ಅಭಿಮಾನಿಯ ಹರಕೆ ಫಲಿಸಿದಾಗ !
ರಶ್ಮಿ ಕಾಸರಗೋಡು
ಸಚಿನ್ ತೆಂಡೂಲ್ಕರ್ ಅಬ್ಬರದ ಆಟ ಮತ್ತು ದಾಖಲೆಗಳ ಬಗ್ಗೆ ಪತ್ರಿಕೆಗಳಲ್ಲಿ, ಬ್ಲಾಗ್್ಗಳಲ್ಲಿ ಸಾಕಷ್ಟುಜನ ಈಗಾಗಲೇ ಬರೆದಿದ್ದಾರೆ. ಆದರೆ ಸಚಿನ್ ಬಗ್ಗೆ ಪ್ರತಿಯೊಬ್ಬರಿಗೂ ಹೇಳಲು ಒಂದೊಂದು ವಿಷಯ ಇದ್ದೇ ಇರುತ್ತದೆ. ಇಂದು ಮುಂಜಾನೆ ರಾತ್ರಿ ಪಾಳಿ ಮುಗಿಸಿ ಆಫೀಸಿನಿಂದ ಹೊರಡಬೇಕು ಅನ್ನುವಷ್ಟು ಹೊತ್ತಿಗೆ ಅಂದ್ರೆ 3.30ಕ್ಕೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ 15ನೇ ಪುಟದಲ್ಲಿ 20 years ago…ಅಂತಾ ಒಂದು ಸುದ್ದಿ ಓದಿದೆ. ಅದೂ 20 ವರ್ಷಗಳ ಹಿಂದೆ ಸಚಿನ್ ಬರೆದ ಒಂದು ಪತ್ರದ ಸುದ್ದಿ. ಆಗಲೇ ನನಗೆ ಸಚಿನ್ ಬರೆದ ಪತ್ರದ ಬಗ್ಗೆ ಬರೆಯೋಣ ಅಂತಾ ಅನಿಸಿದ್ದು. ಸಚಿನ್ ತೆಂಡೂಲ್ಕರ್್ನ್ನು ಈವರೆಗೆ ಟಿವಿಯಲ್ಲಿಯೇ ನೋಡಿದ್ದು. ಕಾಲೇಜು ಮುಗಿಸಿ ಕೆಲಸಕ್ಕೆ ಸೇರುವ ವರೆಗೂ ಸಚಿನ್ ಆಟಗಳನ್ನು ತಪ್ಪದೆ ನೋಡುತ್ತಿದ್ದೆ. ಕೆಲಸಕ್ಕೆ ಸೇರಿದ ಮೇಲೆ ಮ್ಯಾಚ್ ನೋಡೋಕೆ ಸಮಯ ಸಿಕ್ತಾ ಇಲ್ಲ. ಬರೀ ಸುದ್ದಿ ಮಾಡುವುದೇ ಆಯ್ತು.
ತಲೆ ಮರೆಸಿಕೊ೦ಡಿದ್ದ “ಕಾ೦ಗ್ರೆಸ್” ರೇಡಿಯೋ
ಸಾತ್ವಿಕ್ ಎನ್. ವಿ.
ಸ್ವಾತಂತ್ರ ಹೋರಾಟದಲ್ಲಿ ಹಲವು ಮಾದರಿಗಳಲ್ಲಿದ್ದವು. ಅನೇಕ ರೀತಿಯ ಪ್ರಯತ್ನಗಳಿದ್ದವು. ಸಾಧ್ಯವಿದ್ದ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಸ್ವಾತಂತ್ರ್ಯ ಹೋರಾಟವನ್ನು ಉತ್ತೇಜಿಸುವುದು ಅಂದಿನ ಹೋರಾಟಗಾರರ ಉದ್ದೇಶವಾಗಿತ್ತು. ಅ೦ಥ ಸಮಯದಲ್ಲಿ ಸಮೂಹ ಮಾಧ್ಯಮ ಕ್ರಾ೦ತಿಯ ಶಿಶುವಾದ ರೇಡಿಯೋವನ್ನು ಮರೆಯಲು ಸಾಧ್ಯವೇ? ಆದರೆ ಬ್ರಿಟಿಷರ ವಸಾಹತುವಾಗಿದ್ದ ಭಾರತದಲ್ಲಿ ರೇಡಿಯೋ ಪ್ರಸಾರವು ಕೂಡಾ ಬ್ರಿಟಿಷ್ ಅಧಿಕಾರದ ಕೈಕೆಳಗೆ ಇತ್ತು. ಇ೦ಥ ಸಮಯದಲ್ಲಿ ರೂಪಿಸಿದ ಯೋಜನೆಯೇ- ಹೋರಾಟಗಾರರೇ ಪ್ರತ್ಯೇಕ ರೇಡಿಯೋ ಪ್ರಸಾರ ಆರ೦ಭಿಸುವುದು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಹೋರಾಟದ ಯಾವುದೇ ಕುರುಹುಗಳನ್ನು ಉಳಿಯದ೦ತೆ ಅ೦ದಿನ ಬ್ರಿಟಿಷ್ ಶಾಹಿ ಅಳಿಸಿಹಾಕುತ್ತಿತ್ತು.
‘ಕ್ವಿಟ್ ಇ೦ಡಿಯಾ’ ಚಳುವಳಿಯ ನಾಯಕರುಗಳಿಗೆ ರೇಡಿಯೋ ಅಥವಾ ಪತ್ರಿಕೆಗಳ ಸ೦ಪರ್ಕ ಇರಲಿಲ್ಲ. ಆಲ್ ಇ೦ಡಿಯಾ ರೇಡಿಯೋವು ಅ೦ದಿನ ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅಜೆ೦ಡಾವನ್ನು ಕಾರ್ಯಗತಗೊಳಿಸುವ ಯ೦ತ್ರವಾಗಿತ್ತು. ವೃತ್ತ ಪತ್ರಿಕೆಗಳು ಕೂಡಾ ತೀವ್ರ ಸೆನ್ಸಾರ್ ಗೆ ಒಳಗಾಗಿದ್ದುವು. ಆ ಸ೦ದರ್ಭದಲ್ಲಿ ನೇತಾರರಿಗೆ ಸಿಕ್ಕ ಏಕೈಕ ಪರ್ಯಾಯವೆ೦ದರೆ ‘ರೇಡಿಯೋ ಪ್ರಸಾರ’. ಅದು ಕೂಡಾ ತಲೆ ಮರೆಸಿಕೊ೦ಡು ಪ್ರಸಾರಕ ಬಳಸಿ ಪ್ರಸಾರ ಮಾಡುವುದಾಗಿತ್ತು. ಅ೦ದಿನ ಯುವ ಹೋರಾಟಗಾರರಾದ ಉಷಾ ಮೆಹ್ತ, ವಿಠಲ ದಾಸ್ ಕಾಕರ್, ಚ೦ದ್ರಕಾ೦ತ್ ಜಾವೇರಿ ಸೇರಿ ಕಾ೦ಗ್ರೆಸ್ ರೇಡಿಯೋವನ್ನು ೩ ಸೆಪ್ಟೆ೦ಬರ್ ೧೯೪೨ರ೦ದು ೪೨.೩೪ ಕಿರು ತರ೦ಗಾ೦ತರಗಳ ಮೇಲೆ ಆರ೦ಭಿಸಿದರು. ‘ಭಾರತ ಒ೦ದೆಡೆಯಿ೦ದ’ ಎ೦ಬ ಆರ೦ಭ ಘೋಷಣೆಯೊ೦ದಿಗೆ ಈ ರೇಡಿಯೋ ಕಾರ್ಯಾಚರಿಸುತ್ತಿದ್ದರೂ ಇದರ ಮೂಲ ಸ್ಥಳ ಮು೦ಬೈಯೇ ಆಗಿತ್ತು. ಈ ಪ್ರಸಾರವು ನವೆ೦ಬರ್ ೧೧ ರವರೆಗೆ ಮು೦ದುವರಿಯಿತು. (ಒಕ್ಟೋಬರ್ ೧೫ ರಿ೦ದ ೧೭ರ ವರೆಗೆ ಪ್ರಸಾರ ಶಕ್ತಿ ಹೆಚ್ಚಿಸುವ ಸಲುವಾಗಿ ಪ್ರಸಾರ ನಿಲ್ಲಿಸಲಾಗಿತ್ತು). ಪ್ರಸಾರಕವನ್ನು ಬ್ರಿಟಿಷ್ ಪೋಲಿಸರು ಗುರುತಿಸದಂತೆ ಬೇರೆ ಬೇರೆ ಜಾಗಗಳಿಗೆ ಸ್ಥಳಾ೦ತರ ಮಾಡಲಾಗುತಿತ್ತು. ಆದರೂ ಬ್ರಿಟಿಷ್ ಪೋಲೀಸರು ಇದರ ಇರುವಿಕೆಯನ್ನು ಪತ್ತೆ ಹಚ್ಚಿ ಪ್ರಸಾರ ನಿಲ್ಲಿಸಿದರು.
ಈ ಪ್ರಕರಣದ ಕುರಿತು ಪೋಲೀಸ್ ಆಯುಕ್ತರು ತಮ್ಮ ವರದಿಯಲ್ಲಿ ಈ ಕೃತ್ಯದ ಯಶಸ್ಸಿಗೆ ಗು೦ಪಿನ ನಾಯಕರಾದ ರಾಮ ಮನೋಹರ ಲೋಹಿಯಾರೇ ನೇರ ಬಾಧ್ಯಸ್ಥರು ಮತ್ತು ಇದಕ್ಕೆ ಬೇಕಾಗುವ ಹಣವನ್ನು ಸಂಗ್ರಹಿಸಿದ್ದಾರೆ ಎಂದು ದೂರು ದಾಖಲಿಸಿದರು. ಹೀಗೆ ಮುಂದೆ ಉತ್ಸಾಹಿ ರೇಡಿಯೋ ಪ್ರಸಾರಕರೇ ಖೈದಿಗಳಾದರು ಮತ್ತು ತನಿಖೆಗೆ ಗುರಿಯಾದರು. ಇದರಲ್ಲಿ ಖಾಕರ್ ಅವರನ್ನು ಮುಖ್ಯ ಆರೋಪಿ ಎ೦ದು ಗುರುತಿಸಲಾಯಿತು. ಅಶಾ೦ತಿಯನ್ನು ಹರಡುವುದು ಮತ್ತು ಹೋರಾಟದ ಪ್ರಯತ್ನವನ್ನು ಉತ್ತೇಜಿಸುವುದಕ್ಕಾಗಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರೆ, ಇನ್ನುಳಿದವರು ಒಂದು ವರ್ಷ ಸೆರೆಮನೆ ವಾಸ ಅನುಭವಿಸಿದರು. ಹೀಗೆ ರಾಷ್ಟ್ರ್‍ಈಯವಾದಿಗಳು ಅಧಿಕೃತ ಸರಕಾರಿ ಸಂಸ್ಥೆಯಾದ ಆಲ್ ಇ೦ಡಿಯಾ ರೇಡಿಯೋಕ್ಕೆ ಪರ್ಯಾಯವಾಗಿ ನಡೆಸಿದ ಏಕಾ೦ಗಿ ಹೋರಾಟ ಕೊನೆಗೊ೦ಡಿತು.
ಚಿತ್ರ ಕೃಪೆ :ಆಫರ್ ಪೋಟೋ.ಕಾಂ
ಅತ್ಯಾಚಾರ ಮತ್ತು ಕಾರಣಗಳು
ರೂಪಾ
ಇಂದು ಅಕಸ್ಮಾತ್ ಆಗಿ ಟೀನಾ ರವರ ಬ್ಲಾಗ್ಗೆ ಭೇಟಿ ನೀಡಿದೆ ಅಲ್ಲಿ ನಡೆಯುತಿದ್ದ ಕೆಲವು ಚರ್ಚೆಗಳು ಸ್ವಾರಸ್ಯ ಹಾಗು ಯೋಚಿಸಬೇಕಾದ ಗಂಭೀರ ವಿಚಾರಗಳೇ ಸರಿ.
ಹೆಣ್ಣಿನ ಮೇಲೆ ಅತ್ಯಾಚಾರ ಯಾಕೆ ನಡೆಯುತ್ತದೆ ಎಂಬುದನ್ನು ಮೊದಲು ವಿಶ್ಲೇಷಿಸಿದಾಗ ಈ ಕಾರಣಗಳು ನನಗೆ ಹೊಳೆದವು. ನನ್ನ ಜೀವನ ಯಾತ್ರೆಯಲ್ಲಿ ಕೆಲವು ಇಂತಹ ಸಂಗತಿಗಳೂ ನಡೆದಿವೆ. ಅದನ್ನೂ ಇಲ್ಲಿ ಬರೆದ್ದಿದ್ದೇನೆ.
ಸಂಧರ್ಭ:
ಗಂಡಸರು ಅನುಕೂಲಸಿಂಧುಗಳು.
ಇಂದು ಕ್ಲೋಸ್ ಫ್ರೆಂಡ್ ಆಗಿರುವುವನೇ ನಾಳೆ ರೇಪಿಸ್ಟ್ ಆಗಬಹುದು.
ನಾನು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿನ ಲೈಬ್ರರಿಯಲ್ಲಿ ಶನಿವಾರ (ಅಂದು ರಜಾ) ಭೇಟಿ ಕೊಟ್ಟಿದ್ದೆ.
ಯಾರು ಇರಲಿಲ್ಲ ವಾದ್ದರಿಂದ ಆತನ ಬುದ್ದಿಗೇನಾಯಿತೊ ಮೇಲೆ ಬೀಳಲು ಹವಣಿಸಿದ.
ಇಷ್ಟು ದಿನ ಕ್ಲೋಸ್ ಆಗಿ ಮಾತಾಡುತ್ತಿದ್ದೆಯಲ್ಲ . ಇಂದು ಇದಕ್ಕೂ ಒಪ್ಪಿಕೋ ಎಂದ./ ಹ್ಯಾಗೊ ಅವನಿಂದ ತಪ್ಪಿಸಿಕೊಂಡು ಬಂದಾಗಲಷ್ಟೆ ನೆಮ್ಮದಿಯ ಉಸಿರು ಬಿಟ್ಟೆ. ಯಾರಿಗೂ ಹೇಳಲಿಲ್ಲ . ಹೇಳಿದರೆ ನೀನ್ಯಾಕೆ ರಜಾದಿನದಲ್ಲಿ ಹೋದೆ . ನಿನ್ನದೇ ತಪ್ಪು ಅಂತಾರೆ.
ಹೆಣ್ಣಿನ ಸ್ಥಿತಿ
ಅಕಸ್ಮಾತ್ ಹೆಣ್ಣು ಗಂಡಿಗಿಂತ ಆರ್ಥಿಕವಾಗಿಯೋ ಅಥವ ದೈಹಿಕವಾಗಿಯೊ ದುರ್ಬಲಳಾಗಿದ್ದರೆ ಅವಳು ಗಂಡಿಗೆ ಬಡಿಸಿಟ್ಟ ಎಲೆ ಎಂದುಕೊಳ್ಳುತ್ತಾನೆ . ಸಾಮಾನ್ಯವಾಗಿ ಹುಡುಗಿಯರು ತಮ್ಮ ಕೆಲಸದಲ್ಲಿ ಅಥವ ಕಾಲೇಜಿನಲ್ಲಿ ಇಂತಹ ಸಂಧರ್ಭ ಎದುರಿಸಬೇಕಾಗುತ್ತದೆ.
ಗಂಡಿನ ಸ್ಥಿತಿ
ಗಂಡು ಕೆಲವೊಮ್ಮೆ ಇಲ್ಲೀವರೆಗೆ ಹೆಣ್ಣನ್ನೂ ಕಾಣದಿದ್ದಾಗ(ಬ್ರಹ್ಮಚಾರಿಗಳಾಗಿದ್ದವರು) ಮತ್ತು ತಮ್ಮ ಕಾಮ ತೀವ್ರತೆಯನ್ನು ಹತೋಟಿಯಲ್ಲಿಟ್ಟುಕೊಳ್ಳದೇ ಇದ್ದಾಗ ಅತ್ಯಾಚಾರಕ್ಕೆ ದಾರಿ ಯಾಗಬಹುದು. ಮತ್ತಷ್ಟು ಓದು 
ವೋಟ್ ಬ್ಯಾಂಕ್ ಜಪ – ಕಾನೂನು ಸುವ್ಯವಸ್ಥೆ ನೆಪ !
– ರಾಕೇಶ್ ಶೆಟ್ಟಿ
ಈ ಲೇಖನವನ್ನ ಬರೆದಿದ್ದು ಕಳೆದ ವರ್ಷ ರಾಜೀವ್ ಗಾಂಧೀಯವ್ರ ಹುತಾತ್ಮರಾದ ದಿನದಂದು,ಆದರೆ ಇಂದಿಗೂ ಇದು ಪ್ರಸ್ತುತವೇ,ಬಹುಶಃ ಈ ಕಾಂಗ್ರೆಸ್ಸ್ ಸರ್ಕಾರ ಈ ಅವಧಿ ಮುಗಿದ ಮೇಲೂ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರೆ ಇನ್ನ ೬-೭ ವರ್ಷ ಈ ಲೇಖನ ಪ್ರಸ್ತುತವೇ! ಯಾವ್ದಪ್ಪ ಇದು ಅಂತ ವಿಷ್ಯಾ ಅಂತೀರಾ,ಅದೇ ಸ್ವಾಮಿ ಅಫ಼್ಜಲ್ ಗುರು ಅನ್ನೋ ಉಗ್ರಗಾಮಿಯನ್ನ ಗಲ್ಲಿಗೇರಿಸೊದು.ಮೊನ್ನೆ ಕಸಬ್ಗೆ ಹೈ-ಕೊರ್ಟ್ ಗಲ್ಲು ಶಿಕ್ಷೆ ನೀಡಿದೆ ಅಂದಾಗ ನನಗೆ ಮತ್ತೆ ಮತ್ತೆ ನೆನಪಾಗಿದ್ದು ಅಫ಼್ಜಲ್! (ಹಳೇ ಲೇಖನದಲ್ಲಿ ಕಸಬ್ ಇರಲಿಲ್ಲ ಈಗ ಅವನು ಸೇರಿಕೊಂಡಿದ್ದಾನೆ.ಮತ್ತೆ ಇದೇ ಲೇಖನವನ್ನ ಪ್ರಕಟಿಸುವ ದಿನ ಬಾರದಿರಲಿ 😦 )
ಇಂದು ರಾಜೀವ್ ಗಾಂಧೀ ಹುತಾತ್ಮರಾದ ದಿನ.ಆದರೆ ನನಗೆ ಈಗ ನೆನಪಾಗುತ್ತಿರುವವರು ಅವರಮ್ಮ ಇಂದಿರಾ.’ಇಂದಿರಾ ಗಾಂಧಿ!’ ಬಹುಷಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ರಕ್ಷಣೆಯ ವಿಷಯದಲ್ಲಿ ಯಾವ ರಾಜಿ ಮಾಡಿಕೊಳ್ಳದೆ ಮುನ್ನುಗ್ಗುತಿದ್ದ ಅವರಂತ ಇನ್ನೊಬ್ಬ ಪ್ರಧಾನಿ ಈ ದೇಶಕ್ಕೆ ಮತ್ತಿನ್ಯಾರು ಸಿಕ್ಕಿಲ್ಲ ಅಂದರೆ ಅದು ಉತ್ಪ್ರೇಕ್ಷೆಯಾಗಲಾರದು!
ವಂಚನೆಗೆ ಮತ್ತೊಂದು ಹೆಸರು “ಅವಳು”
ಅವಳ ಹೆಸರು ನಯನ(ಹೆಸರು ಬದಲಾಯಿಸಲಾಗಿಲ್ಲ). ನನ್ನ ಸ್ನೇಹಿತನೊಬ್ಬ ಆಕೆಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ. ಅವಳು ಇರೋದು ಬೆಂಗಳೂರಿನಲ್ಲಿ. ಆತ ದಕ್ಷಿಣ ಕನ್ನಡ ಜಿಲ್ಲೆಯಲ್ಲೊಂದು ಊರಿನಲ್ಲಿ. ತಕ್ಕಮಟ್ಟಿಗೆ ಸ್ಥಿತಿವಂತ. ಅದಕ್ಕೆ ಇರಬೇಕು. ಅವಳು ಅವನನ್ನು ಆಯ್ಕೆ ಮಾಡಿಕೊಂಡದ್ದು. ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದ. ನಾನು ಕಾಲ್ ಮಾಡಿದಾಗ ಏನು ಮಾಡ್ತಾ ಇದ್ದಿ ಅಂತ ಕೇಳಿದಾಗ “ಅವಳ ಫೋಟೊ ನೋಡ್ತಾ ಇದ್ದಿನಿ” ಅಂತ ನಗುತ್ತಿದ್ದ. ಅವನದ್ದು ಮಗುವಿನ ಮನಸ್ಸು. ಅವಳು ಸೆಟ್ ಆದಾಗಲೇ ಮದುವೆ, ಭವಿಷ್ಯ ಎಲ್ಲ ಯೋಚಿಸಿದ್ದ. ಮುಂದಿನ ವರ್ಷವೇ ಮದುವೆಯಾಗ್ತಿನಿ ಅಂತ ಮಾತುಕೊಟ್ಟಿದ್ದ.
ಅದು ಆತನ ಮೊದಲ ಪ್ರೀತಿ. ದಿನಕ್ಕೆ ಕಮ್ಮಿ ಎಂದರೂ 5-6 ಬಾರಿ ಫೋನ್ ಮಾಡಿ ಮಾತನಾಡುತ್ತಿದ್ದರು. ಇತ್ತೀಚೆಗೊಮ್ಮೆ ಭೇಟಿಯೂ ಆಗಿದ್ದರು. ಇವರಿಬ್ಬರ ಪರಿಚಯವಾದದ್ದು ಅವನ ಊರಿನವಳೊಬ್ಬಳ ಸಹಾಯದಿಂದ. ಆಕೆಯ ನೆರೆಮನೆಯ ಹುಡುಗನಾದ್ದರಿಂದ ಒಂದಿಷ್ಟು ಸಲುಗೆ ಜಾಸ್ತಿಯಿತ್ತು. ನನಗೆ ಲವ್ ಸ್ಟೋರಿ ಕೇಳುವುದಕ್ಕೆ ತುಂಬಾ ಇಷ್ಟ. ಅವನು ದಿನಾ ನಂಗೆ ರಿಪೋರ್ಟ್ ಮಾಡುತ್ತಿದ್ದ. ಆದರೆ ಮೊನ್ನೆ “ಅವಳನ್ನು ಬಿಟ್ಟು ಬಿಡು” ಅಂದೆ. ಅವನು ಓಕೆ ಅಂದ.
ಮಂಗಳಮುಖಿಯರಿಗೂ ದಕ್ಕಿದ ಹಕ್ಕುಗಳು
ಭಾರತದಲ್ಲಿ ಫೆಬ್ರವರಿ 9ರಿಂದ ಪ್ರಾರಂಭವಾಗಿರುವ ಜನಗಣತಿಯಲ್ಲಿ ಸ್ತ್ರೀ ಪುರುಷರ ಜೊತೆಗೆ ಪ್ರಥಮ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರನ್ನೂ ಸೇರಿಸಲು ನಿರ್ಧರಿಸಿರುವುದನ್ನು ಸ್ವಾಗತಿಸಿರುವುದಾಗಿ ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಹೇಳಿದೆ.
ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜನಗಣತಿ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಕಾರ್ಯಕರ್ತರು ಸರಕಾರಕ್ಕೆ ತಾವು ಸಲ್ಲಿಸುತ್ತಿರುವ ಬೇಡಿಕೆಗಳ ಬಗ್ಗೆ ವಿವರ ನೀಡಿದರು.
ಭಾರತದಲ್ಲಿ 1872ರಿಂದ ಜನಗಣತಿ ಪ್ರಾರಂಭವಾಗಿ ಪ್ರತಿ 10 ವರ್ಷಗಳಿಗೊಮ್ಮೆ ನಡೆಯುತ್ತಿದೆ. ಸರಣಿಯಲ್ಲಿ 15ನೆಯ ಹಾಗೂ ಸ್ವಾತಂತ್ರ್ಯ ಬಳಿಕದ 7ನೇ ಜನಗಣತಿ ಇದಾಗಿದೆ. ಈಗಾಗಲೇ ಜನಗಣತಿಗೆ ಸಕಲ ಸಿದ್ದತೆಗಳಾಗಿದ್ದು ಸ್ತ್ರೀ ಪುರುಷರ ಜೊತೆಗೆ ಭಾರತ ಇತಿಹಾಸದಲ್ಲೇ ಪ್ರಥಮ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರನ್ನು ದಾಖಲಿಸಲು ಮುಂದಾಗಿದೆ. ಇದನ್ನು ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಸ್ವಾಗತಿಸುತ್ತದೆ ಎಂದು ವೇದಿಕೆ ಹರ್ಷ ವ್ಯಕ್ತಪಡಿಸಿತು.
ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ : ಈ ವೇದಿಕೆಯು ಕರ್ನಾಟದ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದವರ ರಾಜ್ಯಮಟ್ಟದ ಪ್ರಜಾಸತ್ತಾತ್ಮಕ ಸಂಸ್ಥೆಯಾಗಿದ್ದು, 22ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯನಿರತವಾಗಿದೆ. ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಲೈಂಗಿಕ ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ಸಂರಕ್ಷಿಸುವುದು ಮತ್ತು ಅವರ ಪರವಾಗಿ ಸರ್ಕಾರ, ಮಾದ್ಯಮ, ಸರ್ಕಾರೇತರ ಸಂಸ್ಥೆಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳೊಂದಿಗೆ ವಕಾಲತ್ತು ನಡೆಸುತ್ತಿದೆ. ವೇದಿಕೆಯು ಲೈಂಗಿಕ ಅಲ್ಪಸಂಖ್ಯಾತರ ವಿಷಯದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು, ಸಾಮಾಜಿಕ ಚಳವಳಿಗಳೊಂದಿಗೆ ಕೈ ಜೋಡಿಸಿ ಸಾರ್ವಜನಿಕ ಕಾರ್ಯಕ್ರಮಗಳ ಮುಖಾಂತರ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಸಮಾಜ ಬದಲಾವಣೆ ಕೆಲಸ ಮಾಡುತ್ತಿದೆ. ಮತ್ತಷ್ಟು ಓದು 
ರಾಜ್ಯಸಭೆಗೆ ಕನ್ನಡೇತರರು – ಎಷ್ಟು ಸರಿ ?
ಸುದ್ದಿ ನಿನ್ನೆ ಪತ್ರಿಕೆಗಳಲ್ಲಿ, ಟಿವಿಯಲ್ಲಿ ನೋಡಿದೆ. ಹೀಗೆ ಕನ್ನಡ, ಕರ್ನಾಟಕಕ್ಕೆ ಯಾವ ಕೊಡುಗೆಯನ್ನು ನೀಡದ, ಯಾವ ಸೇವೆಯನ್ನು ಮಾಡದ, ಕನ್ನಡಿಗರ ಬದುಕಿನ ಯಾವ ಸಮಸ್ಯೆಗಳ ಬಗ್ಗೆಯೂ ಒಂದಿನಿತು ಅರಿವಿಲ್ಲದ ಒಬ್ಬ ಮಾಜಿ ಚಿತ್ರ ನಟಿ, ಈ ರೀತಿ ರಾಜ್ಯ ಸಭೆ ಅನ್ನುವ ಒಕ್ಕೂಟ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಲೆಂದೇ ಹುಟ್ಟಿದ ವ್ಯವಸ್ಥೆಗೆ, ಆಯ್ಕೆಯಾಗುವುದನ್ನು ನೋಡಿದಾಗ ಈ ರಾಜ್ಯಸಭೆ ಅನ್ನುವ ವ್ಯವಸ್ಥೆಯ ಅರ್ಥವಾದರೂ ಏನು? ಅದು ಯಾಕಾಗಿ ಬೇಕಾಗಿದೆ ಅನ್ನುವ ಪ್ರಶ್ನೆ ಮನದಲ್ಲಿ ಹುಟ್ಟಿತು.ರಾಜ್ಯ ಸಭೆ ಹುಟ್ಟಿದ್ದು ಯಾಕೆಂದು ಗೊತ್ತೇ?
ರಾಜ್ಯಸಭೆ ಅನ್ನುವುದು ಮಾಂಟೆಗೊ-ಚೆಮ್ಸಫರ್ಡ್ ಅನ್ನುವ ಬ್ರಿಟಿಷ್ ಸರ್ಕಾರದ ಅಧಿಕಾರಿಗಳ ವರದಿಯನ್ನಾಧರಿಸಿ 1918ರಲ್ಲಿ ಹುಟ್ಟಿದ ವ್ಯವಸ್ಥೆ. ಸ್ವಾತಂತ್ರ್ಯ ಬಂದ ನಂತರ ಲೋಕಸಭೆ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯಸಭೆ ಅನ್ನುವ Council of States ಮುಂದುವರೆಯಬೇಕೇ, ಅದರ ಅಗತ್ಯ ಇದೆಯೇ ಅನ್ನುವ ಬಗ್ಗೆ ಸುದೀರ್ಘವಾದ ಚರ್ಚೆ ನಡೆದಿತ್ತು. ಭಾರತದಂತ ಹೆಜ್ಜೆ ಹೆಜ್ಜೆಗೂ ವೈವಿಧ್ಯತೆಯುಳ್ಳ ದೇಶಕ್ಕೆ ಒಕ್ಕೂಟ ವ್ಯವಸ್ಥೆಯೇ ಸರಿಯಾದ ವ್ಯವಸ್ಥೆ ಅಂಬುದನ್ನು ಅಂದಿನ ರಾಜಕೀಯ ನಾಯಕರು ಒಪ್ಪಿ ಭಾರತವನ್ನು ಒಂದು ಒಕ್ಕೂಟ ವ್ಯವಸ್ಥೆಯೆಂದೇ ಘೋಷಿಸಿದ್ದರು. ಜನರಿಂದಲೇ ನೇರವಾಗಿ ಆಯ್ಕೆಯಾಗುವ ಲೋಕಸಭೆಯೊಂದಕ್ಕೆ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗದು, ಆದ್ದರಿಂದ ರಾಜ್ಯಸಭೆ ಅನ್ನುವ ಪ್ರತಿ ರಾಜ್ಯದ ಜನ ಪ್ರತಿನಿಧಿಗಳಿಂದಲೇ ಆಯ್ಕೆಯಾಗಿ ಬರುವ ವಿಶೇಷ ಪ್ರತಿನಿಧಿಗಳ ಸಂಸ್ಥೆಯನ್ನು ಲೋಕಸಭೆಗೆ complimentory ಎಂಬಂತೆ ಇಟ್ಟುಕೊಳ್ಳಲಾಯಿತು. ಅದರ ಸ್ಥಾಪಿತ ಉದ್ದೇಶವನ್ನು ರಾಜ್ಯಸಭೆಯ ವೆಬ್ ಸೈಟ್ ಹೀಗೆ ಬಣ್ಣಿಸುತ್ತೆ (ಕೆಳಗೆ ಕೆಲ ಅಂಶಗಳನ್ನು ನಾನೇ ಹೈಲೈಟ್ ಮಾಡಿದ್ದೇನೆ)
ಕಾಂಗ್ರೆಸ್ ಸಂಸದ ಭಾರತಕ್ಕೆ ಸೇರಿದವನಲ್ಲವೇ?
ಮಹೇಶ ಪ್ರಸಾದ ನೀರ್ಕಜೆ
ಅರುಣಾಚಲ ಪ್ರದೇಶ ಪ್ರವಾಸದಲ್ಲಿರುವ ಬಾಬಾ ರಾಮ್ ದೇವ್ ಸಮಾವೇಶಕ್ಕೆ ಬಂದಿದ್ದ ಅಲ್ಲಿನ ಕಾಂಗ್ರೆಸ್ ಸಂಸದ ನಿನಾಂಗ್ ಎರಿಂಗ್ ಬಾಬಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂಬುದು ಇತ್ತೀಚಿನ ಸುದ್ದಿ. “ಯು ಬ್ಲಡಿ ಇಂಡಿಯನ್”, “ಸಾಲೆ ಕುತ್ತೇ, ಮೈಕ್ ತೋಡ್ ದೂಂಗಾ, ಸ್ಟೇಜ್ ಫೋಡ್ ದೂಂಗಾ, ಯೋಗಾ ಕರ್ನೇ ಆಯೀ ಹೇ, ಯೋಗಾ ಕರ್. ಕರಪ್ಷನ್ ಕೆ ಬಾರೇ ಮೇ ಬೋಲೇಗಾ ತೋ ಮಾರ್ ಡಾಲೂಗಾ!” ಇತ್ಯಾದಿ. ಈ ಬಗ್ಗೆ ಸಾಕಷ್ಟು ವಿವರಗಳು ಸಿಗುತ್ತಿವೆ ಅಂತರ್ಜಾಲದಲ್ಲಿ. ನಮ್ಮ ಟಿವಿ ಮಾಧ್ಯಮಗಳು ಭಾರತ ಬಾಂಗ್ಲಾದೇಶ ಕ್ರಿಕೆಟ್ ಪಂದ್ಯದಲ್ಲಿ ಹೇಗೆ ಭಾರತ ಬಾಂಗ್ಲಾದೇಶದ ಮೇಲೆ ಸೇಡು ತೀರಿಸಿಕೊಂಡಿತು ಎಂದು ವಿಮರ್ಷಿಸುವುದರಲ್ಲಿ ಬ್ಯುಸಿಯಾಗಿದ್ದವು. ಅವುಗಳಿಗೆ ಹೇಗೆ ಈಶಾನ್ಯ ಭಾರತದ ಮಂದಿ ಹೇಗೆ ಭಾರತದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಬೇಕಿಲ್ಲ. ಇರಲಿ. ಈಗ ಪ್ರಶ್ನೆಯೇನೆಂದರೆ ಕಾಂಗ್ರೆಸ್ ಸಂಸದ ಬಾಬಾರನ್ನು “ಯೂ ಬ್ಲಡಿ ಇಂಡಿಯನ್”ಅನ್ನಬೇಕಿದ್ದರೆ ಆತ ಇಂಡಿಯನ್ ಅಲ್ಲವೇ? ಎಲ್ಲಿಯವನು ಆತ? ಚೈನಾದವನೇ? ಅಥವಾ ಬೋಡೋ ದೇಶದವನೇ? ಅಥವಾ ಬೇರೆ ಪಾಶ್ಚಿಮಾತ್ಯ ದೇಶದವನೇ?
ಮತ್ತಷ್ಟು ಓದು 
ಯಾರಿಗೂ ಅರ್ಥವಾಗದ ಬಾಪೂ …!
–ಶ್ರೀಹರ್ಷ ಸಾಲಿಮಠ
ಇದನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಸ್ವತಃ ನನಗೆ ಹೇಳಿದ್ದು. ಈ ಘಟನೆ ನಡೆಯುವಾಗ ಶಾಸ್ತ್ರಿಗಳು ಖುದ್ದು ಎದುರಿಗೇ ಇದ್ದರಂತೆ.
ಸ್ವಾತಂತ್ರ್ಯದ ಸಮಯ. ಭಾರತದ ಪ್ರಧಾನಿ ಯಾರಾಗಬೇಕೆಂದು ನಿರ್ಧರಿಸಲು ನಡೆದ ಶಾಸನ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ನೆಹರೂ ಸರ್ದಾರ್ ಪಟೇಲರ ಎದುರಿಗೆ ೧೧-೧ ಮತಗಳ ಅಂತರದಿಂದ ಸೋತಿದ್ದರು. ಸ್ವಯಂ ನೆಹರೂ ಬಿಟ್ಟು ಬೇರೆ ಯಾರೂ ನೆಹರೂರವರಿಗೆ ಮತ ಹಾಕಿರಲಿಲ್ಲ!
ಇದಾದ ಮರುದಿನ ನೆಹರೂ ಗಾಂಧೀಜಿಯ ಬಳಿ ಬಂದು ನಿಮ್ಮ ಪ್ರಭಾವ ಬಳಸಿ ತಮ್ಮನ್ನು ಪ್ರಧಾನಿಯನ್ನಾಗಿ ಮಾಡಬೇಕೆಂದು ಕೇಳಿಕೊಂಡರು. ಅದಕ್ಕೆ ಗಾಂಧೀಜಿ “you are independent now. think independently. take independent decisions. why do you need my help?” ಎಂದರು. ನೆಹರೂಗೆ ನಿರಾಶೆಯಾಯಿತು. ವಾಪಸು ಹೊರಡಲು ಅನುವಾದರು. ಎರಡು ಹೆಜ್ಜೆ ಬಾಗಿಲ ದಿಕ್ಕಿನಲ್ಲಿ ನಡೆದು ಗಾಂಧೀಜಿಯ ತಿರುಗಿ “If I don’t become prime minister I will burn this country”ಎಂದರು. ಗಾಂಧೀಜಿ ಉತ್ತರಿಸದೆ ತಮ್ಮ ಕೆಲಸದಲ್ಲಿ ಮಗ್ನರಾದರು. ಮರುದಿನ ಸರ್ದಾರ್ ಪಟೇಲರು ಗಾಂಧೀಜಿಯವರ ಬಳಿ ಬಂದರು. ಸ್ವಲ್ಪ ಮಾತಾದ ಮೇಲೆ “ನೆಹರೂ ಇಲ್ಲಿಗೆ ಬಂದಿದ್ದರೆ?” ಎಂದು ಕೇಳಿದರು.
ಬಾಪೂ “ಹೌದು” ಎಂದರು.
“ಏನು ಹೇಳಿದರು ನೆಹರೂ?”
ಮತ್ತಷ್ಟು ಓದು 
ಪ್ರೀತಿಗೆ ಕಣ್ಣು ಬೇಡ ಒಂದಿಷ್ಟು ಮಣ್ಣಾದರೂ ಬೇಡವೇ?
ಪ್ರೇಮಿಗಳ ದಿನಾಚರಣೆಗೆ ಧಿಕ್ಕಾರ…..! ಇದು ಭಾರತದಲ್ಲಿ ಈ ದಿನಾಚರಣೆಯ ಒಟ್ಟೊಟ್ಟಿಗೆ ಬೆಳೆದು ಬಂದ ಒಂದು ಘೋಷಣೆ ಮತ್ತು ಕ್ರಿಯೆ. ಇಲ್ಲಿ ವಿರೋಧ ಮತ್ತು ಪರ ಒಟ್ಟೊಟ್ಟಿಗೆಯೇ ಸಾಗಿದೆ, ಸಾಗುತ್ತಿದೆ ಮತ್ತು ಮುಂದೆಯೂ ಸಾಗಬಹುದು.ವಿಪರ್ಯಾಸವೆಂದರೆ ಧಿಕ್ಕಾರದ ಕೂಗು ಜೋರಾದಂತೆ ಸ್ವೀಕಾರದ ಬಯಕೆ ಕೂಡ ಏರುತ್ತಿದೆ. ಅದು ಹಾಗೆಯೇ, ಮುಚ್ಚಿಟ್ಟಿರುವುದರ ಬಗೆಗೆ ಹೆಚ್ಚು ಕುತೂಹಲ. ಇದು ಮಾನವನ ಸಹಜ ಸಂಸ್ಕ್ರತಿ. ಕಾಲದ ಹರಿವು ಮುಂದೆ ಮುಂದೆ…. ಹಿಂದೆಯಲ್ಲ, ಅನ್ನುವುದು ’ಹೀಗೂ ಒಂದು ದಿನ’ ಬೇಕು ಎಂಬುವವರ ಅಂಬೋಣ. ಆದರೆ ಯಾವುದು ಮುಂದೆ, ಯಾವುದು ಹಿಂದೆ ಎಂಬುದು ನಿರ್ದಿಷ್ಟ ವ್ಯಾಖ್ಯೆಯಿಲ್ಲದ ’ಕಾಲಗುಣ’. ಒಟ್ಟಿನಲ್ಲಿ ನನ್ನಂಥವರ ಸದ್ಯದ ಸ್ಥಿತಿ, ಮೂರು ಮಾರ್ಗದ ಮಧ್ಯೆ ಮದ್ಯ ಕುಡಿದು ತೂರಾಡುವವನಂತಾಗಿದೆ!
***
ಪ್ರವೀಣ್ ಗೊಡ್ಕಿಂಡಿಯ ಕೊಳಲನಾದ ಅಲೆ ಅಲೆಯಾಗಿ ತೇಲಿ ವಾಲಿ ನನ್ನ ಸುತ್ತ ಮತ್ತು ನನ್ನೊಳಗೊಂದು ಭಾವವಲಯ ಸ್ರೃಷ್ಟಿಸಿ ಬಿಡುತ್ತದೆ. ಹೌದು, ನಾನು ಕೊಳಲನ್ನು ಪ್ರೀತಿಸುತ್ತೇನೆ. ನುಡಿಸುವವನನಲ್ಲ! ಅದನ್ನು ಯಾರು ನುಡಿಸಿದರೂ ನನಗಷ್ಟೆ! ನಾ ಝಾಕೀರ್ ಹುಸೇನ್‌ನನ್ನು ಪ್ರೀತಿಸುತ್ತೇನೆ. ತಬಲವನ್ನಲ್ಲ! ಮತ್ತಷ್ಟು ಓದು 








