ರಾಜಕಾರಣಿಗಳೇ, ಮಹಿಳೆಯರಿಗೆ ರಕ್ಷಣೆಕೊಡಿ ಇಲ್ಲವೇ ಜಾಗ ಖಾಲಿ ಮಾಡಿ
– ಚೈತ್ರ ಗೌಡ ಹಾಸನ
ಸ್ನಾತಕೋತ್ತರ ಪತ್ರಿಕೋದ್ಯಮ,
ಮಾನಸಗಂಗೋತ್ರಿ, ಮೈಸೂರು.
ಆದಿಯಿಂದಲೂ ಸೃಷ್ಟಿಯ ಮೂಲ ಹೆಣ್ಣು, ಕರುಣೆ, ವಾತ್ಸಲ್ಯ, ಮಮತೆ, ಅಕ್ಕರೆ ತಾಳ್ಮೆ ಹೀಗೆ ವಿಶಿಷ್ಟ ಶಕ್ತಿಗಳ ಸಂಗಮದ ಜೊತೆಗೆ ನವಿರಾದ ಭಾವನಾತ್ಮಕ ತಂತುಗಳು ಬೆಸೆದುಕೊಂಡಿವೆ. ಹೆಣ್ಣು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಈ ಪ್ರಕೃತಿಯಿಂದಲೇ ವಿಭಿನ್ನ ಶಕ್ತಿಯನ್ನು ಪಡೆದಿರುವ ಪೋಷಕಿ, ತನ್ನ ಗರ್ಭದಲ್ಲಿ ಒಂಬತ್ತು ತಿಂಗಳು ಶಿಶುವನ್ನು ಹೊತ್ತು ಪೋಷಿಸಿ, ತನ್ನ ಎಲ್ಲ ಕಷ್ಟಗಳನ್ನು ನಗುನಗುತ್ತ ಸಹಿಸಿ ಮರುಹುಟ್ಟು ಎನ್ನುವಂತಹ ನೋವನ್ನು ಸಹಿಸಿಕೊಂಡು ಜನ್ಮ ಕೊಡುತ್ತಾಳೆ. ಪುರುಷನ ಜೀವನದ ಪ್ರತಿ ಹಂತದಲ್ಲಿಯೂ ಹೆಣ್ಣಿನ ಪಾತ್ರ ಮಹತ್ವವಾದದ್ದು. ಜನ್ಮಕೊಟ್ಟು ಸಲಹುವ ತಾಯಿಯಾಗಿ, ಅಕ್ಕರೆಯ ಸೋದರಿಯಾಗಿ, ಸಾಂತ್ವನ ನೀಡುವ ಸ್ನೇಹಿತೆಯಾಗಿ, ಭಾವನೆಗಳ ಬೆಸುಗೆಯ ಮಡದಿಯಾಗಿ, ಪ್ರೀತಿ ಚಿಲುಮೆಯ ಮಗಳಾಗಿ. ಇಂದು ಹೆಣ್ಣು ಎಲ್ಲ ಕ್ಷೇತ್ರದಲ್ಲೂ ಮುನ್ನಡೆಯುತ್ತ ಜಗತ್ತಿನ ದೃಷ್ಟಿಯನ್ನು ತನ್ನೆಡೆಗೆ ಸೆಳೆದಿದ್ದಾಳೆ. ಪ್ರತಿಭೆ, ಕಲೆ, ಸಾಹಿತ್ಯ, ಸಾಹಸ ಪ್ರವೃತ್ತಿ ಅಂತಹ ಸಾಧನೆ ಮಾಡಿ ವಿಶ್ವದ ಗೌರವಕ್ಕೆ ಪಾತ್ರಳಾಗಿದ್ದಾಳೆ. ಉತ್ತಮ ಗುಣ ನಡತೆಗಳಿಂದ ಪೂಜನೀಯ ಸ್ಥಾನದಲ್ಲಿದ್ದಾಳೆ. ಮತ್ತಷ್ಟು ಓದು 
ರಾಷ್ಟ್ರಕ್ಕೆ ರಕ್ಷಣೆ ಹೆಣ್ಣು ನೀಡಬಲ್ಲಳಾದರೆ ತನ್ನನ್ನು ತಾನೂ ರಕ್ಷಿಸಿಕೊಳ್ಳಬಲ್ಲಳು..
– ತನ್ಮಯೀ ಪ್ರೇಮ್ ಕುಮಾರ್
ಪ್ರತಿ ವರ್ಷದ ಹಾಗೆ ಈ ವರ್ಷವೂ ಮತ್ತೊಂದು ಮಹಿಳಾ ದಿನಾಚರಣೆಯ ಹೊಸ್ತಿಲಲ್ಲಿ ನಿಂತಿದ್ದೇವೆ.ಮಹಿಳೆಯ ಹರಹಿನ ವಿಸ್ತಾರ ಅಗಾಧವಾಗಿ ಬೆಳೆದು ನಿಂತಿದೆ. ಸಮಾಜದ ಮುಖ್ಯ ವಾಹಿನಿಯಲ್ಲಿಯೂ ಮಹಿಳೆಯ ನಾಗಾಲೋಟ ಭರದಿಂದಲೇ ಸಾಗುತ್ತಿದೆ.ಆದರೆ ಎತ್ತ?? ಆಕೆಗೆ ಸುರಕ್ಷಿತವಾಗಿ ನಿರ್ಭಿಡೆಯಿಂದ ಕೆಲಸ ಮಾಡಲು,ಓಡಾಡಲು, ಸ್ವತಂತ್ರವಾಗಿರಲು ಅನುವು ಮಾಡಿಕೊಟ್ಟಿದ್ದೇವಾ?? ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಆಕೆಗೆ ರಕ್ಷಣೆ ಒದಗಿಸಿದ್ದೇವಾ?? ನಮ್ಮೊಳನಗಿನ ನಮ್ಮ ನಾಡಿನ ಆಂತರ್ಯವನ್ನು ಪ್ರಶ್ನಿಸಿಕೊಂಡಾಗಲಂತೂ ಅತ್ಯಂತ ಹೇಸಿಗೆಯಿಂದ ತಲೆ ಬಗ್ಗಿಸಬೇಕಾದ ಪರಿಸ್ಥಿತಿ ನಿರ್ಮಿಸಿಕೊಂಡಿದ್ದೇವೆ. ಮಹಿಳಾವಾದ ,ಸಮಾನತೆ,ಹಕ್ಕುಗಳು ಹೀಗೆ ರೋಮ್ಯಾಂಟಿಕ್ ಶಬ್ದಗಳ ಆಚೆಗೆ ಹೆಣ್ಣಿಗೆ ಸಿಗಬೇಕಿದ್ದ ಕನಿಷ್ಟ ಸುರಕ್ಷತೆಯ ಭರವಸೆ ತಂದಿದ್ದೇವಾ? ಮತ್ತಷ್ಟು ಓದು 
ಮೋದಿಯವರನ್ನು ಪ್ರಶ್ನಿಸುವ ನೈತಿಕತೆ ಸಿದ್ಧರಾಮಯ್ಯನವರಿಗೆ ಇದೆಯೇ?
– ರಾಕೇಶ್ ಶೆಟ್ಟಿ
ನೈತಿಕತೆ ಎಂದರೆ ಕೇಜಿಗೆಷ್ಟು ಎಂದು ಬದುಕುವ ಜನರು ಯಾರನ್ನು ಬೇಕಾದರೂ, ಏನನ್ನೂ ಬೇಕಾದರೂ ನಾಚಿಕೆ ಬಿಟ್ಟು ಪ್ರಶ್ನಿಸಬಲ್ಲರು. ಉದಾಹರಣೆಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಮೊನ್ನೆ ಟ್ವಿಟರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು “ಲೋಕಪಾಲ್’ ಯಾಕ್ರೀ ನೇಮಕ ಮಾಡಿಲ್ಲ ಅಂತ ಪ್ರಶ್ನಿಸುತ್ತಿದ್ದಿದ್ದು! ಇಡೀ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕ ಲೋಕಾಯುಕ್ತವನ್ನು ನುಂಗಿ ನೀರು ಕುಡಿದ ಸಿಎಂ ಸಾಹೇಬರು ಪ್ರಧಾನಿಯವರನ್ನು ಆ ಪರಿ ಅಧಿಕಾರವಾಣಿಯಲ್ಲಿ ಪ್ರಶ್ನಿಸುವುದನ್ನು ನೋಡಿದಾಗ, ಇವರಿಗೆ ಪಾಪ ಪ್ರಜ್ಞೆಯೇ ಇಲ್ಲವೇನೋ ಎನ್ನಿಸುತ್ತಿತ್ತು. ಮತ್ತಷ್ಟು ಓದು 
ನಂಬುಗೆಯೆಂಬ ಪಾತ್ರೆಯ ಒಳಗೆ ಸುಳ್ಳುಸುದ್ಧಿಗಳ ಜಾತ್ರೆ!
– ಸುಜಿತ್ ಕುಮಾರ್
ಇಲ್ಲಿ ಸರ್ವವೂ ಇಂಟರ್ನೆಟ್ಮಯ. ಇಲ್ಲಿ ಕ್ಷಣಮಾತ್ರದಲ್ಲಿ ಕಣ್ಣೊಡೆದು ಕೋಟಿ ಜನರ ಕನಸಿನ ರಾಣಿಯಾಗಲೂಬಹುದು ಅಂತೆಯೇ ಸುಳ್ಳಿನ ಕಂತೆಯಿಂದ ಕಟ್ಟಿರುವ ರಾಜಪಟ್ಟದ ಉತ್ತುಂಗದಿಂದ ಕಣ್ಮುಚ್ಚಿ ಬಿಡುವಷ್ಟರಲ್ಲಿ ನೆಲದ ಮೇಲೆ ವಿವಸ್ತ್ರನಾಗಿ ಬೀಳಲೂಬಹುದು. ಇಲ್ಲಿ ಸತ್ಯ, ಮಿಥ್ಯ, ಸರಿ, ತಪ್ಪು, ಅಂತೆ, ಕಂತೆ ಎಂಬೆಲ್ಲಾ ಗ್ರಹಿಕೆಗಳು ನಿಂತಿರುವುದು ಕೇವಲ ಒಂದು ಮಾತ್ರದ ಅಂಶದ ಮೇಲೆ. ಅದು ಪ್ರಸ್ತುತ ಇಂಟರ್ನೆಟ್ ಬಳಕೆದಾರನ ಬಳಿಯಿರುವ ಏಕೈಕ ಮಾಪನ. ಹೆಸರು ನಂಬುಗೆ. ಇಂದಿನ ಸಾಮಾಜಿಕ ಜಾಲತಾಣಗಳ ಸರೋವರದಲ್ಲಿ ಕಾಣಸಿಗುವ ಪ್ರತಿಯೊಂದು ಸುದ್ದಿಯನ್ನು ಹಿಂದೂ-ಮುಂದೂ ನೋಡದೆ ಅವುಗಳ ಅಳೆತ್ತರವನ್ನೂ ಅರಿಯದೆ ಕಾದ ಎಣ್ಣೆಗೆ ಬಿದ್ದ ಒಣ ಹಪ್ಪಳದಂತೆ ಹಿರಿ ಹಿರಿ ಹಿಗ್ಗುವ ಜನಕೋಟಿಯ ವಿಚಾರಗ್ರಹಿಕೆ ತಾವು ಕಂಡ ಸುದ್ದಿಯನ್ನು ಒರೆಹಚ್ಚಿ ಪರೀಕ್ಷಿಸಿಕೊಳ್ಳುವುದು ಈ ನಂಬುಗೆ ಎಂಬ ಸೂಕ್ಷ್ಮ ಎಳೆಯ ಮೇಲೆಯೇ. ಮತ್ತಷ್ಟು ಓದು 
30 ಇಯರ್ಸ್ ಆಫ್ 1987.
– ಸುಜಿತ್ ಕುಮಾರ್
ಕಾಲದ ಗಾಲಿ ಎಂದಿಗಾದರೂ ನಿಲ್ಲಬಹುದೇ? ಎಂಬ ಮೂರ್ಖ ಪ್ರಶ್ನೆಯನ್ನು ಮಾನವ ಅದೆಷ್ಟು ಬಾರಿ ತನ್ನನ್ನೇ ತಾನು ಕೇಳಿದ್ದಾನೆಯೋ. ಅದೆಷ್ಟು ಬಾರಿ ಅದು ನಿಂತಿದೆ ಎಂದೇ ಭಾವಿಸಿ ಮೋಹಪರವಶನಾಗಿ, ಅಸೂಹಿಯಾಗಿ, ಸಕಲವೂ ನನ್ನದೇ ನಾನೇ ಒಡೆಯ ಎಂಬಂತೆ ಅದೆಷ್ಟು ಬಾರಿ ವರ್ತಿಸಿ ಕುಣಿದು ಮತ್ತೆ ಯಥಾ ಪ್ರಕಾರ ಅದೇ ಕಾಲದ ಗಾಲಿಯೊಳಗೆಯೇ ಮರೆಯಾಗಿದ್ದಾನೆಯೋ? ಅಂದಿನಿಂದ ಇಂದಿನವರೆಗೂ ಮಾನವ ಮೂರ್ಖನೇ. ಗಳಿಕೊಂಡಿರುವ ಒಂದೆರೆಡು ದಿನಗಳನ್ನು ಹಾಯಾಗಿ ಬದುಕಿ ನಕ್ಕು ನಲಿದು ಮರೆಯಾಗುವ ಬದಲು ಇಲ್ಲ ಸಲ್ಲದ ತಾಪತ್ರಯವನ್ನೆಲ್ಲ ತನ್ನ ಮೇಲೆರೆದುಕೊಂಡು ಸುಖಾಸುಮ್ಮನೆ ಗೋಳಾಡಿ ಗೊಣಗಾಡಿ ಅತ್ತು ಒದ್ದಾಡಿ ಮರೆಯಾಗುತ್ತಾ ಬಂದಿದ್ದಾನೆ. ಅಷ್ಟೆಲ್ಲ ಸರ್ಕಸ್ ಗಳನ್ನೂ ಮಾಡಿಯೂ ಆತ ಕಾಲದ ಗಾಲಿಯನ್ನು ತಡೆದು ನಿಲ್ಲಿಸಿದನೇ? ನಿಲ್ಲಿಸಬಲ್ಲನೆ? ಮತ್ತಷ್ಟು ಓದು 
ಕರ್ನಾಟಕ ಸ್ವಾಭಿಮಾನವನ್ನು ಬಹಮನಿಗಳಿಗೆ ಒತ್ತೆಯಿಡಲು ಹೊರಟಿದ್ದ ಕಾಂಗ್ರೆಸ್
– ರಾಕೇಶ್ ಶೆಟ್ಟಿ
“ಅದೋ ಅದೋ ವಿಜಯನಗರದ ಸ್ಥಾಪನೆ,ವಿಜಯನಗರದ ಏಳಿಗೆ,ವಿಜಯನಗರದ ವೈಭವ. ಹಾ! ವಿಜಯನಗರದ ನಾಶ…” ಎಂದು ಕನ್ನಡ ರಾಷ್ಟ್ರವೀರ ಎಚ್ಚಮನಾಯಕನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಡಾ.ರಾಜ್ ಕುಮಾರ್ ಅವರು ಹೇಳುವಾಗ, ಕರ್ನಾಟಕ ಸ್ವಾಭಿಮಾನಕ್ಕಾಗಿ ಮಿಡಿಯುವ ಪ್ರತಿ ಕನ್ನಡಿಗನ ಮನದಲ್ಲೂ ತೀವ್ರ ವೇದನೆ,ಆಕ್ರೋಶದ ಅನುಭವವಾಗುತ್ತದೆ. ಆಗಲೇಬೇಕು ಕೂಡ.ಆದರೆ ಈ ಮಾತು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಕನ್ನಡಿಗರಿಗೆ ಅನ್ವಯವಾಗುವುದಿಲ್ಲ. ಕರ್ನಾಟಕ ಸ್ವಾಭಿಮಾನವನ್ನು ವೋಟ್ ಬ್ಯಾಕಿಂಗೆ ಅಡವಿಟ್ಟ ಕಾಂಗ್ರೆಸ್ ಪಕ್ಷಕ್ಕೆ ವಿಜಯನಗರ ಸಾಮ್ರಾಜ್ಯ ನೆನಪಾಗಲಿಲ್ಲ,ಅವರಿಗೆ ನೆನಪಾಗಿದ್ದು ಕರ್ನಾಟಕದ ಹೆಮ್ಮೆಯ ಸಾಮ್ರಾಜ್ಯವನ್ನು ನಾಮಾವಶೇಷ ಮಾಡಿದ ಬಹಮನಿ ಸುಲ್ತಾನರದ್ದು.ಉತ್ತರದಲ್ಲಿ ಮಹಮ್ಮದ್ ಬಿನ್ ತುಘಲಕನ ಕಾಲದಲ್ಲಿ ಹುಟ್ಟಿಕೊಂಡ ಬಹಮನಿ ಸುಲ್ತಾನರನ್ನು ದಕ್ಷಿಣದ ತುಘಲಕ್ ಸರ್ಕಾರ ನೆನಪಿಸಿಕೊಂಡಿದ್ದು ಕಾಕತಾಳೀಯವೋ,ಪುನರ್ಜನ್ಮದ ನೆನಪೋ ಗೊತ್ತಿಲ್ಲ.ಆದರೆ ಇಂತಹ ದರಿದ್ರ ಸರ್ಕಾರವನ್ನು ಸಹಿಸಿಕೊಳ್ಳಬೇಕಾದ ಕರ್ಮ ನಮ್ಮದು.
ಹೊರದೇಶದ ಆಕ್ರಮಣಕಾರರ ಅದರಲ್ಲೂ ಮುಖ್ಯವಾಗಿ ಇಸ್ಲಾಮ್ ದಾಳಿಕೋರರ ಬರ್ಬರತೆ,ಕ್ರೌರ್ಯವೆಂತದ್ದು ಎನ್ನುವುದನ್ನು ಉತ್ತರ ಭಾರತ ಶತಮಾನಗಳ ಕಾಲ ಅನುಭವಿಸಿದೆ. ಈ ವಿಷಯದಲ್ಲಿ ದಕ್ಷಿಣ ಭಾರತದ ಅದೃಷ್ಟ ಚೆನ್ನಾಗಿಯೇ ಇತ್ತು.ಬಹುಶಃ ದಕ್ಷಿಣದ ರಾಜರು ಇಸ್ಲಾಮಿ ದಾಳಿಕೋರರ ಭಯ ನಮಗಿಲ್ಲ ಎಂಬ ಭ್ರಮೆಯಲ್ಲಿಯೇ ಬದುಕುತ್ತಿದ್ದರೋ ಏನೋ,ಆದರೆ ಅದು ಅಲ್ಲಾವುದ್ದೀನ್ ಖಿಲ್ಜಿಯ ಕಾಲದವರೆಗೂ ಮಾತ್ರವೇ.ಖಿಲ್ಜಿಯ ದಂಡನಾಯಕ ಮತಾಂತರಿ ಮಲ್ಲಿಕಾಫರ್, ಹೊಯ್ಸಳರ ರಾಜಧಾನಿ ದ್ವಾರಸಮುದ್ರದ ಮೇಲೆ ದಾಳಿಗೆ ಮುಹೂರ್ತವಿಟ್ಟ.ಆ ಸಂಧರ್ಭದಲ್ಲಿ ಹೊಯ್ಸಳ ಮಹಾರಾಜ ಮುಮ್ಮಡಿ ಬಲ್ಲಾಳ ವೀರ ತಮಿಳುನಾಡಿನ ತಿರುವಣ್ಣಾಮಲೈನಲ್ಲಿದ್ದ. ಮಲ್ಲಿಕಾಫರನ ಸ್ಥಾನದಲ್ಲಿ ವೀರ ಸೇನಾನಿಯಿದ್ದಿದ್ದರೇ, ಬಲ್ಲಾಳನು ಇದ್ದಾಗಲೇ ರಾಜಧಾನಿಗೆ ಮುತ್ತಿಗೆ ಹಾಕುವ ಧೈರ್ಯ ತೋರುತ್ತಿದ್ದನೋ ಏನೋ,ಆದರೆ ಎಷ್ಟಾದರೂ ಮತಾಂಧ ದಾಳಿಕೋರನಲ್ಲವೇ ಪೃಥ್ವಿರಾಜ ಚೌಹಾಣನ ಕಾಲದಿಂದಲೂ ಇವರು ಗೆದ್ದುಕೊಂಡು ಬಂದಿದ್ದು ಕಪಟದಿಂದಲೇ.ಮಲ್ಲಿಕಾಫರನ ಜಿಹಾದಿ ಸೈನ್ಯ ಸತತ ೧೩ ದಿನಗಳ ಕಾಲ ಹೊಯ್ಸಳರ ಭವ್ಯ ರಾಜಧಾನಿಯನ್ನು ನಾಶಮಾಡಿ ದ್ವಾರಸಮುದ್ರವನ್ನು, “ಹಾಳಾದ ಬೀಡು” ಎನ್ನುವಂತೆ ಮಾಡಿತು,ಜನರ ಬಾಯಿಯಲ್ಲಿ “ಹಳೇಬೀಡು” ಆಗಿ ಹೋಯಿತು. ಈ ವಿನಾಶವೂ ಮುಂಬರಲಿರುವ ಭವ್ಯ ಸಾಮ್ರಾಜ್ಯದ ಮುನ್ನುಡಿಯೇ ಆಗಿ ಹೋಯಿತು.ಹಾಗೊಂದು ಮುನ್ನುಡಿ ಬರೆಯಲು ಹೊರಟ ಹೊಯ್ಸಳ ದೊರೆ ಮುಮ್ಮಡಿ ಬಲ್ಲಾಳ ವೀರನಿಗೆ ಆಗ ಇನ್ನೂ ೮೨ರ ವಯಸ್ಸು ಅಷ್ಟೇ!
ಮರಾಠ ನಾಯಕನಿಗೊಂದು ನಮನ
– ಪಲ್ಲವಿ ಭಟ್, ಬೆಂಗಳೂರು
ಕಳೆದ ವರುಷ ಚಲನಚಿತ್ರವೊಂದು ಭಾರತದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿ ಬಿಟ್ಟಿತು. “ಬಾಹುಬಲಿ” ಎನ್ನುವ ಆ ಚಿತ್ರವನ್ನು ನೋಡದವರ ಸಂಖ್ಯೆಯೇ ವಿರಳವೆನ್ನಬಹುದು. ರಾಜಮೌಳಿಯವರ ಕಲ್ಪನಾ ಶಕ್ತಿ, ಕಲಾವಿದರ ನಟನಾ ಚಾತುರ್ಯ, ಹಾಗೂ ಗ್ರಾಫಿಕ್ಸ್ ನ ವಿಸ್ಮಯಗಳಿಂದಾಗಿ ಈ ಚಿತ್ರವು ಭಾರತದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿ ಮೂಡಿದೆ.
ನಾನು ಆ ಚಿತ್ರವನ್ನು ನೋಡಿದ್ದೆ. ನೋಡಿ ಒಂದಷ್ಟು ವಾರಗಳು ಕಳೆದ ಮೇಲೂ ಅದೇನೋ ನನ್ನನ್ನು ಕಾಡುವಂತಿತ್ತು. ಮರೆತು ಹೋಗಿರುವ ಏನನ್ನೋ ನೆನಪಿಸುವಂತಿತ್ತು. ರಾಜನ ಗಾಂಭೀರ್ಯ, ನ್ಯಾಯ ,ನಿಷ್ಠೆಗಳ ಬಗ್ಗೆ ಅದೆಲ್ಲೋ ಓದಿದ ನೆನಪು. ಮತ್ತೆ ಮತ್ತೆ ಕೆದಕಿ ನೋಡಿದರೆ ನೆನಪಿಗೆ ಬಂದದ್ದು ಒಂದು ಪುಟ್ಟ ಪುಸ್ತಕ. ಭಾರತ-ಭಾರತಿಯವರ ಪ್ರಕಾಶನದಲ್ಲಿ ಹೊರ ಬಂದಿದ್ದ “ಶಿವಾಜಿ” ಎನ್ನುವ ಆ ಪುಸ್ತಕ ಅಪ್ಪನ ಶೆಲ್ಫ್ ನಲ್ಲಿ ಇನ್ನೂ ಇರಬಹುದು. ಓದುವ ಹವ್ಯಾಸವನ್ನು ಬೆಳೆಸಿಕೊ ಎಂದು ಯಾರು ಯಾವಾಗಲೇ ಗೊಣಗಲಿ, ನಾನು ಪಟ್ಟಂಥ ಇದೇ ಪುಸ್ತಕವನ್ನು ಕೈಗೆತ್ತಿಕೊಳ್ಳುತಿದ್ದೆ. ಸಣ್ಣ ಪುಸ್ತಕವಾಗಿದ್ದರಿಂದಲೋ, ಅಥವಾ ಶಿವಾಜಿ ಅನ್ನುವ ಮಹಾರಾಜರು ತುಂಬಾ ಇಷ್ಟವಾಗಿದ್ದರಿಂದಲೋ,ನನಗೆ ತಿಳಿದಿಲ್ಲ.
ಬಿಡುಗಡೆಯಾಗಿದ್ದು ಬಹಮನಿ ಟೀಸರ್, ಪಿಕ್ಚರ್ ಅಭೀ ಬಾಕೀ ಹೈ!
ಕರ್ನಾಟಕ ಟೂರಿಸಂ ವೆಬ್‌ಸೈಟಿನಲ್ಲಿನ್ನು ಕಲ್ಲಿನ ರಥದ ಚಿತ್ರ ಇರುವುದಿಲ್ಲವೇ? ಹಂಪಿ ಕನ್ನಡ ವಿಶ್ವವಿದ್ಯಾಲಯದ ಹೆಸರನ್ನು ಸರ್ಕಾರ ಅದಿಲ್ ಶಾಹಿ ವಿಶ್ವವಿದ್ಯಾಲಯ ಎಂದು ಬದಲಾಯಿಸುವುದೇ? ಹಂಪಿ ಉತ್ಸವ ನಿಂತುಹೋಗುತ್ತಾ? ಬರೀದ್ ಶಾಹಿಗಳ ಬೆರಕೆ ಭಾಷೆ ಉರ್ದು ರಾಜ್ಯದ ಅಕೃತ ಆಡಳಿತ ಭಾಷೆಯಾಗಿಹೋಗುತ್ತಾ? ವಾರ್ತಾ ಇಲಾಖೆ ಸ್ವತಃ ತಾನೇ ನಿಂತು ಇಮಾದ್ ಶಾಹಿ ಪುಂಡರ ಸಿನೆಮಾವನ್ನು ನಿರ್ಮಿಸುತ್ತದಾ? ಅಂಜನಾದ್ರಿ, ಮಾತಂಗ, ಮಾಲ್ಯವಂತ ಬೆಟ್ಟಗಳಲ್ಲಿನ್ನು ಬಹಮನಿ ಸುಲ್ತಾನರ ಕ್ರೌರ್ಯಗಳ ನೆರಳು ಬೆಳಕಿನ ಪ್ರದರ್ಶನಾಟ ನಡೆಯುತ್ತದಾ? ಟಿಬಿ ಡ್ಯಾಮಿಗೆ ಮರುನಾಮಕರಣ ಮಾಡುವ ಉದ್ದೇಶವೂ ಇರಬಹುದೇ?ಹೌದು. ಸಿಎಂ ಸಿದ್ದರಾಮಯ್ಯನವರು ಎರಡನೇ ದೇವರಾಜ ಅರಸು…!
– ರಾಕೇಶ್ ಶೆಟ್ಟಿ
‘Law and order are the medicine of the politic body and when the politic body gets sick, medicine must be administered’ – ಕಾನೂನು ಸುವ್ಯವಸ್ಥೆಯು ರಾಜಕೀಯ ವ್ಯವಸ್ಥೆಗೆ ಔಷಧವಿದ್ದಂತೆ ಮತ್ತು ರಾಜಕೀಯ ವ್ಯವಸ್ಥೆಯೇ ಅನಾರೋಗ್ಯಕ್ಕೆ ಒಳಗಾದಾಗ, ಔಷಧವನ್ನು ನೀಡಲೇಬೇಕು” ಕಾನೂನು ಸುವ್ಯವಸ್ಥೆಯ ಕುರಿತು ಹೀಗೆ ಹೇಳುತ್ತಾರೆ ಡಾ. ಅಂಬೇಡ್ಕರ್. ಕರ್ನಾಟಕದ ಮಟ್ಟಿಗೆ ಸೂಕ್ತವಾದ ಮಾತಿದು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸರ್ಕಾರವೇ ರೋಗಗ್ರಸ್ಥವಾಗಿ ಕುಳಿತಿದೆ. ಅದು ಯಾವ ಪರಿ ಕುಲಗೆಟ್ಟಿದೆಯೆಂದರೆ, ರಾಜಧಾನಿ ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯ ಅನತಿದೂರದಲ್ಲೇ ರಾಬರಿಗಳು ನಡೆದಿರುವ ವರದಿಗಳಾಗುತ್ತಿವೆ. ಪೊಲೀಸ್ ಕಚೇರಿಯ ಬಳಿ ಬಿಡಿ, ಖುದ್ದು ಪೊಲೀಸರಿಗೆ ರಕ್ಷಣೆಯಿಲ್ಲದಂತಾಗಿದೆ. ರಸ್ತೆಯಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದ ಪುಂಡರನ್ನು ಹಿಡಿಯಲು ಹೋದ ಪೊಲೀಸರ ಮೇಲೆಯೇ ರೌಡಿಗಳು ಮಚ್ಚು ಬೀಸುತ್ತಿದ್ದಾರೆ, ಗನ್ ಕಿತ್ತುಕೊಳ್ಳುತ್ತಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗೆ ಕಿರುಕುಳ ನೀಡಿದ್ದಾರೆ, ಪೊಲೀಸರ ಸ್ಥಿತಿಯೇ ಹೀಗಾದರೆ ಇನ್ನು ಜನಸಾಮಾನ್ಯರ ಗತಿಯೇನು? ಮತ್ತಷ್ಟು ಓದು 
ನಂಬಿಕೆ
– ಪ್ರಶಾಂತ್ ಭಟ್
‘ಇದು ಹೀಗಾಗುತ್ತದೆ ಅಂತ ನನಗೆ ಗೊತ್ತಿತ್ತು’ ಪಕ್ಕದ ಸೀಟಿನವನ ಮಾತು ಕೇಳಿ ಮೊಬೈಲಿಂದ ತಲೆ ಎತ್ತಿ ನೋಡಿದಾಗ ಬಸ್ಸು ನಿಂತದ್ದು ಅರಿವಿಗೆ ಬಂತು. ಇವ ಯಾರು ಮಾರಾಯ, ಬಸ್ಸು ಹೊರಟಾಗಿಂದ ತನ್ನೊಳಗೇ ಏನೋ ಗುನುಗುತ್ತಾ ಕೈ ಸನ್ನೆ ಮಾಡ್ತಾ ಕಿರಿಕಿರಿ ಉಂಟುಮಾಡಿದ್ದ. ನಮ್ಮದೇ ಸಾವಿರ ಇರಬೇಕಾದರೆ ಈ ತರಹದ ಆಸಾಮಿ ಸಿಕ್ಕರೆ ಪ್ರಯಾಣವೂ ಪ್ರಯಾಸವೇ! ಅವಳ ಮೆಸೇಜು ಬಂತಾ ಅಂತ ನೋಡುವಾ ಅಂದರೆ ಹಾಳಾದ ನೆಟ್ವರ್ಕ್ ಕೂಡಾ ಇಲ್ಲ. ಅದು ಸರಿ ಈ ಬಸ್ಸು ನಿಂತದ್ದಾದರೂ ಯಾಕೆ? ಓಹ್, ಎದುರೆಲ್ಲ ವಾಹನಗಳ ಸಾಲೇ ಸಾಲು! ಅಲ್ಲದೆ ಈ ಘಾಟಿಯಲ್ಲಿ ಇದೊಂದು ಗೋಳು. ಒಂದು ಗುಡ್ಡ ಕುಸಿದರೆ, ಜೋರು ಮಳೆಗೆ ಮರ ಉರುಳಿಬಿದ್ದರೆ, ನಿದ್ದೆಯ ಮತ್ತಲ್ಲಿ ಯಾವನಾದರು ಟ್ಯಾಂಕರ್ನವ ಮಗುಚಿಕೊಂಡರೆ ಮುಗಿಯಿತು. ಅದರ ನಡುವೆ ಜೀವ ಬಿಟ್ಟು ರಾಂಗ್ ವೇನಲ್ಲಿ ಮುನ್ನುಗ್ಗಿ ಬರುವ ಹುಚ್ಚು ಚಾಲಕರು. ತಾವೂ ಸಿಲುಕಿ ಉಳಿದವರನ್ನೂ ಸಿಕ್ಕಿಸಿ ರಂಪ ರಾದ್ಧಾಂತ. ಓಹ್, ನಂದೂ ಇದೇ ಕತೆಯಲ್ವಾ? ಮತ್ತಷ್ಟು ಓದು 




