ಕಾರ್ಗಿಲ್ ವಿಜಯೋತ್ಸವ ಕಲಿಸಿದ ಪಾಠಗಳು
– ಅಜಿತ್ ಶೆಟ್ಟಿ ಹೆರಂಜೆ
ಇಂದು ಕಾರ್ಗಿಲ್ ವಿಜಯ ದಿವಸದ ವರ್ಷಾಚರಣೆಯನ್ನು ನಾವು ದೇಶದಾದ್ಯಂತ ಮಾಡುತ್ತಿದ್ದೇವೆ. 1999ಮೇ ತಿಂಗಳಲ್ಲಿ ಪ್ರಾರಂಭವಾದ ಈ ಯುದ್ಧ ಸುಮಾರು 3 ತಿಂಗಳುಗಳ ಕಾಲ ನಡದು 27 ನೆ ಜುಲೈ 1999 ಕ್ಕೆ ಮುಕ್ತಾಯಗೊಂಡಿತು. ಈ ಭೀಷಣ ಯುದ್ಧದಲ್ಲಿ ಭಾರತ ಒಟ್ಟು ತನ್ನ 724 ವೀರ ಸೈನಿಕರನ್ನು ಕಳೆದುಕೊಂಡಿತು. ಈ ಯುದ್ಧಕ್ಕೆ ಪ್ರತಿ ದಿನ ಸರ್ಕಾರಕ್ಕೆ 10 ರಿಂದ 15 ಕೋಟಿಯಷ್ಟು ವೆಚ್ಚವಾಗಿತ್ತು. ಹಾಗಿದ್ದಾಗ ಈ ಯುದ್ಧಕ್ಕೆ ಸರ್ಕಾರ ಖರ್ಚು ಮಾಡಿದ ಒಟ್ಟು ವೆಚ್ಚ ನೀವೇ ಅಂದಾಜಿಸಿ. ಈ ಯುದ್ಧ ನಮಗೆ ಕಲಿಸಿದ ಪಾಠ ಅನೇಕ. ಅದರಲ್ಲೂ 21ನೆ ಶತಮಾನದ ಹೊಸ್ತಿಲಿನಲ್ಲಿ ನಡೆದ ಈ ಯುದ್ಧ, ಯಾವುದೇ ಯುದ್ಧವನ್ನು ಗೆಲ್ಲಲು ಕೇವಲ ಸೈನ್ಯ ಶಕ್ತಿ ಅಷ್ಟೇ ಅಲ್ಲ ಅತ್ಯಾಧುನಿಕ ತಂತ್ರಜ್ಞಾನವೂ ಅತ್ಯಂತ ಆವಶ್ಯಕ ಎನ್ನುವ ಪಾಠವನ್ನು ನಮ್ಮ ದೇಶ ರಾಜಕೀಯ ನಾಯಕರಿಗೆ ಕನ್ನಡಿ ತೋರಿಸಿ ಕೆನ್ನೆಗೆ ಬಾರಿಸಿ ಹೇಳಿತು.ಕಾರ್ಗಿಲ್ ಯುದ್ಧ ನಮಗೆ ಕಲಿಸಿದ ಮತ್ತು ನಾವು ಅದರಿಂದ ಕಲಿತ ಪಾಠವೇನು.? ಬನ್ನಿ ತಿಳಿಯೋಣ.
ಸಾಮಾನ್ಯವಾಗಿ ಯುದ್ಧವನ್ನು ಗೆಲ್ಲಬೇಕಾದರೆ ವೈರಿ ಪಡೆಯನ್ನು ಕಟ್ಟಿ ಹಾಕಿ ಅವರ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕಿದಮೇಲೆ, ವೈರಿಗಳ ವಿರುದ್ಧ ಯಾವ ರೂಪದ ಕಾರ್ಯಾಚರಣೆ ಮಾಡಬೇಕು, ಅದಕ್ಕೆ ಬೇಕಾಗಿರುವ ಸೈನ್ಯದ ಸಂಖ್ಯೆ ಅವರಿಗೆ ಬೇಕಾದ ಶಸ್ತ್ರಾಸ್ತ್ರಗಳು ಇತ್ಯಾದಿಗಳನ್ನು ನಿರ್ಧರಿಸಿದಮೇಲಷ್ಟೇ ಯುದ್ಧ ತಂತ್ರ ರೂಪಿಸುವುದು. ದುರಾದೃಷ್ಟವಶಾತ್ ಕಾರ್ಗಿಲ್ ಯುದ್ಧ ಆರಂಭವಾಗಿ ಅದನ್ನು ಬಹುತೇಕ ಮುಗಿಸುವ ತನಕ ನಮಗೆ ನಿಖರವಾಗಿ ಶತ್ರುಗಳು ಯಾರು ಅವರು ನಿಜವಾಗಿಯೂ ಪಾಕಿಸ್ತಾನ ಹೇಳಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿ ಉಗ್ರಾವಾದಿಗಳೋ ಅಥವಾ ಪಾಕಿಸ್ತಾನದ ಸೈನಿಕರೋ ಅನ್ನುವುದು ಮತ್ತು ಈ ವೈರಿ ಪಡೆಯ ಸಂಖ್ಯೆ ಎಷ್ಟು ಇವರು ಅಡಗಿರುವ ಆಯಕಟ್ಟಿನ ಸ್ಥಳಗಳು ಯಾವುದು, ಅವರಲ್ಲಿ ಎಷ್ಟು ಮದ್ದು ಗುಂಡುಗಳ ದಾಸ್ತಾನುಗಳಿವೆ. ಅವರಲ್ಲಿ ಇರೋ ಶಸ್ತ್ರಾಸ್ತ್ರಗಳ ಬಗ್ಗೆ ಯಾವುದೆ ಸ್ಪಷ್ಟ ಮಾಹಿತಿಗಳಿಲ್ಲದೆ ಕೇವಲ ಒಂದು ಅಂದಾಜಿನ ಮೆಲೆ ಯುದ್ದ ಮಾಡಿದ್ದೆವು. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಕುರುಡ ಆನೆಯನ್ನು ವರ್ಣಿಸಿದಂತೆ, ನಮಗೆ ಅಂದು ಕಾರ್ಗಿಲ್ ಒಳಗೆ ನುಸುಳಿ ಬಂದ ಪಾಕಿಸ್ತಾನದ ನುಸುಳುಕೋರರ ಬಗ್ಗೆ ಇದ್ದ ಮಾಹಿತಿ.
ಮೇ ೩, ೧೯೯೯ ರಂದು ತಾಂಶಿ ನಾಮ್ ಗ್ಯಾಲ್ ಎನ್ನುವ ಸ್ಥಳೀಯ ಕುರುಬ, ಬಂಜೂ ಟಾಪ್ ನಲ್ಲಿ ಕೆಲವು ಉಗ್ರರ ಚಟುವಟಿಕೆ ಬಗ್ಗೆ ಮಾಹಿತಿ ಕೊಟ್ಟ ನಂತರ ಯುದ್ಧ ಶುರುವಾಯಿತು. ಕಾರ್ಗಿಲ್ ಯುದ್ಧ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಮಯ ಭಾರತೀಯ ಸೈನ್ಯ ಸುಮಾರು ೬೦%ದಷ್ಟು ಯುದ್ಧವನ್ನು ಪೂರೈಸಿದ ಸಮಯ. ಅಂತಹ ಸಂದರ್ಭದಲ್ಲಿ ಭಾರತೀಯ ಸೈನ್ಯದ ಓರ್ವ ಅಧಿಕಾರಿ ಕಾರ್ಗಿಲ್ ಪರ್ವತ ಶ್ರೇಣಿಯ ಉಗ್ರರ ಗುಂಡಿಗೆ ಹುತಾತ್ಮನಾಗುವ ಮುಂಚೆ ತಮ್ಮ ಮೇಲಧಿಕಾರಿಗೆ ಕಾಗದ ಬರೆದು ಹೇಳುತ್ತಾ, “ನಾವು ಯಾರೊಡನೆ ಯುದ್ಧ ಮಾಡುತ್ತಿದ್ದೇವೆ ಎನ್ನುವುದೇ ನಮಗೆ ಗೊತ್ತಿಲ್ಲ. ಇದು ನಮ್ಮನ್ನ ಪ್ರಪಾತದತ್ತ ಕೊಂಡೊಯ್ಯುಯುತ್ತಿದೆ”.. ಎಂದು ಹೇಳಿದ್ದರು.ಇದು ಕಾರ್ಗಿಲ್ ಯುದ್ಧದಲ್ಲಿ ಸೈನ್ಯಕ್ಕೆ ಸರ್ಕಾರಕ್ಕೆ ಇದ್ದ ಕ್ಲಾರಿಟಿ.ಇದೇ ಕಾರಣಕ್ಕೆ ನಾವು ಕ್ಯಾಪ್ಟನ್ ಸೌರಬ್ ಕಾಲಿಯ, ಕ್ಯಾಪ್ಟನ್ ವಿಕ್ರಮ್ ಭಾತ್ರ ಕ್ಯಾಪ್ಟನ್ ಅಹುಜಾ ಮುಂತಾದವರು ಸೇರಿದಂತೆ ಸುಮಾರು 724 ಮಂದಿ ಸೈನಿಕರನ್ನು ಕಳೆದುಕೊಳ್ಳಬೇಕಾಯಿತು. ಕ್ಯಾಪ್ಟನ್ ನಚಿಕೆತ್ ಪಾಕಿಸ್ತಾನದಲ್ಲಿ ಯುದ್ಧ ಕೈದಿಯಾಗಿ ಪಡಬಾರದ ಕಷ್ಟ ಸಹಿಸಬೇಕಾಗಿ ಬಂತು. ಇದು ಅಂದಿನ ಸರ್ಕಾರ ಮತ್ತು ಸೈನ್ಯದ ಕಾರ್ಯವಿಮುಖತೆ ಯಿಂದ ಆದ ಘಟನೆಯಲ್ಲ. ಬದಲಾಗಿ ಹಿಂದಿನ ಸರ್ಕಾರಗಳ ಅವರು ಆಡಳಿತದ ಸಮಯದಲ್ಲಿ ಅಂದಿನ ಯದ್ದಗಳು ಕಲಿಸಿದ ಪಾಠವನ್ನು ಕಲಿಯದೆ,ಕರ್ತವ್ಯ ವಿಮುಖರಾಗಿದ್ದು ಕಾರಣ.ಅಂದು ನಮ್ಮಲ್ಲಿ ತಂತ್ರಜ್ಞಾನದ ಮುಖಾಂತರ ವೈರಿಪಡೆಯ ಗತಿವಿಧಿ,ಸಂಖ್ಯೆ ಮತ್ತು ಅವರು ಹೊಂದಿರುವ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ತಿಳಿಯುವ,ಗುಪ್ತಚಾರಿಕೆ ಮಾಡುವ ಯಾವುದೇ ವ್ಯವಸ್ಥೆ, ಸಾಧನ ಸಲಕರಣೆಗಳು ಇರಲಿಲ್ಲ.ಇಂತಹಾ ಉಪಯುಕ್ತ ಮಾಹಿತಿ ಕೊಡುವ ಬೇಹುಗಾರಿಕ ಉಪಗ್ರಹಗಳು ಇರಲಿಲ್ಲ..!! ಕಾರ್ಗಿಲ್ ಯುದ್ಧದಲ್ಲಿ ನಾವು ಬಹುತೇಕ ಸೈನಿಕರನ್ನು ಪಾಕಿಸ್ತಾನದ ಸೈನ್ಯದ ವಿರುದ್ದ ನೇರ ಯದ್ದದಲ್ಲಿ ಕಳೆದುಕೊಂಡದ್ದಲ್ಲ. ಬದಲಿಗೆ ವೈರಿಗಳ ಬಗ್ಗೆ ಮಾಹಿತಿ ಕಲೆಹಾಕುವ ಸಂದರ್ಭದಲ್ಲಿ ಕಳೆದುಕೊಂಡದ್ದು.ಈ ರೀತಿ ಇಪ್ಪತ್ತೊಂದನೇ ಶತಮಾನದಲ್ಲಿ ಮಾಹಿತಿ ತಂತ್ರಜ್ಞಾನ ಎಷ್ಟು ಅವಶ್ಯಕ ಎನ್ನುವುದು ಕಾರ್ಗಿಲ್ ಯದ್ದ ಕಲಿಸಿದ ಮೊತ್ತಮೊದಲ ಪಾಠ..!!
ಮುಧೋಳ ನಾಯಿಯ ಜೊತೆಯ ಹೋಲಿಕೆಗೆ ಇವರು ಅರ್ಹರೇ?
ಚುನಾವಣೆ ಸಮೀಪಿಸಿದಾಗಲೆಲ್ಲಾ ಕಾಂಗ್ರೆಸಿಗರು, “ನಮ್ಮ ಇತಿಹಾಸ ತೆರೆದ ಪುಸ್ತಕವಿದ್ದಂತೆ’,‘ದೇಶಕ್ಕೆ ಕಾಂಗ್ರೆಸಿನ ಕೊಡುಗೆಯೇನೆಂಬುದನ್ನು ಯಾರಿಗೂ ನಿರೂಪಿಸುವ ಆವಶ್ಯಕತೆಯಿಲ್ಲ’ಎಂದು ಆಲಾಪಿಸತೊಡಗುತ್ತಾರೆ. ಅವರ ತೆರೆದ ಪುಸ್ತಕದ ಕೆಲವೇ ಪುಟಗಳನ್ನು ನೋಡಿದರೆ ಅಲ್ಲಿ ವಿಚಿತ್ರಗಳೇ ಕಾಣಿಸುತ್ತವೆ. ಇದು ಅಂಥ ಒಂದು ಸ್ಯಾಂಪಲ್.ಲಾಲ್ ಬಹೂದ್ದೂರ್ ಶಾಸ್ತ್ರಿಗಳ ಬಾಯಿಂದ ಭಾರತ್ ಕೀ ಆಯೂಬ್ ಎಂದು ಬೆನ್ನು ತಟ್ಟಿಸಿಕೊಂಡ ಒರ್ವ ಯೋಧ ಕ್ಯಾ.ಆಯೂಬ್ ಖಾನ್. ವೀರ ಚಕ್ರ ಪುರಷ್ಕೃತ ಕ್ಯಾ.ಖಾನ್‌ಗೆ ಶಾಸ್ತ್ರಿ ಮೇಲೆ ಅದೆಷ್ಟು ಅಭಿಮಾನವಿತ್ತೆಂದರೆ ನಿವೃತ್ತಿಯ ನಂತರ ಅವರು ಕಾಂಗ್ರೆಸ್‌ಗೆ ಸೇರಿದರು. ಎರಡು ಬಾರಿ ರಾಜಾಸ್ಥಾನದ ಜುಂಜುನು ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸಿ ಸಂಸದರೂ ಆದರು. ಆದರೆ ಆಯೂಬ್ ಖಾನರಿಗೆ ಶಾಸ್ತ್ರಿಗಳ ನಿಧನಾನಂತರ ಯಾಕೋ ತನ್ನ ಆಯ್ಕೆ ತಪ್ಪಿದೆ ಎನಿಸತೊಡಗಿತು. ಇಂದಿರಾ ಸರ್ವಾಧಿಕಾರ ಮತ್ತು ರಾಜೀವ್ ಗಾಂಧಿ ಪಟಾಲಮ್ಮಿನ ಸೈನಿಕ ವಿರೋಧಿ ನೀತಿಗಳನ್ನು ಸಹಿಸುವಷ್ಟು ದಿನ ಸಹಿಸಿದರು. ಕೊನೆಗೆ ಶಾಸ್ತ್ರಿಗಳಿಗಾದ ಸ್ಥಿತಿ ನರಸಿಂಹರಾಯರಿಗೂ ಬಂದಾಗ ಹಿಂದೆ ಮುಂದೆ ನೋಡದೆ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ರಾಜಕೀಯ ಸಂನ್ಯಾಸ ಸ್ವೀಕರಿಸಿದರು. ಕೊನೆ ಕಾಲದಲ್ಲಿ ಆಯೂಬ್ ಖಾನರಿಗೆ ಕಾಂಗ್ರೆಸ್ ಸೇರಿದ್ದ ಬಗ್ಗೆ ಎಷ್ಟು ಪಾಪಪ್ರಜ್ಞೆ ಕಾಡುತ್ತಿತ್ತೆಂದರೆ ಆರೋಗ್ಯ ವಿಚಾರಿಸಲು ಬಂದ ವಾಜಪೇಯಿಯವರ ಪಾದಸ್ಪರ್ಶಕ್ಕೆ ಅನುಮತಿಯನ್ನೂ ಆ ಯೋಧ ಕೇಳಿದ್ದರು. ಏಕೆಂದರೆ ಒಬ್ಬ ದೇಶಭಕ್ತ ಯೋಧ ಮತ್ತು ಕಾಂಗ್ರೆಸಿಗ ಏಕಕಾಲಕ್ಕೆ ಆಗಲು ಸಾಧ್ಯವಿಲ್ಲ ಎಂಬ ಸತ್ಯ ಆಯೂಬ್ ಖಾನರಿಗೆ ತಮ್ಮ ಕೊನೆಕಾಲದಲ್ಲಿ ಅರ್ಥವಾಗಿತ್ತು.
ರಾಜಿನಾಮೆ ಕೊಡಲು ಸಿದ್ಧ !
– ನವೀನ್ ನಾಯಕ್
ರಾಜಿನಾಮೆ ಕೊಡಲು ಸಿದ್ಧ !
ಯಾರು ಗೊತ್ತೇ ಹೀಗೆ ಹೇಳಿದ್ದು ? ನರೇಂದ್ರ ಮೋದಿಯವರು !
ಅಡ್ವಾಣಿ ಮತ್ತು ಅಟಲ್ ಜೀಯರ ನಡುವೆ ಎದ್ದ ಭಿನ್ನಾಭಿಪ್ರಾಯಗಳಲ್ಲಿ ಮಹತ್ವದ ಎರಡು ಘಟನೆಗಳು ಒಂದು ಅಯೋಧ್ಯಾ ವಿಚಾರ ಇನ್ನೊಂದು ಮೋದಿಯವರ ರಾಜಿನಾಮೆ ವಿಚಾರ. ಮೋದಿಯವರ ವಿಚಾರದಲ್ಲಿ ಅಡ್ವಾಣಿಯವರು ತಮ್ಮ ದೃಷ್ಟಿಕೋನವನ್ನು ಬೇರೆ ರೀತಿಯಾಗಿಸಿಕೊಂಡರು. ದಂಗೆಯ ಸಮಯದಲ್ಲಿ ಗುಜರಾತಿಗೆ ತೆರಳಿ ಅಲ್ಲಿಯ ಸಮಾಜದ ವಿವಿಧ ವರ್ಗಕ್ಕೆ ಸೇರಿದ ಅಪಾರ ಜನದೊಂದಿಗೆ ಮಾತನಾಡಿ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಅರಿತುಕೊಂಡರು. ಕ್ರಮಗಳ ಕುರಿತು ಅಲ್ಲಿಯ ಜನತೆ ತೃಪ್ತಿಯನ್ನು ಹೊಂದಿತ್ತು. ಇದರಿಂಧ ಮೋದಿಯವರು ಅಪರಾಧಿಯಾಗಿರಲಿಲ್ಲ ಬದಲಾಗಿ ಅವರು ಸ್ವಯಂ ರಾಜಕೀಯ ಬಲಿಪಶುವಾಗಿದ್ದಾರೆಂಬುದು ತಿಳಿದುಕೊಂಡರು. ಆದ್ದರಿಂದ ಮುಖ್ಯಮಂತ್ರಿಯಾಗಿ ಒಂದು ವರ್ಷವೂ ಕಳೆಯದ ಮೋದಿಯವರನ್ನು ಸಂಕೀರ್ಣ ಕೋಮು ಸನ್ನಿವೇಶಕ್ಕೆ ರಾಜಿನಾಮೆ ಪಡೆಯುವುದು ಅನ್ಯಾಯವಾಗುತ್ತದೆ. ಅದಲ್ಲದೇ ರಾಜಿನಾಮೆ ಪಡೆಯುವುದರಿಂದ ಗುಜರಾತಿನ ಸಾಮಾಜಿಕ ಸ್ಥಿತಿಗತಿಯನ್ನು ಧೀರ್ಘಕಾಲೀನವಾಗಿ ಹದಗೆಡಬಹುದೆಂದು ಅಡ್ವಾಣಿಯವರು ಅರಿತುಕೊಂಡರು.





