ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕೂ
– ಮು.ಅ. ಶ್ರೀರಂಗ,ಬೆಂಗಳೂರು
ನಾವುಗಳೆಲ್ಲರೂ “ಭೂತದ ಬಂಗಲೆ”ಯೊಳಗೆ ಬಂಧಿತರಾಗಿರುವಂತಹ ವ್ಯಕ್ತಿಗಳು. ಸೆಕೆಂಡು ಸೆಕೆಂಡುಗಳು ಜಾರಿದಂತೆ “ವರ್ತಮಾನ’ ಕಳೆದು “ಭೂತದ ಉಗ್ರಾಣಕ್ಕೆ “ಸೇರಿಹೋಗುತ್ತದೆ ಗೋಪಾಲ ಕೃಷ್ಣ ಅಡಿಗರ ಕವಿತೆಯ ಈ ಸಾಲು –. “ವರ್ತಮಾನ ಪತ್ರಿಕೆಯ ತುಂಬಾ ಭೂತದ ಸುದ್ದಿಗಳೇ” — ಆಗಾಗ ನೆನಪಿಗೆ ಬರುತ್ತಿರುತ್ತದೆ. ನಮ್ಮೆಲ್ಲರ ನೆನಪಿನ ಪೆಟ್ಟಿಗೆ ತೆರೆದಿಟ್ಟರೆ ಕೆಲವು ಸಿಹಿ ಹಲವು ಕಹಿ ನೆನಪುಗಳು ಹೊರಕ್ಕೆ ಬರಲು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತವೆ. ನನ್ನ ಆ ಪೆಟ್ಟಿಗೆ ತರೆದು ಒಂದಷ್ಟನ್ನು ನಿಮ್ಮ ಜತೆ ಹಂಚಿಕೊಳ್ಳಬೇಕೆಂಬ ಆಸೆಯ ಫಲವೇ ಈ “ನಿನ್ನೆಗೆ ನನ್ನ ಮಾತು”.
ಸುಮಾರು ಮೂವತ್ತು ವರ್ಷಗಳ ಹಿಂದೆ ನಾನು ರಾಮನಗರದಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸ್ನೇಹಿತರೊಬ್ಬರು ಹೇಳಿದ “we are all misplaced in our life”ಎಂಬ ಮಾತು ನನಗೆ ಆಗಾಗ ನೆನಪಿಗೆ ಬರುತ್ತಿರುತ್ತದೆ. ಇದು ಒಂದು ರೀತಿಯಲ್ಲಿ “ಅತೃಪ್ತಿಯ” ಸಂಕೇತವಾಗಿರಲೂಬಹುದು. ಈ ಅನುಮಾನದ ಪಿಶಾಚಿ ನಮ್ಮನ್ನು ಕಾಡದಿದ್ದರೆ ಆರಾಮವಾಗಿರಬಹುದು. ಅದೇ ಸರಿ ಎಂದು ಅನಿಸುತ್ತದೆ. ಆದರೆ ಆ ಅತೃಪ್ತಿ ನಮ್ಮ ಮುಂದಿನ ಸಾಧನೆಗೆ,ದಾರಿ ದೀಪವಾಗಬೇಕೇ ಹೊರತು ಇತರರ ಅಭಿವೃದ್ದಿಯನ್ನು ಕಂಡು ನಮ್ಮನ್ನು ನಾವೇ ಸುಟ್ಟಿಕೊಳ್ಳುವಂತಹ ಕಿಚ್ಚಾಗಬಾರದು.
Article 370 – ಒಂದು ವಸ್ತುನಿಷ್ಠ ಮೌಲ್ಯಮಾಪನ : ಭಾಗ ೧
ಮೂಲ : ಪ್ರಶಾಂತ್ ವೈದ್ಯರಾಜ್
ಕನ್ನಡಕ್ಕೆ : ಸತ್ಯನಾರಾಯಣ ಎಸ್
ಹದಿಮೂರು ವರ್ಷದ ವಿಪುಲ್ ಕೌಲ್ ಜಮ್ಮು ಕಾಶ್ಮೀರ ರಾಜ್ಯದ ಲೋಕೋಪಯೋಗಿ ಇಲಾಖೆಯ ನಾಲ್ಕನೇ ವರ್ಗದ ನೌಕರರೊಬ್ಬರ ಮಗ. ಹಲವು ವ್ಯಾಧಿಗಳಿಂದ ಬಳಲುತ್ತಿರುವ ವಿಪುಲ ಅವನ ಕುಟುಂಬ ತನ್ನ ಭವಿಷ್ಯವನ್ನೇ ಬಲಿಕೊಟ್ಟು ಕೊಡಿಸುತ್ತಿರುವ ಚಿಕಿತ್ಸೆಯ ಕಾರಣದಿಂದಾಗಿ ಇಂದು ಬದುಕಿದ್ದಾನೆ. 2001ರಲ್ಲಿ ಆತನ ಕುಟುಂಬದವರು ಸಹಾಯಕ್ಕಾಗಿ ಜಮ್ಮು ಕಾಶ್ಮೀರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು, ಅಂತೆಯೇ ಅವರಿಗೆ 20ಲಕ್ಷ ರೂ ಸಹಾಯ ಧನದ ಭರವಸೆಯನ್ನು ನೀಡಲಾಗಿತ್ತು. ಆದರೆ ಸರ್ಕಾರ ಬದಲಾದ ನಂತರ ಸಹಾಯ ನಿಂತುಹೋಯಿತು. ತತ್ಕಾಲಕ್ಕೆ ಗೃಹ ಮಂತ್ರಾಲಯ ಮಧ್ಯಪ್ರವೇಶಿಸಿ ನೆರವನ್ನು ಮುಂದುವರಿಸುವಂತೆ ಸೂಚಿಸಿತು. ಇಷ್ಟಾದ ಮೇಲೂ ಅವರಿಗೆ ದೊರಕಿದ್ದು ದಿ 24 ಜುಲೈ 2007ರ ಒಂದು ಪತ್ರ, ಪತ್ರದ ಒಕ್ಕಣೆಯಲ್ಲಿ “ಸಂವಿಧಾನದ ವಿಧಿ 370ರ ಅನ್ವಯ ಜಮ್ಮು ಕಾಶ್ಮೀರ ಸರ್ಕಾರ ಗೃಹ ಮಂತ್ರಾಲಯದ ಸೂಚನೆಯನ್ನು ಪಾಲಿಸುವ ಬಾಧ್ಯತೆಯನ್ನು ಹೊಂದಿರುವುದಿಲ್ಲ.” ಎಂದು ಉಲ್ಲೇಖಿಸಲಾಗಿತ್ತು !
ಇದೊಂದು 370ನೇ ವಿಧಿಯ ದುರುಪಯೋಗದ ಪ್ರತ್ಯೇಕ ಪ್ರಕರಣವಲ್ಲ. 1950ರಲ್ಲಿ ಸಂವಿಧಾನ ಜಾರಿಗೆ ಬಂದಾಗಿನಿಂದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾದ ಸ್ವಾರ್ಥ ಉದ್ಧೇಶಗಳ ಪೂರ್ತಿಗಾಗಿ 370ನೇ ವಿಧಿಯ ನಿಂದನೆ ಮತ್ತು ದುರುಪಯೋಗ ಮತ್ತೆ ಮತ್ತೆ ನಡೆಯಲ್ಪಟ್ಟಿದೆ.
ಆಗಿನ ತುರ್ತು ಸನ್ನಿವೇಶಕ್ಕೆ ಹಂಗಾಮಿ ಏರ್ಪಾಡಾಗಿ 370ನೇ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಲಾಗಿತ್ತು. ಜಮ್ಮು ಕಾಶ್ಮೀರದ ಮೇಲೆ ಆಕ್ರಮಣವೆಸಗಿದ್ದ ಪಾಕಿಸ್ತಾನ ರಾಜ್ಯದ ಭೂಭಾಗವನ್ನು ನ್ಯಾಯಬಾಹಿರವಾಗಿ ತನ್ನ ವಶಕ್ಕೆ ತೆಗೆದುಕೊಂಡಿತ್ತು. ವಿಷಯವನ್ನು ವಿಶ್ವಸಂಸ್ಥೆಗೆ ಒಯ್ಯಲಾಗಿ ವಿಶ್ವಸಂಸ್ಥೆಯ ಭದ್ರತಾ ಮಂಢಳಿಯು ಕೆಲವು ಪೂರ್ವಾನ್ವಯ ಷರತ್ತುಗಳೊಂದಿಗೆ ಜನಮತಗಣನೆಯನ್ನು ನಡೆಸುವ ಗೊತ್ತುವಳಿಯನ್ನು ಅಂಗೀಕರಿಸಿತು. ಆ ಷರತ್ತುಗಳೆಂದರೆ ಪಾಕಿಸ್ತಾನ ಆಕ್ರಮಿತ ಪ್ರದೇಶದಿಂದ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು ಮತ್ತು ತಾನು ಸ್ಥಾಪಿಸಿದ ಆಡಳಿತ ವ್ಯವಸ್ಥೆಯನ್ನು ತಗೆದುಹಾಕಬೇಕು. ಹಾಗೆಯೇ ಭಾರತದ ಸಂವಿಧಾನವನ್ನು ಜಾರಿಗೊಳಿಸುವ ಯಾವುದೇ ಪ್ರಯತ್ನವು ಸಂಪೂರ್ಣವಾಗಿ ನಿರಾಕರಿಸಲ್ಪಡುವುದು.
ದಿನೇ ದಿನೇ ಹೆಚ್ಚುತ್ತಿರುವ ‘ಮೋದಿ ಜಪ’
– ನರೇಂದ್ರ ಕುಮಾರ ಎಸ್.ಎಸ್
ದಿನಗಳೆದಂತೆ, ೨೦೧೪ರ ಮಹಾ ಚುನಾವಣೆಯು ಹತ್ತಿರ ಬಂದಂತೆ ಭಾರತದಾದ್ಯಂತ ‘ಮೋದಿ ಜಪ’ ಹೆಚ್ಚುತ್ತಿದೆ. ಇದನ್ನು ಕೆಲವರು ‘ಮೋದಿ ಜ್ವರ’, ‘ಮೋದಿತ್ವ’ ಎಂದೂ ಬಣ್ಣಿಸುತ್ತಿರುವರು. ಯಾರು ಏನೇ ಹೇಳಲಿ, ಭಾರತದಾದ್ಯಂತ ನಿತ್ಯವೂ ಚರ್ಚಿಸಲ್ಪಡುತ್ತಿರುವ ಒಂದು ವಿಷಯವೆಂದರೆ “ನರೇಂದ್ರ ಮೋದಿ”. ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಾದ ಟ್ವಿಟ್ಟರ್ ಹಾಗೂ ಪೇಸ್^ಬುಕ್ ಗಳಲ್ಲಿ, ಯುವಕರು ನಡೆಸುವ ಚರ್ಚೆಗಳಲ್ಲಿ, ಕ್ಷೌರಿಕನ ಅಂಗಡಿಯಲ್ಲಿ ನಡೆಯುವ ವಾರ್ತಾಲಾಪಗಳಲ್ಲಿ, ಹಳ್ಳಿಗಳಲ್ಲಿ ನಡೆಯುವ ಸಂಭಾಷಣೆಗಳಲ್ಲಿ – ಎಲ್ಲರೂ ಮೋದಿಯ ಕುರಿತು ಮಾತನಾಡುತ್ತಿದ್ದಾರೆ! ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಜನರ ಚರ್ಚೆಗಳಲ್ಲಿ ಇಷ್ಟರಮಟ್ಟಿಗೆ ಹೊಕ್ಕಿರುವ ಮತ್ತೊಂದು ಹೆಸರಿಲ್ಲ.
ನಾನು ಕೆಲವು ದಿನಗಳ ಹಿಂದೆ, ಬೆಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದೆ. ರಸ್ತೆಗಳೆಲ್ಲ ಗುಂಡಿಗಳಿಂದ ಗಬ್ಬೆದ್ದು ಹೋಗಿದ್ದವು. ಈ ರೀತಿ ಸ್ವಲ್ಪ ಹೊತ್ತು ಪ್ರಯಾಣಿಸಿದ ನಂತರ, ನನಗೆ ನಾನೇ “ಯಾವಾಗ ಸರಿ ಹೋಗುತ್ತೋ ನಮ್ಮ ಬೆಂಗಳೂರು” ಎಂದು ಸ್ವಲ್ಪ ಗಟ್ಟಿಯಾಗಿ ಹೇಳಿಕೊಂಡೆ. ಕೂಡಲೇ, ಆಟೋ ರಿಕ್ಷಾದ ಚಾಲಕ, “ಸಾರ್, ನರೇಂದ್ರ ಮೋದಿಯವರಿಗೆ ಒಂದು ಚಾನ್ಸ್ ಕೊಟ್ಟು ನೋಡಿ, ಎಲ್ಲಾ ಸರಿ ಹೋಗುತ್ತೆ” ಎಂದು ಬಿಡೋದೇ!?
6-5=2 ಚಿತ್ರ ವಿಮರ್ಶೆ
-ಡಾ.ಅಶೋಕ್ ಕೆ ಆರ್
ಎರಡು ವಾರದ ಮುಂಚೆ 6-5=2 ಎಂಬ ವಿಚಿತ್ರ ಹೆಸರಿನ ಚಿತ್ರದ ಪೋಸ್ಟರನ್ನು ಪತ್ರಿಕೆಗಳಲ್ಲಿ ನೋಡಿ ನಕ್ಕುಬಿಟ್ಟಿದ್ದೆ! ‘ಏನ್ ಕರ್ಮಾರೀ ಏನೇನೋ ಹೆಸರಿಟ್ಟು ಫಿಲ್ಮ್ ತೆಗೀತಾರೆ’ ಎಂದು ನಗಾಡಿದ್ದೆ! ನಾಲ್ಕು ದಿನದ ಹಿಂದೆ ಮತ್ತೆ ಅದೇ ಚಿತ್ರದ ಜಾಹೀರಾತನ್ನು ಪತ್ರಿಕೆಯಲ್ಲಿ ನೋಡಿದಾಗ ಗಮನಿಸಿದೆ, ಸ್ವರ್ಣಲತಾ ಪ್ರೊಡಕ್ಷನ್ಸ್ ಮತ್ತು A video shot by Late Ramesh ಎಂಬೆರಡು ವಾಕ್ಯಗಳನ್ನು ಬಿಟ್ಟರೆ ಜಾಹೀರಾತಿನಲ್ಲಿ ಮತ್ತೇನೂ ಇರಲಿಲ್ಲ! ಅಲಲಾ! ಇದೇನೋ ಹೊಸ ಗಿಮಿಕ್ ಮಾಡ್ತಿದ್ದಾರಲ್ಲ ಈ ಫಿಲಮ್ನೋರು ಎಂಬ ಸಣ್ಣ ಕುತೂಹಲ ಹುಟ್ಟಿತು. ನಿರ್ದೇಶಕರ ಹೆಸರಿಲ್ಲ, ತಂತ್ರಜ್ಞರ ಹೆಸರಿಲ್ಲ, ಕಲಾವಿದರ ಹೆಸರಿಲ್ಲ, ನೈಜ ವೀಡೀಯೋವೊಂದು ದೊರಕಿದ್ದು ಅದನ್ನೇ ಚಿತ್ರಮಂದಿರದಲ್ಲಿ ಪ್ರದರ್ಶಿಸುತ್ತಿದ್ದೇವೆ ಎಂಬ ಸಾಲುಗಳು ಬೇರೆ. ಮ್… ಇವರು ಮಾಡಿರೋ ಗಿಮಿಕ್ಕಿಗಾದರೂ ಚಿತ್ರವನ್ನೊಮ್ಮೆ ನೋಡಬೇಕು ಎಂದು ನಿರ್ಧರಿಸಿದೆ.ಇಷ್ಟಕ್ಕೂ ,ಚುನಾವಣೆಯೆನ್ನುವುದೂ ಕ್ರಿಕೆಟ್ ಆಟದ೦ತಲ್ಲ ಎನ್ನುವುದು ನೆನಪಿರಲಿ
– ಗುರುರಾಜ ಕೊಡ್ಕಣಿ,ಯಲ್ಲಾಪುರ
ಇನ್ನೇನು ಕೆಲವೇ ತಿ೦ಗಳುಗಳಲ್ಲಿ ರಾಜಕೀಯದ ಇನ್ನೊ೦ದು ಅ೦ಕಕ್ಕೆ ತೆರೆಬೀಳಲಿದೆ.ಚುನಾವಣೆಯೆ೦ಬ ಮತ್ತೊ೦ದು ಮಹಾಪರ್ವಕ್ಕೆ ದೇಶ ಸಜ್ಜಾಗುತ್ತಿದೆ.ರಾಜಕೀಯ ಪಕ್ಷಗಳು ಈಗಾಗಲೇ ಪ್ರಚಾರಕ್ಕೆ ರಣತ೦ತ್ರಗಳನ್ನು ರೂಪಿಸಿವೆ,ಪ್ರಚಾರ ಆರ೦ಭಿಸಿವೆ.ಈ ಬಾರಿ ದೇಶದ ಜನತೆಯೂ ಅಷ್ಟೇ ಉತ್ಸಾಹದಿ೦ದ ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ.ಸಾಮಾಜಿಕ ತಾಣಗಳಲ್ಲಿ ನೆಚ್ಚಿನ ನಾಯಕರ ಬಗ್ಗೆ ಬಿಸಿ ಬಿಸಿ ಚರ್ಚೆಗಳಾಗುತ್ತಿವೆ,ವಾಗ್ವಾದಗಳಾಗುತ್ತಿವೆ.ದಿನ ಪತ್ರಿಕೆಗಳಲ್ಲಿ ಪು೦ಖಾನುಪು೦ಖವಾಗಿ ಪ್ರತಿಯೊ೦ದು ರಾಜಕೀಯ ಪಕ್ಷದ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಪರ ವಿರೋಧ ಲೇಖನಗಳು ಪ್ರಕಟವಾಗುತ್ತಿವೆ.ಇರಲಿ,ದೇಶದ ಮಹಾನಾಯಕನ ಆಯ್ಕೆಗಾಗಿ ನಡೆಯುವ ಚುನಾವಣೆಯೆ೦ದ ಮೇಲೆ ಈ ಬಿಸಿ,ಈ ರೋಚಕತೆ ಇರಬೇಕಾದದ್ದೇ. ಮತದಾನವೆನ್ನುವುದು ಪ್ರಜೆಗಳ ವೈಯಕ್ತಿಕ ವಿಷಯವೆ೦ಬುದು ಎಲ್ಲರಿಗೂ ಗೊತ್ತಿರುವ ವಿಷಯವೇ.ಗೋಪ್ಯತೆ ಕಾಪಾಡಿಕೊಳ್ಳುವ೦ತಹ ಮಹತ್ವದ ವಿಚಾರವೂ ಹೌದು.ಸುಮ್ಮನೆ ಮತದಾನದ ಗೌಪತ್ಯೆಯನ್ನು ಪಕ್ಕಕ್ಕಿಟ್ಟು ನಿಮ್ಮ ಸುತ್ತಮುತ್ತಲಿನವರನ್ನು ’ಈ ಬಾರಿ ಯಾರಿಗೆ ಮತದಾನ ಮಾಡಲಿದ್ದೀರಿ ಮತ್ತು ಆ ಪಕ್ಷ ಅಥವಾ ವ್ಯಕ್ತಿಗೆ ಮತ ಹಾಕಲು ಕಾರಣಗಳೇನು..’? ಎ೦ದು ಕೇಳಿ ನೋಡಿ.ನಿಮಗೆ ತರಹೇವಾರಿ ಉತ್ತರಗಳು ಸಿಗಬಹುದು.
‘ಹಾಚಿ’ !
– ಪ್ರಶಾಂತ್ ಯಾಳವಾರಮಠ
ಆ ದೇವರು ಪ್ರೀತಿ ವಿಶ್ವಾಸವನ್ನು ಎಲ್ಲಿ.. ಹೇಗೆ.. ಯಾಕೆ..ಸೃಷ್ಟಿಸುತ್ತಾನೋ.. ಅದು ಅವನಿಗೇ ಗೊತ್ತು!
ಪ್ರೊಫೆಸರ್ ಹೈದೆಸಬುರೋ ಯುನೋ ತಮ್ಮ ದೈನಂದಿನ ಕೆಲಸವಾದ ನೃತ್ಯ ಕಲಿಸುವುದನ್ನು ಮುಗಿಸಿ ಎಂದಿನಂತೆ ದಿನಾಲೂ ಬರುವ ಟ್ರೆನಿನಿಂದ ಸಂಜೆ ತಮ್ಮ ಮನೆಯ ಕಡೆಗೆ ಹೊರಟರು. ತಮ್ಮ ಸ್ಟೇಷನ್ ಬಂದಮೇಲೆ ಇಳಿದು ಇನ್ನೇನು ಹೊರಗೆ ಹೋಗಬೇಕೆನ್ನುವಸ್ಟರಲ್ಲಿ ಅವರ ಕಾಲುಗಳ ಹತ್ತಿರ ಒಂದು ಅಚ್ಚರಿ!! ಒಂದು ಮುದ್ದು ಮುದ್ದಾದ ನಾಯಿ ಮರಿ ಅವರ ಕಾಲುಗಳ ಹತ್ತಿರ ಓಡಾಡುತ್ತಿತ್ತು. ತುಂಬಾ ಮುದ್ದಾದ ನಾಯಿ ಮರಿಯ ಮುಗ್ದತೆ ಮತ್ತು ಸೌಂದರ್ಯಕ್ಕೆ ಮನಸೋತ ಪ್ರೊಫೆಸರ್ ಅದನ್ನ ಎತ್ತಿ ಮುದ್ದಾಡಿದರು. ಮುಂದೆ ಅಯ್ಯೋ ಇದು ಇದರ ಮಾಲಿಕನಿಂದ ಕಣ್ ತಪ್ಪಿಸಿಕೊಂಡಿರಬೇಕೆಂದು ಸ್ಟೇಷನ್ನಲ್ಲಿ ಎಲ್ಲರನ್ನು ವಿಚಾರಿಸಿದರು ಕೊನೆಗೆ ಸ್ಟೇಷನ್ ಮಾಸ್ತರ್ ಹತ್ತಿರನು ವಿಚಾರಿಸಿದರು ಯಾವುದೇ ಸುಳಿವು ಸಿಗಲಿಲ್ಲ. ಸ್ಟೇಷನ್ ಮಾಸ್ತರನು ಎಲ್ಲರೂ ಇಲ್ಲಿ ಊಟದ ಡಬ್ಬಿಗಳನ್ನು ಇಡುತ್ತಾರೆ ಅದ್ದರಿಂದ ನಾನು ಇದನ್ನು ಇಲ್ಲಿ ಇರಿಸಿಕೊಳ್ಳಲಿಕ್ಕೆ ಆಗೋದಿಲ್ಲ ಎಂದು ಹೇಳಿ ನೀವು ಬೇಕಾದರೆ ಇವತ್ತು ಇದನ್ನು ಮನೆಗೆ ತೆಗೆದುಕೊಂಡು ಹೋಗಿ ನಾಳೆ ಯಾರಾದರು ಇದರ ಮಾಲಿಕರು ಬರುತ್ತಾರೆನೋ ನೋಡೋಣ ಎಂದನು. ಅಸ್ಟು ಮುದ್ದಾದ ಆ ಮರಿಯೇನ್ನು ಅಲ್ಲಿಯೇ ಎಲ್ಲಾದರು ಬಿಟ್ಟು ಹೋಗಲಿಕ್ಕೆ ಪ್ರೊಫೆಸರ್ ಗೆ ಮನಸ್ಸಾಗಲಿಲ್ಲ. ಮರಿಯನ್ನು ತೆಗೆದುಕೊಂಡು ಮನೆಗೆ ಹೋದರು. ಆದರೆ ಮನೆಯಲ್ಲೊಂದು ತೊಂದರೆ! ಏನೆಂದರೆ ಪ್ರೊಫೆಸರ್ ಪತ್ನಿಗೆ ನಾಯಿಗಳು ಅಂದರೆ ಆಗ್ತಾ ಇರಲಿಲ್ಲ.ಇನ್ನು ಇ ಮರಿಯೇನ್ನು ಅವಳಿಗೆ ತಿಳಿಯದ ಹಾಗೆ ಬಚ್ಚಿಟ್ಟು ನಾಳೆ ಸ್ಟೇಷನ್ ಗೆ ತೆಗೆದುಕೊಂಡು ಹೋಗಿ ಅದರ ಮಾಲಿಕರಿಗೆ ಕೊಟ್ಟರಾಯಿತು ಎಂದು ತಿಳಿದರು. ನಿದಾನವಾಗಿ ಮನೆಯೊಳಗೇ ಹೋಗಿ ಇ ಮುದ್ದಾದ ಮರಿಯೇನ್ನು ಒಂದು ಮುಚ್ಚಳವಿಲ್ಲದ ಕಟ್ಟಿಗೆಯ ಬಾಕ್ಸ್ ನಲ್ಲಿ ಮಲಗಿಸಿದರು. ಆದರೆ ಆ ಮರಿ ಎಸ್ಟೊಂದು ಚೂಟಿಯಾಗಿತ್ತು ಅಂದರೆ ಕಟ್ಟಿಗೆಯ ಬಾಕ್ಸ್ ನಿಂದ ಹೊರಗೆ ಬಂದು ಬಿಡುತಿತ್ತು! ಅದನ್ನು ಮತ್ತೆ ಅದರಲ್ಲೇ ಬಚ್ಚಿಟ್ಟರು… ಅಷ್ಟರಲ್ಲಿ ಅವರ ಪತ್ನಿ ಅವರಲ್ಲಿಗೆ ಬಂದು ಊಟಕ್ಕೆ ಕರೆದಳು.. ಪ್ರೊಫೆಸರ್ ಊಟವಾದ ಮೇಲೆ ಮಲಗಲು ತೆರಳಿದರು. ಆ ನಾಯಿ ಮರಿಯು ರಾತ್ರಿ ಬಾಕ್ಸ್ ನಿಂದ ಹೊರಗೆ ಬಂದು ನೇರವಾಗಿ ಪ್ರೊಫೆಸರ್ ಮಲಗಿರುವ ಕೊನೆಗೆ ಹೋಗಲು ಅದರಬಗ್ಗೆ ಪ್ರೊಫೆಸರ್ ಪತ್ನಿಗೆ ತಿಳಿದು ಹೋಯಿತು. ಸಿಟ್ಟಿನಲ್ಲಿದ್ದ ಪತ್ನಿಗೆ ವಿಷಯ ತಿಳಿಸಿ ನಡೆದದ್ದನ್ನು ಹೇಳಿ ಕೇವಲ ಒಂದು ದಿನ ಅಷ್ಟೇ ಎಂದು ಸಮಜಾಯಿಸಿದರು.
ದಾಸರ ದಾಸ ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು
– ರಾಘವೇಂದ್ರ ಅಡಿಗ ಎಚ್ಚೆನ್
ಕನ್ನಡ ಹರಿದಾಸ ಪರಂಪರೆ, ಕೀರ್ತನಾ ಲೋಕದ ಕೊಂಡಿಯೊಂದು ಕಳಚಿದೆ. ಸಂತ, ಹಿರಿಯ ಕೀರ್ತನೆಗಾರರಾದ ‘ಕೀರ್ತನ ಕೇಸರಿ’ ಭದ್ರಗಿರಿ ಅಚ್ಯುತದಾಸರು ತಮ್ಮ 83 ನೇ ವಯಸ್ಸಿನಲ್ಲಿ ತಾವು ಕಟ್ಟಿ ಬೆಳೆಸಿದ ಹರಿಕಥಾ ಪ್ರಪಂಚವನ್ನು ತೊರೆದು ಶ್ರೀಹರಿಯತ್ತ ನಡೆದಿದ್ದಾರೆ. ಕೀರ್ತನಾ ಕಲಾಪರಿಷತ್ ಗೌರವಾಧ್ಯಕ್ಷರಾಗಿದ್ದ ಸಂತ ಭದ್ರಗಿರಿ ಅಚ್ಯುತದಾಸರು ತಮ್ಮ ವಾಕ್ ಸಾಮರ್ಥ್ಯ, ಸಂಗೀತ, ಹಾಸ್ಯ ಚಟಾಕಿಗಳ ಮೂಲಕ ಜನಮಾನಸದಲ್ಲಿ ನೆಲೆಯೂರಿದ್ದರು. ಕನ್ನಡ, ಮರಾಠಿ, ಕೊಂಕಣಿ, ತುಳು ಹೀಗೆ ನಾನಾ ಭಾಷೆಗಳಾಲ್ಲಿ ಪ್ರೌಢಿಮೆ ಸಾಧಿಸಿದ್ದ ಸಂತ ಅಚ್ಯುತದಾಸರು ತಾವು ಹರಿವಂಶ, ಭಾಗವತ, ರಾಮಾಯಣ, ಮಹಾಭಾರತದ ತಾತ್ವಿಕ ಅಂಶಗಳನ್ನು ಸಾಮಾನ್ಯರ ಮನಮುಟ್ಟುವಂತೆ ವಿವರಿಸಿ ಹೇಳುವ ಸಾಮರ್ಥ್ಯವನ್ನು ಹೊಂದಿದ್ದರು.
ಇಂದಿನ ಆಧುನಿಕ ಯುಗದಲ್ಲಿ ನಶಿಸುತ್ತಿರುವ ಸಂಕೀರ್ತನಾ ಕಲೆಯನ್ನು ಜನಪ್ರಿಯಗೊಳಿಸುವುದರಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಅಚ್ಯುತದಾಸರು ತಮ್ಮ ಸಹೋದರ ದಿ. ಭದ್ರಗಿರಿ ಕೇಶವದಾಸರ ಜತೆಗೂಡಿ ಅನೇಕ ಹರಿಕಥಾ ಸಮ್ಮೇಳನಗಳನ್ನು ನಡೆಸಿದ್ದರು. ಅಣ್ಣ-ತಮ್ಮಂದಿರಿಬ್ಬರೂ ತಮ್ಮ ಸ್ವ ಪ್ರತಿಭೆಯಿಂದ ‘ಸಂತ’ ಪದವಿಗೆ ಭಾಜನರಾಗಿದ್ದರು. ಸಂತ ಭದ್ರಗಿರಿ ಕೇಶವ ದಾಸರು ವಿದೇಶಗಳಲ್ಲಿಯೂ ಆಂಗ್ಲ ಭಾಷೆಯಲ್ಲಿ ಸಂಕೀರ್ತನೆಗಳನ್ನು ನಡೆಸಿ ಪ್ರಸಿದ್ದರಾಗಿದ್ದರೆ,ಸಂತ ಭದ್ರಗಿರಿ ಅಚ್ಯುತ ದಾಸರು ಭರತ ಖಂಡವ್ಯಾಪಿ ತಮ್ಮ ಹರಿಕಥಾ ಶ್ರವಣ ಮಾಡುವ ಮೂಲಕ ನಾಡಿನ ಮೂಲೆ ಮೂಲೆಗಳಾಲ್ಲಿ ಮನೆಮಾತಾಗಿದ್ದರು.
ವ್ಯಕ್ತಿ ಪರಿಚಯ :
ಉಡುಪಿಯ ಸಮೀಪದ ಬ್ರಹ್ಮಾವರದ ಬಳಿಯಲ್ಲಿನ ಬೈಕಾಡಿ ಗ್ರಾಮದ ಪುಟ್ಟ ಹಳ್ಳಿಯಲ್ಲಿ ವೆಂಕಟರಮಣ ಪೈ ಹಾಗೂ ರುಕ್ಮಿಣಿಬಾಯಿ ದಂಪತಿಗಳಿಗೆ ನಾಲ್ಕನೆ ಮಗನಾಗಿ ಜನಿಸಿದ (1931 ಮಾರ್ಚ್ 31)ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು ಬಾಲ್ಯದಿಂದಲೂ ಸಂಗೀತದ ಬಗ್ಗೆ ಒಲವಿದ್ದವರು. ಇದಕ್ಕೆ ಅವರು ಹುಟ್ತಿದ ಮನೆಯ ಪರಿಸರವೂ ಪೋಷಕವಾಗಿತ್ತು. ತ್ಂದೆ ವೆಂಕಟರಮಣಾ ಪೈಗಳು ಯಕ್ಷಗಾನದ ಬಗ್ಗೆ ಒಲವುಳ್ಳವರಾಗಿದ್ದರೆ ತಾಯಿ ರುಕ್ಮಿಣಿಬಾಯಿ ತಾವು ದೇವರ ಭಜನೆಗಳನ್ನು ಶುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರು.
ಮತ್ತಷ್ಟು ಓದು 
ತೀರಾ ತುಘಲಕ್ ದರ್ಬಾರ್ ಬೇಡ್ರೀ ಸಿಧ್ಧರಾಮಣ್ಣ…
– ಕೆ.ಎಸ್ ರಾಘವೇಂದ್ರ ನಾವಡ
ತೀರಾ ಬೇಸರಗೊ೦ಡು ರಾಜ್ಯದ ಮುಖ್ಯ ಮ೦ತ್ರಿಗಳಿಗೆ ಈ ಮಾತನ್ನು ಹೇಳಿತಿದ್ದೇನೆ ! ಸಮಾಜವಾದಿ ಹಿನ್ನೆಲೆ.. ಹೋರಾಟದ ಹಿನ್ನೆಲೆ.. ಎಲ್ಲದ್ದಕ್ಕಿ೦ತಲೂ ಕರ್ನಾಟಕದ ಗ್ರಾಮೀಣ ಸೊಗಡಿನಿ೦ದ ಮೇಲೆದ್ದು ಬ೦ದವರು ಸಿಧ್ಧರಾಮಯ್ಯ. ಆದರೆ ಹಿ೦ದಿನ ಸಮಾಜವಾದಿ ಹಿನ್ನೆಲೆಗಳಿ೦ದ ಬ೦ದ ಮುಖ್ಯಮ೦ತ್ರಿಗಳಿಗೂ (ಮಾನ್ಯ ಹೆಗಡೇಜಿ, ಬ೦ಗಾರಪ್ಪನವರು, ಜೆ.ಹೆಚ್ ಪಟೇಲರು)ನಮ್ಮ ಸಿಧ್ಧರಾಮಯ್ಯನವರಿಗೂ ಅಜಗಜಾ೦ತರ ವ್ಯತ್ಯಾಸ…ಇವರು ಇದೇ ಥರ ಮು೦ದುವರಿದಲ್ಲಿ ಮು೦ಬರುವ ಲೋಕಸಭಾ ಚುನಾವಣೆಯಲ್ಲಿ ಕಾ೦ಗ್ರೆಸ್ ಕರ್ನಾಟಕದಲ್ಲಿ ನೆಲಕಚ್ಚುವುದ೦ತೂ ಖಚಿತ!
ಪಾಪ.. ಏನೂ ಮಾಡೋದಕ್ಕಾಗೋದಿಲ್ಲ.. ನಮಗೆ ಸಿಧ್ಧರಾಮಯ್ಯನವರ ಅಸಹಾಯಕತೆಯ ಅರಿವು ಇದೆ.ಆದರೆ ಕೈಯಲ್ಲಿ ಆಗದಿದ್ದವರ ಪರಿಸ್ಥಿತಿ ಏನೂ ಸಿಧ್ಧರಾಮಯ್ಯನವರದಲ್ಲ! ಹಾಗ೦ತ ತೀರಾ ಸಾರಾಸಗಟಾಗಿ ತಳ್ಳಿ ಹಾಕುವ೦ತಹ ವ್ಯಕ್ತಿತ್ವವೂ ಸಿಧ್ಧರಾಮಯ್ಯನವರದಲ್ಲ.ಆದರೆ ಒ೦ದ೦ತೂ ಖಚಿತ! ಏನೋ ಆಗಿದೆ… ಒ೦ದರ ಮೇಲೊ೦ದು ಎಡವಟ್ಟುಗಳನ್ನೇ ಸೃಷ್ಟಿಸಿಕೊಳ್ಳುತ್ತಿರುವ ಸಿಧ್ಧರಾಮಯ್ಯನವರು ಕೊನೇ ಪಕ್ಷ ತಮ್ಮ ನಿರ್ಧಾರಗಳಿಗೆ ಜೋತು ಬೀಳುವ೦ತಹ ಯಡಿಯೂರಪ್ಪನವರ ಛಾತಿಯನ್ನೂ ತೋರಿಸುತ್ತಿಲ್ಲ!
ಆರ೦ಭದಲ್ಲೇನೋ ಶೂರತನ ಮೆರೆದ ಅಶ್ವವೀರ.. ಕುದುರೆಗೆ ಸುಸ್ತಾದ೦ತೆ ತಾನೂ ನಡೆಯುತ್ತ ಸಾಗಿದ.. ಎನ್ನುವ ಹಳೇ ಮಾತೀಗ ಸಿಧ್ಧರಾಮಯ್ಯನವರ ವಿಚಾರದಲ್ಲಿ ಖಚಿತವಾಗುತ್ತಿದೆ! ಚುನಾವಣಾ ಪ್ರಣಾಳಿಕೆಯ ಅರ್ಧದಷ್ಟು ಅ೦ಶಗಳನ್ನು ಅನುಷ್ಠಾನಕ್ಕೆ ತರುವುದು ಹೆಚ್ಚುಗಾರಿಕೆಯೇ ಆದರೂ ಕೊಟ್ಟ ಮಾತುಗಳಾದರೂ ಎ೦ಥಾದ್ದಾಗಿದ್ದವು ಎನ್ನುವುದು ಬಹಳ ಮುಖ್ಯ!
ಯಾವುದು ನಂಬಿಕೆ?ಯಾವುದು ಮೂಢನಂಬಿಕೆ?
-ಡಾ.ಕಿರಣ್ ಎಂ ಗಾಜನೂರು
ಕರ್ನಾಟಕ ಸರ್ಕಾರ ಮೂಢನಂಬಿಕೆಗಳ ಕುರಿತು ವಿಧೇಯಕ ಮಂಡಿಸಲು ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ ಕ್ರಮ. ಏಕೆಂದರೆ ಭಾರತ ಸಮಾಜದಲ್ಲಿ ಬಹಳ ಹಿಂದಿನಿಂದಲೂ ಸೋ-ಕಾಲ್ಡ್ ನಂಬಿಕೆಗಳ ಹೆಸರಿನಲ್ಲಿ ಶೋಷಣೆ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.ಅದರಲ್ಲಿಯೂ ಯಾವುದೇ ಜನ-ಚಳುವಳಿಯಿಲ್ಲದೆ,ನಮ್ಮ ಘನಸರ್ಕಾರ ಸ್ವತಃ ಈ ನಿರ್ಧಾರಕ್ಕೆ ಮುಂದಾಗಿರುವುದು ಪ್ರಶಂಸನೀಯ.ಪಕ್ಕದ ಮಹಾರಾಷ್ಟ್ರದಲ್ಲಿ ಈ ಮಾದರಿಯ ಕ್ರಮವನ್ನು ಅಲ್ಲಿನ ಸರ್ಕಾರ ತೆಗೆದುಕೊಳ್ಳಬೇಕಾದರೆ,ಒಂದು ದೊಡ್ಡ ಜನಚಳುವಳಿಯೆ ನಡೆಯಬೇಕಾಯಿತು ಮತ್ತು ಈ ಕುರಿತು ಹೋರಾಟ ಮಾಡುತ್ತಿದ್ದ ವ್ಯಕ್ತಿಯ ಹತ್ಯೆಯು ಆಯಿತು.ಈ ನೆಲೆಯಲ್ಲಿ ಕರ್ನಾಟಕ ಸರ್ಕಾರ ಜನಪರವಾಗಿದೆ ಎಂಬುದನ್ನು ನಾವು ಒಪ್ಪಬಹುದು.ಆದರೆ, ಭಾರತದಂತಹ ಬಹುಸಂಸ್ಕೃತಿಯ ದೇಶದಲ್ಲಿ ಈ ಕ್ರಮ ಕೇವಲ ಪ್ರಗತಿಪರ ಮತ್ತು ಕಾನೂನಾತ್ಮಕ ಅಂಶವಾಗಿರದೆ ಸಮುದಾಯ ಸತ್ವದ ಪ್ರಶ್ನೆಯು ಆಗಿರುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು.ಅದೂ ಅಲ್ಲದೆ ಸದರಿ ವಿಧೇಯಕದ ಕುರಿತು ನಡೆಯುತ್ತಿರುವ ಚರ್ಚೆ ಪರ-ವಿರೋಧವೆಂಬ ಸಂಕುಚಿತ ಅರ್ಥದಲ್ಲಿ ನಡೆಯುತ್ತಿದೆ.ಒಂದು ಸಂಶೋಧನೆ ಅಥವಾ ಚರ್ಚೆಯಲ್ಲಿ ಸಂಶೋಧನೆ/ಚರ್ಚೆಗೆ ಒಳಪಡಿಸಬೇಕಾದ ವಿದ್ಯಾಮಾನದ ಕುರಿತು ಸಂಶೋಧಕನಿಗೆ ಪರ ಅಥವಾ ವಿರೋಧ ಅಭಿಪ್ರಾಯಗಳು ಇರಬೇಕು ಎಂದು ನೀರಿಕ್ಷಿಸುವುದೇ ಸಂಶೋಧನೆ/ಚರ್ಚೆಯ ಲಕ್ಷಣವಲ್ಲ. ಉದಾಹರಣೆಗೆ : ಕರ್ನಾಟಕದ ಮೂಢನಂಬಿಕೆ ವಿರೋಧಿ ವಿಧೇಯಕ ಕುರಿತು ನೀವು ಇದರ ಪರವೂ ವಿರೋಧವೂ ಎಂದು ಕೇಳಿದರೆ ನಾನು ನನಗೆ ಗೊತ್ತಿಲ್ಲ ಎಂದಷ್ಟೆ ಉತ್ತರಿಸಬಲ್ಲೆ. ಏಕೆಂದರೆ ನಿಜಕ್ಕೂ ನನಗೆ ಅದು ಸರಿಯೋ/ತಪ್ಪೋ ಗೊತ್ತಿಲ್ಲ ಅಥವಾ ಪ್ರಸ್ತುತ ಚರ್ಚೆ ಮತ್ತು ಮಾಹಿತಿಯ ಆಧಾರದಲ್ಲಿ ಒಂದು ನಿರ್ಣಯಕ್ಕೆ ಬರಲೂ ಸಾಧ್ಯವಾಗುತ್ತಿಲ್ಲ. ಆದರೆ,ಒಬ್ಬ ಸಮಾಜ ಸಂಶೋಧಕನಾಗಿ ನನ್ನ ಸಮಸ್ಯೆ ಇರುವುದು ಪರವಾಗಿ ಮತ್ತು ವಿರೋಧವಾಗಿ ಮಾತನಾಡುತ್ತಿರುವ ಎರಡೂ ಗುಂಪಿನ ವಾದ ಆ ವಿದ್ಯಮಾನವನ್ನು ಸಮರ್ಥಿಸಲು ಅಥವಾ ವಿರೋಧಿಸಲು ಶಕ್ತವಾಗಿಲ್ಲ ಮತ್ತು ಆದನ್ನು ಆಚರಿಸುತ್ತಿರುವ ಜನರಿಗೆ ಅರ್ಥವಾಗುತ್ತಿಲ್ಲ ಎಂಬುದು.
ಆಚರಣೆ, ಸಂಪ್ರದಾಯ,ನಂಬಿಕೆ ಮತ್ತು ಕಾಕತಾಳಿಯಗಳು
-ಮು.ಅ ಶ್ರೀರಂಗ,ಬೆಂಗಳೂರು
ಒಬ್ಬ ಬ್ರಾಹ್ಮಣನ ಮನೆಯಲ್ಲಿ ಬೆಕ್ಕೊಂದು ಓಡಾಡಿಕೊಂಡಿತ್ತು. ಹಳೆಯ ಕಾಲದ ಆ ಮನೆಯಲ್ಲಿದ್ದ ಇಲಿ,ಹೆಗ್ಗಣಗಳನ್ನು ತಿಂದುಕೊಂಡು ಅವುಗಳ ಕಾಟ ತಪ್ಪಿಸ್ಸಿದ್ದರಿಂದ ಸಹಜವಾಗಿ ಆ ಬೆಕ್ಕನ್ನು ಕಂಡರೆ ಮನೆಮಂದಿಗೆಲ್ಲಾ ಅಕ್ಕರೆಯಿತ್ತು.ಆ ಕುಟುಂಬದ ಯಜಮಾನನ ತಂದೆಯದೋ ತಾಯಿಯದೋ ತಿತಿ ಮಾಡಬೇಕಾದ ದಿನ ಬೆಕ್ಕು ಮನೆಯೊಳಗೆಲ್ಲಾ ಓಡಾಡಿ ಮೈಲಿಗೆ ಮಾಡುವುದು ಸರಿಯಲ್ಲ ಎಂದು ಅದನ್ನು ಮನೆಯ ಕಂಬವೊಂದಕ್ಕೆ ಕಟ್ಟಿಹಾಕಿದರು. ಆ ದಿನದ ಕೆಲಸ, ಊಟ ಎಲ್ಲಾ ಮುಗಿದ ನಂತರ ಆ ಬೆಕ್ಕಿಗೆ ಬಂಧನದಿಂದ ಬಿಡುಗಡೆಯಾಯ್ತು. ಕಾಲ ಕಳೆದಂತೆ ಆ ಮನೆಯ ಯಜಮಾನ ತೀರಿಕೊಂಡ. ಅವನ ಮಕ್ಕಳು ಅಪ್ಪನ ತಿತಿ ಮಾಡುವ ಸಮಯ ಬಂತು. ಆಗ ಮನೆಯಲ್ಲಿ ಬೆಕ್ಕು ಇರಲಿಲ್ಲ. ಹೀಗಾಗಿ ಅಕ್ಕ ಪಕ್ಕದ ಮನೆಯವರಿಂದ ಕಾಡಿ ಬೇಡಿ ಬೆಕ್ಕೊಂದನ್ನು ತಂದು ಕಂಬಕ್ಕೆ ಕಟ್ಟಿದರು. ಅಂದಿನ ಕೆಲಸ ಮುಗಿದ ನಂತರ ವಾಪಸ್ಸು ಕೊಟ್ಟರು. ಇದು ಹೀಗೆ ಪ್ರತಿ ಸಾರಿ ತಿತಿ ಮಾಡುವಾಗಲೂ ಮುಂದುವರಿಯಿತು. ಇದೊಂದು ಕಾಲ್ಪನಿಕ ಕಥೆ ಎಂಬುದರಲ್ಲಿ ಸಂದೇಹವಿಲ್ಲ. ಹಾಗೆ ನೋಡಿದರೆ ಐತಿಹಾಸಿಕವಾದುದನ್ನು ಬಿಟ್ಟರೆ ನಾವು ಓದುವ ಕತೆ ಕಾದಂಬರಿಗಳೆಲ್ಲ ಕಾಲ್ಪನಿಕವಾದವುಗಳೇ. ಅದರ ಬಗ್ಗೆ ಚರ್ಚೆ ಈಗ ಬೇಡ. ಏಕೆಂದರೆ ಈ ಬರಹ ಸಾಹಿತ್ಯಕ್ಕೆ ಸಂಬಧಿಸಿದ್ದಲ್ಲ. ಈ ಬೆಕ್ಕಿನ ಕತೆಯಲ್ಲಿ ನಾವು ತಿಳಿದುಕೊಳ್ಳಬೇಕಾದ ಅಂಶ ಒಂದಿದೆ. ನಾವುಗಳು ಕೆಲವೊಂದು ಆಚರಣೆಗಳಿಗೆ ಇದು ಏಕೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಿಲ್ಲ. ಮಕ್ಕಳೇನಾದರು ಕೇಳಿದರೆ “ನೀನೊಬ್ಬ ಅಧಿಕ ಪ್ರಸಂಗಿ, ತಲೆಹರಟೆ”ಎಂದು ಬೈದು ಅವರನ್ನು ಸುಮ್ಮನಾಗಿಸುತ್ತೇವೆ. ತಂದೆ ತಾಯಿಗೆ ಅಜ್ಜಿ, ತಾತನಿಗೆ ಹೆದರಿದ ಆ ಮಕ್ಕಳು ಸುಮ್ಮನಾಗುತ್ತವೆ. ಅವರು ದೊಡ್ಡವರಾದ ಮೇಲೆ ಹಿಂದಿನವರು ತಮಗೆ ಮಾಡಿದ್ದನ್ನೇ ತಮ್ಮ ಮಕ್ಕಳಿಗೂ ಮಾಡುತ್ತಾರೆ. ಈ ಕೊಂಡಿಗಳು ಒಂದಕ್ಕೊಂದು ಸೇರಿಕೊಳ್ಳುತ್ತಾಹೋಗಿ ಆಚರಣೆಗಳಾಗಿ,ಸಂಪ್ರದಾಯಗಳಾಗಿ ಮುಂದುವರಿಯುತ್ತವೆ.
ಮತ್ತಷ್ಟು ಓದು 




