ವಿಷಯದ ವಿವರಗಳಿಗೆ ದಾಟಿರಿ

Recent Articles

15
ನವೆಂ

ಪೇಟೆ ಸಾಕು, ನಡೀರಿ ಹಳ್ಳಿಗೆ!

ಮಹೇಶಕುಮಾರ್ ನೀರ್ಕಜೆ
ಹಳ್ಳಿ ಮೇಲೋ ಪಟ್ಟಣ ಮೇಲೋ? ಶಾಲೆಗಳ ಚರ್ಚಾಕೂಟಗಳಲ್ಲಿ ಇಂಥಾದ್ದೊಂದು ಚರ್ಚೆ ಸಾಮಾನ್ಯವಾಗಿ ಇರುತ್ತಿತ್ತು. ಈ ಪ್ರಶ್ನೆಗೆ ಆಗ ಪರಿಹಾರ ಸಿಕ್ಕಿತ್ತೇ? ಗೊತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಂತೂ ಉತ್ತರವಿಲ್ಲದಂತಾಗಿದೆ. ನಿಖರವಾದ ಉತ್ತರವೊಂದನ್ನು ನಿರೀಕ್ಷಿಸುವುದು ಸಾಧುವೂ ಅಲ್ಲ. ಯಾಕೆಂದರೆ ಈ ಪ್ರಶ್ನೆಗೆ ಉತ್ತರ ಬಹುತೇಕವಾಗಿ ವೈಯಕ್ತಿಕ ಆಸಕ್ತಿ, ಕುಟುಂಬದ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ ಇತ್ಯಾದಿ ಅಂಶಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಹಳ್ಳೀಲಿ ಯಾರನ್ನಾದರೂ ಈ ಪ್ರಶ್ನೆ ಕೇಳಿದರೆ ನೂರಕ್ಕೆ ತೊಂಭತ್ತರಷ್ಟು ಜನ ಪೇಟೇನೇ ಒಳ್ಳೆದು ಎನ್ನಬಹುದು. ಅದಕ್ಕೆ ಕಾರಣಗಳೂ ಸಾಕಷ್ಟು ಇರಬಹುದು. ಅದೇ ಪಟ್ಟಣಗಳಲ್ಲಿ ವಾಸಿಸುತ್ತಿರುವವರು ಅಲ್ಲಿನ ಜಂಜಾಟದಿಂದ ಬೇಸತ್ತಿರುತ್ತಾರೆ ಮತ್ತು ಹಳ್ಳಿ ಜೀವನದ ಬಗ್ಗೆ ಒಂದು ರೀತಿಯ ಕೃತ್ರಿಮವಾದ ಸುಂದರ ಕಲ್ಪನೆಗಳನ್ನು ಇಟ್ಟುಕೊಂಡಿರುತ್ತಾರೆ. ಈ ಲೇಖನದ ಉದ್ದೇಶ ಹಳ್ಳಿ ಮತ್ತು ಪಟ್ಟಣದ ಮಧ್ಯದ ಆಯ್ಕೆಯ ಬಗ್ಗೆ ಅಲ್ಲ, ಬದಲಾಗಿ ಇತ್ತೀಚೆಗೆ ಭಾರತೀಯ ಸಾಮಾಜದಲ್ಲಿ ಮತ್ತು ಪರಿಸರದಲ್ಲಾದ ಬದಲಾವಣೆಗಳ ಕುರಿತು ಒಂದು ಜಿಜ್ಞಾಸೆ – ಸಮಸ್ಯೆಗಳು, ಪರಿಹಾರಗಳು ಹಾಗೂ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿರುವವರ ಬಗ್ಗೆ ಒಂದಿಷ್ಟು ವಿವರಗಳು.

ಮೊದಲಿಗೆ ಕೆಲವೊಂದು ಸರಳ ಮಾಹಿತಿಗಳು. ೨೦೦೮  ಅಂಕಿ-ಅಂಶಗಳ ಪ್ರಕಾರ, ಭಾರತದ ಒಟ್ಟು ಜನಸಂಖ್ಯೆಯ ಶೇ ೩೦ ರಷ್ಟು ಜನ ಪಟ್ಟಣಗಳಲ್ಲಿ (ಮಹಾನಗರಗಳು, ನಗರಗಳು) ವಾಸಿಸುತ್ತಿದ್ದಾರೆ. ಈ ಸಂಖ್ಯೆ ೨೦೩೦ ರ ಹೊತ್ತಿಗೆ ಶೇ ೪೦ ಏರುತ್ತದೆ. ಈಗಿನ ಗತಿಯಲ್ಲೇ ಜನಸಂಖ್ಯೆ ಏರುತ್ತಿದ್ದರೆ ೨೦೩೦ ಕ್ಕೆ ಒಟ್ಟು ಜನಸಂಖ್ಯೆ ೧೪೭ ಕೋಟಿಗಳಷ್ಟಾಗುತ್ತದೆ ಮತ್ತು ಆ ಹೊತ್ತಿಗೆ ಶೇ ೪೦, ಅಂದರೆ ಸುಮಾರು ೬೦ ಕೋಟಿ ಜನ ಪಟ್ಟಣಗಳಲ್ಲಿ ವಾಸಿಸುತ್ತಾರೆ! ಇದು ಈಗಿನ ಪಟ್ಟಣಿಗರ ಸಂಖ್ಯೆ (ಸುಮಾರು ೩೫ ಕೋಟಿ) ಗಿಂತ ೨೫ ಕೊಟಿ ಹೆಚ್ಚು. ಮತ್ತಷ್ಟು ಓದು »

13
ನವೆಂ

ಕನ್ನಡವೇ ಸತ್ಯ-ನಿತ್ಯ ಸತ್ಯ……

ಅರೆಹೊಳೆ ಸದಾಶಿವ ರಾವ್

ಕನ್ನಡ ಡಿ೦ಡಿಮ ಮತ್ತೆ ಮೊಳಗಿದೆ. ಇಲ್ಲಿ‘ಮತ್ತೆ’ ಯಾಕೆ೦ದರೆ ಪ್ರತೀ ವರ್ಷ ಕನ್ನಡ ಡಿ೦ಡಿಮ ಮೊಳಗುವುದು ಕೇವಲ ನವೆ೦ಬರ್‌ನಲ್ಲಿ ಮಾತ್ರ. ಈ ಒ೦ದು ತಿ೦ಗಳು ಎಲ್ಲೆಡೆಯಲ್ಲಿಯೂ, ಎಲ್ಲರ ಬಾಯಲ್ಲೂ ಕನ್ನಡ.. ಕನ್ನಡ.. ಕನ್ನಡ !ಮತ್ತೆ ಹನ್ನೊ೦ದು ತಿ೦ಗಳು ಆ ಮಾತಿಗೆ ದೀರ್ಘ ರಜೆ. ನವೆ೦ಬರ್ ಕಳೆದು ಡಿಸೆ೦ಬರ್ ಬ೦ದರೆ, ಚಳಿಗಾಲದ ಆರ೦ಭದೊಡನೆ, ಕನ್ನಡ ಚಳಿಹಿಡಿಸಿಕೊ೦ಡ೦ತೆ ಮೂಲೆಗೆ ಕುಳಿತುಕೊಳ್ಳುತ್ತದೆ. ಅದಕ್ಕೆ೦ದೇ ಈ ‘ಮತ್ತೆ’ ಇಲ್ಲಿ ಪ್ರಸ್ತುತ.

ಇದೆಲ್ಲಾ ಯಾಕೆ ಎನ್ನುವುದಕ್ಕೂ ಈ ನವೆ೦ಬರ್‌ನಲ್ಲಿಯೇ ಉತ್ತರದ ಹುಡುಕಾಟ ಆರ೦ಭವಾಗುತ್ತದೆ. ನಮಗೆ ನೇರವಾಗಿ ಸಿಗುವುದು ಸರ್ಕಾರ. ಎಲ್ಲದರ೦ತೆ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ, ಅಭಿಮಾನ ಶೂನ್ಯತೆ, ನಿರ್ವೀರ್ಯತೆ…..ಇತ್ಯಾದಿ ಅರ್ಥಕೋಶದ ಪದಬಳಕೆ ಮಾಡಿ, ಸರ್ಕಾರವನ್ನು ಬೈದು ನವೆ೦ಬರ್ ತಿ೦ಗಳು ಮುಗಿಸಿ, ಮತ್ತೆ ಸುಮ್ಮನಾಗುತ್ತೇವೆ. ನಿಜಕ್ಕೂ ನಮ್ಮ ಭಾಷೆಯ ಬಗ್ಗೆ ನಾವು ತೆಗೆದುಕೊಳ್ಳಬೇಕಾದ ಯಾವ ಜವಾಬ್ದಾರಿಗಳೂ ಇಲ್ಲವೇ ಎ೦ಬುದು ಇ೦ದಿನ ಪ್ರಶ್ನೆ.

ಒ೦ದು ವಿಚಾರವನ್ನು ನಾನಿಲ್ಲಿ ಪ್ರಸ್ತಾಪಿಸಬಯಸುತ್ತೇನೆ. ಈ ಹಿ೦ದೆಯೂ ನಾನಿದರ ಬಗ್ಗೆ ಹೇಳಿದ್ದೆ. ಅ೦ತರಾಷ್ಟ್ರೀಯ ಸ೦ಸ್ಥೆಯೊ೦ದಕ್ಕೆ ನಾನು ಸೇರಿದ ನ೦ತರ ಅಲ್ಲಿ ಒಮ್ಮೆ ಕನ್ನಡದಲ್ಲಿ ಮಾತಾಡುವ ಸುಯೋಗ ಒದಗಿತು. ಹೆಚ್ಚಾಗಿ ಆ೦ಗ್ಲಮಯವಾದ ಆ ಸಭೆಯಲ್ಲಿ ನಾನು ಕನ್ನಡದಲ್ಲಿಯೇ ಮಾತಾಡಿದೆ. ಅದು ತು೦ಬಾ ಜನರನ್ನು ಬಹು ಬೇಗ ಮುಟ್ಟಿತು-ತಟ್ಟಿತು. ಇತ್ತೀಚೆಗೆ ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆ, ಭಾಷಣದ  ಆರೋಗ್ಯಕರ ಬೆಳವಣಿಗೆ ಎಲ್ಲೆಡೆಯಲ್ಲೂ ಆರ೦ಭವಾಗಿದೆ.ಕೇವಲ ಆ೦ಗ್ಲಭಾಷೆಯಲ್ಲಿಯೇ ಇರುತ್ತಿದ್ದ ಹೆಚ್ಚಿನೆಲ್ಲಾ ಕಾರ್ಯಕ್ರಮಗಳು ಕನ್ನಡೀಕರಣಗೊಳ್ಳುತ್ತಾ ಬ೦ದಿವೆ. ಈ ಬೆಳವಣಿಗೆ ‘ನನ್ನಿ೦ದ’ ಆದದ್ದು ಎ೦ದು ನಾನು ಹೇಳುತ್ತಿಲ್ಲ. ಕನ್ನಡ-ಅ೦ದರೆ ನಮ್ಮ ಮಾತ್ರಭಾಷೆ ನಮ್ಮ ಹೃದಯವನ್ನು ತಟ್ಟಿದಷ್ಟು ಬೇಗನೇ, ಬೇರೆ ಭಾಷೆ ತಟ್ಟುವುದಿಲ್ಲ. ತಿಳಿದೋ ತಿಳಿಯದೆಯೋ ನಾವು ಬೇರೆ ಭಾಷೆಗಳನ್ನು, ಮುಖ್ಯವಾಗಿ ಆ೦ಗ್ಲವನ್ನು ನೆಚ್ಚಿಕೊ೦ಡಿರುತ್ತೇವೆ. ಮತ್ತಷ್ಟು ಓದು »

13
ನವೆಂ

ರೈನ್ ಕೋಟಾಯಣ…..

ಇರ್ಷಾದ್ ಎಂ.ವೇಣೂರು

ಬೈಕ್ ಯಾವತ್ತೂ ಜಾಲಿ ರೈಡ್ ಗೆ ಫೇಮಸ್. ಬೈಕ್ ಇದ್ರೆ ಬೇಕಾದ ಟೈಮಿಗೆ ಹೋಗಬಹುದು ಬೇಕಾದ ಟೈಮಿಗೆ ಬರಬಹುದು ಎಂಬುದು ಯುವಜನತೆ ಕಂಡುಕೊಂಡ ಸುಲಭ ವಿಧಾನ. ಆಫೀಸ್ ಗೆ ಹೋಗಲು ಯಾವತ್ತೂ ಲೇಟಾಗುತ್ತಿದ್ದ ಹಿರಿತಲೆಗಳೆಲ್ಲಾ ಟ್ರಾಫಿಕ್ ಸಹವಾಸ ಉಸ್ಸಪ್ಪ ಎಂದು ಬೈಕ್ ನಲ್ಲಿ ಸುಯ್ಯನೆ ಟ್ರಾಫಿಕ್ ಪಾಸ್ ಮಾಡುವ ಶಾರ್ಟ್ ಕಟ್ ವಿಧಾನ ಹುಡುಕಿಕೊಂಡು ಫುಲ್ ಖುಷ್ ಆಗಿದ್ದಾರೆ. ಕಾಲೇಜು ಹೋಗುವ ಹುಡುಗಿಯೂ ಸಿಟಿ ಬಸ್ ನಲ್ಲಿ ಉಸಿರುಗಟ್ಟುವಂತೆ ನಿಂತುಕೊಂಡು ಹೋಗುವುದಕ್ಕಿಂತ ಸ್ಕೂಟಿಯಲ್ಲಿ ಹೋಗುವುದೇ ಉತ್ತಮವೆಂದುಕೊಂಡಿದ್ದಾಳೆ.

ಎಲ್ಲಾ ಸರಿ ಸ್ವಾಮಿ ಆದರೆ ಮಳೆ ಬಂದರೆ ಇವರಿಗೆಲ್ಲಾ ಕೊಡೆ ಹಿಡಿಯಲು ಆ ಪರಮಾತ್ಮ ಬರುತ್ತಾನಾ ಎಂದು ಕೇಳಬೇಡಿ. ಇದೆಯಲ್ಲಾ ರೈನ್ ಕೋಟ್. ಹ್ಮ್… ಮಳೆಯಲ್ಲಿ ರೈನ್ ಕೋಟ್ ಹಾಕಿಕೊಂಡು ರೈಡ್ ಮಾಡುವಾಗ ಸಿಗುವ ಮಜಾ ಕೊಡೆ ಹಿಡಿದುಕೊಂಡು ನಡೆದಾಡುವಾಗಲು ಸಿಗುವುದಿಲ್ಲ. ಹೆಲ್ಮೆಟ್ ಹಾಕಿಕೊಂಡು, ಜಾಕೆಟ್ ಝಿಪ್ ಹಾಕಿ, ಪ್ಯಾಂಟ್ ಎಕ್ಸ್ೞ್ೞ್ ಲೇಟರ್ ಕೊಟ್ಟರೆ ಹೊರಗಡೆ ಎಷ್ಟೇ ಮಳೆ ಇದ್ದರೂ ಲೋಕದ ಪರಿವೇ ಇರುವುದಿಲ್ಲ. ಎಲ್ಲೋ ಗಾಜಿನ ಮನೆಯೊಳಗೆ ಕೂತು ಮಳೆಯನ್ನು ನೋಡಿದ ಹಾಗಾಗುಗುತ್ತದೆ.
ರೈನ್ ಕೋಟ್ ನಲ್ಲೂ ಹಲವಾರು ವಿಧವಿದೆ. ಕಾಲೇಜು ಹೋಗುವ ಹುಡುಗ ಮಾತ್ರ ಅಲ್ಲ ಆಫೀಸ್ ಗೆ ಸೀರೆ ಉಟ್ಟಕೊಂಡು ಹೋಗುವ ನಾರಿಯೂ ರೈನ್ ಕೋಟ್ ತೊಡುತ್ತಾಳೆ ಎಂದು ರೈನ್ ಕೋಟ್ ತಯಾರಕರಿಗೆ ಗೊತ್ತಿದೆ. ಹಾಗಾಗಿ ಜಾಕೆಟ್ – ಪ್ಯಾಂಟ್, ಕೋಟ್ ರೀತಿಯ ರೈನ್ ಕೋಟುಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತವೆ. ಕಾಲೇಜು – ಆಫೀಸುಗಳಿಗೆ ಹೋಗುವ ನಾರಿಯರಂತೂ ಉದ್ದನೆಯ ಕೋಟ್ ರೀತಿಯ ರೈನ್ ಕೋಟ್ ಧರಿಸುತ್ತಾರೆ. ಅದರ ಬಟನ್ ಗಳನ್ನು ಹಾಕಿದಷ್ಟೇ ವೇಗವಾಗಿ ಸುಲಭವಾಗಿ ಕಳಚಬಹುದು. ಲೇಟಾಗಿದ್ರೂ ರೈನ್ ಕೋಟ್ ಬೈಕ್ ಮೇಲಿಟ್ಟು ಹೋಗಬಹುದು. ಆದರೆ ಜಾಕೆಟ್ ಪ್ಯಾಂಟ್ ತೊಟ್ಟರೆ ಅದನ್ನು ಕಳಚುವುದು ಅಷ್ಟು ಸುಲಭವಲ್ಲ. ಬೆಲ್ಟ್ ಸ್ಯಾಂಡಲ್ ಹಾಕಿದ್ದರಂತೂ ಚಪ್ಪಲಿ ತೆಗಿಯಲೇಬೇಕು. ಒಂಟಿ ಕಾಲಿನಲ್ಲಿ ನಿಂತು ಸ್ವಲ್ಪ ಸರ್ಕಸ್ ಮಾಡಲೇಬೇಕು. ಸರ್ಕಸ್ಸು ಒಂಟಿಕಾಲು ಏನೇ ಇರಲಿ. ಈ ರೀತಿಯ ರೈನ್ ಕೋಟ್ ತೊಟ್ಟರೆ ಬೆಚ್ಚನೆ ಇರಬಹುದು. ರೈನ್ ಕೋಟ್ ಒಳಗೆ ಸ್ವಲ್ಪವೂ ನೀರು ಬರುವುದಿಲ್ಲ.
ರೈನ್ ಕೋಟ್ ನಲ್ಲಿ ಗಂಡಸರಿಗಾಗಿ – ಹೆಂಗಸರಿಗಾಗಿ ಎಂದೇನೂ ಪ್ರತ್ಯೇಕ ಕೋಟಾಗಳಿಲ್ಲ. ಕೋಟು ಬೇಕಾದರೆ ಕೋಟು – ಜಾಕೆಟ್ ಪ್ಯಾಂಟ್ ಬೇಕಾದರೆ ಜಾಕೆಟ್ ಪ್ಯಾಂಟು ಬೇಕಾದ್ದನ್ನು ಆರಿಸಿಕೊಳ್ಳಬಹುದು. ಬ್ಯೂಸಿ ಮನುಷ್ಯರೆಲ್ಲಾ ಹೆಚ್ಚಾಗಿ ಕೋಟು ತೆಗೆದುಕೊಳ್ಳುತ್ತಾರೆ. ರೈನ್ ಕೋಟು ಸೀಸನ್ ಗಳಲ್ಲಿ ಎಲ್ಲಾ ರೆಡಿಮೇಡ್ ಮಳಿಗೆಗಳು ರೈನ್ ಕೋಟು ಮಳಿಗೆಗಳಾಗುಗುತ್ತವೆ. ಫೂಟ್ ಪಾಟ್ ಗಳೂ ಮಾರಾಟ ಮಳಿಗೆಗಳಾಗಿ ಬಿಡುತ್ತವೆ. ಫುಟ್ ಪಾಟ್ ನಲ್ಲಾದರೆ ಚೌಕಾಶಿಯೂ ನಡೆಯುತ್ತದೆ. ರೈನ್ ಕೋಟ್ ಗಳು ಹೆಚ್ಚಿನ ಬಾಳಿಕೆ ಬರುವಂತಹವು ಬೇಕಾದರೆ ಅವುಗಳ ಬೆಲೆ ಸಾವಿರ ರೂ.ಗಳಿಗಿಂತಲೂ ಮೇಲಿರುತ್ತದೆ.
ರೈನ್ ಕೋಟ್ ಹಾಕಿಕೊಂಡು ರೈಡ್ ಮಾಡುವಾಗ ಮಳೆಯನ್ನು ಅನುಭವಿಸಿದಷ್ಟು ಕೊಡೆ ಹಿಡಿದು ನಡೆದಾಡಿದಾಗಲೂ ಅನುಭವಿಸಲಾಗುವುದಿಲ್ಲ ಎಂದು ಒಂದೇ ಮಾತಿನಲ್ಲಿ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಶರ್ವಾನ್. ರೈನ್ ಕೋಟ್ ಕಥೆ ಇಲ್ಲಿಗೇ ಮುಗಿದಿಲ್ಲ. ಶಾಲೆಗೆ ಹೋಗುವ ಮಕ್ಕಳು ಭಾರವಾದ ಬ್ಯಾಗ್ ಜೊತೆ ಛತ್ರಿ ಹಿಡಿಯುವ ಕಷ್ಟ ಪಡುವುದು ಬೇಡ ಎಂದು ಅವರಿಗೂ ರೈನ್ ಕೋಟ್ ಕೊಡಿಸುತ್ತಾರೆ. ಅವರು ಮಳೆಯಲ್ಲಿ ಕುಣಿದು ಕುಪ್ಪಳಿಸುತ್ತಾ ಬರುವುದನ್ನು ನೋಡಿದರೆ ರೈನ್ ಕೋಟ್ ಹಾಕಿಕೊಳ್ಳುವ ಮನಸ್ಸು ಹಿರಿತಲೆಗಳಿಗೂ ಉಂಟಾಗುತ್ತದೆ. ಮಳೆಯ ನೆನಪನ್ನು ಮತ್ತೆ ಬಿಚ್ಚಿಸುವ ರೈನ್ ಕೋಟ್ ಗೆ ಹ್ಯಾಟ್ಸ್ ಆಫ್ ಎನ್ನಲೇ ಬೇಕಲ್ವಾ?

ಚಿತ್ರ ಕೃಪೆ : ಅಂತರ್ಜಾಲ

12
ನವೆಂ

ಈ ಕಾಯ್ಕಿಣಿ ಖಾಲಿಯಾಗುವುದೇ ಇಲ್ಲವಾ ಅಂತ…

ರಾಕೇಶ್ ಕುಮಾರ್ ಕಮ್ಮಜೆ

ಅನಿಸುತಿದೆ ಯಾಕೋ ಇಂದು

ನೀನೇನೆ ನನ್ನವಳೆಂದು…

‘ಮಂಗಾರು ಮಳೆ’ ಸಿನಿಮಾದ ಈ ಹಾಡು ಅದೆಷ್ಟು ಪ್ರಖ್ಯಾತಿ ಪಡೆಯಿತೆಂಬುದು ಎಲ್ಲರಿಗೂ ಗೊತ್ತಿದ್ದದ್ದೇ. ಪ್ರತಿಯೊಬ್ಬರ ಬಾಯಲ್ಲೂ ‘ಅನಿಸುತಿದೆ..’ಯದೇ ಅನುರಣನೆ. ಈಗಲೂ ಗುನುಗುವಿಕೆ ನಿಂತು ಹೋಗಿಲ್ಲ. ಯಾರಿಗಾದರೂ ಕರೆ ಮಾಡಿದರೆ ಕೇಳಿಸುವುದು ರಿಂಗ್ ಟೋನಲ್ಲ, ಅನಿಸುತಿದೆ.. ಹಾಡು!

ವಿಷಯ ಅದಲ್ಲ, ಈ ಹಾಡನ್ನು ಬರೆದ ಜಯಂತ ಕಾಯ್ಕಿಣಿ ಇದ್ದಾರಲ್ಲ, ಅವರ ಕಲ್ಪನೆ ಅದೆಷ್ಟು ಸೊಗಸಾಗಿದೆಯೆಂಬುದು! ಅಂದು ಹಾಡು ಬರೆಯಲು ಕೂತ ಕಾಯ್ಕಿಣಿ ಇನ್ನೂ ಅದ್ಭುತ ಅನ್ನಿಸುವಂತಹ ಹಾಡುಗಳನ್ನು ನೀಡುತ್ತಲೇ ಇದ್ದಾರಲ್ಲಾ ಅನ್ನುವುದು!

ನೀವೇ ನೋಡಿ, ಮುಂಗಾರು ಮಳೆಯ ಆ ಹಾಡು ಬಂದ ಕೆಲವೇ ದಿನಗಳಲ್ಲಿ ‘ಈ ಸಂಜೆ ಯಾಕಾಗಿದೆ… ನೀನಿಲ್ಲದೇ..’ ಅನ್ನುವ ನವಿರಾದ ಹಾಡು ಬರೆದರು ಕಾಯ್ಕಿಣಿ. ಅದರ ಗುಂಗು ಮುಗಿಯಿತೆನ್ನುವಷ್ಟರಲ್ಲಿ ‘ಮಿಂಚಾಗಿ ನೀನು ಬರಲು…’ ಅಂದುಬಿಟ್ಟರು. ಅದರ ಛಾಯೆಯಿಂದ ಹೊರಬಂದೆವೆನ್ನುವಷ್ಟರಲ್ಲಿ ‘ನಿನ್ನಿಂದಲೇ…ನಿನ್ನಿಂದಲೇ.. ಕನಸೊಂದು ಶುರುವಾಗಿದೆ…’ ಅನ್ನುವ ಮತ್ತೊಂದು ಅಮೋಘ ಹಾಡನ್ನು ತಯಾರಿಸಿಬಿಟ್ಟರು ಜಯಂತ ಕಾಯ್ಕಿಣಿ. ಅವರ ಸೂಪರ್ ಹಿಟ್ ಹಾಡುಗಳ ಭರಾಟೆ ಅಲ್ಲಿಗೂ ಮುಗಿಯಲಿಲ್ಲ. ಅದೆಲ್ಲಾ ಯಾಕೆ? ಮೊನ್ನೆ ಮೊನ್ನೆ ಬಂದ ‘ಹಾಗೇ ಸುಮ್ಮನೇ’ ಸಿನಿಮಾದ ಅಷ್ಟೂ ಹಾಡುಗಳನ್ನು ಅವರೇ ಬರೆದು ಸೋಜಿಗ ಸೃಷ್ಟಿಸಿದ್ದಾರೆ. ಅಚ್ಚರಿಯೆಂದರೆ ಎಲ್ಲವೂ ಮತ್ತೆ ಮತ್ತೆ ಗುನುಗುವಂಥ ಹಾಡುಗಳೇ! ಇಷ್ಟು ಸಾಲದ್ದಕ್ಕೆ ಈಗ ಬಂದ ‘ಜಂಗ್ಲಿ’ ಸಿನಿಮಾದಲ್ಲೂ ‘ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ…’ ಎಂಬ ಭಲೇ ಹಾಡನ್ನು ರಚಿಸಿ ಯುವಕ-ಯುವತಿಯರೆದೆಯಲ್ಲಿ ಸಂಚಲನ ತಂದಿದ್ದಾರೆ. ಮತ್ತಷ್ಟು ಓದು »

11
ನವೆಂ

ಕನಸು ನನಸಾದಾಗ…………..

ಅರವಿಂದ್

ಇವತ್ತು ನಿಮ್ಮೊಂದಿಗೆ ಒಂದು ಸುಂದರ ಕನಸುಗಳನ್ನ ಹಂಚಿಕೊಳ್ಳುವ ಇರಾದೆ. ಕನಸುಗಳೆಂದರೆ ಕಪ್ಪು ಬಿಳಿಪಿನ ಕನಸೇ, ಕಲರ್ ಪುಲ್ ಕನಸೇ ? ಅಕಸ್ಮಾತ್ ಕನಸು ಕಪ್ಪು ಬಿಳುಪಾಗಿಯು ಬೀಳ್ತವೆಯೇ ? (ಇದುವರೆಗೂ ಯಾವ ಕನಸು ನನಗಂತೂ ಕಪ್ಪು ಬಿಳುಪಾಗಿ ಬಿದ್ದಿಲ್ಲ ) 🙂 ನನದು ಒಂದು ಕಲರ್ ಪುಲ್ ಕನಸ ಕೇಳಿ ………,

ನೆನ್ನೆ ರಾತ್ರಿ ಮಲಗುವಾಗಲೇ ತಡವಾಯ್ತು ಬಹುಶಃ ಎರಡು ಮೂರು ಘಂಟೆ ಇರಬಹುದು. ಸ್ವಲ್ಪ ಹೊತ್ತಿನಲ್ಲೇ ವಾಸ್ತವದಲ್ಲಿ ನನಗೆ ಪರಿಚಯವಿಲ್ಲದವರೊಬ್ಬರು, ಆದರೆ ತುಂಬಾ ಪರಿಚಿತರಂತೆ ಮಾತನಾಡುತಿದ್ದಾರೆ. ಎಷ್ಟು ಹೊತ್ತಾದರೂ ಅವರ ಮುಖವೇ ಕನಸಿನಲ್ಲಿ ಮೂಡುತ್ತಿಲ್ಲ . ಆದರೆ ಆ ಧ್ವನಿ ನನಗೆ ತುಂಬಾ ಪರಿಚಿತವೇನೋ ಎಂಬಂತೆ, ಎಚ್ಚರವಾದರೂ ಅವರೊಂದಿಗೆ ಮಾತಾನುದುತ್ತಿರುವಂತೆ ಭಾಸ. ಅಷ್ಟರೊಳಗೆ ಬೆಳಗಿನ ಜಾವವಾದ್ದರಿಂದ ನಾನು ನನ್ನ ನಿತ್ಯ ಕೆಲಸಗಳಲ್ಲಿ ತೊಡಗಿಕೊಂಡೆ, ಇಂದು ಮಧ್ಯಾನ್ಹ ೧೨ಕ್ಕೆ ನನ್ನ ಕಚೇರಿಯಲ್ಲಿ ಅಕೌಂಟ್ ಅಸಿಸ್ಟಂಟ್ ಹುದ್ದೆಗೆ ಸಂದರ್ಶನವಿತ್ತು. ಅಷ್ಟರೊಳಗೆ ನಾನು ಆ ಕನಸನ್ನು ಮರೆತುಹೋಗಿದ್ದೆ. ಸಂದರ್ಶನಕ್ಕೆ ಬಂದ ೫ ಜನರಲ್ಲಿ ೨ ಹುಡುಗಿಯರು ಮತ್ತೆಲ್ಲ ಹುಡುಗರು. ಆಗತಾನೆ ಪದವಿ ಮುಗಿಸಿ ಬಂದಿದ್ದ ಹೊಸಬರು. ಒಬ್ಬೊಬ್ಬರಾಗಿ ಸಂದರ್ಶನಕ್ಕೆ ಹಾಜರಾಗುತ್ತಿದ್ದರು. ಇನ್ನೇನು ಎಲ್ಲರ ಸಂದರ್ಶನ ಮುಗಿಸುವ ಹೊತ್ತಿಗೆ ಮತ್ತೊಂದು ಹುಡುಗಿಯು ಸಂದರ್ಶನಕ್ಕೆ ಬಂದಿದ್ದಾಳೆ ಎಂದು ನನ್ನ ಕಚೇರಿಯ ಸ್ವಾಗತಕಾರಿಣಿ ಪೋನ್ ಮೂಲಕ ಮೀಟಿಂಗ್ ರೂಮಲ್ಲಿದ್ದ ನನಗೆ ತಿಳಿಸಿದಳು, ಆಗಲೇ ಘಂಟೆ ೧.೩೦ ಆಗಿತ್ತು. ಸರಿ ಆಕೆಯನ್ನು ಸಂದರ್ಶನಕ್ಕೆ ಬರಲು ಹೇಳಿ, ಈಗಾಗಲೇ ಸಂದರ್ಶಿಸಿದವರಲ್ಲಿ ಯಾರು ಉತ್ತಮರೆಂದು ಮನಸ್ಸಿನಲ್ಲೆ ಲೆಕ್ಕಾಚಾರ ಹಾಕುತ್ತಿದ್ದೆ. ಒಳಗೆ ಬರಬಹುದ ?????????? ಎಂದು ಕೇಳಿದ ಧ್ವನಿಗೆ ಆಶ್ಚರ್ಯಚಕಿತನಾದೆ, ಏಕೆಂದರೆ ಇದೆ ಧ್ವನಿಯನ್ನು ತಾನೇ ಕನಸಿನಲ್ಲಿ ಕೇಳಿದ್ದು. ಒಂದು ಕ್ಷಣ ಮೂಕ ವಿಸ್ಮಿತನಂತಾಗಿ, ಕಮಿನ್ ಎಂದು ಹೇಳಿದೆ. “ನ್ಯೆಸ್ ” ಟೆಲ್ ಮಿ ಅಬೌಟ್ ಯುವರ್ ಸೇಲ್ಪ್ಹ್ ? ಅಂತಷ್ಟೇ ಉಗುಳು ನುಂಗಿಕೊಂಡು ಹೇಳಿದ್ದು. ಆ ಹುಡುಗಿಯ ಹೆಸರು ಮಾನಸ, ಊರು ಶಿವಮೊಗ್ಗದ ಹತ್ತಿರ ಶಿರಾಳಕೊಪ್ಪ, ಆ ಕಡೆಯಿಂದ ಉಳಿಯಿತು ಆ ಧ್ವನಿ. ಆಕೆ ಏನೇನೋ ಹೇಳತೊಡಗಿದಳು, ಒಂದು ಯಾವುದು ಕೇಳಿಸಿದಂತಾಯಿತು. ಒಂದೈದು ನಿಮಿಷ ಕಾಟಾಚಾರಕ್ಕೆ ಮಾತಾಡಿ ಆಕೆಯನ್ನು ಹೊರಡುವಂತೆ ಹೇಳಿ ಹೊರಬಂದೆ. ಮತ್ತಷ್ಟು ಓದು »

11
ನವೆಂ

ಈಗಿನವರು ಪ್ರೇಮ ಪತ್ರವನ್ನೂ ಬರೆಯುವುದಿಲ್ಲ, ಛೆ!

ರಾಕೇಶ್ ಕುಮಾರ್ ಕಮ್ಮಜೆ

ಪ್ರೀತಿಯ ಅಮ್ಮ,
ಬೇಡುವ ಆಶೀರ್ವಾದಗಳು. ಹೇಗಿದ್ದೀಯಾ? ಚೆನ್ನಾಗಿದ್ದಿ ತಾನೆ? ಅಪ್ಪ, ಅಣ್ಣ, ಎಲ್ಲರೂ ಕುಶಲವಷ್ಟೇ? ನಾನಂತೂ ತುಂಬಾ ಆರಾಮ.

ಹಾಂ, ಅಮ್ಮ,.. ಮೊನ್ನೆ ನಮಗೆ ಪರೀಕ್ಷೆಯಿತ್ತು. ಪರವಾಗಿಲ್ಲ ಪಾಸಾದೇನು! ಅಂದ ಹಾಗೆ ಅಮ್ಮ, ಇನ್ನೆರಡು ವಾರ ಕಳೆದರೆ ನಮಗೆ ರಜ ಸಿಗುತ್ತದೆ. ಮತ್ತೆ ಮನೆಗೆ ಬಂದು ನಿನ್ನ ಮಡಿಲಲ್ಲಿ ಮಲಗಿ ನಿದ್ರಿಸಬಹುದು…

ಅಮ್ಮ, ಆ ಎಮ್ಮೆ ಈಗ ನೆಟ್ಟಗೆ ಕರೆಯಲು ಬಿಡುತ್ತದೆಯೋ ಇಲ್ಲವೋ? ಮತ್ತೆ ದನ ಕರುಗಳು, ಹಗಲಿರುಳೂ ಸುಮ್ಮನೇ ತಲೆಹರಟೆ ಮಾಡುವ ನಾಯಿ, ಇಲಿಯೊಂದಿಗೆ ಫ್ರೆಂಡ್ ಶಿಪ್ ಮಾಡಿಕೊಂಡಿರುವ ಬೆಕ್ಕು…ಎಲ್ಲವೂ ಏನು ಮಾಡುತ್ತಿವೆ? ಬಂದಾಗ ಎಲ್ಲದರ ಹಣೆಗೂ ಮುತ್ತುಕೊಟ್ಟು ಮುದ್ದಾಡಬೇಕು ನಾನು.

ಸರಿ ಅಮ್ಮ, ಬೇರೇನೂ ವಿಶೇಷವಿಲ್ಲ. ಇಂದಿನಿಂದ ಹದಿನೈದನೇ ದಿನಕ್ಕೆ ಮನೆಯಲ್ಲಿರುತ್ತೇನೆ. ಅಲ್ಲಿಯವರೆಗೆ ನಿನ್ನದೇ ನೆನಪುಗಳು…
ಪ್ರೀತಿಯಿಂದ, ಮತ್ತಷ್ಟು ಓದು »

10
ನವೆಂ

ಬರಾಕ್ ಓಬಾಮನ ವಿವಿಧ ವೇಷಗಳು

ಅರವಿಂದ್

ಒಬಾಮ ಭಾರತೀಯ ರಾಜಕಾರಣಿಗಳ ವೇಷಧಾರಿಯಾದರೆ ಹೇಗಿರಬಹುದು ?

ಹೀಗೆಲ್ಲಾ ಇರಬಹುದಾ………….


image001

image002

image003

image004

image005

 ಮತ್ತಷ್ಟು ಓದು »

10
ನವೆಂ

ಸ್ಟೂಡೆಂಟ್ ರಿಪೋರ್ಟರ್ … ಇದು ರಿಯಲ್ ಶೋ…

ಇರ್ಷಾದ್ ಎಂ.ವೇಣೂರು

ಅವತ್ತು ನಾನು ಪತ್ರಿಕೋದ್ಯಮ ತರಗತಿಯಲ್ಲಿದ್ದೆ. ನಮ್ಮ ತರಗತಿ ಪ್ರಾರಂಭವಾಗುವುದು ದಿನಂಪ್ರತೀ ಯಾರಾದರೊಬ್ಬ ವಿದ್ಯಾರ್ಥಿ ಐದು ನಿಮಿಷ ಮಾತನಾಡಿದ ನಂತರವೇ. ನನ್ನ ಸಹಪಾಠಿ ಮಾತನಾಡಲು ಮುಂದೆ ಹೋದಾಗ ಭಾಸ್ಕರ್ ಸರ್ ನನ್ನನ್ನು ಕರೆದು “ಒಂದ್ನಿಮಿಷ…” ಅಂದ್ರು. ಹೋದೆ. “ಸುವರ್ಣ ನ್ಯೂಸ್ನವ್ರು ಒಂದು ರಿಯಾಲಿಟೀ ಶೋ ಮಾಡ್ತಿದ್ದಾರಂತೆ, ಸ್ಟೂಡೆಂಟ್ ರಿಪೋರ್ಟರ್ ಅಂತ. ನಮ್ಮ ಕಾಲೇಜಿನಿಂದ ಎರಡು ಮಂದಿಯನ್ನು ಕಳುಹಿಸುತ್ತಿದ್ದೇನೆ. ಒಂದು ನಿಮ್ಮ ಹೆಸರನ್ನೇ ನಾನು ಸೂಚಿಸಿದ್ದೇನೆ” ಎಂದು ಬ್ರೇಕಿಂಗ್ ನ್ಯೂಸ್ ಹೇಳಿದಾಗ ಖುಷಿಯಾಯಿತು. ಅಷ್ಟು ಹೊತ್ತಿಗೆ ನನ್ನ ಸಹಪಾಠಿಯ ಮಾತು ಮುಗಿದಿತ್ತು. ಸರ್ ವಿಷಯ ತರಗತಿಯ ಮುಂದಿಟ್ಟರು. ವರದಿಗಾರಿಕೆ, ಛಾಯಾಗ್ರಹಣ, ಪತ್ರಿಕೋದ್ಯಮದಲ್ಲಿ ನಿಮ್ಮ ಆಸಕ್ತಿ ಎಲ್ಲಾ ಗಮನಿಸಿ ಈ ಕಾರ್ಯಕ್ರಮಕ್ಕೆ ಕಳುಹಿಸುತ್ತಿದ್ದೇನೆ. ಒಬ್ಬರನ್ನು ಈಗಾಗಲೇ ಆರಿಸಿದ್ದೇನೆ. ಇನ್ನೊಬ್ಬರು ಬೇಕು. ಆಸಕ್ತಿ ಇದ್ದವರು ಮತ್ತೆ ಭೇಟಿಯಾಗಿ ಎಂದರು. ನನ್ನತ್ತ ತಿರುಗಿ ನಿಮ್ಮ ಬಯೋಡೆಟಾ ಆದಷ್ಟು ಬೇಗ ಕೊಡಿ. ನಾಳೇನೇ ಬೇಕು. ಅದನ್ನು ಸುವರ್ಣ ನ್ಯೂಸ್ ಗೆ ಕಳುಹಿಸಬೇಕು ಎಂದರು.

ಆ ದಿನ ನನಗಂತೂ ಖುಷಿಯೋ ಖುಷಿ. ಬಯಸದೇ ಒಂದು ಅವಕಾಶ ಯಾರನ್ನಾದರೂ ಅರಸಿ ಬಂದರೆ ಏನಾಗುತ್ತೋ ಆ ರೀತಿ ನಾನು ಸಂತಸಪಟ್ಟಿದ್ದೆ. ಮರುದಿನ ನನ್ನ ಪ್ರಕಟವಾದ ಲೇಖನಗಳ ಸಂಖ್ಯೆ, ಇಂಟರ್ನ್ ಶಿಪ್ ಮಾಡಿದ್ದು, ಪ್ರಾಯೋಗಿಕ ಪತ್ರಿಕೆ ಮಾಡಿದ್ದ ಅನುಭವ ಎಲ್ಲಾ ಸೇರಿಸಿ ‘ಡೇಟಾ’ ಹಾರ್ಡ್ ಕಾಪಿ ಸರ್ ಕೈಗಿತ್ತೆ. ನನ್ನ ಸಹಪಾಠಿ ಒಬ್ಬರು ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರು. ಕೊನೇ ಕ್ಷಣದಲ್ಲಿ ಅವರು ಬರವುದಿಲ್ಲ ಎಂದಿದ್ದರಿಂದ ಸ್ನಾತಕೋತ್ತರ ವಿಭಾಗದ ಸ್ನೇಹಿತರೋರ್ವರು ಭಾಗವಹಿಸುವ ಉತ್ಸುಕತೆ ತೋರಿಸಿದ್ದರು. ಮತ್ತಷ್ಟು ಓದು »
9
ನವೆಂ

ಮಿಂಚುಳ್ಳಿ

ಹರ್ಷವರ್ಧನ್ ಶೀಲವಂತ್

ನಿಮ್ಮ ಊರಿನ ಕೆರೆ, ಕಟ್ಟ, ಹೊಂಡಗಳು, ತಲಪೂರಿಕೆ ಹಾಗೂ ಮೀನುಗಳನ್ನು ಸಾಕಿಕೊಂಡಿರುವ ಮಾನವ ನಿರ್ಮಿತ ಕೃಷಿ ಹೊಂಡಗಳ ಬದುವುಗಳಲ್ಲಿ, ನೀರಿನಿಂದ ತುಸು ಮೇಲೆ ನೆಲದಿಂದ ಅತಿ ಕಡಿಮೆ ಎತ್ತರದಲ್ಲಿ ಮಣ್ಣನ್ನು ಕೊರೆದು ಪಕ್ಷಿಯೊಂದು ಮನೆ ಕಟ್ಟಿಕೊಂಡಿದ್ದು ಗಮನಿಸಿದ್ದೀರಾ?

ನಮ್ಮ ಊರು ಧಾರವಾಡದ ಹೊರವಲಯದಲ್ಲಿ ಕೆಲ ದಶಕಗಳ ಹಿಂದೆ ಗಣಿಗಾರಿಕೆ ನಡೆಸಲಾಗುತ್ತಿತ್ತು. ಹಾಗೆ ಗಣಿಗಾರಿಕೆ ನಡೆಸಿ, ನಿರ್ಮಿತವಾದ ಹೊಂಡಗಳಲ್ಲಿ ಇತ್ತೀಚಿನ ಮಳೆಯಿಂದಾಗಿ ಚಿಕ್ಕ ಕೆರೆಗಳು ನಿರ್ಮಾಣಗೊಂಡಿವೆ. ಇಲ್ಲಿ ದನಗಾಹಿಗಳು ನಿತ್ಯ ತಮ್ಮ ಜಾನುವಾರುಗಳ ಮೈ ತೊಳೆಯಲು ಆಗಮಿಸುವುದರಿಂದ ಈ ಪಕ್ಷಿ ಗಣಿಯ ಇಕ್ಕೆಲಗಳ ಗೋಡೆಯಂತಹ ಮಣ್ಣಿನಲ್ಲಿ ಅತ್ಯಂತ ಎತ್ತರದಲ್ಲಿ ತನ್ನ ಗೂಡು ಮಾಡಿಕೊಂಡಿದ್ದನ್ನು ನಾನು ಗಮನಿಸಿದ್ದೇನೆ. ಕೆಲವೊಮ್ಮೆ ವಿದ್ಯುತ್ ತಂತಿಯ ಮೇಲೂ ಬೇಟೆಗಾಗಿ ಕಾಯ್ದು ಕುಳಿತು ಈ ಹಕ್ಕಿ ಗಮನ ಸೆಳೆಯುತ್ತದೆ.

ಅತ್ಯಂತ ಚುರುಕಾದ, ಮಿರಿ ಮಿರಿ ಮಿಂಚುವ ನೀಲಿ ಮೈಬಣ್ಣ ಹೊಂದಿದ ಗುಬ್ಬಚ್ಚಿ ಗಾತ್ರದ ಈ ಹಕ್ಕಿಗೆ ‘ಕಿರು ಮಿಂಚುಳ್ಳಿ’- ‘Small Blue Kingfisher’ ಎಂದು ಕರೆಯುತ್ತಾರೆ. ಮೊನ್ನೆ ಛಾಯಾಪತ್ರಕರ್ತ-ಮಿತ್ರ ಜೆ.ಜಿ.ರಾಜ್ ಅವರೊಂದಿಗೆ ಧಾರವಾಡದಿಂದ ಮುಕುಟಖಾನ್ ಹುಬ್ಬಳ್ಳಿ (ಎಂ.ಕೆ. ಹುಬ್ಬಳ್ಳಿ ಸಕ್ಕರೆ ನಾಡು ಕೂಡ ಹೌದು.) ವರೆಗೆ ನೈಸರ್ಗಿಕವಾಗಿ ನಿರ್ಮಾಣಗೊಂಡಿರುವ ಕೆರೆಗಳ ಸ್ಥಿತಿ-ಗತಿ, ಬದುಕು-ಬವಣೆ ಗುರುತಿಸಲು ತೆರಳಿದ್ದೆವು. ಆಗ ಈ ಅಪರೂಪದ ಮಿತ್ರ ಮೀನು ಬೇಟೆಗಾರನಾಗಿ ನಮ್ಮ ಕಣ್ಣಿಗೆ ಕಂಡ. ಐತಿಹಾಸಿಕ ಮಹತ್ವದ ಕಿತ್ತೂರು ಸಮೀಪದ ‘ಕೆಂಪಗೇರಿ ಕಟ್ಟೆ’ ಕೆರೆಯಲ್ಲಿ ಈ ‘ಕಿರು ಮಿಂಚುಳ್ಳಿ’ ಕಿತ್ತೂರಿನ ಮೀನುಗಾರ ಶಿವಪ್ಪ ಅವರೊಂದಿಗೆ ಮೀನು ಬೇಟೆಯಲ್ಲಿ ತೊಡಗಿದ್ದ.

ಕಿರು ಮಿಂಚುಳ್ಳಿ 1

ಬಿಳಿ ಮಿಂಚುಳ್ಳಿ (ಪೈಡ್ ಕಿಂಗಫಿಷರ್), ಗದ್ದೆ ಮಿಂಚುಳ್ಳಿ (ವೈಟ್ ಬ್ರೆಸ್ಟೆಡ್ ಕಿಂಗಫಿಷರ್), ಹೆಮ್ಮಿಂಚುಳ್ಳಿ (ಸ್ಟ್ರೋಕ್ ಬಿಲ್ಡ್ ಕಿಂಗಫಿಷರ್) ಇವುಗಳಲ್ಲಿ ನಾವು ಕೆಂಪಗೇರಿ ಕಟ್ಟೆಯಲ್ಲಿ ಕಂಡ ಕಿರು ಮಿಂಚುಳ್ಳಿ (ಸ್ಮಾಲ್ ಬ್ಲೂ ಕಿಂಗಫಿಷರ್) ಅತ್ಯಂತ ಉಜ್ವಲ ವರ್ಣದ ಆಕರ್ಷಕ ಹಕ್ಕಿ. ಕುತ್ತಿಗೆ ಮತ್ತು ಹೊಟ್ಟೆಗೆ ಹೊಂಬಣ್ಣದ ಚೆಲುವು. ಬಲವಾದ ನೀಲಿ ಮಿಶ್ರಿತ ಕಪ್ಪು ಬಣ್ಣದ ಉದ್ದ ಕೊಕ್ಕು, ಚೋಟುದ್ದ ಕಾಲುಗಳು ಮಿಂಚುಳ್ಳಿಯ ದುಂಡನೆಯ ಆಕೃತಿಗೆ ಮೆರಗು ತೊಡಿಸಿವೆ.

ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಭರ್ಮಾಗಳಲ್ಲಿ ಕಾಣಸಿಗುವ ಕಿರು ಮಿಂಚುಳ್ಳಿಯಲ್ಲಿ ಗಂಡು ಮತ್ತು ಹೆಣ್ಣು ಪಕ್ಷಿಗಳಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸಗಳಿಲ್ಲ. ಮಾರ್ಚ್ ನಿಂದ ಜೂನ್ ತಿಂಗಳುಗಳಲ್ಲಿ ಹೊಳೆ-ಹಳ್ಳಗಳ ಕಡಿದಾದ ದಂಡೆಗಳಲ್ಲಿ ನೆಲಕ್ಕೆ ಸಮಾನಾಂತರವಾಗಿ ಪೊಟರೆ ಕೊರೆದು ಗೂಡು ಕಟ್ಟುತ್ತವೆ. ಸುಮಾರು ೫೦ ಸೆಂ.ಮೀ. ಉದ್ದದ ಈ ಮಣ್ಣಿನ ಪೊಟರೆಯಲ್ಲಿ ೫ ರಿಂದ ೭ ಮೊಟ್ಟೆಗಳನ್ನು ಹೆಣ್ಣು ಮಿಂಚುಳ್ಳಿ ಹಾಕುತ್ತದೆ. ಮೊಟ್ಟೆಗಳು ಶುಭ್ರ ಬಣ್ಣದ, ಮಿರಿ ಮಿರಿ ಮಿಂಚುವ ಗೋಲಿಯಂತೆ ದುಂಡಗಿರುತ್ತವೆ. ಮೊಟ್ಟೆ ಇರುವ ಗೂಡಿನ ಜಾಗ ಮಾತ್ರ ಅಗಲವಾಗಿದ್ದು, ತಾಯಿ-ತಂದೆ ಹಕ್ಕಿ ಜೋಡಿಯಾಗಿ ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಡಲು ಅನುವಾಗುವಂತೆ ಇರುತ್ತದೆ. ಸಂತಾನೋತ್ಪತ್ತಿ ಕಾಲದಲ್ಲಿ ಮಾತ್ರ ಜೋಡಿಯಾಗಿ ಕಾಣುವ ಕಿರು ಮಿಂಚುಳ್ಳಿ, ಬಹುತೇಕ ಒಂಟಿಯಾಗಿಯೇ ಇರಲು, ಬೇಟೆಯಾಡಲು ಬಯಸುತ್ತದೆ. ಮತ್ತಷ್ಟು ಓದು »

8
ನವೆಂ

ಭಾರತಕ್ಕೆ ಒಬಾಮ ಹಾಕಿದ ಟೋಪಿ!

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬಂದಿದ್ದಾರೆ. ತನ್ನ ದೇಶದಲ್ಲಿ ಐವತ್ತು ಸಾವಿರ ಉದ್ಯೋಗಗಳನ್ನು ಸಷ್ಟಿಸಲು 44 ಸಾವಿರ ಕೋಟಿ ರೂಪಾಯಿ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಅಮೆರಿಕದ ರಫ್ತು ದ್ವಿಗುಣ ಮಾಡುವುದೇ ತನ್ನ ಗುರಿ ಎಂದು ಇಂಡಿಯಾಕ್ಕೆ ಭರ್ಜರಿ ಟೋಪಿ ಹಾಕಿದ್ದಾರೆ. ಭಾರತದ ಶಸ್ತ್ರಾಸ್ತ್ರ ಮಾರುಕಟ್ಟೆಯ ಮೇಲೂ ಕಣ್ಣು ಹಾಕಿದ್ದಾರೆ. ನಮ್ಮ ದೇಶವನ್ನು ಇಕ್ಕಟ್ಟಿಗೆ ಸಿಲುಕಿಸಲೆಂದೇ ಪರಮಾಣು ಪೂರೈಕೆದಾರರ ಕೂಟದಲ್ಲಿ (ಎನ್‌ಎಸ್‌ಜಿ) ಭಾರತಕ್ಕೆ ಪೂರ್ಣ ಪ್ರಮಾಣದ ಸದಸ್ಯತ್ವ ದೊರಕಿಸಿಕೊಡುವ ಆಶ್ವಾಸನೆಯನ್ನು ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದ ಸಂಪನ್ಮೂಲಗಳನ್ನು ಲೂಟಿ ಮಾಡಲು ಏನೇನು ಮಾಡಬೇಕೋ ಅದನ್ನೆಲ್ಲ ಮಾಡಿದ್ದಾರೆ.

ಬರಾಕ್ ಒಬಾಮ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಾಗ ಅಮೆರಿಕಕ್ಕೊಬ್ಬ ಕಪ್ಪು ವರ್ಣಿಯ ವ್ಯಕ್ತಿ ನಾಯಕತ್ವ ವಹಿಸಿದನೆಂದು ಸಂಭ್ರಮ ಪಟ್ಟವರಿದ್ದರು. ನಮ್ಮ ದೇಶದಲ್ಲೂ ಇಂಥ ವಿಜಯೋತ್ಸಾಹ ಕಂಡು ಬಂದಿತ್ತು. ಆದರೆ, ಎಡ ಪಂಥಿಯರಲ್ಲಿ ಯಾವುದೇ ಭ್ರಮೆ ಇರಲಿಲ್ಲ. ಯಾವುದೇ ಬಣ್ಣದ ವ್ಯಕ್ತಿ ಅಧಿಕಾರಕ್ಕೆ ಬಂದನೆಂದ ಮಾತ್ರಕ್ಕೆ ಒಂದು ಸಾಮ್ರಾಜ್ಯಶಾಹಿ ದೇಶದ ನೀತಿ ಧೋರಣೆಗಳು ಒಮ್ಮಿಂದೊಮ್ಮೆಲೆ ಬದಲಾಗಿ ಬಿಡುವುದಿಲ್ಲ. ಬರಾಕ್ ಒಬಾಮ ಒಳ್ಳೆಯವರೇ ಇರಬಹುದು. ವರ್ಣಭೇದದ ಬೆಂಕಿಯಲ್ಲಿ ನಲುಗಿದವರಿರಬಹುದು. ಮತ್ತಷ್ಟು ಓದು »