ನಂಬಿಕೆ
– ಗೀತಾ ಹೆಗಡೆ
ಬದುಕೆಂಬ ಪಯಣದಲ್ಲಿ ಸಾವಿರಾರು ಜನರ ಪರಿಚಯ ಒಡನಾಟ ನಮಗಾಗುವುದು ಸಹಜ. ಈ ಸಹಜತೆಯಲ್ಲಿ ಎದುರಾಗುವ ಘಟನೆಗಳು ಹಲವಾರು. ಈ ಘಟನೆಗಳು ಮಹತ್ವ ಪಡೆಯುವುದು ಆಳವಾಗಿ ಮನಸ್ಸಿಗೆ ನಾಟಿದರೆ ಮಾತ್ರ ಸಾಧ್ಯ. ಅದಿಲ್ಲವಾದರೆ ಅದಲ್ಲಿಗೆ ಮರೆತು ಹೋಗುತ್ತದೆ. ಹಾಗಾದರೆ ಈ ಘಟನೆಗಳ ಹಿಂದೆ ಇರುವ ವಿಷಗಳಿಗೆಗೆ ಕಾರಣರಾದವರ ಮೇಲಿನ ನಂಬಿಕೆ ಎಲ್ಲರ ಬಗ್ಗೆ ಯಾಕೆ ಉಂಟಾಗುವುದಿಲ್ಲ? ಕೇವಲ ಕೆಲವು ಮನುಷ್ಯರ ಬಗ್ಗೆ ಮಾತ್ರ ಏಕೆ ನಂಬಿಕೆ ಉಂಟಾಗುತ್ತದೆ? ಕಾರಣ ಏನು? ಏಕೆ ಹೀಗೆ? ಆ ಭಾವನೆ ಯಾವ ಹಂತದಲ್ಲಿ ಮನಸ್ಸನ್ನು ಕಾಡುತ್ತದೆ? ಮತ್ತಷ್ಟು ಓದು 
ಬ್ರಹ್ಮಚರ್ಯವೇ ಅಸಹಜವೆಂದ ದಾರ್ಶನಿಕ, ಸನ್ಯಾಸಿನಿಯನ್ನು ವಂಚಕಿ ಎಂದ….!!
– ಗುರುರಾಜ ಕೋಡ್ಕಣಿ. ಯಲ್ಲಾಪುರ
“ನಾನು ಯಾರನ್ನೂ ಸಹ ಆದರ್ಶವ್ಯಕ್ತಿಯಾಗಿ ಸ್ವೀಕರಿಸಲಾರೆ. ನನ್ನನ್ನೂ ಸಹ ಯಾರೂ ಆದರ್ಶವಾಗಿ ಸ್ವೀಕರಿಸಬಾರದು. ಆದರ್ಶ ವ್ಯಕ್ತಿತ್ವಗಳಲ್ಲಿ ಮೇಲು ಕೀಳು ಎಂಬ ಭೇದವಿರಬಾರದು. ಮೊದಲು ಜನಿಸಿದ್ದ ಆದರ್ಶ ವ್ಯಕ್ತಿ, ನಂತರ ಜನಿಸಿದ ಮಹಾನ್ ವ್ಯಕ್ತಿಗಿಂತ ಶ್ರೇಷ್ಟವೆನ್ನುವುದು ಅರ್ಥಹೀನ. ವ್ಯಕ್ತಿತ್ವಗಳಲ್ಲಿನ ಮಹಾನತೆ ಸಮಾನಾಂತರ ರೇಖೆಯಂಥದ್ದು. ಮಹಾತ್ಮಾ ಗಾಂಧಿ, ಮದರ್ ತೆರೆಸಾರಂಥಹ ವ್ಯಕ್ತಿತ್ವಗಳ ಮೇಲೆ ನನಗೆ ತೀರ ಕಡಿಮೆ ಗೌರವವಿದೆ ಎಂಬುದು ಅನೇಕರ ಅಂಬೋಣ. ಅಂಥಹ ಅಭಿಪ್ರಾಯಗಳು ಸಂಪೂರ್ಣ ತಪ್ಪು. ಅಸಲಿಗೆ ನನಗೆ ಇಂಥವರ ಮೇಲೆ ಗೌರವವೇ ಇಲ್ಲ. ಅಂದ ಮೇಲೆ ಹೆಚ್ಚು ಗೌರವ, ಕಡಿಮೆ ಆದರ ಎನ್ನುವ ಪ್ರಶ್ನೆಯೇ ನಿರರ್ಥಕ. ಇವರೆಲ್ಲರೂ ಆದರ್ಶವಾದಿ ಅಪರಾಧಿಗಳು ಎನ್ನುವುದು ನನ್ನ ಅಭಿಪ್ರಾಯ. ನಮ್ಮ ಕಾನೂನು ಮರಣದಂಡನೆ ವಿಧಿಸುವ ದುಷ್ಕರ್ಮಿಗಳ ಅಪರಾಧಕ್ಕಿಂತಲೂ ಇಂಥಹ ಆದರ್ಶವಾದಿ ಅಪರಾಧಿಗಳ ಅಪರಾಧ ಘೋರವೆನ್ನುವುದು ನನ್ನ ವಾದ. ಒಂದರ್ಥದಲ್ಲಿ ನಿಜವಾದ ಅಪರಾಧಿಗಳೆಂದರೆ ಇಂಥವರೇ. ಮದರ್ ತೆರೆಸಾರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಆಕೆಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ವಿಶ್ವದ ಹತ್ತಾರು ರಾಷ್ಟ್ರಗಳು ಆಕೆಯ ಸಾಧನೆಯನ್ನು ಮೆಚ್ಚಿ ಪ್ರಶಸ್ತಿಗಳ ಸುರಿಮಳೆಗೈದವು. ಇಂದಿಗೂ ವಿಶ್ವವಿದ್ಯಾಲಯಗಳು ಆಕೆಗೆ ಒಂದರ ಹಿಂದೊಂದರಂತೆ ಗೌರವ ಡಾಕ್ಟರೇಟ್ ನೀಡುತ್ತಲೇ ಇವೆ. ಇಷ್ಟಾಗಿಯೂ ಆಕೆಯ ಸಾಧನೆಯೇನು ಎಂಬುದು ನನಗರ್ಥವಾಗದ ವಿಷಯ. ಕೈಗೆ ಸಿಕ್ಕ ಅನಾಥರನ್ನೆಲ್ಲ ಎಳೆದುಕೊಂಡು ಹೋಗಿ ಅವರೆಲ್ಲರನ್ನು ಕ್ಯಾಥೋಲಿಕ್ಕರನ್ನಾಗಿ ಪರಿವರ್ತಿಸಿದ್ದೇ ಆಕೆಯ ಸಾಧನೆ. ಮತ್ತಷ್ಟು ಓದು 
ಪ್ರಧಾನಿಯೊಂದಿಗೆ ನಾವು..!
ನವೆಂಬರ್ 8ನೇ ತಾರೀಖಿನ ರಾತ್ರಿ, ಪ್ರಧಾನಿ ನರೇಂದ್ರ ಮೋದಿಯವರು ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಕಠಿಣ ನಿರ್ಧಾರ ಕೈಗೊಂಡು ಕಪ್ಪು ಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಿರುವುದು ನಿಮಗೆಲ್ಲ ತಿಳಿದಿದೆ.
ಕಪ್ಪು ಹಣದ ವಿರುದ್ಧ ದಾಳಿ ಶುರು ಮಾಡಿರುವ ಪ್ರಧಾನಮಂತ್ರಿಯವರ ವಿರುದ್ಧ ದುಷ್ಟಕೂಟಗಳೆಲ್ಲಾ ಒಂದಾಗುತ್ತಿವೆ. ಇಂತಹ ಸಮಯದಲ್ಲಿ ಪ್ರಧಾನಿಯವರಿಗೆ ನೈತಿಕ ಬೆಂಬಲ ನೀಡುವುದು ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯ. ಪ್ರಧಾನಿಗೆ ಬೆಂಬಲ ನೀಡಲು ನಿಲುಮೆ ಗುಂಪಿನಿಂದ ಪತ್ರವೊಂದನ್ನು ಬರೆದಿದ್ದೇವೆ. ಈ ಸಮಯದಲ್ಲಿ ಪ್ರಧಾನಿಯವರಿಗೆ ನಮ್ಮ ಬೆಂಬಲದ ಅಗತ್ಯವಿದೆ ಮತ್ತು ಜವಾಬ್ದಾರಿಯುತ ಭಾರತೀಯರಾಗಿ ಇದು ನಮ್ಮ ಕರ್ತವ್ಯವೂ ಹೌದು.ಇದಕ್ಕೆ ನಿಮ್ಮೆಲ್ಲರ ಬೆಂಬಲವನ್ನು ಬಯಸುತ್ತೇವೆ. ಮತ್ತಷ್ಟು ಓದು 
ಸ್ತ್ರೀ ಸ್ವಾತಂತ್ರ್ಯ ಮತ್ತು ವರ್ತಮಾನದ ತಲ್ಲಣಗಳು
– ಶ್ರೀಶೈಲ್ ಮಗದುಮ್ಮ
ಬಹುಷಃ ಹಲವಾರು ಶತಮಾನಗಳಿಂದ ಚರ್ಚಿವಾಗುತ್ತಿರುವ ವಿಷಯಗಳಲ್ಲಿ ಸ್ತ್ರೀ ಸ್ವಾತಂತ್ರ್ಯವೂ ಕೂಡ ಒಂದು. ಈಗ ಹಲವಾರೂ ವರ್ಷಗಳಿಂದ ಆಂತರಿಕ ಸ್ವಾತಂತ್ರ್ಯದಿಂದ ಬಾಹ್ಯ ಸ್ವಾತಂತ್ರ್ಯದ ಬಗ್ಗೆ ಹಲವಾರು ಚರ್ಚೆಗಳು ಶುರುವಾಗಿವೆ. ಅದರಲ್ಲಿ ನನ್ನ ಬಟ್ಟೆ ನನ್ನ ಆಯ್ಕೆ, ನಾವು ಯಾವಾಗ ಬೇಕಾದರೂ ಎಲ್ಲಿಗೆ ಬೇಕಾದರೂ ಹೋಗುತ್ತೇವೆ ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಅನ್ನುವ ಚರ್ಚೆಗಳು. ಇರಲಿ ಯಾರು ಯಾವ ಬಟ್ಟೆಯನ್ನಾದರೂ ಹಾಕಲಿ, ಯಾರು ಎಲ್ಲಿಗಾದರೂ ಹೋಗಲಿ ಅದು ಅವರ ಇಷ್ಟ, ಇದನ್ನು ಪ್ರಶ್ನಿಸುವುದು ಕೂಡ ಆಕ್ಷೇಪಾರ್ಹವಾದದ್ದು. ಆದರೆ ಈ ವಾದವನ್ನು ಇಟ್ಟುಕೊಂಡು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮಾಜವನ್ನು ಯಾವ ಕಡೆಗೆ ತಗೆದುಕೊಂಡು ಹೋಗುತ್ತಿದ್ದಾರೆ ಎನ್ನುವ ಕಡೆ ಗಮನಹರಿಸಬೇಕಾಗಿದೆ. ಮತ್ತಷ್ಟು ಓದು 
ಲೈಫ್ ಹಿಂಗೂ ‘ಚೇಂಜ್’ ಆಗುತ್ತೆ ಕಣಾ..!
– ತುರುವೇಕೆರೆ ಪ್ರಸಾದ್
ನಾನು ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗ ಐದು ಪೈಸೆ ತಗೊಂಡು ಹೋದರೆ ಅಂಗಡಿ ನಾಗಣ್ಣ ಮೂರು ಪೈಸೆಗೆ ಒಂದು ಹಿಡಿ ಕಡಲೆ, ಎರಡು ಪೈಸೆಗೆ ಒಂದು ಉಂಡೆ ಬೆಲ್ಲ ಕೊಡುತ್ತಿದ್ದರು. ಮೊನ್ನೆ ಬುಧವಾರ ಪ್ರಧಾನಿ ಮೋದಿ ರೂ 1000, 500ರ ನೋಟುಗಳನ್ನು ರಾತ್ರೋ ರಾತ್ರಿ ರದ್ದು ಮಾಡಿದ ಮರುದಿನ 500 ರೂಪಾಯಿ ನೋಟು ಹಿಡಿದು ಹೋದರೂ ಒಂದು ಹಿಡಿ ಕಡ್ಲೆ ಒಂದು ಉಂಡೆ ಬೆಲ್ಲ ಸಿಗದ ಪರಿಸ್ಥಿತಿ ಉಂಟಾಗಿತ್ತು. ಹಿಂದಿನ ದಿನ ರಾತ್ರಿ ಊರಿನಲ್ಲಿ ನೆಟ್ಟಗೆ ಕೆಲಸ ಮಾಡುತ್ತಿದ್ದ 2-3 ಎಟಿಎಂಗಳಲ್ಲಿದ್ದ ಅಳಿದುಳಿದ ನೂರರ ನೋಟುಗಳೆಲ್ಲಾ ಖಾಲಿಯಾಗಿದ್ದವು. ಎಲ್ಲ ಕಡೆಯೂ ರೂ.500ರ ನೋಟುಗಳೇ ರಾರಾಜಿಸುತ್ತಿದ್ದವು, ಜನ ಅವುಗಳನ್ನು ಚಿಲ್ಲರೆ ಮಾಡಿಸಲು ಪರದಾಡುತ್ತಿದ್ದರು.. ದಿನನಿತ್ಯದ ಖರ್ಚಿಗೆ ಚಿಲ್ಲರೆ ನೋಟುಗಳನ್ನು ಹೊಂದಿಸಲು ಹರಸಾಹಸ ಮಾಡುತ್ತಿದ್ದರು. ಹಾಲಿಗೆ, ದಿನಸಿಗೆ, ಬಸ್ಸಿಗೆ, ಆಟೋಗೆ ಹೀಗೆ ಯಾವ ಬಾಬತ್ತಿಗೂ 1000, 500ರ ನೋಟು ಕೆಲಸಕ್ಕೆ ಬಾರದಂತಾಗಿತ್ತು. ಎಲ್ಲಾ ಚಿಲ್ಲರೆ ಕೇಳುವವರೇ! 2-3 ಪೆಟ್ರೋಲ್ ಬಂಕ್‍ಗಳು ಬೆಳಿಗ್ಗೆ ಬಾಗಿಲೇ ತೆರೆಯಲಿಲ್ಲ. ಒಂದು ಪೆಟ್ರೋಲ್ ಬಂಕ್‍ನಲ್ಲಿ ರೂ.500ಕ್ಕೆ ಪೂರಾ ಪೆಟ್ರೋಲ್ ಹಾಕಿಸಿಕೊಂಡರೆ ಉಂಟು.. ಇಲ್ಲವೆಂದರೆ ಒಂದೆರಡು ಲೀಟರ್ ಹಾಕಿ ಚಿಲ್ಲರೆ ಕೊಡುವ ಉಸಾಬರಿಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಅವರು ತಾನೆ ಎಷ್ಟು ಜನಕ್ಕೆ ಚಿಲ್ಲರೆ ಕೊಟ್ಟಾರು? ಎಲ್ಲಿಂದ ಚಿಲ್ಲರೆಯನ್ನು ತಂದಾರು?
ಮತ್ತಷ್ಟು ಓದು 
ಮೋದಿಜಿ ಮಾಡುವುದೆಲ್ಲ ವೋಟಿಗಲ್ಲಾ…!
– ವಿಕ್ರಮ್ ಎಂ.ಆರ್
ನಲವತ್ತು ವರ್ಷಗಳಿಂದ ಹಾಗೆಯೇ ಮೂಲೆ ಗುಂಪಾಗಿ ಬಿದ್ದಿತ್ತು. 1973ರಲ್ಲಿ ಇಂದಿರಾಗಾಂಧಿ OROP ಪ್ರಸ್ತಾಪವನ್ನೇ ಕಿತ್ತು ಎಸೆದಿದ್ದರು. ಇಂದು ಮೋದಿ ಸರ್ಕಾರ ದೇಶಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಸೈನಿಕರ ಕನಸನ್ನು ನನಸು ಮಾಡಿದೆ. GST ಎಷ್ಟು ವರ್ಷದಿಂದ ಚರ್ಚೆಯಲ್ಲಿತ್ತು, ನೀವೇ ವಿಚಾರ ಮಾಡಿ! ಗಾಂಧಿ ಮನೆತನದ ತಂದಿಟ್ಟ ನೂರೆಂಟು ವಿಘ್ನಗಳ ನಡುವೆಯೂ ಮೋದಿಜಿ GST ಬಿಲ್ಲನ್ನು ಸಂಸತ್ತಿನಲ್ಲಿ ತಂದು ಎರಡೂ ಸದನದಲ್ಲಿ ಮಂಡನೆ ಮಾಡಿ ಎಲ್ಲರ ಒಪ್ಪಂದ ಪಡೆದು ಪಾಸು ಮಾಡಲಾಗಿದೆ. ಪ್ರಧಾನಮಂತ್ರಿ ಧನ ಜನ ಯೋಜನೆ ಅಸ್ತಿತ್ವಕ್ಕೆ ಬಂದಾಗಿನಿಂದ ಎಷ್ಟೋ ಕೋಟಿ ಬಡ ಜನರು ಬ್ಯಾಂಕಿನಲ್ಲಿ ತಮ್ಮ ಖಾತೆ ಹೊಂದಿದ್ದಾರೆ. ಮೊದಲು ಅವರಿಗೆ ಸಿಗಬೇಕಾದ ಹಣ ಕೈಗೆ ಬರುತ್ತಿರಲಿಲ್ಲ ಆದರೆ ಈಗ ನೇರವಾಗಿ ಅವರ ಖಾತೆಗೆ ಜಮಾ ಆಗುತ್ತದೆ. ನಮ್ಮ ಕಂಪನಿಯಲ್ಲಿರುವ ಕಾಂಟ್ರಾಕ್ಟ್ ಕೆಲಸಗಾರನೊಬ್ಬ ಹೀಗೆ ಹೇಳುತ್ತಾನೆ “ಸರ್, ಮೊದಲು ನೂರು ರೂಪಾಯಿ ವೇತನ ಇದ್ದರೆ ಅದರಲ್ಲಿ ಇಪ್ಪತ್ತು ರೂಪಾಯಿಯನ್ನು ಮೇಲ್ವಿಚಾರಕ ಇಟ್ಟುಕೊಂಡು ಉಳಿದಿದ್ದನ್ನು ನನಗೆ ಕೊಡುತ್ತಿದ್ದ ಆದರೆ ಈಗ ನೇರವಾಗಿ ನೂರು ರುಪಾಯಿ ನನ್ನ ಬ್ಯಾಂಕಿಗೆ ಬರುತ್ತದೆ”. ಇದು ಒಂದು ಉದಾಹರಣೆ ಅಷ್ಟೇ, ಇಂತಹ ಸಾವಿರ ನಿದರ್ಶನಗಳನ್ನು ಹಂಚಿಕೊಳ್ಳಬಹುದು. ಇವೆಲ್ಲ ಒಂದಲ್ಲಾ ಒಂದುಕಡೆ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಆದರೆ ಮೋದಿ ಸರ್ಕಾರ ಏನೇ ಮಾಡಿದರೂ ಕೆಲವರಿಗೆ ಉರಿ. ವಿರೋಧ ಪಕ್ಷ ಅಥವಾ ಕೆಲವು ಬುದ್ಧಿಜೀವಿಗಳು ಮೋದಿಜಿಯವರ ಪ್ರತಿ ಪ್ರಯತ್ನವನ್ನೂ ವಿರೋಧಿಸುವುದು ಯಾತಕ್ಕೆ? ಮಾಡಬೇಕು ಇಲ್ಲವೇ ಮಾಡಲು ಬಿಡಬೇಕು. ಅರವತ್ತು ವರ್ಷವಾಯಿತು, ಇನ್ನೂ ದೇಶ ಎಷ್ಟು ಮುಂದುವರಿಯಬೇಕೋ ಅಷ್ಟು ಮುಂದುವರಿದಿಲ್ಲ. ಮೋದಿಜಿ ಬಂದಾಗಿನಿಂದ ಒಂದು ರಿದಮ್ ಸಿಕ್ಕಿದೆ ಅದನ್ನು ಹಾಳು ಮಾಡಲು ಕಾರಣಗಳೇನು? ಏನೇ ಮಾಡಿದರೂ ಅದು ಚುನಾವಣೆಯಲ್ಲಿ ಮತ ಗಳಿಸಲೇ ಮಾಡಿದ್ದು ಎಂದು ಡಂಗುರ ಬಾರಿಸುತ್ತ ಸಾರುವ ಈ ಎಡಬಿಡಂಗಿಗಳ ಉದ್ದೇಶವಾದರೂ ಏನು? ಮತ್ತಷ್ಟು ಓದು 
ಕಡಲ ಕಣ್ಣೀರು: ಒಂದು ಪ್ರೀತಿಯ ಕತೆ..!
– ದಿವ್ಯಾಧರ ಶೆಟ್ಟಿ ಕೆರಾಡಿ
ಉಪನ್ಯಾಸಕ
ಆಳ್ವಾಸ್ ಕಾಲೇಜು
ಮೂಡಬಿದ್ರೆ
ಇಂದು ಕಡಲು ಬತ್ತಿದಂತಿತ್ತು ಭೋರ್ಗೆರೆವ ಸದ್ದಿಲ್ಲದೆ, ಕಾಲು ಸುತ್ತಿ ಮುತ್ತಿಕ್ಕುವ ತೆರೆಗಳೆಲ್ಲಾ ದೂರ ದೂರಕ್ಕೆ ಸರಿದಂತೆ ಮರಳ ಮೇಲೆಲ್ಲಾ ಅವಳ ಹೆಜ್ಜೆ ಗುರುತುಗಳು ಸಾವಿರ ಕಥೆಗಳನ್ನು ಹೇಳಿ ನಕ್ಕಂತೆ ಭಾಸವಾಗುತ್ತಿತ್ತು.. ದೂರದಲ್ಲೆಲ್ಲೊ ಮಗುವೊಂದು ರಚ್ಚೆಹಿಡಿದು ಅಳುವ ಸದ್ದು ಉಕ್ಕಿ ಬರುವ ದುಃಖದ ಮುಂದುವರಿದ ಭಾಗದಂತಿತ್ತು.. ಹೃದಯದ ಆರ್ದ್ರತೆಯ ಚೀರುವಿಕೆಯ ನಡುವೆಯೆ ಏನೂ ನಡೆಯದ ಹಾಗೇ ಎದುರುನಿಂತು ಕಣ್ಣ ದಿಟ್ಟಿ ತಪ್ಪಿಸಿ ನೆಲ ನೋಡುತ್ತ ಕೊನೆಗೊಮ್ಮೆ ಕಾಲ್ಮುಟ್ಟಿ ಕ್ಷಮಿಸಿಬಿಡು, ಮರೆತುಬಿಡು ಎಂದು ಹೊರಟವಳ ಹಿಂದೆ ನೋವಿನ ಗಜಲ್ ಗಜ್ಜೆಕಟ್ಟಿ ಕುಣಿದಿತ್ತು.. ಕೊಸರಿಕೊಂಡ ಕೈಬೆರಳ ಗುರುತಿನ್ನು ಮಚ್ಚೆಯಂತೆ ಎದೆಯೊಳಗೆ ಅಂಟಿಕೊಳ್ಳುವುದು ನಿಶ್ಚಯವಾದಾಗ ಕಣ್ಣು ಯಾಕೋ ಅವಳ ಬಿಂಬದೊಡನೆ ಹನಿಯತೊಡಗಿತ್ತು… ಮತ್ತಷ್ಟು ಓದು 
ಸರ್ಕಾರದಿಂದ ವೀರಪ್ಪನ್ ಜಯಂತಿಗೆ ಸಕಲ ಸಿದ್ಧತೆ: ಬರುವ ಯುಗಾದಿಗೆ ದಿನ ನಿಗದಿ (ಸುಳ್ಸುದ್ದಿ)
– ಪ್ರವೀಣ್ ಕುಮಾರ್, ಮಾವಿನಕಾಡು
ಬೆಂಗಳೂರು: ರಾಜ್ಯದಲ್ಲಿ ವೀರಪ್ಪನ್ ಜಯಂತಿಯನ್ನು ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ವೀರಪ್ಪನ್ ಜಯಂತಿ ಅಂಗವಾಗಿ ಮೊನ್ನೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಈ ಸಾಲಿನಿಂದ ಸರ್ಕಾರದ ಹಣದಲ್ಲಿ ವೀರಪ್ಪನ್ ಜಯಂತಿಯನ್ನು ಆಚರಿಸಲಾಗುವುದು ಮತ್ತು ಮೊದಲ ವರ್ಷದ ವೀರಪ್ಪನ್ ಜಯಂತಿಯನ್ನು ಬರುವ ಯುಗಾದಿಯಂದು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಅಂದು ರಾಜ್ಯದಾದ್ಯಂತ ವೀರಪ್ಪನ್ ಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಮಾಡಲಾಗುತ್ತಿದ್ದು, ಎಲ್ಲೆಡೆ ವೀರಪ್ಪನ್ ಅವರ ಭಾವಚಿತ್ರದ ಮೆರವಣಿಗೆಯನ್ನು ಮಾಡಲಾಗುವುದು ಎಂದರು. ಮತ್ತಷ್ಟು ಓದು 
ನಿದ್ದೆಯ ಖರಾಮತ್ತು..!
– ಗೀತಾ ಹೆಗಡೆ
ನಿದ್ದೆ ಪರಮಾತ್ಮನ ವರಪ್ರಸಾದ. ಅದಿಲ್ಲ ಅಂದಿದ್ದರೆ ಜಗತ್ತು ಹೇಗಿರುತ್ತಿತ್ತು? ಜೀವನದ ಗತಿ ಏನಾಗಿರುತ್ತಿತ್ತು? ಆಹಾರ, ವ್ಯವಹಾರ, ಕೆಲಸ, ಕಾರ್ಯ ಯಾವ ರೀತಿ ನಡೀತಿತ್ತು? ಜನ ಸಂಖ್ಯೆ ಕಡಿಮೆ ಆಗಿರುತ್ತಿತ್ತೆ? ಸೂರ್ಯನಿಲ್ಲದ ಕತ್ತಲೆಯ ಸಾಮ್ರಾಜ್ಯದಲ್ಲಿ ಜನ ಇನ್ನೂ ಹೆಚ್ಚಿನ ಮೋಜು ಮಸ್ತಿಯಲ್ಲಿ ಪಾಲ್ಗೊಳ್ಳುತ್ತಿದ್ದರೆ? ಒಂದಾ ಎರಡಾ? ತಲೆತುಂಬಾ ಹುಳುಗಳ ಹರಿದಾಟ. ಇಂಥ ಯೋಚನೆ ಬರೋದೆ ನಿದ್ದೆಯಿಲ್ಲದ ರಾತ್ರಿಗಳಲ್ಲಿ.. ಭಗವಂತನ ಸಾಕ್ಷಾತ್ಕಾರ ಆದ ಹಾಗೆ. ಮತ್ತಷ್ಟು ಓದು 
ನನ್ನ ಚೊಚ್ಚಲ ಪರ್ವತಾರೋಹಣ
– ಅಭಿಜಿತ್ ಕೆ ಜಾಯಕ್ಕನವರ
ನನಗೆ ತುಂಬಾ ಖುಷಿಯಾದಾಗ ಬರೆಯಬೇಕೆನಿಸುತ್ತದೆ. ಈಗ ಬರೆಯುತ್ತಿರುವ ಖುಷಿಗೆ ಕಾರಣ ಮೂರು. ಒಂದು ಸತತ ೭೦ ಘಂಟೆಗಳ ನಂತರ ಸುಖವಾಗಿ ನಿದ್ರೆ ಮಾಡಿದ್ದು, ಎರಡು ನನ್ನ ಮೊದಲ ಪರ್ವತಾರೋಹಣವನ್ನು ಯಶಸ್ವಿಯಾಗಿ ಮುಗಿಸಿದ್ದು, ಮೂರು ಈ ಎರಡಕ್ಕಿಂತಲೂ ಮುಖ್ಯವಾದದ್ದು ಅದೆಂದರೆ ಪರ್ವತಾರೋಹಣದ ಸಮಯದಲ್ಲಿ ನಾನು ಮತ್ತು ನನ್ನ ನಾಲ್ಕು ಜನ ಗೆಳೆಯರು ಕೈಗೊಂಡ ಒಂದು ಸಣ್ಣ ಕಾರ್ಯ ( an initiative ). ಈ ನನ್ನ ಪರ್ವತಾರೋಹಣದ ಮೇಲೆ ಒಂದು ಸುದೀರ್ಘವಾದ ಪ್ರಭಂದವನ್ನೇ ಬರೆಯಬಹುದಾದರೂ, ನನ್ನ ಮನಸ್ಸು ಆ ಚಿಕ್ಕ ಘಟನೆಯೊಂದನ್ನು ಮಾತ್ರ ಪ್ರಸ್ತಾಪಿಸಲು ಹಾತೊರೆಯುತ್ತಿದೆ. ಮತ್ತಷ್ಟು ಓದು 




