ವಿಷಯದ ವಿವರಗಳಿಗೆ ದಾಟಿರಿ

Posts tagged ‘ತಂತ್ರಜ್ಞಾನ’

26
ಫೆಬ್ರ

ನಿಶ್ಯಬ್ದ …!

– ರಾಘವೇಂದ್ರ ಎಂ. ಸುಬ್ರಹ್ಮಣ್ಯ

anechoic chamberಕಲಾಸಿಪಾಳ್ಯ/ಕೆ.ಆರ್ ಮಾರ್ಕೆಟ್ ಕಡೆ ಹೋದವರಿಗೆ ಗೌಜು ಗದ್ದಲದ ನಿಜಾರ್ಥ ತಿಳಿದಿರುತ್ತೆ. ಹಾಗೆಯೇ ಕೊಡಚಾದ್ರಿ/ಕುಮಾರಪರ್ವತ ಚಾರಣಮಾಡಿದವರಿಗೆ ನಿಶ್ಯಬ್ದದ ಅನುಭವ ಆಗಿರುತ್ತೆ. ಈಗ ಪ್ರಶ್ನೆ ಏನಂದರೇ ಶಬ್ದಕ್ಕೆ ಮತ್ತಷ್ಟು ಶಬ್ದ ಸೇರಿಸಿ ಮತ್ತಷ್ಟು ಹೆಚ್ಚು ಶಬ್ದ ಮಾಡಬಹುದು. ಆದರೆ ನಿಶ್ಯಬ್ದವನ್ನು ಮತ್ತಷ್ಟು ಕಡಿಮೆ ಮಾಡಲು ಸಾಧ್ಯವೇ?

ಬೆಂಗಳೂರಿನ ನಾಲ್ಕು ರಸ್ತೆಗಳು ಸೇರುವಲ್ಲಿ ಗಣಪತಿ ಪೆಂಡಾಲ್ ಹಾಕಿ, ಸಂಜೆ ಕರ್ಣಭಯಂಕರ ಚಿತ್ರಗೀತೆಗಳನ್ನು ಹಾಕಿ, ಅದರ ಮೇಲೆ ಪಟಾಕಿ ಹೊಡೆದು, ಬೆಳಕಿಗಾಗಿ ಜನರೇಟರ್ ಇಟ್ಟು….ಹೇಗೆ ಶಬ್ದಕ್ಕೆ ಶಬ್ದಗಳನ್ನು ಸೇರಿಸುತ್ತಲೇ ಹೋಗಬಹುದು….ಶಬ್ದಮಾಲಿನ್ಯವನ್ನು ತಾರಕಕ್ಕೆ ತೆಗೆದುಕೊಂಡು ಹೋಗಬಹುದು. ಆದರೆ ಅದೇ ತರಹ ಅದರ ವಿರುದ್ದದೆಡೆಗೆ ಹೋಗುತ್ತಾ ಹೋದರೆ, ಅಂದರೆ ಗಣಪತಿ ಹಬ್ಬದ ಕೊನೆಯದಿನದ ಕಾರ್ಯಕ್ರಮಗಳೆಲ್ಲಾ ಮುಗಿದ ಮೇಲೆ ರಾತ್ರಿ 2:35ಕ್ಕೆ ಪೂರ್ತಿ ನಿಶ್ಯಬ್ದವನ್ನು ನೋಡಬಹುದು. ಆದರೆ ಅದು ಪೂರ್ತಿ ನಿಶ್ಯಬ್ದವಲ್ಲವಷ್ಟೇ? ಎಲ್ಲೋ ಒಂದು ನಾಯಿ ಓಳಿಡುತ್ತಿರುತ್ತದೆ. ಆ ನಾಯಿಯನ್ನು ಓಡಿಸಿದರೆ….ಇನ್ನಷ್ಟೂ ನಿಶ್ಯಬ್ದ. ಆದರೆ ಇನ್ನೆಲ್ಲೋ ಒಂದು ಜೀರುಂಡೆ ಕಿರ್ರೆನ್ನುತ್ತಿರುತ್ತದೆ. ಆ ಶಬ್ಧವನ್ನೂ ಇಲ್ಲವಾಗಿಸಿದರೆ…..ಹೀಗೆ ನಾವು ಎಷ್ಟರಮಟ್ಟಿಗಿನ ನಿಶ್ಯಬ್ದವನ್ನು ಸಾಧಿಸಬಹುದು!? ಶಬ್ದ ಪರಿವಹನಕ್ಕೆ ಯಾವುದೇ ಮಾಧ್ಯಮವಿಲ್ಲ ಬಾಹ್ಯಾಕಾಶ ಹೇಗಿರಬಹುದು? ಎಷ್ಟು ನಿಶ್ಯಬ್ದವಾಗಿರಬಹುದು!?

ಮತ್ತಷ್ಟು ಓದು »

12
ಆಗಸ್ಟ್

ಇನ್ನು10 ತಿಂಗಳಲ್ಲಿ ಭಾರತ ಚೀನಾ ನಡುವೆ ಸಂಭವನೀಯ ಯುದ್ಧ?

– ಗಣೇಶ್ ಕೆ ದಾವಣಗೆರೆ

chini yuddhaಚೀನಾದ ತಗಾದೆ ಶುರುವಾದಮೇಲೆ ಭಾರತ ೬೪ ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸೇನೆಗೆ ಹೊಸ ಆಯಾಮ ನೀಡುವ ಯೋಜನೆಗೆ ಅಸ್ತು ಎಂದಿದೆ. ಸಾವಿರಾರು ಸೇನೆಯ ತುಕಡಿಗಳನ್ನ ಹೊಂದಿದ ಸ್ಟ್ರೈಕಿಂಗ್ ಕಾರ್ಪ್ ನಿಯೋಜಿಸಲು ಉದ್ದೇಶಿಸಿದೆ. ಹಿಂದಿನ ವಾರದ ದಿ ವೀಕ್ ಪ್ರಕಟಿಸಿರುವ ಸೇನಾ ವಲಯದ ಅಭಿಮತದ ಪ್ರಕಾರ ಚೀನಾ ನಮ್ಮ ಮೇಲೆ ಎರಗಿ ಬರುವುದು ಅಷ್ಟೇನೂ ಸುಲಭದ ಕೆಲಸವೇನಲ್ಲ. ಚೀನೀಯರು ಆಕ್ರಮಣ ಮಾಡಿದರೆ, ಭಾರತವು ಚೀನಾದ ದುರ್ಬಲ ವಲಯಗಳ ಮೇಲೆ ಆಕ್ರಮಣ ಮಾಡಲಿದೆ. ಟಿಬೆಟ್ ಮೂಲಕ ಸಾವಿರಾರು ಕಿಲೋಮೀಟರ್ ಉದ್ದದ ರೈಲು ಮಾರ್ಗ ನಿರ್ಮಿಸಿ ಸೇನೆಯನ್ನ, ಜನರನ್ನ ವಾಯುಪುತ್ರನ ವೇಗದಲ್ಲಿ ಸಾಗಿಸುತ್ತೇವೆ ಎಂದು ಬೀಗುತ್ತಿರುವ ಚೀನಾ ಅದೇ ಕಾರಣಕ್ಕಾಗಿ ಕಳವಳಗೊಂಡಿದೆ. ಟಿಬೆಟ್‌ನಲ್ಲಿರುವ ರೈಲು ಮಾರ್ಗ ಹಲವಾರು ಸೇತುವೆಗಳನ್ನ ಒಳಗೊಂಡಿದೆ. ಜೊತೆಗೆ ಅಲ್ಲಿ ಬೆಂಗಾಡು. ಎಷ್ಟೇ ಎತ್ತರದಿಂದ ನೋಡಿದರೂ ನೆಲ ಕಾಣುತ್ತದೆ. ನಾಲ್ಕು ಸೇತುವೆಗಳನ್ನ ಒಡೆದು ಹಾಕಿದರೆ ಚೀನೀಯರು ಸೇನೆಯನ್ನ ಜಮಾವಣೆ ಮಾಡಲಿಕ್ಕೆ ರೈಲನ್ನ ಬಳಸಲಿಕ್ಕೆ ಸಾಧ್ಯವೇ ಇಲ್ಲ. ಅವನ್ನ ಮರು ನಿರ್ಮಿಸಿ ರೈಲು ಚಲಿಸುವ ಹೊತ್ತಿಗೆ ವಾರಗಳೇ ಬೇಕಾಗುತ್ತವೆ. ಜೊತೆಗೆ, ಟಿಬೆಟಿನಲ್ಲಿ ಹರಿಯುವ ನದಿಗಳಿಗೆ ರಾತ್ರೋ ರಾತ್ರಿ ಸೇತುವೆಗಳನ್ನ ಕಟ್ಟಿಕೊಡುವ ಕಠಿಣ ಪರಿಶ್ರಮದ, ಚಾಣಾಕ್ಷ, ಸಮರ್ಥ ಎಂಜಿನಿಯರುಗಳ ಬಳಗವಿದೆ ಭಾರತಕ್ಕೆ. ನಮ್ಮ ಸೇನೆಯ ಎಂಜಿನಿಯರುಗಳ ಈ ಎಲ್ಲ ವಿಶೇಷಣಗಳೂ ಮೊನ್ನೆ ಮೊನ್ನೆ ಸಂಭವಿಸಿದ ಉತ್ತರಾಖಂಡದ ಪ್ರಾಕೃತಿಕ ಅವಗಢದ ಸಮಯದಲ್ಲಿ ಸಾಬೀತಾಗಿದೆ.

ಮತ್ತಷ್ಟು ಓದು »