ವಿಷಯದ ವಿವರಗಳಿಗೆ ದಾಟಿರಿ

Posts tagged ‘ಭಾರತ ಪಾಕಿಸ್ತಾನ’

28
ಮೇ

ರಾಝೀ..

– ಅನಘಾ ನಾಗಭೂಷಣ

ಭಾರತೀಯ ಗುಪ್ತಚರ ದಳದ ಆಫೀಸರುಗಳು, ಗೂಢಚಾರಿಗಳ(spy) ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆಯಾದರೂ ಇತ್ತೀಚೆಗೆ ಬಿಡುಗಡೆಯಾಗಿ ದೇಶಾದ್ಯಂತ ಜನಮೆಚ್ಚುಗೆ ಗಳಿಸಿದ್ದು ಸಲ್ಮಾನ್ ಖಾನನ ಟೈಗರ್ ಸಿನಿಮಾಗಳು, ಅಕ್ಷಯ್ ಕುಮಾರನ ಬೇಬಿ ಮತ್ತು ಆಲಿಯಾ ಭಟ್ ಳ ರಾಝೀ…

ಇವತ್ತು ರಾಝೀ ಸಿನಿಮಾ ನೋಡಿದೆ.. ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಹರಿಂದರ್ ಎಸ್. ಸಿಕ್ಕಾ ಅವರು 2008ರಲ್ಲಿ ಬರೆದಿದ್ದ ‘Calling Sehmat’ ಎಂಬ ಕಾದಂಬರಿಯನ್ನಾಧರಿಸಿರುವ ಈ ಚಿತ್ರ ವಾಸ್ತವಕ್ಕೆ ಹತ್ತಿರವಾಗಿ, ಮನಮುಟ್ಟುವಂತಿದೆ.. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ ಸಿನಿಮಾಗಳ ಬಗ್ಗೆ ನನಗೆ ಅಂಥಾ ಒಳ್ಳೆ ಅಭಿಪ್ರಾಯವೇನೂ ಇಲ್ಲವಾದರೂ ಬೇಬಿ ಇಷ್ಟವಾಗಿತ್ತು.. ಆದರೆ ವಸ್ತುನಿಷ್ಠತೆಯ ದೃಷ್ಟಿಯಿಂದ ನೋಡುವಾಗ ರಾಝೀ ಗೆ ಮೊದಲ ಸ್ಥಾನ.. ಈ ಚಿತ್ರದ ಮುಖ್ಯಪಾತ್ರ ಸಹಮತ್ ಸಯ್ಯದ್ ಳಾಗಿ ನಟಿಸಿರುವ ಆಲಿಯಾ ಭಟ್ ನಿಜಕ್ಕೂ ಅಭಿನಂದನಾರ್ಹಳು! ಹೈವೇ, ಉಡ್ತಾ ಪಂಜಾಬ್ ನಂತರ ಪ್ರಬುದ್ಧವೂ, ಸವಾಲೂ ಎನಿಸುವಂಥ ಪಾತ್ರವನ್ನ ಇದರಲ್ಲಿ ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾಳಾಕೆ.. ಟೈಗರ್, ಬೇಬಿಗಳಲ್ಲಿರುವಂತೆ ಅತಿಮಾನುಷವೆನಿಸುವ ಯಾವುದೇ ಸ್ಟಂಟ್ಸ್, ಫೈಟಿಂಗ್, ಅನಾವಶ್ಯಕ ಹಾಡುಗಳು, ಹೀರೋಯಿಸಂ ಇವೇನೂ ಇಲ್ಲದೇ ರಾಝೀ ಸಹಜವಾಗಿ ಮೂಡಿಬಂದಿದೆ.. ಮತ್ತಷ್ಟು ಓದು »

29
ಸೆಪ್ಟೆಂ

ಸರ್ಜಿಕಲ್ ಆಪರೇಶನ್

– ವಿನಾಯಕ ಹಂಪಿಹೊಳಿ

article-2384428-0050b8c600000258-96_634x449ಸರ್ಜರಿ ಎಂದರೆ ಶಸ್ತ್ರಚಿಕಿತ್ಸೆ. ದೇಹದ ಒಂದು ಭಾಗಕ್ಕೆ ಚಿಕಿತ್ಸೆ ಅಗತ್ಯವಾದಲ್ಲಿ ಅಲ್ಲಷ್ಟೇ ದೇಹವನ್ನು ಕೊಯ್ಯುವಂತೆ, ಸೈನಿಕ ಕಾರ್ಯಾಚರಣೆಯಲ್ಲಿಯೂ ಒಂದಾನೊಂದು ಪ್ರದೇಶದಲ್ಲಷ್ಟೇ ನಡೆಸುವ ಸೀಮಿತ ಕಾರ್ಯಾಚರಣೆಯೇ ಸರ್ಜಿಕಲ್ ಆಪರೇಶನ್. ಅಮೇರಿಕದ ಸೈನ್ಯ ಒಸಾಮಾ ಬಿನ್ ಲಾಡೆನ್ ವಾಸವಾಗಿರುವ ಸ್ಥಳದ ಮಾಹಿತಿ ತಿಳಿದಾಗ ಹೀಗೆಯೇ ದಾಳಿ ಮಾಡಿತ್ತು. ಈ ಹಿಂದೆ ಇರಾಕಿನಲ್ಲಿ ನ್ಯೂಕ್ಲಿಯರ್ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಸಿಕ್ಕಾಗ ಇಸ್ರೇಲ್ ದೇಶವು ಒಪೆರಾ ಕಾರ್ಯಾಚರಣೆಯನ್ನು ರೂಪಿಸಿ, ತನ್ನ ವಾಯುಸೇನೆಯನ್ನು ಉಪಯೋಗಿಸಿಕೊಂಡು ಆ ನ್ಯೂಕ್ಲಿಯರ್ ರಿಯಾಕ್ಟರನ್ನು ಧ್ವಂಸ ಮಾಡಿ ಬಂದಿತ್ತು. ಇಸ್ರೇಲಿನ ವಿಮಾನವೊಂದನ್ನು ಅಪಹರಿಸಿ ದೂರದ ಎಂಟೆಬ್ಬೆಯಲ್ಲಿ ಇಳಿಸಿದಾಗ ಆಪರೇಶನ್ ಥಂಡರ್ಬೋಲ್ಟ್ ಯೋಜಿಸಿ ಏಕಾಏಕಿ ಅಲ್ಲಿನ ಭಯೋತ್ಪಾದಕರ ಮೇಲೆ ದಾಳಿ ಮಾಡಿ ಬಂಧಿತರನ್ನು ಬಿಡುಗಡೆಗೊಳಿಸಿತು. ಮತ್ತಷ್ಟು ಓದು »