ವಿಷಯದ ವಿವರಗಳಿಗೆ ದಾಟಿರಿ

Recent Articles

27
ಏಪ್ರಿಲ್

ಮಹಾತ್ಮ ಬಸವಣ್ಣನವರು

 – ಡಾ.ಸಂಗಮೇಶ ಸವದತ್ತಿಮಠ    

(ಕಳೆದ ವರ್ಷ (2019) ನಾನು ಕೆನಡಾ ದೇಶದ ಟೊರೊಂಟೊ ನಗರದಲ್ಲಿ ವೀರಶೈವ ಸಮಾಜ ಏರ್ಪಡಿಸಿದ್ದ ಬಸವಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಡಿದ ಭಾಷಣದ update ಮಾಡಿದ ಲೇಖನ ಪ್ರಸ್ತುತ ಬಸವಜಯಂತಿ ಸಂದರ್ಭದಲ್ಲಿ ಆಸಕ್ತ ಓದುಗರಿಗಾಗಿ ಇಲ್ಲಿದೆ)  

ಆತ್ಮೀಯ ನಾರ್ತ್ ಅಮೇರಿಕಾ ಟೋರೊಂಟೊ ಚಾಪ್ಟರ್‍ನ ವೀರಶೈವ ಸಮಾಜ ಬಾಂಧವರೆ,

ತಮಗೆಲ್ಲ ಬಸವಜಯಂತಿಯ ಹಾರ್ದಿಕ ಶುಭಾಶಯಗಳು.

ಕನ್ನಡನಾಡಿನ ಸೌಭಾಗ್ಯ ಎಂಬಂತೆ ಬಸವಣ್ಣನವರು ನಮ್ಮ ನಾಡಿನಲ್ಲಿ ಜನ್ಮತಳೆದರು. ಬಸವಣ್ಣನವರ ವ್ಯಕ್ತಿತ್ವ ಅಗಾಧವಾದದು, ಅದ್ಭುತವಾದದ್ದು, ಪರಿಪೂರ್ಣವಾದದ್ದು, ಬಹುಮುಖಿಯಾದದ್ದು. ಅವರನ್ನು ಒಬ್ಬೊಬ್ಬರೂ ಒಂದೊಂದು ದೃಷ್ಟಿಯಿಂದ ನೋಡಿದಾಗ ಅವರವರ ಭಾವದಂತೆ ಅವರು ಗೋಚರಿಸುತ್ತಾರೆ. ಅದೇ ಅವರÀ ವ್ಯಕ್ತಿತ್ವದ ವೈಶಿಷ್ಟ್ಯ.

1.ಒಬ್ಬನೆಂದ – ಬಸವಣ್ಣ ಒಬ್ಬ ರಾಜಕಾರಣಿ. ಹೌದು ಬಿಜ್ಜಳನ ಆಸ್ಥಾನದಲ್ಲಿದ್ದುದರಿಂದ ಅವರು political thinker .

  1. ಒಬ್ಬನೆಂದ – ರಾಜಕಾರಣಿಗಿಂತ ಅವರು ಒಬ್ಬ ಶ್ರೇಷ್ಠ ಅಧಿಕಾರಿ, ಆಡಳಿತಗಾರ. ಹೌದು ಅವರು Prime minister
  2. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ಅಧಿಕಾರಿ ಎನ್ನುವುದಕ್ಕಿಂತ ಅವರೊಬ್ಬ ದಾರ್ಶನಿಕರು. ಹೌದು ಅವರು philosopher. ತತ್ತ್ವಜ್ಞಾನಿ.
  3. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ ಎನ್ನುವುದಕ್ಕಿಂತ ಅವರೊಬ್ಬ ಅಧ್ಯಾತ್ಮಜೀವಿ. ಹೌದು ಧರ್ಮದ ಚೌಕಟ್ಟಿನೊಳಗೆ ಭಕ್ತಿಯ ಸೋಪಾನಗಳನ್ನು ಇಟ್ಟು ಅಧ್ಯಾತ್ಮದ ಬೆಳಸು ತೆಗೆದವರು ಬಸವಣ್ಣನವರು.
  4. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ, ಅಧ್ಯಾತ್ಮಜೀವಿ ಎನ್ನುವುದಕ್ಕಿಂತ ಅವರೊಬ್ಬ ಸಮಾಜ ಸುಧಾರಕ. ಹೌದು Social reformer. ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಬೇಕಾದುದೆಲ್ಲವನ್ನೂ ಅವರು ಮಾಡಿತೋರಿಸಿದ ಧೀಮಂತ ಸಮಾಜೋದ್ಧಾರಕರು.
  5. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ, ಅಧ್ಯಾತ್ಮಜೀವಿ, ಸಮಾಜ ಸುಧಾರಕ ಎನ್ನುವುದಕ್ಕಿಂತ ಅವರೊಬ್ಬ ಕ್ರಾಂತಿಪುರುಷ. ಹೌದು ತನ್ನ ಕಾಲದಲ್ಲಿ ಇದ್ದ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಿ ಜನರ ಬದುಕಿನಲ್ಲಿ ಬದಲಾವಣೆಗಳನ್ನು ತಂದವರು.

ಹೀಗೆಯೇ ಜಂಗಮಪ್ರೇಮಿ, ಭಕ್ತಾನುಕಂಪಿ, ಬಾಗಿದ ತಲೆಯ ಮುಗಿದ ಕೈಯ ವಿನಯಶೀಲ, ಸಿಟ್ಟು, ಸೆಡವು, ದ್ವೇಷ, ಅಸೂಯೆ, ಈರ್ಷೆ ಇಲ್ಲದ ಎಲ್ಲರನ್ನೂ ಸಮಾನ ಗೌರವದಿದ ಕಾಣುವವ ಇತ್ಯಾದಿ ಇತ್ಯಾದಿ ಹೇಳುತ್ತಲೇ ಹೋಗಬಹುದು. ಒಂದೊಂದೇ ಮಗ್ಗಲುಗಳನ್ನು ಬಿಡಿಸುತ್ತ ಹೋದಂತೆ ಬಸವಣ್ಣನವರ ಒಟ್ಟು ವ್ಯಕ್ತಿತ್ವದ ಪದರು ಪದರುಗಳು ಬಿಚ್ಚಿಕೊಳ್ಳುತ್ತಲೇ ಹೋಗುತ್ತವೆ. ಎಂತಹ ಅದ್ಭುತ ! ಜಗದ ಅಚ್ಚರಿ ಅಲ್ಲವೆ?

ಮತ್ತಷ್ಟು ಓದು »

27
ಏಪ್ರಿಲ್

ಅಂತರರಾಷ್ಟ್ರೀಯ ತೈಲ‌ ಮಾರುಕಟ್ಟೆ, ಭಾರತ‌ ಮತ್ತು ಮೋದಿ – ಭಾಗ 2

– ಪ್ರಶಾಂತ್ ಪದ್ಮನಾಭ

ಭಾಗ 1 – ಜಾಗತಿಕ ಕಚ್ಚಾ ತೈಲದ ಬೆಲೆ ಮೈನಸ್ ಆಗಿರುವುದೇಕೆ? ಅದರ ಅರ್ಥವೇನು?

ಮೊದಲನೇ ಪೋಸ್ಟ್ನಲ್ಲಿ ಕಾಂಮೆಂಟ್ನಲ್ಲಿ ಯಾರೋ ಕೇಳಿದ ಪ್ರಶ್ನೆಗಳು, ಹಾಗು ಅದರ ಉತ್ತರ ಎಲ್ಲರಿಗೂ ತಲುಪಲಿ ಅನ್ನೋ ಉದ್ದೇಶದಿಂದ ಹೊಸ ಪೋಸ್ಟ್ ಹಾಕಿದ್ದೀನಿ. ಮೊದಲ ಪೋಸ್ಟ್ ನ ಉದ್ದೇಶ ಅಮೇರಿಕಾದಲ್ಲಿ WTI ನ ಬೆಲೆ ಹೇಗೆ ನೆಗೆಟಿವ್ ಆಯಿತು, ಹಾಗೆ ಆಗಿದ್ದಿರಿಂದ ಭಾರತದಲ್ಲೂ ಕಮ್ಮಿ ಮಾಡಿಯೆಂದು ಕೇಳುವುದು ಅವಿವೇಕತನ ಎಂಬುದಾಗಿತ್ತು. (ಅಮೇರಿಕಾದಲ್ಲಿ ಮಳೆಯಾದರೆ, ಮೋದಿ‌ ಭಾರತದಲ್ಲಿ‌ ಯಾಕೆ ಕೊಡೆ‌ ಹಿಡಿಯಲ್ಲಿಲ್ಲ ಅಂತ ಕೇಳುವ ಕಾಂಗ್ರೆಸ್ ಗೆ ಬಹುಪರಾಕ್‌ ಹೇಳವ ಮನಸ್ಥಿತಿಗೆ ಉತ್ತರ ಹೇಳುವುದು)

ಇದನ್ನೂ ಕೂಡ ಜಾಸ್ತಿ ಟೆಕ್ನಿಕಲಿಯಾಗಿ ಹೇಳದೆ, ಸರಳ ಭಾಷೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದೀನಿ.

ಪ್ರಶ್ನೆ:
1. ಜಗತ್ತಿನ ಕಚ್ಚಾ ತೈಲದ ಕ್ವಾಲಿಟಿ ನಿರ್ಧಾರವಾಗುವುದು 2 ಅಂಶಗಳಿಂದ. Low Sulphur ಕಂಟೆಂಟ್ ಮತ್ತು Low Density (Higher API). ಈ ಎರಡು ಅಂಶಗಳನ್ನ ಪರಿಗಣಿಸಿ Brent ಹಾಗೂ WTI compare ಮಾಡಿದ್ರೆ WTI ಗುಣಮಟ್ಟವೇ ಉತ್ತಮ.
2. ಎರಡನೆಯದು ತೈಲ its self is commodity. ಶೇರು ವ್ಯವಹಾರವನ್ನ ಸರಿಯಾಗಿ ಅರ್ಥ ಮಾಡ್ಕೊಳ್ಳಿ.
3. ಮೂರನೆಯದು WTI ಸೀಮಿತವಾಗಿ ಹೇಳೋದಾದ್ರೆ..ಅಲ್ಲಿರುವ Future Trading Agreement ಇರುವುದು Every 1000 Barrels ಗೆ. ಹಾಗಾಗಿ ಅದು negative Trade ಆದ್ರು ಅದನ್ನ ಕೊಂಡುಕೊಳ್ಳುವುದು ಕಷ್ಟ.
4. ನಾಲ್ಕನೆಯದು ಭಾರತದಲ್ಲಿ Oil rate ಏರಿರಲು ಮಖ್ಯ ಕಾರಣ ನಮ್ಮ Tax ವ್ಯವಸ್ಥೆ.
5. ಅಂತರರಾಷ್ಟೀಯ ಕಚ್ಚಾ ತೈಲದ ವೇಳೆ 20 ಡಾಲರ್ ಪ್ರತಿ ಬ್ಯಾರೆಲ್ ಆಗಿದೆ. ಹಾಗಾದ್ರೆ ಪೆಟ್ರೋಲ್ ಬೆಲೆ ಇನ್ನಷ್ಚು ಇಳಿಯಬೇಕಿತ್ತಲ್ಲವೇ..?

ಉತ್ತರ: ಮತ್ತಷ್ಟು ಓದು »

24
ಏಪ್ರಿಲ್

ದೇಶ ಹಾಳಾದರೂ ‘ಅವರಿಗೆ’ ನೋವಾಗಬಾರದು ನೋಡಿ

– ಅಜಿತ್ ಶೆಟ್ಟಿ ಹೆರಂಜೆ

ಇವತ್ತು ಇಡೀ ವಿಶ್ವ ಕೊರೋನಾ ಮಹಾ ಮಾರಿಯ ವಿರುದ್ಧ ಯುದ್ಧ ಮಾಡುತ್ತಿದೆ.ವಿಶ್ವದ ದಿಗ್ಗಜ ರಾಷ್ಟ್ರಗಳೇ ಇದರ ವಿರುದ್ದ ಮಂಡಿಯೂರಿ ಕುಳಿತಿವೆ. ರೋಗದ ಪಸರುವಿಕೆ ಮತ್ತು ರೋಗದಿಂದ‌ ಆಗುತ್ತಿರುವ ಸಾವು ಇವೆರಡನ್ನು ತಹಬಂದಗಿ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹಾ ಸಮಯದಲ್ಲಿ‌ ಭಾರತ ಈ ಮಹಾಮಾರಿಯ ವಿರುದ್ಧ ಸಮರ್ಥವಾಗಿ ಸೆಣಸುತ್ತಿದೆ. ಇದು ಸಾಧ್ಯವಾಗಿದ್ದು ಮೋದಿಯವರ ಸಮರ್ಥ ನಾಯಕತ್ವದ ಜೊತೆಗೆ ಮೋದಿಯಂತಹ ನಾಯಕನಿಗೆ‌ ಹೆಗಲಿಗೆ ಹೆಗಲು ಕೊಟ್ಟು ನೆಡೆಯುತ್ತಿರುವ ಬಹುಸಂಖ್ಯಾತ ಭಾರತಿಯರು ಸಹಕಾರದಿಂದ, ಇವರು ಪ್ರದರ್ಶನ ಮಾಡತ್ತಿರುವ ಸಾಮಾಜಿಕ ಬದ್ದತೆಯಿಂದಾಗಿ ಇದು ಸಾಧ್ಯವಾಗಿದ್ದು. ಎಲ್ಲದರಲ್ಲೂ ತಾನು ದೊಡ್ಡವ ಎನ್ನುವ ಅಮೇರಿಕಾದಲ್ಲಿ‌ ಜನ ಲಾಕ್‌ ಡೌನ್ ಗೆ ಸಮ್ಮತಿಸುತ್ತಿಲ್ಲ. ಅಲ್ಲಿಯ ನಾಗರೀಕರಿಗೆ ತಮ್ಮ ಉದ್ಯೋಗ ಮತ್ತು ಹಣದ ಚಿಂತೆ‌ ಬಿಟ್ಟರೆ, ಸಮಾಜ‌ ಹಾಗು ದೇಶದ ಬಗ್ಗೆ ಯಾವುದೆ ಬದ್ದತೆ ಇದ್ದಂತೆ ತೋರುತ್ತಿಲ್ಲ.‌ ಬಹುಶಃ ಇದೆ ಕಾರಣಕ್ಕೆ ಇವತ್ತು ಅಮೇರಿಕಾದಲ್ಲಿ‌ ವಿಶ್ವದಲ್ಲೇ ಅತ್ಯಂತ ಹೆಚ್ಚು ಕೊರೋನಾ ಸೋಂಕಿತರು ಇರುವುದು ಮತ್ತು ಸಾವು ಆಗಿರೋದು.

ತಬ್ಲಿಕಿ ಜಮಾತ್ ಕೊಟ್ಟ ಉಪಟಳದ ಮಧ್ಯೆಯೂ, ಕೊರೋನಾ ಸಮಸ್ಯೆಯನ್ನು ಭಾರತ ಇಲ್ಲಿಯ ತನಕ ಸಮರ್ಥವಾಗಿಯೇ ಎದುರಿಸುತ್ತಿದೆ. ಭಾರತದ ಬಹುಸಂಖ್ಯಾತ ಹಿಂದುಗಳೇ ಇರಲಿ ಅಥವ ಅಲ್ಪಸಂಖ್ಯಾತರಾದ ಸಿಖ್,ಜೈನ,ಬೌದ್ಧ,ಕ್ರೈಸ್ತರೇ ಇರಲಿ ಎಲ್ಲರೂ ತಮ್ಮ‌ ಧಾರ್ಮಿಕ‌ ನಂಬಿಕೆ ಮತ್ತು ಆಚರಣೆಗಳನ್ನು ‌ಸರ್ಕಾರ ಪ್ರಸ್ತುತ ಹೊರಡಿಸಿರುವ ಆದೇಶದ ಅನ್ವಯ ಅದಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನಡೆಸಿಕೊಂಡು ಬರುತ್ತಿವೆ. ಹೌದು ಮೊದಮೊದಲಿಗೆ ಇದು ಕೊಂಚ ಕಷ್ಟ ಅನಿಸಿದರೂ ಬರಬರುತ್ತ ಇದನ್ನು ಬಹುತೇಕರು ರೂಢಿಸಿಕೊಂಡರು.ಈ ಸಂಬಂಧ ಮೋದಿಯವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದನ್ನೇ ಇವರೆಲ್ಲ ಪಾಲಿಸಿದರು. ಅಂದ ಹಾಗೆ ಈ ಸಂದರ್ಭದಲ್ಲಿ ಸಮುದಾಯ ನೆಡೆದುಕೊಳ್ಳಬೇಕಾದ ರೀತಿ ರಿವಾಜುಗಳ ಬಗ್ಗೆ ಯಾವುದೇ ಸಮುದಾಯದ ಮುಖಂಡರ ಮುಖಾಂತರ ಸರ್ಕಾರ ಮಾರ್ಗಸೂಚಿಗಳನ್ನೇನು ತಲುಪಿಸಲಿಲ್ಲ. ಅಥವ ಅವರ ಸಮಾಜದ‌‌ ಮುಂಡರನ್ನು ವಿಶೇಷವಾಗಿ ಕರೆದು ಮಾತಾಡಿಸಿ ದೇಶ ಇರುವ ಈ ಸಂದಿಗ್ದ ಸಮಯದಲ್ಲಿ ನಿಮ್ಮ‌ ಸಮಾಜದ ಸಹಕಾರ ಬೇಕು ಎಂದ ಪ್ರತ್ಯೇಕವಾಗಿ ಕೂರಿಸಿ ಮಾತಾಡಿಸಲಿಲ್ಲ.

ಆದರೆ ಆ ಒಂದು ಸಮಾಜ.., ಹೌದು ಅದನ್ನ ಇವತ್ತು ನಾನು ಹಾಗೆಯೇ ಕರೆಯಬೇಕಾಗಿದೆ. ಕಾರಣ, #ಅವರ ಹೆಸರು ಹೇಳಿದರೆ ಬಹಳಷ್ಟು ಜನರಿಗೆ ಬಹಳ ಜಾಗದಲ್ಲಿ ಉರಿ ಹತ್ತುತ್ತದೆ. ಅಂತಹಾ ಆ ಒಂದು ಸಮಾಜ ಮಾತ್ರಾ ಯಾಕೋ ನಾವು ಭಾರತದಲ್ಲಿ ತಮ್ಮನ್ನ ತಾವು ಅತಿ ವಿಶಿಷ್ಟರು, ನಾವು ಈ ದೇಶದ ಮಕ್ಕಳಲ್ಲ #ಅಳಿಯಂದಿರು ಅಂದುಕೊಂಡಿದ್ದಾರೆ. ನಮಗೆ ದೇಶದ ಎಲ್ಲಾ ಸವಲತ್ತು ಸಿಗಬೇಕು ಬಿಟ್ರೆ ನಾವು ದೇಶಕ್ಕೆ ಏನೂ‌ ಕೊಡೋದಿಲ್ಲ. ಎಲ್ಲಿಯ ತನಕ ಕೊಡೋದಿಲ್ಲ ಅಂದ್ರೆ ನೀವು ದೇಶದ ನಾಗರೀಕರೋ ಅಂತ ಕೇಳಿದರೆ ಅದಕ್ಕೆ ದಾಖಲೆಯನ್ನೂ ಕೊಡೋದಿಲ್ಲ ಅನ್ನುವಷ್ಟರಮಟ್ಟಿಗಿನ ಉದ್ದತಟತನ ಪ್ರದರ್ಶನ ಮಾಡುತ್ತದೆ.‌ (ಇವರಲ್ಲಿ‌ ಇರುವ ಒಂದಷ್ಟು ರಾಷ್ಟ್ರ ಭಕ್ತರನ್ನು‌ ಹೊರತುಪಡಿಸಿ) ಇವರಲ್ಲೂ ಈ ತಬ್ಲಿಗಿಗಳು ಅನ್ನುವ ವರ್ಗವೋ..ಇವುಗಳ ಉಪಟಳ‌ ಕೇವ‌ಲ ಭಾರತಕ್ಕೆ ಸೀಮಿತವಾಗಿಲ್ಲ. ಕೆಲವು ಪತ್ರಿಕೆಗಳ ವರದಿಗಳ ಪ್ರಕಾರ ಇವರ ಹಾವಳಿಯಿಂದ ಇಡೀ ದಕ್ಷಿಣ ಏಶ್ಯಾದ ರಾಷ್ಟ್ರಗಳೇ ಕಂಗೆಟ್ಟಿವೆ.ಇವರನ್ನು ನಿಯಂತ್ರಿಸಲು ದೇಶದ ಬಹುತೇಕ ರಾಜ್ಯ ಸರ್ಕಾರಗಳು ಇವರ ಸಮುದಾಯದ ಮುಖಂಡರ ಜೊತೆ ಸಭೆ ಮಾಡಿ ನಿಮ್ಮ ಸಮುದಾಯದ ಸಹಕಾರ ದೇಶಕ್ಕೆ ಕೊರೋನಾ ನಿಯಂತ್ರಣ ಮಾಡೋದಕ್ಕೆ ಬೇಕು ಅಂತ ಕೇಳಿಕೊಳ್ಳುವ ಪ್ರಸಂಗ ಎದರಾಯಿತು.

ಮತ್ತಷ್ಟು ಓದು »

24
ಏಪ್ರಿಲ್

ಜಾಗತಿಕ ಕಚ್ಚಾ ತೈಲದ ಬೆಲೆ ಮೈನಸ್ ಆಗಿರುವುದೇಕೆ? ಅದರ ಅರ್ಥವೇನು?

– ಪ್ರಶಾಂತ್
ಇಂಟರ್ನ್ಯಾಶನಲ್ ಕ್ರೂಡ್ ಆಯಿಲ್‌ (WTI)  ಬೆಲೆ ಪ್ರತಿ ಬ್ಯಾರೆಲ್ ಗೆ ಮೈನೆಸ್ 40 ಡಾಲರ್ ಆಗಿದ್ದರ ಬಗ್ಗೆ ಕೆಲವು ಮಾಹಿತಿಗಳು ಹಂಚಿಕೊಳ್ಳಲು ಹಾಗೂ ಇದರ ವಿಷಯ ಎಲ್ಲರಿಗು ಸುಲಭವಾಗಿ ಅರ್ಥವಾಗಲಿ ಅನ್ನೋದು ಈ ಪೋಷ್ಟನ ಉದ್ದೇಶ.
ಆಯಿಲ್ ಬೆಲೆ‌ ಅಷ್ಟುಂದು ಕಮ್ಮಿಯಾಗಿದೆಯಂತೆ, ಪಾತಳಕ್ಕೆ ಇಳಿದಿದೆಯಂತೆ, ಹಾಗಾದರೆ  ನಾನು ಕಾರ್ ತೆಗೆದುಕೊಂಡು ಪೆಟ್ರೋಲ್ ಹಾಕಿಸಲು ಹೋದರೆ, ಬಂಕ್ ನವರು ನನಗೇ ದುಡ್ಡು ಕೊಟ್ಟು ಪೆಟ್ರೋಲ್ ಹಾಕುತ್ತಾರೆಯೇ ಎಂದು‌‌‌ ನನ್ನ ಸ್ನೇಹಿತರು ಬಹಳಾ‌‌ ಸೀರಿಯಸ್ ಫೋನ್‌ ಮಾಡಿ ಕೇಳಿದರು..!! ಈ ಪ್ರಶ್ನೆಗೆ ಉತ್ತರ ಹುಡುಕುವ ಜೊತೆಗೆ,‌ ನಾನು ಪೆಟ್ರೋಲಿಯಂ ಕ್ಷೇತ್ರದಲ್ಲಿಯೇ ಕೆಲಸ ಮಾಡುವುದರಿಂದ ಸ್ವಲ್ಪ‌ ವಿವರಣೆಯನ್ನು‌ ಕೊಡುವ ಪ್ರಯತ್ನವನ್ನೂ ಮಾಡುತ್ತಿದ್ದೇನೆ.
ಎಲ್ಲಾದಕ್ಕೂ‌ ಮೊದಲು ಅರ್ಥವಾಗ ಬೇಕಾಗಿರುವುದು ಕ್ರೂಡ್ ಆಯಿಲ್‌‌ ಅಂದರೆ ಏನು ಹಾಗೂ ಅದರ ಗ್ರೇಡಿಂಗ್‌ ಹೇಗೆ‌ ಮಾಡುತ್ತಾರೆ ಎಂಬುದು.. ಸಾವಿರಾರು ವರ್ಷಗಳಿಂದ ಭೂಮಿಯ ‌ಹಾಗೂ ಸಮುದ್ರದ ತಳದಲ್ಲಿ ಪ್ರಾಣಿಗಳ ಮತ್ತು ಗಿಡಗಳ‌ ಪಳೆಯುಳಿಕೆಗಳು,‌ ಕ್ರೂಡ್ ಆಯಿಲ್‌ ಆಗಿ‌ ಪರಿವರ್ತನೆಯಾಗುತ್ತದೆ.. ಅದರಲ್ಲಿ ಇರುವ ಸಲ್ಫರ್ ಅಂಶದಿಂದ ಅದರ ಗ್ರೇಡಿಂಗ್ ನಿರ್ಧಾರವಾಗುತ್ತದೆ.. ಜಾಸ್ತಿ ಅಂಶ ಸಲ್ಫರ್ ಇದ್ದರೆ ಒಳ್ಳೆಯ ಕ್ರೂಡ್ ಆಯಿಲ್ ಯೆಂದು ಪರಿಗಣಿಸುತ್ತಾರೆ.. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಸಮುದ್ರದಲ್ಲಿ ಸಿಗವ ಆಯಿಲ್ ನಲ್ಲಿ ಸಲ್ಫರ್ ಅಂಶ ಜಾಸ್ತಿ ಇರುತ್ತದೆ.. ಅದರ ಪ್ರಕಾರ ಗ್ರೇಡಿಂಗ್ ನಿರ್ಧಾರವಾಗುತ್ತದೆ.. ನಾನು ಕೆಲಸ ಮಾಡುವ ಯುಕೆಯ ನಾರ್ಥ್ ಸೀ (North sea) ಪ್ರದೇಶದಲ್ಲಿ ಸಿಗುವ ಆಯಿಲ್ಅನ್ನು ಬ್ರೆಂಟ್  ಯೆಂದು ಕರೆಯುತ್ತಾರೆ..ಇದು ಉತ್ಕೃಷ್ಟವಾಗಿರತ್ತದೆ.. ಹಾಗೆಯೇ ಅಮೇರಿಕಾದಲ್ಲಿ ಭೂಮಿಯಿಂದ ತೆಗೆಯುವ ಆಯಿಲ್ ಅನ್ನು WTI (West Texus Intermetiate) ಯೆಂದು ಕರೆಯುತ್ತಾರೆ.. ಹಾಗೂ ಅದು ಸಾಧಾರಣ ಕ್ವಾಲೆಟಿಯ ತೈಲ.. ಅರಬ್ ಪ್ರಾಂತ್ಯದ ಆಯಿಲ್ ಅನ್ನು ಓಪೇಕ್ ಬಾಸ್ಕೇಟ್ (OPEC Basket) ಎಂದು ಕರೆಯುತ್ತಾರೆ.
ಇನ್ನೂ ಆಯಿಲ್ (ತೈಲ) ವ್ಯವಹಾರದಲ್ಲಿ ಎರಡು ರೀತಿ ‌ಇದೆ.. ಶೇರು ಮಾರುಕಟ್ಟೆ ವ್ಯವಹಾರ ಹಾಗು ಕಮಾಡಿಟಿ ವ್ಯವಹಾರ (Commodity trading).  (ಚಿನ್ನದ ವ್ಯವಹಾರದ ರೀತಿಯಲ್ಲಿಯೇ ನಡೆಯವ ವ್ಯವಹಾರ). ಕಮೋಡಿಟಿ ವ್ಯವಹಾರದಲ್ಲಿ ಮತ್ತೊಂದು ವಿಧಾನವಿದೆ, ಅದನ್ನು ಫ್ಯೂಚರ್ ಟ್ರೇಡಿಂಗ್ ಏನ್ನುತ್ತಾರೆ.. ಅಂದರೆ, ಏಪ್ರಿಲ್ ಬೆಲೆಯನ್ನು ಜನವರಿಯಲ್ಲಿಯೇ ನಿರ್ಧರಿಸುವ ವಿಧಾನ.. ಉದಾಹರಣೆಗೆ, ಮಾರುವವರು (Seller) ( ಆಯಿಲ್ ಅನ್ನು ತಗೆಯುವ ಕಂಪನಿ) ಮತ್ತು ಕೊಂಡುಕೊಳ್ಳುವವರು ‌(Buyer) ( ಬಹುತೇಕ ಮಧ್ಯವರ್ತಿಗಳು) ಇಬ್ಬರು ಕುಳಿತುಕೊಂಡು,‌ ಬಹಳ ಸುಧೀರ್ಘವಾಗಿ ಸಮಾಲೋಚಿಸಿ ( ಬಿಗ್ ಡೇಟಾ ಹಾಗೂ‌ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ‌- AI ಸಹಾಯದಿಂದ)  ಪ್ರತಿ ‌ಬ್ಯಾರೆಲ್ಗೇ  25 ಡಾಲರ್ ಎಂದು ಬೆಲೆ ನಿರ್ಧರಿಸುತ್ತಾರೆ.. ಅದಕ್ಕೆ ತಕ್ಕ ಹಾಗೆ ಆಯಿಲ್‌ ಪ್ರೂಡ್ಯೂಸ್ ಆಗುತ್ತದೆ ಹಾಗೂ ಅದನ್ನು‌ ಏಪ್ರಿಲ್‌ ನಲ್ಲಿ ದುಡ್ಡು ಕೊಟ್ಟು ತೆಗೆದುಕೊಂಡು ಹೋಗುವುದು ಆಯಿಲ್‌‌ಅನ್ನು‌ ಕೊಂಡುಕೊಳ್ಳವವನ ಜವಾಬ್ದಾರಿ.. ಆದರೆ ನೆನಪಿಡಿ ಈ ಕ್ರೂಡ್ ಆಯಿಲ್ಅನ್ನು ಸಂಸ್ಕರಿಸದೆ ಅದರಿಂದ ಯಾವ ಲಾಭವು ಆಗುವುದಿಲ್ಲ.. ಈ‌ ರೀತಿ ಕೊಂಡುಕೊಳ್ಳವವರು ಇದನ್ನು ಇನ್ನೂ ಕೆಲವು ದಿನ ಶೇಖರಿಸಿ, ಬೆಲೆ‌‌ ಜಾಸ್ತಿಯಾದಗ, ರಿಫೈನರಿ ಕಂಪನಿಗಳಿಗೆ ಇನ್ನು‌ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ‌ಲಾಭ ಮಾಡಿಕೊಳ್ಳುತ್ತಾರೆ.. ರಿಫೈನರಿಗಳು ಈ ಕ್ರೂಡ್ ಆಯಿಲ್ ಅನ್ನು‌ ಸಂಸ್ಕರಿಸಿ ಡೀಸೆಲ್,‌ ಪೆಟ್ರೋಲ್ ಇತ್ಯಾದಿಗಳನ್ನು‌ ಮಾಡಿ ನಮ್ಮಂಥ‌ ಗ್ರಾಹಕರಿಗೆ ಮಾರುತ್ತಾರೆ..

ಮತ್ತಷ್ಟು ಓದು »

23
ಏಪ್ರಿಲ್

ಎಲ್ಲದಕ್ಕೂ ಹಿಂದೂಗಳನ್ನು ದೂಷಿಸುವ ಮುನ್ನ …

– ಬೇಲಾಡಿ ದೀಪಕ್ ಶೆಟ್ಟಿ 

So called ವಿಚಾರವಾದಿಗಳೇ, ಲಿಬರಲ್ಗಳೇ ದ್ವೇಷ ಮಾಡಬೇಡಿ, ಫೋಭೀಯಾ ಬೆಳೆಸಬೇಡಿ ಅನ್ನುವವರೇ,

ಅರ್ಥ ಮಾಡ್ಕೊಳ್ಳಿ.ನಮ್ಮ ಸಿಟ್ಟು ಇರೋದು ಯಾವುದೇ ಧರ್ಮದ ಮೇಲಲ್ಲ. ಹಾಗಂತ ದ್ವೇಷನೂ ಸಾಧಿಸುತ್ತಿಲ್ಲ, ಫೋಭೀಯಾನೂ ಹುಟ್ಟು ಹಾಕುತ್ತಿಲ್ಲ.

ಅಲ್ಪಸಂಖ್ಯಾತಧರ್ಮದ ಹೆಸರಿನಲ್ಲಿ ಜಾತ್ಯಾತೀತತೆಯ ಸೋಗಿನಲ್ಲಿ, ಬಹುಸಂಖ್ಯಾತರ ಭಾವನೆಗಳಿಗೆ ರಾಷ್ಟ್ರ ಮತ್ತು ಜೀವನ ಪದ್ದತಿಯ ವಿಚಾರಗಳಲ್ಲಿ ನಮ್ಮ ಭಾವನೆಗಳಿಗೆ ಘಾಸಿ ಆದ್ರೂ ಸುಮ್ಮನೆ ಎಷ್ಟು ದಿನ ಅಂತ ತಾಳ್ಮೆಯಿಂದ ಇರೋದು. ಒಂದಲ್ಲ ಒಂದು ದಿನ ಆಕ್ರೋಶದ ಕಟ್ಟೆ ಒಡೆಯಲೇಬೇಕಲ್ಲವೇ.

ಅದೂ ಹೋಗ್ಲಿ, ಆರೈಕೆ ಕೇಂದ್ರದಲ್ಲಿ ಮಲ ವಿಸರ್ಜನೆ, ನರ್ಸ್ಗಳ ಎದುರು ಬಟ್ಟೆ ಬಿಚ್ಚೋದು, ನೋಟಿಗೆ ಬಾಯಲ್ಲಿ ಉಗುಳು ಹಚ್ಚೋದು. ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ, ಮೊನ್ನೆ ಮೊನ್ನೆ ಪೋಲಿಸರ ಮೇಲೆ ಹಲ್ಲೆ , ಇಡೀ ದೇಶ ಪಕ್ಷಾತೀತವಾಗಿ ಸ್ವಲ್ಪ ವಿಚಾರದಲ್ಲಿ ವ್ಯತ್ಯಾಸ ವಿದ್ದರೂ ಸಾಮೂಹಿಕವಾಗಿ ಹೋರಾಡುವಾಗ,ಇವರ ಈ ಕಿರಿಕ್ಕು. ಎಲ್ಲರಂತೆ ಇರಲು ಏನು ಪ್ರಾಬ್ಲಂ. ಇದೇ ರೀತಿ ಅರಬ್ ದೇಶಗಳಲ್ಲಿ ಮಾಡಿದ್ರೆ ಏನು ಮಾಡ್ತಿದ್ದರು. ಇಲ್ಲಿ ಏನು ಮಾಡಿದ್ರು ನಡೀತಿದೆ ಅನ್ನೋ ಮನೋಭಾವನೆ. ಸರ್ವೇ ಜನೋ ಸುಖಿನೋ ಭವಂತು, ವಸುದೈವ ಕುಟುಂಬಕಂ ಅಂದವರಿಗೆ ಈ ಗತಿ.

ಮತ್ತಷ್ಟು ಓದು »

19
ಏಪ್ರಿಲ್

ಯುಎಇ ನಿಜಕ್ಕೂ ಅಷ್ಟೊಂದು ಅಸಹಿಷ್ಣು ದೇಶವೇ?

– ರಾಘವೇಂದ್ರ ಎಮ್‌ ಸುಬ್ರಹ್ಮಣ್ಯ

Arab_Gulf_States_englishಕಳೆದೆರಡು ವಾರದಿಂದ ಗಲ್ಫ್ ದೇಶಗಳಲ್ಲಿರುವ ಹಿಂದೂಗಳ ಕೆಲಸಕ್ಕೆ ಕುತ್ತು ತರುವ ವ್ಯವಸ್ಥಿತ ಸಂಚುಗಳು ನಡೆದಿವೆ. ದೆಹಲಿಯ ತಬ್ಲೀಗೀ ಜಮಾತ್’ನವರ ವರ್ತನೆಯನ್ನು ಖಂಡಿಸಿ ಏನನ್ನಾದರೂ ಬರೆದರೆ ಅದೇ ದೊಡ್ಡ ತಪ್ಪು ಎಂಬಂತೆ ಬಿಂಬಿಸಿ, ಪೋಲಿಸರಿಗೆ ದೂರು ನೀಡುವ ಕೆಲಸ ನಡೆದಿದೆ. ಹಾಗಾದರೆ ಯುಎಇಯಲ್ಲಿ ಅಷ್ಟೆಲ್ಲಾ ಸುಲಭಕ್ಕೆ ಯಾರನ್ನಾದರೂ ಅರೆಸ್ಟ್ ಮಾಡಿಸಬಹುದೇ? ಇಸ್ಲಾಂ ಬಗ್ಗೆ ಏನೂ ಕೆಟ್ಟದಾಗಿ ಬರೆಯದೇ, ಭಾರತದ ಕೆಲ ಮುಸ್ಲಿಮರ ತಪ್ಪುಗಳ ಬಗ್ಗೆ ಬರೆದರೆ ಅದು ಶಿಕ್ಷಾರ್ಹ ಅಪರಾಧವೇ?

ಹೆಚ್ಚಿನವರಿಗೆ ಅರಬ್ ರಾಷ್ಟ್ರಗಳೆಂದರೆ ಬಹಳಷ್ಟು ತಪ್ಪು ಅಭಿಪ್ರಾಯಗಳಿವೆ. ತಪ್ಪು ಮಾಡಿದರೆ ಸಾರ್ವಜನಿಕವಾಗಿ ಛಡಿಯೇಟು ಬೀಳುತ್ತದೆ, ಕೈ ಕಾಲು ತಲೆ ಕಡಿಯುತ್ತಾರೆ ಎಂಬೆಲ್ಲಾ ಅನಿಸಿಕೆಗಳಿವೆ. ಆದರೆ ಈ ಎಲ್ಲಾ ಹೆಚ್ಚಿನ ಅಭಿಪ್ರಾಯಗಳು ಬಂದಿರುವುದು ಸೌದಿ ಅರೇಬಿಯಾದಿಂದ. ಯಾಕೆಂದರೆ ಇವೆಲ್ಲಾ ಹೆಚ್ಚಾಗಿ ನಡೆಯುವುದು ಅಲ್ಲಿ ಮಾತ್ರ. ಆದರೆ ಎಲ್ಲಾ ಅರಬ್ ದೇಶಗಳೂ ಹೀಗಿಲ್ಲ. ಇಲ್ಲಿ ಇಸ್ಲಾಂ ನಿಂದನೆಯನ್ನು ಯಾರೂ ಸಹಿಸುವುದಿಲ್ಲವಾದರೂ, ಒಮಾನ್, ಬಹರೈನ್ ಮತ್ತು ಯುಎಇ ದೇಶಗಳು ಸಹಿಷ್ಣುತೆಯಲ್ಲಿ ಹೊಸ ಅಧ್ಯಾಯಗಳನ್ನೇ ಬರೆದಿವೆ. ಮತ್ತಷ್ಟು ಓದು »

1
ಮಾರ್ಚ್

ಭಾರತವನ್ನು ಅರಿಯಲು ಶ್ರೀ ಅರವಿಂದರೆನ್ನುವ ಕೀಲಿ ಕೈ

– ಡಾ. ರೋಹಿಣಾಕ್ಷ ಶಿರ್ಲಾಲು
ಕರ್ನಾಟಕ ಕೆಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

ಭಾರತೀಯರೆಲ್ಲಾ ಭಾರತವನ್ನು ಅರ್ಥಮಾಡಿಕೊಂಡಿದ್ದಾರೆಯೇ? ಹೀಗೊಂದು ಪ್ರಶ್ನೆ ಕೇಳಿದರೆ ಅಪ್ರಸ್ತುತವಾದೀತೆ? ಸೂಕ್ಷ್ಮವಾಗಿ  ಗಮನಿಸಿದರೆ ಈ ಪ್ರಶ್ನೆ ಸಕಾರಣವಾಗಿದೆ. ಹೌದಲ್ಲಾ ನಮಗೆ ಭಾರತವೆಷ್ಟು ಅರ್ಥವಾಗಿದೆ? ಅರ್ಥಮಾಡಿಕೊಳ್ಳಲು ಬಳಸಿದ ಆಕರಗಳೇನು? ಈ ಆಕರಗಳ ಅಧಿಕೃತತೆಯೇನು? ಅಥವಾ ನಮ್ಮ ಆಕರಗಳೇ ಪರಕೀಯವೇ? ಪರಕೀಯ ಎಂದಾದರೆ ನಿಜದ ಭಾರತವನ್ನು ತಿಳಿಯುವುದಾದರೂ ಹೇಗೆ? ಹೀಗೆ ಪ್ರಶ್ನೆಗಳ ಸರಮಾಲೆಯೇ ಹುಟ್ಟಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದೊಳಗೇ ಇರುವ ಒಂದು ಸಣ್ಣ ಗುಂಪು ಇಲ್ಲಿನ ಭೌತಿಕ – ಲೌಖಿಕ ಅನುಕೂಲತೆಗಳೆಲ್ಲವನ್ನು ಪಡೆದುಕೊಂಡೂ ಬೇರೊಂದು ದೇಶಕ್ಕೆ ಜಯಕಾರವನ್ನು ಹಾಕುವ, ತನ್ನ ದೇಶವನ್ನೆ ಭಂಜಿಸುವ, ತುಂಡರಿಸುವ ಕಾರ್ಯೋದ್ದೇಶವನ್ನೇ ಬಹಿರಂಗವಾಗಿ ಸಾರುವ ಪ್ರವೃತ್ತಿಯನ್ನು ತೋರಿಸುತ್ತಿದೆ. ಹಾಗಾದರೆ ಈ ಬಗೆಯ ಪ್ರವೃತ್ತಿಗೆ ಮೂಲ ಕಾರಣವಾದರೂ ಏನು ಎಂದು ಯೋಚಿಸಿದರೆ ಈ ವಿಕೃತಿ ಮೆರೆವ ಮನಸುಗಳಿಗೆ ಭಾರತ ಅರ್ಥವಾಗಿಲ್ಲ ಎನ್ನುವುದು ಸ್ಪಷ್ಟ. ಅಥವಾ ಭಾರತವನ್ನು ಭಾರತೀಯ ಕಣ್ಣುಗಳಿಂದ ನೋಡುವ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎನ್ನಬೇಕು. ಹಾಗೆಂದು ಈ ದೇಶವನ್ನು ಅರ್ಥೈಸಿಕೊಳ್ಳಲು ಮಾಡಿದ ಪ್ರಯತ್ನಕ್ಕೂ ನೂರಾರು ವರ್ಷಗಳ ಇತಿಹಾಸವಿದೆ. ಅಂತಹ ಹಲವು ಪ್ರಯತ್ನಗಳ ಪರಿಣಾಮವಾಗಿಯೇ ಭಾರತ ಉಳಿದಿದೆ. ಇಂದಿನ ತಲೆಮಾರಿಗೆ ಭಾರತವನ್ನು ಅದರ ಮೂಲ ಸ್ವರೂಪದಲ್ಲೇ ಗ್ರಹಿಸಲು ಇರುವ ಜ್ಞಾನದ ಆಕರಗಳನ್ನು ಶೋಧಿಸಲು ಹೊರಟರೆ ಕಣ್ಮುಂದೆ ಕಾಣಿಸಿಕೊಳ್ಳುವ ಜ್ಞಾನನಿಧಿ ಸ್ವರೂಪದ ಶಿಖರಗಳಲ್ಲಿ ಶ್ರೀ ಅರಬಿಂದೋ ಅವರ ವಿಚಾರಧಾರೆಯೂ ಒಂದು.

ಒಂದು ಶತಮಾನದ ಹಿಂದೆ ಅಂದರೆ 1920ರಲ್ಲಿ ಪ್ರಕಟವಾದ ಶ್ರೀ ಅರಬಿಂದೋ ಅವರ ಒಂದು ಕಿರು ಗ್ರಂಥ ‘The Renaissance in India’ ಇಂದಿಗೂ ದೃಷ್ಟಿ ಕಳೆದುಕೊಂಡ ಭಾರತೀಯರಿಗೆ ಭಾರತವನ್ನು ಕಾಣಿಸುವ ಜ್ಞಾನದ ಕನ್ನಡಕದಂತಿದೆ. ಈ ಕೃತಿ ಮೂಲತಃ ನಾಲ್ಕು ಪ್ರಬಂಧಗಳ ಸಂಕಲನ. 1920ರಲ್ಲಿ ಪರಿಷ್ಕೃತಗೊಂಡು ಗ್ರಂಥ ರೂಪದಲ್ಲಿ ಪ್ರಕಟವಾಗುವ ಪೂರ್ವದಲ್ಲಿ 1918ರಲ್ಲಿ ‘ಆರ್ಯ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮಿ. ಜೇಮ್ಸ್ ಕಝಿನ್ಸ್ ಎಂಬ ವಿದ್ವಾಂಸರು ಬರೆದ ಭಾರತದ ನವೋತ್ಥಾನ ಎನ್ನುವ ವಿಚಾರಪೂರ್ಣ ಗ್ರಂಥದ ಹಿನ್ನೆಲೆಯಲ್ಲಿ ಈ ಪ್ರಬಂಧ ಸರಣಿ ಹುಟ್ಟಿಕೊಂಡು, ಈ ಸರಣಿ ಬೆಳೆದು ಶ್ರೀ ಅರವಿಂದ ವಿಚಾರಧಾರೆಯು ತುಂಬಿ ಹರಿಯಿತು.

ಮತ್ತಷ್ಟು ಓದು »

31
ಜನ

CAA ಮತ್ತು NRC: ಬೆಂಕಿಯ ಭ್ರಮೆಯಲ್ಲಿ ಬಾವಿಗೆ ಧುಮುಕುವುದೇಕೆ?

– ಸಂಕೇತ್ ಡಿ ಹೆಗಡೆ

‘Citizenship Amendment Bill’ – ಇಂಥದ್ದೊಂದು ಬಾಂಬ್ ಅನ್ನೇ ಅಮಿತ್ ಶಾ ಆವತ್ತು ಪಾರ್ಲಿಮೆಂಟ್ ನಲ್ಲಿ ಹಾಕಿದರು. ಇದು ಇಷ್ಟೊಂದು ಶಕ್ತಿಯುತ ಬಾಂಬ್ ಎಂದು ಬಹುಶಃ ಗೃಹಮಂತ್ರಿಯಾಗಿ ಸ್ವತಃ ಅವರೂ ಯೋಚಿಸಿರಲಿಕ್ಕಿಲ್ಲ. ಡಿಸೆಂಬರ್ ನಾಲ್ಕಕ್ಕೆ ಕ್ಯಾಬಿನೆಟ್ ಅನುಮೋದನೆ ಪಡೆದ ಈ ಮಸೂದೆ, 9 ಡಿಸೆಂಬರ್ ರಂದು ಲೋಕಸಭೆಯಲ್ಲಿ ಮಂಡನೆಯಾಯಿತು. ಮರುದಿನ ಅಲ್ಲಿ ಸಲೀಸಾಗಿ ಅನುಮೋದನೆಯಾದ ಈ ಪ್ರಸ್ತಾವನೆ, ’ರಾಜ್ಯಸಭೆ’ಯಲ್ಲೂ ಈಜಿ ದಡ ಸೇರುವುದೇ ಎಂಬುದೇ ಎಲ್ಲರ ಪ್ರಶ್ನೆಯಾಗಿತ್ತು. ಆದರೆ  ಡಿಸೆಂಬರ್ 11ರಂದು 20 ಮತಗಳ ಅಂತರದಲ್ಲಿ ಇದು ರಾಜ್ಯಸಭೆಯಲ್ಲೂ ಅನುಮೋದನೆಗೊಂಡಿತು. ಮರುದಿನವೇ ರಾಷ್ಟ್ರಪತಿಗಳ ಅಂಕಿತವೂ ಬಿದ್ದು, ’Bill’ ಇದ್ದದ್ದು ‘Act’ ಆಯಿತು. ‘ಮಸೂದೆ’ ಅಧಿಕೃತವಾಗಿ ಕಾಯಿದೆಯಾಯಿತು. ಈಗ ಶುರುವಾಯಿತು ನೋಡಿ ಈ ಬಾಂಬಿನ ಆಟಾಟೋಪ!

ಇದ್ದಕ್ಕಿದ್ದಂತೆ ಯೂನಿವರ್ಸಿಟಿಗಳು ರಣಾಂಗಣಗಳಾದವು. ’ಜಾಮಿಯಾ ಇಸ್ಲಾಮಿಯಾ’ ವಿಶ್ವವಿದ್ಯಾಲಯದ ಒಳಬದಿಯಿಂದ ಕಲ್ಲುಗಳು ತೂರಿಬಂದವು. ಇಂಥವುಗಳಿಗೆ ಸದಾ ’ಹೆಸರುವಾಸಿ’ಯಾದ ಜೆಎನ್ಯೂ ಸುಮ್ಮನಿರಲು ಸಾಧ್ಯವೇ? ಅಲ್ಲಿಯೂ ಪರಿಸ್ಥಿತಿ ಭುಗಿಲೆದ್ದಿತು.  ’ಜಾಮಿಯ’ದಿಂದ ಶುರುವಾದದ್ದು ಸಾಂಕ್ರಾಮಿಕ ರೋಗದಂತೆ ’ಆಲಿಗಡ್ ಮುಸ್ಲಿಮ್ ಯುನಿವರ್ಸಿಟಿ’, ‘ನಾದ್ವಾ’ ಹೀಗೆ ದೇಶದ ಅನೇಕ ಯೂನಿವರ್ಸಿಟಿಗಳಿಗೆ ಹಬ್ಬಿತು. ಅದಲ್ಲದೇ ಯೂನಿವರ್ಸಿಟಿಗಳ ಹೊರಗೂ, ಸದ್ಯದ ಕೇಂದ್ರ ಸರ್ಕಾರದ ಸೈದ್ಧಾಂತಿಕ ವೈರಿಗಳ ಸಕಲ ಗುಂಪುಗಳಿಂದ ದೊಡ್ಡ ಹಿಂಸಾಚಾರಗಳೇ ನಡೆದವು. ಇಂಥ ಕಾಯ್ದೆಯೊಂದು ಈ ಮಟ್ಟಿಗೆ ಪ್ರತಿಕ್ರಿಯೆಗಳನ್ನು ಪಡೆಯಬೇಕಾಗುತ್ತದೆ ಎಂಬುದನ್ನು ಬಹುಶಃ ನೀರಿಕ್ಷಿಸದಿದ್ದ ಸರ್ಕಾರಕ್ಕೆ, ಇದೊಂದು ಆಘಾತವೇ ಸರಿ. ನೇಮಿಸಿದ್ದ ಪೋಲೀಸ್ ತುಕಡಿಗಳು ಸಾಕಾಗಲಿಲ್ಲ. ಬೆರಳೆಣಿಕೆಯಷ್ಟಿದ್ದ ಪೋಲೀಸರು ಸಾವಿರ ಸಂಖ್ಯೆಗಳಲ್ಲಿದ್ದ ಗಲಭೆನಿರತರನ್ನು ಸಂಭಾಳಿಸಲು ಸಾಧ್ಯವಾಗಲಿಲ್ಲ. ಪೋಲೀಸರು ದೇಶದ ಅನೇಕ ಕಡೆ ಹೊಡೆತ ತಿಂದರು, ಗಾಯಗೊಂಡರು. ಲಕ್ನೋ ನಗರದಲ್ಲೊಂದರಲ್ಲೇ 250ಕ್ಕೂ ಅಧಿಕ ಪೋಲಿಸರು ಗಾಯಗೊಂಡರು ಮತ್ತು ದೇಶವೇ ನಿಬ್ಬೆರಗಾಗುವಂತೆ 50ಕ್ಕೂ ಹೆಚ್ಚು ಪೋಲಿಸರಿಗೆ ಗುಂಡೇಟಾಯಿತು. ಪೋಲೀಸರಿಗೆ ಗುಂಡೇಟಾಯಿತು! ಪ್ರತಿಭಟನಾಕಾರರ ಕಿಸೆಯಲ್ಲಿ ಗುಂಡು ತುಂಬಿ, ಮರೆಯಲ್ಲೆಲ್ಲೋ ಕೈಯಲ್ಲಿ ಬಂದೂಕು ಕೊಟ್ಟದ್ದು ಯಾರು ಅಂತ ಮಾತ್ರ ’ಜಾಮಿಯಾ’, ’ಜೆ ಎನ್ಯೂ’ಗಳಲ್ಲಿ ಪಿಎಚ್ಡಿ ಮಾಡುತ್ತಿರುವವರಿಗೇ ಗೊತ್ತಿರಬೇಕು, ನನಗಂತೂ ಗೊತ್ತಿಲ್ಲ.

ಇಂಥ ಭಯಾನಕ ಗಲಭೆಗಳು ಅನೀರಿಕ್ಷಿತವಾಗಿ ನಡೆದಾಗ, ಇದ್ದಬದ್ದ ಪೋಲೀಸರೇ ಹೊಡೆತ ತಿಂದಾಗ, ಸಹಜವಾಗಿ ಹೆಚ್ಚುವರಿ ತುಕಡಿಗಳು ಪ್ರತಿಭಟನಾ ಸ್ಥಳವನ್ನು ತಲುಪುತ್ತವೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಕಾರಣದಲ್ಲಿ, ಅಲ್ಲಿ ಪೋಲೀಸ್ ಹಿಂಸಾಚಾರ ಕೂಡ ನಡೆಯುತ್ತದೆ. ಲಾಠಿ ಚಾರ್ಜ್ ಗಳಾಗುತ್ತವೆ, ಅಶ್ರುವಾಯುಗಳು ಸಿಡಿಯುತ್ತವೆ, ಗಾಳಿಯಲ್ಲಿ ಗುಂಡು ಹಾರುತ್ತದೆ, ಕೆಲವೊಮ್ಮೆ ಗೋಲೀಬಾರ್ ಕೂಡ ನಡೆದುಹೋಗುತ್ತದೆ. ದುರದೃಷ್ಟಕರವಾಗಿ ಎಲ್ಲವೂ ಹೀಗೇ ಆಯಿತು. ಇವೇನು ವಿಶ್ವವಿದ್ಯಾಲಯಗಳೋ, ಯುದ್ಧಭೂಮಿಗಳೋ ಎಂದು ಜನರಿಗೆ ಗೊಂದಲವಾಗುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿತ್ತು. ಅದು ದೇಶಕ್ಕೆ ಒಳಿತಿರಲಿ ಅಥವಾ ಕೆಡುಕಿರಲಿ, ಏನೇ ಇರಲಿ, ಈ ಸರ್ಕಾರ ಯಾವ ಹೆಜ್ಜೆಯಿಟ್ಟರೂ ದೇಶದಲ್ಲಿ ‘ಕೆಂಪು’ ರಕ್ತ ಹರಿಸಬೇಕು ಎಂದು ಸದಾಕಾಲ ಕಾದುಕುಳಿತಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಟ್ಟೆಂದು ಎದ್ದುನಿಂತವು. ಪರಿಸ್ಥಿತಿ ವಿಕೋಪಕ್ಕೆ ಹೋಗಲು ಏನೇನು ಮಾಡಬಹುದೋ ಅದನ್ನೆಲ್ಲ ಚಾಚೂ ತಪ್ಪದೇ ಮಾಡಿದವು. “ನಿಮ್ಮ ಅಸ್ತಿತ್ವವೇ ಅಪಾಯದಲ್ಲಿದೆ” ಎಂಬ ತಪ್ಪುಸಂದೇಶವನ್ನು ಅತ್ಯಂತ ಅಚ್ಚುಕಟ್ಟಾಗಿ ಒಂದು ನಿರ್ದಿಷ್ಟ ಸಮುದಾಯಕ್ಕೆ ತಲುಪುವ ಹಾಗೆ ನೋಡಿಕೊಂಡವು. ’ಇನ್ನೇನು ನಿಮ್ಮನ್ನು ದೇಶದಿಂದ ಹೊರಹಾಕಿಯೇ ಬಿಡುತ್ತಾರೆ’ ಅಂತ ಹುಚ್ಚು ಕಲ್ಪನೆಯನ್ನು ಒಂದು ದೊಡ್ಡ ಸಂಖ್ಯೆಯ ಜನರ ತಲೆಯಲ್ಲಿ ವ್ಯವಸ್ಥಿತವಾಗಿ ತೂರಿಬಿಟ್ಟರು. ಆಹ್.. ಹೊತ್ತುತ್ತಿದ್ದ ಬೆಂಕಿಗೆ ಗಾಳಿ ಊದಿದಂತಾಯಿತು.

ಹ್ಮ್… ಇಷ್ಟೆಲ್ಲ ಏಕಾಯಿತು? ಅಂಥ ’ಸ್ಫೋಟಕ ವಸ್ತು’ ಈ ಕಾಯ್ದೆಯಲ್ಲಿದೆಯೇ? ಇದು ಅಸಾಂವಿಧಾನಿಕವೇ? ಇದು ಧರ್ಮಗಳ ನಡುವೆ ಪಕ್ಷಾತೀತ ಮಾಡುವ ಹುನ್ನಾರವೇ? ನಾಳೆ ನಮ್ಮನ್ನೂ ಹೊರಹಾಕಿಬಿಡುತ್ತಾರೆಯೇ?

ಇಂಥ ಪ್ರಶ್ನೆಗಳನ್ನೆಲ್ಲ ಕೇಳಿದಾಗ ಅಳಬೇಕೋ ನಗಬೇಕೋ ಗೊತ್ತಾಗುವುದಿಲ್ಲ. ಆದರೆ ಇಂಥ ಅಸಂಬದ್ಧಗಳನ್ನೇ ಅಷ್ಟು ವ್ಯವಸ್ಥಿತವಾಗಿ ಒಂದಿಷ್ಟು ಜನರ ತಲೆಗೆ ನಮ್ಮೆದುರೇ ತುಂಬಿ ಹುಯಿಲೆಬ್ಬಿಸಿಬಿಟ್ಟರಲ್ಲ ಎಂದು ನೆನೆಸಿಕೊಂಡರೆ ಬೇಸರವಾಗುತ್ತದಷ್ಟೇ. ಸರಿ ಈಗ ಕಾಯ್ದೆಯ ವಿಷಯಕ್ಕೆ ಬರೋಣ.

ಈ ಕಾಯ್ದೆ ಏನು ಹೇಳುತ್ತದೆ ಎಂದು ಬಹುಶಃ ನೀವೆಲ್ಲ ಇಷ್ಟುದಿನದಲ್ಲಿ ಖಂಡಿತವಾಗಿ ತಿಳಿದುಕೊಂಡಿರುತ್ತೀರಿ. ಆದರೂ ಒಂದು ಚಿಕ್ಕ ವಿವರಣೆ ಕೊಡುವುದು ನನ್ನ ಕರ್ತವ್ಯ. ಇದು ನಮ್ಮ ನೆರೆಹೊರೆಯಲ್ಲಿರುವ 3 ರಾಷ್ಟ್ರಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ, ಅವರು ಅಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಹಿಂಸೆಗೊಳಗಾಗಿ ಭಾರತಕ್ಕೆ ಐದು ವರ್ಷಗಳ ಹಿಂದೆ – ಅಂದರೆ ಡಿಸೆಂಬರ್ 31, 2014ಕ್ಕೂ ಮೊದಲು ಓಡಿ ಬಂದಿದ್ದರೆ, ಅವರಿಗೆ ಭಾರತೀಯ ಪೌರತ್ವವನ್ನು ದಯಪಾಲಿಸುವ ಕಾಯ್ದೆ. ಈ ಕಾಯ್ದೆಯಡಿ ಆ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಅನ್ನಿಸಿಕೊಂಡಿರುವ ಆರು ಧರ್ಮಗಳನ್ನು ಪಟ್ಟಿಮಾಡಲಾಗಿದೆ – ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ. ಈ ಧರ್ಮಗಳ ಜನರು ತಾವು ಇತರ ಧರ್ಮದವರು ಎಂಬ ಏಕೈಕ ಕಾರಣಕ್ಕೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗಿ, ಅಪಕೃತ್ಯ- ಅತ್ಯಾಚಾರಗಳಿಗೆ ಒಳಗಾಗಿ ಭಾರತದ ಗಡಿಯೊಳಗೆ ದಾಖಲೆಗಳಿಲ್ಲದೆ, ಅನುಮತಿಯಿಲ್ಲದೆ ಓಡಿ ಬಂದಿದ್ದರೂ – ಮಾನವೀಯ ನೆಲೆಗಟ್ಟಿನಲ್ಲಿ ನಾವು ಅವರಿಗೆ ಪೌರತ್ವ ಕೊಡುತ್ತೇವೆ ಎಂಬುದು ಈ ಕಾಯ್ದೆಯ ವಾಗ್ದಾನ. ‘ಮುಸ್ಲೀಮರನ್ನೇಕೆ ಹೊರಗಿಟ್ಟಿರಿ?’ ಆಯ್ತು, ಅಲ್ಲಿಗೇ ಬರೋಣ.

1947ರಲ್ಲಿ ದೇಶದ ವಿಭಜನೆ ನಡೆಯಿತು. ಯಾಕೆ ನಡೆಯಿತು, ಅದು ಸರಿಯೇ, ತಪ್ಪೇ, ಮಾಡಬಾರದಿತ್ತೇ? ಇವೆಲ್ಲ ಪೋಸ್ಟ್ ಮಾರ್ಟಮ್ ಗಳಿಗೆ ನಾನು ಹೋಗುವುದಿಲ್ಲ. ಹೌದು, 70 ವರ್ಷಗಳ ಹಿಂದೆ ಅಂಥದ್ದೊಂದು ಭಯಾನಕ ಘಟನೆ ನಡೆದುಹೋಯಿತು. ಕೋಟ್ಯಂತರ ಜನ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹಾದು ಬಂದರು. ಮೊದಲೇ ಬ್ರಿಟೀಷರು ನುಂಗಿ-ನೀರ್ಕುಡಿದಿದ್ದ ಆರ್ಥಿಕ ಪರಿಸ್ಥಿತಿ, ಅದರ ಮೇಲೆ ’ವಿಭಜನೆ’ ಎಂಬ ಬರೆ! ಲಕ್ಷಾಂತರ ಜನ ಹಾದಿ ಮಧ್ಯೆ ಸತ್ತರು, ಹಸಿದು ದಣಿದು ಸತ್ತರು. ಎರಡೂ ಕಡೆ ನಡೆಯಲೇಬಾರದಂತಹ ಘಟನೆಗಳು ನಡೆದುಹೋದವು. ಆದರೆ ಎರಡೂ ಕಡೆ, ನೂರಾರು ವರ್ಷಗಳಿಂದ, ತಲೆತಲೆಮಾರುಗಳಿಂದ ಅಲ್ಲೇ ವ್ಯವಸಾಯ ಮಾಡಿ, ಅಲ್ಲೇ ಬದುಕುಕಟ್ಟಿಕೊಂಡಿರುವವರಲ್ಲಿ ಅನೇಕರಿಗೆ ಅದನ್ನು ಬಿಟ್ಟುಬರಲಾಗಲಿಲ್ಲ. ಹೌದು! ಯಾರೋ ಎಲ್ಲೋ ದೊಡ್ಡ ಮಟ್ಟದಲ್ಲಿ, ಸಹಿಹಾಕಿದರು, ಒಪ್ಪಂದಕ್ಕೆ ಬಂದರು ಎಂಬ ಮಾತ್ರಕ್ಕೆ – it simply doesn’t make any sense to normal people living around, striving for a livelihood everyday to just leave everything and migrate to some unknown land. ಅಂಥವರು ಅಲ್ಲೇ ಉಳಿದರು. ಆಗಿನ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳಾಗಿ ಒಂದೇ ದೇಶವೆನಿಸಿಕೊಂಡಿದ್ದ ಈಗಿನ ಬಾಂಗ್ಲಾ ಮತ್ತು ಪಾಕಿಸ್ತಾನಗಳು ಅವರ ನೆಲೆಬೀಡಾದವು. ಆದರೆ ತಾನು ’ಇಸ್ಲಾಮಿಕ್ ಗಣರಾಜ್ಯ’ ಎಂದು ಅಧಿಕೃತವಾಗಿ ಘೋಷಿಸಿಕೊಂಡಿತು ನೋಡಿ ಪಾಕಿಸ್ತಾನ – ಅಲ್ಲಿನ ಮತೀಯ ಮೃಗಗಳಿಗೆ ಸರ್ಕಾರದ ಬೆಂಬಲ ಸಿಕ್ಕಂತಾಯಿತು. ‘ಕಾಫಿರ’ರ ಮೇಲೆ ದೌರ್ಜನ್ಯ ಮಾಡುವುದು ಒಂಥರಾ ಕಾನೂನಿಗೆ ವಿರುದ್ಧವಲ್ಲದ ಸಂಗತಿ ಎಂಬಂತಾಗಿಹೋಯಿತು. ಏಕೆಂದರೆ ಇಸ್ಲಾಮ್ ರಾಷ್ಟ್ರೀಯ ಧರ್ಮ ನೋಡಿ. ಆ ದೇಶ ತನ್ನನ್ನು ಗುರುತಿಸಿಕೊಳ್ಳುವುದೇ ಧರ್ಮದ ಆಧಾರದ ಮೇಲೆ – ಪಾಕಿಸ್ತಾನದ ಧ್ವಜವನ್ನು ನೋಡಿದರೆ ನಿಮಗೆಲ್ಲವೂ ಅರ್ಥವಾಗಿಬಿಡಬೇಕು.

ಪಾಕಿಸ್ತಾನದಲ್ಲಿ 1947ರಲ್ಲಿ 22%ರಷ್ಟು ಇದ್ದ ಇಸ್ಲಾಮೇತರ ಜನಸಂಖ್ಯೆ 2011ರ ವೇಳೆಗೆ 7.8% ಗೆ ಇಳಿದಿತ್ತು ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಈಗಿನ ಅಂದಾಜಿನ ಪ್ರಕಾರ 3.1% ಗೆ ಇಳಿದಿದೆ. ಇವೆಲ್ಲ ಅಧಿಕೃತ ಲೆಕ್ಕಗಳಾದರೆ ವಾಸ್ತವವಾಗಿ ಇನ್ನೆಂಥ ದುಸ್ವಪ್ನವಿದೆಯೋ! ಹೀಗೊಂದು ವ್ಯವಸ್ಥಿತ ನರಮೇಧ ಆ ನೆಲಗಳಲ್ಲಿ ನಡೆದಿದೆ. 2017ರ ವರೆಗೆ ಪಾಕಿಸ್ತಾನದಲ್ಲಿ ಹಿಂದೂ ಪದ್ಧತಿಯ ಮದುವೆಗಳು ಕಾನೂನುಬಾಹಿರವಾಗಿದ್ದವು ಎಂಬ ವಿಷಯ ನಿಮಗೆ ಗೊತ್ತೇ? ಒಬ್ಬನು ಹಿಂದೂ ರೀತಿಯಲ್ಲಿ ಮದುವೆಯಾಗಿದ್ದರೆ, ಅದನ್ನು ಕಾನೂನು ಗುರುತಿಸುವುದಿಲ್ಲ. ನಾಳೆ ಯಾರೋ ಬಂದು ಆತನ ಪತ್ನಿಯನ್ನು ಅವನ ಕಣ್ಣೆದುರೇ ಅಪಹರಿಸಿಕೊಂಡುಹೋದರೂ ಕಾನೂನು ಅವನ ಸಹಾಯಕ್ಕೆ ಬರದು! ಇಂಥ ಸಾವಿರಾರು ಕಥನಗಳು, ಅಮಾನುಷ ಘಟನೆಗಳಿಗೆ ಆ ನೆಲಗಳು ಕಳೆದ 70 ವರ್ಷಗಳಲ್ಲಿ ಸಾಕ್ಷಿಯಾಗಿವೆ. ಪತ್ನಿಯನ್ನು ಕದ್ದೊಯ್ದರೂ, ಮನೆಯ ಮಕ್ಕಳನ್ನು ಅತ್ಯಾಚಾರಕ್ಕೊಳಪಡಿಸಿದರೂ, ಕೊನೆಗೆ ಬಂದು ತನ್ನನ್ನು ಕೊಂದು ಹೋದರೂ ದೇಶ ಅಥವಾ ಕಾನೂನು ಸಹಾಯಕ್ಕೆ ಬರುವುದಿಲ್ಲ ಎಂದು ಗೊತ್ತಾದಮೇಲೆ, ಜೀವಿಸುವ ಪರಿಸರ ಮತ್ತು ಪರಿಸ್ಥಿತಿ ದಿನದಿನಕ್ಕೂ ವಿಷಮವಾಗುತ್ತ ಹೋದಮೇಲೆ ಅನೇಕರು ಅಲ್ಲಿಂದ ಇಲ್ಲಿಗೆ ಗುಳೆ ಬರಲು ಪ್ರಾರಂಭಿಸಿದರು. ಅವರೇ ನಾವು ಮಾತನಾಡುತ್ತಿರುವ ನಿರಾಶ್ರಿತರು. ಅವರಿಗೇ ನಾವು ಮಾನವೀಯ ನೆಲೆಗಟ್ಟಿನಲ್ಲಿ ಪೌರತ್ವವನ್ನು ಕೊಡಲು ಸಿದ್ಧರಿದ್ದೇವೆ ಎನ್ನುತ್ತಿರುವುದು.

ಹಾಗಿದ್ದರೆ ‘ಇಸ್ಲಾಂ’ ಧರ್ಮವನ್ನು ಈ ಕಾಯ್ದೆಯಿಂದ ಹೊರಗಿಟ್ಟಿರುವುದೇಕೆ? ಸರಿ ಆ ವಿಷಯಕ್ಕೆ ಬರೋಣ. ಈ ಕಾಯ್ದೆ ಇರುವುದು ಆ ಮೂರು ದೇಶಗಳಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ತುಳಿತಕ್ಕೊಳಗಾದ ಅಲ್ಪಸಂಖ್ಯಾತರನ್ನು ಉದ್ದೇಶಿಸಿ.  ಅಲ್ಲಿಗೆ ಆ ದೇಶಗಳಲ್ಲಿ ಮುಸ್ಲೀಮರು ಅಲ್ಪಸಂಖ್ಯಾತರೂ ಅಲ್ಲ, ಶೋಷಿತರೂ ಅಲ್ಲ. ಹಾಗಿದ್ದರೆ ಅಹ್ಮದಿಯರೂ, ಶಿಯಾಗಳು ಮೇಲೂ ಅಲ್ಲಿ ದೌರ್ಜನ್ಯಗಳಗುತ್ತವಲ್ಲ? ಅವರನ್ನೂ ಸೆಳೆದುಕೊಳ್ಳಬಹುದಲ್ಲ? ಮಾಡಬಹುದೇನೋ.. ಆದರೆ ಇದು ಈ ಕಾಯ್ದೆಯಡಿ ಬರುವುದಿಲ್ಲ. ಏಕೆಂದರೆ ಭಾರತದ ಅತ್ಯುತ್ಕೃಷ್ಟ ಕಾನೂನು ತಜ್ಞರಲ್ಲಿ ಒಬ್ಬರಾದ ಹರೀಶ್ ಸಾಳ್ವೆ ಅವರೇ ಹೇಳುವಂತೆ – ಒಂದು ದೇಶದಲ್ಲಿ ಅನೇಕ ಕಾರಣಗಳಿಂದ ನಿರ್ದಿಷ್ಟ ಗುಂಪಿನ ಜನರು ಕಿರುಕುಳಕ್ಕೆ ಒಳಗಾಗಿರಬಹುದು. ಸಾಮಾಜಿಕ ಕಾರಣಗಳಿರಬಹುದು, ಆರ್ಥಿಕ ಕಾರಣಗಳಿರಬಹುದು, ನಂಬಿಕೆಯ ಆಧಾರದ ಮೇಲೆ ಮೇಲು-ಕೀಳೆಂಬ ಭೇದದಿಂದಿರಬಹುದು. ಆದರೆ ಈ ಕಾಯ್ದೆ ಉದ್ದೇಶಿಸುತ್ತಿರುವ ಸಮೂಹ ‘ಧಾರ್ಮಿಕ ನೆಲೆಗಟ್ಟಿನಲ್ಲಿ’ ಕಿರುಕುಳಕ್ಕೆ ಒಳಗಾದವರನ್ನು ಮಾತ್ರ. ಅಹ್ಮದೀಯರಿರಲಿ, ಶಿಯಾಗಳಿರಲಿ ‘ಧಾರ್ಮಿಕ ನೆಲೆಗಟ್ಟಿನಲ್ಲಿ’ ಕಿರುಕುಳಕ್ಕೆ ಒಳಗಾದವರಲ್ಲ. ಏಕೆಂದರೆ ಅವರ ಧರ್ಮ ಬೇರೆಯದು ಎಂದು ಕಾನೂನು ಪರಿಗಣಿಸುವುದಿಲ್ಲ. ಅವರ ಧರ್ಮವೂ ಇಸ್ಲಾಮೇ. ಒಳಗಿನ ಕೆಲವು ನಂಬಿಕೆಗಳಿಂದ ಅಲ್ಲವರು ಕಿರುಕುಳಕ್ಕೆ ಒಳಗಾಗಿರಬಹುದು. ಆದರೆ ಈ ಕಾಯ್ದೆ ಅದನ್ನು ಉದ್ದೇಶಿಸುವುದಿಲ್ಲ.

ಅವರನ್ನೂ ಸೇರಿಸಬಹುದಲ್ಲ? ಏಕೆ ಬಿಡುತ್ತೀರಿ? ಮತ್ತು ಮೂರೇ ದೇಶಗಳು ಏಕೆ? ಮಯನ್ಮಾರನ್ನೂ ಸೇರಿಸಿ.. ರೊಹಿಂಗ್ಯಾಗಳಿಗೂ ಕೊಡಿ. ಚೀನಾದಲ್ಲಿ ಕಿರುಕುಳಾಕ್ಕೊಳಗಾದ ಮುಸ್ಲೀಮರಿಗೆ ಕೊಡಿ ಅನ್ನೋದು ಇನ್ನು ಕೆಲವರ ವಾದ. ಅಲ್ಲೇ ಅವರು ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದೇ ಇರುವುದು. ಈ ಕಾಯ್ದೆ ಯಾವ ಉದ್ದೇಶಕ್ಕೆ ತರಲ್ಪಟ್ಟಿತು ಎಂಬುದನ್ನೇ ಮರೆತಿರುವುದು. ಇದು ದೇಶ ವಿಭಜನೆಯಾದ ಕಾಲದಲ್ಲಿ ಇಲ್ಲಿ ಬರಲಾಗದೇ ಅಲ್ಲೇ ಉಳಿದುಕೊಂಡರಲ್ಲ, ನಂತರ ಪರಿಸ್ಥಿತಿ ವಿಷಮವಾದಾಗ ಇಲ್ಲಿಗೆ ಗುಳೆ ಬಂದರಲ್ಲ, ಆ ಸಮಸ್ಯೆಯನ್ನು ಬಗೆಹರಿಸಲು ರಚಿಸಲ್ಪಟ್ಟಿದ್ದು. ಹಾಗೂ ಅಫಘಾನಿಸ್ತಾನದಲ್ಲೂ ಕೊಂಚ ಹರಡಿಕೊಂಡಿದ್ದ ಹಿಂದೂ, ಸಿಖ್ ಮುಂತಾದ ಜನಾಂಗಗಳು ದಶಕಗಳ ಕಾಲ ನಡೆದ ’ಆಫ್ಘನ್ ಯುದ್ಧ’ದಲ್ಲಿ ನರಳಿದ್ದರಲ್ಲ, ಅವರನ್ನು ಉದ್ದೇಶಿಸಲು. ಜಗತ್ತಿನ ಎಲ್ಲಾ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾದವರ ಸಮಸ್ಯೆಯನ್ನು ಬಗೆಹರಿಸಲು ರಚಿಸಿದ್ದಲ್ಲ. 1947ರಲ್ಲಿ ಈ ದೇಶದಿಂದ ವಿಭಜನೆಯಾದದ್ದು ಯಾವುವು? ಪಾಕಿಸ್ತಾನ ಮತ್ತು ಬಾಂಗ್ಲಾ. ಮಯನ್ಮಾರ್ ಆಗಲೀ, ಶ್ರೀಲಂಕಾವಾಗಲೀ, ಚೀನಾವಾಗಲೀ ಸ್ವಾತಂತ್ರ್ಯ ಸಿಕ್ಕಾಗ ನಡೆದ ನಮ್ಮಿಂದ ವಿಭಜಿತವಾದ ರಾಷ್ಟ್ರಗಳಲ್ಲ. ಈ ಕಾಯ್ದೆ ಬಹುವಾಗಿ ಆಗ ನಡೆದ ಘನಘೋರ ವಿಭಜನೆಯ ಸಂತ್ರಸ್ತರೂ ಅಲ್ಲ. ಈ ಕಾಯ್ದೆ ಆಗ ನಡೆದ ವಿಭಜನೆಯ ಸಂತ್ರಸ್ತ ಕುಟುಂಬಗಳಿಗೇ ಹೊರತು ನೀವಂದುಕೊಂಡಿರುವ ಹಾಗೆ ಜಗತ್ತಿನ ಎಲ್ಲಾ ಸಂತ್ರಸ್ತರಿಗೂ ಅಲ್ಲ.

ಇಷ್ಟು ಹೇಳಿದ ಮೇಲೂ, ಇನ್ನೂ ಕೆಲವರು ಮತ್ತೂ ಮುಂದೆ ಹೋಗಿ ‘ಇರಲಿ. ಇವರು ವಿಭಜನೆಯ ಸಂತ್ರಸ್ತರಲ್ಲದಿರಬಹುದು. ಎಲ್ಲರಿಗೂ ಪೌರತ್ವ ಕೊಡೋಣ. ಎಲ್ಲಿಂದ ಬಂದರೂ ಕೊಡೋಣ’ ಎನ್ನಬಹುದು. ಸ್ವಾಮಿ, ನೀವು ಮಹಾ ಮನವತಾವಾದಿಯೇ ಇರಬಹುದು. ಆದರೆ ದಯವಿಟ್ಟು ಲ್ಯಾಪ್ ಟಾಪ್, ಫೇಸ್ಬುಕ್, ಟ್ವಿಟ್ಟರ್ ಬಿಟ್ಟು ಮನೆಯಿಂದ ಹೊರಬಂದು ನಮ್ಮ ದೇಶವನ್ನೊಮ್ಮೆ ಕಣ್ಣುಬಿಟ್ಟು ನೋಡಿ. ಈ ದೇಶದಲ್ಲಿ ಇನ್ನೂ ಅರ್ಧಕ್ಕರ್ಧ ಜನ ಹಸಿವಿನಿಂದಿದ್ದಾರೆ. ಶಿಕ್ಷಣದ ಮಟ್ಟ ಸುಧಾರಿಸಬೇಕಾಗಿದೆ. ಭ್ರಷ್ಟಾಚಾರವಿದೆ. ಬಡತನವಿದೆ. ನಿರುದ್ಯೋಗವಿದೆ. ಸ್ವಚ್ಛತೆಯ ಸಮಸ್ಯೆಯೂ ಇದೆ. ಇಲ್ಲೇ ಜನರಿಗೆ ಮೂಲಭೂತ ಸೌಕರ್ಯವನ್ನು ತಕ್ಕ ಮಟ್ಟಿಗೆ ಒದಗಿಸಲು ನಮ್ಮಿಂದ ಸಾಧ್ಯವಾಗಿರದೇ ಇರುವಾಗ, ಜಗತ್ತಿನ ಎಲ್ಲೆಡೆಯಿಂದ ಜನರನ್ನು ಬರಮಾಡಿಕೊಳ್ಳೋಣವೇನು? ನಿಮಗೆ ಒಂದು ದೇಶ ಹೇಗೆ ಕಾರ್ಯನಿರ್ವಹಿಸುತ್ತದೆ, ಒಂದು ಸಮಾಜ ಸುಸ್ಥಿತಿಯಲ್ಲಿರಲು ಏನೇನು ಮಾಡಬೇಕಾಗುತ್ತದೆ ಎಂಬ ಕಿಂಚಿತ್ತು ಅರಿವಾದರೂ ಇದೆಯೇ? ನಮ್ಮ ಜನರಲ್ಲೇ ಎಲ್ಲರಿಗೂ ನಾವು ಎರಡು ಹೊತ್ತು ಊಟ ಕೊಡಲು ಸಾಧ್ಯವಾಗದೇ ಇರುವಾಗ, ಅವರನ್ನೂ ಬರಮಾಡಿಕೊಂಡರೆ – ಇಲ್ಲಿರುವ ಹಾಗೂ ಹೊಸತಾಗಿ ಬರುವ ಇಬ್ಬರಿಗೂ ಗೌರವಯುತ ಜೀವನವನ್ನು ಒದಗಿಸಲು ನಮಗೆ ಸಾಧ್ಯವಾಗುವುದಿಲ್ಲ. ಅದು ಖಂಡಿತ ಮಾನವೀಯತೆಯಲ್ಲ.ಈಗ ನಾವು ಬರಮಾಡಿಕುಳ್ಳುತ್ತಿರುವವರು, ಬಹುವಾಗಿ 70 ವರ್ಷದ ಹಿಂದೇ ನಮ್ಮಲ್ಲಿಗೆ ಬರಬೇಕಾಗಿದ್ದು, ಕಾರಣಾಂತರಗಳಿಂದ ಬರದೇ, ಅಲ್ಲಿ ಪರಿಸ್ಥಿತಿ ವಿಷಮವಾಗಿ ಬದುಕಲು ಸಾಧ್ಯವಾಗದೇ ಗುಳೆ ಬಂದವರಿಗಾಗಿ.

ಒಂದು ಜವಾಬ್ದಾರಿಯುತ ದೇಶವಾಗಿ ಅಷ್ಟೂ ಮಾಡದಿದ್ದರೆ, ಅದು ನಮ್ಮ ಮಾನವೀಯತೆನ್ನು ನಾವೇ ಅಪಹಾಸ್ಯ ಮಾಡಿಕೊಂಡಂತೆ. ಕೇವಲ ಅಜೆಂಡಾಗಳನ್ನು, ಐಡಿಯಾಲಜಿಗಳನ್ನು ಹೊತ್ತುಕೊಂಡು ಮೂರುಹೊತ್ತೂ ಪ್ರತಿಭಟಿಸುವವರಿಗೆ, ಏನೋ ಮಾಡುತ್ತೇನೆ ಎಂದು ಅಂದುಕೊಂಡಿರುವವರಿಗೆ ವಾಸ್ತವಗಳು ಅರ್ಥವಾಗುವುದು ಕಷ್ಟ. ಅಥವಾ ಒಂದು ಮಾನವೀಯ ಮತ್ತು ಸುಭದ್ರ ದೇಶವನ್ನು ಕಟ್ಟುವ ಯಾವ ಆಸಕ್ತಿಯೂ ಇವರಿಗೆ ಇಲ್ಲ ಎಂದೆನಿಸುತ್ತದೆ. ತಾವು ಸುಭಗರು ಎನ್ನಿಸಿಕೊಳ್ಳಬೇಕು, ತಾವು ಪ್ರಸಿದ್ಧಿ ಪಡೆಯಬೇಕು, ತಮ್ಮ ಮೂಗಿನ ನೇರಕ್ಕೇ ಎಲ್ಲವೂ ನಡೆಯಬೇಕು ಎಂದಾಗಲು ಇವರು ದೇಶದ ತಲೆಯಮೇಲೆ ಕಲ್ಲು ಜರುಗಿಸಲೂ ಸಿದ್ಧ! ತಮ್ಮ ಹುಚ್ಚು ಚಪಲಗಳಿಗೆ ದೇಶದ ಹಿತಾಸಕ್ತಿಯನ್ನು, ಭದ್ರತೆಯನ್ನು ಬಲಿಕೊಡಲು ಸಿದ್ಧ. ದೇಶದೊಳಗೇ ಸುಳ್ಳುಸುದ್ದಿಗಳನ್ನು ಬಿಟ್ಟು, ಜನರನ್ನು ತಪ್ಪು ದಾರಿಗೆಳೆದು ಅಸ್ಥಿರತೆ ಸೃಷ್ಟಿಸುತ್ತಿರುವ ಇಂಥವರ ಮೇಲೆ ನಿಗಾ ಇಡುವುದು ಒಳಿತು. ಈ ನಾಟಕಗಳು ತುಂಬಾ ಬೆಳೆಯಲು ಬಿಟ್ಟರೆ, ಮುಂದೆ ನಮಗೇ ಅಪಾಯ. ಏಕೆಂದರೆ, ದೇಶವಿದ್ದರೆ ಮಾತ್ರ ನಾನು, ನೀವು. ದೇಶ ಅಸ್ಥಿರವಾದರೆ ನಮಗೇ ಮುಂದೊಂದು ದಿನ ಮತ್ತೊಂದು ದೇಶ CAA ಮಾಡಬೇಕಾದೀತು!

10
ನವೆಂ

ಅಯೋಧ್ಯೆ : ಸೆಕ್ಯುಲರ್ ಮಾರೀಚರಿಗೆ ಸುಪ್ರೀಂ ರಾಮಬಾಣ

ರಾಕೇಶ್ ಶೆಟ್ಟಿ

ನವೆಂಬರ್ ೯,೨೦೧೯ರ ಶನಿವಾರದ ದಿನಕ್ಕೂ,ಸೆಪ್ಟಂಬರ್ ೩೦,೨೦೧೦ರ ಗುರುವಾರದ ದಿನಕ್ಕೂ ಸಾಮ್ಯತೆಯಿದೆ. ಆ ಎರಡು ದಿನಗಳು ೪೯೧ ವರ್ಷಗಳಷ್ಟು ಹಳೆಯದಾದ ರಾಮಜನ್ಮಭೂಮಿಯ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದ ಕೇಸಿನ ತೀರ್ಪು ಬರುವ ದಿನಗಳಾಗಿದ್ದವು.

“ವಿವಾದಿತ 2.7 ಎಕರೆ ಭೂಮಿಯನ್ನು ಯಾವುದೇ ಒಂದು ಪಂಗಡಕ್ಕೆ ನೀಡದೆ ಮೂರು ಹೋಳುಗಳನ್ನಾಗಿ,ಪ್ರಸ್ತುತ ರಾಮಲಲ್ಲಾ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ,ಅದರ ಹೊರಗಿನ ಜಾಗ ಬಾಬ್ರಿ ಮಸೀದಿ ಕ್ರಿಯಾ ಸಮಿತಿಗೆ ಸೇರಬೇಕು ಮತ್ತು ಉಳಿದ ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು” ಎಂದು ಅಲಹಾಬಾದ್ ಹೈಕೋರ್ಟ್ ೨೦೧೦ರಲ್ಲಿ ನೀಡಿದ ತೀರ್ಪು ಯಾವ ಗುಂಪಿಗೂ ಒಪ್ಪಿಗೆಯಾಗಲಿಲ್ಲ.ಆ ನಂತರ ೨೦೧೧ರ ಅಕ್ಟೋಬರ್ ತಿಂಗಳಿನಲ್ಲಿ,ಸುಪ್ರೀಂ ಕೋರ್ಟು,ಅಲಹಬಾದ್ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿತ್ತು.

ಅದಾದ ನಂತರ ಈ ಕೇಸಿಗೆ ಪೂರಕವಾಗಿ ಬಂದ ಮತ್ತೊಂದು ಬಹುಮುಖ್ಯ ತೀರ್ಪು, 1994ರ ಅಲಹಾಬಾದ್ ಹೈಕೋರ್ಟ್ ಆದೇಶದಂತೆ, ಇಸ್ಲಾಂ ಪ್ರಕಾರ ಮಸೀದಿಯ ಮಹತ್ವ ಹಾಗೂ ನಮಾಜ್ ಮಾಡಲು ಅದೇ ಜಾಗ ಆಗಬೇಕೆಂದೇನಿಲ್ಲ, ಬಯಲು ಪ್ರದೇಶವೊಂದರಲ್ಲೂ ಪ್ರಾರ್ಥನೆ ಸಲ್ಲಿಸಬಹುದು ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದ್ದು ಹಾಗೂ ಈ ವಿವಾದ ವಿಚಾರಣೆಗೆ ಸಾಂವಿಧಾನಿಕ ಪೀಠದ ಅಗತ್ಯವಿಲ್ಲ ಎನ್ನುವುದಾಗಿತ್ತು.

ಇದಾದ ನಂತರ ಅರ್ಜಿದಾರರು ಹಾಗೂ ಮಧ್ಯಸ್ಥಿಕೆದಾರರ ಜೊತೆಗೂಡಿ ಸಮಸ್ಯೆಗೆ ಸೌಹಾರ್ದಯುತ ಪರಿಹಾರಕ್ಕೂ ಸುಪ್ರೀಂ ಕೋರ್ಟ್ ಮಾರ್ಚ್ ತಿಂಗಳಲ್ಲಿ ಅವಕಾಶ ನೀಡಿತ್ತು. ಅಂತಿಮವಾಗಿ ಸತತ ೪೦ ದಿನಗಳ ಮ್ಯಾರಥಾನ್ ವಿಚಾರಣೆ ನಡೆಸಿತ್ತು.ಕಡೆಯ ದಿನ ಮತ್ತಷ್ಟು ಸಮಯ ಕೋರಿದ ಅರ್ಜಿದಾರರಿಗೆ,ಮುಖ್ಯನ್ಯಾಯ ಮೂರ್ತಿಗಳಾದ ರಂಜನ್ ಗೋಗೋಯ್ ಅವರು ‘Enough is Enough’ ಎಂದಿದ್ದರು.ಎಲ್ಲರ ಚಿತ್ತ ನವೆಂಬರ್ ತಿಂಗಳಲ್ಲಿ ಬರಲಿರುವ ತೀರ್ಪಿನ ಮೇಲೆಯೇ ಇತ್ತು. ನವೆಂಬರ್ ೯ನೇ ತಾರೀಕು ಐತಿಹಾಸಿಕ ತೀರ್ಪು ಹೊರಬಿದ್ದಿದೆ. ವಿವಾದಿತ ೨.೨೭ ಎಕರೆ ಜಾಗವು ರಾಮ್ ಲಲ್ಲಾನಿಗೆ ಸೇರಿದ್ದು ಎಂದು ಕೋರ್ಟ್ ತೀರ್ಪಿತ್ತಿದೆ. ಸುನ್ನಿ ವಕ್ಫ್ ಬೋರ್ಡಿಗೆ ಬೇರೆ ಜಾಗದಲ್ಲಿ ೫ ಎಕರೆ ಭೂಮಿಯನ್ನು ಇನ್ನು ೩-೪ ತಿಂಗಳಲ್ಲಿ ನೀಡುವಂತೆಯೂ ಸೂಚಿಸಿದೆ. ಮಂದಿರ ನಿರ್ಮಾಣದ ಹೊಣೆಯನ್ನು ಹಾಗೂ ನಿರ್ವಹಣೆಗಾಗಿ ಟ್ರಸ್ಟ್ ರಚನೆಯ ಹೊಣೆಯನ್ನು ಕೇಂದ್ರ ಸರ್ಕಾರಕ್ಕೆ ವಹಿಸಿದೆ.ಬಾಬ್ರಿ ಮಸೀದಿಯು ಖಾಲಿ ಜಾಗದಲ್ಲಿ ನಿರ್ಮಾಣವಾಗಿಲ್ಲ ಎನ್ನುವುದನ್ನು ಕೋರ್ಟ್ ಒಪ್ಪಿದೆಯಾದರೂ, ಮಂದಿರವನ್ನು ಕೆಡವಿ ಕಟ್ಟಿರುವುದುಕ್ಕೆ ಪುರಾವೆ ಇಲ್ಲವೆಂದಿದೆ.ಹಾಗೆಯೇ ಮಸೀದಿಯ ಕೆಳಗೆ ಎಎಸ್ಐ ಉತ್ಖನನ ನಡೆಸಿ ನೀಡಿದ ವರದಿಯನ್ನು ಪುರಸ್ಕರಿಸಿ ಅಲ್ಲಿ ಇಸ್ಲಾಮೇತರ ಮಂದಿರದ ಅವಶೇಷ ಸಿಕ್ಕಿರುವುದನ್ನು ಒಪ್ಪಿಕೊಂಡಿದೆ. ಜೊತೆಗೆ ವಿವಾದಿತ ಜಾಗವು ರಾಮ ಜನ್ಮಸ್ಥಳ ಎನ್ನುವ ಹಿಂದೂಗಳ ವೈಯುಕ್ತಿಕ ನಂಬಿಕೆಯು ವಿವಾದರಹಿತವಾದದ್ದು ಎಂದಿದೆ.ಇದಿಷ್ಟು ತೀರ್ಪಿನ ಸಾರಾಂಶ.

ಮತ್ತಷ್ಟು ಓದು »

10
ನವೆಂ

ಅಥೆನ್ಸ್‌ನಲ್ಲಿಲ್ಲದ ಒಂದು ಅಯೋಧ್ಯೆಯಲ್ಲಿತ್ತು! ಅದೇ ಧರ್ಮ

– ಸಂತೋಷ್ ತಮ್ಮಯ್ಯ

ಆಧುನಿಕ ವಾಸ್ತು ಪ್ರಾಕಾರಗಳಲ್ಲಿ ಅತ್ಯಂತ ಜನಪ್ರೀಯತೆಯನ್ನು ಗಳಿಸಿರುವ ಶೈಲಿಗಳಲ್ಲಿ ಗ್ರೀಕ್ ಶೈಲಿಯೂ ಒಂದು. ಅಮೆರಿಕಾದ ವೈಟ್ ಹೌಸಿನಿಂದ ಹಿಡಿದು ಕರ್ನಾಟಕದ ಮಹಾನಗರಗಳ ಪುರಭವನಗಳವರೆಗೂ ಗ್ರೀಕ್ ವಾಸ್ತುಶೈಲಿ ತನ್ನ ಛಾಪನ್ನು ಒತ್ತಿದೆ. ಬೃಹದಾಕಾರದ ಉದ್ದನೆಯ ಕಂಬಗಳು, ಏನೋ ಒಂದು ಗಾಂಭೀರ್ಯವನ್ನೂ ರಾಜಕಳೆಯನ್ನೂ ಒಡಲಲ್ಲಿಟ್ಟುಕೊಂಡ ಈ ಶೈಲಿಯ ಕಟ್ಟಡಗಳು ಕೊಂಚ ಅಧ್ಯಾತ್ಮದ ಭಾವವನ್ನೂ, ಕೊಂಚ ಭೀತಿಯ ಲಕ್ಷಣವನ್ನೂ ಸೂಸುತ್ತಿರುವಂತೆ ಕಾಣಿಸುತ್ತವೆ. ಇಂಥ ಕಟ್ಟಡಗಳು ಇಂದು ಜಗತ್ತಿನ ಸಾಮಾಜಿಕ ಸಂರಚನೆಯನ್ನೂ ಮೀರಿ, ರಾಜಕೀಯ ವಾತಾವರಣವನ್ನೂ ದಾಟಿ, ಪ್ರಾದೇಶಿಕತೆಯ ಶೈಲಿಗಳೆಡೆಯಲ್ಲೂ ಜನಪ್ರೀಯತೆಯನ್ನು ಪಡೆದುಕೊಂಡಿವೆ. ಪುರಾತನ ಗ್ರೀಕ್ ಸಂಸ್ಕೃತಿಗೆ ಮೆರುಗನ್ನೂ ಆಧುನಿಕ ವಾಸ್ತುಶೈಲಿಗೆ ಸವಾಲನ್ನೂ ಒಡ್ಡಿರುವ ಈ ಶೈಲಿ ಗ್ರೀಕ್ ನಾಗರಿಕತೆ ಅಳಿದರೂ ತಾನು ಅಳಿಯದೆ ಉಳಿದುಕೊಂಡಿದೆ. ಅಷ್ಟೇನೂ ಸೂಕ್ಷ್ಮತೆಯಿಲ್ಲದ, ನಾಜೂಕುತನವಿಲ್ಲದ, ಹೆಚ್ಚೇನೂ ಕೌಶಲ್ಯವಿಲ್ಲದಂತೆ ಕಾಣುವ ಗ್ರೀಕ್ ಶೈಲಿ ತನ್ನ ಸರಳತೆಯಿಂದಲೂ ಯೂರೋಪನ್ನು ದಾಟಿ ದೂರದ ಕೊಡಗು-ಚಿಕ್ಕಮಗಳೂರಿನ ಕಾಫಿ ಪ್ಲಾಂಟರುಗಳ ಬೃಹತ್ ಬಂಗಲೆಗಳಲ್ಲೂ ಪ್ರಾತಿನಿಧ್ಯವನ್ನು ಪದೆದುಕೊಂಡಿವೆ. ಜಗತ್ತಿನ ಚಿತ್ರರಂಗದ ಸಿನೆಮಾ ಸೆಟ್ಟುಗಳಲ್ಲಿ, ಕಾವ್ಯ-ಕಥೆಗಳಲ್ಲಿ ರೂಪಕದಂತೆಯೂ ಬಳಕೆಯಾಗಿದೆ. ಭಗ್ನ ಪ್ರೇಮದ ಸಂಕೇತಗಳಂತೆಯೂ ಬಳಕೆಯಾಗಿದೆ ಎಂದರೆ ಅದರ ಜನಪ್ರೀಯತೆಯನ್ನು ಅಂದಾಜಿಸಬಹುದು. ವಸಹಾತುಷಾಹಿ ಬುದ್ಧಿಯ ಬ್ರಿಟಿಷ್,ಫ್ರೆಂಚ್,ಡಚ್ ಜನಗಳ ಕಡಲು ದಾಟಿ ಮೆರೆಯುವ ಜಾಯಮಾನಗಳಿಂದ ಆ ಶೈಲಿ ವಿಶ್ವವ್ಯಾಪಿಯಾಗಿದ್ದೇನೋ ನಿಜ. ಆದರೆ ಅದನ್ನು ಜಗತ್ತು ಗುರುತಿಸುವುದು ಗ್ರೀಕ್ ಶೈಲಿ ಎಂದೇ.

ಇಂಥಾ ವಿಖ್ಯಾತ ವಾಸ್ತು ಶೈಲಿಯ ಮೂಲವಿರುವುದು ಪುರಾತನ ಅಥೆನ್ಸಿನ ಪಾರ್ಥೆನಾನ್ ದೇವಿ ಮಂದಿರದಲ್ಲಿ. ತನ್ನ ಶೈಲಿ ಜಗತ್ತಿನಾದ್ಯಂತ ಹರಡಿದ್ದರೂ ಇಂದಿಗೂ ಪಾರ್ಥೆನಾನ್ ಒಂದು ಮುರುಕು ಮಂಟಪವೇ. ತನ್ನತನವನ್ನು ಜಗತ್ತಿಗೆ ಹರಡಿದ ಮೇಲೆ ಇನ್ನು ಕೆಲಸವೇನಿದೆ ಎಂಬಂತೆ ಒಂದು ಕಾಲದ ಪಾರ್ಥೆನಾನ್ ಅದೇ ಗ್ರೀಸಿನ ಅಕ್ರೊಪೊಲೀಸ್ ಬೆಟ್ಟದ ಮೇಲೆ ನಿಡುಸುಯ್ಯುವಂತೆ ಬಿದ್ದುಕೊಂಡಿದೆ. ಇಷ್ಟೇ ಆಗಿದ್ದರೆ ಅದರಲ್ಲೇನೋ ವಿಶೇಷವಿರುತ್ತಿರಲಿಲ್ಲ. ಕೇವಲ ವಾಸ್ತು ಶಾಸದ ಶೈಲಿಯೊಂದರ ಬಣ್ಣನೆ ಸದ್ಯದ ಆವಶ್ಯಕತೆಯಂತೂ ಖಂಡಿತಾ ಅಲ್ಲ.

ಮತ್ತಷ್ಟು ಓದು »