– ಓಂ ಶಿವಪ್ರಕಾಶ್
ಆತ್ಮೀಯ ಕನ್ನಡ ವಿಕಿಪೀಡಿಯ ಗೆಳೆಯರೆ,
ಈ ಸಂದೇಶ ಕನ್ನಡ ವಿಕಿಪೀಡಿಯದಲ್ಲಿನ ಲೇಖನಗಳ ಗುಣಮಟ್ಟವನ್ನು ಉತ್ತಮ ಪಡಿಸುವ ಸಲುವಾಗಿ ಪ್ರಾರಂಭಿಸಲಾಗುತ್ತಿರುವ ಒಂದು ಮುಖ್ಯ ಯೋಜನೆಯ ಬಗ್ಗೆ.
ಸುಮಾರು ೨೦೧೦ – ೨೦೧೧ ರಲ್ಲಿ, ಗೂಗಲ್ ತನ್ನ ಗೂಗಲ್ ಟ್ರಾನ್ಸ್ಲೇಷನ್ ಟೂಲ್ ಕಿಟ್‌ನ ಟ್ರಾನ್ಸ್ಲೇಷನ್ ಮೆಮೋರಿಯನ್ನು ಹೆಚ್ಚಿಸುವ ಸಲುವಾಗಿ ಭಾರತೀಯ ಭಾಷಾ ವಿಕಿಪೀಡಿಯಾಗಳಲ್ಲಿ (ಮುಖ್ಯವಾಗಿ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು) ಹಮ್ಮಿಕೊಂಡ ಯೋಜನೆ ಅಡಿಯಲ್ಲಿ, ಅನೇಕ ಲೇಖನಗಳನ್ನು ಇಂಗ್ಲೀಷ್ ವಿಕಿಪೀಡಿಯಾದಿಂದ ಆಯಾ ಭಾಷೆಯ ವಿಕಿಪೀಡಿಯಾಗಳಿಗೆ ಭಾಷಾಂತರ ಮಾಡಿತು. ಕೆಲವು ಬಳಕೆದಾರರು ಈ ಯೋಜನೆಯ ಬಗ್ಗೆ ತಮ್ಮ ಕಳವಳವನ್ನೂ ವ್ಯಕ್ತಪಡಿಸಿದರು. ವಿಕಿಪೀಡಿಯ ಸಮುದಾಯವನ್ನೇ ಬೆಳೆಸದೆ ಮಾಹಿತಿಯನ್ನು ಮಾತ್ರ ಹುಟ್ಟುಹಾಕುವುದು ಇದಕ್ಕೆ ಮುಖ್ಯ ಕಾರಣವಾಗಿತ್ತು. ಜೊತೆಗೆ, ಬಹಳಷ್ಟು ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಹಾಕಲಾದರೂ, ಅದರ ಅನುವಾದ ಮತ್ತು ಶೈಲಿಯಲ್ಲೂ ಕೂಡ ತೊಂದರೆಗಳು ಕಂಡುಬಂದವು. ಆದಾಗ್ಯೂ, ನಮಗಿಲ್ಲಿ ಒಂದು ಉತ್ತಮ ಅವಕಾಶವಿದೆ, ಏಕೆಂದರೆ ಈ ಯೋಜನೆಯ ಮೂಲಕ ಸೃಷ್ಟಿಸಲಾದ ಲೇಖನಗಳಲ್ಲಿ ಉತ್ತಮ ಮಾಹಿತಿ ಲಭ್ಯವಿದೆ.