ರೌಡಿಗಳ ಪಟ್ಟಿಗೆ ಹೊಸಬರ ಸೇರ್ಪಡೆ!
-ದಿನೇಶ್ ಕುಮಾರ್ ಎಸ್.ಸಿ.

ಗಾಯಗೊಂಡ ವಕೀಲರು
“ವಕೀಲರ ರೌಡಿಸಂಗೆ ಸಿಎಂ ಹೆದರ್ತಾರೆ, ಗೃಹಮಂತ್ರಿ ನಡುಗ್ತಾರೆ, ಆದ್ರೆ ನಾವು… ಮಾಧ್ಯಮದವರು ಹೆದರೋದಿಲ್ಲ…” ಇದು ಇವತ್ತಿನ ಉದಯವಾಣಿಯ ಮುಖಪುಟದ ಶೀರ್ಷಿಕೆ. ಕನ್ನಡಪ್ರಭ “ಏನ್ ಲಾ” ಎಂಬ ಎರಡು ಅರ್ಥ ಹೊರಡಿಸುವ ಶೀರ್ಷಿಕೆ ನೀಡಿದೆ. ಈ ಶೀರ್ಷಿಕೆಗಳು ಮಾಧ್ಯಮರಂಗದ ಆತ್ಮವಿಶ್ವಾಸದಂತೆಯೂ, ಅಹಂಕಾರದಂತೆಯೂ ಏಕಕಾಲಕ್ಕೆ ಧ್ವನಿ ಹೊರಡಿಸುತ್ತದೆ. ಸಿಟಿ ಸಿವಿಲ್ ಕೋರ್ಟ್ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆಯಿಂದ ಕನ್ನಡ ಮಾಧ್ಯಮ ಸಮೂಹ ಕೆರಳಿ ನಿಂತಿದೆ ಎಂಬುದಂತೂ ಸ್ಪಷ್ಟ. ಕೆರಳುವುದು, ಕೆರಳಿಸುವುದು ಎಲೆಕ್ಟ್ರಾನಿಕ್ ಮಾಧ್ಯಮಗಳ ಜಾಯಮಾನ. ಯಾಕೆಂದರೆ ಅವುಗಳ ಟಿಆರ್‌ಪಿ ಯೊಂದಿಗೆ ಈ ಕೆರಳುವಿಕೆಗೆ ಸಂಬಂಧಿಸಿದೆ. ಈ ಬಾರಿ ಪತ್ರಿಕೆಗಳೂ ಸಹ ಕೆರಳಿವೆ. ಅದಕ್ಕೆ ಕಾರಣಗಳೂ ಇವೆ.
ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಕೆಲ ವಕೀಲರು ನಡೆಸಿದ ಪುಂಡಾಟಿಕೆ ಅಸಹನೀಯ ಮತ್ತು ಅಸಮರ್ಥನೀಯ. ಅದು ಅಕ್ಷರಶಃ ಗೂಂಡಾಗಿರಿಯೇ ಹೌದು. ಘಟನೆಗೆ ಕಾರಣವಾಗಿರಬಹುದಾದ ಪ್ರಚೋದನೆ ಏನೇ ಆಗಿದ್ದರೂ ಇಂಥ ಪುಂಡಾಟಿಕೆ ಅನಪೇಕ್ಷಿತ ಮತ್ತು ಕಾನೂನು ಬಾಹಿರ. ಇಂಥ ಕೃತ್ಯ ಎಸಗಿದ ವಕೀಲರು ಜೈಲು ಸೇರಲು ಲಾಯಕ್ಕಾದವರು ಮಾತ್ರವಲ್ಲ, ಅವರು ಮತ್ತೆಂದೂ ಕರಿಕೋಟು ಹಾಕುವಂತಾಗಬಾರದು.
ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಕೆರಳುವಿಕೆಯೂ ಅರ್ಥ ಮಾಡಿಕೊಳ್ಳುವಂಥದ್ದು. ನ್ಯೂಸ್ ಚಾನಲ್‍ಗಳು ಎರಡು ನಿಮಿಷಗಳ ಕಾಲ ಪ್ರಸಾರವನ್ನೇ ನಿಲ್ಲಿಸಿ ಪ್ರತಿಭಟಿಸಿದವು. ದಿನವಿಡೀ ಕಪ್ಪು ಬಣ್ಣದ ಹಿನ್ನೆಲೆಯನ್ನು ಪರದೆಯ ಮೇಲೆ ಬಳಸಿದವು. ಕಪ್ಪು ಪಟ್ಟಿ ಕಟ್ಟಿಕೊಂಡೇ ಸುದ್ದಿ ಓದಲಾಯಿತು. ಒಂದು ವಾಹಿನಿಯಲ್ಲಂತೂ ಬಾಯಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಸುದ್ದಿ ಓದಲಾಯಿತು.
” ಅನ್ಯಾಯವಾದಿಗಳ ಹುಟ್ಟಡಗಿ ಪ್ರಜಾ ಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಲಿ”
-ಬನವಾಸಿ ಸೋಮಶೇಖರ್
ಕೆಲವು ಗೂಂಡಾ ವಕೀಲರುಗಳು ಪೂರ್ವಾಗ್ರಹ ಪೀಡಿತರಾಗಿ ಮಾಧ್ಯಮದವರು ಹಾಗೂ ಪೋಲೀಸರ ಮೇಲೆ ಅಮಾನವೀಯ ದೌರ್ಜನ್ಯ,ಹಲ್ಲೆ ನಡೆಸುವ ಮೂಲಕ ನಮ್ಮ ಪವಿತ್ರ ನ್ಯಾಯಾಂಗ ವ್ಯವಸ್ಥೆಗೆ ಅಕ್ಷರಶಃ ಚ್ಯುತಿ ತಂದರು.ಇವರು ತಮ್ಮನ್ನು ಏನೆಂದುಕೊಂಡಿರುವರೋ?
ಪ್ರಜಾಪ್ರಭುತ್ವದ ಸಾರ್ವಭೌಮ ಪರಮಾಧಿಕಾರದ ಉತ್ತುಂಗ ವ್ಯವಸ್ಥೆಯನ್ನು ಹೊಂದಿರುವ ಭಾರತೀಯ ಸಂವಿಧಾನದ ಆಶಯ,ಮೂಲೋದ್ಧೇಶ ಹಾಗೂ ನಿಯಮಗಳ ಮೇಲೆ ದಬ್ಬಾಳಿಕೆ ನಡೆಸಿರುವ ಈ ಅನ್ಯಾಯವಾದಿಗಳ ಹುಟ್ಟಡಗಲೇಬೇಕು.ಸಂವಿಧಾನದ 19 (1) ನೇ ವಿಧಿಗೆ ಕಳಂಕ ತಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಿರುವ ಈ ವಿಕೃತ ಮನಸುಗಳ ಮರ್ಧನ ಆಗಲೇಬೇಕು.ನಮ್ಮ ಪರಂಪರೆಗೆ,ನ್ಯಾಯ ದೇವತೆಯ ಕಣ್ಣಿಗೆ ಮಣ್ಣೆರಚಿರುವ ಈ ಕೂಳರ ಅಟ್ಟಹಾಸದ ಹಿಂದಿನ ಪಟ್ಟಭದ್ರರ ಬಣ್ಣ ಬಯಲಾಗಿ ಪ್ರಜಾಪ್ರಭುವಿಗೆ ಸತ್ಯದರಿವು ಆಗಲೇಬೇಕು.ಮೌಲ್ಯಾಧಾರಿತ ನ್ಯಾಯವಾದಿಗಳ ಮನಸ್ಸನ್ನು ಘಾಸಿಗೊಳಿಸಿರುವ ಈ ಘಟನೆ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡುವ ಹುನ್ನಾರುವುಳ್ಳದ್ದು.ಇಂಥ ವಿಚಾರ ಹೀನ,ಬುದ್ಧಿ ಹೀನ,ಅವಿವೇಕಿ ಲಂಪಟರಿಗೆ ಕೈಕೊಳತೊಡಿಸಿ ಜೈಲಿಗಟ್ಟಲೇಬೇಕು.ಬುಡಮೇಲು ಕೃತ್ಯವೆಸಗುವ ಯಾರನ್ನೇ ಆಗಲಿ ರಕ್ಷಿಸುವ,ಹಿನ್ನೆಲೆಯಲ್ಲಿ ಆಶ್ರಯ ನೀಡುವ ಕಾರ್ಯ ಸರ್ವಥಾ ಸಲ್ಲದು.ನಮ್ಮ ಶ್ರೀಮಂತ ಸಂಸ್ಕ್ರತಿ,ಪರಂಪರೆ,ಜನ ಜೀವನ,ನ್ಯಾಯ-ಅನ್ಯಾಯ ಇತ್ಯಾದಿ ಅಂಶಗಳ ಮೇಲೆ ಬೆಳಕು ಚೆಲ್ಲಿ ಸತ್ಯ ದರ್ಶನ ಮಾಡಿಸುವ ಮಾಧ್ಯಮ ಹಾಗೂ ಅದರ ಪ್ರತಿನಿಧಿಗಳ ಬದುಕಿಗೆ ಭದ್ರತೆ ಮತ್ತು ರಕ್ಷಣೆಯೇ ಇಲ್ಲವಾಗಿದೆ.ಜೀವದ ಹಂಗು ತೊರೆದು ಕಾವಲು ನಾಯಿಯಂತೆ ಕಾರ್ಯವೆಸಗುವ ಪತ್ರಕರ್ತರಿಗೆ,ಕಾನೂನು ಮತ್ತು ಸುವ್ಯವಸ್ಥೆಯ ಸೇವೆಗೈಯುವ ಪೊಲೀಸರಿಗೆ ಸೂಕ್ತ ರಕ್ಷಣೆ ನೀಡುವ ಹೊಣೆಗಾರಿಕೆ ಹಿಂದಿಗಿಂತಲೂ ಈಗ ಅತ್ಯಂತಯ ಅಗತ್ಯವಾಗಿದೆ ಎಂಬುದನ್ನು ದಿನಾಂಕ:02-03-2012 ರಂದು ಬೆಂಗಳೂರಿನ ನ್ಯಾಯ ದೇವತೆಯ ಅಂಗಳದಲ್ಲಿ ನಡೆದ ಅನ್ಯಾಯವಾದಿಗಳ ಕ್ರೌರ್ಯ,ಅನಾಗರಿಕ ಕೃತ್ಯ ಜೀವಂತ ಸಾಕ್ಷಿಯಾಗಿ ಕರ್ನಾಟಕ ಇತಿಹಾಸದ ಪುಟಗಳಲ್ಲಿ ದಾಖಲಾಯಿತು.
ಉದ್ಯೋಗ ಮಾಹಿತಿ
ಗೆಳೆಯರೆ
sccm ಡೆಪ್ಲೊಯ್ಮಮೆ೦ಟ್ ಪರಿಣಿತರು ಬೇಕಾಗಿದ್ದಾರೆ
ಅನುಭವ ೧ ರಿ೦ದ ೩ ವರ್ಷದ ವರಗೆ
sccm ಸೆರ್ವರ್ ನಲ್ಲಿ ಕೆಲಸದ ಅನುಭವ ಇಲ್ಲದಿದ್ದರು ನಡೆಯುತ್ತೆ ಆದರೆ
sccm ನ ತ೦ತ್ರಜ್ನಾದ ವಾತವಾರಣದಲ್ಲಿ ಕೆಲಸ ಮಾಡಿದ ಅನುಭವ ಇರಲೆಬೇಕು
ದಯವಿಟ್ಟು ನಿಮ್ಮ ರೆಸುಮೆ ಅನ್ನು udyoga12@gmail.com ಗೆ ತಕ್ಷಣ ಕಳುಹಿಸಿ
ಬೇಕಾಗಿದ್ದಾರೆ – ಬಿಇ ಅನನುಭವಿಗಳು (ಫ್ರೆಶರ್ಸ್) – ಕನ್ನಡಿಗರಿಗೆ ಆದ್ಯತೆ
-ಅರವಿಂದ್
ಮೊಬ್ಯೆಲ್ ತಂತ್ರಜ್ನಾನದಲ್ಲಿ ವಿಶ್ವದಲ್ಲೇ ಎರಡನೇ ಅತ್ಯುತ್ತಮ ಸಂಸ್ಥೆಯಲ್ಲಿ ಉದ್ಯೋಗವಕಾಶ
೨೦೧೧ರಲ್ಲಿ ಪಾಸಾದ ಬಿಇ ತಾಂತ್ರಿಕ ಶಿಕ್ಷಣದಲ್ಲಿ ಟೆಲಿಕಾಂ ಮಾಹಿತಿ ತಂತ್ರಜ್ಣಾನ, ಎಲೆಕ್ಟ್ರಾನಿಕ್ಸ್ ವಿಭಾಗದವರು ಬೇಕಿರುವವರು
ಸಂಸ್ಥೆಯ ಹೆಸರು : ರಿನೆಸೆಸ್ ಮೊಬ್ಯೆಲ್ ಇಂಡಿಯಾ ಪ್ರ್ಯೆ ಲಿ. ಬೆಂಗಳೂರು
ವಿದ್ಯಾರ್ಹತೆ : ಬಿಇ
ತಾಂತ್ರಿಕೆ ವಿಶೇಷತೆ : ಯೂನಿಕ್ಸ್ ಮತ್ತು ಸ್ಕ್ರಿಪ್ಟ್ಸ್ ಭಾಷೆಯ ಅರಿವು
ನಿಮ್ಮ ಪರಿಚಯ ಪತ್ರಗಳನ್ನು aravindhDOTraoATgmailDOTcomಗೆ ಕಳುಹಿಸಿಕೊಡಿ..
* * * * * * * *
ತುರ್ತಾಗಿ ಬೇಕಾಗಿದ್ದಾರೆ – ಪಧವೀಧರರು ಟ್ಯಾಲಿ – ಕನ್ನಡಿಗರಿಗೆ ಮಾತ್ರ
-ನಾಗರಾಜ್ ಬೂದಿಕೋಟೆ
ಸಂಸ್ಥೆಯ ಹೆಸರು : ಸಂಚಯನೆಲೆ ಸ್ವಯಂಸೇವಾ ಸಂಸ್ಥೆ,
ಕೆಲಸದ ಸ್ಥಳ : ಆನೇಕಲ್, ಬೆಂಗಳೂರು ಗ್ರಾಮಾಂತರ
ವಿದ್ಯಾರ್ಹತೆ : ಪದವೀಧರರು, ಬಿ.ಕಾಂನವರಿಗೆ ಪ್ರಾಶಸ್ತ್ಯ
ಅನುಭವ : ೧ ರಿಂದ ೨ ವರ್ಷ
ಅರ್ಹತೆ : ಟ್ಯಾಲಿ ಅಕೌಂಟಿಂಗ್ ತಂತ್ರಾಂಶ ಗೊತ್ತಿರಬೇಕು, ಕನ್ನಡ ಕೀಲಿಮಣೆ ಗೊತ್ತಿರಬೇಕು
ನೇತಾಜಿ ಕಣ್ಮರೆ – ಒಂದು ವಿಶ್ಲೇಷಣೆ
-ಆನಂದ್ ಪ್ರಸಾದ್
ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತ ಕಂಡ ಅಪ್ರತಿಮ, ಧೀಮಂತ ನಾಯಕ. ನಾಯಕತ್ವದ ಎಲ್ಲ ಗುಣಗಳೂ ಮೇಳೈಸಿದ್ದ ಅಪ್ರತಿಮ ಸೇನಾನಿ. ಹೀಗಾಗಿ ನೇತಾಜಿಯವರ ಕಣ್ಮರೆಯನ್ನು ಇಂದಿಗೂ ನಂಬಲು ನಮ್ಮ ದೇಶದ ಎಷ್ಟೋ ಜನ ಸಿದ್ಧರಿಲ್ಲ. ನೇತಾಜಿಯವರು ೧೯೪೫ರ ಆಗಸ್ಟ್ ೧೮ ರಂದು ತೈಹೊಕು (ಇಂದಿನ ತೈವಾನ್ ದೇಶದಲ್ಲಿ) ಎಂಬಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತರಾದರು ಎಂದು ಹೇಳಲಾಗುತ್ತಿದೆ. ಇದನ್ನು ಎಷ್ಟೋ ಜನ ನಂಬುವುದಿಲ್ಲ. ಹೀಗಾಗಿ ಈ ರಹಸ್ಯವನ್ನು ಭೇದಿಸಲು ಎನ್.ಡಿ.ಎ. ಆಡಳಿತಾವಧಿಯಲ್ಲಿ ಸಮಿತಿ ನೇಮಕ ಮಾಡಲಾಗಿತ್ತು. ಆ ಸಮಿತಿ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ, ಆ ದಿನ ಯಾವುದೇ ವಿಮಾನ ಅಪಘಾತ ನಡೆದ ದಾಖಲೆ ಲಭ್ಯವಿಲ್ಲ ಎಂದು ಹೇಳಿತು. ನೇತಾಜಿಯವರು ರಶಿಯಕ್ಕೆ ಹೋಗಿ ಅಲ್ಲಿ ಬಂಧಿಯಾಗಿ ಸೈಬೀರಿಯಾದಲ್ಲಿ ಸೆರೆವಾಸದಲ್ಲಿ ಸತ್ತರು ಎಂದು ಇನ್ನೊಂದು ವದಂತಿಯೂ ಇದೆ. ಹೀಗಾಗಿ ರಶಿಯಕ್ಕೂ ಆ ಸಮಿತಿ ತನಿಖೆಗಾಗಿ ಹೋಗಿ ಅಲ್ಲಿ ಸರಿಯಾದ ಸಹಕಾರ ಸಿಗದೇ ವಾಪಸಾಯಿತು ಎಂದು ಹೇಳಲಾಯಿತು. ರಷಿಯದಲ್ಲಿ ರಾಯಭಾರಿಯಾಗಿದ್ದ, ನಂತರ ಭಾರತದ ರಾಷ್ಟ್ರಪತಿಯಾಗಿದ್ದ ರಾಧಾಕೃಷ್ಣನ್ ಅವರು ಸೆರೆವಾಸದಲ್ಲಿದ್ದ ನೇತಾಜಿಯವರನ್ನು ಭೇಟಿ ಮಾಡಿದ್ದರು, ಆದರೆ ನೇತಾಜಿಯವರ ಬಿಡುಗಡೆಯ ಬಗ್ಗೆ ಅಂದಿನ ಸರ್ಕಾರ ಕಾಳಜಿ ವಹಿಸಲಿಲ್ಲ ಎಂಬ ವದಂತಿಯೂ ಇದೆ. ಇದೆಲ್ಲ ನಂಬಿಕೆಗೆ ಅರ್ಹ ಎನಿಸುವುದಿಲ್ಲ ಏಕೆಂದರೆ ರಾಧಾಕೃಷ್ಣನ್ ಅವರು ಬೋಸರ ಭೇಟಿ ಮಾಡಿದ್ದಿದ್ದರೆ ಅದನ್ನು ಮುಚ್ಚಿಡುತ್ತಿರಲಿಲ್ಲ ಏಕೆಂದರೆ ರಾಧಾಕೃಷ್ಣನ್ ಒಬ್ಬ ತತ್ವಜ್ಞಾನಿ ಹಾಗೂ ಪ್ರಾಧ್ಯಾಪಕರಾಗಿದ್ದವರು.
ಕಳೆದೂ ಕೊಂಡ ಪ್ರೇಮಿಯುತಾನೆ ಹೃದಯದ ಬೆಲೆಯ ತಿಳಿದಿರುತಾನೆ…
– ಮನೋರಂಜನ್
ಮಾತಾಗಿ ಬಂದದ್ದು ಮನಸಲ್ಲೇ ಉಳಿದಿತ್ತು
ನಂಬಿಕೆಯ ಕನ್ನಡಿಯಲಿ; ಸುಳ್ಳಿನ
ಪ್ರತಿಬಿಂಬ ಕಾಡಿತ್ತು.
ಕತ್ತಿ ಕತೆ
-ಉಮೇಶ್ ದೇಸಾಯಿ
ಅವರ ಕೈಯ್ಯಲ್ಲಿನ ಕತ್ತಿ ಮಿನುಗಿತ್ತು..
ತುದಿಗೆ ಕೇಕಿನ ಬೆಣ್ಣೆ ಮೆತ್ತಿತ್ತು..
ಹಿಂದಿರುವ ನೊಣ , ಕಾವಿ ಧರಿಸಿತ್ತು
ಗುಂಯ್ಗುಡುತ್ತಿತ್ತು…
ಬಜೆಟ್ಟಿನ ಸಮಯ
– ರಾಘವೇಂದ್ರ ಗುಡಿ
ಇನ್ನೇನು ದೂರ ಇಲ್ಲ. ತುಂಬಾ ಸನಿಹದಲ್ಲಿದೆ. ಇನ್ನು ಕೆಲವು ದಿನಗಳು ಕಳೆದರೂ ಸಾಕು ಅನೇಕರಿಗೆ ನಗಲು, ಉಣ್ಣಲು, ಮಲಗಲು, ನೆಂಟರಿಷ್ಟರ ಮನೆಗೆ ಹೋಗಲು ಕೂಡ ಸಮಯವಿರುವುದಿಲ್ಲ! ಅನೇಕರಿಗೆ ರಾತ್ರಿ ನಿದ್ರೆ ಇರುವುದಿಲ್ಲ; ಕೆಲವರಿಗೆ ಇದ್ದಕ್ಕಿದ್ದಂತೆ ದಾನ ಮಾಡುವ ಗುಣ ಹುಟ್ಟುವುದು! ಹಲವರಿಗೆ ತಮಗೂ ಮನೆಯಿದೆ, ಮಡದಿ ಇದ್ದಾಳೆ, ಮಕ್ಕಳು ಇವೆ, ಹಾ ತನ್ನ ಮೇಲೆ ಇವರೆಲ್ಲರೂ ಅವಲಂಬಿಸಿದ್ದಾರೆ, ತನಗೂ ಜವಾಬ್ದಾರಿ ಇದೆ, ಆರೋಗ್ಯವಿದೆ ಅನಾರೋಗ್ಯವೂ ಬರಬಹುದು ಎಂಬುವುದೆಲ್ಲ ನೆನಪಾಗುವ ಸಮಯ!! ನೆನಪಾಗದಿದ್ದರೂ ಅಷ್ಟೇ ಹೋಯಿತು, ತೆರಿಗೆಯನ್ನು ಉಳಿಸಲು ಏನು ಮಾಡಬೇಕು ಎಂಬುವುದೊಂದೆ ಚಿಂತೆ. ಹಾ ಈಗ ಅರ್ಥವಾಗುತ್ತಿದೆಯಾ? ಹಾ ಹೌದು ಮಾರಾಯ್ರೆ ನಿಮ್ಮ ಊಹೆ ನಿಜ, ಮಾರ್ಚ ಬರುತ್ತಿದೆ, ಆದಾಯ ತೆರಿಗೆ ಕಟ್ಟಲು, ಉಳಿಸಲು ಕೊನೆ ಅವಕಾಶ! ಬಹುಷಃ ಈಗ ಅನೇಕರಿಗೆ ಸೆಕ್ಷನ್ ೮೦ಅ, ೮೦ಆ, ೮೦ಉ ಎಂಬವವು ಇವೆ ಎಂಬುವುದು ನೆನಪಾಗುತ್ತಿರುತ್ತೆ. ಇನ್ನು ಕೆಲವು ದಂಡಪಿಂಡ, ಧೂರ್ತ, ಪುಂಡ, ೪೨೦ಗಳು ಅನೇಕ ಇನ್ಸುರೆನ್ಸ್ ಎಜೆಂಟ್‌ಗಳನ್ನು, ಎನ್‌ಜಿಓಗಳನ್ನು ಸಂಪರ್ಕಿಸಿ ನಿಮಗೂ ಸ್ವಲ್ಪ ಹಣವನ್ನು ಕೊಡುತ್ತೇನೆ ನನಗೆ ದಯಮಾಡಿ ಖೊಟ್ಟಿ ರಸೀದಿಗಳನ್ನು ಕೊಡಿ (ಆದಾಯ ತೆರಿಗೆ ಇಲಾಖೆಗೆ ನೀಡಿ, ತೆರಿಗೆ ವಿಮುಕ್ತಿಯನ್ನು ಪಡೆಯಲು) ಎಂದು ಹಲ್ಲು ಗಿಂಜುತ್ತಾ ’ಸೆಟ್ಟಿಂಗ್’ ಮಾಡಲು ಎಡತಾಕಲೂ ಶುರುಮಾಡಬಹುದು. ಇದು ಕೇವಲ ಜನರಿಗೆ ಅಥವ ಸಂಸ್ಥೆಗಳಿಗೆ ಮಾತ್ರವಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೂ ಸಂಧಿಕಾಲ, ಲವಲವಿಕೆಯ ಕಾಲ!
ಕಳೆದ ಬಾರಿಯ ಬಜೆಟ್ ಪುಸ್ತಕವನ್ನು ಜೋಪಾನವಾಗಿ ಎತ್ತಿ, ಹಿಡಿದಿರುವ ಧೂಳು, ಗೆದ್ದಲುಗಳನ್ನು ಮೃದುವಾಗಿ ಕೊಡವಿ, ಕೆಮ್ಮುತ್ತಾ ಅದನ್ನು ಮೊದಲ ಬಾರಿಗೆ ತೆರೆದು ಅದರಲ್ಲಿರುವ ಕಳೆದ ವರ್ಷದ ಹೊಸ ಯೋಜನೆಗಳ ಆಶ್ವಾಸನೆಗಳನ್ನು ನೆನಪು ಮಾಡಿಕೊಂಡು ಮತ್ತೊಮ್ಮೆ ಭವ್ಯ ಭಾರತದ ದಿವ್ಯ ಪ್ರಜೆಗಳಿಗೆ ಹಳೆ ಬಟ್ಟೆಯಿಂದ ತಯಾರಿಸಿದ ಹೊಸ ಟೊಪ್ಪಿಗೆಯನ್ನು ಹಾಕುವ ಬಗೆಯನ್ನು ಹುಡುಕುವ ಪರ್ವಕಾಲವಿದು!! ಮತ್ತಷ್ಟು ಓದು 
“ಸ್ಥಾನ” ಕೇಳಿಕೊಂಡು ಹೋಗಿ “ಮಾನ” ಕಳೆದುಕೊಂಡ ಯಡಿಯೂರಪ್ಪ
ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನ ಮೊದಲ ಬಾರಿಗೆ ಅಧಿಕಾರಕ್ಕೆ ತಂದ ಶ್ರೀಯುತ ಯಡಿಯೂರಪ್ಪನವರು ಈನ್ನ ಪಕ್ಷದ ಹೈಕಮಾಂಡ್ ಗೆ ಬೇಡವಾಗಿದ್ದಾರೆ. ಅಕ್ರಮ ಆಸ್ತಿ ಕಬಳಿಕೆ ಪ್ರಕರಣದಲ್ಲಿ ಸಿಲುಕಿ ಜೈಲು ಊಟದ ರುಚಿ ಸವಿದು ಹೊರಬಂದಿರುವ ಯಡ್ಡಿ ಅವರಿಗೆ ಮತ್ತೊಮ್ಮೆ ಬಿ ಜೆ ಪಿ ಯಲ್ಲಿ ತನ್ನ ಹಿಡಿತವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ.ಬಿಜೆಪಿ ರಾಷ್ಟೀಯ ಅದ್ಯಕ್ಷರಾದ ನಿತಿನ್ ಗಡ್ಕರಿ ಅವರು ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಅವರನ್ನ ಬೇಟಿಯಾದ ಯಡ್ಡಿಯವರು “ಗಡ್ಕರಿ ಸಾಹೇಬ್ರೆ ಮುಖ್ಯಮಂತ್ರಿ ಸ್ಥಾನ ಕೊಡದಿದ್ರು ನಡಿತ್ರಿ ಆದ್ರೆ ರಾಜ್ಯಾದ್ಯಕ್ಷ ಸ್ಥಾನ ಕೊಡಿ ಸರ್ ” ಎಂದು ಗೋಗರೆದರು, ಆದರೆ ನಮ್ಮ ರಾಷ್ಟ್ರದ್ಯಕ್ಷರು ಸರ್ ನಿಮ್ಮ ಸಾಧನೆ ಅಪಾರ ನಿಮ್ಮ ನೇತೃತ್ವದಲ್ಲಿ ನಮ್ಮ ಮಂತ್ರಿಗಳ ಸಾಧನೆ ದೇಶ ವಿದೇಶದ ಪೇಪರ್ ಗಳ ಮುಖ್ಯಪುಟದಲ್ಲಿ ಬಂದಿದೆ ಹಾಗೆ ಒಬ್ಬ ಜೈಲ್ ನಿಂದ ಹೊರಬಂದರೆ ಮತ್ತೊಬ್ಬ ಜೈಲ್ ಕಡೆ ಹೋಗುತ್ತಿದ್ದ ಆದ್ದರಿಂದ ಸರ್ ನೀವ್ ಆರಾಮವಾಗಿ ವಿಶ್ರಾಂತಿ ಪಡೆದು ಮೊಮ್ಮಕ್ಕಳ ಜೊತೆ ಆಟಡ್ತಿರಿ ರಾಜಕೀಯ ಸಾಕು. ನಮ್ಮ ಸದಾನಂದ ಗೌಡರು ಬಿ ಜೆ ಪಿ ಯನ್ನ ಅಧಿಕಾರದಲ್ಲಿ ಮುಂದುವರಿಸಲಿ ಎಂದು ಹೇಳಿದ್ದೆ ತಡ ಯಡ್ಡಿ ಸಾಹೇಬರು ಬಲ ಪ್ರದರ್ಶನಕ್ಕೆ ತನ್ನ ಹುಟ್ಟು ಹಬ್ಬದ ದಿನ 70 ಕೆಜಿ ಕೇಕ್ ರೆಡಿ ಮಾಡಿಬಿಟ್ರು .. ಅದನ್ನ ತನ್ನ ಬೆಂಬಲಿಗರ ಹಾಗು ಅಭಿಮಾನಿ ದೇವರುಗಳ ಮುಂದೆ ಚೂರಿಯಿಂದ ಕಟ್ ಮಾಡೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮ ಬಹಳ ಜೋರಾಗೆ ನಡಿತು ಸ್ವಾಮೀಜಿಗಳು ಕೆಲವೊಂದು ಶಾಸಕರು ಆಪ್ತರು ಸೇರಿಕೊಂಡು ಹ್ಯಾಪಿ ಬರ್ತ್ ಡೇ ಹಾಡಿದ್ದೆ ಹಾಡಿದ್ದು ಯಡ್ಡಿ ಫುಲ್ ಕುಶಿ.
ಆದರೆ ಬರ್ತ್ ಡೇ ಪಾರ್ಟಿಗೆ ಬಂದವರೆಷ್ಟು ಜನ ? ಯಡಿಯೂರಪ್ಪ ಅವರಿಂದ ಎಲ್ಲ ರೀತಿಯ ಸಹಾಯ ಪಡೆದ ಅವರ ಆಪ್ತ ನೆಂಟರು ಯಡ್ಡಿ ಅವರನ್ನ ನಡು ಬೀದಿಯಲ್ಲಿ ಬಿಟ್ಟು ಹೋದರೆ ? ಅನ್ನೋ ಪ್ರಶ್ನೆಗಳು ಕಾಡತೊಡಗಿದೆ..ರಾಜಕೀಯ ಅನ್ನೋದು ಅಧಿಕಾರ ಇರುವ ತನಕ ಅಷ್ಟೇ ಅನ್ನೋದಕ್ಕೆ ಯಡ್ಡಿ ಅವರ ಜೀವನವೇ ಸಾಕ್ಷಿ ..ರಾಜಕೀಯದಲ್ಲಿ ಸ್ವಲ್ಪ ಯಾಮಾರಿದರು ತನ್ನ ಹಿಡಿತ ಸಡಿಲಗೊಳ್ಳುವುದು ಅನ್ನೋದಕ್ಕೆ ಯಡ್ಡಿ ಸಾಹೇಬರ ಜೀವನ ಪ್ರತ್ಯಕ್ಷ ಸಾಕ್ಷಿಯಾಗಿ ಕಾಣಿಸುತ್ತೆ .ಯಡಿಯೂರಪ್ಪ ಎಷ್ಟಾದರೂ ಸುಮ್ಮನೆ ಕೂರುವ ಮನುಷ್ಯನಲ್ಲ ರಾಜಕೀಯ ಆಟ ಯಡ್ಡಿ ಅವರಿಗೆ ಹುಟ್ಟಿನಿಂದಲೇ ಬಂದ ಕಲೆಯಾಗಿದೆ ಸದಾನಂದ ಗೌಡ ರ ಕುರ್ಚಿಯನ್ನ ಅಲುಗಾಡಿಸಲು ಏನೆಲ್ಲಾ ಮಾಡಬೇಕು ಅದನ್ನೆಲ್ಲ ಮಾಡುದರಲ್ಲಿ ನೋ ಡೌಟ್. ಮತ್ತಷ್ಟು ಓದು 




