ಸದ್ದಿಲ್ಲದೇ ಸ್ತ್ರೀ ಶಿಕ್ಷಣಕ್ಕೆ ನಾಂದಿ ಹಾಡಿದ ಹರಿಕಾರ – ಶ್ರೀ ಶಿವಕುಮಾರ ಸ್ವಾಮೀಜಿ.
– ಡಾ.ಸುದರ್ಶನ ಗುರುರಾಜರಾವ್
ಸರಿ ಸುಮಾರು ನೂರಾಹನ್ನೊಂದು ವರ್ಷಗಳ ಕಾಲ ದೇಶಸೇವೆಯೇ ಈಶಸೇವೆ ಎಂದೆನ್ನುತ್ತಾ, ಜನತೆಯಲ್ಲಿಯೇ ಜನಾರ್ದನನನ್ನು ಕಂಡು ನಮ್ಮನ್ನಗಲಿದ ಯುಗಪುರುಷ, ನಡೆದಾಡುವ ದೇವರೆಂದೇ ಜನಮಾನಸಗಳಲ್ಲಿ ನೆಲೆಯಾಗಿದ್ದ ಶ್ರೀ ಶಿವಕುಮಾರಸ್ವಾಮಿಗಳು ನಮ್ಮನ್ನು ತೊರೆದು ನೈತಿಕವಾಗಿ ದಿನೇ ದಿನೇ ಅಧೋಗತಿಗಿಳಿಯುತ್ತಿರುವ ನಮ್ಮ ಸಮಾಜವನ್ನು ಆ ಮೂಲಕವಾಗಿ ಸಾತ್ವಿಕ ಸಮುದಾಯವನ್ನು ಅನಾಥರನ್ನಾಗಿ ಮಾಡಿ ಹೋದದ್ದು ದುಃಖಕರವಾದ ಸಂಗತಿಯೇ ಸರಿ. ಕಾಲನ ಕರೆಗೆ ಓಗೊಡದವರಾರು?
ಸ್ವಾಮೀಜಿಗಳ ಬಗ್ಗೆ ಅವರು ಹಗಲಿರುಳು ದುಡಿದು ಕಾಯಾ ವಾಚಾ ಮನಸಾ ದೀನರ ಕರೆಗೆ ಓಗೊಟ್ಟದ್ದು, ಏನೂ ಇದ್ದಿಲ್ಲದ ಒಂದು ಬಿಡಿ ಮಠವನ್ನು ಬೃಹತ್ ಸಂಸ್ಥೆಯನ್ನಾಗಿ ಬೆಳೆಸಿದ್ದು, ಆ ಮೂಲಕವಾಗಿ ಲಕ್ಷಾಂತರ ಜೀವಗಳ ಅಭಿವೃದ್ಧಿಗೆ ಕಾರಣರಾದದ್ದು , ಜಾತ್ಯಾತೀತರೆಂದು ಕೊಚ್ಚಿಕೊಳ್ಳುವ ಸರಕಾರಗಳ ಅನೀತಿಯ ಕಾಕದೃಷ್ಟಿಗೆ ಬಿದ್ದು ಕಷ್ಟ ಅನುಭವಿಸಿದರೂ ಒಂದೇ ಒಂದು ಮಾತನಾಡದೆ ಮಠದ ಮಕ್ಕಳಿಗೆ ಅನ್ನಪೋಷಣೆ ವಿದ್ಯಾದಾನಗಳನ್ನು ಅವಿರತವಾಗಿ ಮುಂದುವರಿಸಿದ್ದು ಎಲ್ಲವನ್ನು ಕೇಳಿ, ಓದಿ ತಿಳಿದಿದ್ದೇವೆ. ಇವೆಲ್ಲದರ ನಡುವೆ ತುಮಕೂರಿನ ಆಸುಪಾಸಿನಲ್ಲಿ ನಾನಾ ಕಾರಣಗಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶವಿಲ್ಲದ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟ ಸಮಾನತೆಯ ಹರಿಕಾರ ಶ್ರೀ ಸ್ವಾಮೀಜಿಗಳು ಎಂಬುದು ಬಹುತೇಕರಿಗೆ ತಿಳಿದಿಲ್ಲದ ವಿಚಾರ.
ಸಿದ್ಧಗಂಗಾ ಮಠದ ಶಾಲೆಯ ಮೊತ್ತ ಮೊದಲ ವಿದ್ಯಾರ್ಥಿನಿಯಾದ ನನ್ನ ತಾಯಿಯ ಅನುಭವದ ಪರಿಚಯ ಈ ಲೇಖನದ ಉದ್ದೇಶ. ಇದನ್ನು ಹೇಳುವಾಗ, ಬರೆಯುವಾಗ ಭಕ್ತಿ, ಕೃತಜ್ಞತೆಗಳು ಎದೆತುಂಬಿ ನಿಂತಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ. ಮತ್ತಷ್ಟು ಓದು 
ತೊತ್ತೋಚಾನ್ (ಪುಸ್ತಕ ಪರಿಚಯ)
– ವಲವಿ ವಿಜಯಪುರ
“ಕನಸುಗಳನ್ನು ಕಾಣಬೇಕು. ಉನ್ನತೋನ್ನತವಾದ ಹಗಲು ಕನಸು ಕಾಣಿರಿ.”
ಇದು ಭಾರತದ ಮಾಜಿ ರಾಷ್ಟ್ರಪತಿ, ಕ್ಷಿಪಣಿ ಜನಕ ದಿ| ಶ್ರೀ ಅಬ್ದುಲ್ ಕಲಾಂ ಅವರ ಅಮೃತ ನುಡಿ.
ಹೌದು, ಕನಸು ಕಾಣಬೇಕು. ಉನ್ನತೋನ್ನತವಾದ ಕನಸನ್ನೇ ಕಾಣಬೇಕು. ಮತ್ತು ಅದನ್ನು ನನಸಾಗಿಸುವತ್ತ ಸತತ ಪ್ರಯತ್ನಿಸಬೇಕು. ಅಂಥ ಉನ್ನತ ಕನಸನ್ನು ಕಂಡು ಅದನ್ನು ನನಸಾಗಿಸಲು ಹಗಲಿರುಳು ಶ್ರಮಿಸಿದ, ಖ್ಯಾತ ಶಿಕ್ಷಣ ಪ್ರೇಮಿ, ಮಕ್ಕಳ ಪ್ರೇಮಿ, ಪ್ರಯೋಗಶೀಲ ವ್ಯಕ್ತಿತ್ವದ ಶ್ರೀ ಸೋಸಾಕು ಕೊಬಾಯಾಶಿ ಅವರ ಪ್ರಾಯೋಗಿಕ ಶಾಲೆ ತೊಮೆಯೆ ಗಾಕುಯೆನ್ ಹೇಗಿತ್ತು ಎಂದು ತಿಳಿಸುವ ಪ್ರಯತ್ನವನ್ನು ಆ ಶಾಲೆಯ ಹಾಗೂ ಕೊಬಾಯಾಶಿ ಅವರ ಪ್ರಯೋಗದ ನೇರ ಭಾಗೀದಾರಳಾದ ತೊಮೆಯೆ ಶಾಲೆಯ ಮಾಜಿ ವಿದ್ಯಾರ್ಥಿನಿ ಶ್ರೀಮತಿ ತೆತ್ಸುಕೋ ಕುರೊಯಾನಾಗಿ ಬರೆದ ಪುಸ್ತಕವೇ ಈ ‘ತೊತ್ತೋ ಚಾನ್’ ಮತ್ತಷ್ಟು ಓದು 
ನಮೋ ಶಿವಕುಮಾರ ಸ್ವಾಮಿ: ಶರಣಂ ಗಚ್ಛಾಮಿ!
~ ತುರುವೇಕೆರೆ ಪ್ರಸಾದ್
ಗಾಂಧಿನಗರ
ತುರುವೇಕೆರೆ-572227
ಸಿದ್ಧಗಂಗೆಯ ಐಸಿರಿ, ತಾನಾಗಬಲ್ಲನಿಲ್ಲಿ ನರನು ನಾರಾಯಣನು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಶ್ರೇಷ್ಠ ನರಹರಿ, ಸಿದ್ಧಗಂಗೆಯ ಸಾಧನೆಯ ಉತ್ತುಂಗದ ಗಿರಿ ಡಾ.ಶ್ರೀ ಶಿವಕುಮಾರಸ್ವಾಮೀಜಿ ಭೌತಿಕವಾಗಿ ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ. ಸುಮಾರು 9 ದಶಕಗಳ ಕಾಲ ಅವರು ಮನುಕುಲಕ್ಕೆ ಸಲ್ಲಿಸಿದ ಸೇವೆ ಅನುಪಮವಾದದು, ಅನನ್ಯವಾದದು, ಮಾನವೀಯತೆಯ ಇತಿಹಾಸದಲ್ಲಿ ಎಂದೆಂದಿಗೂ ಅಜರಾಮರವಾಗಿ ‘ನಭೂತೋ ನಭವಿಷ್ಯತ್’ ಎನ್ನುವಂತೆ ದಾಖಲಾಗುವಂತಾದ್ದು. ಶಾಂತಿ ನೆಮ್ಮದಿ ಬಯಸಿದವನಿಗೆ ದಿವ್ಯ ದರ್ಶನ, ನರಳುತ್ತಾ ಬಂದವನಿಗೆ ಮಾನವೀಯ ಸೇವೆಯ ದಿಗ್ದರ್ಶನ, ಹಸಿದವನಿಗೆ ಅನ್ನ, ಅನಾಥನಿಗೆ ಪ್ರೀತಿಯ ಸಿಂಚನ, ಅರಿವಿನ ಜೋಳಿಗೆ ಹಿಡಿದು ಬಂದವನಿಗೆ ಜ್ಞಾನ- ಸಿದ್ಧಗಂಗಾ ಸ್ವಾಮೀಜಿಯ ಬಹುಮುಖಿ ದಾಸೋಹದ ವೈಖರಿಯೇ ಅನನ್ಯ! ಮತ್ತಷ್ಟು ಓದು 
ಅಬ್ಬಾ..ಈ ದೇಶದಲ್ಲಿ ಅದೆಂತಹ ಅಸಹಿಷ್ಣುತೆ..!
– ವರುಣ್ ಕುಮಾರ್
ಪುತ್ತೂರು

- ಈ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ – ಶಾರುಖ್ ಖಾನ್
- ನನ್ನ ಪತ್ನಿಗೆ ಮತ್ತು ನನಗೆ ಈ ದೇಶದಲ್ಲಿ ಇರಲು ಭಯವಾಗುತ್ತಿದೆ, ಯಾಕೆಂದರೆ ಇಲ್ಲಿ ಅಸಹಿಷ್ಣುತೆ ಇದೆ – ಅಮೀರ್ ಖಾನ್
- ನನ್ನ ಮೊಮ್ಮಕ್ಕಳಿಗೆ ಈ ದೇಶದಲ್ಲಿರಲು ಭಯವಾಗುತ್ತಿದೆ – ನಾಸೀರುದ್ದಿನ್ ಷಾ
ಹೌದಲ್ಲವೇ, ಇವರು ಹೇಳಿದಂತೆ ಕಳೆದ ನಾಲ್ಕೂವರೆ ವರ್ಷಗಳಿಂದ ಎಷ್ಟೊಂದು ಅಸಹಿಷ್ಣುತೆ ಇದೆಯಲ್ಲವೆ, ಎಲ್ಲ ಕಡೆಗಳಲ್ಲಿ ಗೋವಿನ ಹೆಸರಲ್ಲಿ ಕೊಲೆ,ಸುಲಿಗೆ ಧರ್ಮದ ಹೆಸರಲ್ಲಿ ಗಲಭೆ, ಅಲ್ಪಸಂಖ್ಯಾತರಿಗಂತೂ ಉಸಿರುಗಟ್ಟಿದ ಸ್ಥಿತಿ. ಒಂದೇ ಎರಡೇ, ಇದಕ್ಕೆಲ್ಲ ಯಾರು ಮುಖ್ಯ ಕಾರಣ ಕೇಂದ್ರ ಸರ್ಕಾರ. ಅದರಲ್ಲೂ ಮುಖ್ಯವಾಗಿ ಮೋದಿ. ಈ ಮನುಷ್ಯ ಬಂದ ಮೇಲಂತೂ ಈ ದೇಶದ ಬಗ್ಗೆ ತಾತ್ಸರ ಮೂಡುವಂತೆ ಮಾಡಿದ್ದಾನೆ. ಅಲ್ಲವೇ.. ಅಷ್ಟಕ್ಕೂ ಮೋದಿಯ ಬಗ್ಗೆ ಈ ನಮ್ಮ ದೇಶಭಕ್ತ(?)ರಿಗೆ ಯಾಕೆ ಇಷ್ಟೊಂದು ಕೋಪ ಸ್ವಲ್ಪ ಮೆಲುಕು ಹಾಕೋಣ. ಮತ್ತಷ್ಟು ಓದು 
ಸಿದ್ಧಗಂಗಾ ಶ್ರೀಗಳಿಗೇಕಿಲ್ಲ ಭಾರತರತ್ನ?
– ರಾಕೇಶ್ ಶೆಟ್ಟಿ
“ಮೂರು ಬಿಟ್ಟೋರು ಊರಿಗೇ ದೊಡ್ಡೋರು” ಅನ್ನೋ. ಗಾದೆ ಮಾತು ಯಾರಿಗಾದರೂ ಸೂಕ್ತವಾಗಿ ಅನ್ವಯವಾಗುವುದಿದ್ದರೆ ಅದು ಕಾಂಗ್ರೆಸ್ ಪಕ್ಷ ಹಾಗೂ ಅದನ್ನು ಬೆಂಬಲಿಸುವ ಗಂಜಿಗಿರಾಕಿಗಳಿಗೆ. ಕಾರಣವೇನು ಗೊತ್ತೇ, ತನ್ನ ಪಕ್ಷದ ಇತಿಹಾಸದಲ್ಲಿ ಮಾಡಲಾಗಿರುವ ಅನ್ಯಾಯಗಳ ಪಟ್ಟಿ ಅಕ್ಷಯಪಾತ್ರೆಯಂತದ್ದು ಎನ್ನುವುದು ಗೊತ್ತಿದ್ದರೂ ಬೇರೆ ಪಕ್ಷಗಳನ್ನು ಟೀಕಿಸಲು ಹೊರಟಾಗ ಕಾಂಗೈ ನಾಯಕರು ನಾಚಿಕೆ ಬಿಟ್ಟು ನಿಲ್ಲುತ್ತಾರೆ. ಇದಕ್ಕೆ ಇತ್ತೀಚಿನ ಉದಾಹರಣೆ, ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡದಿರುವ ವಿವಾದ.
ಇವತ್ತಿಗೆ ಸಿದ್ದರಾಮಯ್ಯನವರಿಂದ ಹಿಡಿದು ಕಾಂಗಿ ಮರಿಪುಢಾರಿಗಳೆಲ್ಲ ಬಿಜೆಪಿಯನ್ನು ಈ ಬಗ್ಗೆ ಪ್ರಶ್ನಿಸುತ್ತಿವೆ.ಆದರೆ,ಹಾಗೆ ಪ್ರಶ್ನಿಸುವ ಭರದಲ್ಲಿ ದೇಶದ ಉನ್ನತ-ಅತ್ಯುನ್ನತ ಪ್ರಶಸ್ತಿಗಳ ಮಾನವನ್ನು ಮೂರು ಬಿಟ್ಟವರ ಪಕ್ಷ ಹೇಗೆ ಕಳೆದಿದೆ ಎನ್ನುವುದನ್ನು ಇವರು ಮರೆತಿರುವಂತಿದೆ.
ಮೋದಿ ಸಾಲದ ಶೂಲ – ಗಂಜಿಗಿರಾಕಿಗಳ ಕೋಲಾಹಲ
– ರಾಘವೇಂದ್ರ ಸುಬ್ರಹ್ಮಣ್ಯ
ನಿನ್ನೆ-ಮೊನ್ನೆಯಿಂದಾ ನಮ್ಮ ಮಾಧ್ಯಮಗಳದ್ದು ಒಂದೇ ಗಲಾಟೆ, “ಮೋದಿ ಅಧಿಕಾರವಧಿಯಲ್ಲಿ ಭಾರತದ ಸಾಲದ ಹೊರೆ ಬೃಹತ್ ಪ್ರಮಾಣದಲ್ಲಿ ಹೆಚ್ಚಾಗಿದೆ” ಅಂತಾ ಕೂಗಾಡ್ತಿವೆ. ಇಂಡಿಯಾಟುಡೇ “ಮೋದಿ ಸರ್ಕಾರದ ಅಡಿಯಲ್ಲಿ ಕೇಂದ್ರ ಸಾಲವನ್ನು 50% ಏರಿಕೆಯಾಗಿದೆ” ಅಂತಾ ಶುರುಮಾಡಿದ ಈ ಅರಚಾಟದ ಕಸದಂತಾ ಸುದ್ಧಿಯನ್ನು, ಎಕನಾಮಿಕ್ ಟೈಮ್ಸ್ ಕೂಡಾ ತಾನು ಎರವಲು ಪಡೆದ ಹಾಗೇ ಹಂಚಿತು. ಇವರೆಲ್ಲರೂ ಈ ಸುದ್ಧಿಯನ್ನ ಪಡೆದದ್ದೆಲ್ಲೆಂದಾ? ಕಳೆದ ಶುಕ್ರವಾರ ಕೇಂದ್ರ ಹಣಕಾಸು ಸಚಿವಾಲಯದ “ಸರ್ಕಾರೀ ಸಾಲದ ಸ್ಥಿತಿಪತ್ರದ 8 ನೇ ಆವೃತ್ತಿ” ಬಿಡುಗಡೆಯಾಯಿತು. ಅದರಿಂದ ತಮಗೆ ಬೇಕಾದಷ್ಟೇ ಸುದ್ಧಿಯನ್ನ ಈ ಸುದ್ಧಿಮನೆಗಳು ಹೆಕ್ಕಿತೆಗೆದು, ತಮಗೆ ಬೇಕಾದಂತೆ ತಿರುಚಿ, “ಮೋದಿ ಹೇಗೆ ಭಾರತಕ್ಕೆ ಮಾರಕ” ಎನ್ನುವಂತಾ ತಮ್ಮ ಹಳೇ ಕಥೆಗಳ ದೀಪಕ್ಕೆ ಹೊಂದುವಂತಾ ನಿರೂಪಣೆಯ ಬತ್ತಿಯನ್ನ ಹೊಸೆದರು.
ಈ ಸುದ್ಧಿಗಳು ಬಂದದ್ದೇ ತಡ, ಮೋದಿ ವಿರೋಧಿ ಬಳಗಗಳು ತಮ್ಮ ಮನೆ-ಮನಗಳಲ್ಲಿ ಸದಾಕಾಲ ಉರಿಯುತ್ತಿರುವ ಮೋದಿ ದ್ವೇಷದ ಬೆಂಕಿಗೆ ಇನ್ನೂ ಎರಡು ಲೀಟರ್ ಪೆಟ್ರೋಲ್ ಹೆಚ್ಚೇ ಸುರಿದು, ಈ ಸುದ್ಧಿಯನ್ನು ಎಲ್ಲೆಡೆ ಹರಡಲು ಪ್ರಾರಂಭಿಸಿದರು. “ಮೋದಿನಾಮಿಕ್ಸ್ ನೆಲಕಚ್ಚಿದೆ, ದೇಶದಲ್ಲಿ ಕೆಲಸಗಳೇ ಇಲ್ಲ, ಕೈಗಾರಿಕಾ ಉತ್ಪಾದನೆ ಮೇಲೇಳದಂತೆ ಕುಸಿದಿದೆ, ಇಂತಾ ಸಮಯದಲ್ಲಿ ಮೋದಿ ದೇಶಕ್ಕೆ ಇನ್ನೂ 28ಲಕ್ಷ ಕೋಟಿ ಸಾಲ ಹೆಚ್ಚಿಸಿ ನಮ್ಮನ್ನೆಲ್ಲಾ ಕೊಂದೇಬಿಟ್ಟಿದ್ದಾನೆ. ಚುನಾವಣಾ ಜುಮ್ಲಾಗಳ ಕಾಲ ಮುಗಿಯಿತು, 2019ರಲ್ಲಿ ಜನ ಬಿಜೆಪಿಯನ್ನು ಕಿತ್ತೆಯಸಲಿದ್ದಾರೆ” ಅಂತಾ ಒಂದೇ ಸಮವೆ ಕಿರುಚಾಡುತ್ತಿದ್ದಾರೆ.
ಈ ವಿಚಾರವನ್ನು ಎರಡು ರೀತಿಯಲ್ಲಿ ನಿಭಾಯಿಸಬಹುದು. ಒಂದನೇ ದಾರಿ: “ಜನಕ್ಕೆ ಇದೆಲ್ಲಾ ಅರ್ಥವಾಗೇ ಆಗುತ್ತೆ. ಈ ಕಿರುಚಾಟಗಳೆಲ್ಲಾ ಅರ್ಥಹೀನ ಅಂತಾ ಇವತ್ತಲ್ಲಾ ನಾಳೆ ತಿಳಿದುಕೊಂಡು ಇವನ್ನೆಲ್ಲಾ ನಿವಾಳಿಸಿ ಬದಿಗಿಡ್ತಾರೆ” ಅಂತಾ ಸುಮ್ಮನಾಗುವುದು. ಆದರೆ ಇದನ್ನು ಹಿಂಗೇ ಬಿಟ್ಟರೆ, ಏನೂ ಗೊತ್ತಿಲ್ಲದವರೂ ಇದನ್ನೇ ನಿಜವೆಂದು ನಂಬಿ ಕೂತರೇನು ಕಥೆ? ಇಂಗ್ಲೀಷ್ ಪತ್ರಿಕೆಗಳೇನೋ ಗಾಂಧಿ ಪರಿವಾರದ ಸಂಬಳದಲ್ಲಿವೆ. ತೀರಾ ಉದಯವಾಣಿಯವರೂ ಇದನ್ನೇ ಸತ್ಯವೆಂದು ಬಿಂಬಿಸಿ ಸುದ್ಧಿಪ್ರಕಟಿಸುತ್ತಿದ್ದಾರಲ್ಲಾ! ಅದೂ ದೇಶ ಚುನಾವಣೆಯ ಹೊಸ್ತಿಲಲ್ಲಿರುವಾಗ!! ಆ ಅರ್ಥವಾಗುವ “ಇವತ್ತಲ್ಲಾ ನಾಳೆ” ಅನ್ನೋ ಕಾಲ, ಚುನಾವಣೆ ಮುಗಿದಮೇಲೆ ಬಂದರೇನು ಸುಖ!? ನಾವೇ ದೇಶವನ್ನು ಅವಸಾನದೆಡೆಗೆ ತಳ್ಳಿದಂತಾಯ್ತಲ್ಲಾ! ಹೀಗಿದ್ದಾಗ ಎರಡನೇ ದಾರಿಯೇ ಬೇಕು. ಎರಡನೆಯ ದಾರಿ: “ಇದನ್ನು ಸಾಮಾನ್ಯರಿಗೂ ಅರ್ಥವಾಗುವ ಪದಗಳಲ್ಲಿ ಬಿಡಿಸಿ ಬರೆದು, ಸರಿದಾರಿಗೆಳೆಯುವುದು”. ಈ ಲೇಖನ ಆ ಎರಡನೆಯ ದಾರಿ.
- ಹಾಗಾದರೆ ಹಣಕಾಸು ಸಚಿವಾಲಯದ ಸಾಲಪತ್ರದಲ್ಲಿ ಹೇಳಿರುವ ವಿಚಾರಗಳು ಸುಳ್ಳೇ?
- ಈ ಪತ್ರಿಕೆಗಳು ಹೇಳುತ್ತಿರುವ ವಿಚಾರಗಳು ಸುಳ್ಳೇ?
- ಮೋದಿಯನ್ನು ಸಮರ್ಥಿಸುವ ಭರದಲ್ಲಿ, ನಾನು ಈ ದೇಶದ ಮೇಲೆ ಸಾಲವೇ ಇಲ್ಲ ಅಂತಾ ಹೇಳುತ್ತಿದ್ದೇನೆಯೇ?
ಹಸಿರ ಪಯಣ …
– ಸುಜಿತ್ ಕುಮಾರ್
ಶಾಂತ ಸಂಜೆಯ ತಿಳಿತಂಪಿನ ಹಿತಕ್ಕೆ ಭಂಗ ತರುವಂತೆ ಬಿಸಿಯಾದ ಗಾಳಿ ಒಮ್ಮೆಲೇ ಬೀಸತೊಡಗಿತ್ತು. ಗಾಳಿಯ ಬೀಸುವಿಕೆಯ ದಿಕ್ಕನ್ನು ಪರಿಗಣಿಸದೆಯೆ ಹಕ್ಕಿಗಳ ಗುಂಪು ತಮ್ಮ ತಮ್ಮ ಗೂಡುಗಳೆಡೆಗೆ ಮುಖಮಾಡಿ ಹಾರತೊಡಗಿದ್ದವು. ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್, ಅದೇ ಬಣ್ಣದ ಟಿ ಶರ್ಟ್ ಹಾಗು ಅತಿ ದುಬಾರಿಯಾದೊಂದು ಸ್ಪೋರ್ಟ್ಸ್ ಶೋವನ್ನು ಧರಿಸಿ ಮೋಹನ ಜಾಗಿಂಗ್ ಗೆ ಇಳಿದಿದ್ದ. ವಾಹನಗಳಿಗೆ ಪಾರ್ಕ್ ಮಾಡಲೂ ಸರಿಯಾದ ಸ್ಥಳ ಸಿಗದಿರುವ ಸಿಟಿಯಲ್ಲಿ ಆಟೋಟ, ವ್ಯಾಯಾಮಗಳಿಗೆ ಜಾಗವನ್ನು ಕೊಡುವವರ್ಯಾರು? ವಾಹನಗಳೊಟ್ಟಿಗೆಯೇ ರಸ್ತೆಯ ಪಾದಚಾರಿ ಮಾರ್ಗದ ಮೇಲೆಯೇ ಈತನ ಪ್ರತಿದಿನದ ಓಟ. ಹೃದಯ ಸಿಡಿದು ಹೊರಬರುವವರೆಗೂ ಓಡುವುದ ನಿಲ್ಲಿಸಲಾರೆ ಎಂಬುವಂತಿರುತ್ತದೆ ಈತನ ಓಟದ ಧಾಟಿ. ಸುಮಾರು ಮೂರ್ನಾಲ್ಕು ಕಿಲೋಮೀಟರ್ನಷ್ಟು ಓಡಿದ ನಂತರ ಕಾಫಿ ಶಾಪೊಂದರ ಮುಂದೆ ಕೂತು ಕೊಂಚ ದಣಿವಾರಿಸಿಕೊಳ್ಳುತ್ತಾನೆ. ಅಲ್ಲೂ ತನ್ನ ಮೊಬೈಲನ್ನು ಹೊರಗೆಳೆದು ಆಫೀಸಿನ ಇಮೇಲ್ ಗಳನ್ನು ನೋಡತೊಡಗುತ್ತಾನೆ. ಆಗಷ್ಟೇ ಡವಡವ ಬಡಿದು ಶಾಂತವಾಗಿದ್ದ ಹೃದಯ, ಕ್ಲೈಂಟ್ ಒಬ್ಬನ ಇಮೇಲ್ ಅನ್ನು ಕಂಡು ಪುನಃ ಬಡಿಯಹತ್ತಿತು. ಇನ್ನೊಂದು ಸುತ್ತು ಓಡಲು ಬಾಕಿ ಇದ್ದರೂ ತನ್ನ ರೂಮಿನೆಡೆ ದಾಪುಗಾಲು ಹಾಕುತ್ತಾನೆ ಮೋಹನ. ರೂಮಿಗೆ ಬಂದವನೆ ಬೆವರಿನ ದಸೆಯಿಂದ ಅಂಟು-ಅಂಟಾಗಿದ್ದ ಬಟ್ಟೆಯನ್ನೂ ಲೆಕ್ಕಿಸದೆ ತನ್ನ ಆಫೀಸಿನ ಲ್ಯಾಪ್ಟಾಪ್ ಅನ್ನು ಹೊರಗೆಳೆದು ಕೆಲಸದಲ್ಲಿ ನಿರತನಾಗುತ್ತಾನೆ. ನೆಟ್ಟ ದೃಷ್ಟಿಯನ್ನು ಒಂತಿಷ್ಟೂ ಕದಲಿಸದೆ, ಕೀಲಿಮಣೆಗಳ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಟಕಟಕ ಕುಟ್ಟಿದ ನಂತರ ಗಡಿಯಾರವನ್ನು ನೋಡುತ್ತಾನೆ, ಸಮಯ ಅದಾಗಲೇ ರಾತ್ರಿ ಹನ್ನೊಂದು! ಕೂಡಲೇ ಎದ್ದು ಪಕ್ಕದ ಹೋಟೆಲಿನಿಂದ ಊಟವೊಂದಕ್ಕೆ ಆರ್ಡರ್ ಕೊಟ್ಟು, ಸ್ನಾನಾದಿಗಳನ್ನು ಮುಗಿಸಿ ಹೊರಬಂದು ಊಟವನ್ನು ಮುಗಿಸುವಷ್ಟರಲ್ಲಿ ಮಧ್ಯರಾತ್ರಿ 12! ಒಂತಿಷ್ಟು ಸುದ್ದಿ ಸಮಾಚಾರಗಳನ್ನು ನೋಡಲು ಟಿವಿಯನ್ನು ಆನ್ ಮಾಡಿದ ಕೂಡಲೇ ಕಣ್ಣುಗಳ ರೆಪ್ಪೆಗಳು ಒಂದನ್ನೊಂದು ತಬ್ಬಿಕೊಳ್ಳತೊಡಗುತ್ತವೆ. ಅದೆಷ್ಟೋ ಬಾರಿ ಹೀಗೆಯೇ ಸೋಫಾದ ಮೇಲೆಯೇ ಬೆಳಗಿನವರೆಗೂ ಕೂತೇ ನಿದ್ರಿಸಿರುವುದುಂಟು! ಬೆಳಗೆದ್ದು ಮತ್ತದೇ ಓಟದ ಜೀವನ. ವಾರ, ವಾರಾಂತ್ಯ ಎಂಬ ಯಾವುದೇ ವ್ಯತ್ಯಾಸಗಳಿಲ್ಲದೆ 24*7 ಕಾಲದ ಕೆಲಸ. ಮೊದ ಮೊದಲು ಕಿರಿಕಿರಿಗುಡುತ್ತಿದ್ದ ಮೋಹನ ಕಾಲ ಕಳೆದಂತೆ ಇದೆ ಜೀವನಕ್ಕೆ ಒಗ್ಗಿಕೊಂಡಿದ್ದಾನೆ. ಅದೆಷ್ಟರ ಮಟ್ಟಿಗೆಂದರೆ ಆಗೊಮ್ಮೆ ಈಗೊಮ್ಮೆ ಸಿಗುವ ರಜೆಯ ಸಮಯವನ್ನೂ ಮನೆಯಲ್ಲಿ ಕಳೆಯಲಾಗದೆ ಆಫೀಸಿಗೆ ಬಂದು ಒಬ್ಬನೇ ಕೆಲಸ ಮಾಡುವುದುಂಟು! ಮತ್ತಷ್ಟು ಓದು 
ಭಗವದ್ಗೀತೆ ಬರ್ನ್, ವಿಚಾರಕ್ರಾಂತಿಯ ಯೂ ಟರ್ನ್?
– ತುರುವೇಕೆರೆ ಪ್ರಸಾದ್
ತುರುವೇಕೆರೆ-572227
ಇಂದು ನಾವು ಕುವೆಂಪುರವರ 114ನೇ ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸುತ್ತಿದ್ದೇವೆ. ಕುವೆಂಪುರವರು ಶ್ರೇಷ್ಠ ಕವಿ, ನಾಟಕಕಾರ, ಕಾದಂಬರಿಕಾರ ಎಲ್ಲವೂ ಆಗಿದ್ದರು. ಭಾವ, ಶ್ರದ್ಧೆ,ಆಧ್ಯಾತ್ಮ ಹಾಗೂ ನವರಸಗಳ ವಿಕಾರ, ವಿಕೃತಿ, ಅಬ್ಬರ, ಆಕ್ರೋಶವಿಲ್ಲದ ಸಮನ್ವಯದ ಅಭಿವ್ಯಕ್ತಿಯ ಸಂತರೆಂದೇ ಅವರನ್ನು ರಸಋಷಿ ಎಂದು ಕರೆಯುವುದು. ಇವೆಲ್ಲಕ್ಕಿಂತ ಹೆಚ್ಚಾಗಿ ಕುವೆಂಪು ತೀವ್ರ ವಿಚಾರವಾದಿಯಾಗಿದ್ದರು. ವಿಚಾರವಾದಿಯಾಗಿದ್ದುಕೊಂಡೇ ಅವರು ಆಧ್ಯಾತ್ಮ ಜೀವಿಯೂ, ಆಧ್ಮಾತ್ಮವಾದಿಯೂ ಆಗಿದ್ದರೆಂಬುದು ಅತ್ಯಂತ ಶ್ರೇಷ್ಠ ಹಾಗೂ ಹೆಗ್ಗಳಿಕೆಯ ಸಂಗತಿ. ವಿಚಾರವಾದಿಯಾಗಿ ಅವರು ಜಾತಿಧರ್ಮ, ವರ್ಣಾಶ್ರಮ ಪದ್ಧತಿಯನ್ನು ಉಗ್ರವಾಗಿ ಖಂಡಿಸುತ್ತಿದ್ದರು. ಅರ್ಥಹೀನ ಆಚರಣೆ, ಮೌಢ್ಯ, ಕಂದಾಚಾರಗಳನ್ನು ಧಿಕ್ಕರಿಸುತ್ತಿದ್ದರು. ಮತ್ತಷ್ಟು ಓದು 
ಶಬರಿಮಲೆ: ಇದು ಹಿಂದೂಗಳ ಸೋಲೇ ?
– ವರುಣ್ ಕುಮಾರ್
ಪುತ್ತೂರು
ಕಳೆದ ಕೆಲ ತಿಂಗಳುಗಳಿಂದ ಚರ್ಚೆಗೆ ಗ್ರಾಸವಾಗಿರುವ ಸುದ್ದಿ ಎಂದರೆ ಅದು ಶಬರಿಮಲೆಗೆ ಮಹಿಳಾ ಪ್ರವೇಶದ ಕುರಿತಾಗಿ ಬಂದಂತಹ ತೀರ್ಪು. ಈ ಕುರಿತಾಗಿ ಚರ್ಚೆಗಳು, ವಾದ- ವಿವಾದಗಳು,ಸಂಭಾಷಣೆಗಳು ಈಗ ಅತಿ ಸಾಮಾನ್ಯ. ಆದರೆ ಶಬರಿಮಲೆಯು ಇಂತಹ ಚರ್ಚೆಗಳಿಗೆ ಗುರಿಯಾಗುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಇದರ ಕುರಿತಾದ ಒಂದು ಸಣ್ಣ ಅವಲೋಕನೆಯು ಈ ಕೆಳಗಿನಂತಿದೆ. ಮತ್ತಷ್ಟು ಓದು 
ಒಂಟಿತನ – ಮುಕ್ತಿ
– ಗೀತಾ ಜಿ. ಹೆಗಡೆ.
ಬದುಕನ್ನು ಒಂಟಿಯಾಗಿ ಎದುರಿಸುತ್ತಿದ್ದೇವಾ? ನಿಜಕ್ಕೂ ನಮಗೆ ಏನು ಬೇಕು ಜೀವಿಸಲು ? ಯಾರ ಅಗತ್ಯ ನಮಗೆ ಹೆಚ್ಚು ? ಒಂಟಿತನ ಕಾಡುವುದು ಯಾವಾಗ ? ಅಥವಾ ಒಂಟಿತನ ಕಾಡಿದಾಗಲೆಲ್ಲ ನಮ್ಮ ಜೊತೆಗಿರುವವರು ಯಾರು ಗಂಡನಾ, ಮಕ್ಕಳಾ, ಸ್ನೇಹಿತರಾ ಬಂಧುಗಳಾ ಅಥವಾ ನೆರೆಹೊರೆಯವರಾ ? ಇದರಿಂದ ಹೇಗೆ ಮುಕ್ತಿ ಹೊಂದಬೇಕು ? ಇವೆಲ್ಲ ಆಗಾಗ ಕಾಡುವ ಪ್ರಶ್ನೆ.
ಇವೆಲ್ಲವೂ ಸತ್ಯವಾಗಿ ಅರಿವಾಗಬೇಕೆಂದರೆ ಕೆಲವು ಸಂದರ್ಭದಲ್ಲಿ ಮಾತ್ರ ಸಾಧ್ಯ. ಅದು ಕಷ್ಟ ಕಾಲದಲ್ಲೂ ಅಲ್ಲ ಅಥವಾ ಕಾಯಿಲೆ ಬಿದ್ದು ನರಳುವಾಗಲೂ ಅಲ್ಲ. ಮತ್ತಷ್ಟು ಓದು 




