“ಹುಟ್ಟು”…
– ‘ಶ್ರೀ’ ತಲಗೇರಿ
ನರಗಳಲ್ಲಿ ತುಂಬಿ ಹರಿವ
ರಕ್ತಕ್ಕೆ ಅದೆಂಥ ವಾಸನೆಯೋ..
ಮತ್ತೆ ಮತ್ತೆ ಕೆಂಪಾಗುತ್
ಕಪ್ಪಾಗಿ ಹೆಪ್ಪಾಗುತ್ತದೆ
ಆಸೆಗಳ ತೆಕ್ಕೆಯಲ್ಲಿ.. ಮತ್ತಷ್ಟು ಓದು 
ಕತೆಗಾರನ ಗುಪ್ತಭಯ ಕತೆಯಲ್ಲಿಯೇ ಬಯಲಾಯಿತು…!!
– ಗುರುರಾಜ ಕೊಡ್ಕಣಿ. ಯಲ್ಲಾಪುರ
ನಡುರಾತ್ರಿಯ ನಿಶ್ಯಬ್ದದ ನಡುವೆ ಕಿಟಕಿಯ ಗಾಜು ಚೂರುಚೂರಾಗಿದ್ದು ನನಗೆ ಗೊತ್ತಾಗಿತ್ತು. ಏರ್ ಕಂಡಿಶನರ್ ಕಾರ್ಯ ನಿರ್ವಹಿಸುತ್ತಿಲ್ಲವೆನ್ನುವ ಕಾರಣಕ್ಕೆ ಮಫ್ಲರಿನಿಂದ ಕಿವಿ ಮುಚ್ಚಿಕೊಳ್ಳದಿದ್ದ ನನಗೆ ಕಿಟಕಿಯ ಗಾಜು ನೆಲಕ್ಕಪ್ಪಳಿಸಿದ್ದ ಶಬ್ದ ಸ್ಪಷ್ಟವಾಗಿಯೇ ಕೇಳಿಸಿತ್ತು. ಮಲಗಿದ್ದವನು ಚಕ್ಕನೇ ಎದ್ದು ಕುಳಿತೆ. ಮಧ್ಯವಯಸ್ಕನಾಗಿರುವ ನನಗೆ ನನ್ನ ವಯಸ್ಸಿನ ಬಗ್ಗೆಯೇ ಕೊಂಚ ಅಸಹನೆ. ನನ್ನ ವಯಸ್ಸು ನನ್ನ ಮಗನಷ್ಟಾಗಲಿ ಅಥವಾ ನನ್ನ ತಂದೆಯಷ್ಟಾಗಲಿ ಇದ್ದಿದ್ದರೆ ಸೂಕ್ತವಾಗಿರುತ್ತಿತ್ತು ಎನ್ನುವ ಭಾವ ನನಗೆ. ‘ಭಯಪಡಬೇಡ, ಏನೂ ಆಗಿಲ್ಲ. ಎಲ್ಲಿದ್ದಿಯೋ ಅಲ್ಲೇ ಇರು’ ಎಂದು ನನ್ನ ಹೆಂಡತಿಗೆ ಅಪನಂಬಿಕೆಯಲ್ಲಿಯೇ ನುಡಿದೆನಾದರೂ ನನ್ನ ಮಾತುಗಳನ್ನು ಆಕೆಯೂ ನಂಬುವುದಿಲ್ಲ ಎನ್ನುವುದು ನನಗೆ ಗೊತ್ತಿತ್ತು. ಕೆಳಮಹಡಿಯಲ್ಲಿ ಏರುದನಿಯಲ್ಲಿ ಕೂಗಾಡುತ್ತಿದ್ದ ಆಗಂತುಕರ ದನಿ
ನಮ್ಮಿಬ್ಬರಿಗೂ ಕೇಳಿಸುತ್ತಿತ್ತು. ‘ನೀನು ಬಟ್ಟೆ ಧರಿಸಿಕೊ’ ಎಂದು ಪತ್ನಿಗೆ ಹೇಳುತ್ತ ಕೋಣೆಯ ದೀಪದ ಗುಂಡಿಯನ್ನು ಒತ್ತಿದಾಗಲೇ ಮನೆಯಲ್ಲಿ ವಿದ್ಯುತ್ ಸರಬರಾಜು
ನಿಂತುಹೋಗಿದೆಯೆನ್ನುವುದು ನೆನಪಾಗಿದ್ದು. ತಕ್ಷಣಕ್ಕೆ ಕೈಗೆ ಸಿಕ್ಕ ಮೊಬೈಲಿನ ಬೆಳಕನ್ನೇ ಕತ್ತಲಿನ ನಿವಾರಣೆಗಾಗಿ ಬಳಸಿಕೊಂಡೆ. ನುಗ್ಗಿರುವ ಆಗಂತುಕರು ಮೆಟ್ಟಲೇರಿ ಬರುತ್ತಿರುವ ಶಬ್ದ ನಮ್ಮ ಕಿವಿಯ ಮೇಲೆ ಬೀಳುತ್ತಿತ್ತು. ಶಯನಗೃಹದ ಬಾಗಿಲು ಭದ್ರಪಡಿಸಿ ಪಡಸಾಲೆಗೆ ಬಂದೆ. ಹಜಾರದ ಕತ್ತಲಿನುದ್ದಕ್ಕೂ ಕುಣಿದಾಡುತ್ತಿದ್ದುದು ನುಸುಳುಕೋರರ ಕೈಯಲ್ಲಿದ್ದ ಹಿಡಿದೀಪದ ಬೆಳಕು. ಎರಡು ಕೈಗಳನ್ನು ಮೇಲೆತ್ತಿ ಹಿಡಿದು, ‘ನಾನು ಇಲ್ಲಿಯೇ ನಿಂತಿದ್ದೇನೆ’ಎಂದು ಕಿರುಚಿದೆ. ಕಿರುಚಿದೆ ಎಂದು ನಾನಂದುಕೊಂಡೆ. ಆದರೆ ನನ್ನ ಮಾತುಗಳು ಚಿಕ್ಕ ಮಗುವೊಂದರ ಪಿಸುಗುಡುವಿಕೆಯಂತೇ ನನ್ನ ಗಂಟಲಿನಿಂದ ಹೊರಬಿದ್ದಿದ್ದವು. ಮತ್ತಷ್ಟು ಓದು 
ಮೋದಿ ಭಕ್ತರೇನು ಮುಟ್ಟಾಳರೇ..?
– ಸಂತೋಷಕುಮಾರ ಮೆಹೆಂದಳೆ.
( ತನ್ನ ನಂಬಿ ಹಿಂದೆ ಕರೆದೊಯ್ಯುವವನು ನಾಯಕನಾಗುವುದು ಸಹಜ. ಆದರೆ ಕ್ರಮೇಣ ಸಿದ್ಧಾಂತದಲ್ಲಿ ವೈಪರಿತ್ಯಗಳುಂಟಾಗಿ ಆ ನಾಯಕತ್ವ ಸಹಜವಾಗೇ ಕುಸಿಯುತ್ತದೆ. ಆದರೆ ತನ್ನ ನಂಬಿಕೆಗಳನ್ನು ಸಂಪೂರ್ಣ ಸಮೂಹದ ನಂಬಿಕೆಯನ್ನಾಗಿ ಪರಿವರ್ತಿಸೋದಿದೆಯಲ್ಲ ಅಂಥವನು ಶಾಶ್ವತವಾಗಿ ನಾಯಕನಾಗುತ್ತಾನೆ ಮತ್ತು ಆ ಸ್ಥಾನ ಅಬಾಧಿತ. ಹಾಗೆ ಜನರ ನಂಬುಗೆ ಮತ್ತು ವಿಶ್ವಾಸ ಎರಡನ್ನೂ ಗಳಿಸುವವನು ಮಿತ್ರರಷ್ಟೇ ಶತ್ರುಗಳನ್ನೂ ಗಳಿಸುತ್ತಾನೆ. ಕಾರಣ ಯಶಸ್ಸು ಎನ್ನುವುದು ಎಂಥವನ ನಿಯತ್ತನ್ನೂ ಹಾಳು ಮಾಡಿಬಿಡುತ್ತದೆ ) ಮತ್ತಷ್ಟು ಓದು 
ಆನಂದ ಕರುಣಿಸಿದ ತಾಂಡವ
– ರಾಜೇಶ್ ರಾವ್
ಭಾರತವು ಬ್ರಿಟಿಷರ ದಾಸ್ಯದಲ್ಲಿದ್ದ ಕಾಲ. ಬರಿಯ ರಾಜಕೀಯ ದಾಸ್ಯವಲ್ಲ. ನಮ್ಮ ಇತಿಹಾಸವನ್ನು ತಿರುಚಿ ನಮ್ಮ ಮೂಲವನ್ನೇ ಪ್ರಶ್ನಿಸಿದ್ದ ಕಾಲ. ಅಂತಹ ತಿರುಚಿದ ವಿಚಾರವನ್ನೇ ಶಿಕ್ಷಣದಲ್ಲಿ ಅಳವಡಿಸಿ ಉರು ಹೊಡೆಸಿ ಪೀಳಿಗೆಗಳನ್ನೇ ದಾಸ್ಯಕ್ಕೊಳಪಡಿಸಲು ತಯಾರಾಗಿರಿಸಿದ್ದ ಕಾಲ. ಆರ್ಯ ಆಕ್ರಮಣವಾದವನ್ನೇ ತಲೆಯಲ್ಲಿ ತುಂಬಿಕೊಂಡು ನಮ್ಮ ಅಸ್ಮಿತೆಗೆ, ಉತ್ಕರ್ಷಕ್ಕೆ, ಜಗದ್ಗುರು ಪಟ್ಟಕ್ಕೆ ಕಾರಣವಾದ ನಮ್ಮ ಪ್ರಾಚೀನ ಕಲೆ, ಸಂಸ್ಕೃತಿಗಳನ್ನು ತುಚ್ಛವಾಗಿ ಕಾಣುವ ಪೀಳಿಗೆಯೇ ಸೃಷ್ಟಿಯಾಗಿದ್ದ ಕಾಲ. ಆದರೂ ಒಂದು ಕಡೆ ರಾಜಕೀಯ ದಾಸ್ಯವನ್ನು ಹೊಡೆದೋಡಿಸಲು ಹೋರಾಟ ನಡೆದಿತ್ತು. ಅದರ ನಡುವಲ್ಲೇ ನಮ್ಮ ಇತಿಹಾಸವನ್ನು ಶುದ್ಧೀಕರಿಸುವ ಪ್ರಕ್ರಿಯೆಯೂ ನಡೆದಿತ್ತು. ಭಾರತೀಯ ಕಲೆಯನ್ನು ಪೌರ್ವಾತ್ಯ, ಪಾಶ್ಚಿಮಾತ್ಯರಿಬ್ಬರೂ ತುಚ್ಛವಾಗಿ ನೋಡುತ್ತಿದ್ದ ಸಂದರ್ಭದಲ್ಲಿ ಅವುಗಳ ಮಹತ್ವವನ್ನು ಪಾಶ್ಚಿಮಾತ್ಯರದ್ದೇ ಪರಿಭಾಷೆಯಲ್ಲಿ ಕಟ್ಟಿಕೊಟ್ಟ ಮಹಾನುಭಾವ ಪಶ್ಚಿಮ ಮೂಲದ-ಪೂರ್ವದ ಮೇಲಿನ ಆದರ ಭಾವದ ಆನಂದ ಕುಮಾರ ಸ್ವಾಮಿ. ಮತ್ತಷ್ಟು ಓದು 
ಲಘು ಹರಟೆ: ಡಿಮಾನಿಟೈಸಷನ್ನೂ, ಅಜೈಲ್ ಪ್ರೊಜೆಕ್ಟೂ..
– ನಾಗೇಶ ಮೈಸೂರು
ಪೆಚ್ಚು ಮೋರೆ ಹಾಕಿಕೊಂಡು ಸುಟ್ಟ ಬದನೆಯ ಮುಖ ಹಾಕಿಕೊಂಡು ಬರುತ್ತಾ, ಎದುರು ಸಿಕ್ಕಿದ ಗುಬ್ಬಣ್ಣನನ್ನು ಕಂಡು ಮರುಭೂಮಿಯಲ್ಲಿ ಓಯಸಿಸ್ ಕಂಡಂತಾಗಿ ‘ ಹಲೋ ಗುಬ್ಬಣ್ಣ..!’ ಎಂದೆ ತುಸು ಉದ್ವೇಗದ ದನಿಯಲ್ಲಿ.
‘ನಮಸ್ಕಾರ ಸಾರ್..’ ಅಷ್ಟೇ ನೀರಸ ದನಿಯಲ್ಲಿ ಗುಬ್ಬಣ್ಣನ ಮಾರುತ್ತರ.. ಸಂವೇರ್ ಸಂಥಿಂಗ್ ಈಸ್ ರಾಂಗ್.. ಹಾಳು ಸಿಂಗಪುರದ ಬಿಸಿಲು ಕಾಡಿ ನಲುಗಿಸಿಬಿಟ್ಟಿರಬೇಕು..
‘ತುಂಬಾ ಬಿಸಿಲು ಅಲ್ವಾ.. ಬಾ ಹೋಗಿ ಒಂದೊಂದು ಎಳನೀರು ಆದರು ಕುಡಿಯೋಣ.. ಮುಖವೆಲ್ಲ ಬಾಡಿ ಹೋಗಿದೆಯಲ್ಲೋ..?’ ಅಂದೆ.
‘ಅಯ್ಯೋ ಅದು ಬಿಸಿಲಿಗೆ ಬಾಡಿದ್ದಲ್ಲ ಸಾರ್.. ಹಾಳು ಅಪ್ಕಮಿಂಗ್ ಇಂಡಿಯಾ ಟ್ರಿಪ್ ಪ್ರಭಾವ… ಸುತ್ತಿ ಸುತ್ತಿ ಸಾಕಾಗೋಯ್ತು.. ಆದರೂ ನೋ ಸಕ್ಸಸ್..’ ಮತ್ತಷ್ಟು ಓದು 
ಉಳಿಯುವಂಥ ವಿಜ್ಞಾನ ಸಾಹಿತ್ಯ ಕೊಟ್ಟ ಅಡ್ಯನಡ್ಕರು
– ರೋಹಿತ್ ಚಕ್ರತೀರ್ಥ
ಶಾಲೆಯಲ್ಲಿದ್ದಾಗ ನಾವು ಕಿತ್ತಾಡಿಕೊಂಡು ಓದುತ್ತಿದ್ದ ಪತ್ರಿಕೆ ಎಂದರೆ ಬಾಲವಿಜ್ಞಾನ. ಅದರಲ್ಲಿ ಬರುತ್ತಿದ್ದ “ನೀನೇ ಮಾಡಿ ನೋಡು” ಎಂಬ ಸರಳ ಪ್ರಯೋಗಗಳನ್ನು ಮನೆಯಲ್ಲಿ ಮಾಡಿ ನೋಡುತ್ತಿದ್ದೆವು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಅಲ್ಲಿ ತಜ್ಞರು ಕೊಟ್ಟ ಉತ್ತರಗಳನ್ನು ಓದಿ ಖುಷಿ ಪಡುತ್ತಿದ್ದೆವು. ವ್ಯಕ್ತಿಚಿತ್ರಗಳನ್ನು ಎರಡೆರಡು ಬಾರಿ ಓದಿ ಮನನ ಮಾಡಿಕೊಳ್ಳುತ್ತಿದ್ದೆವು. ವಿಜ್ಞಾನ ಪದಬಂಧವನ್ನು ಪೂರ್ತಿಗೊಳಿಸಲು ಹೆಣಗುತ್ತಿದ್ದೆವು. ಪಂಡಿತವರ್ಗಕ್ಕೆ ಸೇರಿದ ವಿಶೇಷ ತಳಿಗಳೆಂಬ ನಮ್ಮ ಜಂಬವನ್ನು ಬಾಲವಿಜ್ಞಾನ ಹೀಗೆ ತೃಪ್ತಿಗೊಳಿಸುತ್ತಿತ್ತು. ಆ ಪತ್ರಿಕೆಯಲ್ಲಿ ತಪ್ಪದೆ ಕಾಣಿಸಿಕೊಳ್ಳುತ್ತ, ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿಹೋಗಿದ್ದ ಒಂದು ಹೆಸರು ಅಡ್ಯನಡ್ಕ ಕೃಷ್ಣ ಭಟ್. ಮತ್ತಷ್ಟು ಓದು 
ಮೋದಿಯಂತವರು ರಾಜಕೀಯಕ್ಕೆ ಬರಬೇಕು..
– ರಾಕೇಶ್ ಶೆಟ್ಟಿ
ದೇಶದ ಪಾಲಿಗೆ ಮಹತ್ವದ ದಿನಗಳಾಗಿ ಇತಿಹಾಸದ ದಿಕ್ಕು ದೆಸೆಯನ್ನೇ ಬದಲಿಸಿದ ಆಗಸ್ಟ್ ೧೫, ಜನವರಿ ೨೬, ಅಕ್ಟೋಬರ್ ೨, ಜನವರಿ ೨೩ರ ಸಾಲಿಗೆ ನಿಶ್ಚಿತವಾಗಿ ನವೆಂಬರ್ ೮ರ ದಿನವನ್ನು ಸೇರಿಸಬಹುದೆನಿಸುತ್ತದೆ. ನವೆಂಬರ್ ೮ರ ಮಧ್ಯರಾತ್ರಿಯಿಂದ ೫೦೦, ೧೦೦೦ ರೂಪಾಯಿಗಳ ಹಳೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯ ಮಗ್ಗಲು ಬದಲಿಸಲು ಹೊರಟ ದಿನ. ಮತ್ತಷ್ಟು ಓದು 
ಜಲಿಯನ್ವಾಲಾ ಬಾಗ್ ಸೇಡಿಗಾಗಿ 21 ವರ್ಷ ಕಾದಿದ್ದ ಕ್ರಾಂತಿಕಾರಿ
ಮಯೂರಲಕ್ಷ್ಮೀ
(ಲೇಖಕರು ಉಪನ್ಯಾಸಕರು)
ಮಾರ್ಚ್ 13, 1940. ಲಂಡನ್ನ ಕಾಕ್ಸ್ಟನ್ ಹಾಲ್. ಈಸ್ಟ್ ಇಂಡಿಯಾ ಅಸೋಸಿಯೇಷನ್ ಮತ್ತು ರಾಯಲ್ ಸೆಂಟ್ರಲ್ ಏಷಿಯಾ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಸಭೆ ನಡೆದಿತ್ತು. ಬ್ರಿಗೇಡಿಯರ್ ಜನರಲ್ ಸರ್ ಪಿ. ಸ್ಕೈಸ್ ಪ್ರಸ್ತುತ ಜಗತ್ತಿನ ವಿದ್ಯಮಾನಗಳ ಕುರಿತು ಮಾತನಾಡುತ್ತಿದ್ದರು. ಅನೇಕ ಗಣ್ಯರು ಅಲ್ಲಿದ್ದರು. ಅಂದು ಓರ್ವ ಪ್ರಮುಖನ ಭಾಷಣ ಮತ್ತು ಸನ್ಮಾನವಿತ್ತು. ಆತ ಭಾರತದಲ್ಲಿನ ತನ್ನ ಸೇವೆಯ ಅವಧಿಯ ಸಾಧನೆಗಳನ್ನು ಕುರಿತು ಮಾತನಾಡಿದ. ಕಾರ್ಯಕ್ರಮದ ನಂತರ ಜನರು ಹೊರನಡೆಯತೊಡಗಿದರು. ಆ ಪ್ರಮುಖನೂ ಹೊರಟ. ಇದ್ದಕ್ಕಿದ್ದಂತೆಯೇ ಅವನಿಂದ ಸುಮಾರು ಮೂರು ಗಜಗಳಷ್ಟು ಅಂತರದಲ್ಲಿದ್ದ ಯುವಕನೋರ್ವ ಮಿಂಚಿನವೇಗದಲ್ಲಿ ಅವನೆದುರಾಗಿ ನಿಂತು ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿದ. ಮತ್ತಷ್ಟು ಓದು 
ದೇವನೂರು ಮಹಾದೇವ ಅವರಿಗೊಂದು ಪ್ರೀತಿಪೂರ್ವಕ ಪತ್ರ
– ಪ್ರವೀಣ್ ಕುಮಾರ್, ಮಾವಿನಕಾಡು
ಕನ್ನಡ ನಾಡಿನ ಸಾಕ್ಷಿಪ್ರಜ್ಞೆ ಎಂದೇ ಕರೆಯಲ್ಪಡುವ ಪ್ರೀತಿಯ ದೇವನೂರು ಮಹಾದೇವ ಅವರಿಗೆ ನಮಸ್ಕಾರಗಳು.
ಕನ್ನಡದ ಪ್ರಖ್ಯಾತ ಸಾಹಿತಿಗಳಲ್ಲಿ ಒಬ್ಬರಾದ ತಾವು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರೂ ಹೌದು. ಆದರೆ ನಿಮ್ಮಲ್ಲಿ ಎಳ್ಳಷ್ಟೂ ಜಂಭವಿಲ್ಲ, ಅಹಂಕಾರವಿಲ್ಲ ಮತ್ತು ದೊಡ್ಡ ದೊಡ್ಡ ಸಾಹಿತಿಗಳು ತೋರುವ ಶೋಕಿಯಿಲ್ಲ. ಸರಳತೆಯೇ ನಿಮ್ಮ ಗುರುತು ಪತ್ರ ಎಂದರೂ ತಪ್ಪಾಗದು. ಮತ್ತಷ್ಟು ಓದು 
ದೇವರು – ಪೂಜೆ
– ಗೀತಾ ಹೆಗಡೆ
ಸಾಮಾನ್ಯವಾಗಿ ಹಳೆಯ ಸಂಪ್ರದಾಯಗಳೆಲ್ಲ ಸ್ವಚ್ಛತೆ ಆಧಾರದ ಮೇಲೆ ನಿಂತಿದೆ. ಹಾಗೆ ಸುಮ್ಮನೆ ಹೇಳಿದರೆ ಯಾರೂ ಅನುಸರಿಸುವುದಿಲ್ಲ. ಅದಕ್ಕೆ ದೇವರು ಹಾಗೆ ಹೀಗೆ ಎಂದು ಕಥೆ ಕಟ್ಟಿದ್ದಾರೆ ಅನಿಸುತ್ತದೆ. ಸ್ವಚ್ಛತೆ ಜನ ಅನುಸರಿಸಲಿ ಎಂದು. ಮಡಿ ಮೈಲಿಗೆ ಆಚಾರ ವಿಚಾರ ಜಾತಿ ಪದ್ಧತಿ ಇವೆಲ್ಲ ಮನುಷ್ಯನೆ ಮಾಡಿದ್ದು ತಾನೆ. ದೇವರಲ್ಲವಲ್ಲ..? ಹಾಗೆಯೇ ಇದು. ಇಲ್ಲಿ ನಂಬಿಕೆಯಿಂದ ಮಾಡಿದ ಕೆಲಸದಲ್ಲಿ ಸ್ವಚ್ಛತೆಯಿದೆ; ಇದರಿಂದ ಶಾಂತಿ ಸಿಗುತ್ತದೆ. ದೇವರು ಒಂದು ಕಲ್ಪನೆ. ಜಾತಿಗೆ ತಕ್ಕಂತೆ ಅವನ ಸ್ವರೂಪದ ವಿಮರ್ಷೆ. ಆದರೆ ದೇವರು ಒಬ್ಬನೇ. ಅದೊಂದು ಶಕ್ತಿ.. ಅದು ಎಲ್ಲೂ ಇಲ್ಲ. ನಮ್ಮ ಮನಸ್ಸಿನ ಒಳ್ಳೆಯ ನಡೆ ನುಡಿ, ನಮ್ಮ ನಿತ್ಯದ ಜೀವನ ಶೈಲಿ, ನಮ್ಮ ಜೀವನದ ಕನ್ನಡಿ. ಮನಸ್ಸು ಬುದ್ಧಿ ಸರಿಯಾಗಿದ್ದರೆ ದೇವರೆನ್ನುವ ಶಕ್ತಿ ನಮ್ಮಲ್ಲೆ ಕಾಣಬಹುದು. ಆದುದರಿಂದ ಅನಾದಿ ಕಾಲದ ಆಚರಣೆ ಅನುಸರಿಸುತ್ತ ನಮ್ಮ ಮನೆ ಸುತ್ತ ಮುತ್ತಲಿನ ವಾತಾವರಣ ಸುಂದರವಾಗಿರಿಸುವುದರಲ್ಲಿ ತಪ್ಪಿಲ್ಲ. ಮತ್ತಷ್ಟು ಓದು 




