ನೂರು ಸಾಲಿನ ಸರಳ (ಮಿನಿ) ರಾಮಾಯಣ ಕಾವ್ಯ…
– ನಾಗೇಶ ಮೈಸೂರು
ಶ್ರೀ ರಾಮ ಸೀತೆಯ ಕಥೆ ನಮಗೇನು ಹೊಸದಲ್ಲ ಬಿಡಿ.. ಎಲ್ಲಾ ಭಾಷೆಗಳಲ್ಲಿ ಖಂಡುಗಗಟ್ಟಲೆ ಕಥೆ, ಕಾವ್ಯಗಳು ಸಿಕ್ಕುತ್ತವೆ. ಆದರಿದು ಆಧುನಿಕ ವೇಗದ ಜಗ.. ಎಲ್ಲಾ ಸಂಕ್ಷಿಪ್ತದಲ್ಲಿ, ಫಾಸ್ಟ್ ಪುಡ್ಡಿನ ಹಾಗೆ ಶೀಘ್ರಗತಿಯಲ್ಲಿ ಸಿಗುವಂತಿದ್ದರೆ ಅದನ್ನೇ ಬಯಸುವ ಗ್ರಾಹಕ ವರ್ಗವೂ ಸಾಕಷ್ಟು ದೊಡ್ಡದಿದೆ. ಇನ್ನು ಮಿಕ್ಕವರಿಗೆ ದೊಡ್ಡದು, ಚಿಕ್ಕದು ಎನ್ನುವ ಜಿಜ್ಞಾಸೆಗಿಂತ ಸಮಯದ ಅಭಾವ. ಇನ್ನು ಕಿರಿಯರ ವಿಷಯಕ್ಕೆ ಬಂದರೆ ಅವರಿಗೆ ತೀರಾ ಭಾರವಾಗದ ರೀತಿಯಲ್ಲಿ ಅರುಹಬೇಕಾದ ಅನಿವಾರ್ಯ.. ಇದನ್ನೆಲ್ಲಾ ಗಮನದಲ್ಲಿರಿಸಿಕೊಂಡು ಹೆಣೆದ ನೂರು ಸಾಲಿನ, ಚತುಷ್ಪಾದಿ ಅವತಾರದಲ್ಲಿರುವ ಕಾವ್ಯರೂಪಿ ರಾಮಾಯಣ ಸಾರ – ಈ ಶ್ರೀರಾಮ ಚರಿತ. ನರಮಾನವನಾಗಿ ಪಡಿಪಾಟಲು ಪಟ್ಟನೆನ್ನುವ ಹಿನ್ನಲೆಯನ್ನು ಅಂತರ್ಗತವಾಗಿಸಿಕೊಂಡು ಮೂಡಿಬಂದ ಕಥಾಲಹರಿ. ಸರಳ ಲಹರಿ ಹಿತವಾಗಿ ನುಡಿವಂತಿದ್ದು ಮುದ ತಂದರೆ ಧನ್ಯ .
ಮೂರ್ಖತೆಯ ತೆಗುಳು, ದ್ವಾರಪಾಲರ ಅಹಂಕಾರಗಳು
ನೆಮ್ಮದಿಯ ವೈಕುಂಠ, ಕಿಚ್ಚನ್ಹಚ್ಚಿಸಿ ಮಹಾಲಕ್ಷ್ಮಿಗೆ ದಿಗಿಲು
ಸನಕಾದಿ ಮುನಿಗಳ ಶಾಪ, ಭೂಲೋಕದ ಜನ್ಮಪರಿತಾಪ
ಸೇವೆಯಾಳುಗಳ ವತಿಯಿಂದ, ಶ್ರೀ ಹರಿಗೂ ಬಿಡದ ಕೂಪ || ೦೧ ||
ನನ್ನನ್ನು ಆಕರ್ಷಿಸಿದ್ದು ಆಕೆಯ ಕಣ್ಣುಗಳು…!!
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ರೋಹಾನಾ ಪಟ್ಟಣಕ್ಕೆ ತೆರಳುವವರೆಗೂ ರೈಲಿನ ಆ ಬೋಗಿಯೊಳಗಿದ್ದಿದ್ದು ನಾನೊಬ್ಬನೇ. ರೋಹಾನಾದ ಸ್ಟೇಷನ್ನಿನಲ್ಲಿ ಅವಳು ಹತ್ತಿಕೊಂಡಳು. ಆಕೆಯನ್ನು ನಿಲ್ದಾಣಕ್ಕೆ ಬಿಡಲು ಬಂದ ಅವರ ಅಪ್ಪ ಅಮ್ಮನಿಗೋ ಅವಳ ಬಗ್ಗೆ ಅತಿಯಾದ ಕಾಳಜಿ. ರೈಲು ಬಿಡುವವರೆಗೂ ಅವಳಿಗೆ ನಿಮಿಷಕ್ಕೊಂದು ಎಚ್ಚರಿಕೆ ಕೊಡುತ್ತ ನಿಂತಿದ್ದ ಆಕೆಯ ಪೋಷಕರ ಮಾತುಗಳು ನನಗೆ ಸ್ಪಷ್ಟವಾಗಿ ಕೇಳಿಸುತ್ತಿದ್ದವು. “ಬ್ಯಾಗುಗಳನ್ನು ಕಾಲ ಬಳಿಯೇ ಇರಿಸಿಕೋ, ಕಿಟಕಿಯಿಂದ ಕೈ ಹೊರಗೆಹಾಕಬೇಡ, ಹುಶಾರು, ಅಪರಿಚಿತರೊಡನೆ ಮಾತನಾಡಬೇಡ” ಹೀಗೆ ಕೆಲವು ಸಲಹೆಗಳನ್ನು ಆಕೆಯ ಹೆತ್ತವರು ನೀಡುತ್ತಿರುವಂತೆಯೇ ರೈಲು ಹೊರಟಿತು. ಮೊದಲೇ ನಾನು ಕುರುಡ. ಬೆಳಕು ಮತ್ತು ಕತ್ತಲುಗಳನ್ನು ಹೊರತುಪಡಿಸಿ ಇನ್ನೇನನ್ನೂ ಗುರುತಿಸಲು ನನ್ನಿಂದಾಗುತ್ತಿರಲಿಲ್ಲ. ಹಾಗಾಗಿ ಆ ಹುಡುಗಿ ನೋಡಲು ಹೇಗಿರಬಹುದೆಂದು ಊಹಿಸುವುದು ನನ್ನಿಂದ ಶಕ್ಯವಾಗಲಿಲ್ಲ. ಆಕೆಯ ಚಪ್ಪಲಿಯಿಂದ ಬರುತ್ತಿದ್ದ ಸಪ್ಪಳದಿಂದಾಗಿ ಆಕೆ ಹವಾಯಿ ಚಪ್ಪಲಿಗಳನ್ನು ಧರಿಸಿರಬೇಕೆನ್ನುವುದನ್ನು ಅರಿತೆ. ಆಕೆಯದ್ದೋ ಕೋಗಿಲೆಯಂತಹ ಮಧುರ ಧ್ವನಿ. ಹೇಗಾದರೂ ಸರಿ, ಆಕೆಯ ರೂಪವನ್ನು ಗ್ರಹಿಸಬೇಕೆಂದುಕೊಂಡೆನಾದರೂ ನನ್ನ ಸಹಾಯಕ್ಕೆ ಅಲ್ಲಿ ಯಾರೂ ಇರದಿದ್ದದ್ದು ನನಗೆ ಕೊಂಚ ಬೇಸರವನ್ನುಂಟು ಮಾಡಿತ್ತು. ಮತ್ತಷ್ಟು ಓದು 
ಬಾಬಾಸಾಹೇಬ್ ಅಂಬೇಡ್ಕರ್ : ಇದ್ದದ್ದು ಇದ್ದ ಹಾಗೆ
– ರೋಹಿತ್ ಚಕ್ರತೀರ್ಥ
ಇದು ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಸಪಾದ ಜನ್ಮಶತಮಾನೋತ್ಸವದ ವರ್ಷ. ಹತ್ತೊಂಬತ್ತನೇ ಶತಮಾನದ ಕೊನೆಯ ದಶಕದಲ್ಲಿ ಹುಟ್ಟಿದ ಅಂಬೇಡ್ಕರ್ ಆ ಕಾಲದ ಅನಕ್ಷರತೆ, ಜಾತಿ ತಾರತಮ್ಯ, ಶೋಷಣೆ, ನಿರುದ್ಯೋಗ, ಸ್ವಾತಂತ್ರ್ಯ ಹೋರಾಟ ಮುಂತಾದ ಎಲ್ಲ ಪರಿಸ್ಥಿತಿಗಳನ್ನೂ ನೋಡಬೇಕಾಯಿತು, ಸ್ವತಃ ಅನುಭವಿಸಬೇಕಾಯಿತು. ಹುಡುಗ ಚೂಟಿ, ಬುದ್ಧಿವಂತ. ಜಾತಿಯ ಕಾರಣವೊಂದೇ ಮುಂದಾಗಿ ಆತನ ಭವಿಷ್ಯವನ್ನು ಕಮರಿಸಬಾರದೆಂಬ ಎಚ್ಚರದಿಂದ ಬ್ರಾಹ್ಮಣ ಗುರು ಮಹಾದೇವ ಅಂಬೇಡ್ಕರ್, ತನ್ನ ಈ ಪ್ರೀತಿಯ ಶಿಷ್ಯನಿಗೆ ಅಂಬಾವಾಡೇಕರ್ ಎಂಬ ಕುಲಸೂಚಕವನ್ನು ತಿದ್ದಿ ಅಂಬೇಡ್ಕರ್ ಎಂಬ ನಾಮಕರಣ ಮಾಡಿದರು. ಅಲ್ಲಿಂದ ಮುಂದಕ್ಕೆ ಹುಡುಗ, ಹುಟ್ಟಿದೂರು ಸತಾರದಲ್ಲಿ ಪ್ರಾಥಮಿಕ ಶಾಲೆ ಮುಗಿಸಿ, ಮುಂಬಯಿಯ ಪ್ರತಿಷ್ಠಿತ ಎಲ್ಫಿನ್‍ಸ್ಟನ್ ಹೈಸ್ಕೂಲು, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿ, ಉನ್ನತ ಶಿಕ್ಷಣಕ್ಕಾಗಿ ಅಮೆರಿಕ, ಇಂಗ್ಲೆಂಡ್ ಪ್ರವಾಸಗಳನ್ನು ಮಾಡಿದ್ದೆಲ್ಲ ನಂಬಲಸಾಧ್ಯವೆನಿಸುವ ವಾಸ್ತವ.ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ಪಡೆದಾಗ ಅಂಬೇಡ್ಕರರಿಗೆ 26 ವರ್ಷ. ನಂತರದ ಪ್ರಯಾಣ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಡೆಗೆ. ಅಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಜೊತೆಗೆ ಬ್ಯಾರಿಸ್ಟರ್-ಎಟ್-ಲಾ ಎಂಬ ಕಾನೂನು ಪದವಿ ಪಡೆದು, ತನ್ನ 32ನೇ ವಯಸ್ಸಿಗೆ ಡಿಎಸ್‍ಸಿ ಗಳಿಸಿ ಭಾರತಕ್ಕೆ ಮರಳಿದರು. ದಲಿತರ ಹುಡುಗನೊಬ್ಬ ಹೀಗೆ ಅಖಂಡ 28 ವರ್ಷ ವ್ಯಾಸಂಗವೊಂದರಲ್ಲೇ ಮುಳುಗಿ, ವಿದೇಶದ ಹೆಸರುವಾಸಿ ಸಂಸ್ಥೆಗಳಲ್ಲಿ ಡಿಗ್ರಿಯ ಮೇಲೆ ಡಿಗ್ರಿಯನ್ನು ಸಂಪಾದಿಸಿದ ಕತೆ ರೋಮಾಂಚನಗೊಳಿಸುವಂಥಾದ್ದು. ಮತ್ತಷ್ಟು ಓದು 
ಇದೊಂದು ಸಣ್ಣ ಸಂಗತಿ ತಿಳಿದಿದ್ದರೆ ಆ ಸಾವನ್ನು ಯಾರಾದರೂ ತಪ್ಪಿಸಬಹುದಿತ್ತು
– ರೋಹಿತ್ ಚಕ್ರತೀರ್ಥ
ಫೆಬ್ರವರಿ 17ನೇ ತಾರೀಖು ಬುಧವಾರದ ಪತ್ರಿಕೆಯಲ್ಲಿ ಪ್ರಕಟವಾದ ಆ ವರದಿಯನ್ನು ಹಾಗ್‍ಹಾಗೇ ಕೊಡುವುದಾದರೆ ಅದು ಹೀಗಿದೆ: ಹುಟ್ಟೂರಿನಲ್ಲಿ ನಡೆಯುತ್ತಿದ್ದ ಸ್ಥಳೀಯ ಚುನಾವಣೆಯಲ್ಲಿ ಓಟು ಹಾಕಲೆಂದು ಹರೀಶ್ ಶನಿವಾರ ಊರಿಗೆ ತೆರಳಿದ್ದರು. ತನ್ನ ಕುಟುಂಬದ ಜತೆ (ತಾಯಿ ಮತ್ತು ಅಣ್ಣ) ಒಂದಷ್ಟು ಹೆಚ್ಚಿನ ಸಮಯ ಕಳೆಯುವ ಉದ್ಧೇಶದಿಂದ ಸೋಮವಾರ ರಜೆ ಹಾಕಿದ್ದರು. ಮಂಗಳವಾರ ಆಫೀಸಿದ್ದುದರಿಂದ ಊರಿಂದ ಮುಂಜಾನೆ ಬೇಗನೇ ಹೊರಟಿದ್ದರು. ಬೈಕು ಚಲಾಯಿಸುತ್ತ ಬರುತ್ತಿದ್ದಾಗ, ತಿಪ್ಪಗೊಂಡನಹಳ್ಳಿಯ ಸಮೀಪ, ಹಿಂದಿನಿಂದ ಒಂದು ಲಾರಿ ಅವರನ್ನು ಓವರ್‍ಟೇಕ್ ಮಾಡುವ ಯತ್ನದಲ್ಲಿತ್ತು. ಲಾರಿ ಅತಿ ವೇಗದಲ್ಲಿದ್ದುದರಿಂದ, ಅದು ತನ್ನ ತೀರಾ ಹತ್ತಿರ ಬಂದಾಗ ಹರೀಶ್ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದರು. ಆದರೆ, ಲಾರಿ ಮಾತ್ರ ನಿಲ್ಲುವ ಸೂಚನೆ ತೋರಿಸಲಿಲ್ಲ. ಅದು, ಯಮವೇಗದಲ್ಲಿ ಮುಂದುವರಿದು ಹರೀಶರ ದೇಹದ ಮೇಲೆಯೇ ಹಾದುಹೋಯಿತು. ಮತ್ತಷ್ಟು ಓದು 
ನಿಮ್ಮ ಜಿ-ಮೇಲ್‌ಗೆ ಬೇರೆ ಯಾರಾದ್ರೂ ಲಾಗಿನ್ ಆಗಿದ್ದಾರೆಯೇ ಅಂತ ತಿಳಿಯಿರಿ
-ಅವಿನಾಶ್ ಬಿ
ಅತ್ಯಂತ ಮಹತ್ವದ, ಸೂಕ್ಷ್ಮ ಮಾಹಿತಿಗಳಿರುವ ಇಮೇಲ್ ಖಾತೆಯನ್ನು ಉಪಯೋಗಿಸುವಾಗ ಸಾಕಷ್ಟು ಎಚ್ಚರ ವಹಿಸುವುದು ಅಗತ್ಯ. ಗೂಗಲ್ ಮೇಲ್ ಅಥವಾ ಜಿ-ಮೇಲ್ ಬಳಸುತ್ತಿರುವವರಿಗೆ ಒಂದು ಅನುಕೂಲ ಇದೆ. ಅದೆಂದರೆ, ನಿಮ್ಮ ಇಮೇಲ್ ಖಾತೆಯನ್ನು ಬೇರೆ ಯಾರಾದರೂ ಉಪಯೋಗಿಸುತ್ತಿದ್ದಾರಾ, ಹ್ಯಾಕರ್‌ಗಳು ಕನ್ನ ಹಾಕಿದ್ದಾರಾ, ಎಲ್ಲಿಂದ ನಿಮ್ಮ ಮೇಲ್‌ಗೆ ಲಾಗ್ ಇನ್ ಆಗಿದೆ ಮುಂತಾದ ವಿವರಗಳನ್ನು (ಕೊನೆಯ 10 ಚಟುವಟಿಕೆಗಳನ್ನು) ತಿಳಿದುಕೊಳ್ಳಬಹುದು. ಮತ್ತಷ್ಟು ಓದು 
ಋಗ್ವೇದ ೧೦.೮೫.೧೩ ಅಘಾಸು ಹನ್ಯಂತೇ ಗಾವಃ
– ವಿನಾಯಕ ಹಂಪಿಹೊಳಿ
ಸ್ವಘೋಷಿತ ಅಭಿನವ ಪ್ರವಾದಿ ಜಾಕೀರ ನಾಯ್ಕರ ಶಿಷ್ಯರೊಂದಿಗೆ ಸ್ವಲ್ಪ ದಿನಗಳ ಹಿಂದೆ ನನ್ನ ಕೆಲವು ಮಿತ್ರರು ಚರ್ಚೆಯೊಂದನ್ನು ನಡೆಸಿದ್ದರು. ಆ ಚರ್ಚೆಯಲ್ಲಿ ನಾನೂ ಭಾಗವಹಿಸಿದ್ದೆ. ಅಲ್ಲಿ ನಮ್ಮ ವಿರೋಧಿಗಳ ವಾದವೊಂದು ನನ್ನ ಗಮನ ಸೆಳೆಯಿತು. ಅಲ್ಲಿ ನಮ್ಮ ವಿರೋಧಿಗಳು “ಋಗ್ವೇದದಲ್ಲಿ ಗೋಮಾಂಸದ ಉಲ್ಲೇಖವಿದೆ. ಮದುವೆಯ ಸಂದರ್ಭದಲ್ಲಿ ಆಕಳುಗಳನ್ನು ಕಡಿಯಲಾಗುತ್ತಿತ್ತು ಎಂಬುದಕ್ಕೆ ಆಧಾರವಿದೆ. ಬೇಕಾದರೆ ಋಗ್ವೇದದ ೧೦ನೇ ಮಂಡಲದ ೮೫ನೇ ಸೂಕ್ತದ ೧೩ನೇ ಋಕ್ಕನ್ನು ನೋಡಿ” ಎಂದು ಹೇಳಿದ್ದರು. ಆ ಋಕ್ಕು ಹೀಗಿತ್ತು.
ಸೂರ್ಯಾಯಾ ವಹತುಃ ಪ್ರಾಗಾತ್ಸವಿತಾ ಯಮವಾಸೃಜತ್ | ಅಘಾಸು ಹನ್ಯಂತೇ ಗಾವೋsರ್ಜನ್ಯೋಃ ಪರ್ಯುಹ್ಯತೇ || ಮತ್ತಷ್ಟು ಓದು 
ಮಧುರೈ ಮೀನಾಕ್ಷಿ
– ರಂಜನ್ ಕೇಶವ
ಭಯ ಹುಟ್ಟಿಸುವಂತಹ ಬೃಹತ್ ಗಾತ್ರದ ಕಂಬಗಳು. ಅದರಲ್ಲಿ ದೊಡ್ಡ ದೊಡ್ಡ ಗಾತ್ರದ ಸಿಂಹದಂತಿರುವ ರಾಕ್ಷಸನ ಕೆತ್ತನೆಗಳು. ಇಂಥಹ ಸಾಲು ಸಾಲು ಕಂಬಗಳು ದಾರಿಯ ಇಕ್ಕೆಲಗಳಲ್ಲಿ ಇರುತ್ತವೆ. ಮೊದಲಸಲ ನೋಡುವವರಿಗೆ ಇಲ್ಲಿನ ಭವ್ಯ ಕೆತ್ತನೆಗಳ ನೋಟವೇ ಒಮ್ಮೆ ದಿಗಿಲು ಹುಟ್ಟಿಸಬಹುದು. ಮೀನಾಕ್ಷಿ ಮಂದಿರಸಮೂಹಗಳು ಒಂದು ಬೃಹತ್ ಆವರಣದ ಮಧ್ಯೆಯಲ್ಲಿವೆ. ಇದಕ್ಕೆ ಉತ್ತರ, ದಕ್ಷಿಣ, ಪೂರ್ವ – ಪಶ್ಚಿಮ ಎಂಬಂತೆ ನಾಲ್ಕು ಪ್ರವೇಶದ್ವಾರಗಳು. ಒಳ ಪ್ರವೇಶಿಸುತ್ತಿದ್ದಂತೆ ಒಂದು ಚಕ್ರವ್ಯೂಹ ಪ್ರವೇಶಿಸಿದಂತೆ ಅನೇಕ ಮಾರ್ಗಗಳ ದರ್ಶನ. ಮಾರ್ಗಗಳ ಪರಿಚಯವಿಲ್ಲದೆ ಒಳ ಪ್ರವೇಶಿಸಿದರೆ ದಾರಿ ತಪ್ಪಿ ಒಳಗೊಳಗೆಯೇ ವ್ಯರ್ಥ ಸಮಯ ಕಳೆಯುವ ಸಾಧ್ಯತೆಯೇ ಹೆಚ್ಚು. ಮತ್ತಷ್ಟು ಓದು 
ಯುಗಾದಿಯ ತಗಾದೆ
– ನಾಗೇಶ್ ಮೈಸೂರು
ಗುಬ್ಬಣ್ಣ ‘ಗುರ್ರ್’ ಎಂದು ಏದುಸಿರಲ್ಲೆ ಭುಸುಗುಟ್ಟುತ್ತ, ಧುಮುಗುಟ್ಟುತ್ತಲೆ ಮನೆಯೊಳಗೆ ಕಾಲಿಟ್ಟಾಗ ಇಂದೇಕೊ ಅಪರೂಪಕ್ಕೆ ಗುಬ್ಬಣ್ಣನಿಗು ಕೋಪ ಬಂದಿರುವಂತಿದೆಯಲ್ಲ ಅನಿಸಿ ಕುತೂಹಲವಾಯ್ತು. ಸಹನೆಯಲ್ಲಿ ಸಾಧು ಸಂತರ ಅಪರಾವತಾರವಾದ ಗುಬ್ಬಣ್ಣ ಕೂಗಾಡಿದರು ಪೂಜೆಗೆ ದೇವರ ಮೇಲೆಸೆದ ಹೂವಂತಿರುವುದನ್ನು ಮಾತ್ರ ಕಂಡಿದ್ದ ನನಗೆ, ಅವನ ಈ ಅವತಾರ ಸ್ವಲ್ಪ ಹೊಸದು. ಅದರಲ್ಲು ಮನೆಯಲ್ಲಿ ನರಸಿಂಹಿಣಿಯವತಾರದ ‘ಫುಲ್ ಟೈಮ್ ಕಾಂಟ್ರಾಕ್ಟ್’ ಅನ್ನು ಅವನ ಶ್ರೀಮತಿಯೆ ಶ್ರದ್ಧಾಪೂರ್ವಕವಾಗಿ (ಬಲಾತ್ಕಾರವಾಗಿಯೆ), ವಹಿಸಿಕೊಂಡ ಮೇಲೆ ಗುಬ್ಬಣ್ಣ ಇನ್ನೂ ತೀರಾ ಸಾಧುವಾಗಿಬಿಟ್ಟಿದ್ದ. ಅದೇ ಹಿನ್ನಲೆಯಲ್ಲೆ,
‘ ಗುಬ್ಬಣ್ಣ… ಯಾಕೊ ಮುಖವೆಲ್ಲ ಕೆಂಪಗೆ ಚೆಂಡು ಮಲ್ಲಿಗೆಯಾಗಿಬಿಟ್ಟಿದೆ ? ಜ್ವರ ಗಿರ ಬಂದುಬಿಟ್ಟಿದಿಯಾ ಹೇಗೆ ? ಹುಷಾರಾಗಿದ್ದೀಯಾ ತಾನೆ ?’ ಎಂದೆ ಒಂದೆ ಉಸಿರಲ್ಲಿ.
ಕಮ್ಯುನಿಸ್ಟರ ರಕ್ತ ಚರಿತ್ರೆಯ ಪುಟಗಳು
– ರಾಕೇಶ್ ಶೆಟ್ಟಿ
ಇತ್ತೀಚೆಗೆ ಹೈದರಾಬಾದ್ ಯುನಿವರ್ಸಿಟಿಯ ರೋಹಿತ್ ವೆಮುಲ ಎಂಬ ಯುವಕನ ಆತ್ಮಹತ್ಯೆ ಹಾಗೂ ದೆಹಲಿಯ ಜೆ.ಎನ್.ಯು ವಿವಾದಗಳ ಸಮಯದಲ್ಲಿ ಕಾಕಗಳು (ಕಾಂಗ್ರೆಸ್+ಕಮ್ಯುನಿಸ್ಟ್) ಮೋದಿಯವರ ಸರ್ಕಾರ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿವೆ ಎಂದು ಉಯಿಲೆಬ್ಬಿಸಿದ್ದಾರೆ.ಕರ್ನಾಟಕದಲ್ಲಿರುವ ಇವರ ಅಣ್ತಮ್ಮಂದಿರು ದಿನ ಬೆಳಗಾದರೆ ಟೌನ್ ಹಾಲ್ ಎದುರು ನಿಲ್ಲುತ್ತಿದ್ದಾರೆ. ಆದರೆ,ಯುನಿವರ್ಸಿಟಿ,ವಿದ್ಯಾರ್ಥಿಗಳ ಬಗ್ಗೆ ಮಾತನಾಡುವ ನೈತಿಕತೆ ಕಾಕಗಳಿಗಿದೆಯೇ? ಕರ್ನಾಟಕದ ಕುವೆಂಪು ಯುನಿವರ್ಸಿಟಿಯಲ್ಲಿದ್ದ CSLC ಎಂಬ ಸಂಶೋಧನಾ ಕೇಂದ್ರವನ್ನು ಮುಚ್ಚಿಸಿದ್ದು ಇದೇ ಕಾಂಗ್ರೆಸ್ ಸರ್ಕಾರ,ಮುಚ್ಛಿಸುವಂತೆ ಒತ್ತಡ ಹಾಕಿದ್ದು ಟೌನ್ ಹಾಲ್ ಬುದ್ಧಿಜೀವಿಗಳೇ. ಕಾಂಗ್ರೆಸ್ಸಿನವರ ಇತಿಹಾಸ ಎಲ್ಲರಿಗೂ ತಿಳಿದಿರುವುದೇ.ಆದರೆ ಈ ಕಮ್ಯುನಿಸ್ಟರ ಪುಣ್ಯ ಕಾರ್ಯಗಳ ಬಗ್ಗೆ ಸ್ವಲ್ಪ ಹೇಳಬೇಕು. (ಇದು ಕೇವಲ ಕೇರಳದ ಕಮ್ಯುನಿಸ್ಟರ ಇತಿಹಾಸ.ಬಂಗಾಳದ ಕಾಮ್ರೇಡುಗಳ ಕತೆ ಇದಕ್ಕೂ ದೊಡ್ಡದು)
ಅದು ಸೆಪ್ಟಂಬರ್ ೧೭,೧೯೯೬ರ ದಿನ.ಕೇರಳದ ಪರುಮಲ ಜಿಲ್ಲೆಯ ದೇವಸ್ವೋಮ್ ಕಾಲೇಜಿನ ಕ್ಯಾಂಪಸ್ಸಿಗೆ ಲಗ್ಗೆಯಿಟ್ಟ ಕಮ್ಯುನಿಸ್ಟರು ‘ಅನು,ಸುಜಿತ್,ಕಿಮ್’ ಎಂಬ ಎಬಿವಿಪಿಯ ಕಾರ್ಯಕರ್ತರ ಮೇಲೆ ಮುಗಿಬಿದ್ದರು.ಎಬಿವಿಪಿಯೊಂದಿಗೆ ಗುರುತಿಸಿಕಂಡಿದ್ದೇ ಈ ಹುಡುಗರು ಮಾಡಿದ್ದು ತಪ್ಪು,ಕೇರಳದಲ್ಲಿ ಕಮ್ಯುನಿಸ್ಟರು ನಿಮ್ಮನ್ನು ಸುತ್ತುವರೆದರೆಂದರೇ ಸ್ಟಾಲಿನ್/ಮಾವೋ ಪ್ರೇತಾತ್ಮ ಮೃತ್ಯು ರೂಪದಲ್ಲಿ ನಿಮ್ಮೆದುರು ಬಂದು ನಿಂತಂತೆಯೇ ಸರಿ.ಪ್ರಾಣ ಉಳಿಸಿಕೊಳ್ಳಲು ಓಡಿದ ಈ ಹುಡುಗರು ಪಂಪಾ ನದಿಗೆ ಹಾರಿ ಈಜಲಾರಂಭಿಸಿದ್ದರು.ನೀರಿಗೆ ಬಿದ್ದ ವಿದ್ಯಾರ್ಥಿಗಳ ಮೇಲೆ ಕಮ್ಯುನಿಸ್ಟ್ ಗೂಂಡಾಗಳು ಕಲ್ಲು ತೂರಲಾರಂಭಿಸಿದರು. ಆಚೆ ದಡದಲ್ಲಿ ಬಟ್ಟೆ ಒಗೆಯುತ್ತಿದ್ದ ಹೆಣ್ಣು ಮಕ್ಕಳು ಕಮ್ಯುನಿಸ್ಟರ ಕಲ್ಲಿನೇಟಿಗೆ ತುತ್ತಾಗಿ ಮುಳುಗುತ್ತಿದ್ದ ಹುಡುಗರತ್ತ ಸೀರೆಗಳನ್ನೆಸೆದು ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೇ,ಮಹಿಳಾವಾದದ ಭಾಷಣ ಬಿಗಿಯುವ ಕಾಮ್ರೇಡುಗಳು ಅವರ ಮೇಲೆ ಕಲ್ಲಿನ ಮಳೆ ಸುರಿದರು.ವಿಧಿಯಿಲ್ಲದೇ ಆ ಹೆಣ್ಣುಮಕ್ಕಳು ಪ್ರಾಣ ಉಳಿಸಿಕೊಳ್ಳಲು ಓಡಿದರು.ಇತ್ತ ಹದಿಹರೆಯದ ವಿದ್ಯಾರ್ಥಿಗಳ ಪ್ರಾಣಕ್ಕೆ ಆಜಾದಿ ಸಿಕ್ಕಿತ್ತು.ಸ್ಟಾಲಿನ್ ಘೋರಿಯೊಳಗಿಂದಲೇ ಲಾಲ್ ಸಲಾಂ ಎಂದನೇನೋ. ಕಡೆಗೇನಾಯ್ತು.ಅವರದ್ದೇ ಸರ್ಕಾರ,ಅವರು ಮಾಡಿದ್ದೇ ಕಾನೂನು.ಯಾರೆಂದರೇ ಯಾರಿಗೂ ಶಿಕ್ಷೆಯಾಗಲಿಲ್ಲ.ಇಂದು ಅದೇ ಕಮ್ಯುನಿಸ್ಟರು ವಿದ್ಯಾರ್ಥಿಗಳ ಆಜಾದಿ ಬಗ್ಗೆ ಮಾತನಾಡುತಿದ್ದಾರೆಂದರೇ ಎಂತ ವ್ಯಂಗ್ಯವಲ್ಲವೇ?
ಬಡ್ಜೆಟ್ಟೆಂಬ ಬಕಾಸುರ
– ನಾಗೇಶ ಮೈಸೂರು
ಈಗ ನಾನು ಹೇಳ ಹೊರಟಿರುವುದು ವಾರ್ಷಿಕ ಬಡ್ಜೆಟ್ಟಿನ (ಆಯವ್ಯಯ ಲೆಕ್ಕಾಚಾರ) ಕುರಿತು. ಪ್ರತಿ ವರ್ಷದ ಫೆಬ್ರವರಿ ಕೊನೆಗೆ ಸಂಸತ್ತಿನಲ್ಲಿ ಹಣಕಾಸು ಮಂತ್ರಿಗಳು ಮಂಡಿಸುವ ದೇಶದ ಬಡ್ಜೆಟ್ಟಲ್ಲ ಬಿಡಿ. ಸ್ವಲ್ಪ ಪುಟ್ಟ ಮಟ್ಟದಲ್ಲಿ ಕಂಪನಿಗಳಲ್ಲಿ ನಡೆಯುವ ವಾರ್ಷಿಕ ಬಡ್ಜೆಟ್ಟಿನ ಕುರಿತು. ಕಂಪನಿ ಚಿಕ್ಕದೋ, ಮಧ್ಯಮ ಗಾತ್ರದ್ದೋ, ದೊಡ್ಡದೋ ಒಟ್ಟಾರೆ ಒಂದಲ್ಲಾ ಒಂದು ರೀತಿ ಆಯವ್ಯಯದ ಲೆಕ್ಕಾಚಾರ ನಡೆದೇ ನಡೆಯುತ್ತದೆ. ಆಯಾ ಸಂಸ್ಥೆಯ ವಾತಾವರಣಕ್ಕೆ ಸರಿ-ಸೂಕ್ತ ಮಟ್ಟದಲ್ಲಿ.
ತುಂಬ ಸರಳವಾಗಿ ಹೇಳುವುದಾದರೆ ಈ ಇಡೀ ವಾರ್ಷಿಕ ವ್ಯಾಯಾಮ ಎರಡು ಮುಖ್ಯ ಅಂಶಗಳ ಸುತ್ತ ಗಿರಕಿ ಹೊಡೆಯುವ ಪುನರಾವರ್ತನ ಚಕ್ರ. ಮೊದಲಿಗೆ ಸಂಸ್ಥೆಗೆ ಆ ವರ್ಷದಲ್ಲಿ ಏನೆಲ್ಲ ಮೂಲೆಗಳಿಂದ ಬರಬಹುದಾದ ಆದಾಯದ ಅಂದಾಜು ಮಾಡಿಟ್ಟುಕೊಳ್ಳುವುದು. ಮತ್ತೊಂದು ಕಡೆಯಿಂದ ಆ ಆದಾಯ ಮೂಲಕ್ಕೆ ಸಂವಾದಿಯಾಗಿ ಏನೆಲ್ಲ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕಾಗಿ ಬರುವುದೋ ಎಂದು ಅಂದಾಜು ಲೆಕ್ಕಾಚಾರ ಹಾಕುವುದು. ಇವೆರಡು ಅಂದಾಜುಗಳನ್ನು ಕ್ರೋಢಿಕರಿಸಿದರೆ ಒಟ್ಟಾರೆ ನಿವ್ವಳ ಲಾಭ, ನಷ್ಟಗಳ ಅಂದಾಜು ಸಿಗುತ್ತದೆ. ಜತೆಗೆ ಅದನ್ನು ನಿಭಾಯಿಸಲು ಬೇಕಾದ ಹಣ ಬಲ, ಜನ ಬಲ, ಯಂತ್ರ ಬಲ ಇತ್ಯಾದಿಗಳ ಸ್ಥೂಲ ಅಂದಾಜು ಸಿಗುತ್ತದೆ. ಇದನ್ನು ಗುರಿಯತ್ತ ನಡೆಸುವ ಆಧಾರವಾಗಿಟ್ಟುಕೊಂಡು ತಮ್ಮಲ್ಲಿನ ಹಣಕಾಸು ಮತ್ತಿತರ ಸಂಪನ್ಮೂಲಗಳನ್ನು ಸಮರ್ಥವಾಗಿ ಸರಿಯಾದ ಕಡೆ ವಿನಿಯೋಗಿಸಲು ಪ್ರಯತ್ನಿಸುವುದು ಇದರ ಮೂಲೋದ್ದೇಶ. ಹಣ ತುಟ್ಟಿಯಾದ ಕಾರಣ ಮತ್ತು ಹೇರಳವಾಗಿ ದೊರಕದ ಸಂಪನ್ಮೂಲವಾದ ಕಾರಣ ಇರುವಷ್ಟು ಹಣದ ಸೂಕ್ತ ಸದ್ವಿನಿಯೋಗ ಮಾಡಿಕೊಳ್ಳುವುದು ಅತಿ ಮುಖ್ಯವಾದ ಅಂಶ. ಆಯ ವ್ಯಯದ ಲೆಕ್ಕಾಚಾರ ಈ ದಿಸೆಯಲ್ಲಿ ನಡೆಯಲು ಸಹಕಾರಿಯಾಗುವ ಹೆಜ್ಜೆ ಮತ್ತು ನಿಭಾಯಿಸಿ ಸಂಭಾಳಿಸುವ ಆಯುಧ. ಮತ್ತಷ್ಟು ಓದು 





