ವಿಷಯದ ವಿವರಗಳಿಗೆ ದಾಟಿರಿ

Posts tagged ‘ಪ್ರಶಸ್ತಿ ವಾಪಸತಿ ಪ್ರಹಸನ’

24
ಆಕ್ಟೋ

ಸುಳ್ಸುದ್ದಿ – ಪ್ರಶಸ್ತಿ ವಾಪಸ್ ಪ್ರಹಸನ : ಬೇಸ್ತುಬಿದ್ದ ಸಾಹಿತಿಗಳು

– ಪ್ರವೀಣ್ ಕುಮಾರ್,ಮಾವಿನಕಾಡು

Nilume Sulsuddi - Award Returning Politicsಘಟನೆ ಒಂದು:
ಅವರೊಬ್ಬ ಹಳೆಯ ಸಾಹಿತಿ.ಹಲವಾರು ವರ್ಷಗಳ ಹಿಂದೆ ಅವರಿಗೆ ಎರಡು ಲಕ್ಷ ನಗದಿನ ಜೊತೆಗೆ ಅಕಾಡೆಮಿ ಪ್ರಶಸ್ತಿ ಕೂಡಾ ದೊರಕಿತ್ತು.ಕೆಲ ದಿನಗಳ ಹಿಂದೆ ಟೌನ್ ಹಾಲ್ ಬಳಿ ಅವರನ್ನು ಭೇಟಿಯಾದ ವ್ಯಕ್ತಿಯೊಬ್ಬ,ವಿಚಾರವಾದಿಗಳ ಹತ್ಯೆಯನ್ನು ಖಂಡಿಸಿ, ಅರವತ್ತು ವರ್ಷದಲ್ಲಿ ದೇಶದಲ್ಲಿ ಎಂದೂ ಇಂತಹಾ ಘಟನೆ ನಡೆದಿಲ್ಲ ಎಂದು ಬಿಂಬಿಸುವ ಸಲುವಾಗಿ ಅದೇ ಕಾರಣವನ್ನು ನೀಡಿ ನಿಮಗೆ ನೀಡಲಾದ ಪ್ರಶಸ್ತಿ ಮತ್ತು ಪ್ರಶಸ್ತಿಯ ಜೊತೆ ದೊರೆತ ಹಣವನ್ನು ಅಕಾಡೆಮಿಗೆ ಮರಳಿಸಿದರೆ ಮುಂದೆ ರಚಿಸಲ್ಪಡುವ “ಗಂಜಿ ಗಿರಾಕಿಗಳ ಉದ್ಧಾರ ಸಮಿತಿ”ಗೆ  ನಿಮ್ಮನ್ನೇ ಅಧ್ಯಕ್ಷರಾಗಿಸಲಾಗುವುದು ಮತ್ತು ಕ್ಯಾಬಿನೆಟ್ ದರ್ಜೆಯ ಸ್ಥಾನ ಮಾನ ನೀಡಲಾಗುವುದು ಎಂದು ಪುಸಲಾಯಿಸಿದ್ದಾನೆ.ಪ್ರಮುಖ ಪಕ್ಷವೊಂದರ ಹಿರಿಯ ನಾಯಕನೆಂದು ಹೇಳಿಕೊಂಡಿದ್ದ ಆತನ ಮಾತು ಕೇಳಿ 5 ಪರ್ಸೆಂಟ್ ಬಡ್ಡಿಗೆ ಹಣ ತಂದು ತಮ್ಮ ಬ್ಯಾಂಕ್ ಖಾತೆಗೆ ತುಂಬಿ ಚೆಕ್ ನ ಜೊತೆಗೆ ಪ್ರಶಸ್ತಿಯನ್ನೂ ತೆಗೆದುಕೊಂಡು ಹೋಗಿ ಅಕಾಡೆಮಿಗೆ ಮರಳಿಸಿ ಇಂದಿಗೆ ಹದಿನೈದು ದಿನವಾಯಿತು.ಇದುವರೆಗೂ ಆತನ ಕಡೆಯಿಂದ ಯಾವುದೇ ಸುದ್ದಿಯೂ ಇಲ್ಲ! ಆ ನಾಯಕನ ಮಾತು ಕೇಳಿ ಸಾಲ ಮಾಡಿ ಪ್ರಶಸ್ತಿ ಮರಳಿಸಿದ ಸಾಹಿತಿ ಈಗ,ಅತ್ತ ಹುದ್ದೆಯೂ ಇಲ್ಲ,ಇತ್ತ ಪ್ರಶಸ್ತಿ ಮತ್ತು ಹಣವೂ ಇಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ!!
ಮತ್ತಷ್ಟು ಓದು »