ವಿಷಯದ ವಿವರಗಳಿಗೆ ದಾಟಿರಿ

Recent Articles

8
ಜನ

ಹೊಲವನು ಉಳುತಾ ಅಳುವಾ ಯೋಗಿಯ ನೋಡಿಲ್ಲಿ!

– ತುರುವೇಕೆರೆ ಪ್ರಸಾದ್
ಪಂಚವಟಿ
ನಂ.6, 13ನೇ ವಾರ್ಡ್
ಗಾಂಧಿನಗರ
ತುರುವೇಕೆರೆ-572227

5bg1ಇಂದು ಮಾಜಿ ಪ್ರಧಾನಿ ಚೌದುರಿ ಚರಣ್‍ಸಿಂಗ್ ಹೆಸರಲ್ಲಿ ನಾವು ಮತ್ತೊಂದು ರಾಷ್ಟ್ರೀಯ ರೈತ ದಿನವನ್ನು ಆಚರಿಸುತ್ತಿದ್ದೇವೆ. ಆದರೆ ಡಿ.23 ರಾಷ್ಟ್ರೀಯ ರೈತ ದಿನ ಎಂದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ನೆಹರು, ಇಂದಿರಾ, ರಾಜೀವ್ ಜಯಂತಿಯಂತೆ ರೈತ ದಿನಾಚರಣೆ ಬಗ್ಗೆ ಯಾವ ಪಠ್ಯಪುಸ್ತಕದಲ್ಲೂ ಉಲ್ಲೇಖವೂ ಇರಲಿಕ್ಕಿಲ್ಲ. ತಮ್ಮ ಹೆಸರಿನಲ್ಲಿ ಈ ರೀತಿ ಸರ್ಕಾರಗಳು, ಜನಪ್ರತಿನಿಧಿಗಳು ದೊಡ್ಡ ಮನುಷ್ಯರು ರೈತದಿನಾಚರಣೆ ಎಂಬ ನಾಮಕಾವಸ್ಥೆ ಆಚರಣೆ ನಡೆಸುತ್ತಾರೆಂಬುದು ಬಹುಶಃ ಲಕ್ಷಾಂತರ ರೈತರಿಗೇ ಗೊತ್ತಿರಲಿಕ್ಕಿಲ್ಲ. ಟಿಪ್ಪು ಜಯಂತಿಗೆ ಮಾಡಿಕೊಂಡಂತೆ ಸರ್ಕಾರವೇನೂ ವಾರಗಟ್ಟಲೆ ಮುಂಚೆ ರೈತ ದಿನಾಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡ ವರದಿ, ಸುದ್ದಿ ಯಾವ ಪತ್ರಿಕೆಯಲ್ಲೂ ಬರುವುದಿಲ್ಲ. ಇಂತಹ ಒಂದು ದಿನವನ್ನು ಅರ್ಥಪೂರ್ಣವಾಗಿ ಮಾಡಬೇಕು, ಸಂಭ್ರಮದಿಂದ ಆಚರಿಸಬೇಕು, ಅದೊಂದು ರೈತರ ಹಬ್ಬವಾಗಬೇಕು ಎಂದು ಯಾವ ಬುದ್ದಿಜೀವಿಗಳ ದಂಡೂ ಸರ್ಕಾರವನ್ನು ಒತ್ತಾಯಿಸುವುದಿಲ್ಲ. ಅದರ ರೂಪರೇಷೆಗೆ ಸಂವಾದ, ಗೋಷ್ಠಿ, ಚಿಂತನೆಗಳು ನಡೆಯುವುದೂ ಇಲ್ಲ. ಇದೆಲ್ಲಾ ನಮ್ಮ ಅನ್ನದಾತನನ್ನು ನಾವು ಯಾವ ದುಸ್ಥಿತಿಯಲ್ಲಿ ಇಟ್ಟಿದ್ದೇವೆ ಮತ್ತು ಅವನಿಗೆ ನಾವು ಯಾವ ಗೌರವ ಸಲ್ಲಿಸುತ್ತಿದ್ದೇವೆ ಎಂಬುದರ ದ್ಯೋತಕ. ಮತ್ತಷ್ಟು ಓದು »

3
ಜನ

ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳೇ ಮುಖ್ಯಮಂತ್ರಿಗಳೇ?

 – ರಾಕೇಶ್ ಶೆಟ್ಟಿ

ಇಂಗ್ಲೀಷ್ ಸುದ್ದಿ ವಾಹಿನಿಗಳಲ್ಲಿ ತಮ್ಮ ಪ್ಯಾನೆಲ್ ಚರ್ಚೆಗಳ ಮೂಲಕ,ಹಾಗೂ ಪ್ಯಾನೆಲಿಸ್ಟ್-ರಾಜಕಾರಣಿಗಳಿಗೆ ನಿರ್ಭಿತಿಯಿಂದ ಪ್ರಶ್ನೆ ಕೇಳುವ ಮೂಲಕ ದೇಶದ ಗಮನ ಸೆಳೆದ ಪತ್ರಕರ್ತ ಅರ್ನಬ್ ಗೋಸಾಮಿಯವರಂತೆಯೇ ಕರ್ನಾಟಕ ರಾಜ್ಯದ ಪತ್ರಿಕಾ ರಂಗದಲ್ಲಿ ತಮ್ಮ ನೇರಾ ನೇರ ಪ್ರಶ್ನೆಗಳು ಹಾಗೂ ಸತ್ಯ-ನ್ಯಾಯದ ಪರ ದನಿಯಾದವರು ಸುವರ್ಣ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಅಜಿತ್ ಹನಮಕ್ಕನವರ್.ಇವರು ನಡೆಸಿಕೊಡುವ ಲೆಫ್ಟ್-ರೈಟ್-ಸೆಂಟರ್ ಎಂಬ ಚರ್ಚಾ ಕಾರ್ಯಕ್ರಮದಲ್ಲಿ ದಾಖಲೆಗಳನ್ನು ಮುಂದಿಟ್ಟುಕೊಂಡು, ಸುತ್ತಿ ಬಳಸಿ ಹೊಗಳಿಕೆಯ ಮಾತನಾಡದೇ ಸತ್ಯವನ್ನು ಸ್ಪಷ್ಟವಾಗಿ ಹೇಳುವುದು ಅಜಿತ್ ಶೈಲಿ.ಐತಿಹಾಸಿಕ ಸತ್ಯವನ್ನು ನೇರವಾಗಿ ಹೇಳಿದ್ದರಿಂದಾಗಿ ಈಗ ಅಜಿತ್ ಹನಮಕ್ಕನವರ್ ಸಂಕಟದಲ್ಲಿದ್ದಾರೆ.

ಕಳೆದ ಗುರುವಾರ, ಪ್ರೊ.ಭಗವಾನರನ ಕುರಿತ ಚರ್ಚೆಯ ಸಮಯದಲ್ಲಿ,ಭಗವಾನರನ ಪರ ವಹಿಸಿದ್ದ ಮಹೇಶ್ ಚಂದ್ರಗುರು ಅವರ “ಯಾರೂ ಪ್ರಶ್ನಾತೀತರಲ್ಲ” ಎನ್ನುವ ಮಾತಿಗೆ ಪ್ರತಿಯಾಗಿ ಅಜಿತ್, ಹೌದು ಸರ್ ನಿಮ್ಮ ಮಾತು ಒಪ್ಪುತ್ತೇನೆ ಯಾರೂ ಕೂಡ ಪ್ರಶ್ನಾತೀತರಲ್ಲ. ಆದರೆ ಯಾರನ್ನು ಪ್ರಶ್ನಿಸಲು  ನೀವುಗಳು (ಬುದ್ಧಿಜೀವಿಗಳು) ಆರಿಸಿಕೊಳ್ಳುತ್ತೀರಿ ಎಂದರೆ,ಯಾರನ್ನು ಪ್ರಶ್ನಿಸಿದರೆ ಅತ್ಯಂತ ಕಡಿಮೆ ಅಪಾಯ ಆಗಬಹುದೋ ಅಂತವರನ್ನು ಮಾತ್ರ ಆರಿಸಿಕೊಳ್ಳುತ್ತೀರಿ. ರಾಮನನ್ನು ಪ್ರಶ್ನಿಸಬಹುದು.೫೩ ವಯಸ್ಸಿನಲ್ಲಿ ೬ ವರ್ಷದ ಹೆಣ್ಣುಮಗುವನ್ನು ಮದುವೆಯಾದವರನ್ನು ಪ್ರಶ್ನಿಸುವ ಧೈರ್ಯ ನಿಮಗೆ ಬರುವುದಿಲ್ಲ ಎನ್ನುವ ಅರ್ಥದಲ್ಲಿ ಮಾತನ್ನಾಡಿದ್ದರು.ಅಷ್ಟೇ ನೋಡಿ ಶುರುವಾಯಿತು!

ಮತ್ತಷ್ಟು ಓದು »

3
ಜನ

ಮೋದಿರಾಗಾ ಸರಿಸಿ ಮತ ಹಾಕಲು ಮತ್ತೊಂದು ಹೆಸರು ಹೇಳುವಿರಾ?

– ಗೋಪಾಲಕೃಷ್ಣ
ಚಿಕ್ಕಮಗಳೂರು

4CE0D6B8-390C-4E23-889C-7727E2BCC073ಹಾಗೆ ಒಮ್ಮೆ ಕಲ್ಪಿಸಿಕೊಳ್ಳಿ; 2014ರಲ್ಲಿ ನರೇಂದ್ರ ಮೋದಿಯವರಿಗೆ ಬಹುಮತ ಸಿಗದೇ ಇದ್ದಿದ್ದರೆ, 18 ಸ್ಥಾನಗಳನ್ನು ಗೆದ್ದಿದ್ದ ಶಿವಸೇನೆ, 16 ಸದಸ್ಯರನ್ನು ಹೊಂದಿದ್ದ ಚಂದ್ರಬಾಬು ನಾಯ್ಡು, 37 ಸ್ಥಾನ ಹೊಂದಿದ್ದ ಎಐಎಡಿಎಂಕೆ ಹೇಗೆಗೆಲ್ಲಾ ‘ಪೊಲಿಟಿಕಲ್ ಬ್ಲಾಕ್‍ಮೇಲ್’ ಮಾಡಬಹುದಿತ್ತು! ಅಂದು ಎನ್‍ಡಿಎ ಮೈತ್ರಿಕೂಟದ 336 ಸದಸ್ಯರಲ್ಲಿ 282 ಸ್ಥಾನಗಳೊಂದಿಗೆ ಬಿಜೆಪಿ ಸ್ಪಷ್ಟ ಬಹುಮತ ಪಡೆದಿತ್ತು. ಬಿಜೆಪಿ ಎನ್ನುವುದಕ್ಕಿಂತಲೂ ನರೇಂದ್ರ ಮೋದಿಯವರಿಗಾಗಿ ದೇಶ ನೀಡಿದ್ದ ಸ್ಪಷ್ಟ ಜನಾದೇಶವದು. ಹೀಗಿದ್ದರೂ ಶಿವಸೇನೆ ಪ್ರತಿಬಾರಿಯೂ ಕಿತಾಪತಿ ಮಾಡುತ್ತಲೇ ಬರುತ್ತಿದೆ. ಚಂದ್ರಬಾಬು ನಾಯ್ಡು ಅತ್ತಲಿಂದ ಇತ್ತ ಇತ್ತಲಿಂದ ಅತ್ತ ಜಿಗಿಯುತ್ತಲೇ ಇದ್ದಾರೆ. ಇನ್ನು ಜಯಲಲಿತಾ ಬದುಕಿದ್ದಿದ್ದರೆ ಅದು ಇನ್ನೊಂದು ರೀತಿಯ ರಾಜಕಾರಣವಾಗುತ್ತಿತ್ತು ಬಿಡಿ. ಮತ್ತಷ್ಟು ಓದು »

2
ಜನ

ಕನ್ನಡಿಗನೊಬ್ಬನ ಕ್ಲಾಸಿಕ್ ವಿಮಾನಗಳು ಆಗಸದಲ್ಲಿ ಹಾರುವುದನ್ನು ನೋಡಲು ಇನ್ನೆಷ್ಟು ದಶಕಗಳು ಕಾಯಬೇಕೋ?!

– ಸುಜಿತ್ ಕುಮಾರ್

Kingfisher_Airlines‘ಈತ ನಮ್ಮ ನೂರು ಬಿಲಿಯನ್ ಕಂಪನಿಯ ಚೇರ್ಮ್ಯಾನ್. ಅಪ್ಪನ ಕಂಪನಿಯನ್ನು ಮುನ್ನಡಿಸಿಕೊಂಡು ಬಂದು ಎದ್ವಾ ತದ್ವಾ ಸಾಲವನ್ನು ಮಾಡಿ ತೀರಿಸಲಾಗದೆ ಇಂದು ವಿದೇಶದಲ್ಲಿ ಅಡಗಿ ಕೂತಿದ್ದಾನೆ. ಆತ ಮಾಡಿರುವ ಸಾಲದ ಮೊತ್ತ ಹೆಚ್ಚು ಕಡಿಮೆ ನಮ್ಮ ಇಡೀ ಕಂಪನಿಯ ರೆವೆನ್ಯೂ ಮೊತ್ತಕ್ಕೆ ಸಮ. ನಮ್ಮ ಕಂಪನಿಯನ್ನಷ್ಟೇ ಅಲ್ಲದೆ ನಮ್ಮನ್ನು ನಂಬಿಕೊಂಡು ಕೂತಿರುವ ಇನ್ನೂ ಹತ್ತಾರು ಕಂಪನಿಗಳ ಭವಿಷ್ಯದೊಟ್ಟಿಗೆ ಚೆಲ್ಲಾಡಿ ಮರೆಯಾದವನಿವ’ ಎಂಬ ಮಾತುಗಳಿಗೆ ಪೂರಕವಾಗಿರುವ ಹಾಗು ಅದೇ ಪೇಜಿನಲ್ಲಿ ಕಂಪನಿಯ ಇತರ ಉದ್ಯೋಗಿಗಳನ್ನು Mr. ಅಥವ Mrs. ಎಂಬ ಗೌರವ ಸೂಚಕಗಳನ್ನು ಬಳಸಿ ಸಂಭೋದಿಸಿವುದು ಒಂದೆಡೆಯಾದರೆ ಇನ್ನೊಂದೆಡೆ ಅಲ್ಲೇ ಕಂಪನಿಯ ಚೇರ್ಮ್ಯಾನ್ ನನ್ನು ಕೇವಲ ಹೆಸರಿನಿಂದಷ್ಟೇ ಕರೆಯುವ ಕಂಪನಿಯ ವೆಬ್ಸೈಟ್ ಅನ್ನು ಎಲ್ಲಿಯಾದರೂ ಕಂಡಿರುವಿರಾ? ಇಲ್ಲವಾದರೆ ಒಂದು ಕಾಲಕ್ಕೆ ಇಡೀ ವಿಶ್ವದಲ್ಲೇ ಟಾಪ್ ಸ್ಪಿರಿಟ್ ಕಂಪನಿಗಳಲ್ಲಿ ಒಂದಾಗಿ ಇಂದು ಅಕ್ಷರ ಸಹ ತನ್ನ ಉಳಿವಿಗಾಗಿ ಪರದಾಡುತ್ತಿರುವ ಯುಬಿ.ಗ್ರೂಪ್ಸ್ ನ ವೆಬ್ಸೈಟ್ ಗೆ ಒಮ್ಮೆ ಭೇಟಿ ಕೊಡಿ. ತನಗೆ ಅನ್ನ ಕೊಟ್ಟ ಒಡೆಯನಾದರೂ, ತಪ್ಪು ಮಾಡಿದಾಗ ಆತನನ್ನು ಕಳ್ಳನೆಂದೇ ಕರೆಯುತ್ತೀವಿ ಎಂಬಂತಿದೆ ಅಲ್ಲಿಯ ಬೋರ್ಡ್ ಆಫ್ ಡೈರೆಕ್ಟರ್ ಗಳ ಮಾತುಗಳು. ಮತ್ತಷ್ಟು ಓದು »

21
ಡಿಸೆ

ಮೋದಿ ಮತ್ತೊಮ್ಮೆ ಎನ್ನುವುದಕ್ಕಿಂತ, ಮೋದಿ ಮತ್ತೆ ಮತ್ತೆ ಎನ್ನಿ!

– ಸಾಗರ ಮುಧೋಳ

4CE0D6B8-390C-4E23-889C-7727E2BCC073ಕಳೆದ ಒಂದು ದಶಕದ ಹಿಂದೆ ಯಾರಾದರೂ ಒಬ್ಬ ವಿದ್ಯಾರ್ಥಿ ಅಥವಾ ಯುವಕ ತಾನೂ ಜೀವನದಲ್ಲಿ ಉನ್ನತವಾದುದನ್ನು ಸಾಧಿಸಬೇಕು ಅಂದುಕೊಂಡಿದ್ದರೆ, ಅದು ಅವನ ದೃಷ್ಟಿಯಲ್ಲಿ ವಿಜ್ಞಾನಿ, ಅಧ್ಯಾಪಕ, ಅಧಿಕಾರಿ, ವೈದ್ಯ ಹೀಗೆ ಹಲವು ಬಗೆಯಲ್ಲಿ ಯೋಚಿಸುತ್ತಿದ್ದ. ಆದರೆ, ತಪ್ಪಿಯೂ ನಾನೊಬ್ಬ ರಾಜಕಾರಣಿಯಾಗಬೇಕೆಂದು ಚಿಂತಿಸುತ್ತಿರಲಿಲ್ಲ. ರಾಜಕಾರಣವೆಂದರೆ ಅದೊಂದು ಸಮಾಜದ ಬಹು ಜನರ ಆಶೋತ್ತರಗಳಿಂದ ಅಸ್ಪೃಶ್ಯವಾಗಿಯೇ ಉಳಿದ ಕ್ಷೇತ್ರ. ಅಲ್ಲಿ ಮಾನವೀಯತೆ, ಪ್ರಾಮಾಣಿಕತೆ, ಒಳ್ಳೆಯತನಕ್ಕೆ ಬೆಲೆಯೇ ಇಲ್ಲ. ರಾಜಕಾರಣವಿರುವುದೇ ದುಡ್ಡು ಮಾಡುವುದಕ್ಕೆ, ಜನರನ್ನು ಮೋಸ ಮಾಡುವುದಕ್ಕೆ ಎನ್ನುವುದು ನಾಡಿನ ಹಲವರಿಂದ ಅಸ್ಖಲಿತವಾಗಿ ಹೊಮ್ಮುತ್ತಿದ್ದ ವಾಣಿ. ಯಾರೊಬ್ಬರೂ ಊಹಿಸಿರಲಿಲ್ಲ! 2014 ರ ಸಂದರ್ಭದಿಂದ ಈ ದೇಶದಲ್ಲಿ ಬಾಲಿವುಡ್, ಕ್ರಿಕೆಟ್ ಗಿಂತ ಅತಿ ಹೆಚ್ಚು ಚರ್ಚೆ ಮತ್ತು ಮೆಚ್ಚುಗೆ ಪಡೆದ ವಿಷಯ ರಾಷ್ಟ್ರದ ರಾಜಕೀಯವೇ ಆಯಿತು. ಮೋದಿ ಎಂದರೆ ಅವರೊಬ್ಬ Political leader ಅಲ್ಲ, ಬದಲಾಗಿ ದೇಶದ ಬ್ರಾಂಡ್! ಮೋದಿ ಟೀ,ಮೋದಿ ಕುರ್ತಾ,ಮೋದಿ ಜಾಕೆಟ್ ಎಲ್ಲವೂ ಬ್ರಾಂಡ್. ಮೋದಿಗೆ ಸಂಬಂಧಿಸಿರುವುದೆಲ್ಲವು ಬ್ರಾಂಡ್. ಹಿಂದೆ ಅಪ್ಪ -ಅಮ್ಮ ಮನೆಯಲ್ಲಿ ರಾತ್ರಿ ನ್ಯೂಸ್ ನೋಡುತ್ತಿರಬೇಕಾದರೆ, ತಮ್ಮನ್ನು ಇಂದಿನ ಕ್ರಿಕೆಟ್ ಮ್ಯಾಚನ್ನು ನೋಡುವುದರಿಂದ ತಪ್ಪಿಸಿರುವವರ ಕಡೆ ಮಕ್ಕಳು ಶಪಿಸುತ್ತಾ ಮೂಗು ಮುರಿಯುತ್ತಿದ್ದರು. ಆದರೆ ಮೋದಿ ಎಂಟ್ರಿ ಕೊಟ್ಟ ಮೇಲೆ ಸಕುಟುಂಬ ಸಮೇತರಾಗಿ ಮನೆಯ ಟಿ.ವಿ. ಪರದೆಯ ಮೇಲೆ ಮೋದಿ ಗಾಥೆಯನ್ನು ನೋಡಲು ಶುರುಹಚ್ಚಿದರು. 2014 ರಲ್ಲಿ ಮೋದಿ ಗೆಲ್ಲುವುದು ಅನಿವಾರ್ಯ ಮಾತ್ರವಲ್ಲ, ಅಂತಿಮವಾದ ಪೂರ್ವ ನಿಯೋಜಿತ ತೀರ್ಮಾನವಾಗಿತ್ತು. Breaking news ಗಾಗಿ ಹಪಹಪಿಸುತ್ತಿದ್ದ ನ್ಯೂಸ್ ಚಾನೆಲ್ ಗಳಿಗೆ ಮೋದಿಯಿಂದ ಪ್ರತಿದಿನ Breaking news ಸಿಗುವ ಹಾಗಾಯಿತು. ಕೊನೆಗೆ ಮೋದಿ ಸುನಾಮಿಯ ಎದುರು ಪ್ರತಿಪಕ್ಷಗಳು ಕೊಚ್ಚಿಕೊಂಡು ಹೋದವು. ಅತ್ತ ನಾಯಕತ್ವವುಯಿಲ್ಲದೆ, ಇತ್ತ ಧ್ಯೇಯೋದ್ದೇಶಗಳು ಇಲ್ಲದ ಪ್ರತಿಪಕ್ಷಗಳು ಮೋದಿಯ ವಿಜಯಕ್ಕೆ ತಲೆ ಬಾಗಲೇ ಬೇಕಾಯಿತು. ಮೋದಿ ಈ ದೇಶದ ಪ್ರಧಾನಮಂತ್ರಿ ಎಂದು ಜನ ಹೇಳುತ್ತಿರುವಾಗ, ” ನಾನು ಈ ದೇಶದ ಪ್ರಧಾನಮಂತ್ರಿಯಲ್ಲ, 125 ಕೋಟಿ ಭಾರತೀಯರ ಪ್ರಧಾನ ಸೇವಕ” ಎಂದ ಮೋದಿಯ ಕೃತಜ್ಞತಾ ಭಾವಕ್ಕೆ ಇಡೀ ದೇಶ ಶರಣೆಂದಿತು. ಮತ್ತಷ್ಟು ಓದು »

19
ಡಿಸೆ

820 ಗುಳಿಗೆಗಳನ್ನು ತಿನ್ನಿಸಿ ಪರಾರಿಯಾದ 420

– ಸುಜಿತ್ ಕುಮಾರ್

rtxg4p0_1432726241_725x725ತಿಹಾರ್ ಜೈಲು. ಬಹುಶಃ ಈ ಹೆಸರನ್ನಿಂದು ಕೇಳಿರದವರಿರಲು ಸಾಧ್ಯವೇ ಇಲ್ಲ. ದೇಶ-ವಿದೇಶದ ಹೈ ಪ್ರೊಫೈಲ್ ನಟೋರಿಯಸ್ ಕ್ರಿಮಿನಲ್ ಗಳನ್ನು ಬಂಧಿಸುವ ಈ ಕಾರಾಗೃಹ ದೇಶದ ಅಷ್ಟೂ ಜೈಲುಗಳಿಗಿಂತಲೂ ಅತಿ ಹೆಚ್ಚಿನ ಭದ್ರತೆಯನ್ನೊಳಗೊಂಡ ಚಕ್ರವ್ಯೂಹವೆಂದೇ ಹೇಳಬಹುದು! ಅಪ್ಪಿ-ತಪ್ಪಿ ಒಂದು ಇಲಿಮರಿಯೂ ಸಹ ಒಳಹೊಕ್ಕರೆ ಹೊರ ಬರಲು ಪೇಚಾಡುವಂತಹ ಭದ್ರತೆಯ ಈ ಜೈಲಿನಿಂದ ಎಸ್ಕೇಪ್ ಆಗುವುದೆಂದರೆ ಆತ ಒಬ್ಬ ದೇವದೂತನಾಗಿರಬೇಕೇ ವಿನಃ ಸಾಮಾನ್ಯ ವ್ಯಕ್ತಿಯಾಗಿರಲಂತೂ ಸಾಧ್ಯವೇ ಇಲ್ಲ! ಆದರೂ, ಅಲ್ಲೊಬ್ಬ ಇಲ್ಲೊಬ್ಬ ಕೋಟಿಗೊಬ್ಬನಂತಹ  ಕಿಲಾಡಿಗಳು ಇಲ್ಲೂ ಸಹ ತಮ್ಮ ಕೈಚಳಕವನ್ನು ತೋರಿ ಅಂತಹ ಭಾರಿ ಭದ್ರತೆಯ ಕೋಟೆಯನ್ನೇ ಮೀಟಿ ಪರಾರಿಯಾದದ್ದುಂಟು. ಇಂತಹ ಪ್ರತಿಭಾನ್ವಿತ ದೇಹದೂತರ ಕೆಲ ರೋಚಕ ಕತೆಗಳು ದೇಶದ ಇತಿಹಾಸದಲ್ಲಿ ಇಂದು ಹಚ್ಚಳಿಯಾಗಿ ಉಳಿದುಕೊಂಡಿವೆ. ಆ ಪ್ರತಿಭಾನ್ವಿತ ಕ್ರಿಮಿನಲ್ಗಳ ದೇಶೀ / ವಿದೇಶಿ ಕ್ಯಾರೆಕ್ಟರ್ ಗಳು ಇಂದು ದೇಶ ವಿದೇಶದ ಹಲವಾರು ಚಿತ್ರಗಳಲ್ಲಿ ನಾಯಕನಟರಾಗಿ ನಟಿಸಿ ಹಲವೆಡೆ ‘ಸ್ಫೂರ್ತಿ’ದಾಯಕವೂ ಆಗಿವೆ ಎಂದರೆ ಅದು ನಮ್ಮೆಲ್ಲರ ವಿಪರ್ಯಾಸವೇ ಸರಿ! ಮತ್ತಷ್ಟು ಓದು »

18
ಡಿಸೆ

ಸುದ್ದಿಮನೆಯ ಸ್ವಗತಗಳು

– ಹುಳಗೋಳ ನಾಗಪತಿ ಹೆಗಡೆ
ಸಹಾಯಕ ಶಿಕ್ಷಕ
ಪಿ.ಎಮ್. ಹೈಸ್ಕೂಲ್
ಅಂಕೋಲಾ – 581314
ಉತ್ತರ ಕನ್ನಡ ಜಿಲ್ಲೆ

newspaper-editor-clipart-1ಬದುಕಿನಲ್ಲಿ ಹಾಸ್ಯ ಸನ್ನಿವೇಶಗಳು, ವಿನೋದ ಪ್ರಸಂಗಗಳು ಕಾಣದ ಕ್ಷೇತ್ರಗಳೇ ಇಲ್ಲ. ಈ ಮಾತಿಗೆ ಸುದ್ದಿಮನೆ ಅಂದರೆ ವರ್ತಮಾನ ಪತ್ರಿಕೆಗಳ ಮುದ್ರಣಾಲಯಗಳೂ ಹೊರತಲ್ಲ. ಅತ್ಯಂತ ಜಾಗರೂಕತೆಯಿಂದಲೇ ಕಾರ್ಯನಿರ್ವಹಿಸಿದರೂ ಸಿಬ್ಬಂದಿಗಳ ತಪ್ಪು ಗ್ರಹಿಕೆಯಿಂದಲೋ, ಅಜಾಗರೂಕತೆಯಿಂದಲೋ ಇಲ್ಲಿಯೂ ಕೆಲವು ಅಧ್ವಾನಗಳು ನಡೆದುಹೋಗುತ್ತವೆ. ಅವುಗಳಲ್ಲಿ ಕೆಲವು ಗಂಭೀರವಾದ ಪರಿಣಾಮವನ್ನುಂಟು ಮಾಡಿ ಕೋರ್ಟಿನ ಮೆಟ್ಟಿಲು ಹತ್ತಿಸಿ ಹೊಗೆಯಾಗಿ ಕಾಡುವುದೂ ಉಂಟು. ಇನ್ನೂ ಕೆಲವು ನಗೆಯಾಗಿ ಹಾರಿಹೋಗುವುದೂ ಉಂಟು. ಮತ್ತಷ್ಟು ಓದು »

11
ಡಿಸೆ

ಬಾರ್ಡರ್-ಗವಾಸ್ಕರ್ ಸರಣಿ : ಅಂದು – ಇಂದು!

– ಸುಜಿತ್ ಕುಮಾರ್

ಸ್ಥಳ : ಕೊಲ್ಕತ್ತಾ. ಮಾರ್ಚ್ 15, 2001.

ಮೊದಲ ಇನ್ನಿಂಗ್ಸ್ :
ಆಸ್ಟ್ರೇಲಿಯ : 445/10
ಭಾರತ : 212/10

ಎರಡನೇ ಇನ್ನಿಂಗ್ಸ್ 😦 ಫಾಲೋ ಆನ್ )
ಭಾರತ : 657/7 (D)
ಆಸ್ಟ್ರೇಲಿಯ : 171/10

556780-vvs-laxman-rahul-dravid-2000-01-1495913138-800ಆ ದಿನದ ಸೂರ್ಯ ಪಶ್ಚಿಮದಲ್ಲಿ ಮರೆಯಾಗುತ್ತಾ ಕ್ರಿಕೆಟ್ ಲೋಕದ ಮಹಾ ಅಚ್ಚರಿಯೊಂದಕ್ಕೆ ಸಾಕ್ಷಿಯಾದನು. ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ಆ ಟೆಸ್ಟ್ ಭಾರತದ ಪಾಲಿಗಂತೂ ವಿಶ್ವಕಪ್ನನ್ನೇ ಗೆದ್ದು ಬೀಗಿದ ಅನುಭವವನ್ನು ನೀಡಿತು. ಅಂದು ಕೋಲ್ಕತ್ತದ ಆಗಸ ರಂಗು ರಂಗಿನ ಪಟಾಕಿಗಳಿಂದ ಶೃಂಗಾರಗೊಳ್ಳುತ್ತಿದ್ದರೆ ಇತ್ತ ಕಡೆ ಇಡೀ ದೇಶವೇ ಹಬ್ಬದ ವಾತಾವರಣವೇನೋ ಎಂಬ ಸಂಭ್ರಮದಲ್ಲಿ ನಲಿಯಿತು. V V S ಲಕ್ಷ್ಮಣ್, ಹರ್ಭಜನ್ ಸಿಂಗ್ ಹಾಗು ರಾಹುಲ್ ದ್ರಾವಿಡ್ ಅಂದು ಖಾನ್, ರೋಷನ್ ಹಾಗು ಬಚ್ಚನ್ ರೆಲ್ಲರನ್ನೂ ಹಿಂದಿಕ್ಕಿ ದೇಶದ ಜನಮಾನಸದಲ್ಲಿ ಹೀರೋಗಳಾಗಿಬಿಟ್ಟರು. ಒಟ್ಟು 557 ರನ್ಗಳು ಹಾಗು 13 ವಿಕೆಟ್ಗಳ ಈ ಮೂವರ ಆಟ ಅಂದು ವಿಶ್ವ ಕ್ರಿಕೆಟ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂಬ ಸ್ಲೋ ಪಾಯಿಸನ್ನಿಂದ ನೇಪಥ್ಯಕ್ಕೆ ಸೇರುತ್ತಿದ್ದ ಭಾರತೀಯ ಕ್ರಿಕೆಟ್ನ ಪುನರ್ಜನ್ಮಕ್ಕೆ ಕಾರಣವಾಯಿತು. ಹೈಡೆನ್, ಲ್ಯಾಂಗರ್, ಪಾಂಟಿಂಗ್, ವಾ ಬ್ರದರ್ಸ್, ಗಿಲ್ಕ್ರಿಸ್ಟ್, ವಾರ್ನ್, ಗಿಲ್ಲೆಸ್ಪಿ, ಮೆಗ್ರಾತ್ ಎಂಬ ಕ್ರಿಕೆಟ್ ದಂತಕತೆಗಳೇ ತುಂಬಿದ್ದ ತಂಡವೊಂದನ್ನು ಫಾಲೋ ಆನ್ ನ ಹೊರತಾಗಿಯೂ ಸಿನಿಮೀಯ ರೀತಿಯಲ್ಲಿ ಸೋಲಿಸುವುದು ಅಂದಿನ ಕಾಲಕಷ್ಟೆ ಅಲ್ಲದೆ ಇಂದಿಗೂ ಸಹ ಸಾಮಾನ್ಯದ ಮಾತಲ್ಲ. ಮೊದಲ ಟೆಸ್ಟ್ ನಲ್ಲಿ ಸೋತು ಎರಡನೇ ಟೆಸ್ಟನ್ನು ಇಲ್ಲಿ ದಾಖಲೆಯ ಅಂಕಿ ಅಂಶಗಳೊಟ್ಟಿಗೆ ಗೆದ್ದ ಭಾರತ ಅದೇ ಆತ್ಮವಿಶ್ವಾಸದಲ್ಲಿ ಮೂರನೆಯ ಹಾಗು ಅಂತಿಮ ಟೆಸ್ಟನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಂಡಿತು. ಆ ಮೂಲಕ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕಾಂಗರೂಗಳ ಮೂರು ದಶಕದ ಕನಸಿಗೆ ತಣ್ಣಿರೆರಚಿತು! ಮತ್ತಷ್ಟು ಓದು »

6
ಡಿಸೆ

ಅರುಣ್ ನಂದಗಿರಿಯ ಆನಂದದ ಗೆರೆಗಳು!

– ತುರುವೇಕೆರೆ ಪ್ರಸಾದ್

Arun Nandagiri-2ಮಿತ್ರ ಅರುಣ್ ನಂದಗಿರಿ ವಿಧಿವಶರಾದರು ಎಂದು ಕೇಳಿ ಬಹಳ ದುಃಖವಾಯಿತು. ‘ Smile is a small curve which makes many things straight’ ಅನ್ನೋ ಒಂದು ಮಾತಿದೆ. ಅಂದ್ರೆ ನಗು ಎನ್ನುವ ಒಂದು ಸಣ್ಣ ವಕ್ರಗೆರೆ ಬದುಕಿನ ಎಷ್ಟೋ ಸಂಗತಿಗಳನ್ನು, ಡೊಂಕುಗಳನ್ನ ನೇರ ಮಾಡುತ್ತದೆ ಅಂತ. ಸ್ನೇಹಿತ ಅರುಣ್ ನಂದಗಿರಿ ತನ್ನ ಮೂಳೆಗಳೆಲ್ಲಾ ವಕ್ರವಾಗಿದ್ದರೂ ಸಹ ಜನರ ಬದುಕಿನ ಅಸಂಬದ್ಧತೆಗಳನ್ನ ತನ್ನ ನಗೆ ಗೆರೆಗಳ ಮೂಲಕ ನೇರವಾಗಿಸುವ ಛಲದಂಕ ಮಲ್ಲರಾಗಿದ್ದರು. ಮತ್ತಷ್ಟು ಓದು »

4
ಡಿಸೆ

ಸಂಸದರ ಸಮೇತ ಇಡೀ ಪಾರ್ಲಿಮೆಂಟನ್ನೇ ಮಾರಿದ ಭೂಪನೀತ!!

– ಸುಜಿತ್ ಕುಮಾರ್

imagesಪ್ರತಿಭೆ. ಎಲ್ಲೆಂದರಲ್ಲಿ ಎಲ್ಲರಿಗೂ ಸಿಗುವ ವಸ್ತುವಂತು ಇದು ಅಲ್ಲವೇ ಅಲ್ಲ. ಹುಟ್ಟುತ್ತಲೇ ಬರುವ ಪ್ರತಿಭೆಯನ್ನು ಹೇಗೆ ಪ್ರತಿಭೆಯೆಂದೆನ್ನಲಾಗದೋ ಹಾಗೆಯೇ ಕಷ್ಟ ಪಟ್ಟು ಗಿಟ್ಟಿಸಿಕೊಳ್ಳುವ ಪ್ರತಿಭೆಯನ್ನು ಪ್ರತಿಭೆಯೆಂದೆನ್ನಲಾಗದಿರದು! ಹಾಗೆ ಅದನ್ನು ಅದನ್ನು ಗಿಟ್ಟಿಸಿಕೊಳ್ಳಲು ಸವೆಸಬೇಕಾದ ಹಾದಿಯೂ ಸಹ ಬಲು ದುರ್ಘಮ. ಒಮ್ಮೆ ದೊರೆತರೆ ಮೇಲು-ಕೀಳು, ಬಡವ-ಬಲ್ಲಿದ, ಕಳ್ಳ ಕಾಕರ್ಯಾರನ್ನೂ ಸಹ ಅದು ಪರಿಗಣಿಸುವುದಿಲ್ಲ. ಕಾರ್ಯಗಳು ಒಳ್ಳೆವೋ, ಕೆಟ್ಟವೋ ಅಥವಾ ಉಪಯೋಗ ದುಷ್ಪಾರಿಣಾಮಗಳೇನೇ ಇದ್ದರೂ ಲೆಕ್ಕಿಸದೆ ಆಡಿಸುವವನ ಕೈಚಳಕದಲ್ಲಿ ಪ್ರತಿಭೆಯೂ ಕೂಡ ಆಡತೊಡಗುತ್ತದೆ. ವಿಶ್ವೇಶ್ವರೈಯ್ಯ, ಸತ್ಯಜಿತ್ ರೇ, ವಿರಾಟ್ ಕೊಹ್ಲಿ ಅಥವಾ ಧೀರೂಭಾಯಿ ಅಂಬಾನಿಯಂತಹ ಹಲವರೊಟ್ಟಿಗಿದ್ದ/ಇರುವ ವಿಭಿನ್ನ ಹಾಗು ವಿಶಿಷ್ಟ ಪ್ರತಿಭೆಯೇ ಅವರನ್ನು ಇಂದು ದೇಶದ ಇತಿಹಾಸದಲ್ಲಿ ದಂತಕತೆಗಳನ್ನಾಗಿ ಮಾಡಿದೆ. ಅಂತೆಯೇ ವೀರಪ್ಪನ್, ಸದ್ದಾಂ ಹುಸೇನ್, ಒಸಾಮಾ ಬಿನ್ ಲಾಡೆನ್ರಂತಹ ನರರಾಕ್ಷಸರ ಕೈಯ ಬೆಂಕಿಯ ಉಂಡೆಯಂತೆಯೂ ಅದು ಸಾವಿರಾರು ಜನರ ವಂಚನೆ ಹಾಗು ಮಾರಣಹೋಮದಲ್ಲಿ ಪರೋಕ್ಷವಾಗಿಯೂ ಸಹಕರಿಸಿದೆ! ಇಂತಹದ್ದೇ ಪ್ರತಿಭೆಯನ್ನು ಬೆಳೆಸಿಕೊಂಡು ಬಂದ ಹಲವರು ದೇಶದ ನಾನಾ ಜೈಲುಗಲ್ಲಿ ಬಂದಿಯಾಗಿ, ಶಿಕ್ಷೆಗಳೆಲ್ಲವನ್ನೂ ಅನುಭವಿಸಿದರೆ ಕೆಲವರು ಅಲ್ಲಿಯೇ ಕೊಳೆತು ಕೊನೆಯುಸುರೆಳೆದಿದ್ದಾರೆ. ಇನ್ನು ಕೆಲವರು ತಮ್ಮ ಕೊನೆಗಾಲದಲ್ಲಿ ಕುಂಟುತ್ತಾ ಕೊರಗುತ್ತಾ ಹೊರಬರುತ್ತಾರೆ ಮತ್ತೂ ಕೆಲವರು ಮಾತ್ರ ಒಂದಲ್ಲ, ಎರಡಲ್ಲ ಹತ್ತಾರು ಭಾರಿ ಅಂತಹ ಭಾರಿ ಜೈಲುಗಳಿಗೇ ಚಳ್ಳೆಹಣ್ಣನು ತಿನ್ನಿಸಿ ಹೊರ ಓಡಿರುವುದೂ ಉಂಟು. ಅಲ್ಲೂ ಇದ್ದ ಆ ಅಮೂಲ್ಯ ಅಂಶವೇ ಪ್ರತಿಭೆ! ಇಂತಹ ಪ್ರತಿಭೆಗಳ ಮಾಸ್ಟರ್ ಗೇಮ್ಗಳನ್ನು ನಾವು ಹಲವಾರು ಚಿತ್ರಗಳಲ್ಲಿ ಕಂಡು ಬೆರಗಾಗಿದ್ದೇವೆ. ಅಂತಹ ಪ್ರತಿಭೆಯುಳ್ಳವನು ಒಬ್ಬ ವಿಲನ್ ನಂತಾದರೂ ನೋಡುಗರನೇಕರಿಗೆ ಮಾತ್ರ ನಾಯಕಶ್ರೇಷ್ಠ! ಮತ್ತಷ್ಟು ಓದು »