ಒಂದು ಪ್ರೇತದ ಕತೆ! (ಭಾಗ 6)
– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
ಪ್ರೇತದ ಆತ್ಮ ಚರಿತೆ! (ಭಾಗ 3)
ಪ್ರೇತದ ಆತ್ಮ ಚರಿತೆ! (ಭಾಗ ೪)
ಪ್ರೇತದ ಆತ್ಮ ಚರಿತೆ! (ಭಾಗ ೫)
ಒಂದೆಡೆ ಕುಸಿಯುತ್ತಿರುವ ಆಡಳಿತ ವ್ಯವಸ್ಥೆ, ಬಂಡೇಳುತ್ತಿರುವ ಪಾಳೇಗಾರರು, ಪ್ರಧಾನರ ಒಳಜಗಳ… ನಾಲ್ದಿಕ್ಕುಗಳಲ್ಲೂ ಮರಾಠಾ ಸಾಮ್ರಾಜ್ಯವನ್ನು ಕುಟಿಲನೀತಿಯ ಮೂಲಕ ಆಕ್ರಮಿಸಿಕೊಳ್ಳಲು ಹವಣಿಸುತ್ತಿರುವ ಕೆಂಪು ಮುಸುಡಿಗಳ ಈಸ್ಟ್ ಇಂಡಿಯಾ ಕಂಪನಿ. ಅದರಿಂದ ಬಿಡಿಸಿಕೊಳ್ಳಲು ಬಾಜಿರಾವ್ ಪಂಡರಾಪುರದಲ್ಲಿ ಸಾಕಷ್ಟು ಧರ್ಮ ಕಾರ್ಯಗಳನ್ನು ನಡೆಸಿದ. ಭೀಮಾ ನದಿಯ ತೀರದಲ್ಲಿ ಭಾರಿ ಹೋಮಗಳನ್ನಿಟ್ಟು ನಾರಾಯಣನ ಪ್ರೇತವನ್ನು ಉಚ್ಛಾಟನೆ ಮಾಡಲಾಯಿತು. ಆದರೆ ಯಾವುದೂ ಉಪಯೋಗವಾಗಲಿಲ್ಲ. ಕೇವಲ ಪೇಶ್ವಾಗಳ ಸಾಮ್ರಾಜ್ಯ ನಾಶವಾಗಲಿ… ಪೇಶ್ವಾಗಳಿಗೆ ಸಂತಾನವಿಲ್ಲದೆ ಹೋಗಲಿ… ಪೇಶ್ವಾಗಳು ಕೈ ಹಿಡಿದ ಮಡದಿಯರನ್ನು ಮುಟ್ಟಿದರೆ ಸಾಕು ಅವರು ಸತ್ತು ಹೋಗುವಂತಾಗಲಿ… ಪೇಶ್ವಾಗಳ ಅರಮನೆಗೆ ಬೆಂಕಿ ಬೀಳಲಿ. ಇದು ನಾರಾಯಣನ ಪ್ರೇತ ಬಾಜಿರಾಯನ ಕಿವಿಯಲ್ಲಿ ಪ್ರತೀ ದಿನ ಉಸುರುತ್ತಿದ್ದ ಮಾತುಗಳು.. ಬಾಜಿರಾಯ ಮದುವೆಯಾದ. ಮಕ್ಕಳನ್ನು ಪಡೆಯಬೇಕು ಎಂದು ಪ್ರಯತ್ನ ಪಟ್ಟ ಕೆಲವೇ ದಿನದಲ್ಲಿ ಪತ್ನಿ ನಿಗೂಡವಾಗಿ ಸಾವನ್ನಪ್ಪಿದಳು.!! ಮತ್ತೊಬ್ಬಳನ್ನು ಮದುವೆಯಾದ ಅವಳೂ ಇದೇ ರೀತಿ ನಿಗೂಢವಾಗಿ ಸತ್ತು ಹೋದಳು. ಹೀಗೆ ನಾಲ್ಕು ಜನರನ್ನು, ನಾರಾಯಣ ಪೇಶ್ವೆಯ ಪ್ರೇತ ಬಲಿ ಪಡೆದುಕೊಂಡಿತು. ಬಾಜಿರಾಯನಿಗೆ ಹೆಣ್ಣು ಕೊಡಲು ಜನ ಹಿಂದೇಟು ಹಾಕತೊಡಗಿದರು. ಮತ್ತಷ್ಟು ಓದು 
ಮನೆಯೊಂದು ಮೂರು ಬಾಗಿಲು…..
– ಮು ಅ ಶ್ರೀರಂಗ
೧. ಕೃಷ್ಣರಾಜಸಾಗರ ಆಣೆಕಟ್ಟು ಕಟ್ಟುವಾಗಲಿಂದ ಹಿಡಿದು ಇಲ್ಲಿಯತನಕ ನೂರು ವರ್ಷಗಳಿಗೂ ಮೀರಿ ಕಾವೇರಿ ನದಿ ನೀರಿನ ಹಂಚಿಕೆ ಮತ್ತಿತರ ವಿಷಯಗಳ ಗಲಾಟೆ ತಮಿಳುನಾಡು (ಅಂದಿನ ಮದ್ರಾಸ್ ರಾಜ್ಯ) ಮತ್ತು ನಮ್ಮ ನಡುವೆ ಇದೆ. ಶಾಸಕಾಂಗ, ನ್ಯಾಯಾಂಗ, ಒಕ್ಕೂಟ ವ್ಯವಸ್ಥೆ, ಕೇಂದ್ರ ಸರ್ಕಾರ ಹೀಗೆ ಅನೇಕ ವಿಷಯಗಳು ಹೆಣೆದುಕೊಂಡಿರುವ ಒಂದು ಸಮಸ್ಯೆ ಸಿನಿಮಾನಟರ, ಬುದ್ಧಿಜೀವಿಗಳ, ಸಾಹಿತಿಗಳ ಮೆರವಣಿಗೆ, ಅಬ್ಬರದ, ಆಕ್ರೋಶದ ಒಂದು ಹೇಳಿಕೆಯಿಂದ ಬಗೆ ಹರಿಯುತ್ತವೆ ಎಂಬುದೇ ಹಾಸ್ಯಾಸ್ಪದ ಸಂಗತಿ. ಕೆಲವು ಪ್ರಚಾರಪ್ರಿಯ ಸಾಹಿತಿಗಳು ಗೋಕಾಕ್ ಚಳುವಳಿಯ ಉದಾಹರಣೆ ಕೊಟ್ಟು ಈಗಲೂ ಹಾಗೆ ಮಾಡಿದರೆ ರಾತ್ರಿ ಕಳೆದು ಬೆಳಗಾಗುವುದರವೊಳಗೆ ಕಾವೇರಿ ಸಮಸ್ಯೆ ಬಗೆಹರಿಸಬಹುದು ಎಂಬ ಹೇಳಿಕೆಕೊಡುತ್ತಿದ್ದಾರೆ. ಆದರೆ ಗೋಕಾಕ್ ವರದಿಯ ಅನುಷ್ಠಾನ ಕಟ್ಟುನಿಟ್ಟಾಗಿ ಜಾರಿಯಾಗಿದೆಯೇ? ಇತ್ತೀಚಿಗೆ ತಾನೇ ಸುಪ್ರೀಂ ಕೋರ್ಟಿನಲ್ಲಿ ಕನ್ನಡ ಮಾಧ್ಯಮ ಕಡ್ಡಾಯ ಮಾಡುವುದು ತಪ್ಪು ಎಂದು ಹೇಳಿ ‘ಮಾತೃ ಭಾಷೆ’ಗೆ ನಮ್ಮ ಸಂವಿಧಾನದ ಪ್ರಕಾರ ಬೇರೆ ವ್ಯಾಖ್ಯಾನ ನೀಡಿದೆ. ಖಾಸಗಿ ಶಾಲೆಗಳ ಒಕ್ಕೂಟದ ವಾದಕ್ಕೆ ಜಯ ಸಿಕ್ಕಿದೆ. ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಖಾಲಿ ಹೊಡೆಯುತ್ತಿವೆ; ಮುಚ್ಚುತ್ತಿವೆ ಅಥವಾ ಮೂರ್ನಾಲಕ್ಕು ಶಾಲೆಗಳನ್ನು ಒಟ್ಟುಗೂಡಿಸಿ ಹಾಗೂ ಹೀಗೂ ಉಸಿರಾಡುವಂತೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ ಕೊಡಬೇಕು ಎಂಬ ಮಹಿಷಿ ವರದಿಯ ಜಾರಿಯೂ ಪೂರ್ಣಪ್ರಮಾಣದಲ್ಲಿ ಜಾರಿಯಾಗಲು ಸಂವಿಧಾನ, ನ್ಯಾಯಾಂಗದ ವಿಧಿಗಳ ಪ್ರಕಾರ ಆಗುತ್ತಿಲ್ಲ. ಇದೇನು ನಮ್ಮನ್ನಾಳುತ್ತಿರುವ, ಆಳಿದ ಸರ್ಕಾರಗಳ ‘ರಾಜಕೀಯ ಇಚ್ಚಾಶಕ್ತಿ’ಯ ಕೊರತೆಯೋ ಅಥವಾ ಆ ವರದಿಗಳಲ್ಲಿನ ಕೊರತೆಯೋ ತಿಳಿಯದಾಗಿದೆ. ಮತ್ತಷ್ಟು ಓದು 
ಮಾದರೀ ಹೋರಾಟಗಾರರ ಮುಂದಾಳತ್ವದಲ್ಲಿ ಪ್ರಾಯೋಜಿತ ಪ್ರತಿಭಟನೆಗಳು
– ಎಸ್. ಎನ್. ಭಾಸ್ಕರ್
ದಲಿತಪರ ಹೋರಾಟ, ಚಳುವಳಿಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ದಲಿತ ಸಂಬಂಧಿ ಸಂಘಟನೆಯ ಮುಖಂಡರೊಬ್ಬರು ತಮ್ಮ ಚಳುವಳಿ, ಧ್ಯೇಯ ಗಳ ಬಗ್ಗೆ ಮಾತನಾಡುತ್ತಾ, ಈ ಹಿಂದೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರು ಹೇಳಿದ್ದ ಈ ಮಾತುಗಳನ್ನು ಉಲ್ಲೇಖಿಸುತ್ತಾರೆ.
“ಹಿಂದೂ ಧರ್ಮವೆಂಬುದು ಬಹು ಮಹಡಿಗಳನ್ನು ಹೊಂದಿರುವ ಒಂದು ಕಟ್ಟಡವಿರುವ ಹಾಗೆ. ವಿಪರ್ಯಾಸವೆಂದರೆ ಇಲ್ಲಿ ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ಹೋಗಲು ಯಾವುದೇ ಮೆಟ್ಟಿಲುಗಳಿಲ್ಲ. ನೆಲಮಹಡಿಯಲ್ಲಿರುವವನು ಕೊನೆಯ ತನಕ ಅಲ್ಲೇ ಇರಬೇಕಾಗುತ್ತದೆ. ಮೇಲ್ಮಹಡಿಯಲ್ಲಿರುವವನು ಕೊನೆಯವರೆಗೂ ಮೇಲ್ಮಟ್ಟದಲ್ಲಿಯೇ ಇರುವಂತೆ ನೋಡಿಕೊಳ್ಳಲಾಗುತ್ತದೆ” ಮತ್ತಷ್ಟು ಓದು 
ಚಿನ್ನ ತರಬಲ್ಲ ಚಿಗರೆಗಳು ನಮ್ಮಲ್ಲೇ ಇರುವಾಗ…
– ರೋಹಿತ್ ಚಕ್ರತೀರ್ಥ
ತನ್ನ ಏಳು ವರ್ಷದ ಮಗನನ್ನು ಮಡಿಲಲ್ಲಿ ಕೂರಿಸಿಕೊಂಡು ಆಕೆ ಪ್ರಾಣಿಪಕ್ಷಿಗಳನ್ನು ಪರಿಚಯಿಸುವ ಚಿತ್ರಪುಸ್ತಕವನ್ನು ಹರವಿದ್ದಳು. “ಇದು ಅಳಿಲು, ಅ-ಳಿ-ಲು. ಇದು ಆನೆ. ಇದು ಚಿರತೆ, ಮತ್ತೆ ಓ ಇದು ಜಿರಾಫೆ” ಎಂದೆಲ್ಲ ಹೇಳಿಕೊಡುತ್ತ “ಇದು ಚಿಂಪಾಂಜಿ” ಎಂದು ಮುಂದಿನ ಚಿತ್ರದತ್ತ ತೋರಿಸಿದಾಗ ಅದುವರೆಗೆ ಅಕ್ಷರಗಳನ್ನು ಉರು ಹೊಡೆಯುತ್ತಿದ್ದ ಹುಡುಗ ಥಟ್ಟನೆ “ಓ! ಇದು ಗೊತ್ತು!” ಎಂದುಬಿಟ್ಟ. “ಹೌದಾ? ನೀನ್ಯಾವತ್ತೋ ಈ ಪ್ರಾಣೀನ ನೋಡಿದ್ದು?” ಎಂದು ಆಕೆ ಕೇಳಿದಾಗ ಹುಡುಗ ಮುಗ್ಧವಾಗಿ “ನಮ್ಮ ಶಾಲೆ ಪಕ್ಕದ ಕಿರಾಣಿ ಅಂಗಡಿ ಮಾಮ ಹಾಗೇ ಕರೆಯೋದು ನನ್ನ” ಎಂದುಬಿಟ್ಟ. ಅದುವರೆಗೆ ಮಗುವನ್ನು ತೊಡೆಯಲ್ಲಿಟ್ಟುಕೊಂಡು ಅಕ್ಷರಾಭ್ಯಾಸ ಮಾಡಿಸುತ್ತಿದ್ದ ಆಕೆಗೆ ಎದೆ ಮೇಲೆ ಯಾರೋ ಬಿಸಿ ಎಣ್ಣೆ ಹುಯ್ದಂತಾಯಿತು. ಕಣ್ಣುಗಳು ಮನಸ್ಸಿನ ನಿಯಂತ್ರಣಕ್ಕೆ ಕ್ಯಾರೆನ್ನದೆ ಅಶ್ರುಧಾರೆ ತುಂಬಿಕೊಂಡುಬಿಟ್ಟವು. ಬೆಳಕು ಬೀರುತ್ತಿದ್ದ ಎದುರಿನ ಕಿಟಕಿ ಧಡಾರನೆ ಮುಚ್ಚಿಹೋಗಿ ಕೋಣೆಯೆಲ್ಲ ಕತ್ತಲುಗಟ್ಟಿದಂತೆ ಭಾಸವಾಯಿತು. ಮೈ ಸೆಟೆದುಕೊಂಡಿತು. ಮತ್ತಷ್ಟು ಓದು 
ಆಗಬೇಕಿದೆ ಸರಸ್ವತಿ ಮಂದಿರಗಳ ಜೀರ್ಣೋದ್ಧಾರ
– ಮುರಳಿ ಕೃಷ್ಣ ಕಡವ
ಒಂದೂರಿನ ಒಂದಷ್ಟು ಜನ ತಮ್ಮ ಮಕ್ಕಳ ವಿದ್ಯಾಭ್ಯಾಸ ಸರಿಯಾಗಿ ನಡೆಯುತ್ತಿಲ್ಲಾ ಅಂತ ಒಬ್ಬ ಜ್ಯೋತಿಷಿಯ ಬಳಿ ಸಲಹೆಗಾಗಿ ಹೋದರು. ಜ್ಯೋತಿಷಿಯು ತನ್ನೆಲ್ಲಾ ಲೆಕ್ಕಚಾರಗಳನ್ನು ಮಾಡಿ, “ನಿಮ್ಮೂರಿನ ಮಧ್ಯದಲ್ಲಿ ದೇವರ ಸಾನ್ನಿಧ್ಯವಿದೆ, ಅಲ್ಲಿ ಒಂದು ದೇವಸ್ಥಾನದ ನಿರ್ಮಾಣವಾಗಬೇಕು” ಎಂಬ ಪರಿಹಾರವನ್ನು ನೀಡಿದರು. ದೇವರ ಮೇಲಿನ ಭಕ್ತಿಗಿಂತ ಭಯವೇ ಜಾಸ್ತಿ ನೋಡಿ ಜನರಿಗೆ. ಸರಿ ಎಂದು ಒಂದೇ ವರ್ಷದಲ್ಲಿ ಲಕ್ಷಗಟ್ಟಲೇ ದುಡ್ಡು ಸಂಗ್ರಹಿಸಿ, ಒಂದು ಗುಡಿಯನ್ನ ಎದ್ದು ನಿಲ್ಲಿಸಿ, ದೇವರ ಮೂರ್ತಿಯನ್ನ ಪ್ರತಿಷ್ಟಾಪಿಸಿಯೇ ಬಿಟ್ಟರು. ಅದಕ್ಕೊಬ್ಬ ಪೂಜಾರಿಯನ್ನೂ ನೇಮಿಸಿ ಪೂಜೆ, ಹೋಮ ಹವನಗಳನ್ನೂ ನಡೆಸಲಾಯಿತು. ಆದರೆ ಅವರು ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗಲೇ ಇಲ್ಲ. ಕೇಳಿದರೆ ಆ ಜನರ ಉತ್ತರ ಏನು ಗೊತ್ತಾ “ನಮ್ಮ ಕೆಲಸ ನಾವು ಮಾಡಿದ್ದೇವೆ ಫಲಾಫಲಗಳೆಲ್ಲಾ ದೇವರಿಗೆ ಬಿಟ್ಟದ್ದು” ಅಂತ. ಮತ್ತಷ್ಟು ಓದು 
ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ
– ಗುರುಪ್ರಸಾದ್ ಕೆ ಕೆ.
ಶ್ರೀಧರಭಾಮಿನಿಧಾರೆ ೧-೫
ಶ್ರೀಧರಭಾಮಿನಿಧಾರೆ ೬-೧೦
ಶ್ರೀಧರಭಾಮಿನಿಧಾರೆ ೧೧-೧೫
ಶ್ರೀಧರಭಾಮಿನಿಧಾರೆ ೧೬-೨೦
16)
ಶಾಂತಿ ಸಾಗರನಾದ ಸಿರಿಧರ
ಕಾಂತಿಯದು ವೃದ್ಧಿಸುವ ತೆರದಿ
ಸಂತಸಾಧುಗಳಿಂದ ಕಲಿಯುವ ಹಲವು ವಿಷಯಗಳಾ||
ಶಾಂತಮೂರುತಿ ರಾಮದೇವನ
ಚಿಂತೆ ಇಲ್ಲದ ಮನದಿ ನೆನೆಯುತ
ಸಂತಸದಲೀ ಕಾಲ ಕಳೆಯುತಲಿರುವ ಪುರದಲ್ಲೀ||
ತಾತ್ಪರ್ಯ : ಸದಾ ಶಾಂತಿಭಾವವನ್ನೇ ಹೊಂದಿದ ಶ್ರೀಧರರು, ತಮ್ಮ ತೇಜಸ್ಸು ವೃದ್ಧಿಯಾಗುವಂತೆ, ಸಾಧು ಸಂತರ, ಸಜ್ಜನರ ಜೊತೆಗೆ ಮಾತಾಡುತ್ತಾ ಹಲವಾರು ಆಧ್ಯಾತ್ಮಿಕ ವಿಷಯಗಳನ್ನು ತಿಳಿದುಕೊಳ್ಳುತ್ತಾ ಇದ್ದರು. ಸದಾ ನಿಶ್ಚಿಂತ ಮನೋಭಾವನೆಯಲ್ಲಿ ರಾಮನಾಮವ ಜಪಿಸುತ್ತಾ ಸಂತಸದಲ್ಲಿ ಕಾಲಕಳೆಯುತ್ತಿರುವ ಇವರನ್ನು ನೋಡುವುದೇ ಸುತ್ತಲಿನ ಜನರಿಗೆ ಒಂದು ಸೊಗಸಾಗಿತ್ತು. ಮತ್ತಷ್ಟು ಓದು 
ಸರ್ಜಿಕಲ್ ಆಪರೇಶನ್
– ವಿನಾಯಕ ಹಂಪಿಹೊಳಿ
ಸರ್ಜರಿ ಎಂದರೆ ಶಸ್ತ್ರಚಿಕಿತ್ಸೆ. ದೇಹದ ಒಂದು ಭಾಗಕ್ಕೆ ಚಿಕಿತ್ಸೆ ಅಗತ್ಯವಾದಲ್ಲಿ ಅಲ್ಲಷ್ಟೇ ದೇಹವನ್ನು ಕೊಯ್ಯುವಂತೆ, ಸೈನಿಕ ಕಾರ್ಯಾಚರಣೆಯಲ್ಲಿಯೂ ಒಂದಾನೊಂದು ಪ್ರದೇಶದಲ್ಲಷ್ಟೇ ನಡೆಸುವ ಸೀಮಿತ ಕಾರ್ಯಾಚರಣೆಯೇ ಸರ್ಜಿಕಲ್ ಆಪರೇಶನ್. ಅಮೇರಿಕದ ಸೈನ್ಯ ಒಸಾಮಾ ಬಿನ್ ಲಾಡೆನ್ ವಾಸವಾಗಿರುವ ಸ್ಥಳದ ಮಾಹಿತಿ ತಿಳಿದಾಗ ಹೀಗೆಯೇ ದಾಳಿ ಮಾಡಿತ್ತು. ಈ ಹಿಂದೆ ಇರಾಕಿನಲ್ಲಿ ನ್ಯೂಕ್ಲಿಯರ್ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಸಿಕ್ಕಾಗ ಇಸ್ರೇಲ್ ದೇಶವು ಒಪೆರಾ ಕಾರ್ಯಾಚರಣೆಯನ್ನು ರೂಪಿಸಿ, ತನ್ನ ವಾಯುಸೇನೆಯನ್ನು ಉಪಯೋಗಿಸಿಕೊಂಡು ಆ ನ್ಯೂಕ್ಲಿಯರ್ ರಿಯಾಕ್ಟರನ್ನು ಧ್ವಂಸ ಮಾಡಿ ಬಂದಿತ್ತು. ಇಸ್ರೇಲಿನ ವಿಮಾನವೊಂದನ್ನು ಅಪಹರಿಸಿ ದೂರದ ಎಂಟೆಬ್ಬೆಯಲ್ಲಿ ಇಳಿಸಿದಾಗ ಆಪರೇಶನ್ ಥಂಡರ್ಬೋಲ್ಟ್ ಯೋಜಿಸಿ ಏಕಾಏಕಿ ಅಲ್ಲಿನ ಭಯೋತ್ಪಾದಕರ ಮೇಲೆ ದಾಳಿ ಮಾಡಿ ಬಂಧಿತರನ್ನು ಬಿಡುಗಡೆಗೊಳಿಸಿತು. ಮತ್ತಷ್ಟು ಓದು 
ಪ್ರೇತದ ಆತ್ಮ ಚರಿತೆ! (ಭಾಗ ೫)
– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
ಪ್ರೇತದ ಆತ್ಮ ಚರಿತೆ! (ಭಾಗ 3)
ಪ್ರೇತದ ಆತ್ಮ ಚರಿತೆ! (ಭಾಗ ೪)
ಛೇ ಏನಾಗಿ ಹೋಯಿತು. ದೇಶದ ಗಡಿಗಳನ್ನು ಕಾಯ ಬೇಕಿದ್ದ ಮರಾಠಾ ಖಡ್ಗಗಳು ತಮ್ಮತಮ್ಮೊಳಗೆ ಕಣಕಣಿಸತೊಡಗಿದವು. ಹೆಣ್ಣೊಬ್ಬಳ ದುಷ್ಟತನಕ್ಕೆ ಸಾಮ್ರಾಜ್ಯದ ಸ್ಥಂಭಗಳೇ ಬುಡ ಕಳಚಿಕೊಂಡವು. ತನ್ನ ನಿಷ್ಟಾವಂತ ಸೇನಾನಿಗಳನ್ನು ಕೂಡಿಕೊಂಡು ರಘುನಾಥ ರಾವ್ ಪೇಶ್ವಾ ಪಟ್ಟವನ್ನು ಅಲಂಕರಿಸಿಯೇ ಬಿಟ್ಟ.!! ನಾರಾಯಣ ರಾವ್ ರಕ್ತದಿಂದ ತೊಯ್ದು ಹೋಗಿದ್ದ ಪೇಶ್ವಾ ಕಿರೀಟ ರಘುನಾಥ ರಾವ್ ಪೇಶ್ವಾ ತಲೆಯಲ್ಲಿ ಘಟಸರ್ಪವೊಂದು ಮಡಿಕೆ ಹಾಕಿ ಕುಳಿತಂತೆ ಕಾಣುತ್ತಿತ್ತು. ಯಾವುದೇ ಕ್ಷಣದಲ್ಲಾದರೂ ಆ ಆತ್ಮ ಪ್ರತಿಕಾರಕ್ಕಿಳಿಯದೆ ಸುಮ್ಮನಿರುವುದಿಲ್ಲ. ಅಷ್ಟು ಭೀಕರವಾಗಿ ಆ ಬಾಲಕನನ್ನು ಕತ್ತರಿಸಿ ಕೊಲ್ಲಲಾಗಿತ್ತು. ನಾರಾಯಣನ ಕಣ್ಣೀರು ರಕ್ತ ಒಂದಾಗಿ ಬೆರೆತು ರಘುನಾಥನ ಪಾದ ತೊಯ್ದರೂ ಆತ ಆ ಮುಗ್ದ ಬಾಲಕನ ಮೇಲೆ ಕರುಣೆ ತೋರಿರಲಿಲ್ಲ. ಮತ್ತಷ್ಟು ಓದು 
ವೈಟ್ ಕಾಲರ್ಡ್ ಕಾರ್ಮಿಕರ ಸಂಕಟ ಕೇಳುವವರ್ಯಾರು?
– ರಾಕೇಶ್ ಶೆಟ್ಟಿ
ಸೆಪ್ಟಂಬರ್ ೨ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್’ಗೆ ಕರೆ ಕೊಟ್ಟಿದ್ದವು, ಕಾರ್ಮಿಕರು ತಮ್ಮ ತಮ್ಮ ಸಂಘಟನೆಗಳೊಂದಿಗೆ ಬೀದಿಗಿಳಿದಿದ್ದರೇ, ಬಹಳಷ್ಟು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಐಟಿಯಂತಹ ಇನ್ನಿತರ ‘ವೈಟ್ ಕಾಲರ್’ ಕಾರ್ಮಿಕರಿಗೆ ಅವತ್ತು ಕೆಲಸದ ದಿನವೇ ಆಗಿತ್ತು. ಅಂದು ಬೆಳಗ್ಗೆ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಮಿತ್ರರೊಬ್ಬರಿಗೆ ಕಾರ್ಯನಿಮಿತ್ತವಾಗಿ ಕರೆ ಮಾಡಿ, ಎಲ್ಲಿದ್ದೀರಿ? ಎಂದೆ. ಇಲ್ಲೇ ಮೆಜಿಸ್ಟಿಕ್ ಸುತ್ತ-ಮುತ್ತ ತಿರುಗಾಡ್ತ ಇದ್ದೀನಿ, ಭಾರತ್ ಬಂದ್ ಎಫೆಕ್ಟ್ ಜನ ಸಾಮಾನ್ಯರಿಗೆ ಹೇಗೆ ಆಗುತ್ತಿದೆ ಅಂತ ತೋರಿಸಬೇಕಲ್ಲ ಎಂದರು. ವಿಚಿತ್ರ ನೋಡಿ ಬ್ಲ್ಯೂ-ವೈಟ್ ಇತ್ಯಾದಿ ಎಲ್ಲಾ ಬಣ್ಣದ ಕಾರ್ಮಿಕರ ಬವಣೆಗಳ ಬಗ್ಗೆ ವರದಿ ಮಾಡುವ ಮಾಧ್ಯಮದ ಗೆಳೆಯರಿಗೆ ತಮ್ಮದೇ ಪತ್ರಿಕೋದ್ಯಮದ ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು, ಪ್ರತಿಭಟಿಸಲೂ ಆಗುವುದಿಲ್ಲ. ಇಂತ ಸಮಸ್ಯೆಗಳ ಬಗ್ಗೆ ಏನಿದ್ದರೂ ಅವರು ಖಾಸಗಿಯಾಗಿ ಮಾತನಾಡಬಲ್ಲರೇ ಹೊರತು ಸಾರ್ವಜನಿಕವಾಗಿಯಲ್ಲ. ಯಾಕೆಂದರೆ ಮಾಧ್ಯಮಗಳಲ್ಲಿ ಕೆಲಸ ಮಾಡುವವರು Blue Collar Worker ಗಳಲ್ಲ ಅವರ ಕಾರ್ಮಿಕ ಹಕ್ಕುಗಳಿಗಾಗಿ ಒಂದು ಕಾರ್ಮಿಕ ಸಂಘಟನೆಯೂ ಇಲ್ಲ. ಇದು ಕೇವಲ ಮಾಧ್ಯಮದಲ್ಲಿರುವ White Collar Worker ಗಳಿಗೆ ಸಂಬಂಧಿಸಿದ ಸಮಸ್ಯೆಯಲ್ಲ. ಸಿಲಿಕಾನ್ ಸಿಟಿಯೆಂದು ಕರೆಯಲ್ಪಡುವ ಬೆಂಗಳೂರಿನ ಸಾಫ್ಟ್’ವೇರ್ ರಂಗದಂತಹ ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡುವವರ ಕತೆಯೂ ಇದೇ. ಮತ್ತಷ್ಟು ಓದು 
ವೇದನೆಯೂ ವ್ಯಸನವಾಗಿಬಿಟ್ಟರೇನು ಫಲ…?
– ಗುರುರಾಜ ಕೋಡ್ಕಣಿ. ಯಲ್ಲಾಪುರ
ಆಗಷ್ಟೇ ಮೊರೊಕ್ಕೊ ದೇಶದ ಮರಾಕ್ಕೇಶ್ ಪಟ್ಟಣಕ್ಕೆ ಬಂದಿಳಿದಿದ್ದ ಮತಪ್ರಚಾರಕನನ್ನು ತೀವ್ರವಾಗಿ ಆಕರ್ಷಿಸಿದ್ದು ಊರ ಹೊರಗಿನ ಮರುಭೂಮಿ. ತನ್ನನ್ನು ಸೂಜಿಗಲ್ಲಿನಂತೆ ಸೆಳೆದ ಮರಳುಗಾಡನ್ನು ಕಂಡ ಮರುಕ್ಷಣವೇ, ತನ್ನ ಪ್ರತಿನಿತ್ಯದ ಬೆಳಗಿನ ವಿಹಾರ ಆ ಮರಳುಗಾಡಿನಲ್ಲಿಯೇ ಎಂಬ ನಿರ್ಧಾರಕ್ಕೆ ಬಂದ ಪ್ರಚಾರಕ. ಹಾಗೊಂದು ನಿರ್ಧಾರದ ಮೊದಲ ದಿನವೇ ಮರುಭೂಮಿಯಲ್ಲಿ ಆತನಿಗೊಂದು ಅಚ್ಚರಿ ಕಾದಿತ್ತು. ಪ್ರಶಾಂತವಾದ ಮರಳುಗಾಡಿನ ನಡುವೆ ಮರಳಿನ ಮೇಲೆ ಅಡ್ಡವಾಗಿ ಮಲಗಿ ನೆಲಕ್ಕೆ ತನ್ನ ಕಿವಿಯಾನಿಸಿ, ಮರಳಿನ ಮೇಲೆ ಕೈಯಾಡಿಸುತ್ತ ಅಡ್ಡ ಮಲಗಿದ್ದ ವ್ಯಕ್ತಿಯೊಬ್ಬನ ವರ್ತನೆ ತನ್ನ ಪಾಡಿಗೆ ತಾನೆಂಬಂತೆ ನಡೆದು ಸಾಗುತ್ತಿದ್ದ ಪ್ರಚಾರಕನ ಗಮನ ಸೆಳೆದಿತ್ತು. ಮೊದಲ ದಿನ ಅದರೆಡೆಗೆ ತುಂಬ ಲಕ್ಷ್ಯ ಕೊಡದ ಪ್ರಚಾರಕ ‘ಹುಚ್ಚನಿರಬೇಕು ಪಾಪ..’ ಎಂದುಕೊಂಡು ಮುಂದೆ ಸಾಗಿದ. ಆದರೆ ಎರಡನೇ ದಿನವೂ ಘಟನೆಯ ಪುನರಾವರ್ತನೆ ಪ್ರಚಾರಕನ ಕುತೂಹಲವನ್ನು ಇನ್ನಷ್ಟು ಕೆರಳಿಸಿತ್ತು. ಅಷ್ಟಾಗಿಯೂ ಆ ವ್ಯಕ್ತಿಯನ್ನು ಮಾತನಾಡಿಸುವ ಗೋಜಿಗೆ ಹೋಗದ ಪ್ರಚಾರಕನ ಕುತೂಹಲ ಒಂದು ತಿಂಗಳ ನಂತರ ತನ್ನ ಸಹನೆಯ ಕಟ್ಟೆಯೊಡೆದಿತ್ತು. ಪ್ರತಿದಿನವೂ ನೆಲಕ್ಕೆ ಆತುಕೊಂಡು ವಿಚಿತ್ರವಾಗಿ ವರ್ತಿಸುವ ಆಗಂತುಕನ ಬಳಿ ತೆರಳಿದ ಪ್ರಚಾರಕ, ತನಗೆ ಬರುತ್ತಿದ್ದ ಅರೆಬರೆ ಅರೇಬಿಕ್ ಭಾಷೆಯಲ್ಲಿ, ‘ಗೆಳೆಯಾ, ನಾನು ಪ್ರತಿನಿತ್ಯವೂ ನೀನು ಹೀಗೆ ವರ್ತಿಸುವುದನ್ನು ಕಂಡಿದ್ದೇನೆ. ನೀನು ಹೀಗೆ ನೆಲಕ್ಕೆ ಆನಿಸಿಕೊಂಡು, ನೆಲವನ್ನು ಸವರುತ್ತ ಕುಳಿತುಕೊಳ್ಳಲು ಕಾರಣವೇನು ಎಂದು ತಿಳಿದುಕೊಳ್ಳಬಹುದೇ’? ಎಂದು ಪ್ರಶ್ನಿಸಿದ. ಮತ್ತಷ್ಟು ಓದು 




