ವಿಷಯದ ವಿವರಗಳಿಗೆ ದಾಟಿರಿ

Posts tagged ‘ಬೂತ’

22
ಫೆಬ್ರ

ಐದು ಮೂಲೆ ಮನೆ

– ಗುರುರಾಜ ಕೊಡ್ಕಣಿ. ಯಲ್ಲಾಪುರ

images‘ಈ ಮನೆಯಲ್ಲಿ ಭೂತಾ ಇದೆ, ಇಲ್ಲಿ ಯಾರೂ ಬರಬೇಡಿ’…..

ಹೀಗೊ೦ದು ಸಾಲನ್ನು ಆ ಮನೆಯ ಬಾಗಿಲಿನ ಮೇಲೆ ನೋಡಿದಾಗ ನಾವ್ಯಾರೂ ತಲೆ ಕೆಡಿಸಿಕೊ೦ಡಿರಲಿಲ್ಲ.ಚಿಕ್ಕ ಮಕ್ಕಳ ಭಾಷೆಯಲ್ಲಿ ಕಾಗುಣಿತಗಳ ದೋಷದೊ೦ದಿಗೆ ಇದ್ದಲಿನಿ೦ದ ಬರೆದಿದ್ದ ಗೀಚು ಅಕ್ಷರಗಳ ಬಗ್ಗೆ ಉಡಾಫೆಯಾಗಿ ಮಾತನಾಡಿಕೊ೦ಡು ಮನೆ ಸೇರಿಕೊ೦ಡಿದ್ದಾಗ ನನಗಿನ್ನೂ ಹನ್ನೆರಡು ವರ್ಷ ವಯಸ್ಸು. ಹಳೆಯ ಮನೆಯ ಮಾಲೀಕ ಏಕಾಏಕಿ ಬಾಡಿಗೆ ಜಾಸ್ತಿ ಮಾಡಿದನ್ನೆನ್ನುವ ಕಾರಣಕ್ಕೆ ಅವಸವಸರವಾಗಿ ಮನೆ ಬಿಡಬೇಕಾಗಿ ಬ೦ದಿತ್ತು. ಅಮ್ಮನ ಆಫೀಸಿಗೆ ತೀರ ಹತ್ತಿರದಲ್ಲಿದೆ ಎನ್ನುವ ಕಾರಣಕ್ಕೆ ಹೊಸ ಮನೆಯನ್ನು ಸೇರಿಕೊ೦ಡಿದ್ದೆವು. ಒ೦ದು ಸಾಧಾರಣ ಮನೆಯದು.ಪಡಸಾಲೆಯ ಹೊರಗೋಡೆಯ ಅರ್ಧದಷ್ಟು ಭಾಗ ಕಟ್ಟಿಗೆ ಕಿಟಕಿ ಆವರಿಸಿಕೊ೦ಡಿತ್ತು. ಪಡಸಾಲೆಯನ್ನು ದಾಟಿದರೆ ನಡುಮನೆ, ನಡುಮನೆಯಿ೦ದಲೇ ಬಲಕ್ಕೆ ತಿರುಗಿಕೊ೦ಡರೆ ಅಡುಗೆ ಕೋಣೆ, ಅಡುಗೆ ಕೋಣೆಯ ಮೂಲೆಯಲ್ಲಿ ಬಚ್ಚಲು. ಪಡಸಾಲೆ ಮತ್ತು ನಡುಮನೆಯನ್ನು ಸೇರಿಸುತ್ತಿದ್ದದ್ದು ರೈಲಿನ ಬೋಗಿಯ೦ಥಹ ಒ೦ದು ಕೋಣೆ. ಮತ್ತಷ್ಟು ಓದು »

11
ಆಗಸ್ಟ್

ದೆವ್ವ….ದೆವ್ವ….!

ಗುರುರಾಜ ಕೋಡ್ಕಣಿ. ಯಲ್ಲಾಪುರ

Ghost2ಅದು ಸುಮಾರು ಮಧ್ಯರಾತ್ರಿ ಸಮಯ.ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಸಾಮಾನ್ಯವಾಗಿ ನಾನು ರೈಲಿನಲ್ಲಿ ಚೆನ್ನಾಗಿ ನಿದ್ರಿಸುತ್ತೇನೆ. ಆದರೆ ಅದೇಕೋ ಅ೦ದು ನನಗೆ ನಿದ್ದೆ ಬರುತ್ತಿರಲಿಲ್ಲ.ಸುಮ್ಮನೆ ಆಕಳಿಕೆ. ಬೆಕ್ಕಿನ೦ತೆ ಆಕಳಿಸುತಾ ಕಿಟಕಿಯಿ೦ದ ಹೊರ ನೋಡಿದೆ. ‘ಅಮವಾಸ್ಯೆಯ ಕತ್ತಲು’ ಹೊರಗಡೆಯ ದೃಶ್ಯಗಳು ಯಾವುದೂ ಕಾಣುತ್ತಿರಲಿಲ್ಲ. ಸಮಯ ನೋಡಿದೆ. ಹನ್ನೆರಡುವರೆ. ನನ್ನ ಸ್ಥಳ ಬರಲು ಇನ್ನೂ ಸಮಯವಿದೆ.

ನನ್ನ ಬೋಗಿಯಲ್ಲಿ ಬೇರೆ ಯಾರೂ ಇರಲಿಲ್ಲ. ನಾನ್ನೊಬ್ಬನೇ. ಇದೇ ಕೊನೆಯ ಬೋಗಿ ಬೇರೆ! ರೈಲಿನ ಕೊನೆಯ ಬೋಗಿಗಳಲ್ಲಿ ದೆವ್ವಗಳು ಇರ್ತಾವ೦ತೆ, ಈ ಸಮಯದಲ್ಲಿ ಇಲ್ಲಿ ದೆವ್ವ ಬ೦ದು ಬಿಟ್ಟರೇ..? ನನ್ನ ವಿಚಾರಸರಣಿ ನೋಡಿ ನನಗೇ ನಗು ಬ೦ತು. ಸುಮ್ಮನೆ ನಕ್ಕು, ಬೇಸರ ಕಳೆಯಲು ಪುಸ್ತಕವೊದನ್ನು ತೆಗೆದು ಓದುತ್ತಾ ಕುಳಿತೆ. ಮತ್ತಷ್ಟು ಓದು »