ವಿಷಯದ ವಿವರಗಳಿಗೆ ದಾಟಿರಿ

Recent Articles

7
ಏಪ್ರಿಲ್

ಮತ್ತೊಮ್ಮೆ ಚೆಕಾಫ್

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

anton-chekhov-1-728ಮಧ್ಯಾಹ್ನದ ಸಮಯವದು. ತೀಕ್ಷ್ಣ ಕಂಗಳ,ಎತ್ತರದ ನಿಲುವಿನ ನಡುವಯಸ್ಕ ವಾಲ್ಡೆರೆವ್ ಕಚೇರಿಯ ಬಾಗಿಲಲ್ಲಿ ನಿಂತಿದ್ದ .ಧರಿಸಿದ್ದ ಮೇಲಂಗಿಯನ್ನು ಸರಿಪಡಿಸಿಕೊಳ್ಳುತ್ತ ನಿಂತಿದ್ದ ಆತ ಮಟ್ಟಸವಾಗಿ ತಲೆ ಬಾಚಿದ್ದ.ತನ್ನ ರೇಷ್ಮೆಯ ರುಮಾಲಿನಲ್ಲಿ ಹುಬ್ಬನ್ನೊರಿಸಿಕೊಳ್ಳುತ್ತ ಆ ಸರಕಾರಿ ಕಚೇರಿಯನ್ನು ಪ್ರವೇಶಿಸಿದ್ದ ಅವನ ನಡಿಗೆಯೂ ಕೊಂಚ ವಿಭಿನ್ನತೆಯಿಂದ ಕೂಡಿತ್ತು. ಸರಕಾರಿ ಕಚೇರಿಯಲ್ಲಿ ಎಂದಿನ ಸೋಮಾರಿತನದ ವಾತಾವರಣ.ಒಂದು ಹರಿವಾಣದ ತುಂಬ ಹತ್ತಾರು ಗ್ಲಾಸುಗಳನ್ನಿಟ್ಟುಕೊಂಡು ಗಡಿಬಿಡಿಯಲ್ಲಿ ನಡೆಯುತ್ತಿದ್ದ ಜವಾನನೊಬ್ಬನನ್ನು ತಡೆದು ನಿಲ್ಲಿಸಿ,’ನಾನೊಂದು ಮಾಹಿತಿಯನ್ನು ಪಡೆಯಬೇಕಿತ್ತು.’ಎಂದು ಪ್ರಶ್ನಿಸಿದ.ಕ್ಷಣಕಾಲ ವಾಲ್ಡೆರೆವ್ ನನ್ನು ದಿಟ್ಟಿಸುತ್ತ ನಿಂತಿದ್ದ ಜವಾನನ್ನು ಗಮನಿಸಿದ ವಾಲ್ಡೆರೆವ್ ಮತ್ತೊಮ್ಮೆ ” ಸರ್ ನಾನು ತುಂಬ ಅಗತ್ಯವಾದ ಮಾಹಿತಿಯೊಂದನ್ನು ಪಡೆದುಕೊಳ್ಳಬೇಕಿತ್ತು.ಹಾಗೆಯೇ ಮಂಡಳಿ ಪಾಸು ಮಾಡಿದ ಗೊತ್ತುವಳಿಯ ಪ್ರತಿಯೊಂದನ್ನು ಪಡೆದುಕೊಳ್ಳಬೇಕಿತ್ತು.ಇದನ್ನೆಲ್ಲಿ ವಿಚಾರಿಸಬೇಕೆನ್ನುವುದನ್ನು ದಯವಿಟ್ಟು ತಿಳಿಸಿ”ಎಂದು ಪ್ರಶ್ನಿಸಿದ. ಮತ್ತಷ್ಟು ಓದು »

6
ಏಪ್ರಿಲ್

ಈ ಗೆಲುವು ಮತ್ತೊಂದು ಸೋಲಿಗೆ ಮುನ್ನುಡಿಯಾಗದಿರಲಿ ರಾಘವೇಶ್ವರರೇ….

– ಕೆ ಎಸ್ ರಾಘವೇಂದ್ರ ನಾವಡ

08-1444299163-raghaveshwaraswamijiಅಂತೂ ಇಂತು ಎರಡು ವರುಷಗಳ ಹಿಂದೆ ಹೋಗಿದ್ದ ಹಿಂದೂಗಳ ಮರ್ಯಾದೆ ಮೊನ್ನೆ ವಾಪಾಸು ಬಂದಿತು. ರಾಘವೇಶ್ವರರು ಮತ್ತೊಂದು “ಅಂತರಿಕ ಯುದ್ಧ” ಗೆದ್ದಿದ್ದಾರೆ!! ಏಕೆ0ದರೆ ಬಾಹ್ಯ ವೈರಿಗಿ0ತಲೂ ಆಂತರಿಕ ವೈರಿಯನ್ನು ಗೆಲ್ಲುವುದು ಬಹಳ ಕಷ್ಟ! ಅಂದ ಮೇಲೆ ನಮ್ಮ ರಾಘವೇಶ್ವರ ಗೆಲುವೇನು ಸಾಮಾನ್ಯವೇ? ಏಕೆಂದರೆ ರಾಘವೇಶ್ವರರ ವಿರುದ್ಧ ಹಿಂದಿನ0ತೆ ಯುದ್ದ ಸಾರಿದ್ದು ಬೇರಾರು ಅಲ್ಲ! ಅವರ ಸುತ್ತು ಬಳಗದಲ್ಲಿನ ಹಿತಶತ್ರುಗಳೇ!! ಬ್ರಾಹ್ಮಣರೇ!, ಹಿಂದೂ ಸಂಘಟನೆಗಳೇ! ಇವರೊಂದಿಗೆ ಸಾರಿಗೆ ಒಗ್ಗರಣೆ ಹಾಕುವಂತೆ ಈ ಬಳಗಕ್ಕೆ ಬೇರೆಯವರ ಸಾಥ್ ಇತ್ತಷ್ಟೇ ! ಹಿಂದೂಗಳು ಹಿಂದೂಗಳ ಬೆಳವಣಿಗೆಯನ್ನು ಸಹಿಸಲಾರರು ಎಂಬುದಕ್ಕೆ ಈ ಹಗರಣ ಮತ್ತೊಂದು ಉದಾಹರಣೆಯಷ್ಟೇ!! ಮತ್ತಷ್ಟು ಓದು »

5
ಏಪ್ರಿಲ್

ನಮೋ ಬ್ರಿಗೇಡ್ ಮೇಲಿನ ಕೋಪಕ್ಕೆ ನರೇಶ್ ತುತ್ತಾದರೇ?

– ಹನುಮ೦ತ ಕಾಮತ್

11143647_10204577244893080_67827641632082198_nವಿನಾಯಕ ಪಾಂಡುರಂಗ ಬಾಳಿಗಾ, ಇತ್ತೀಚೆಗೆ ಕೊಲೆಯಾದ ಆರ್‌ಟಿಐ ಕಾರ್ಯಕರ್ತ.ಬಹುಶಃ ಆರು ವರ್ಷಗಳ ಹಿಂದಿನ ಒಂದು ದಿನ. ವಿನಾಯಕ ಬಾಳಿಗಾ ನನ್ನ  ಹತ್ತಿರ  ಬಂದಿದ್ದರು.  ‘ನನಗೆ ಮಾಹಿತಿ  ಹಕ್ಕು  ಕಾಯ್ದೆಯಡಿ  ಮಾಹಿತಿ ಪಡೆಯುವುದು  ಹೇಗೆ  ಎನ್ನುವುದರ  ಬಗ್ಗೆ  ಒಂದಿಷ್ಟು ಮಾಹಿತಿ  ಬೇಕು’ ಎಂದರು. ಕಾರಣ ಕೇಳಿದೆ.. ವಿನಾಯಕ ಬಾಳಿಗಾ ಅವರಿಗೆ ತನ್ನ ಮನೆಯಿಂದ ಕೊಡಿಯಾಲ್  ಬೈಲ್‌ಗೆ  ಹೋಗುವ ರಸ್ತೆಯಲ್ಲಿರುವ  ಪ್ರಖ್ಯಾತ  ಬಿಲ್ಡರ್ ರಮೇಶ್ ಕುಮಾರ್ ಅವರ ಮೌರಿಷ್ಕಾ ವಸತಿ ಸಮುಚ್ಚಯ ಮತ್ತು ಅದರ ಎದುರಿರುವ  ಶಾರದಾ ವಿದ್ಯಾಲಯದ ಮೇಲೆ  ತುಂಬಾ  ಸಿಟ್ಟಿದ್ದಂತೆ ಕಾಣುತ್ತಿತ್ತು. ಸಾಮಾನ್ಯವಾಗಿ ಯಾವುದಾದರೂ  ಒಂದು  ಸಂಸ್ಥೆ ಅಥವಾ ವ್ಯವಸ್ಥೆಯಿಂದ ಸಾರ್ವಜನಿಕರ ಮೇಲೆ ಅನ್ಯಾಯ, ದೌರ್ಜನ್ಯ ನಡೆದಾಗ ಆ ಸಂಸ್ಥೆ ಅಥವಾ ವ್ಯವಸ್ಥೆ  ಎಷ್ಟರ  ಮಟ್ಟಿಗೆ ನಿಯಮ,  ಕಾನೂನುಗಳನ್ನು ಪರಿಪಾಲಿಸುತ್ತಿದೆ, ಯಾವ ಹಂತದಲ್ಲಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ತನ್ನ ಇಚ್ಚೆ ಬಂದಂತೆ ವರ್ತಿಸುತ್ತದೆ ಎಂದು ಲಿಖಿತ ದಾಖಲೆಗಳು ನಮ್ಮ ಬಳಿ ಇದ್ದಲ್ಲಿ ಆಗ ನ್ಯಾಯಾಲಯದಲ್ಲಿ ಹೋರಾಟ ಮಾಡುವುದು ಸುಲಭ. ಬಹುಶಃ  ಮೌರಿಷ್ಕಾ  ವಸತಿ  ಸಮುಚ್ಚಯ  ಮತ್ತು ಶಾರದಾ  ವಿದ್ಯಾಲಯದ ವಿರುದ್ಧ ಅಂತಹ ದಾಖಲೆಗಳನ್ನು ಪಡೆದು, ಕಾನೂನು ಹೋರಾಟ ಮಾಡಲು ಬಾಳಿಗಾ ತೀರ್ಮಾನಿಸಿದ್ದರು.ಮೌರಿಷ್ಕಾ ಅಪಾರ್ಟಮೆಂಟಿನಿಂದ  ಏನು  ಸಮಸ್ಯೆಯಾಗುತ್ತಿದೆ  ಎಂದು ಕೇಳಿದೆ. ಮತ್ತಷ್ಟು ಓದು »

4
ಏಪ್ರಿಲ್

ಭಾಷೆ – ಜಿಜ್ಞಾಸೆ : ಗಂಜಿ, ಹಿಂಡಿ, ಬೂಸಾ ಇತ್ಯಾದಿ

– ರೋಹಿತ್ ಚಕ್ರತೀರ್ಥ

Untitledನಮ್ಮ ಮನೆಯಲ್ಲಿದ್ದ ಕಾಮಧೇನು ಎಂಬ ದನವನ್ನು ದಿನವೂ ಬಯಲಿಗೆ ಅಟ್ಟಿಸಿಕೊಂಡು ಹೋಗಿ ಸಂಜೆ ಹೊತ್ತಿಗೆ ಮರಳಿ ಹಟ್ಟಿಗೆ ತರುವ ಕೆಲಸ ಮಾಡುತ್ತಿದ್ದ ನನಗೆ, ಹಸುವಿಗೆ ಅಕ್ಕಚ್ಚು ಇಡುವುದು ಅತ್ಯಂತ ಪ್ರಿಯವಾಗಿದ್ದ ಕೆಲಸ. ಬೆಂದ ಅನ್ನವನ್ನು ಬಸಿದಾಗ ಸಿಗುವ ಗಂಜಿನೀರಿಗೆ ಒಂದಷ್ಟು ಕಲ್ಲುಪ್ಪು ಹಾಕಿ ಕರಗಿಸಿ ಅಜ್ಜಿ ಕೊಟ್ಟರೆ ಅದನ್ನು ದನದ ಮುಂದಿಟ್ಟು ಅದು ಕುಡಿಯುವ ಚಂದ ನೋಡುತ್ತ ಕೂರುತ್ತಿದ್ದೆ. ಮೂತಿ ಇಳಿಸಿದರೂ ಮೂಗೊಳಗೆ ನೀರು ಹೋಗದಂತೆ ಬಹಳ ಎಚ್ಚರಿಕೆಯಿಂದ ನಾಜೂಕಾಗಿ ಸುರ್‍ಸುರ್ರೆನ್ನುತ್ತ ಗಂಜಿ ಹೀರುವ ದನದ ಜಾಣ್ಮೆಗೆ ತಲೆದೂಗುತ್ತಿದ್ದೆ. ಮತ್ತಷ್ಟು ಓದು »

2
ಏಪ್ರಿಲ್

ವೇಳಿ ನಾಚಿಯರ್

– ರಂಜನ್ ಕೇಶವ

veluNachierಅದು ೧೭೭೩ ರ ಸಮಯ. ಕಪಟ ದೊರೆ ಆರ್ಕೋಟ್ ನವಾಬ ಬ್ರಿಟಿಷರೊಂದಿಗೆ ಕೈ ಜೋಡಿಸಿ ಶಿವಗಂಗೆಯ ರಾಜ ಬಡಗನಾಥ ಪೆರಿಯ ಒಡೆಯದೇವರ್ ದೇವಸ್ಥಾನದ ಪ್ರವಾಸದಲ್ಲಿ ನಿಶ್ಯಸ್ತ್ರನಾಗಿದ್ದಾಗ ಧಾಳಿ ಮಾಡಿ ಹತ್ಯೆಗೈದು ಶಿವಗಂಗೆಯನ್ನು ವಶಪಡಿಸಿಕೊಂಡಿದ್ದ. ಇದಾಗಿ ೮ ವರ್ಷಗಳು ಕಳೆದಾಗಿತ್ತು. ಆಗ ಒಡೆಯ ದೇವರ್ ರ ಪತ್ನಿ ವೇಳಿ ನಾಚಿಯರ್ ತಮ್ ಮಂತ್ರಿ ತಾಂಡವ ಪಿಳೈಯ ಸಹಾಯದ ಮೇರೆಗೆ ದಿಂಡಿಗಲ್ ಸಮೀಪದ ವಿರೂಪಾಚಿಪಾಳಯಮ್ ಗೆ ತಪ್ಪಿಸಿಕೊಂಡು ಹೋಗಿರುತ್ತಾರೆ. ಅಲ್ಲಿನ ಪಾಳೇಗಾರ ಗೋಪಾಲನಾಯಕನ ರಕ್ಷಣೆಯಲ್ಲಿ ಕಾಲಕಳೆಯುತ್ತಾ ಕಳೆದುಹೋದ ಶಿವಗಂಗೆಯನ್ನು ಮರಳಿ ಪಡೆಯಲು ಸಕಲ ಸಿದ್ಧತೆಯನ್ನು ನಾಚಿಯರ್ ನಡೆಸುತ್ತಿದ್ದರು. ಇದಕ್ಕಾಗಿ ನೆರೆಹೊರೆಯವರೆಲ್ಲರ ಸಹಾಯವನ್ನು ಜೊತೆಗೂಡಿಸುತ್ತಿದ್ದರು . ಮತ್ತಷ್ಟು ಓದು »

2
ಏಪ್ರಿಲ್

ಸ್ವಾಮಿ ವಿವೇಕಾನಂದರ ಒಂದು ಮರು ಓದು

Swamijiಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ

3, 4, 5 ಜೂನ್ 2016

ಸ್ಥಳ ಮತ್ತು ಆತಿಥ್ಯ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮೂಡುಬಿದಿರೆ, ಕರ್ನಾಟಕ

ಸಹ ಸಂಘಟಕರು: Vergelijkende Cultuurwetenschappen (ಗೆಂಟ್ ವಿಶ್ವವಿದ್ಯಾಲಯ, ಬೆಲ್ಜಿಯಂ); SDM Centre for Interdisciplinary Research in Humanities and Social Sciences (ಉಜಿರೆ, ಭಾರತ) ಮತ್ತು India Platform

 ಪ್ರವೇಶ: ಉಚಿತ, ಆದರೆ ನೊಂದಾವಣೆ ಖಡ್ಡಾಯ.

ನೊಂದಾಯಿಸಿಕೊಳ್ಳಲು, ತಮ್ಮ ಪೂರ್ಣ ಹೆಸರು, ಸಂಸ್ಥೆ ಮುಂತಾದ ವಿವರಗಳೊಂದಿಗೆ ಇಲ್ಲಿಗೆ ಬರೆಯಿರಿ: revisitingvivekananda@gmail.com

ಕಡೆಯ ದಿನಾಂಕ: 10 ಮೇ 2016.

ಸಮ್ಮೇಳನದ ಚಟುವಟಿಕೆಗಳ ತಾತ್ಕಾಲಿಕ ವೆಳಾಪಟ್ಟಿ ಮತ್ತು ಇಂಗ್ಲಿಷ್ concept noteಗಾಗಿ ನೋಡಿ:  http://www.cslc.in/dharma-and-ethics/?page=Dharma_And_Ethics_8 ಮತ್ತಷ್ಟು ಓದು »

1
ಏಪ್ರಿಲ್

ಕಂಬಿಯಿಲ್ಲದ ರೈಲು ಹತ್ತಿದವನ ‘ದಿನಾಚರಣೆ’ಗೆ ರಾಜಾಜ್ಞೆ ಹೊರಡಿಸಿದ್ದ ಇತಿಹಾಸ ಗೊತ್ತಾ?

– ಗೋಪಾಲಕೃಷ್ಣ

Joker-Make-YOu-Fool-ಜಾತಿ, ಧರ್ಮ, ವರ್ಣ, ಮೇಲು ಕೀಳು ಯಾವ ಗೀಳಿಗೂ ಬೀಳದೆ ಜಗತ್ತಿನಾದ್ಯಂತ ಸಮಾನತೆಯ ದ್ಯೋತಕವಾಗಿ ಆಚರಿಸಿಕೊಂಡು ಬರುತ್ತಿರುವ ಏಕೈಕ ಆಚರಣೆಯೆಂದರೆ ಅದು ‘ಮೂರ್ಖರ ದಿನಾಚರಣೆ’. ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ 1 ವರ್ಷದ ಮೊದಲ ದಿನವಾಗಿತ್ತು. ಪೋಪ್ ಗ್ರೆಗೋರಿ 1582ರಲ್ಲಿ ಏಪ್ರಿಲ್ ಬದಲಿಗೆ ಜನವರಿಯಿಂದ ಹೊಸವರ್ಷವೆಂದು, ಜನವರಿ 1ನ್ನು ವರ್ಷದ ಮೊದಲ ದಿನವೆಂದು ಬದಲಾಯಿಸಿದ. ಗ್ರೆಗೋರಿಯನ್ ಕ್ಯಾಲೆಂಡರ್ ಒಪ್ಪಿಕೊಳ್ಳದಿದ್ದ ಕೆಲವರು ಏಪ್ರಿಲ್ 1ರಂದು ಹೊಸವರ್ಷಾಚರಣೆ ಮಾಡುತ್ತಿದ್ದರು. ಅಂತಹವರನ್ನು ಮೂರ್ಖರೆಂದು ಗೇಲಿ ಮಾಡುತ್ತಿದ್ದುದರಿಂದ ಏಪ್ರಿಲ್ ಒಂದನೇ ತಾರೀಖು ಮೂರ್ಖರ ದಿನವಾಗಿದೆ ಎನ್ನುವುದು ಇತಿಹಾಸ. ಮತ್ತಷ್ಟು ಓದು »

31
ಮಾರ್ಚ್

ಸಾವರ್ಕರ್ ಬಗ್ಗೆ ಮಾತಾಡುವುದಕ್ಕೂ ಯೋಗ್ಯತೆ ಬೇಕು

-ಡ್ಯಾನಿ ಪಿರೇರಾ
ಹಳ್ಳಿಮೈಸೂರು-573210

355-Vinyaka-Damodar-Savarkar1123-03-2016 ರಂದು ಭಗತ್ ಸಿಂಗ್, ರಾಜಗುರು ಸುಖದೇವರ ಬಲಿದಾನದ ದಿನ ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ ಒಂದು ಸುದ್ಧಿ ಕಾಣಿಸಿತು. ಅದು ಕಾಂಗ್ರೆಸ್ಸಿನ ಅಧಿಕೃತ ಐಎನ್‍ಸಿ ಟ್ವಿಟರ್ ನಲ್ಲಿ ಪ್ರಕಟವಾದ ಸಂದೇಶ ವಾಗಿತ್ತು. ಅದರಲ್ಲಿ ಹೇಳುತ್ತಿರುವುದೇನು?! ಭಗತ್ ಸಿಂಗ್, ಸ್ವಾತಂತ್ರ್ಯವೀರ ಸಾವರ್ಕರ್‍ರ ಭಾವಚಿತ್ರದಡಿಯಲ್ಲಿ ಒಬ್ಬರನ್ನು ದೇಶಭಕ್ತ ಮತ್ತೊಬ್ಬರನ್ನು ದೇಶದ್ರೋಹಿ ಎಂದು ಟ್ವಿಟ್ ಮಾಡಲಾಗಿರುವ ಸಂದೇಶವದು! ಈ ದೇಶದ ಸ್ವಾತಂತ್ರ್ಯ ಯೋಧರ ಬಗೆಗಿನ ಕಾಂಗ್ರೆಸ್ಸಿನ ಮಾನಸೀಕತೆಯನ್ನು ಬಲ್ಲವರಿಗೆ ಈ ಹೇಳಿಕೆಯನ್ನು ನೋಡಿದಾಗ ಆಶ್ಚರ್ಯವಾಗುವುದಿಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲಾತಾಣಗಳಲ್ಲಿ ಒಂದಷ್ಟು ಹುಡುಕಾಟ ನಡೆಸುವ ಯುವ ಮನಸ್ಸುಗಳಿಗೆ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಮಾತ್ರವಲ್ಲದೇ ಇಡೀ ಜೀವನವನ್ನೇ ದೇಶ ಮಾತೆಯ ಸೇವೆಗಿಟ್ಟ ಮಹಾನ್ ವ್ಯಕ್ತಿಯ ವ್ಯಕ್ತಿತ್ವ ಪ್ರೇರಣೆ ಕೊಡಬೇಕಾಗುವ ವಿಷಯವಾಗಬೇಕಾದ ಹಿನ್ನೆಲೆಯಲ್ಲಿ ಅವರ ಬಗೆಗಿನ ಕಾಂಗ್ರೆಸ್ ಪಕ್ಷದ ಮಾತು ನಿಜಕ್ಕೂ ತಪ್ಪು ಸಂದೇಶ ಕೊಡುವಂತದ್ದು! ಇವರೇಕೆ ಹೀಗೆ? ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ನಡುವೆ ಭಿನ್ನಾಭಿಯವಿದ್ದೊಡನೇ ಆ ವ್ಯಕ್ತಿ ವಿದ್ರೋಹಿ ಆಗಬಲ್ಲನೇ?! ಮತ್ತಷ್ಟು ಓದು »

30
ಮಾರ್ಚ್

ಪೇಪರು ಔಟಾಗಿ, ಎಂಟ್ರೆನ್ಸು ಬೇಕಾಗಿ..

– ನಾಗೇಶ ಮೈಸೂರು

chemistry-paper-leak-305_032216115714ಅದು ಸುಮಾರು ೮೨-೮೩ ರ ಕಾಲ. ನಾವು ಅಗ ಎರಡನೆ ಪೀಯೂಸಿಯಲ್ಲಿ ಓದುತಿದ್ದೆವು. ಆಗಿನ್ನೂ ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳಿಗೆ ಪ್ರವೇಶ ಪರೀಕ್ಷೆ ಇರಲಿಲ್ಲ – ಪೀಯೂಸಿ ಅಂಕೆ, ದರ್ಜೆಯ ಮೇಲೆ ಸೀಟು ನಿರ್ಧಾರವಾಗುತ್ತಿದ್ದ ಕಾಲ. ‘ಸೈನ್ಸ್ ತೆಗೆದುಕೊಂಡರೆ ಕೆಲಸ ಸುಲಭ ಸಿಗುತ್ತೆ’ ಅನ್ನುವ ಜನಪ್ರಿಯ ನಂಬಿಕೆಯನುಸಾರ ಪೀಸಿಎಂಬಿ ತೆಗೆದುಕೊಡಿದ್ದ ನನಗಂತೂ ಕೂತಲ್ಲಿ, ನಿಂತಲ್ಲಿ ಅದೇ ಧ್ಯಾನ, ಆತಂಕ, ಕಳವಳ.

ಫೇಲಾಗಿ ಬಿಟ್ಟರೆ ಎಲ್ಲರ ಎದುರು ಮುಖವೆತ್ತಿ ತಿರುಗುವುದು ಹೇಗೆ ಅನ್ನುವುದಕ್ಕಿಂತ, ಸುತ್ತ ಮುತ್ತಲಿನವರೆಲ್ಲ ಇಟ್ಟುಕೊಂಡಿರುವ ‘ಮಹಾ ಬುದ್ಧಿವಂತ, ಗ್ಯಾರಂಟಿ ಎಂಜಿನಿಯರೋ, ಡಾಕ್ಟರೋ ಆಗ್ತಾನೆ’ ಅನ್ನೋ ನಂಬಿಕೆ ಸುಳ್ಳಾಗಿಬಿಟ್ರೆ ಏನು ಕಥೆಯಪ್ಪ ? ಅನ್ನೋ ಅಳುಕೇ ಹೆಚ್ಚಾಗಿ ಕಿತ್ತು ತಿನ್ನುತ್ತಿತ್ತು. ಇನ್ನು ಮಿಕ್ಕಿದ್ದೆಲ್ಲ ಹೇಳುವ ಹಾಗೆ ಇಲ್ಲಾ ಬಿಡಿ – ಬೆಳಗಿನಿಂದ ಕಾಲೇಜು ಕ್ಲಾಸು, ಮುಗಿಯುತ್ತಿದ್ದಂತೆ ಸೈಕಲ್ ಏರಿ ಹೊರಟರೆ ಒಂದು ಕಡೆಯಿಂದ ಟ್ಯೂಶನ್ನಿನ ಪರಿಭ್ರಮಣನೆ.. ಎಂಜಿನಿಯರಿಂಗೋ, ಮೆಡಿಕಲ್ಲೋ ಆನ್ನೋ ಸಂದಿಗ್ದಕ್ಕೆ ಎಲ್ಲಾ ನಾಲ್ಕು ಸಬ್ಜೆಕ್ಟ್ಟಿಗೂ ಟ್ಯೂಷನ್.. ಮನೆಗೆ ಬಂದ ಮೇಲೆ ಮತ್ತೆ ರಿವಿಷನ್, ಸ್ಟಡಿ ನಡುರಾತ್ರಿಯವರೆಗೆ. ಇವಿಷ್ಟು ಬಿಟ್ಟರೆ ಬೇರೆ ಬದುಕೇ ಇಲ್ಲ ಅನ್ನೋ ತರಹದ ಜೀವನ. ಮತ್ತಷ್ಟು ಓದು »

29
ಮಾರ್ಚ್

ಬಣ್ಣದ ಬದುಕಿಗೆ ಮರುಳಾಗುವ ಮುನ್ನ

– ರಾಜೇಶ್ ನರಿಂಗಾನ

Sad_Brown_Eyes_With_Tears-6ಕಳೆದ ವಾರ ನಮ್ಮ ಕಂಪೆನಿಯ ಮಾರ್ಕೆಟಿಂಗ್ ವಿಸ್ತರಣೆಗಾಗಿ ಪೂಂಜಾಲಕಟ್ಟೆಗೆ ಹೋಗಿದ್ದೆ. ಮೊದಲೇ ಬಿರುಬಿಸಿಲು. ಬಸ್ಸಿನಿಂದ ಇಳಿಯುತ್ತಿದ್ದಂತೆ ಅಲ್ಲೇ ಬಸ್ ಸ್ಟ್ಯಾಂಡ್ ಪಕ್ಕದಲ್ಲಿದ್ದ ಅಂಗಡಿಗೆ ಹೋಗಿ ಎಳನೀರು ಕುಡಿದು ಹೊರಬಂದಾಗ ಬಸ್ ಸ್ಟ್ಯಾಂಡ್’ನಲ್ಲಿ ಒಬ್ಬಾಕೆ ಮೂವತ್ತು ಮೂವತ್ತೈದರ ಹರೆಯದ ಮಹಿಳೆ ನಾನು ಹೋಗಬೇಕಾಗಿದ್ದ ಗೇರುಬೀಜದ ಕಾರ್ಖಾನೆಯ ಕಡೆಯಿಂದ ಬರುತ್ತಿದ್ದರು. ತನ್ನ ಕೈಯಲ್ಲಿ ಒಂದು ಪುಟ್ಟ ಮಗುವನ್ನು ಎತ್ತಿಕೊಂಡಿದ್ದರೆ, ಇನ್ನಿಬ್ಬರು ಮಕ್ಕಳು ನಡೆದುಕೊಂಡು ಬಸ್ ಸ್ಟ್ಯಾಂಡ್ ನ ಕಡೆಗೆ ಬರುತ್ತಿದ್ದರು. ಅವರು ನನ್ನ ಕಣ್ಣಿಗೆ ಹತ್ತಿರವಾಗುತ್ತಿದ್ದಂತೆ ಆಕೆಯನ್ನು ಎಲ್ಲೋ ನೋಡಿದ ನೆನಪು ಕಾಡತೊಡಗಿತು. ಕಡೆಗೂ ನೆನಪು ಮರುಕಳಿಸಿತು… ಹೌದು…!!!! ಅದು ಅವಳೇ…..!!!!!! ಈಗ ಮತ್ತಷ್ಟು ನೆನಪಾಯಿತು. ನನ್ನ ನೆನಪು ಹತ್ತು ವರ್ಷಗಳ ಹಿಂದಕ್ಕೆ ಹೋಯಿತು….. ಮತ್ತಷ್ಟು ಓದು »