ರಸಪ್ರಶ್ನೆಯಲ್ಲಿ ರೈಲು ಹಳಿಗಳಿಲ್ಲದ ಜಿಲ್ಲೆ ಯಾವುದು ಎಂದು ಕೇಳುತಿದ್ದಾಗಲೇ ಧೂರ್ತರಲ್ಲಿ ತಂತ್ರಗಾರಿಕೆಯೊಂದು ಹುಟ್ಟುತ್ತಿತ್ತು..
– ಶಿಲ್ಪಾ ನೂರೆರ
ಅಭಿವೃದ್ಧಿಗೆ ಮಾನದಂಡಗಳೇನು? ಅಷ್ಟಕ್ಕೂ ಅಭಿವೃದ್ಧಿ ಎಂದರೇನು? ಇರುವುದನ್ನೆಲ್ಲಾ ಗುಡಿಸಿ ಎಸೆದು ಮತ್ತೊಂದನ್ನು ಕಟ್ಟುವುದು ಅಭಿವೃದ್ಧಿಯೇ? ಸಹಜವಾದುದನ್ನು ನಾಶಮಾಡಿ ಕೃತಕವಾದದ್ದನ್ನು ಸೃಷ್ಟಿಸುವುದು ಅಭಿವೃದ್ಧಿ ಎನಿಸಿಕೊಳ್ಳುತ್ತದೆಯೇ? ಹಾಗಾದರೆ ಸಹಜವಾದುದನ್ನು, ಈ ಮೊದಲೇ ನೆಲೆಯಾದವುಗಳಿಗೆ ನಾನಾ ಕಿರೀಟಗಳನ್ನು ಕೊಟ್ಟು ಹೊಗಳಿ ಹೊನ್ನಶೂಲಕ್ಕೇಕೆ ಏರಿಸುವಿರಿ?- ಇಂಥ ಅನೇಕ ಪ್ರಶ್ನೆಗಳು ಹುಟ್ಟುವುದು ವ್ಯಾಖ್ಯಾನಕಾರರಿಗೆ, ವಿಶ್ಲೇಷಕರಿಗೆ, ಸಮಾಜಶಾಸ್ತ್ರಜ್ಞರಿಗೆ ಮತ್ತು ಅಭಿವೃದ್ಧಿ ನಿರೀಕ್ಷಿಸುವವರಿಗೆ ಹೊರತು ಅಭಿವೃದ್ಧಿಯನ್ನು ಕೈಗೊಳ್ಳುವವರಿಗಲ್ಲ! ಅಭಿವೃದ್ಧಿಗೆ ಸುಸ್ಥಿರ, ಸಮಗ್ರ ಇತ್ಯಾದಿ ವಿಶೇಷಣಗಳನ್ನು ಕೊಟ್ಟುಕೊಂಡವರೂ ಕೂಡ ಅವರೇ. ಹಾಗಾಗಿ ಅಭಿವೃದ್ಧಿ ಎಂಬುದು ತನ್ನ ಗುರಿಯನ್ನು ಇನ್ನೂ ಮುಟ್ಟದೆ ಅಡ್ಡಾದಿಡ್ಡಿ ಓಡುತ್ತಲೇ ಇದೆ. ಇಂದಿಗೂ ಅಭಿವೃದ್ಧಿ ರಾಜಕೀಯದ ಪ್ರಮುಖ ದಾಳವಾಗಿ ಬಳಕೆಯಾಗುತ್ತಲೇ ಇದೆ. ಹೊರನೋಟಕ್ಕೆ ಆಕರ್ಷಕವಾಗಿ, ಜನರ ಆಶಾಕಿರಣವಾಗಿ ನರ್ತನ ಮಾಡುತ್ತ ಬರುವ ಅಭಿವೃದ್ಧಿ ಯೋಜನೆಗಳು ಇನ್ನೂ ಏಕೆ ತನ್ನ ಉದ್ದೇಶವನ್ನು ಪೂರ್ಣಗೊಳಿಸಿಲ್ಲ ಎನ್ನುವುದರ ಹಿಂದೆ ಇಂಥಾ ವ್ಯಾಖ್ಯಾನಗಳ ಕ್ಲೀಷೆಗಳಿವೆ. ಮತ್ತಷ್ಟು ಓದು 
ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು? ( ಭಾಗ – ೪ )
ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)
ಸಾಮಾನ್ಯವಾಗಿ ಪಶ್ಚಿಮದಲ್ಲಿ ನಮ್ಮ ಸಂಸ್ಕೃತಿಗೆ ಸಂಬಂಧಿಸಿದಂತೆ ಪದೇಪದೇ ಕೇಳಿಬರುವ ಈ ಪ್ರಶ್ನೆಗಳನ್ನು ಗಮನಿಸಿ. ನೀವು ಹಣೆಗೆ ತಿಲಕ ಇಡುವುದೇಕೆ? ಗೋಮಾಂಸವನ್ನು ನೀವೇಕೆ ತಿನ್ನುವುದಿಲ್ಲ? ನೀವು ಶಿಶ್ನವನ್ನು ಪೂಜೆ ಮಾಡುತ್ತೀರಂತೆ ಹೌದೆ? ಜಾತಿ ಪದ್ಧತಿಯ ಬಗ್ಗೆ ನಿಮ್ಮ ಅನಿಸಿಕೆಯೇನು? ಈಗಲೂ ಭಾರತದಲ್ಲಿ ವಿಧವೆಯರನ್ನು ಸುಡುತ್ತಾರೆಯೇ? ನಿಮ್ಮ ದೇವರುಗಳಿಗೇಕೆ ಆರೆಂಟು ಕೈಗಳು ಇರುತ್ತವೆ? ನಿಮ್ಮ ರಿಲಿಜನ್ನಿನ ಚಿಹ್ನೆ ಯಾವುದು? ನೀವು ದೇವಸ್ಥಾನದಲ್ಲಿ ಮೂರ್ತಿಪೂಜೆ/idolatry ಮಾಡುತ್ತೀರಾ? ನೀವು ದೇವರನ್ನು ನಂಬುತ್ತೀರಾ? Are you religious? ಇತ್ಯಾದಿ. ಈ ರೀತಿಯ ಪ್ರಶ್ನೆಗಳು ಎದುರಾದಾಗ ಯಾರಾದರೂ ಹೇಗೆ ಪ್ರತಿಕ್ರಿಯಿಸಬಹುದು? ಸ್ಥೂಲವಾಗಿ ಹೇಳುವುದಾದರೆ, ಇದಕ್ಕೆ ಎರಡು ವಿಧದಲ್ಲಿ ಪ್ರತಿಕ್ರಿಯಿಸಬಹುದು. ಮೊದಲನೆಯದು, ಈ ಪ್ರಶ್ನೆಗಳು ಗ್ರಹಿಸಲು ಸಾಧ್ಯವಾಗುವಂಥ ಮತ್ತು ನಮಗೆ ಅರ್ಥವಾಗುವ ಪ್ರಶ್ನೆಗಳು ಎಂಬ ಊಹೆಯೊಂದಿಗೆ ಈ ಪ್ರಶ್ನೆಗಳಿಗೆ ಉತ್ತರ ನೀಡುವುದು. ಸುಧಾರಣಾವಾದಿಗಳ ಕಾಲದಿಂದ ಇಂದಿನವರೆಗೆ ನಾವು ಅನುಸರಿಸಿದ ಮಾರ್ಗ ಇದೇ. ಆದರೆ ಅಮೆರಿಕೆಯಲ್ಲಿ ನೆಲೆಸುವ ಭಾರತೀಯರ [ಅಷ್ಟೇ ಏಕೆ, ಸಂಕುಚಿತಗೊಳ್ಳುತ್ತಿರುವ ಆ ಜಗತ್ತಿನಲ್ಲಿ, ಭಾರತದಲ್ಲಿನ ಭಾರತೀಯರ] ಪರಿಸ್ಥಿತಿ ಇಂದು ಬದಲಾಗಿದೆ: ಹಿಂದಿನ ಕಾಲದ ಸುಧಾರಕರು ಭಾರತೀಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು, ಆದರೆ ನಾವಿಂದು ಪಾಶ್ಚಾತ್ಯ ಸಂಸ್ಕೃತಿಯ ಸಂದರ್ಭದಲ್ಲಿ ನಿಂತು ಮಾತನಾಡುತ್ತಿದ್ದೇವೆ. ಬದಲಾದ ಈ ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ನಾವೂ ನಮ್ಮ ಸುಧಾರಣಾವಾದಿಗಳು ನಡೆದ ಮಾರ್ಗವನ್ನು ಅನುಸರಿಸಿದರೆ ಉಂಟಾಗುವ ಪರಿಣಾಮವನ್ನು ಗ್ರಹಿಸುವುದು ಬಹಳ ಮುಖ್ಯವಾಗಿದೆ. ಮತ್ತಷ್ಟು ಓದು 
ಯೋಗದ ಮಹತ್ವ ಹಾಗೂ ಅರಿವು
– ಗೀತಾ ಹೆಗ್ಡೆ
ಈ ದಿನ ಅಂತಃರಾಷ್ಟ್ರೀಯ ಯೋಗ ದಿನ. ಇತ್ತೀಚಿನ ದಿನಗಳಲ್ಲಿ ಈ ಯೋಗದ ಬಗ್ಗೆ ತುಂಬಾ ಪ್ರಚಾರ ಹಾಗೂ ಕಲಿಯುವವರು ಕೂಡಾ ಹೆಚ್ಚಾಗುತ್ತಿರುವುದು ಸಂತೋಷದ ಸಂಗತಿ. ಮತ್ತು ಪುರಾತನ ಕಾಲದ ಈ ವಿದ್ಯೆ ಜನ ಮೈಗೂಡಿಸಿಕೊಂಡು ಯೋಗದ ಮಹತ್ವ ತಿಳಿಯುವತ್ತ ದಾಪುಗಾಲು ಹಾಕುತ್ತಿದ್ದಾರೆ. ಹಾಗೂ ದಿನ ಹೋದಂತೆ ಆರೋಗ್ಯದತ್ತ ಕಾಳಜಿ, ಆಸ್ತೆ, ಔಷಧಿಗಳಿಂದ ಆಗುವ ದುಷ್ಪರಿಣಾಮಗಳು, ಅಯ್ಯೋ! ಹೀಗೆ ಇದ್ದರೆ ಮುಂದೇನಾಗುತ್ತದೊ ಅನ್ನುವ ಮನದೊಳಗಿನ ಗಾಬರಿ ಜನ ಆಹಾರ, ವ್ಯಾಯಾಮ, ವಾಕಿಂಗು, ಯೋಗದ ಕಡೆ ಹೆಚ್ಚು ಹೆಚ್ಚು ವಾಲುತ್ತಿರುವುದು ಹಾಗೂ ತಿಳಿದುಕೊಳ್ಳುವ ಆಸಕ್ತಿ ಅಧಿಕವಾಗುತ್ತಿರುವುದನ್ನು ಕಾಣಬಹುದು. ಮತ್ತಷ್ಟು ಓದು 
ನಕಲಿ ಜಾತಿ ಪ್ರಮಾಣ ಪತ್ರ ತೋರಿಸಿ 5 ಮೊಟ್ಟೆ ತಿಂದ ವಿದ್ಯಾರ್ಥಿ (ಸುಳ್ಸುದ್ದಿ)
– ಪ್ರವೀಣ್ ಕುಮಾರ್ ಮಾವಿನಕಾಡು
ಅಪ್ಪನೆಂಬ ಆಪ್ತ…
– ಗೀತಾ ಹೆಗ್ಡೆ
ಇತಿ ಮಿತಿಯಿಲ್ಲದ ಪ್ರೀತಿಯ ತೇರು ಎಂದರೆ ಹೆತ್ತವರು. ಅಲ್ಲಿ ನಾನು ನನ್ನದೆಂಬ ವಾಂಚೆ ತುಂಬಿ ತುಳುಕುವಷ್ಟು ಮೋಹ. ಈ ಮೋಹದ ಪಾಶಾ ಬಂಧನ ವರ್ಣಿಸಲಸಾಧ್ಯ. ಅಲ್ಲಿ ಸದಾ ನೆನಪಿಸಿಕೊಳ್ಳುವ, ನೆನೆನೆನೆದು ಆಗಾಗ ಪುಳಕಿತಗೊಳ್ಳುವ ಅಪ್ಪನೊಂದಿಗಿನ ದಿನಗಳು ಪ್ರತಿಯೊಬ್ಬರ ಜೀವನದಲ್ಲೂ ಅಮೂಲ್ಯ.
ಅದರಲ್ಲೂ ಹೆಣ್ಣು ಮಕ್ಕಳು ಅಪ್ಪನನ್ನು ಅಪ್ಪಿಕೊಳ್ಳುವುದು ಜಾಸ್ತಿ. ಆಗಾಗ ಬಯ್ಯುವ ಅಮ್ಮನಿಗಿಂತ ಅಪ್ಪನ ಕಂಡರೆ ಹೆಣ್ಣು ಮಕ್ಕಳಿಗೆ ಅಮಿತ ಪ್ರೀತಿ. ಅಪ್ಪನಿಗೂ ಅಷ್ಟೆ, ಮಗಳೂ ಅಂದರೆ ಆಯಿತು. ಅವಳೇನು ಮಾಡಿದರೂ ಚಿಕ್ಕಂದಿನಲ್ಲಿ ವಹಿಸಿಕೊಂಡು ಬರುವುದು ಅಪ್ಪ ಮಾತ್ರ. ಅದಕ್ಕೇ ಏನೋ ಮಗಳು ಏನು ಕೇಳುವುದಿದ್ದರೂ ಅಪ್ಪನ ಕೊರಳಿಗೆ ಹಾರವಾಗಿ ಅಪ್ಪಾ ಅದು ಕೊಡಸ್ತೀಯಾ? ಅಲ್ಲಿ ಕರ್ಕೊಂಡು ಹೋಗ್ತೀಯಾ ಅಂತೆಲ್ಲಾ.. ಅಪ್ಪಾ ಅಂದರೆ ನನ್ನಪ್ಪಾ! ಎಷ್ಟು ಚಂದ ನನ್ನಪ್ಪಾ. ನಂಗೆ ಅಮ್ಮನಿಗಿಂತ ಅಪ್ಪಾ ಅಂದರೇನೆ ಬಲೂ ಇಷ್ಟ. ಈ ಅಮ್ಮ ಯಾವಾಗಲೂ ಬಯ್ತಾಳೆ, ರೇಗುತ್ತಾಳೆ. ಅದು ಕಲಿ ಇದು ಕಲಿ, ಅಲ್ಲಿ ಹೋಗಬೇಡಾ ಇಲ್ಲಿ ಹೋಗಬೇಡಾ, ಸದಾ ಕಾಟ ಕೊಡ್ತಾಳೆ ಹೀಗೆ ಹಲವಾರು ಕಂಪ್ಲೇಂಟು ಕಂಡವರ ಮುಂದೆ ಮಗಳಿನದ್ದು. ಮತ್ತಷ್ಟು ಓದು 
ಇಂಗ್ಲೆಂಡಿಗೊಬ್ಬನೇ ಟಾಮಿ ರಾಬಿನ್ಸನ್; ಆದರೆ ಇಲ್ಲಿ?
– ಸಂತೋಷ್ ತಮ್ಮಯ್ಯ
ಶತಮಾನಗಳ ಕಾಲ ಸೂರ್ಯ ಮುಳುಗದ ಸಾಮ್ರಾಜ್ಯ ಎಂಬ ಕಿರೀಟ ಧರಿಸಿದ್ದ ಬ್ರಿಟಿಷರಿಗೆ ಇಷ್ಟು ಶೀಘ್ರದಲ್ಲಿ ನಿದ್ರೆಗೆಡುವ ಕಾಲ ಬರುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಮೊದಲೆಲ್ಲಾ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುವ ಭಯೋತ್ಪಾದಕ ದಾಳಿಗಳು ಅವರೊಳಗಿನ ಸಂಗತಿ ಎಂದುಕೊಳ್ಳುತ್ತಿದ್ದ ಬ್ರಿಟಿಷರು ತಿಂಗಳೊಳಗಾಗಿ ಮೂರು ದಾಳಿಗಳನ್ನು ಅನುಭವಿಸಿದ್ದಾರೆ. ಹಾಗಾಗಿ ಇದ್ದಕ್ಕಿದ್ದಂತೆ ಭಯೋತ್ಪಾದನೆ ಒಂದು ಜಾಗತಿಕ ಸಮಸ್ಯೆ ಎಂಬ ಹುಯಿಲು ಮತ್ತೆ ಮುನ್ನಲೆಗೆ ಬಂದಿದೆ.
ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು..? ( ಭಾಗ – ೩ )
ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)
ಒಂದು ಹೋಲಿಕೆ
ವಸಾಹತುಶಾಹಿ ಕಾಲದ ಭಾರತೀಯ ಬುದ್ಧಿಜೀವಿಗಳು ಈ ಕಥೆಯನ್ನು ಸಾರಾಸಗಟಾಗಿ ನಂಬಿದ್ದರು. (ಏಕೆ ಎಂಬುದು ಒಂದು ಮುಖ್ಯ ಪ್ರಶ್ನೆಯಾದರೂ, ಈ ಲೇಖನದಲ್ಲಿ ನಾನದನ್ನು ಚರ್ಚೆಗೆತ್ತಿಕೊಳ್ಳುವುದಿಲ್ಲ). ಇದು ಎರಡು ಪರಸ್ಪರ ವಿರುದ್ಧವಾದ ಪ್ರತಿಕ್ರಿಯೆಗಳಿಗೆ ದಾರಿಮಾಡಿತು: ಒಂದೆಡೆ ಕೆಲವು ಜನರು ಹಿಂದುಗಳ ರಿಲಿಜನ್ನಿನ ಪುನರುತ್ಥಾನಕ್ಕಾಗಿ ಪರಿಶ್ರಮಿಸಿದರು. ವೇದ ಉಪನಿಷತ್ತುಗಳಲ್ಲಿರುವ ಶುದ್ಧವಾದ ರಿಲಿಜನ್ನಿಗೆ ಹಿಂದಿರುಗಬೇಕು ಎಂದು ಅವರು ವಾದಿಸಿದರು. ಇನ್ನೊಂದೆಡೆಯಲ್ಲಿ ಹಿಂದೂಯಿಸಂ ಈಗ ಹೇಗಿದೆಯೋ ಅದೇ ಸರಿ ಎಂದು ಗಂಟಾಘೋಷವಾಗಿ ಸಮರ್ಥಿಸುವವರೂ ಇದ್ದರು. ಈ ಎರಡು ತುದಿಗಳ ನಡುವೆ ಹಲವು ವಿವಿಧ ನಿಲುವುಗಳೂ ನಿಧಾನವಾಗಿ ಹರಳುಗಟ್ಟಿದ್ದವು. ಮತ್ತಷ್ಟು ಓದು 
ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು..? ( ಭಾಗ – ೨ )
ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)
ಹಿನ್ನೆಲೆ:
ಭಾರತದ ಹಲವು ಪ್ರದೇಶಗಳ ಮೇಲೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಹಿಡಿತವನ್ನು ಬಿಗಿಗೊಳಿಸಿ, ಅದರ ಆಡಳಿತಾಧಿಕಾರಿಗಳು ಆಳುವವರ ಸ್ಥಾನಕ್ಕೆ ಬಂದಾಗ, ಭಾರತೀಯ ಸಂಪ್ರದಾಯಗಳ ಕುರಿತಂತೆ ಒಂದು ವಿಶೇಷ ಹಗೆತನವು ವಸಾಹುತು ಆಡಳಿತ ನೀತಿಯ ಹೆಗ್ಗುರುತಾಯಿತು. ಈ ಹಗೆತನಕ್ಕೆ ಬಹಳ ಪುರಾತನ ಇತಿಹಾಸವಿರುವುದು ನಿಜ. ಹಿಂದೂಗಳ ‘ರಿಲಿಜನ್’ ಆದ ‘ಹಿಂದೂಯಿಸಂ’ನ ಪ್ರತಿ ಅಂಶವೂ ಅವರಿಗೆ ಆಕ್ಷೇಪಾರ್ಹ ಮತ್ತು ಅಸಂಗತವಾಗಿ ಕಂಡಿದ್ದು ಹಳೆಯ ವಿಚಾರ. ಬಾಲ್ಯವಿವಾಹ, ಸತಿ ಪದ್ಧತಿ ಮುಂತಾದ ಅಸಹನೀಯ ಮತ್ತು ಅನೈತಿಕ ಆಚರಣೆಗಳನ್ನು ಅವರು ಭಾರತದಲ್ಲಿ ‘ಕಂಡುಕೊಂಡಿದ್ದರಿಂದ’ ಮಾತ್ರವೇ ಈ ಹಗೆತನವು ಬೆಳೆದದ್ದಲ್ಲ. ಅವರ ಹಗೆತನಕ್ಕೆ ಸಾಕಷ್ಟು ಆಳವಾದ ಬೇರುಗಳಿವೆ: ತಮ್ಮ ರಿಲಿಜನ್ನಿನ ಕನ್ನಡಕದಿಂದ ನೋಡಿದಾಗ, ಇಂತಹ ವಿಕೃತ ಆಚರಣೆಗಳು ಸುಳ್ಳು ರಿಲಿಜನ್ಗಳ ಅವಿಭಾಜ್ಯ ಅಂಗಗಳು ಎಂದು ಅವರಿಗೆ ಅನಿಸಿತ್ತು. ‘ಹಿಂದೂಯಿಸಂ’ ಎನ್ನುವುದು ಸುಳ್ಳು ಮತ್ತು ಅವನತಿ ಹೊಂದಿದ ರಿಲಿಜನ್ನಾದ್ದರಿಂದ, ಇಂತಹ ಅರ್ಥಹೀನ ವಿಕೃತ ಆಚರಣೆಗಳು ಕೇವಲ ಆಕಸ್ಮಿಕಗಳಲ್ಲ, ಬದಲಿಗೆ ಅದರ ಅಗತ್ಯ ಲಕ್ಷಣಗಳು ಎಂದು ಅವರು ನಂಬಿದ್ದರು. ಮತ್ತಷ್ಟು ಓದು 
ನಾವೇಕೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು..? ( ಭಾಗ – ೧ )
ಎಸ್.ಎನ್. ಬಾಲಗಂಗಾಧರ
(ತಿದ್ದುಪಡಿ ಮಾಡಿದ ಅನುವಾದ.
ಮೂಲ ಅನು: ಸಿ.ಎಸ್.ಎಲ್.ಸಿ ಸಂಶೋಧಕರು, ‘ಪೂರ್ವಾವಲೋಖನ’ ಕೃತಿಯಲ್ಲಿ ಪ್ರಕಟವಾಗಿದೆ.)
ನನ್ನ ಅನುಭವವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮೂಲಕ ಈ ಲೇಖನವನ್ನು ಪ್ರಾರಂಭಿಸುತ್ತೇನೆ. ಅಮೇರಿಕಾದಲ್ಲಿರುವ ಅನಿವಾಸಿ ಭಾರತೀಯರ ಬಾಯಲ್ಲಿ ನಾನು ಈ ಕೆಳಗಿನ ಮಾತುಗಳನ್ನು ಪದೇ ಪದೇ ಕೇಳಿದ್ದೇನೆ: “ನಾನು ಹಲವು ದಶಕಗಳ ಹಿಂದೆ ಅಮೇರಿಕಕ್ಕೆ ಬಂದಾಗ ನನಗೆ ಹಿಂದೂಯಿಸಂನ ಕುರಿತು ಅಷ್ಟಾಗಿ ತಿಳಿದಿರಲಿಲ್ಲ. ನನ್ನ ಈ ಅಜ್ಞಾನದ ಕುರಿತು ನನಗೆ ಅರಿವು ಮೂಡಿದ್ದೇ ನನ್ನ ಮಕ್ಕಳು ಹಿಂದೂಯಿಸಂ ಎಂದರೆ ಏನು ಎಂದು ಪ್ರಶ್ನಿಸಲು ಆರಂಭಿಸಿದಾಗ. ನಾನು ಅವರಿಗೆ ಹಿಂದೂಯಿಸಂ ಎಂದರೇನು ಎಂದು ಕಲಿಸಬೇಕಿತ್ತು, ಆದ್ದರಿಂದ ನಾನೂ ಹಿಂದೂಯಿಸಂ ಕುರಿತು ಭಾರತದಲ್ಲಿದ್ದಾಗ ತಿಳಿದುಕೊಂಡದ್ದಕ್ಕಿಂತ ಹೆಚ್ಚು ಅಮೆರಿಕೆಯಲ್ಲಿ ಕುಳಿತು ತಿಳಿದುಕೊಂಡೆ. (ಈ ವಿಚಾರದಲ್ಲಿ ಆ ಸ್ವಾಮಿ ಅಥವಾ ಈ ಸಂಘಟನೆ ನನಗೆ ಸಹಾಯ ಮಾಡಿತು. ಅವರಿಗೆ ನನ್ನ ಕೃತಜ್ಞತೆಗಳು).” ಮತ್ತಷ್ಟು ಓದು 
ಮೋಹಕ ತಾರೆ ರಮ್ಯಾಳಿಗೊಂದು ಪ್ರೀತಿಯ ಓಲೆ..
ಶಿವಾನಂದ ಶಿವಲಿಂಗ ಸೈದಾಪೂರ.
ಎಂ.ಎ. ವಿದ್ಯಾರ್ಥಿ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ,
ಬೆಳಗಾವಿ.
ರಮ್ಯಾ ಮೇಡಮ್, ಬರೆಯೋದು ಸ್ವಲ್ಪ ತಡವಾಯಿತು. ಅಭಿಮಾನಿಯೊಬ್ಬ ಹೀಗೆ ಬರೆಯೋದು ಏಷ್ಟು ಸರಿಯೋ, ತಪ್ಪೋ ಗೊತ್ತಿಲ್ಲ. ನೀವು ನನ್ನಂತ ಹಲವಾರು ಯುವಕರ ನೆಚ್ಚಿನ ಹೀರೊಯಿನ್, ಕೆಲವೊಂದು ಜನರಿಗೆ ನಿಮ್ಮನ್ನು ನೋಡಿ ಇನ್ಸ್ಪೈರ್ ಆಗುವಂತಹ ಮೋಹಕ ಶಕ್ತಿ ನಿಮಗಿದೆ. ಕೆಲವರು ಆಗಿದ್ದಾರೆ; ಇನ್ನು ಕೆಲವರು ಆಗುವವರು ಇದ್ದಾರೆ. ಅತಿ ಕಡಿಮೆ ವಯಸ್ಸಲ್ಲಿ (ರಾಜಕೀಯದಲ್ಲಿ) ಮೇಲೆ ಬಂದವರು. ಕನ್ನಡ ಭಾಷೆ ಸೇರಿ ಹಲವಾರು ಭಾಷೆಯಲ್ಲಿ ನಟನೆ ಮಾಡಿದ್ದಿರಿ. ಅದಕ್ಕೆ ಏನೊ ಗೊತ್ತಿಲ್ಲ ನಿಮ್ಮನ್ನು ಕಂಡರೆ ನನಗೆ ಕೂಡ ಎಲ್ಲಿಲ್ಲದ ಪ್ರೀತಿ. ಎಲ್ಲರಗಿಂತ ನಿಮ್ಮ ಮೇಲೆ ಅತಿ ಅಭಿಮಾನ. ಜನರೆಲ್ಲ ನಿಮ್ಮನ್ನು ಪ್ರೀತಿಯಿಂದ ಮೋಹಕ ತಾರೆಯೆಂದು ಕರೆಯುತ್ತಾರೆ.. ಅದರಲ್ಲಿ ನಾನು ಕೂಡ ಒಬ್ಬ. ಆದರೆ ನೀವು ಇತ್ತೀಚೆಗೆ ಮಾಡುತ್ತಿರುವುದಾದರೂ ಏನು?. ಸಾವರ್ಕರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿ ಒಬ್ಬ ನಿಸ್ವಾರ್ಥ ನಿಷ್ಠಾವಂತ ದೇಶಭಕ್ತನಿಗೆ ನೀವು ಅಪಮಾನ ಮಾಡಿದ್ದಿರಲ್ಲ ಏನನ್ನನಬೆಕು ನಿಮಗೆ. ರಾಜಕೀಯದಲ್ಲಿದ್ದು ದಿನಕ್ಕೊಂದು ಡೊಂಬರಾಟ ಆಡುತಿದ್ದಿರಿ. ಮಾತು ಮಾತಿಗೆ ನಾವು ದೇಶಕ್ಕೆ ಸ್ವತಂತ್ರ ತಂದು ಕೊಟ್ಟವರೆಂದು ಬೊಬ್ಬೆ ಹೊಡಿಯುತ್ತಿರುವ ನಿಮ್ಮ ಕಾಂಗ್ರೇಸಿನಿಂದ ಏಷ್ಟು ಜನ ಗಲ್ಲಿಗೇರಿದ್ದಾರೆ, ಏಷ್ಟು ಜನ ಅಂಡಮಾನ ಜೈಲಿಗೆ ಹೋಗಿ ಕರಿ ನೀರಿನ ಶಿಕ್ಷೆ ಅನುಭವಿಸಿದ್ದಾರೆ ಹೇಳುವಿರಾ? ಯಾವುದು ನೀವು ಓದಿರುವ ಇತಿಹಾಸ? ಮತ್ತಷ್ಟು ಓದು 





