನಿಗೆ ಪಂಥಾಹ್ವಾನವನ್ನು ನೀಡುವಂತದ್ದು. ಪರಿಸರಕ್ಕೆ ಶರಣಾಗಿಯೇ ಪರಿಸರದ ಹಲವು ಘಟಕಗಳನ್ನು ಎದುರಿಸಿ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯ. ಪ್ರಜ್ಞಾಪೂರ್ವಕವಾಗಿ, ಮುಕ್ತ ಮನಸ್ಸಿನಿಂದ ಇದು ಸಾಧ್ಯವಾದರೆ ಬದುಕಿನ ಹಲವು ವಿಸಂಗತಿ-ವಿಕೃತಿಗಳನ್ನು ಸಂಯಮದಿಂದ ಸಹಿಸುವ ಶಕ್ತಿಯನ್ನು, ನಿರ್ವಿಕಾರಚಿತ್ತದಿಂದ ಬದುಕುವ ಸ್ಥೈರ್ಯವನ್ನು ಪಡೆಯುವುದನ್ನು ಕಾಣುತ್ತೇವೆ. ಬೆಟ್ಟದ ಜೀವ ಕಾದಂಬರಿಯಲ್ಲಿ ಪರಿಸರವನ್ನು ಗ್ರಹಿಸುವುದಕ್ಕಿಂತ ವ್ಯತಿರಿಕ್ತವಾಗಿ ಕಾಣುವುದು ಶನೀಶ್ವರನ ನೆರಳಿನಲ್ಲಿ ಕಾದಂಬರಿಯಲ್ಲಿ. ಇಲ್ಲಿನ ಕೆಲವು ಪಾತ್ರಗಳು, ಮುಖ್ಯವಾಗಿ ಕೃಷ್ಣ ಜೋಯಿಸರು, ಪ್ರಕೃತಿ ತಮ್ಮ ಬಯಕೆಯ ನೇರಕ್ಕೆ ಇರಬೇಕೆಂದು ಬಯಸುವವರು. ಭೂಸವೆತ, ಕಳೆ ಮುಂತಾದವುಗಳ ಬಗ್ಗೆ ಅವರ ಜತೆ ಮಾತನಾಡಿದ ನಿರೂಪಕ “ನಮ್ಮ ಯೋಚನೆಯಂತೆ ಲೋಕ ನಡೆಯಬೇಕಾದರೆ ಲೋಕವೆಲ್ಲ ನಮ್ಮ ಅಂಕೆಯಲ್ಲಿ ಇರಬೇಕು ಎಂದ ಹಾಗಾಯ್ತಲ್ಲವೇ?” ಎಂದು ಕೇಳುತ್ತಾನೆ. ಮತ್ತಷ್ಟು ಓದು 
ಅನಾಣ್ಯೀಕರಣ, ಎಡಪಂಥೀಯ ಬುದ್ಧಿಜೀವಿಗಳು ಮತ್ತು ಮಾಧ್ಯಮಗಳು
ಜಿ. ಪದ್ಮನಾಭನ್
ಸಹಾಯಕ ಪ್ರಾಧ್ಯಾಪಕ
ತಮಿಳು ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗ
ದ್ರಾವಿಡ ವಿಶ್ವವಿದ್ಯಾಲಯ,
ಕುಪ್ಪಂಆಂಧ್ರ ಪ್ರದೇಶ.
[ತಮಿಳಿನ ಖ್ಯಾತ ಸಾಹಿತಿ, ಚಿಂತಕ ಬಿ.ಜಯಮೋಹನ್‍ರವರು, ಈ ಹಿಂದೆ ತಮ್ಮ ವೆಬ್‍ಸೈಟ್‍ನಲ್ಲಿ ಅನಾಣ್ಯೀಕರಣ ಮತ್ತು ಬುದ್ಧಿಜೀವಿಗಳ ದ್ವಿಮುಖ ನೀತಿಯ ಬಗೆಗಿನ ಲೇಖನವೊಂದನ್ನು ಪ್ರಕಟಿಸಿದ್ದರು. ಅದನ್ನು ದ್ರಾವಿಡ ವಿಶ್ವವಿದ್ಯಾಲಯದ, ತಮಿಳು ಬಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ, ಸಹಾಯಕ ಪ್ರಾಧ್ಯಾಪಕ ಶ್ರೀ ಜಿ.ಪದ್ಮನಾಭನ್ ಅವರು ಕನ್ನಡಕ್ಕೆ ತಂದಿದ್ದಾರೆ. ಅನಾಣ್ಯೀಕರಣಕ್ಕೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಈ ಲೇಖನ ಮತ್ತೆ ಚರ್ಚೆಯಾಗುತ್ತಿದೆ.] ಮತ್ತಷ್ಟು ಓದು 
ಅರಮನೆ ಕಡತಗಳಲ್ಲೇ ಇದೆ ಟಿಪ್ಪು ದೌರ್ಜನ್ಯಕ್ಕೆ ಸಾಕ್ಷಿ
– ಸಂತೋಷ್ ತಮ್ಮಯ್ಯ
ಸರಕಾರ ಹೊರಡಿಸುವ ಕೆಲವು ಗಜೆಟಿಯರುಗಳ ಪುಟ ತೆರೆದರೆ ಇವೆಷ್ಟು ಕೆಜಿ ತೂಗಬಹುದು ಎಂಬ ಭಾವನೆ ಬೇಡಬೇಡವೆಂದರೂ ಬಂದುಬಿಡುತ್ತದೆ. ಏಕೆಂದರೆ ಪ್ರಯೋಜನಕ್ಕಿಲ್ಲದ ಅವೇ ಹಳಹಳಿಕೆಗಳು, ಅಧಿಕೃತತೆಯಿಲ್ಲದ ಮಾಹಿತಿಗಳು, ವಿಕೃತಿಗೊಂಡ ಇತಿಹಾಸಗಳು ಆರಂಭವಾಗುವುದೇ ಈ ಗಜೆಟಿಯರುಗಳಿಂದ. ಸ್ವಾತಂತ್ರ್ಯಾ ನಂತರ ಪ್ರಕಟಗೊಂಡ ಯಾವುದೇ ಜಿಲ್ಲೆಯ ಗಜೆಟಿಯರುಗಳನ್ನು ಗಮನಿಸಿದರೂ ಸೆಕ್ಯುಲರ್ ವಾಸನೆ ಅವುಗಳ ಪುಟಗಳ ಒಳಗಳೊಳಗಿಂದ ರಪ್ಪನೆ ಬಡಿಯುತ್ತದೆ. ಕೊಡಗು ಗಜೆಟಿಯರುಗಳಲ್ಲಿ ಹಾಲೇರಿ ರಾಜರ ಉಲ್ಲೇಖಗಳಿರುತ್ತವೆ. ಆದರೆ ಟಿಪ್ಪುದಾಳಿಯ ಉಲ್ಲೇಖಗಳಿರುವುದಿಲ್ಲ. ಮೈಸೂರು ಗಜೆಟಿಯರುಗಳಲ್ಲಿ ಟಿಪ್ಪು ಗುಣಗಾನವಿರುತ್ತವೆಯೇ ಹೊರತು ಲಕ್ಷ್ಮಮ್ಮಣ್ಣಿಯ ಪ್ರಸ್ಥಾಪವಿರುವುದಿಲ್ಲ. ಮಂಡ್ಯ ಜಿಲ್ಲಾ ಗಜೆಟಿಯರುಗಳು ಇನ್ನೂ ಭಯಾನಕ. ಇತಿಹಾಸದ ಘಟನೆಗಳನ್ನು ವಿವರಿಸುತ್ತಾ ಅಲ್ಲಿ ಇಸವಿಗಳೇ ಮಾಯವಾಗುವ ಚಮತ್ಕಾರಗಳಿವೆ. ಅಂದರೆ ೧೭೫೦ರಿಂದ ೧೮೦೦ರವರೆಗಿನ ಯಾವ ಘಟನೆಗಳೂ ಮಂಡ್ಯ ಜಿಲ್ಲಾ ಗಜೆಟಿಯರುಗಳಲ್ಲಿಲ್ಲ. ಅಂದರೆ ೪ನೇ ಮೈಸೂರು ಯುದ್ಧದ ಪ್ರಮುಖ ಘಟನಾವಳಿಯಾಗಿ ದಾಖಲಾಗುವ ಮಳವಳ್ಳಿ ಯುದ್ಧದ ಬಗ್ಗೆ ಒಂದೇ ಒಂದು ಸಾಲೂ ಇಲ್ಲ. ಒಕ್ಕಲಿಗ ಪರಾಕ್ರಮದ ದಾಖಲೆಯನ್ನು ಅಳಿಸಿಹಾಕಲು ಗಜೆಟ್ ಪಂಡಿತರು ಒಂದು ಕಾಲಘಟ್ಟವನ್ನೇ ಎಗರಿಸಿಬಿಟ್ಟಿದ್ದಾರೆ! ಹಾಗಾಗಿ ಮಳವಳ್ಳಿ ಯುದ್ಧದ ಕುರುಹುಗಳಿದ್ದರೂ, ಇತಿಹಾಸ ಮೈಚೆಲ್ಲಿ ಬಿದ್ದಿದ್ದರೂ ಉರಿಗೌಡ ಮತ್ತು ದೊಡ್ಡನಂಜೇಗೌಡರ ಹೋರಾಟಗಳ ಉಲ್ಲೇಖಗಳು ಸಿಗುತ್ತಿಲ್ಲ. ಮಳವಳ್ಳಿ ಯುದ್ಧವನ್ನೇ ಹೇಳದ ಇಂಥ ಗಜೆಟಿಯರುಗಳನ್ನಿಟ್ಟುಕೊಂಡು ಮಂಡ್ಯ ಜಿಲ್ಲೆಗೇನು ಪ್ರಯೋಜನ? ಹಾಗಾಗಿ ಹಿಂದೆ ಮುಂದೆ ನೋಡದೆ ಸ್ವಾತಂತ್ರ್ಯಾ ನಂತರದ ಮಂಡ್ಯ ಜಿಲ್ಲಾ ಗಜೆಟಿಯರುಗಳನ್ನು ತೂಕಕ್ಕೆ ಹಾಕಬಹುದು. ಅಷ್ಟೇ ಅಲ್ಲ ಟಿಪ್ಪುಸುಲ್ತಾನ್ ಸಮರ್ಥಕರಿಗೆ ದೊಡ್ಡ ಬಲವನ್ನು ಈ ಗಜೆಟಿಯರುಗಳು ಒದಗಿಸುತ್ತಿವೆ. ಟಿಪ್ಪು ಕ್ರೂರತೆಯನ್ನು ಹುಡುಕುವವರಿಗೆ ಇವು ತೊಡಕಾಗುತ್ತಿವೆ. ಮತ್ತಷ್ಟು ಓದು 
ಶೃಂಗೇರಿ ಮಠದ ಮೇಲೆ ಮರಾಠರು ದಾಳಿ ಮಾಡಿದ್ದರೇ?
ಮೂಲ ಲೇಖಕ : ಉದಯ್ ಕುಲಕರ್ಣಿ
ಅನುವಾದ : ರಾಕೇಶ್ ಶೆಟ್ಟಿ
ಹೈದರಾಲಿ,ಟಿಪ್ಪು ಸುಲ್ತಾನನಿಂದ ದೇವಾಲಯಗಳ ನಾಶದ ಬಗ್ಗೆ ಮಾತನಾಡಿದ ತಕ್ಷಣ ಶೃಂಗೇರಿ ಮಠದ ಮೇಲೆ ಮರಾಠರು ದಾಳಿ ಮಾಡಿದ್ದರು, ಟಿಪ್ಪು ಸ್ವಾಮೀಜಿಯವರ ಸಹಾಯಕ್ಕೆ ಬಂದಿದ್ದ ಎಂದು ಕಮ್ಯುನಿಸ್ಟರು ಮುಂದೆ ನಿಲ್ಲುತ್ತಾರೆ.ಹಾಗಿದ್ದರೆ ಈ ದುರ್ಘಟನೆಯ ಸತ್ಯವೇನು? ಈ ಘಟನೆಯ ಇನ್ನೊಂದು ಮಗ್ಗುಲನ್ನು ತಿಳಿಸುವ ಇತಿಹಾಸ ತಜ್ಞ ಉದಯ್ ಕುಲಕರ್ಣಿಯವರು ಸ್ವರಾಜ್ಯ ಮ್ಯಾಗಜಿನ್ನಿನಲ್ಲಿ ಬರೆದ ಲೇಖನ ನಿಲುಮಿಗರಿಗಾಗಿ – ನಿಲುಮೆ
ಟಿಪ್ಪುವಿನ ಮತಾಂಧತೆಯನ್ನು ತಮ್ಮ ರೆಡ್ ಕಾರ್ಪೆಟಿನ ಅಡಿಯಲ್ಲಿ ತೂರಿಸುವ ಅಭ್ಯಾಸವುಳ್ಳ ಕಮ್ಯುನಿಸ್ಟ್ ಇತಿಹಾಸಕಾರರು ಆತ ಸೆಕ್ಯುಲರ್ ಆಗಿದ್ದ ಎಂದು ತೋರಿಸಲು ಪದೇ ಪದೇ ಬಳಸುವದು ಮರಾಠರ ಸೈನ್ಯ ಶೃಂಗೇರಿ ಮಠದ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆದ ನಂತರ ಟಿಪ್ಪು ಅದರ ಜೀರ್ಣೋದ್ಧಾರಕ್ಕೆ ಸಹಾಯ ಮಾಡಿದ ಎನ್ನುವುದಾಗಿದೆ. ಆದರೆ ಆ ದಿನ ನಿಜವಾಗಿಯೂ ನಡೆದಿದ್ದೇನು ಎನ್ನುವುದನ್ನು ‘Solstice at Panipat’ ಪುಸ್ತಕ ಲೇಖಕರು ಮತ್ತು ಇತಿಹಾಸಕಾರರಾದ ಉದಯ್ ಕುಲಕರ್ಣಿಯವರು ಲಭ್ಯವಿರುವ ಪುರಾವೆಗಳ ಸಹಿತ ವಿವರಿಸುತ್ತಾರೆ.
“ಟಿಪ್ಪುವಿನ ನಡೆಗಳು ಸರಿಯಿಲ್ಲ. ಅಹಂಕಾರವೇ ತುಂಬಿರುವ ಆತ ಇತ್ತೀಚಿಗೆ ನೂರ್ ಮುಹಮ್ಮದನಿಗೆ ಬರೆದ ಪಾತ್ರದಲ್ಲಿ ತಾನು 50,000 ಹಿಂದುಗಳನ್ನು, ಮಹಿಳೆಯರು ಮಕ್ಕಳನ್ನು ಒಳಗೊಂಡಂತೆ ಇಸ್ಲಾಮ್ ಗೆ ಮತಾಂತರಿಸಿದ್ದೇನೆ. ಹಿಂದಿನ ಯಾವುದೇ ಪಡಿಶಾಹ್ ಅಥವಾ ವಜೀರ್ ಮಾಡಲಾಗದ್ದನ್ನು ನಾನು ಅಲ್ಲಾಹ್ ಕೃಪೆಯಿಂದ ಮಾಡಿದ್ದೇನೆ . ಹಳ್ಳಿಗೆ ಹಳ್ಳಿಯನ್ನೇ ಮತಾಂತರಿಸಿದ್ದೇನೆ ಎನ್ನುತ್ತಾನೆ” – ನಾನಾ ಫಡ್ನವಿಸ್ ಅವರು ಮಹಾಡ್ಜಿ ಸಿಂಧಿಯಾಗೇ ಬರೆದ ಪತ್ರ 5 September 1784.
ಥಾಮಸ್ ಡೇನಿಯಲ್ ಮತ್ತು ಜೇಮ್ಸ್ ವೇಲ್ಸ್ ಅವರು ಬಿಡಿಸಿರುವ ಚಿತ್ರವೊಂದು ಪುಣೆಯ ಶನಿವಾರ್ ವಾಡದಲ್ಲಿ ಗಮನ ಸೆಳೆಯುತ್ತದೆ.ಬ್ರಿಟಿಷರ ಚಾರ್ಲ್ಸ್ ಎಂ ಮಾಲೆಟ್ ಮತ್ತು ಮರಾಠರ ನಡುವಿನ ಒಪ್ಪಂದದ ಚಿತ್ರವದು. ಮಾಲೆಟ್ ವಿಶೇಷ ಆಸಕ್ತಿಯಿಂದ ಮಾಡಿಸಿದ ಈ ಚಿತ್ರವು, ಮರಾಠರು,ನಿಜಾಮರನ್ನು ಬ್ರಿಟಿಷ್ ಪಡೆಯೊಂದಿಗೆ ಸೇರಿಕೊಳ್ಳುವಂತೆ ಆತ ನಡೆಸಿದ ರಾಜತಾಂತ್ರಿಕತೆಯ ಪ್ರಾಮುಖ್ಯತೆಯನ್ನು ಹತ್ತು ವರ್ಷಗಳ ಹಿಂದೆ ಬ್ರಿಟಿಷರು ಹೊಂದಿದ್ದ ಮಿತ್ರ ಪಡೆಯನ್ನು ನೋಡುವ ಮೂಲಕ ಗಮನಿಸಬೇಕು. ಆ ಸಮಯದಲ್ಲಿ ಹೈದರಾಲಿಯ ಮರಾಠರ ಮಿತ್ರನಾಗಿದ್ದ. 1790 ರ ಸಮಯಕ್ಕಾಗಲೇ ಟಿಪ್ಪು ತನ್ನ ತಂದೆಯ ಹಳೆಯ ಮಿತ್ರಪಡೆಗಳಲ್ಲಿ ಅದೆಷ್ಟು ಆಕ್ರೋಶ ಮೂಡಿಸಿದ್ದನೆಂದರೆ ಅವರು ಬ್ರಿಟಿಷರೊಂದಿಗೆ ಕೈ ಜೋಡಿಸಿಬಿಟ್ಟಿದ್ದರು.
1790-1792ರ ನಡುವೆ ಟಿಪ್ಪುವಿನ ಮೇಲೆ ನಡೆದ ಯುದ್ಧದ ಸಮಯದಲ್ಲಿ, ಮರಾಠರ ಸೇನಾ ಮುಖ್ಯಸ್ಥ ರಘುನಾಥ ರಾವ್ ‘ದಾದಾ’ ಕುರುಂದ್ವಾಡ್ಕರ್ ಅವರ ಮೇಲ್ವಿಚಾರಣೆಯಲ್ಲಿದ್ದ ಸೇನೆಯ ತುಕಡಿಯೊಂದು ಶೃಂಗೇರಿಯ ಶಂಕರಾಚಾರ್ಯ ಮಠದ ಮೇಲೆ ದಾಳಿ ಮಾಡಿ, ಲೂಟಿಗೈದು ಹಾಳುಗೆಡವಿತ್ತು. ಇಂದಿಗೂ ಮಾಗದ ಗಾಯದಂತಿರುವ ಈ ದಾಳಿಯ ಹೊಣೆಯನ್ನು ಮರಾಠರು ಮತ್ತು ಪರಶುರಾಮ್ ಭಾವ್ ಪಟವರ್ಧನ್ ಅವರ ಮೇಲೆಯೇ ಹೊರಿಸಲಾಗಿದೆ.1791ರ ಸಮಯದಲ್ಲಿ ಮರಾಠರ ನಡುವೆ ಈ ಅನಾಹುತದ ಸುತ್ತ ನಡೆದಿರುವ ಪತ್ರ ವಿನಿಮಯಗಳ ಮೇಲೆ ಭಾಷಾ ಸಮಸ್ಯೆಯಿಂದಲೋ ಅಥವಾ ಉದ್ದೇಶಪೂರ್ವಕವಾಗಿಯೋ ಬೆಳಕು ಚೆಲ್ಲಲಾಗಿಲ್ಲ.




