ವಿಷಯದ ವಿವರಗಳಿಗೆ ದಾಟಿರಿ

Posts tagged ‘ಅನಂತ ಮೂರ್ತಿ’

19
ಜೂನ್

ಕಲ್ಬುರ್ಗಿ,ಕಲ್ಲು ಮತ್ತು Colonial Consciousness

– ರಾಕೇಶ್ ಶೆಟ್ಟಿ

consciousnessಬೆಂಗಳೂರಿನ ವಿಜ್ಞಾನ ಭವನದಲ್ಲಿ ಜೂನ್ ೯ರ ಸೋಮವಾರ ನಡೆದ ಮೌಢ್ಯಮುಕ್ತ ಸಮಾಜ, ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನುಷ್ಠಾನ ಚರ್ಚಾ ಕಾರ್ಯಕ್ರಮದಲ್ಲಿ ವಯಸ್ಸಿನಲ್ಲಿ ಹಿರಿಯರಾದ (ಕೇವಲ ವಯಸ್ಸಿನಲ್ಲಷ್ಟೇ) ಪ್ರೊ.ಎಂ.ಎಂ. ಕಲ್ಬುರ್ಗಿಯವರು, ” ದೇವರ ವಿಗ್ರಹಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗದು. ಅವುಗಳಿಗೆ ಕಾಯುವ ಶಕ್ತಿಯೂ ಇಲ್ಲ, ಕಾಡುವ ಶಕ್ತಿಯೂ ಇಲ್ಲ. ದೇವತೆ, ದೇವಾಲಯಗಳ ವಿರುದ್ಧ ಚಳವಳಿ ನಡೆಯಬೇಕು.” ಅಂತೆಲ್ಲ ಬಡಬಡಿಸಿ ಎಲ್ಲರಿಂದ ತಪರಾಕಿ ಹಾಕಿಸಿಕೊಂಡ ಮೇಲೆ “ನಾ ಹಂಗೇ ಹೇಳೇ ಇಲ್ಲಾರೀ, ನಾನು ಹಿಂದೂ ಇದ್ದೀನಿ, ನಾನ್ಯಾಕೇ ಮೂತ್ರ ಮಾಡಿ ಅಂತ ಹೇಳ್ತೀರ್ರೀ… ಅನಂತಮೂರ್ತಿ ಹಿಂಗ್ ಬರ್ದಾರಾ ಅಂತ ನಾನ್ ಸಭಿಯೋಳಗ ಹೇಳಿನ್ರೀ… ತಪ್ಪ್ ತಿಳಿ ಬ್ಯಾಡರ್ರೀ…” ಅಂತೆಲ್ಲ ಸೃಷ್ಟೀಕರಣ ಕೊಟ್ಟರು.

ನಿಜವಾಗಿ ಕಲ್ಬುರ್ಗಿಯವರ ಮನಸ್ಸಿನಲ್ಲಿದ್ದಿದ್ದು “ಮೂರ್ತಿ”ಗಳ ಮೇಲೆ ಮೂತ್ರ ಮಾಡಿದ ಹೊರೆ ಹೊರಿಸಿ ಅದರ ಜೊತೆಗೆ ಮೂರ್ತಿ ಪೂಜೆ ಮಾಡುವ ಜನರ “ಮೌಢ್ಯ” (ಅವರ ಮಂದ ಬುದ್ದಿಯ ಪ್ರಕಾರ) ನಿವಾರಿಸುವುದಾಗಿತ್ತು ಅನ್ನಿಸುತ್ತದೆ.ಕಲ್ಬುರ್ಗಿಯವರು ಹೀಗೆ ಹೇಳಿಕೆ ಕೊಡುವುದರಿಂದ ಒಂದೇ ಕಲ್ಲಿಗೆ ಎರಡು ಹಕ್ಕಿ (“ಮೂರ್ತಿ” ಮತ್ತು “ಮೌಢ್ಯ”) ಹೊಡೆಯುವ ಆಲೋಚನೆಯಲ್ಲಿದ್ದರೇನೋ.ಪಾಪ!

“ಮೂರ್ತಿ”ಗಳ ಮೇಲೆ ಕಲ್ಬುರ್ಗಿಯವರಿಗೆ ಈ ವಿಶೇಷ ಮಮತೆ ಯಾಕೆ? ಪ್ರಜಾವಾಣಿಯಲ್ಲಿ “ಮೂರ್ತಿ”ಗಳಿಗೆ ೧೦ ಲಕ್ಷ ಸರ್ಕಾರಿ ಕಾಣಿಕೆ ಕೊಟ್ಟದ್ದನ್ನು ವಿರೋಧಿಸಿ ಸೋತುಹೋಗಿದ್ದ ಕಲ್ಬುರ್ಗಿಗಳು,”ಮೂರ್ತಿಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗುವುದಿಲ್ಲ” ಅನ್ನುವ ಮೂಲಕ ಸೇಡು ತೀರಿಸಿಕೊಂಡರು, ಅನ್ನುವಲ್ಲಿಗೆ ಅವರ ಹೇಳಿಕೆಯ ಮೊದಲನೇ “ಹಕ್ಕಿ” ಯಾವುದೆಂದು ಹೊಳೆಯುತ್ತದೆ.

ಅಸಲಿಗೆ ತಪ್ಪೆಲ್ಲ ಆಯ್ಕೆ ಸಮಿತಿಯದ್ದು!
“ಪರಾವಲಂಬಿ ಜೀವಿ”ಗಳ ನಡುವೆ “ಪ್ರಶಸ್ತಿ/ಹಣ”ವನ್ನು ಸಮನಾಗಿ ಹಂಚಿದ್ದರೆ ಮೂತ್ರ,ಮೂರ್ತಿ ಇತ್ಯಾದಿ ವಿವಾದಗಳೇ ಆಗ್ತಿರ್ಲಿಲ್ಲ ಮಾರ್ರೆ. ಎಲ್ಲವನ್ನೂ ಒಬ್ಬರಿಗೆ ಕೊಟ್ಟರೆ.ಇನ್ನೊಬ್ಬರಿಗೆ (ತಮಗಾದ) ಅನ್ಯಾಯವನ್ನು ಪ್ರಶ್ನಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ(!) ಇದ್ದೇ ಇರುತ್ತದಪ್ಪ… (ಸೂ : “ಪರಾವಲಂಬಿ ಜೀವಿ”ಗಳನ್ನು ಕೆಲವರು “ಬುದ್ಧಿಜೀವಿ”ಗಳು ಅನ್ನುತ್ತಾರೆ.ನಾನು ಇನ್ಮುಂದೆ ಪ್ರೀತಿಯಿಂದ “ಪರಾವಲಂಬಿ ಜೀವಿ” ಎನ್ನುತ್ತೇನೆ)

ಮತ್ತಷ್ಟು ಓದು »

23
ಮೇ

ಮೂರ್ತಿಗಳೇ.ಯಾರ ಸರ್ಕಾರ ಮತ್ತು ಯಾರು ಫ್ಯಾಸಿಸ್ಟ್ ಗಳು?

– ರಾಕೇಶ್ ಶೆಟ್ಟಿ

ಅನಂತಮೂರ್ತಿ - ಸಿದ್ದರಾಮಯ್ಯಇವತ್ತಿನ ಕನ್ನಡ ಪ್ರಭದಲ್ಲಿ ಪ್ರಕಟವಾದ ನನ್ನ ಲೇಖನದ ಪೂರ್ಣ ಭಾಗವಿದು.ಈ ಲೇಖನವನ್ನು ಮೂರ್ತಿಗಳಿಗೂ ಮೇಲ್ ಮಾಡಿದ್ದೇನೆ.
“ಮೋದಿಯನ್ನು ಫ್ಯಾಸಿಸ್ಟ್” ಅಂತ ಮಾತು ಮಾತಿಗೆ ಕರೆಯುತ್ತಿರುವ,ನಾಡಿನ ಸಾಕ್ಷಿ ಪ್ರಜ್ಞೆ ಎಂದು ತಮ್ಮ ಶಿಷ್ಯ ವೃಂದದಿಂದ ಕರೆಸಿಕೊಳ್ಳುವ ನಮ್ಮ ಅನಂತಮೂರ್ತಿಗಳು,ಇತರ ಪ್ರಗತಿಪ್ರರು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಗೆಳೆಯರು ಉತ್ತರಿಸಬೇಕಾದ ಪ್ರಶ್ನೆಗಳು. ಉತ್ತರದ ನಿರೀಕ್ಷೆಯಿದೆ…

ಎಲ್ಲಾ ಸಮೀಕ್ಷೆಗಳನ್ನು ಹುಸಿ ಮಾಡಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಏಕಾಂಗಿಯಾಗಿ ಅಭೂತಪೂರ್ವ ಜಯ ದಾಖಲಿಸಿದೆ. ಮೋದಿಯವರ ಗೆಲುವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅಭಿಮಾನಿಗಳ ಖುಷಿಯೂ ಮುಗಿಲು ಮುಟ್ಟಿದೆ.ಈ ಖುಷಿಯ ನಡುವೆ ಮುಖ್ಯವಾಗಿ ಪ್ರಸ್ತಾಪವಾಗುತ್ತಿರುವುದು “ನರೇಂದ್ರ ಮೋದಿ ಪ್ರಧಾನಿಯಾದರೆ ತಾವು ಭಾರತದಲ್ಲಿ ಇರಲು ಇಚ್ಛೆ ಪಡುವುದಿಲ್ಲ” ಎಂದು ನೀವು ಕಳೆದ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ನೀಡಿದ್ದ ಹೇಳಿಕೆ.

ಸಾಹಿತಿಗಳಿಕೇ ರಾಜಕೀಯ ಉಸಾಬರಿ ಅನ್ನುವುದು ಕೆಲವರು ವಾದವಾದರೆ,ಅದಕ್ಕೆ ಪ್ರತಿಯಾಗಿ ಸಾಹಿತಿಗಳಾದವರಿಗೂ ವೈಯುಕ್ತಿಕ ನಿಲುವುಗಳಿದ್ದರೇನು ತಪ್ಪು ಅನ್ನುವ ಪ್ರತಿವಾದವೂ ಕೇಳಿಬರುತ್ತಿದೆ.ಒಂದು ಕ್ಷಣಕ್ಕೆ ಮೂರ್ತಿಗಳ ರಾಜಕೀಯ ನಿಲುವುಗಳನ್ನು ಬದಿಗಿಡೋಣ.ಬುದ್ದಿಜೀವಿಗಳಾದ ಮೂರ್ತಿಗಳಿಗೆ ಮತ್ತವರ ಸೆಕ್ಯುಲರ್ ಸಾಹಿತಿಗಳ ತಂಡಕ್ಕೆ,ನಾಡಿನ ಬೌದ್ಧಿಕ ವಲಯದ ವಿಷಯವೊಂದರ ಮೂಲಕ ಒಂದಿಷ್ಟು ಬಹಿರಂಗ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಬಯಸೋಣ.

ನಾಡಿನ ಸಾಕ್ಷಿ ಪ್ರಜ್ಞೆ ಎಂದು ತಮ್ಮ ಶಿಷ್ಯ ವೃಂದದಿಂದ ಕರೆಸಿಕೊಳ್ಳುವ ನಮ್ಮ ಅನಂತ ಮೂರ್ತಿಗಳು,ಇತ್ತೀಚಿನ ದಿನಗಳಲ್ಲಿ ಈ ನಾಡಿನ ತಲ್ಲಣಗಳೆಲ್ಲವಕ್ಕೂ ನಿಜವಾಗಿಯೂ ಸ್ಪಂದಿಸಿದ್ದಾರೆಯೇ? ಉತ್ತರ : ಬಹುಷಃ ಇಲ್ಲವೆನ್ನಬಹುದು.

ಮತ್ತಷ್ಟು ಓದು »

28
ಆಕ್ಟೋ

ಮೂರ್ತಿಗಳೇ,ಸೈನ್ಯ ಸಾಮ್ರಾಟ ಅಶೋಕನ ಬಳಿಯೂ ಇತ್ತು.ಆದರೆ,ಗೆದ್ದಿದ್ದು ಕಳಿಂಗ …!

– ರಾಕೇಶ್ ಶೆಟ್ಟಿ

Siddu n URAಭಾರತ ಬಿಡದಿರಲು ನಿರ್ಧರಿಸಿದ ಮೇಲೆ ನಮ್ಮ ಅನಂತ ಮೂರ್ತಿಯವರು, ಕಳೆದ ವಾರ ಸಿ.ಎಂ ಸಿದ್ದರಾಮಯ್ಯ ನವರಿಗೆ ಮೋದಿಯಂತೆ ಸೈಬರ್ ಸೈನ್ಯ ಕಟ್ಟಲು ಹೇಳಿ ಮತ್ತೊಮ್ಮೆ ಸುದ್ದಿಯಾದರು.

ಭಾರತದ ದೇಶ ಕಂಡ ಬೃಹತ್ ಸೈನ್ಯ ಸಾಮ್ರಾಟ ಅಶೋಕನ ಬಳಿಯೂ ಇತ್ತು ಮೂರ್ತಿಗಳೇ.ಆದರೆ ಅವನೆದುರು ಸೋತು ಗೆದ್ದಿದ್ದು ’ಕಳಿಂಗ’ …! ಸಾಮ್ರಾಟ ಅಶೋಕನ ಸೈನ್ಯದೆದುರಿಗೆ ಕಳಿಂಗ ಅನ್ನುವ ಪುಟ್ಟ ರಾಷ್ಟ್ರ ಏನೇಂದರೇ ಏನು ಆಗಿರಲಿಲ್ಲ.ಅವರಲ್ಲಿ ಅಶೋಕನ ಬಳಿಯಿದ್ದಷ್ಟು ಶಸ್ತ್ರ-ಅಸ್ತ್ರಗಳಿರಲಿಲ್ಲ,ಸೈನ್ಯವೂ ಇರಲಿಲ್ಲ.ಅವರಲ್ಲಿ ಇದ್ದಿದ್ದು ಸ್ವಾಭಿಮಾನ ಮತ್ತು ಧೈರ್ಯ. ಸಾಮ್ರಾಟ ಅಶೋಕನ ಸೈನ್ಯಕ್ಕೆ ಎದೆಯೊಡ್ಡಿ ಅವರು ಹೇಳಿದ್ದು “ನೀನು ಮಹಾನ್ ಸಾಮ್ರಾಟನಿರಬಹುದು,ನಿನ್ನ ಶಕ್ತಿ ಅಸಾಧಾರಣವಿರಬಹುದು.ಆದರೆ,ನಮಗೆ ಕನಿಷ್ಟ ಆತ್ಮಾಭಿಮಾನದಿಂದ ಸಾಯುವ ಅಧಿಕಾರವಾದರೂ ಇದೆ- ನೀನದನ್ನು ನಮ್ಮಿಂದ ಕಿತ್ತುಕೊಳ್ಳಲಾರೆ” ಅನ್ನುವುದೇ ಆಗಿತ್ತು.

ನೀವು ದುಡ್ಡು ಕೊಟ್ಟು,ಏನು ಮಾಡಬೇಕು ಅಂತ ಹೇಳಿಕೊಟ್ಟು ಕಟ್ಟಬಹುದಾದ ಸೈಬರ್ ಸೈನ್ಯ ಸಾಮ್ರಾಟ ಅಶೋಕನ ಸೈನ್ಯದಂತೆಯೇ ಅಗಾಧವಾಗಿರಬಹುದು.ಆದರೆ ಅದಕ್ಕೆದುರಾಗಿ ನಿಂತಿರುವುದು ಸ್ವಾಭಿಮಾನಿ ’ಕಳಿಂಗ’ದಂತಹ ಸೈನ್ಯ. ಈ ಸೈನಿಕರು ದುಡ್ಡಿಗಾಗಿ,ಅಧಿಕಾರಕ್ಕಾಗಿ,ಆಯ್ಕೆ ಸಮಿತಿಗಳ ಸ್ಥಾನಗಳಿಗಾಗಿ,ವಿವಿಗಳ ನಾಮಫಲಕಗಳಲ್ಲಷ್ಟೇ ರಾರಾಜಿಸುವ, ವಿವಿಗಳ ಕುರ್ಚಿ ಬಿಸಿ ಮಾಡುವ ಹುದ್ದೆಗಳಿಗಾಗಿಯೋ ಇಲ್ಲ ಪ್ರಶಸ್ತಿಗಳಿಗಾಗಿಯೋ ಕಾದು ಕುಳಿತಿರುವ ಅವಕಾಶವಾದಿಗಳಲ್ಲ.ಇವರೆಲ್ಲ ಕೇಂದ್ರ ಸರ್ಕಾರದ ಭ್ರಷ್ಟಚಾರದ ವಿರುದ್ಧ ಜೊತೆಯಾದವರು. ನಿಮ್ಮ ಸೆಕ್ಯುಲರ್ ಬ್ರಿಗೇಡ್ ಕಳೆದ ೧೧ ವರ್ಷಗಳಲ್ಲಿ ಮೋದಿ ಅನ್ನುವವನ ಮೇಲೆ ಏಕಪಕ್ಷೀಯವಾಗಿ ಕಟ್ಟುತ್ತ ಬಂದ ಸುಳ್ಳಿನ ಕೋಟೆಯನ್ನು ಕಂಡು ರೋಸಿ ಹೋಗಿ, ಆ ಸುಳ್ಳಿನ ಕೋಟೆಯ ಭೇಧಿಸಲು ತಾನಾಗೇ ಹುಟ್ಟಿಕೊಂಡ ಸೈನ್ಯ. ನಿಮ್ಮ ಸೆಕ್ಯುಲರ್ ಬ್ರಿಗೇಡಿನ ಸುಳ್ಳುಗಳಿಗೆ ಸಾಕ್ಷಿ ಬೇಕಾದರೇ, ನಿಮ್ಮದೇ ಹೇಳಿಕೆಯ ಸುತ್ತ ತಿರುಗೋಣ ಬನ್ನಿ ಮೂರ್ತಿಗಳೇ,

ಮತ್ತಷ್ಟು ಓದು »

20
ಸೆಪ್ಟೆಂ

ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನುವುದು ಯಾರ ಸ್ವತ್ತು ಅನಂತ ಮೂರ್ತಿಗಳೇ?

– ನವೀನ್ ನಾಯಕ್

URAಮೊನ್ನೆ ಮೊನ್ನೆ ನಡೆದ ಒಂದು ಕಾರ್ಯಕ್ರಮದಲ್ಲಿ ಅನಂತ ಮೂರ್ತಿಯವರು ” ನರೇಂದ್ರ ಮೋದಿ ಪ್ರಧಾನಿಯಾಗುವ ದೇಶದಲ್ಲಿ ನಾನು ಬದುಕಿರಲು ಇಷ್ಟಪಡುವುದಿಲ್ಲ ” ಎಂಬ ಹೇಳಿಕೆ ನೀಡಿ ಮೋದಿ ಅಭಿಮಾನಿಗಳ ವಿರೋಧಕ್ಕೆ ಗುರಿಯಾಗಿದ್ದರು.ತದನಂತರ ನಡೆದ ಸಂದರ್ಶನದಲ್ಲಿ ಅನಂತ ಮೂರ್ತಿಯವರು ” ಮೋದಿ ಪ್ರಧಾನಿಯಾಗಬಾರದೆಂದು ” ಎಂಬ ಉದ್ದೇಶದಿಂದ ಹಾಗೆ ಹೇಳಿದೆ. ಯೌವನದಲ್ಲಿಯಾಗಿದ್ದರೆ ಮೋದಿ ಪ್ರಧಾನಿಯಾಗಗೊಡವುದಿಲ್ಲ ಅಂತ ಹೇಳುತ್ತಿದ್ದೆ ಈಗ ವಯಸ್ಸಾಗಿದೆ ಅದಕ್ಕೆ ಹಾಗೆ ಹೇಳಿದೆ,ನನ್ನ ನಿಲುವೊಂದೆ ಮೋದಿ ಈ ದೇಶದ ಪ್ರಧಾನಿಯಾಗಬಾರದು. ಇದರರ್ಥ ಮೋದಿ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆಂದು ಅರ್ಥವಲ್ಲ ವೆಂದು ಸಮಜಾಯಿಸಿ ನೀಡಿದರು.

ಹಾಗೆ ಮೋದಿ ಅಭಿಮಾನಿಗಳು ನೀಡುತ್ತಿರುವ ಉತ್ತರ ಮತ್ತು ಅವರು ಪ್ರತಿಕ್ರಿಯಿಸುತ್ತಿರುವ ರೀತಿ ನೋಡಿದರೆ ಅಧಿಕಾರವಿಲ್ಲದೇನೇ ಹೀಗೆ ಇನ್ನು ಮೋದಿ ಅಧಿಕಾರವಹಿಸಿಕೊಂಡ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಇರೋದೇ ಇಲ್ಲ,  ಇದು ನಿಜವಾದ ಅಪಾಯವೆಂದಿದ್ದಾರೆ. ಅದೇ ಸಂದರ್ಶನದಲ್ಲಿ ಪ್ರಜಾಪ್ರಭುತ್ವವಾದಿಗೆ ಪ್ರಜಾಪ್ರಭುತ್ವವನ್ನು  ಸಂಶಯದಿಂದ ನೋಡುವ ಶಕ್ತಿಯಿರಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನು ಮರುಳು ಮಾಡುವ ವಿಧಾನದಿಂದ ಆಯ್ಕೆಯಾಗಿ ಬರುವವರನ್ನು ವಿರೋಧಿಸುವ ಗುಣವನ್ನು ಬೆಳೆಸಿಕೊಳ್ಳಬೇಕು.

ಅನಂತ ಮೂರ್ತಿಯವರಿಗೆ ಮಾತ್ರವೇ ಅಥವಾ ಅವರನ್ನು ಬೆಂಬಲಿಸುವವರಿಗೆ ಮಾತ್ರವೇ ಇರುವುದಾ ಆಭಿವ್ಯಕ್ತಿ ಸ್ವಾತಂತ್ರ್ಯ? ಇಲ್ಲಿ ಒಬ್ಬರ ಉದ್ದೇಶ ಮಾತ್ರ ಸ್ಪಷ್ಟಪಡಿಸಿಕೊಂಡರೆ ಅದು ಫ್ಯಾಸಿಸ್ಷ್ ಧೋರಣೆಯಾಗುತ್ತದೆ. ಕೇವಲ ಅನಂತಮೂರ್ತಿಯವರ ಹೇಳಿಕೆಗೆ ಅಥವ ಅವರನ್ನು ಸಮರ್ಥಿಸುವ ಹಿಂಬಾಲಕರಿಗೆ ಮಾತ್ರವಾ ಹಿಂದೆ ಉದ್ದೇಶವಿರುವುದು. ಆ ಹೇಳಿಕೆಯನ್ನು ಟೀಕಿಸುವವರಿಗೆ ಉದ್ದೇಶವಿಲ್ಲವೇ. ಅನಂತಮೂರ್ತಿಯವರು ನಾನು ಮೋದಿ ಪ್ರಧಾನಿಯಾದರೆ ಬದುಕಿರಲು ಇಷ್ಟಪಡುವುದಿಲ್ಲ ಎಂಬ ಹೇಳಿಕೆಗೆ ಅದಕ್ಕೆ ವಿರೋಧವಾಗಿ ನೀವು ಸಾಯಿರಿ ಎಂಬ ಹೇಳಿಕೆಯನ್ನು ಮೋದಿ ಅಭಿಮಾನಿಗಳು ಕೊಟ್ಟಿದ್ದಾರೆ. ಇಲ್ಲಿ ಮೋದಿ ಅಭಿಮಾನಿಗಳು ಕತ್ತಿ  ಕುಡಾರಿ ಹಿಡಿದುಕೊಂಡು ಅನಂತಮೂರ್ತಿಯವರ ಹಿಂದೆ ಬಿದ್ದಿದ್ದಾರಾ, ಇಲ್ಲವಲ್ಲ. ಅವರ ಹೇಳಿಕೆಗೆ ಇದು ವಿರೋಧವಾಗುತ್ತೆ ವಿನಃ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲ. ಹೇಳಿಕೆಯ ಹಿಂದಿರುವ ಉದ್ದೇಶ ಎರಡೂ ಕಡೆ ಗಮನಿಸುವುದು ಉತ್ತಮ.

ಮತ್ತಷ್ಟು ಓದು »