ವಿಷಯದ ವಿವರಗಳಿಗೆ ದಾಟಿರಿ

Posts tagged ‘ಅಫ್ಘಾನಿಸ್ತಾನ’

20
ಆಗಸ್ಟ್

“ಕೈ”ಲಾಗದ ಸರ್ಕಾರ ಮತ್ತು ನಮ್ಮ ಕಾಶ್ಮೀರ

–     ರಾಕೇಶ್ ಶೆಟ್ಟಿ

Kashmiraಬಡ ಬೆಸ್ತನೊಬ್ಬನ ಕತ್ತನ್ನು ಸೀಳಿ ಅವನದೇ ಬೋಟನ್ನೇರಿ ೧೦ ಜನರ ಪಾಕಿಸ್ತಾನದ ಸೈತಾನರ ತಂಡ ಗೇಟ್ ವೇ ಆಫ್ ಇಂಡಿಯಾ ಮೂಲಕ ಮುಂಬೈಗೆ ವಕ್ಕರಿಸಿಕೊಳ್ಳುತ್ತದೆ.೧೦ ಜನರಿಂದ ಬೇರ್ಪಟ್ಟ ಇಬ್ಬರು ಮೊದಲಿಗೆ ದಾಳಿಯಿಡುವುದು ’ಲಿಯೋಫೋಲ್ಡ್ ಕೆಫೆ”ಗೆ ಅಲ್ಲಿ ಕಂಡ ಕಂಡಂತೆ ಗುಂಡಿನ ಮಳೆ ಸುರಿಸಿದ ಆ ಇಬ್ಬರು ಪಾಕಿ ಉಗ್ರರು ಅಲ್ಲಿಂದ ರಾಜಾರೋಷವಾಗಿ ಹೊರಡುತ್ತಾರೆ.ಉಗ್ರರ ಕಣ್ಣಿಗೆ ಬೀಳದೆ ಅವಿತು ಕುಳಿತಿದ್ದವನೊಬ್ಬ ಮೆಲ್ಲಗೆ ಬಾಗಿಲ ಸಂದಿಯಿಂದ ರಾಕ್ಷಸರು ಇದ್ದಾರೋ ಅನ್ನುವುದನ್ನು ಖಾತ್ರಿ ಮಾಡಿಕೊಳ್ಳಲು ಇಣುಕಿದಾಗ ಬಾಗಿಲಿಗೆ ಕಲ್ಲೊಂದು ಬಡಿಯುತ್ತದೆ.ಮತ್ತೆ ನೋಡುತ್ತಾನೆ ಊಹೂಂ “ಗುಂಡಲ್ಲ… ಕಲ್ಲು…!”

ಉಗ್ರರು ಅಮಾಯಕರ ರಕ್ತ ಹರಿಸಿ ಅಲ್ಲಿಂದ ರಾಜಾರೋಷವಾಗಿ ಹೊರಟ ಮೇಲೆ ಬೀಟ್ ನಲ್ಲಿದ್ದ ಪೋಲಿಸ್ ಕಾನ್ಸ್ಟೇಬಲ್ ಗಳು  ಒಂದು ಕೈಯಲ್ಲಿ ಲಾಠಿ ಹಿಡಿದು ಇನ್ನೊಂದು ಕೈಯಲ್ಲಿ ಕಲ್ಲು ಎಸೆದು ಒಳಗಿನಿಂದ “ಗುಂಡು” ಬರುತ್ತಿಲ್ಲ ಅನ್ನುವುದನ್ನು ಕನ್ಫರ್ಮ್ ಮಾಡಿಕೊಂಡು ಒಳಬರುತ್ತಾರೆ. ಹೇಗಿದೆ ನೋಡಿ ಉಗ್ರನ ಕೈಯಲ್ಲಿ “ಎ.ಕೆ ೪೭” ಅವನೆದುರಿಸಲು ಬಂದ ಪೋಲಿಸಣ್ಣನ ಕೈಯಲ್ಲಿ “ಕಲ್ಲು”…! ಇದು ನಮ್ಮ ಭಾರತದ ಆಂತರಿಕ ರಕ್ಷಣಾ ವ್ಯವಸ್ಥೆಯ ಸ್ಥಿತಿ.ಭಾರತದ ಬಂಡವಾಳವನ್ನು ಸರಿಯಾಗಿಯೇ ಅರಿತಿದ್ದ ಪಾಪಿ ಪಾಕಿಗಳು ಆ ೧೦ ಜನರ ತಂಡವನ್ನು ನುಗ್ಗಿಸಿ ಒಂದಿಡಿ ಭಾರತವನ್ನು ದಿನಗಳ ಮಟ್ಟಿಗೆ ಗಾಬರಿ ಬೀಳಿಸಿದ್ದರು. ಮುಂಬೈ ಮಾರಣ ಹೋಮದ ನಂತರ ಆಗಿದ್ದಾದರೂ ಏನು? ಭಾರತ-ಪಾಕಿಸ್ತಾನಗಳು ಸಮರದಂಚಿಗೆ ಬಂದು ನಿಂತವು.ನಮ್ಮ ಸರ್ಕಾರ “ಹೊಡಿಬೇಡಿ.ಹೊಡೆದ್ರೆ ನೋವಾಗುತ್ತೆ” ಅನ್ನುವಂತೆಯೇ ವರ್ತಿಸಿದ್ದಲ್ಲವೇ? ಅದಕ್ಕಿಂತ ಹೆಚ್ಚೆಂದರೆ “ಹೋಗಿ.ನಾವು ನಿಮ್ಮೊಂದಿಗೆ ನಾವು ಕ್ರಿಕೆಟ್ ಆಡುವುದಿಲ್ಲ” ಅಂದರು ಅಷ್ಟೇ…!

ಮತ್ತಷ್ಟು ಓದು »