ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 3
ಸದ್ಗುರು ರಾಮಸಿಂಗ್ ಕೂಕಾ
– ರಾಮಚಂದ್ರ ಹೆಗಡೆ
ದೇಶದ ಸ್ವಾತಂತ್ರ್ಯ ಇತಿಹಾಸದಲ್ಲಿ ಪಂಜಾಬಿ ಸಿಖ್ಖರ ಪಾತ್ರ ಬಹಳ ದೊಡ್ಡದು. ಅಪ್ರತಿಮ ದೇಶಭಕ್ತರ ಸಂಪ್ರದಾಯವದು. ಇಂದಿಗೂ ಭಾರತೀಯ ಸೈನ್ಯದಲ್ಲಿ ಸಿಖ್ ರೆಜಿಮೆಂಟ್ ಎಂದರೆ ಪರಮ ಪರಾಕ್ರಮಿಗಳ ದಂಡು. ಅಂತಹ ಪಂಜಾಬಿ ಸಿಖ್ಖರ ‘ನಾಮಧಾರಿ ಸಂಪ್ರದಾಯ’ ಅಥವಾ ‘ಕೂಕಾ ಪಂಥ’ ದ ಸ್ಥಾಪಕ ಸದ್ಗುರು ರಾಮಸಿಂಗ್ ಕೂಕಾ. ಮೂಲತಃ ಬಡಗಿ ವೃತ್ತಿಯ ಕುಟುಂಬದ ರಾಮಸಿಂಗ್ ತಾನೂ ತನ್ನ ತಂದೆಯ ಬಡಗಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ನೆರವಾಗುತ್ತಿದ್ದ. ಆದರೆ ಮಿತಿಮೀರಿದ ಬ್ರಿಟಿಷರ ದೌರ್ಜನ್ಯ ಹಾಗೂ ಅಲ್ಲಿಯ ಜನರ ನಿರಭಿಮಾನ ಅವನನ್ನು ರೊಚ್ಚಿಗೆಬ್ಬಿಸಿತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಮಿಷನರಿಗಳು ಮತಾಂತರದಲ್ಲಿ ನಿರತರಾಗಿದ್ದವು. ಇದನ್ನೆಲ್ಲಾ ಕಂಡ ರಾಮಸಿಂಗ್ ಜನರನ್ನು ಆಧ್ಯಾತ್ಮಿಕವಾಗಿ ಮೇಲ್ಮಟ್ಟಕ್ಕೆ ಒಯ್ಯುವ, ಅವರೊಳಗೆ ದೇಶಾಭಿಮಾನ ಬೆಳೆಸುವ, ಧಾರ್ಮಿಕ, ಸಾಮಾಜಿಕ, ರಾಜಕೀಯ ಜನಜಾಗೃತಿ ನಿರ್ಧಾರದಿಂದ ಕೂಕಾ ಪಂಥವನ್ನು ಆರಂಭಿಸಿದ. ರಾಮಸಿಂಗ್ ಸದ್ಗುರು ರಾಮಸಿಂಗ್ ಆದ. ರಾಮಸಿಂಗ್ ನ ಕೂಕಾ ಪಂಥದ ಪ್ರಸಿದ್ಧಿ ಎಲ್ಲೆಡೆಗೆ ಹರಡಿ ಸಾವಿರಾರು ಜನ ಈ ಪಂಥಕ್ಕೆ ಸೇರ್ಪಡೆಯಾದರು. ಪಂಜಾಬ ಪ್ರಾಂತದ ೨೧ ಜಿಲ್ಲೆಗಳಲ್ಲೂ ಕೂಕಾಗಳ ಚಟುವಟಿಕೆಗಳ ಜಾಲ ಹಬ್ಬಿತು. ಮತ್ತಷ್ಟು ಓದು 
ದೆವ್ವ….ದೆವ್ವ….!
– ಗುರುರಾಜ ಕೋಡ್ಕಣಿ. ಯಲ್ಲಾಪುರ
ಅದು ಸುಮಾರು ಮಧ್ಯರಾತ್ರಿ ಸಮಯ.ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಸಾಮಾನ್ಯವಾಗಿ ನಾನು ರೈಲಿನಲ್ಲಿ ಚೆನ್ನಾಗಿ ನಿದ್ರಿಸುತ್ತೇನೆ. ಆದರೆ ಅದೇಕೋ ಅ೦ದು ನನಗೆ ನಿದ್ದೆ ಬರುತ್ತಿರಲಿಲ್ಲ.ಸುಮ್ಮನೆ ಆಕಳಿಕೆ. ಬೆಕ್ಕಿನ೦ತೆ ಆಕಳಿಸುತಾ ಕಿಟಕಿಯಿ೦ದ ಹೊರ ನೋಡಿದೆ. ‘ಅಮವಾಸ್ಯೆಯ ಕತ್ತಲು’ ಹೊರಗಡೆಯ ದೃಶ್ಯಗಳು ಯಾವುದೂ ಕಾಣುತ್ತಿರಲಿಲ್ಲ. ಸಮಯ ನೋಡಿದೆ. ಹನ್ನೆರಡುವರೆ. ನನ್ನ ಸ್ಥಳ ಬರಲು ಇನ್ನೂ ಸಮಯವಿದೆ.
ನನ್ನ ಬೋಗಿಯಲ್ಲಿ ಬೇರೆ ಯಾರೂ ಇರಲಿಲ್ಲ. ನಾನ್ನೊಬ್ಬನೇ. ಇದೇ ಕೊನೆಯ ಬೋಗಿ ಬೇರೆ! ರೈಲಿನ ಕೊನೆಯ ಬೋಗಿಗಳಲ್ಲಿ ದೆವ್ವಗಳು ಇರ್ತಾವ೦ತೆ, ಈ ಸಮಯದಲ್ಲಿ ಇಲ್ಲಿ ದೆವ್ವ ಬ೦ದು ಬಿಟ್ಟರೇ..? ನನ್ನ ವಿಚಾರಸರಣಿ ನೋಡಿ ನನಗೇ ನಗು ಬ೦ತು. ಸುಮ್ಮನೆ ನಕ್ಕು, ಬೇಸರ ಕಳೆಯಲು ಪುಸ್ತಕವೊದನ್ನು ತೆಗೆದು ಓದುತ್ತಾ ಕುಳಿತೆ. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
– ರಾಮಚಂದ್ರ ಹೆಗಡೆ
ಈ ದಿನದ ಸ್ಮರಣೆ: ಕಾರ್ನಾಡ್ ಸದಾಶಿವ ರಾವ್
ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ‘ಸದಾಶಿವ ನಗರ’ ಎಂಬುದು ಎಲ್ಲರಿಗೂ ತಿಳಿದದ್ದೇ. ಆದರೆ ಅದ್ಯಾರು ಸದಾಶಿವ ಎಂಬುದು ಬಹುತೇಕರಿಗೆ ತಿಳಿಯದು. ಆ ಸದಾಶಿವರೇ ಅಪ್ರತಿಮ ದೇಶಭಕ್ತ ದಕ್ಷಿಣ ಕನ್ನಡದ ಗಾಂಧಿ ಎಂದೇ ಸುಪ್ರಸಿದ್ಧರಾದ ಶ್ರೀ ಕಾರ್ನಾಡ್ ಸದಾಶಿವರಾವ್. ಇವರು ಮಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಸದಾಶಿವರಾಯರ ಮನೆ ಸ್ವಾತಂತ್ರ್ಯ ಸಂಗ್ರಾಮದ ತವರು ಮನೆಯಾಗಿತ್ತು. ಮಹಾತ್ಮಾ ಗಾಂಧಿ, ಚಿತ್ತರಂಜನ ದಾಸ, ರಾಜಗೋಪಾಲಾಚಾರಿ ಹಾಗೂ ಸರೋಜಿನಿ ನಾಯ್ಡುರವರಿಗೆ ವಸತಿಗೃಹವಾಗಿತ್ತು. ದೇಶದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾದಾಗ ಕಾರ್ನಾಡು ಸದಾಶಿವರಾಯರು ಅಂಕೋಲೆಗೆ ಹೋಗಿ ಅಲ್ಲಿನ ಜನತೆಗೆ ಮಾರ್ಗದರ್ಶನ ನೀಡಿ ಅಲ್ಲಿ ನಾಲ್ಕು ದಿನಗಳಿದ್ದರು. ಮತ್ತಷ್ಟು ಓದು 
ನಂಬಿಕೆ, ನಿಷೇಧ, ಆಚರಣೆಗಳಲ್ಲಿ ಆಹಾರ
ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ಕುರಿತು ಬಹಳಷ್ಟು ಚರ್ಚೆ ರಾಷ್ಟ್ರಮಟ್ಟದಲ್ಲಿ ಆಗಾಗ ನಡೆಯುತ್ತದೆ. ದನ ಕದಿಯುವ ಹಾಗೂ ಅದನ್ನು ರಕ್ಷಿಸುವ ಗುಂಪುಗಳ ಹಿನ್ನೆಲೆಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಪ್ರಧಾನಿ ಮೋದಿ “ಸೋ ಕಾಲ್ಡ್ ಗೋರಕ್ಷಕರ” ವಿರುದ್ಧ ಗುಡುಗುತ್ತಿದ್ದಂತೆಯೇ ಮತ್ತೆ ಇಂಥ ಚರ್ಚೆ ಶುರುವಾಗಿದೆ. ಈ ಚರ್ಚೆಗಳಲ್ಲಿ ಮೇಲ್ನೋಟದಲ್ಲಿ ಬಹುಸಂಖ್ಯಾತರ ಆಹಾರ ಕ್ರಮವನ್ನು ಅಲ್ಪ ಸಂಖ್ಯಾತರ ಮೇಲೆ ಹೇರುವ ಹುನ್ನಾರ; ದಲಿತರು ಹಾಗೂ ಅಲ್ಪಸಂಖ್ಯಾತರ ಆಹಾರ ಪದ್ಧತಿಯನ್ನು ಪುರೋಹಿತಶಾಹಿ ವ್ಯವಸ್ಥೆ ಆಳುತ್ತಿರುವ ಸಂಕೇತ ಎಂದೂ, ಬ್ರಾಹ್ಮಣರನ್ನು ಬಿಟ್ಟರೆ ಬೇರೆ ಸಾವಿರಾರು ಜಾತಿ-ಸಮುದಾಯಗಳಿಗೆ ಆಹಾರ ಸಂಬಂಧಿ ವಿಧಿ-ನಿಷೇಧಗಳೇ ಇಲ್ಲ ಎಂಬಂತೆಯೂ ಬಿಂಬಿಸಲಾಗುತ್ತಿದೆ. ಅಷ್ಟೇ ಅಲ್ಲ, ಆಹಾರ ಸೇವಿಸುವಾಗಲೂ ಬ್ರಾಹ್ಮಣರು ಮಾತ್ರ ಅನ್ಯರನ್ನು ಸಹಪಂಕ್ತಿ ಭೋಜನದಲ್ಲಿ ಕೂರಿಸಿಕೊಳ್ಳುವುದಿಲ್ಲ, ಉಳಿದವರಲ್ಲಿ ಇಂಥ ಸಂಪ್ರದಾಯವಿಲ್ಲ ಎಂಬಂತೆಯೂ ಬಿಂಬಿಸುತ್ತ, ಇವೆಲ್ಲ ಜಾತಿಪದ್ಧತಿಯನ್ನು ಬಲಗೊಳಿಸುವ ಪುರೋಹಿತಶಾಹಿಯ ಹುನ್ನಾರ ಎಂದೂ ಸರಳವಾಗಿ ವಾದಿಸಲಾಗುತ್ತದೆ. ಆದರೆ ಇವೆಲ್ಲ ಹಾಗೆ ವಾದಿಸುವವರ ವಿವಿಧ ಸಮುದಾಯಗಳ ಆಹಾರ ಸಂಬಂಧಿ ಅಜ್ಞಾನವನ್ನು ತೋರಿಸುತ್ತದೆಯಲ್ಲದೇ ಇನ್ನೇನನ್ನೂ ಅಲ್ಲ. ಇಂಥ ತಿಳಿವಳಿಕೆಯನ್ನು ತಲೆಕೆಳಗಾಗಿಸುವ ಕ್ಷೇತ್ರಾಧಾರಿತ ಅಧ್ಯಯನದ ಫಲಿತ ಹಾಗೂ ವಾಸ್ತವ ಇಲ್ಲಿದೆ. ಇದು ತುಮಕೂರು ಜಿಲ್ಲೆಯ ಸಾಂಪ್ರದಾಯಿಕ ಆಹಾರ ಪದ್ಧತಿ ಕುರಿತ ಯೋಜನೆಯೊಂದನ್ನು ಆಧರಿಸಿದೆ. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
(ಮರೆತು ಮರೆಯಾಗಿರುವ ಸ್ವಾತಂತ್ರ್ಯ ವೀರರನ್ನು ನೆನೆಸಿಕೊಮ್ಡು ಗೌರವ ಸಲ್ಲಿಸುವ ಹಾಗೂ ಅವರ ಕುರಿತ ಮಾಹಿತಿಗಳನ್ನು ಜನರಿಗೆ ತಲುಪಿಸುವ ಸದುದ್ದೇಶದಿಂದ ರಾಮಚಂದ್ರ ಹೆಗಡೆಯವರು “ಸುಮ್ಮನೇ ಬರಲಿಲ್ಲ ಸಾತಂತ್ರ್ಯ” ಎಂಬ ಈ ಬರಹ ಸರಣಿಯನ್ನು ಪ್ರಾರಂಭಿಸಿದ್ದಾರೆ. ಕೆಲವು ಲೇಖನಗಳಿಗೆ ಮಾಹಿತಿಗಳನ್ನು ವಿವಿಧ ವೆಬ್ಸೈಟುಗಳ ಮೂಲಕ ಪಡೆದಿದ್ದರೆ, ಉಳಿದಂತೆ ತಾವು ಓದಿಕೊಂಡಿರುವುದನ್ನು ದಾಖಲಿಸಿದ್ದಾರೆ. ಈ ಸರಣಿ ನಿಲುಮೆಯ ಓದುಗರಿಗಾಗಿ – ಸಂಪಾದಕರು, ನಿಲುಮೆ)
– ರಾಮಚಂದ್ರ ಹೆಗಡೆ
ಆಗಸ್ಟ್ ತಿಂಗಳೆಂದರೆ ಭಾರತೀಯರಿಗೆ ವಿಶೇಷವಾದ ತಿಂಗಳು. ಪರಕೀಯರ ಆಳ್ವಿಕೆಯಿಂದ, ದಾಸ್ಯದ ಸಂಕೋಲೆಯಿಂದ ದೇಶ ಬಿಡುಗಡೆಗೊಂಡ ತಿಂಗಳಿದು. ಆದರೆ ಆ ಸ್ವಾತಂತ್ರ್ಯ ಅಷ್ಟು ಸುಲಭಕ್ಕೆ ದಕ್ಕಿದ್ದಲ್ಲ. ಅದರ ಹಿಂದೆ ಲಕ್ಷಾಂತರ ಜನರ ತ್ಯಾಗ ಬಲಿದಾನಗಳಿವೆ. ಸ್ವಾತಂತ್ರ್ಯ ಬಂದ ಅರವತ್ತೇ ವರ್ಷದಲ್ಲಿ ನಾವು ಅವರೆಲ್ಲರನ್ನೂ ಮರೆತೇಬಿಟ್ಟಿದ್ದೇವೆ. ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರನ್ನು ಕನಿಷ್ಠ ಈ ತಿಂಗಳಾದರೂ ನೆನೆಯಬೇಕಾದ್ದು ನಮ್ಮೆಲ್ಲರ ಕರ್ತವ್ಯ ಅಲ್ವಾ?. ದಿನಕ್ಕೊಬ್ಬ ದೇಶಭಕ್ತನನ್ನು ನೆನಪಿಸಿಕೊಳ್ಳುವ ಪ್ರಯತ್ನವಿದು. ಭಾರತೀಯ ಸ್ವಾತಂತ್ರ್ಯ ಹಬ್ಬದ ಈ ತಿಂಗಳಲ್ಲಿ ದೇಶಕ್ಕಾಗಿ ಅಮರರಾದ ವೀರರನ್ನು ಸ್ಮರಿಸುವ ಸರಣಿ ಇದು. ಇದು ಮರೆತವರನ್ನು ನೆನೆಯುವ ಪ್ರಯತ್ನ. ದೇಶಭಕ್ತರ ಕುರಿತ ಮಾಹಿತಿಗಳನ್ನು ಜೋಡಿಸುವ ಕೆಲಸವಷ್ಟೇ ನಮ್ಮದು. ಇದನ್ನು ಹೆಚ್ಚು ಜನರಿಗೆ ತಲುಪಿಸಿ. ಈ ರಾಷ್ಟ್ರಜಾಗೃತಿಯ ಆಂದೋಲನದಲ್ಲಿ ಕೈಜೋಡಿಸಿ.
ಈ ದಿನದ ಸ್ಮರಣೆ: *ರಾಣಿ ಗಾಯಡಿನ್ ಲೂ*
======================
ರಾಣಿ ಗಾಯಡಿನ್ ಲೂ: ಹೆಸರು ಕೇಳಿದರೆ ಇದು ಯಾರೋ ಬ್ರಿಟಿಷ್ ವ್ಯಕ್ತಿ ಅನ್ನಿಸಬಹುದು. ಆದರೆ ಈ ರಾಣಿ ಗಾಯಡಿನ್ ಲೂ ಈಶಾನ್ಯ ರಾಜ್ಯ ನಾಗಲ್ಯಾಂಡ್ ನ ಆಧ್ಯಾತ್ಮಿಕ ಹಾಗೂ ರಾಜಕೀಯ ಹೋರಾಟದ ನಾಯಕಿಯಾಗಿದ್ದ, ಬ್ರಿಟಿಷ್ ಆಡಳಿತದ ವಿರುದ್ಧ ಈಶಾನ್ಯ ರಾಜ್ಯದಲ್ಲಿ ದಂಗೆ ಎಬ್ಬಿಸಿದ ದಿಟ್ಟ ಮಹಿಳೆ. ತನ್ನ 12ನೇ ವಯಸ್ಸಿಗೇ ಹೋರಾಟಕ್ಕೆ ಧುಮುಕಿ 16ನೇ ವಯಸ್ಸಿಗೆ ಜೀವಾವಧಿ ಶಿಕ್ಷೆಗೆ ಗುರಿಯಾದ ಈಕೆಯ ಕೇವಲ 4 ವರ್ಷಗಳ ಹೋರಾಟದ ತಾಕತ್ತು ಎಂಥದ್ದು ಎಂದು ತಿಳಿದರೆ ಅಚ್ಚರಿ ಎನಿಸುತ್ತದೆ. ಬ್ರಿಟಿಷರ ವಿರುದ್ಧ ಹೋರಾಟ ಅಷ್ಟೇ ಅಲ್ಲದೇ ನಾಗಾ ಜನರಲ್ಲಿ ತಮ್ಮ ಸ್ವಧರ್ಮದ ಬಗ್ಗೆ ಕೀಳರಿಮೆ ಹೊಡೆದೋಡಿಸಿ ಅಭಿಮಾನ ಮೂಡುವಂತೆ ಮಾಡಿದರು. ಪ್ರತಿಯೊಂದು ವನವಾಸಿ ಸಮುದಾಯದ ಬಳಿ ತೆರಳಿ ಬ್ರಿಟಿಷರ ಕುತಂತ್ರದ ಕುರಿತು ಮುಗ್ಧ ಜನರಿಗೆ ತಿಳಿ ಹೇಳಿದರು. ಗಾಯಡಿನ್ ಲೂರಿಂದ ಆಕರ್ಷಿತರಾದ ವನವಾಸಿ ಮಹಿಳೆಯರು ಒಂದು ಸೇನಾ ಪಡೆಯನ್ನೇ ಕಟ್ಟಿದರು. ಇದರಿಂದ ಉತ್ಸಾಹಿತಳಾದ ಗಾಯಡಿನ್ ಲೂ ಅವರಿಗೆ ಸಾಂಪ್ರದಾಯಿಕ ಮದ್ದುಗುಂಡುಗಳ ತಯಾರಿಕೆ, ಬಂದೂಕು ತರಬೇತಿಯನ್ನು ಕೊಟ್ಟಳು. ಮುಂದೆ ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧವನ್ನು ಮಾಡಿದಳು. ಇವಳ ರಣನೀತಿಯಿಂದ ಬ್ರಿಟಿಷರು ತತ್ತರಿಸಿಹೋಗಿದ್ದರು. ಬ್ರಿಟಿಷರಿಗೆ ಸಿಂಹಸ್ವಪ್ನ ವಾಗಿದ್ದ ಈಕೆ ಬ್ರಿಟಿಷರ ತಂತ್ರಗಳನ್ನೆಲ್ಲಾ ಕ್ಷೀಣಿಸುವಂತೆ ಮಾಡಿದಳು. ಧರ್ಮ ರಕ್ಷಣೆ ಮತ್ತು ಬ್ರಿಟಿಷರನ್ನು ಭಾರತ ಬಿಟ್ಟು ಓಡಿಸಿ ಎನ್ನುವ ವಿಷಯವಿಟ್ಟುಕೊಂಡು ಹೋರಾಟ ಮಾಡಿದಳು. ಇವಳಿಗೆ ಹೇಗಾದರು ಮಾಡಿ ಕಡಿವಾಣ ಹಾಕಬೇಕು ಎಂದು ನಿರ್ಧರಿಸಿದ ಬ್ರಿಟಿಷ ಸರಕಾರ ಆ ರಾಜ್ಯಗಳಿಗೆ ತನ್ನ ಸೈನ್ಯವನ್ನೇ ಕಳುಹಿಸಿಕೊಟ್ಟಿತು. ಅಷ್ಟೇ ಅಲ್ಲದೇ ಆ ಕಾಲದಲ್ಲಿಯೇ ಅವಳ ಸುಳಿವು ನೀಡಿದವರಿಗೆ 400ರೂ. ಬಹುಮಾನದ ಜೊತೆಗೆ ಸರಕಾರದ ಸುಂಕವನ್ನು ಮನ್ನಾ ಮಾಡುವದಾಗಿ ಆಮಿಷ ತೋರಿಸಿತು. ಬ್ರಿಟಿಷರು ಎಂದಿನಂತೆ ತಮ್ಮ ಕುತಂತ್ರ ಬುದ್ಧಿಯ ಮೂಲಕ ಗಾಯಿಡಿನ್ ಲೂ ಆಪ್ತರಿಗೆ ಆಮಿಷವೊಡ್ಡಿ ಅವಳ ಸುಳಿವು ಪತ್ತೆಹಚ್ಚಿತು. ಇಬ್ಬರ ಮಧ್ಯೆ ದೊಡ್ಡ ಯುದ್ಧವೇ ನಡೆದುಹೋಯಿತು. ಕೊನೆಗೆ 1932ರ ಅಕ್ಟೋಬರ್ 12 ರಂದು ಗಾಯಿಡಿನ್ ಲೂ ಮೇಲೆ ವಿವಿಧ ಸುಳ್ಳು ಆರೋಪವನ್ನು ಹೊರಿಸಿ, ಸಂಬಂಧವೇ ಇಲ್ಲದ ಕೊಲೆ ಅರೋಪವನ್ನು ತಲೆಗೆ ಕಟ್ಟಿ ಬಂಧಿಸಲಾಯಿತು. ಮತ್ತಷ್ಟು ಓದು 
ಆತ್ಮಹತ್ಯೆಯಲ್ಲಿನ ಮನಸ್ತಿತಿ.
– ಗೀತಾ ಹೆಗ್ಡೆ
ಆತ್ಮಹತ್ಯೆ ಮಹಾ ಪಾಪ. ಆತ್ಮಹತ್ಯೆ ಮಾಡಿಕೊಂಡವರು, ದುರ್ಮರಣದಲ್ಲಿ ಸತ್ತವರು ಅಂತರ್ ಪಿಶಾಚಿಯಾಗಿ ಅಲೆಯುತ್ತಾರಂತೆ. ಅವರಿಗೆ ಇಹದಲ್ಲೂ ಪರದಲ್ಲೂ ಸ್ಥಾನವಿಲ್ಲವಂತೆ.. ದೆವ್ವವಾಗಿ ಅಲೆಯುತ್ತಾರಂತೆ, ಹಾಗಂತೆ ಹೀಗಂತೆ ಅನ್ನುವ ಕಥೆಗಳು ಚಿಕ್ಕಂದಿನಿಂದ ನನ್ನ ತಲೆ ಹೊಕ್ಕಿ ಶಾಶ್ವತವಾಗಿ ನೆಲೆಯೂರಿದ್ದು ಬದುಕನ್ನು ಎದುರಿಸುವ ಛಲಕ್ಕೆ ನಾಂದಿಯಾಗಿರಬಹುದೇ ಅನ್ನುವ ಸಣ್ಣ ಗುಮಾನಿ ಕಾಡಿದ್ದು ಇತ್ತೀಚಿನ ಘಟನೆಗಳನ್ನು ನೋಡಿದಾಗ, ಬರಹಗಳನ್ನು ಓದಿದಾಗ ನೆನಪುಗಳು ಹೆಡೆಯೆತ್ತಿ ನನ್ನ ಸ್ವಂತ ಅನುಭವ ಬರೆಯಲು ಪ್ರೇರೇಪಿಸಿತು. ಆ ಒಂದು ಮನಸ್ಥಿತಿ ಹೇಗಿರುತ್ತದೆ ಎನ್ನುವುದು ಈ ಲೇಖನದ ತಾತ್ಪರ್ಯ. ಮತ್ತಷ್ಟು ಓದು 
ಸುಮ್ಮ ಸುಮ್ಮನೆ ಬರಲಿಲ್ಲ ಕನ್ನಡಕ್ಕೆ ಮಹಾವೀರ ಚಕ್ರ ; ಇವರು ಮಹಾವೀರತೆಯ ಜೀವಂತ ಸ್ಮಾರಕ
– ಸಂತೋಷ್ ತಮ್ಮಯ್ಯ
ದೇಶದ ಎರಡನೆಯ ಅತಿದೊಡ್ಡ ಶೌರ್ಯ ಪದಕ ಮಹಾವೀರ ಚಕ್ರ ಪದಕದ ಗೌರವಕ್ಕೆ ಪಾತ್ರರಾದ ಇಬ್ಬರು ಮಹಾಯೋಧರಲ್ಲಿ ಲೆ.ಕರ್ನಲ್ ಪಿ.ಎಸ್. ಗಣಪತಿ ಎರಡನೆಯವರು. ಅವರ ಬಗ್ಗೆ ಪತ್ರಿಕೆಗಳಲ್ಲಿ ಬಂದಿಲ್ಲ, ಟಿ ವಿ ಅವರ ಸಂದರ್ಶನ ನಡೆಸಿಲ್ಲ. ಅವರು ಸಭೆ ಸಮಾರಂಭಗಳಿಗೆ ಹೋಗಿಲ್ಲ. ಅವರ ಬಗ್ಗೆ ನಾಡಿನ ಜನಕ್ಕೆ ಏನೆಂದರೆ ಏನೂ ತಿಳಿದಿಲ್ಲ. ಅವರ ಸಂಪರ್ಕ ಸಂಖ್ಯೆ: 9980009687
ನೋಡಲು ಅದೊಂದು ಲೋಹದ ಬಿಲ್ಲೆ. ಅದರಲ್ಲಿ ನಕ್ಷತ್ರದ ಚಿಹ್ನೆ. ಅದರ ಅಂಚಿನಲ್ಲಿ ಕಂಡೂ ಕಾಣದಂತೆ ಕೆತ್ತಿದ ಪಡೆದವರ ಹೆಸರು, ಪಡೆದ ದಿನಾಂಕ. ಕದನಕ್ಕೆ ತೆರಳಿದ ಪ್ರತೀ ಯೋಧನಿಗೂ ಅದನ್ನು ಪಡೆಯುವ ಅದಮ್ಯ ಹಂಬಲ. ಏಕೆಂದರೆ ಅದು ವೀರತೆಯ ಪ್ರತೀಕ. ಹೆಸರು ಮಹಾವೀರ ಚಕ್ರ. ಯುದ್ಧಕಾಲದಲ್ಲಿ ಮಹಾಪರಾಕ್ರಮಕ್ಕೆ ನೀಡುವ ಎರಡನೆಯ ಅತೀ ದೊಡ್ಡ ಶೌರ್ಯ ಪ್ರಶಸ್ತಿ. ಬ್ರಿಟಿಷ್ ಸೈನ್ಯದಲ್ಲಿ ‘ಡಿಶ್ಟಿಂಗ್ವಿಸ್ಡ್ ಸರ್ವೀಸ್ ಕ್ರಾಸ್’ ಹೇಗೋ ಹಾಗೆ ಭಾರತಕ್ಕೆ ಈ ಮಹಾವೀರ ಚಕ್ರ. ಮಹಾ ಸಮರಪಡೆಯನ್ನು ಹೊಂದಿರುವ ಭಾರತದಲ್ಲಿ ೧೯೪೭ರಿಂದ ಇದುವರೆಗೆ ಮಹಾವೀರ ಚಕ್ರದ ಗೌರವಕ್ಕೆ ಪಾತ್ರರಾದವರು ಕೇವಲ ೨೧೮ ಮಂದಿ ವೀರರು. ಅವರಲ್ಲಿ ೬ ಜನ ಯೋಧರು ಮಹಾವೀರ ಚಕ್ರವನ್ನು ಎರಡೆರಡು ಬಾರಿ ಪಡೆದ ವೀರರಲ್ಲಿ ವೀರರು (MahaVira chakra bar). ಹೀಗಿರುವಾಗ ಭಾರತೀಯ ಸೈನ್ಯಕ್ಕೆ ಮಹಾಮಹಾ ಯೋಧರನ್ನು ನೀಡಿದ ನಮ್ಮ ಕರ್ನಾಟಕದಲ್ಲಿ ಇದನ್ನು ಪಡೆದವರಾರು ಎಂದು ನೋಡಿದರೆ ಕಾಣುವವರು ಕನ್ನಡದ ಇಬ್ಬರು ಮಹಾರ ಚಕ್ರಧರರು. ಅವರಲ್ಲೊಬ್ಬರು ‘ಟೈಗರ್ ಆಫ್ ಸರ್ಗೋದಾ’ ಎಂದು ಖ್ಯಾತರಾದ ಸ್ಕ್ವಾ.ಲೀ.ಅಜ್ಜಾಮಾಡ ಬಿ.ದೇವಯ್ಯ. ಮತ್ತೊಬ್ಬರು ಮೇ.(ನಂತರ ಲೆ.ಕರ್ನಲ್)ಪಿ.ಎಸ್ ಗಣಪತಿ. ಒಬ್ಬರು ಅಮರಯೋಧ. ಮತ್ತೊಬ್ಬರು ಮಹಾವೀರತೆಯ ಜೀವಂತ ಸ್ಮಾರಕ. ಮತ್ತಷ್ಟು ಓದು 
ಉಪನಿಷತ್ ವಾಙ್ಮಯ 1: ಮೃತ್ಯುಮುಖದಲ್ಲಿ ಜ್ಞಾನದಾಹಿ; ಕೇಳಿದ ಗುರುವನು “ದೇಹಿ! ದೇಹಿ!”
– ಸ್ವಾಮಿ ಶಾಂತಸ್ವರೂಪಾನಂದ
ಉಪನಿಷತ್ ಎಂಬುದು ವೇದಕಾಲದ ಗದ್ಯಕಾವ್ಯ. ವಿದ್ಯೆ, ಜ್ಞಾನ, ಚಿಂತನೆಗಳು ಮುಪ್ಪುರಿಗೊಂಡ ಮನಸ್ಸುಗಳು ರಚಿಸಿದ ಅನನ್ಯ ಜೀವನಾಮೃತ ಸಾರ. ವೇದಗಳ ಒಟ್ಟರ್ಥವನ್ನು ಇವು ಸಂಗ್ರಹವಾಗಿ ತಿಳಿಸುತ್ತವೆ ಎನ್ನುವ ಕಾರಣಕ್ಕೆ ಇವನ್ನು ವೇದಾಂತ ಎಂದೂ ಕರೆಯುತ್ತಾರೆ. ಉಪನಿಷತ್ತುಗಳ ಸಾಲಿನಲ್ಲಿ ಅತಿವಿಶಿಷ್ಟವಾದದ್ದು ಕಠ. ಕೃಷ್ಣಯಜುರ್ವೇದದ ಕಠ ಪರಂಪರೆಯಲ್ಲಿ ಬರುವ ಈ ಉಪನಿಷತ್ತು ಗುರು-ಶಿಷ್ಯರ ಸಂವಾದದ ಒಂದು ಸಂಕ್ಷಿಪ್ತ ಚಿತ್ರಣ. ಗುರುಸ್ಥಾನದಲ್ಲಿ ಕೂತವನು ಸಾಕ್ಷಾತ್ ಯಮಧರ್ಮರಾಯ! ಮತ್ತು ಅವನೆದುರು ಶಿಷ್ಯನಾಗಿ ತಲೆಬಾಗಿ ವಿನೀತನಾಗಿ ಪವಡಿಸಿದವನು ಏಳೋ ಎಂಟೋ ವಯಸ್ಸಿನ ಮುದ್ದುಬಾಲಕ ನಚಿಕೇತ. ಪ್ರಪಂಚದ ಎರಡು ಧ್ರುವಗಳಂತಿರುವ ಈ ಇಬ್ಬರು ಜೊತೆಯಾದದ್ದು ಹೇಗೆ ಎಂಬುದೇ ಒಂದು ವಿಚಿತ್ರ ಕತೆ. ಕಠೋಪನಿಷತ್ತನ್ನು ಪ್ರವೇಶಿಸುವ ಮೊದಲು ನಮಗೆ ಆ ಹಿನ್ನೆಲೆ ತಿಳಿದಿದ್ದರೆ ಒಳ್ಳೆಯದು. ಮತ್ತಷ್ಟು ಓದು 
ಎಲ್ಲಿಯ ಹವಾಲ್ದಾರ್ ಜಪ್ಪು? ಎಲ್ಲಿಯ ಸದ್ದಾಂ ಹುಸೇನ್?
– ಸಂತೋಷ್ ತಮ್ಮಯ್ಯ
ಮೂರು ವರ್ಷದ ಹಿಂದೆ ಇಂಥದ್ದೇ ಒಂದು ಮಳೆಗಾಲದಲ್ಲಿ ಹವಾಲ್ದಾರ್ ಜಪ್ಪು ಬೆಂಗಳೂರಿನಲ್ಲಿ ಸಿಕ್ಕಿದ್ದರು. ಅಂದು ಜಪ್ಪು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲು ತಮ್ಮ ಮೆಡಲುಗಳ ಸಮೇತ ಬೆಂಗಳೂರಿಗೆ ಬಂದುಬಿಟ್ಟಿದ್ದರು. ಅದಾದ ನಂತರ ಮತ್ತೆ ಮೊನ್ನೆ ಸಿಕ್ಕಿದ್ದರು. ಸಿಕ್ಕವರು ಈಗ ತಾನು ಊರಲ್ಲಿಲ್ಲವೆಂದೂ ದಕ್ಷಿಣ ಕೊಡಗಿನ ತಾವಳಗೇರಿ ಶೆಟ್ಟಿಗೇರಿ ಎಂಬ ಊರಲ್ಲಿರುವುದಾಗಿಯೂ ಬಾಡಿಗೆ ಮನೆಯೊಂದನ್ನು ಹಿಡಿದು ಮಗಳನ್ನು ಪ್ರೈಮರಿ ಓದಿಸುತ್ತಿದ್ದೇನೆಂದು ಹೇಳಿದ್ದರು. ಪುರುಸೋತ್ತಾದಾಗ ಒಮ್ಮೆ ಮನೆಗೆ ಬರಬೇಕೆಂದೂ ಹೇಳಿದ್ದರು. ಮೂರು ವರ್ಷಗಳ ಹಿಂದೆ ಇದ್ದ ಆ ದೊಡ್ಡ ಸ್ವರದ ರಭಸ ಕಿಂಚಿತ್ತೂ ಮಾಸಿರಲಿಲ್ಲ. ಗಡಸುತನ ಮಾಯವಾಗಿರಲಿಲ್ಲ. ಆದರೆ ಮಾತುಮಾತಿಗೆ ಆಕ್ರೋಶಗೊಳ್ಳುವ ಅವರ ಜಾಯಮಾನ ಮೂರು ವರ್ಷಗಳಲ್ಲಿ ಮೂರುಪಟ್ಟು ಹೆಚ್ಚಿದಂತೆ ಕಂಡುಬಂತು. ಮತ್ತಷ್ಟು ಓದು 
ಅಪರಾಧಕ್ಕೆ ಜಾತಿ ಬಣ್ಣ ಬಳಿಯುವುದೇಕೆ?
– ರಾಕೇಶ್ ಶೆಟ್ಟಿ
ಕಳೆದ ವಾರ ಎರಡು ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದವು. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಎಸ್ಪಿ ನಾಯಕಿ ಮಾಯಾವತಿಯವರ ಬಗ್ಗೆ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದ ದಯಾಶಂಕರ್ ಮಾಡಿದ ಕೆಟ್ಟ ಟೀಕೆಯ ಪ್ರಕರಣ ಮೊದಲನೆಯದು.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ದಯಾಶಂಕರ್ ಮೇಲೆ BJP ಪಕ್ಷ ಆರು ವರ್ಷಗಳ ಕಾಲ ಉಚ್ಚಾಟನೆಯಂತಹ ಕಠಿಣ ಕ್ರಮ ಕೈಗೊಂಡಿದೆ. ಅವರ ಮೇಲೆ FIR ಕೂಡ ದಾಖಲಾಗಿದೆ. ಆದರೆ, ದಯಾಶಂಕರ್ ಅವರ ಮಗಳನ್ನು, ಮಡದಿಯನ್ನು ನಮಗೊಪ್ಪಿಸಿ ಎಂದಿರುವ BSP ನಾಯಕ ನಸೀಮುದ್ದೀನ್ ವಿರುದ್ಧ ಮಾಯಾವತಿ ಯಾವ ಕ್ರಮ ಕೈಗೊಂಡಿದ್ದಾರೆ ? ಎಷ್ಟು ಕೇಸುಗಳು ದಾಖಲಾಗಿವೆ ? ದಯಾಶಂಕರ್ ಅಕ್ರಮ ಸಂತಾನ ಎನ್ನುವ ಮೂಲಕ, ದಯಾಶಂಕರ್ ಅವರ ತಾಯಿಗೆ ಅವಮಾನ ಮಾಡಿದ BSP ಶಾಸಕಿ ಉಷಾ ಚೌಧರಿ ವಿರುದ್ಧ ಮಾಯಾವತಿ ಯಾವ ಕ್ರಮ ಕೈಗೊಂಡಿದ್ದಾರೆ ? ಎಷ್ಟು ಕೇಸುಗಳು ದಾಖಲಾಗಿವೆ ? ದಯಾಶಂಕರ್ ನಾಲಗೆ ಕತ್ತರಿಸಿ ತಂದವರಿಗೆ ಐವತ್ತು ಲಕ್ಷ ಕೊಡುತ್ತೇನೆ ಎಂದ BSP ಪಕ್ಷದ ನಾಯಕಿ ಜನ್ನತ್ ಜಹಾನ್ ಮೇಲೆ ಮಾಯಾವತಿ ಯಾವ ಕ್ರಮ ಕೈಗೊಂಡಿದ್ದಾರೆ ? ಕ್ರಮ ಕೈಗೊಳ್ಳುವುದು ಪಕ್ಕಕ್ಕಿರಲಿ. ಮಾಯವತಿಯವರು, ಅವರ ಕಾರ್ಯಕರ್ತರ ಘೋಷಣೆಗಳನ್ನು ಸಮರ್ಥಿಸಿಕೊಂಡಿದ್ದಾರೆ! ಮಾಯಾವತಿಯವರಿಗಾದರೆ ಮಾತ್ರ ನೋವು, ದಯಾಶಂಕರ್ ಅವರ ತಾಯಿ, ಮಗಳು, ಹೆಂಡತಿಗಾಗುವ ನೋವು ನೋವಲ್ಲವೇ? ಮತ್ತಷ್ಟು ಓದು 




