ಪೀರಾಯರು ಬರೆದ ಕಥೆ – ‘ತ್ರಿಕೋನ’ ( ಮುಂದುವರೆದ ಭಾಗ )
– ಮು. ಅ ಶ್ರೀರಂಗ ಬೆಂಗಳೂರು
ರಾಮಾಚಾರ್ಯರು ಸಂಜೆ ಐದು ಗಂಟೆಗೆ ಆಶ್ರಮದ ಶಾಲೆಯಿಂದ ಬಂದು ತಮ್ಮ ಕೊಠಡಿಯಲ್ಲಿ ಕೂತಿದ್ದರು. ಎಂದಿನಂತೆ ಅಡುಗೆಯವನು ಫ್ಲಾಸ್ಕಿನಲ್ಲಿ ಕಾಫಿ ತಂದು ಅವರ ಟೇಬಲ್ ಮೇಲೆ ಇಟ್ಟು ‘ಆಚಾರ್ಯರೇ ರಾತ್ರಿಗೆ ಏನು ಅಡಿಗೆ ಮಾಡಲಿ’ ಎಂದ.
‘ಬೆಳಗ್ಗೆಯ ಸಾರು ಮಿಕ್ಕಿರಬಹುದು. ಯಾವುದಾದರೊಂದು ಪಲ್ಯ ಮಾಡು ಸಾಕು. ಇವತ್ತು ಚಪಾತಿ ಬೇಡ’.
‘ಆಗಲಿ ಸ್ವಾಮಿ’ ಎಂದು ಅವನು ಕೊಠಡಿಯ ಬಾಗಿಲನ್ನು ಮುಂದಕ್ಕೆ ಎಳದು ಕೊಂಡು ಹೋದ. ಮತ್ತಷ್ಟು ಓದು 
ಯಾರು ಹಿತವರು ಯಡ್ಯೂರಪ್ಪನವರಿಗೆ..?
– ರಾಕೇಶ್ ಶೆಟ್ಟಿ
“ಕೊಟ್ಟ ಕುದುರೆಯನೇರಲರಿಯದೆ…” ವಚನದ ಸಾಲುಗಳು ಕರ್ನಾಟಕ ಬಿಜೆಪಿಯ ನಾಯಕರಿಗೆ ಸರಿಯಾಗಿ ಅನ್ವಯಿಸುತ್ತದೆ. ಎಪಿಎಂಸಿ,ಪಾಲಿಕೆ ಚುನಾವಣೆಗಳೆನ್ನದೇ ದೇಶದ ಮೂಲೆ ಮೂಲೆಯಲ್ಲೂ ಬಿಜೆಪಿ ಗೆದ್ದು ಬರುತ್ತಿರುವ ಕಮಲ ಪಕ್ಷದ ಸುವರ್ಣ ಸಮಯದಲ್ಲೂ, ರಾಜ್ಯ ಬಿಜೆಪಿ ನಾಯಕರು ಉಪಚುನಾವಣೆಯಲ್ಲಿ ಮಕಾಡೆ ಮಲಗಿ ಕಿರಗೂರಿನ ಗಯ್ಯಾಳಿಗಳಂತೆ ಕಾದಾಟಕ್ಕಿಳಿದಿದ್ದಾರೆ. ನಿನ್ನೆಯ ಸಂಘಟನೆ ಉಳಿಸಿ ಹೆಸರಿನ ಸಭೆ, ಅದಕ್ಕೆ ಪ್ರತಿಯಾಗಿ ನಡೆದ ಬೆಂಗಳೂರಿನ ಶಾಸಕ, ಸಂಸದರ ಪತ್ರಿಕಾಗೋಷ್ಟಿ, ನಾಯಕರೆನಿಸಿಕೊಂಡವರ ಏಕವಚನ ಪ್ರಯೋಗ, ಆರೋಪ-ಪ್ರತ್ಯಾರೋಪಗಳಿಂದಾಗಿ ನಿನ್ನೆ ಎಷ್ಟು ಮೆಗಾಧಾರವಾಹಿಗಳ ಟಿಆರ್ಪಿ ಕಡಿಮೆಯಾಯಿತೋ!
ದೇಶದ ಉಳಿದ ರಾಜ್ಯಗಳ ಬಿಜೆಪಿ, ನರೇಂದ್ರ ಮೋದಿಯವರ ಅಭಿವೃದ್ಧಿ ರಾಜಕಾರಣ ಮತ್ತು ಯುವ ಮನಸ್ಸುಗಳ ಆಲೋಚನಾ ಶಕ್ತಿಯಿಂದ ಮುಂದುವರೆಯುತ್ತಿದ್ದರೆ, ರಾಜ್ಯ ಬಿಜೆಪಿ ಮಾತ್ರ ಪುರಾತನ ಜಾತಿ ಮತ್ತು ಓಲೈಕೆ ರಾಜಕಾರಣವನ್ನೇ ನೆಚ್ಚಿಕೊಂಡಿದೆ.ಈಶ್ವರಪ್ಪನವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಮುಖಂಡರೊಬ್ಬರು, ಕುರುಬರಿಗಾಗಿ ಈಶ್ವರಪ್ಪ ಏನು ಮಾಡಿದ್ದಾರೆ? ಯಡ್ಯೂರಪ್ಪನವರೇ ಕನಕ ಜಯಂತಿ ಆರಂಭಿಸಿದ್ದು ಎಂದು ಹೇಳುತ್ತಿರುವುದನ್ನು ಕೇಳಿದೆ. ಆಗಾಗ್ಗೆ ಬರುವ ಜಯಂತಿಗಳ ನೆಪದಲ್ಲಿ ರಜೆಗಳನ್ನು ಕೊಟ್ಟು ಸರ್ಕಾರಿ ಯಂತ್ರವನ್ನು ನಿಲ್ಲಿಸುವ ಪರಿಪಾಠಗಳು ಕೊನೆಯಾಗಬೇಕೆಂಬ ಉದ್ದೇಶದಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತವರು ‘ಜಯಂತಿ ರಜೆ’ಗಳನ್ನೇ ಕಿತ್ತೊಗೆಯುವಂತಹ ಕೆಲಸ ಮಾಡುತ್ತಿರುವಾಗ, ರಾಜ್ಯ ಬಿಜೆಪಿಯ ನಾಯಕರ ಮನಸ್ಥಿತಿ ಇನ್ನೂ ಜಯಂತಿ ರಾಜಕಾರಣದಲ್ಲೇ ಇರುವುದು ಇವರ ಯೋಚನಾ ಲಹರಿ ಯಾವ ಕಾಲದಲ್ಲಿದೆ ಎಂದು ಸೂಚಿಸುತ್ತದೆ. ಹಾಗೆ ನೋಡಿದರೇ ಕಾಂಗ್ರೆಸ್ಸಿನ ‘ಭಾಗ್ಯ’ ರಾಜಕಾರಣಕ್ಕೂ, ಬಿಜೆಪಿಯ ‘ಜಯಂತಿ’ ರಾಜಕಾರಣಕ್ಕೂ ಯಾವ ವ್ಯತ್ಯಾಸವಿದೆ ? ಇವೆಲ್ಲವನ್ನೂ ಪ್ರಶ್ನಿಸಬೇಕಾದ ಪತ್ರಿಕೆಗಳು ಮಾಡುತ್ತಿರುವುದಾದರೂ ಏನು?
ಅಕ್ಷ ತೃತೀಯ – ವೈಶಿಷ್ಟ್ಯ
– ಮಯೂರಲಕ್ಷ್ಮೀ
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಮನುಷ್ಯನ ಆವಿಷ್ಕಾರದೊಡನೆ ಬದಲಾಗುವ ಋತು ಋತುಗಳೊಡನೆ ಸರ್ವತೋಮುಖ ಅಭಿವೃದ್ಧಿಯಲ್ಲಿ ಪರಿಪೂರ್ಣತೆಯತ್ತ ಕೊಂಡೊಯ್ಯಲು ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ. ಹೊಸ ಸಂವತ್ಸರದೊಡನೆ ಯುಗಾದಿಯಿಂದ ಆರಂಭವಾಗಿ ಚೈತ್ರ ಮಾಸ, ಶುಕ್ಲ ಪಕ್ಷ, ವಸಂತ ಋತುವಿನಲ್ಲಿ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲ್ಪಡುವ “ಅಕ್ಷ ತೃತೀಯ” ಅತ್ಯಂತ ಮುಖ್ಯವಾದದು.
ಅಕ್ಷ ತೃತೀಯ ಎಂದರೇನು? ಮತ್ತಷ್ಟು ಓದು 
ಯೋಧನ ಮಾತುಗಳಲ್ಲಿ…
ಸುರೇಶ್ ಮುಗ್ಬಾಳ್
ತಿಪಟೂರು
ಛತ್ತೀಸಘಡದಲ್ಲಿನ ನಕ್ಸಲರ ಕ್ರೌರ್ಯಕ್ಕೂ, ಹತ್ಯೆಯಾದ 25 ಯೋಧರಿಗೂ ಅದೇನು ದ್ವೇಷಗಳಿತ್ತೋ ಏನೋ ಯಾರಿಗೂ ಗೊತ್ತಿಲ್ಲ. ಆದರೆ 300 ಜನ ನಕ್ಸಲರ ಗುಂಪು ಏಕಾ-ಏಕಿ CRPF ಯೋಧರಿದ್ದಲ್ಲಿಗೆ ನುಗ್ಗಿ ಒಂದೇ ಸಮನೆ ಗುಂಡು ಹಾರಿಸಿಬಿಟ್ಟಿದ್ದರು. ಕಾರಣ; ಗುಂಡುಹಾರಿಸಿಕೊಂಡು ಸತ್ತವರೆಲ್ಲಾ ಯೋಧರಾಗಿದ್ದರು, ಸೇನಾ ಸಮವಸ್ತ್ರದಲ್ಲಿದ್ದರು ಮತ್ತು ಸರ್ಕಾರದ ಪರ ಕೆಲಸ ಮಾಡುವವರಾಗಿದ್ದರು ಅಷ್ಟೇ. ವೈಯಕ್ತಿಕ ದ್ವೇಷ ಖಂಡಿತ ಯಾರಿಗೂ ಇದ್ದಿರಲಿಕ್ಕಿಲ್ಲ. ಮತ್ತಷ್ಟು ಓದು 
ದೆಹಲಿ ಪಾಲಿಕೆಯ ಫಲಿತಾಂಶದಲ್ಲಿ ಕರ್ನಾಟಕ ಬಿಜೆಪಿಗೇನು ಪಾಠ?
– ವಿನಾಯಕ ಹಂಪಿಹೊಳಿ
ಕಳೆದ ಹತ್ತು ವರ್ಷಗಳಿಂದ ದೆಹಲಿಯ ಮಹಾನಗರ ಪಾಲಿಕೆಯು ಬಿಜೆಪಿಯ ಕೈಯಲ್ಲಿದೆ. ಇಂದು ಸತತ ಮೂರನೇ ಬಾರಿ ಜಯ ಸಾಧಿಸುವ ಮೂಲಕ ಹ್ಯಾಟ್ರಿಕ್ ನಿರ್ಮಿಸಿದೆ. ಆದರೆ ಹತ್ತು ವರ್ಷಗಳ ಆಡಳಿತದ ಕುರಿತು ಜನರಿಗೇನೂ ಒಳ್ಳೆಯ ಅಭಿಪ್ರಾಯವಿಲ್ಲ. ಮಹಾನಗರ ಪಾಲಿಕೆಗೆ ಆಯ್ಕೆಯಾದ ಬಿಜೆಪಿಗರಲ್ಲಿ ಹತ್ತು ವರ್ಷ ಭ್ರಷ್ಟಾಚಾರವೂ ವ್ಯಾಪಕವಾಗಿಯೇ ನಡೆದಿತ್ತು. ಎರಡು ವರ್ಷಗಳ ಹಿಂದೆ ರಾಜ್ಯ ಚುನಾವಣೆಯಲ್ಲಿ ಆಪ್ ಪಕ್ಷವು ಪ್ರಚಂಡ ಬಹುಮತದಿಂದ ಗೆದ್ದಿತ್ತು. ೨೦೧೩ ಹಾಗೂ ೨೦೧೫ರಲ್ಲಿ ಆಪ್ ಪಕ್ಷಕ್ಕೆ ದೆಹಲಿಯ ಜನತೆ ವೋಟಿನ ಜೊತೆ ಪ್ರೀತಿಯನ್ನೂ ನೀಡಿತ್ತು.
ಇಂಥ ಜನಪ್ರಿಯ ಸರ್ಕಾರದ ಜೊತೆ ಬಿಜೆಪಿಯ ಹಿಡಿತದಲ್ಲಿದ್ದ ಮಹಾನಗರ ಪಾಲಿಕೆಯು ಜಗಳಕ್ಕಿಳಿಯಿತು. ದೆಹಲಿ ಸರ್ಕಾರವು ಪಾಲಿಕೆಗೆ ಹಣ ಬಿಡುಗಡೆ ಮಾಡುವಲ್ಲಿ ನಿಧಾನಗತಿ ತೋರಿಸುತ್ತಿದೆ ಹಾಗೂ ವೇತನ ಬಿಡುಗಡೆ ಮಾಡದೇ ತಡೆಹಿಡಿದಿದೆ ಎಂದು ಪಾಲಿಕೆ ಆರೋಪಿಸಿತು. ಹಾಗೆಯೇ, ಪಾಲಿಕೆಯ ಕೆಲಸಗಾರರು ಕೆಲಸ ನಿಲ್ಲಿಸಿ ಪ್ರತಿಭಟಿಸಿದ್ದರಿಂದ ಇಡೀ ಊರು ಸ್ವಚ್ಛತೆಯನ್ನು ಕಾಣದೇ ದುರ್ನಾತ ಹಿಡಿಯಿತು. ಪಾಲಿಕೆಯು ೧೦ ವರ್ಷಗಳಲ್ಲಿ ಜನರಿಂದ ಪ್ರಶಂಸೆಗೆ ಒಳಗಾಗುವಂತಹ ಶ್ರೇಷ್ಠ ಸಾಧನೆಯನ್ನೇನೂ ಮಾಡಿರಲಿಲ್ಲ. ಪ್ರಗತಿ ಕಾರ್ಯಗಳ ವೇಗ ಅಷ್ಟಕ್ಕಷ್ಟೇ ಇತ್ತು.
ಅಂಕಣರಂಗ ೧ – ಅನಿಯತಕಾಲಿಕ ಅಂಕಣದ ಅಂಕುರಾರ್ಪಣ!!
ನಿಲುಮೆಯಲ್ಲಿ ವಾರಕ್ಕೊಮ್ಮೆ ಒಂದು ಅಂಕಣ ಬರೆಯುವ ಆಸೆ ಸುಮಾರು ದಿನಗಳಿಂದ ಇತ್ತು. ಸುಮಾರು ಎರಡು ವರ್ಷಗಳ ಹಿಂದೆ ನಾನು ಇದೇ ಜಾಲತಾಣದಲ್ಲಿ ‘ನಿನ್ನೆಗೆ ನನ್ನ ಮಾತು’ ಎಂಬ ತುಂಬಾ ಧ್ವನಾರ್ಥಕವುಳ್ಳ ಹೆಸರನ್ನಿಟ್ಟುಕೊಂಡು ಒಂದು ಅಂಕಣ ಬರೆದಿದ್ದೆ. ಅದು ಐದು ಲೇಖನಗಳ ನಂತರ ಮುಂದುವರಿಯಲಿಲ್ಲ. ಬರೀ ಆರಂಭ ಶೂರತ್ವವಾಗಿ ಹೋಯಿತು. ಈ ಸಲದ ಲೇಖನಗಳಿಗೆ ಅಂಕಣರಂಗ ಎಂಬ ಹೆಸರನ್ನೇನೋ ಇಟ್ಟುಕೊಂಡಿರುವೆ. ಜತೆಗೇ ಯಾವುದಕ್ಕೂ ಇರಲಿ ಎಂಬ ಹುಷಾರಿನಿಂದ ಅನಿಯತಕಾಲಿಕ ಎಂಬ ರಕ್ಷಾಕವಚವನ್ನೂ ಧರಿಸಿಕೊಂಡಿರುವೆ!!. ಏಕೆಂದರೆ ವಾರಕ್ಕೊಂದರಂತೆಯೋ ಅಥವಾ ಹದಿನೈದು ದಿನಗಳಿಗೊಮ್ಮೆಯೋ ತಪ್ಪದೆ ಬರೆಯುವ ಬಗ್ಗೆ ನನಗೇ ಅನುಮಾನವಿದೆ. ಅದಕ್ಕೆ ಕಾರಣ ಬರವಣಿಗೆ ನನ್ನ ಮನದಾಳದ ಆಸೆಯಾದರೂ ಅದು ನನಗೆ ಓದಿನಷ್ಟು ಪ್ರಿಯವಾದುದಲ್ಲ. ಸುಲಭವೂ ಅಲ್ಲ. ನಾನು ಬರೆದರೆ ಒಂದು ಹತ್ತು ಪುಸ್ತಕಗಳ ಪರಿಚಯಾತ್ಮಕ ಲೇಖನವನ್ನು ಹೊಸ ಕನ್ನಡ ಸಾಹಿತ್ಯದ ಒಬ್ಬ ಹವ್ಯಾಸಿ ಓದುಗನ ಮಟ್ಟದಲ್ಲಿ ಮಾತ್ರ ಬರೆಯಬಲ್ಲೆ. ಅಂಕಣ ಬರೆಯಲು ಸಾಹಿತ್ಯವೊಂದೇ ಆಗಬೇಕೇ? ಬರೆಯುವ ಮನಸ್ಸಿದ್ದರೆ ಎಷ್ಟೊಂದು ವಿಷಯಗಳಿಲ್ಲ. ಪ್ರಧಾನಿಗಳಿಗೇಕೆ ಭದ್ರತೆ..?
– ಸುರೇಶ್ ಮುಗ್ಬಾಳ್
ತಿಪಟೂರು
ನಾಯಕರ ಭದ್ರತೆಯ ವಿಚಾರದಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದ ಎರಡು ಘಟನೆಗಳು
ಒಂದು “ಪ್ರಧಾನಿಗಳಿಗೇಕೆ ಭದ್ರತೆ..? ಜೀವ ಬೆದರಿಕೆ ಇದ್ದರೆ ಸತ್ತರೆ ಸಾಯಲಿ ಬಿಡಿ” ಎಂದು ಹೇಳಿದ ಬಸವರಾಜ ರಾಯರೆಡ್ಡಿಯವರ ಘಟನೆ. ಮತ್ತೊಂದು ಮಂಡ್ಯ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿಗೆ ಎದುರಾಗಿ ಕಪ್ಪು ಬಟ್ಟೆ ಪ್ರದರ್ಶಿಸಿದ ಪ್ರತಿಭಟನಾಕಾರರನ್ನು ಮಂಡ್ಯ ಎಸ್.ಪಿ. ‘ಸುಧೀರ್ ಕುಮಾರ್ ರೆಡ್ಡಿ’ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಕಾರ್ಯಕ್ರಮದ ವೇದಿಕೆಯ ಮೇಲೆ ರೆಡ್ಡಿಯವರನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡ ಘಟನೆ. ಮತ್ತಷ್ಟು ಓದು 
ವಿಶ್ವ ಭೂ ದಿನ..
– ಗೀತಾ ಹೆಗ್ಡೆ
ವಿಶ್ವ ಭೂ ದಿನಾಚರಣೆಯನ್ನು 90ರ ದಶಕದಲ್ಲಿ ಕೇವಲ ಅಮೇರಿಕಾ ದೇಶದವರು ಮಾತ್ರ ಆಚರಿಸುತ್ತಿದ್ದರು. ಕ್ರಮೇಣ ಇನ್ನಿತರ ದೇಶಗಳು ಈ ನಿಟ್ಟಿನಲ್ಲಿ ತಮ್ಮ ತಮ್ಮ ಪ್ರದೇಶದಲ್ಲಿ ಪ್ರಚಾರ ಪಡಿಸುತ್ತ 1970 ರಿಂದ 192 ರಾಷ್ಟ್ರಗಳು ವಿಶ್ವ ಭೂ ದಿನಾಚರಣೆಯನ್ನು ಏಪ್ರಿಲ್ 22 ರಂದು ಆಚರಿಸುತ್ತ ಬಂದಿವೆ. ಆದರೆ ಈ ಕಾಳಜಿ ಕೇವಲ ಒಂದು ದಿನಕ್ಕೆ ಮುಗಿಯದೆ ಪ್ರತಿ ದಿನ ಪ್ರತಿಯೊಬ್ಬರಲ್ಲೂ ಪ್ರತಿ ಮನೆ ಮನೆಗಳಲ್ಲೂ ಜಾಗೃತವಾಗಿರಬೇಕು. ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಕೂಡ ಈ ದಿನ ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಮಕ್ಕಳಿಗೆ ಮನೆಯೆ ಮೊದಲ ಪಾಠ ಶಾಲೆ ಅನ್ನುವಂತೆ ಚಿಕ್ಕಂದಿನಿಂದಲೆ ಅವರಲ್ಲಿ ಭೂಮಿ ಅಂದರೆ ಏನು, ಅದನ್ನು ಸ್ವಚ್ಛವಾಗಿರಿಸಿಕೊಳ್ಳುವ ಬಗ್ಗೆ, ಪರಿಸರ ಕಾಳಜಿ, ಗಿಡ ಮರಗಳ ಬಗ್ಗೆ ಪ್ರೀತಿಯ ಭಾವನೆ ಬೆಳೆಸುವುದು ಹೆತ್ತವರ ಕರ್ತವ್ಯ ಕೂಡಾ. ಮತ್ತಷ್ಟು ಓದು 
ವಿಲಕ್ಷಣ..!
– ಗುರುರಾಜ ಕೊಡ್ಕಣಿ. ಯಲ್ಲಾಪುರ
ಶಮಂತಕ ಏದುಸಿರು ಬಿಡುತ್ತಿದ್ದ. ಅದೆಷ್ಟು ದೂರದಿಂದ ಆ ದಟ್ಟ ಕಾಡಿನಲ್ಲಿ ಓಡುತ್ತ ಸಾಗಿದ್ದನೋ ಅವನಿಗೆ ತಿಳಿಯದು. ಹುಲ್ಲುಗಂಟಿಗಳನ್ನು ದಾಟಿ, ನಡುನಡುವೆ ಮರಗಳನ್ನು ತಪ್ಪಿಸಿ ಜಿಗಿಯುತ್ತ ಮುಂದೆ ಸಣ್ಣದ್ದೊಂದು ದಾರಿಯೂ ಕಾಣದ ಗೊಂಡಾರಣ್ಯ ನಡುವೆ ನಿಂತವನಿಗೆ ತಾಳಲಾಗದ ಬಾಯಾರಿಕೆ. ಸುಮ್ಮನೇ ಉಗುಳು ನುಂಗುತ್ತ ಹಿಂತಿರುಗಿ ನೋಡಿದ. ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನ ಅವನಿಗೆ. ಆ ಸಣ್ಣದ್ದೊಂದು ಅನುಮಾನವೇ ಅವನನ್ನು ದಿಕ್ಕೆಟ್ಟು ಓಡುವಂತೆ ಮಾಡಿದ್ದು. ಅವನ ಹಿಂದೆ ಯಾರೂ ಇದ್ದಂತೆನಿಸಲಿಲ್ಲ. ಒಂದಷ್ಟು ಜೀರುಂಡೆಗಳ ಜಿರ್ ಗುಟ್ಟುವಿಕೆ, ಅಲ್ಲೊಂದು ಇಲ್ಲೊಂದು ಹಕ್ಕಿಗಳ ಹಾಡು, ದೂರದಲ್ಲೆಲ್ಲೋ ’ಘೂಕ್, ಘೂಕ್’ ಎಂದರಚುವ ಕೋತಿಗಳ ಅರಚಾಟ, ಇಷ್ಟೆಲ್ಲದರ ನಡುವೆ ಕಾಡುತ್ತಿರುವ ಅಗೋಚರ ಭಯ. ಶಮಂತಕನ ಕಾಲುಗಳಲ್ಲಿ ಅಸಾಧ್ಯವಾದ ನೋವು. ಓಡಿದ ಅಪರಿಮಿತ ಓಟದ ಪರಿಣಾಮವೋ ಏನೋ ಮೈಯೆಲ್ಲ ಅಂಟಂಟು ಬೆವರು. ಅಸಲಿಗೆ ತಾನು ಹೀಗೆ ಹುಚ್ಚನಂತೆ ಓಡುತ್ತಿದ್ದುದೇಕೆ ಎನ್ನುವುದು ಅವನಿಗೆ ನೆನಪಾಗದು. ಮತ್ತಷ್ಟು ಓದು 
ನಿಮ್ಮ ದೇವರ ಶಕ್ತಿಯನ್ನು ಸಂಶಯಿಸಿದರೆ ಟಿಪ್ಪೂ ಸುಲ್ತಾನರ ಕಥೆಯನ್ನೊಮ್ಮೆ ನೆನಪಿಸಿ.
– ಪ್ರವೀಣ್ ಕುಮಾರ್ ಮಾವಿನಕಾಡು
ದೇವರು, ದೇವಾಲಯ ಎಂದ ಕೂಡಲೇ ಕೆಲವು ವಿಚಾರವಾದಿಗಳು ಅದೊಂದು ಶೋಷಿಸಲೆಂದೇ ಸೃಷ್ಠಿಸಲಾದ ವ್ಯವಸ್ಥೆ ಎಂದುಬಿಡುತ್ತಾರೆ. ಅವರನ್ನು ಅನುಸರಿಸುವ ಇಂದಿನ ಬಹುತೇಕ ಯುವ ಜನರೂ ಕೂಡಾ ದೇವರಿಗೆ ಶಕ್ತಿಯಿಲ್ಲ, ದೇವರನ್ನು ಪೂಜಿಸುವುದರಿಂದ ಸಮಯ ಹಾಳು, ಹಣ ವ್ಯರ್ಥ ಎಂದೆಲ್ಲಾ ತಗಾದೆ ತೆಗೆಯುತ್ತಾರೆ.
ದೇವರು, ದೇವಾಲಯ, ಪೂಜೆ ಇವುಗಳ ಪರ ಯಾರೆಷ್ಟೇ ಸಮರ್ಥಿಸಿಕೊಂಡರೂ ಅದನ್ನು ಸಾರಾಸಗಟಾಗಿ ತಳ್ಳಿ ಹಾಕುತ್ತಾರೆ. ವೇದ, ಪುರಾಣ, ಮಹಾಭಾರತ, ರಾಮಾಯಣ, ಸಾವಿತ್ರಿ, ಪ್ರಹ್ಲಾದ … ಉಹೂಂ. ಇವ್ಯಾವುದನ್ನು ಉಲ್ಲೇಖಿಸಿಯೂ ಅವರನ್ನು ಒಪ್ಪಿಸಲು ಸಾಧ್ಯವಿಲ್ಲ. ಅವುಗಳನ್ನೆಲ್ಲಾ ಕಟ್ಟುಕಥೆಗಳೆಂದರೆ ಮುಗಿದೇ ಹೋಯಿತಲ್ಲ, ಮುಂದೆ ಮಾತಾಡುವುದಾದರೂ ಹೇಗೆ? (ಆದರೆ ಅವರು ಮಾತ್ರ ಅದೇ ಕಟ್ಟುಕಥೆಗಳನ್ನು ಬಳಸಿಕೊಂಡು ತಮ್ಮ ವಾದಗಳನ್ನು ಸಮರ್ಥನೆ ಮಾಡಿಕೊಳ್ಳಬಹುದು ಎನ್ನುವುದು ನಿಮಗೆ ನೆನಪಿರಲಿ). ಮತ್ತಷ್ಟು ಓದು 




