ರಾಜಿನಾಮೆ ಕೊಡಲು ಸಿದ್ಧ !
– ನವೀನ್ ನಾಯಕ್
ರಾಜಿನಾಮೆ ಕೊಡಲು ಸಿದ್ಧ !
ಯಾರು ಗೊತ್ತೇ ಹೀಗೆ ಹೇಳಿದ್ದು ? ನರೇಂದ್ರ ಮೋದಿಯವರು !
ಅಡ್ವಾಣಿ ಮತ್ತು ಅಟಲ್ ಜೀಯರ ನಡುವೆ ಎದ್ದ ಭಿನ್ನಾಭಿಪ್ರಾಯಗಳಲ್ಲಿ ಮಹತ್ವದ ಎರಡು ಘಟನೆಗಳು ಒಂದು ಅಯೋಧ್ಯಾ ವಿಚಾರ ಇನ್ನೊಂದು ಮೋದಿಯವರ ರಾಜಿನಾಮೆ ವಿಚಾರ. ಮೋದಿಯವರ ವಿಚಾರದಲ್ಲಿ ಅಡ್ವಾಣಿಯವರು ತಮ್ಮ ದೃಷ್ಟಿಕೋನವನ್ನು ಬೇರೆ ರೀತಿಯಾಗಿಸಿಕೊಂಡರು. ದಂಗೆಯ ಸಮಯದಲ್ಲಿ ಗುಜರಾತಿಗೆ ತೆರಳಿ ಅಲ್ಲಿಯ ಸಮಾಜದ ವಿವಿಧ ವರ್ಗಕ್ಕೆ ಸೇರಿದ ಅಪಾರ ಜನದೊಂದಿಗೆ ಮಾತನಾಡಿ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಅರಿತುಕೊಂಡರು. ಕ್ರಮಗಳ ಕುರಿತು ಅಲ್ಲಿಯ ಜನತೆ ತೃಪ್ತಿಯನ್ನು ಹೊಂದಿತ್ತು. ಇದರಿಂಧ ಮೋದಿಯವರು ಅಪರಾಧಿಯಾಗಿರಲಿಲ್ಲ ಬದಲಾಗಿ ಅವರು ಸ್ವಯಂ ರಾಜಕೀಯ ಬಲಿಪಶುವಾಗಿದ್ದಾರೆಂಬುದು ತಿಳಿದುಕೊಂಡರು. ಆದ್ದರಿಂದ ಮುಖ್ಯಮಂತ್ರಿಯಾಗಿ ಒಂದು ವರ್ಷವೂ ಕಳೆಯದ ಮೋದಿಯವರನ್ನು ಸಂಕೀರ್ಣ ಕೋಮು ಸನ್ನಿವೇಶಕ್ಕೆ ರಾಜಿನಾಮೆ ಪಡೆಯುವುದು ಅನ್ಯಾಯವಾಗುತ್ತದೆ. ಅದಲ್ಲದೇ ರಾಜಿನಾಮೆ ಪಡೆಯುವುದರಿಂದ ಗುಜರಾತಿನ ಸಾಮಾಜಿಕ ಸ್ಥಿತಿಗತಿಯನ್ನು ಧೀರ್ಘಕಾಲೀನವಾಗಿ ಹದಗೆಡಬಹುದೆಂದು ಅಡ್ವಾಣಿಯವರು ಅರಿತುಕೊಂಡರು.
ಸರ್ವಾಧಿಕಾರಿ ಧೋರಣೆಯ ಪ್ರಗತಿಪರರು ಮತ್ತು ಮೋದಿ
– ಪ್ರಸನ್ನ,ಬೆಂಗಳೂರು
ಅಹಮದಾಬಾದಿನ ಮೆಟ್ರೊಪಾಲಿಟನ್ ನ್ಯಾಯಾಲಯ ಪ್ರಗತಿಪರರಿಗೆ ಒಂದು ತಡೆಯಲಾರದ ಆಘಾತ ನೀಡಿದೆ. ಈ ಆಘಾತವನ್ನು ಸಹಿಸಿಕೊಂಡು ಈಗಲಾದರೂ ಈ ಬುದ್ದಿಗೇಡಿಗಳು ತಮ್ಮ ಮಾರ್ಗ ಸರಿ ಪಡಿಸಿಕೊಳ್ಳುತ್ತರೇನೋ ಎಂಬ ನಮ್ಮ ನಿರೀಕ್ಷೆ ಹುಸಿಯಾಗುವಂತಿದೆ, ಯಥಾ ಪ್ರಕಾರ ಅವರು ತಮ್ಮ ಪ್ರಜಾಪ್ರಭುತ್ವ ವಿರೋಧಿ ಧೋರಣೆಯಲ್ಲೇ ಇನ್ನೂ ಬಿದ್ದು ಒದ್ದಾಡುತ್ತಿದ್ದಾರೆ. ನಾನಂತೂ ಇವರನ್ನು ಪ್ರಜಾಪ್ರಭುತ್ವ ನ್ಯಾಯಾಂಗ ವ್ಯವಸ್ಥೆ ಮತ್ತು ಭಾರತದ ಕಾನೂನಗಳನ್ನು ಗೌರವಿಸದ ದೇಶದ್ರೋಹಿಗಳೆಂದೆ ಪರಿಗಣಿಸುತ್ತೇನೆ. ಹೇಗೆಂದಿರಾ?
ನೀವೆ ಗಮನಿಸಿ ೨೦೦೨ದಿಂದೀಚೆಗೆ ಇವರು ಹಾಡುತ್ತಿದ್ದುದು ಒಂದೇ ರಾಗ ಅದು ಮೋದಿ ನರಹಂತಕ ಎಂಬುದು, ಇವರ ಅಧಿನಾಯಕಿಯಂತೂ ಆತನನ್ನು ಸಾವಿನ ವ್ಯಾಪಾರಿಯೆಂದು ಜರೆದು ನಾಲಿಗೆ ಕುಲ ಹೇಳುತ್ತದೆಂಬುವುದನ್ನು ತೋರಿಸಿಕೊಟ್ಟುಬಿಟ್ಟಿದ್ದಲ್ಲದೇ ತನ್ನ ನಾಲಿಗೆಯನ್ನು ತಾನೆ ಕಚ್ಚಿ ಕೊಳ್ಳುವಂತಾಯ್ತು. ಗುಜರಾತಿನ ಜನರು ಸತತ ೩ ಬಾರಿ ಇವರ ತಲೆಯ ಮೇಲೆ ಕಲ್ಲು ಹಾಕಿದ್ದೂ ಆಯ್ತು. ಆದರೂ ನಮ್ಮ ಕರ್ನಾಟಕದ ಪ್ರಗತಿಪ್ರರು ಮಾತ್ರ ಇನ್ನೂ ಆ ರೋಗದಿಂದ ಹೊರಬರಲೇ ಇಲ್ಲ.
ಕಾಂಗ್ರೆಸ್ಸಿನ ‘ನಮೋ’ನಿಯಾ ಮತ್ತು ಸೆಕ್ಯುಲರ್ ‘ನಾಯಿಮರಿ’
– ರಾಕೇಶ್ ಶೆಟ್ಟಿ
ಭಾರತದಲ್ಲಿ ಭಾವುಕತೆಗೇನಾದರೂ ಬರವುಂಟೇ? ಹಾಗೇನಾದರೂ ಇದ್ದಿದ್ದರೆ ನಮ್ಮ ಸ್ಥಿತಿ ಸ್ವಲ್ಪಮಟ್ಟಿಗಾದರೂ ಸುಧಾರಿಸುತ್ತಿತ್ತೋ ಏನೋ? ಆದರೆ,ಭಾವುಕತೆ ಅನ್ನುವುದು ನಮ್ಮ ಅಸ್ಮಿತೆಯ ಭಾಗವಾಗಿರುವುದರಿಂದಲೇ ನಮ್ಮ ರಾಜಕಾರಣಿಗಳು,ರಾಜಕೀಯ ಪಕ್ಷಗಳು ಪದೇ ಪದೇ ಭಾವುಕತೆಯ ಬಿರುಗಾಳಿಯೆಬ್ಬಿಸಿ ತಮ್ಮ ಹಗರಣ,ವೈಫಲ್ಯಗಳನ್ನು ಮುಚ್ಚಿಕೊಳ್ಳುವುದು.ಅದರಲ್ಲೂ ಇಂತ ವಿಷಯದಲ್ಲಿ ಕಾಂಗ್ರೆಸ್ಸ್ ಪಕ್ಷದ್ದು ಉಳಿದೆಲ್ಲರಿಗಿಂತ ಒಂದು ‘ಕೈ’ ಮೇಲೆಯೇ ಹೌದು.
೨೪ ಗಂಟೆಯ ಮೀಡಿಯಾ ಯುಗದಲ್ಲಿ ದೊಡ್ಡ ದೊಡ್ಡ ಹಗರಣಗಳು ಸುದ್ದಿಯಾದಗಾಲೆಲ್ಲ ಕಾಂಗ್ರೆಸ್ಸ್ ಅದರಿಂದ ಹೊರಬರಲು ಒಂದು ಸಣ್ಣ ಎಳೆಯೇನಾದರೂ ಸಿಗುತ್ತದೆಯಾ ಅಂತ ನೋಡುತ್ತಿರುತ್ತದೆ.ಈ ಬಾರಿ ರೂಪಾಯಿ ಮೌಲ್ಯ ಕುಸಿದು,ಆಡಳಿತ ವ್ಯವಸ್ಥೆಯೇ ಹಳ್ಳ ಹಿಡಿದು ಕುಳಿತಿರುವಾಗ ಅದಕ್ಕೆ ಕಾಣಿಸಿದ ಬೆಳಕಿನ ಹಾದಿ “ನಾಯಿ ಮರಿ”…!
ಹೌದು. ಗುಜರಾತ್ ಮುಖ್ಯಮಂತ್ರಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಬಳಸಿದ ನಾಯಿ ಮರಿ ಪದ.ರಾಯಿಟರ್ಸ್ ನೀಡಿದ ಸಂದರ್ಶನದಲ್ಲಿ ನಾಯಿ ಮರಿ ಬಂದಿದ್ದು ಹೇಗೆ ಅಂತ ನೋಡಿದರೆ,
“ಸಂದರ್ಶಕ: “ಏನು (೨೦೦೨ ರ ಗಲಭೆ) ನಡೆಯಿತೋ ಆ ಬಗ್ಗೆ ನೀವು ಪಶ್ಚಾತ್ತಾಪ ಪಡುತ್ತಿರಾ?”
‘ಮಾನವ ಹಕ್ಕು ಉಲ್ಲಂಘನೆ’ ಅನ್ನುವುದು ಮೋದಿಗೆ ಮಾತ್ರ ಅನ್ವಯವೇ?
– ರಾಕೇಶ್ ಶೆಟ್ಟಿ
ಕಳ್ಳಬೆಕ್ಕು ತೀರ್ಥಯಾತ್ರೆಗೆ ಹೊರಟು ನಿಂತ ಕತೆ ಗೊತ್ತಿದೆಯಲ್ವಾ! ಅಮೇರಿಕಾದ ವಾರ್ಟನ್-ಇಂಡಿಯಾ ಎಕಾನಾಮಿಕ್ ಫೋರಂನ ವಾರ್ಷಿಕ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಭಾಷಣ ಮಾಡಲು ಆಹಾನ ಕೊಟ್ಟು ಕಡೆಗೆ ಎಡಪಂಥೀಯರ ಒತ್ತಾಯಕ್ಕೆ ಮಣಿದು ಅದನ್ನು ರದ್ದುಗೊಳಿಸಿ ಭಾರತದ ಸಂವಿಧಾನದಡಿ ಜನರಿಂದ ಚುನಾಯಿಸಿ ಬಂದ ಮುಖ್ಯಮಂತ್ರಿಯೊಬ್ಬರಿಗೆ ಅವಮಾನ ಮಾಡುವುದಿದೆಯಲ್ಲ ಅದು ಮೋದಿಗಾದ ಅವಮಾನವಲ್ಲ.ಬದಲಿಗೆ ಆ ರಾಜ್ಯಕ್ಕಾದ ಅವಮಾನ ಕೂಡ ಹೌದು.ಗುಜರಾತ್ ಗಲಭೆಯ ನಂತರ ಮೋದಿಯೆಡೆಗೆ ಬೆನ್ನು ತಿರುಗಿಸಿ ನಿಂತಿದ್ದ ಐರೋಪ್ಯ ಒಕ್ಕೂಟ ಇವತ್ತು ಸ್ನೇಹ ಹಸ್ತಚಾಚಿ ನಿಂತಿದೆ.ಆದರೆ ತೀರ್ಥಯಾತ್ರೆಗೆ ಹೊರಟು ನಿಂತ ಕಳ್ಳಬೆಕ್ಕು ಅಮೇರಿಕಾ ಮಾತ್ರ ಇನ್ನು ಹುಸಿ ಧ್ಯಾನದಲ್ಲಿದ್ದಂತಿದೆ.ಮೋದಿಯ ವಿಷಯದಲ್ಲಿ ಅದೂ ಈಗಲೂ ಹಟಮಾರಿ ಧೋರಣೆಯನ್ನು ಮುಂದುವರೆಸಿಕೊಂಡು ಬಂದಿದೆ.
“ನೀವು ಬಯಸುವ ಬದಲಾವಣೆ ನೀವೆ ಆಗಿ ತೋರಿಸಿ” ಅಂದಿದ್ದರು ಗಾಂಧೀಜಿ.ಆದರೆ ಅಮೇರಿಕಾದ ವರಸೆ ಸಲ್ಪ ಉಲ್ಟಾ ಈ ವಿಷಯದಲ್ಲಿ “ತಾನು ಬಯಸುವ ಬದಲಾವಣೆ ಬೇರೆಡೆಯಲ್ಲಿ,ಬೇರಯವರಿಂದ ಆಗಬೇಕು.ತಾನು ಮಾತ್ರ ತನ್ನ ಚಾಳಿ ಬಿಡಲಾರೆ” ಅನ್ನುವಂತೆ.ಮೋದಿಯ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯ ಭಾಷಣ ಬಿಗಿಯುವ ಈ ಅಮೇರಿಕಾ ಇತಿಹಾಸದುದ್ದಕ್ಕೂ ಮಾಡಿಕೊಂಡು ಬಂದಿರುವುದೇನು?





