ಕಾಂಗ್ರೆಸ್ಸಿನ ‘ನಮೋ’ನಿಯಾ ಮತ್ತು ಸೆಕ್ಯುಲರ್ ‘ನಾಯಿಮರಿ’
– ರಾಕೇಶ್ ಶೆಟ್ಟಿ
ಭಾರತದಲ್ಲಿ ಭಾವುಕತೆಗೇನಾದರೂ ಬರವುಂಟೇ? ಹಾಗೇನಾದರೂ ಇದ್ದಿದ್ದರೆ ನಮ್ಮ ಸ್ಥಿತಿ ಸ್ವಲ್ಪಮಟ್ಟಿಗಾದರೂ ಸುಧಾರಿಸುತ್ತಿತ್ತೋ ಏನೋ? ಆದರೆ,ಭಾವುಕತೆ ಅನ್ನುವುದು ನಮ್ಮ ಅಸ್ಮಿತೆಯ ಭಾಗವಾಗಿರುವುದರಿಂದಲೇ ನಮ್ಮ ರಾಜಕಾರಣಿಗಳು,ರಾಜಕೀಯ ಪಕ್ಷಗಳು ಪದೇ ಪದೇ ಭಾವುಕತೆಯ ಬಿರುಗಾಳಿಯೆಬ್ಬಿಸಿ ತಮ್ಮ ಹಗರಣ,ವೈಫಲ್ಯಗಳನ್ನು ಮುಚ್ಚಿಕೊಳ್ಳುವುದು.ಅದರಲ್ಲೂ ಇಂತ ವಿಷಯದಲ್ಲಿ ಕಾಂಗ್ರೆಸ್ಸ್ ಪಕ್ಷದ್ದು ಉಳಿದೆಲ್ಲರಿಗಿಂತ ಒಂದು ‘ಕೈ’ ಮೇಲೆಯೇ ಹೌದು.
೨೪ ಗಂಟೆಯ ಮೀಡಿಯಾ ಯುಗದಲ್ಲಿ ದೊಡ್ಡ ದೊಡ್ಡ ಹಗರಣಗಳು ಸುದ್ದಿಯಾದಗಾಲೆಲ್ಲ ಕಾಂಗ್ರೆಸ್ಸ್ ಅದರಿಂದ ಹೊರಬರಲು ಒಂದು ಸಣ್ಣ ಎಳೆಯೇನಾದರೂ ಸಿಗುತ್ತದೆಯಾ ಅಂತ ನೋಡುತ್ತಿರುತ್ತದೆ.ಈ ಬಾರಿ ರೂಪಾಯಿ ಮೌಲ್ಯ ಕುಸಿದು,ಆಡಳಿತ ವ್ಯವಸ್ಥೆಯೇ ಹಳ್ಳ ಹಿಡಿದು ಕುಳಿತಿರುವಾಗ ಅದಕ್ಕೆ ಕಾಣಿಸಿದ ಬೆಳಕಿನ ಹಾದಿ “ನಾಯಿ ಮರಿ”…!
ಹೌದು. ಗುಜರಾತ್ ಮುಖ್ಯಮಂತ್ರಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಬಳಸಿದ ನಾಯಿ ಮರಿ ಪದ.ರಾಯಿಟರ್ಸ್ ನೀಡಿದ ಸಂದರ್ಶನದಲ್ಲಿ ನಾಯಿ ಮರಿ ಬಂದಿದ್ದು ಹೇಗೆ ಅಂತ ನೋಡಿದರೆ,
“ಸಂದರ್ಶಕ: “ಏನು (೨೦೦೨ ರ ಗಲಭೆ) ನಡೆಯಿತೋ ಆ ಬಗ್ಗೆ ನೀವು ಪಶ್ಚಾತ್ತಾಪ ಪಡುತ್ತಿರಾ?”
‘ಹಿಂದು’ ಶಬ್ದ ಕೇಳುತ್ತಲೇ ಇವರೇಕೆ ಹುಯಿಲೆಬ್ಬಿಸುತ್ತಾರೆ?
– ಪ್ರವೀಣ್ ಪಟವರ್ಧನ್
ಕೆಲ ದಿನಗಳ ಹಿಂದಷ್ಟೇ ಬೋಧ್ಗಯಾ ಬಾಂಬ್ ಬ್ಲಾಸ್ಟ್ ಪ್ರಕರಣದ ನಂತರ ನೀಡಿದ್ದ ವಿಚಿತ್ರ- ವಿಕೃತ ಹೇಳಿಕೆಗಳನ್ನು ಆಧರಿಸಿ, ತಮಗೆ ಸಮಯ ಬಂದಾಗಲೆಲ್ಲಾ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಿ, ಇತರರ (ಉದ್ದೇಶಪೂರ್ವಕವಾಗಿ ಗುಜರಾತಿನ ಮುಖ್ಯಮಂತ್ರಿ ಮೋದಿಯವರ) ತೇಜೋವಧೆ ಮಾಡುವ ಕಾಂಗ್ರೆಸ್ಸಿಗ “ಒಸಾಮಾ ಜೀ” ಎಂದು ಮುಕ್ತ ಮನಸ್ಸಿನಿಂದ ಮರ್ಯಾದೆ ನೀಡಿದ ಖ್ಯಾತಿಯ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯಸಿಂಗ್ ಅವರನ್ನು ಕುರಿತು Facebook ಜಾಲತಾಣದಲ್ಲಿ ಒಂದು ವ್ಯಂಗ್ಯ ಚಿತ್ರ ಹರಿದಾಡುತ್ತಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ವ್ಯಂಗ್ಯಚಿತ್ರದಲ್ಲಿ ಇದ್ದುದು ಇಷ್ಟೇ. “ಟೀವಿಯಲ್ಲಿ ದಿಗ್ವಿಜಯಸಿಂಗ್ ಒಂದು ಪತ್ರಿಕಾ ಹೇಳಿಕೆ ನೀಡುತ್ತಿದ್ದಾಗ ಮನೆಯಲ್ಲಿನ ಸಾಕಿದ ನಾಯಿಗಳು ಟೀವಿ ನೋಡುತ್ತಾ ಬೊಗಳುತ್ತಿವೆ. ಮುಂದೇನೂ ಹೇಳಲಾರೆ. ನೀವೇ ಅರ್ಥ ಮಾಡಿಕೊಳ್ಳಬಲ್ಲಿರಷ್ಟೇ.
ರಾಜಕಾರಣಿಯೆಂದರೆ ಅಲ್ಲಿ ವಾದ-ವಿವಾದಗಳು ಸಾಮಾನ್ಯ. ಈಗಿನ ರಾಜಕಾರಣದಲ್ಲಿ ಜನಪರ ಕೆಲಸ ಮಾಡುವುದಕ್ಕಿಂತ ವಾದಗಳಿಗೆ ಸಿಲುಕಿಕೊಳ್ಳುವುದೇ ಹೆಚ್ಚು. ಒಬ್ಬರ ಮೇಲೋಬ್ಬರ ಕೆಸರೆರಚಾಟ. ವಿರೋಧ ಪಕ್ಷದ ವ್ಯಕ್ತಿಯ ತೇಜೋವಧೆ, ಸುಳ್ಳು ಆರೋಪ, ಅರ್ಥವಿಹೀನ ಹೇಳಿಕೆ ಇವೆಲ್ಲವೂ ಕೆಸರೆರೆಚಾಟದ ವಿವಿಧ ಮುಖಗಳು. ನಿಮ್ಮ ಸರ್ಕಾರ ಹೀಗೆ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ ಸಿಗುವ ಉತ್ತರ, ನಮ್ಮ ಹಿಂದಿನ ಸರ್ಕಾರ ಇದಕ್ಕಿಂತಲೂ ಕೆಟ್ಟ ಕೆಲಸ ಮಾಡಿತ್ತು ಅದರ ಬಗ್ಗೆ ಮಾತಾಡೋಣವೇ ಎಂದು ಕುಟುಕಿ ತಮ್ಮ ಲೋಪಗಳನ್ನು cover-up ಮಾಡಿಕೊಳ್ಳುವವರೇ ಈ ದಿನ ಹೆಚ್ಚು.
ಜಾನ್ ಮೆಕೇನ್ ಸ್ಪರ್ಧಿಯಾಗುವ ಮುನ್ನವೇ ಗೆದ್ದಿದ್ದರು ಒಬಾಮಾ, ಹಾಗೆಯೇ ಮೋದಿಯೂ!
– ಗೋಪಾಲ ಕೃಷ್ಣ
ಅದು 2008ರ ನವೆಂಬರ್ 04ನೇ ತಾರೀಖು. ಹಲವು ಕಾರಣಗಳಿಗೆ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ವಿಶೇಷತೆ ಪಡೆದುಕೊಂಡಿತ್ತು. ಅದಕ್ಕೆ ಮುಖ್ಯವಾಗಿ ಕಾರಣವಾಗಿದ್ದು ಬರಾಕ್ ಒಬಾಮಾ. ಎಲ್ಲಾ ಅಡೆತಡೆಗಳನ್ನು ದಾಟಿ ಚುನಾವಣೆಯ ಹೊಸ್ತಿಲಲ್ಲಿ ನಿಂತ ಒಬಾಮಾಗೆ ರಿಪಬ್ಲಿಕನ್ ಪಕ್ಷದ ಜಾನ್ ಮೆಕೇನ್ ಪ್ರತಿಸ್ಪರ್ಧಿಯಾಗಿದ್ದರು. ಒಬಾಮಾ ಅವರೇ ಗೆಲ್ಲುತ್ತಾರೆ ಎನ್ನುವುದು ಚುನಾವಣೆಗೂ ಮುನ್ನವೆ ಅಮೇರಿಕಾದಲ್ಲಿ ಮಾತ್ರವಲ್ಲ ಇಡಿ ವಿಶ್ವದಲ್ಲೇ ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಆ ಪರಿಯ ಸಂಚಲನ ಮೂಡಿಸಿದ್ದರು ಒಬಾಮಾ. ಅವರ ಪ್ರಚಾರ ವೈಖರಿ, ಬದಲಾವಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದು, ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡದ್ದು ಎಲ್ಲವೂ ಒಬಾಮಾ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದವು. ಅಂತೆಯೇ ಗೆದ್ದು, ಅಧ್ಯಕ್ಷರಾದರು.
ಒಬಾಮಾ ಗೆಲುವಿನ ಹಾದಿಗೆ ಸಾಮ್ಯತೆ ಎನಿಸುವಂತಹ ಬೆಳವಣಿಗೆಗಳು ಭಾರತದಲ್ಲಿಯೂ ಗೋಚರಿಸುತ್ತಿವೆ, ಅದು ಮುಂದಿನ ಲೋಕಸಭಾ ಚುನಾವಣೆಗೆ. ಇದಕ್ಕೆ ಕಾರಣವಾಗಿರುವುದು ನರೇಂದ್ರ ಮೋದಿಯವರ ನಡೆಗಳು ಮತ್ತು ಅವರ ವಿರೋಧಿಗಳ ಅಡ್ಡಗಾಲುಗಳು.
ಒಬಾಮಾ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗುವುದು ಸುಲಭವಾಗಿರಲಿಲ್ಲ. ಜಾನ್ ಎಡ್ವಡ್ರ್ಸ್ ಮತ್ತು ಹಿಲರಿ ಕ್ಲಿಂಟನ್ ಅವರಿಂದ ಭಾರೀ ಸ್ಪರ್ಧೆಯನ್ನೇ ಎದುರಿಸಬೇಕಾಯಿತು. ಅದರಲ್ಲೂ ಹಿಲರಿ ಕ್ಲಿಂಟನ್ ಕೊನೆಯ ಕ್ಷಣದವರೆಗೂ ಒಬಾಮಾ ಹಾದಿಗೆ ಮುಳ್ಳಾಗುತ್ತಲೇ ಇದ್ದರು. ಅಧ್ಯಕ್ಷೀಯ ಚುನಾವಣೆಗಿಂತಲೂ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆಯೇ ಅಮೇರಿಕಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದು ಒಬಾಮಾ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿತ್ತು. ‘We ಓeeಜ ಅhಚಿಟಿge’ ‘ಅಊಂಓಉಇ, ತಿe ಛಿಚಿಟಿ’ ಎಂಬ ಘೋಷವಾಕ್ಯಗಳೊಂದಿಗೆ ಒಬಾಮಾ ಜನರ ಬಳಿಗೆ ಹೋದರು. ಹಿಲರಿ ಕ್ಲಿಂಟನ್ ‘ಇxಠಿeಡಿieಟಿಛಿe’ ಬಗ್ಗೆ ಮಾತನಾಡುತ್ತ ಜನರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದರು. ಮೊದಮೊದಲು ಜನರ ಭಾವನೆಗಳು ಅನುಭವಿ ಎಂಬ ಕಾರಣಕ್ಕೆ ಹಿಲರಿಯತ್ತ ವಾಲುತ್ತಿದ್ದವು. ಒಬಾಮಾರಾದರೂ ಹೊಸಬರು, ಇನ್ನು ಕಲಿಯಬೇಕಾದ್ದು ಬಹಳಷ್ಟಿದೆ ಎಂಬ ಅಭಿಪ್ರಾಯವೂ ಮೂಡಿತ್ತು. ಆದರೆ ವಾಸ್ತವವನ್ನರಿತು ಬದಲಾವಣೆ ತರಲು ತನ್ನಲ್ಲಿರುವ ಸಾಮಥ್ರ್ಯವನ್ನು ಜನರಿಗೆ ಬಿಡಿಬಿಡಿಯಾಗಿ ಬಿಚ್ಚಿಟ್ಟರು ಒಬಾಮಾ. ಹಿಲರಿ ತಮ್ಮ ಅನುಭವದ ಬಗ್ಗೆ ಹೇಳಿದರೆ ಹೊರತು, ಬದಲಾವಣೆಯ ಬಗ್ಗೆ ಜನರನ್ನು ಸೆಳೆಯಲಿಲ್ಲ. ಅಭ್ಯರ್ಥಿ ಆಯ್ಕೆಯಲ್ಲಿ ಒಬಾಮಾಗೆ ಶೇ.52ರಷ್ಟು ಮತ ಬಂದಿದ್ದರೆ, ಹಿಲರಿ ಶೇ.42 ಮತಗಳಿಗೆ ತೃಪ್ತಿಪಡಬೇಕಾಯಿತು. ಹಿರಿತನಕ್ಕಿಂತಲೂ ಇಚ್ಛಾಶಕ್ತಿಯೇ ಮುಖ್ಯ ಎಂಬುದನ್ನು ಸಾಬೀತುಪಡಿಸಿದರು. ಇದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಅವಕಾಶವನ್ನು ಒಬಾಮಾಗೆ ತಂದಿತ್ತಿತು.
ಕೃಷ್ಣ ಗಾರುಡಿ ವರ್ಸಸ್ ನರೀಂದ್ರ ಮೋಡಿ!
– ತುರುವೇಕೆರೆ ಪ್ರಸಾದ್
ಮೋದಿ: ಗುರುಗಳೇ, ಕಮಲ ಸೈನ್ಯದ ಮುಂದಿನ ಮಹಾಸಮರ ದಳಪತಿಯಾಗಿ ನೇಮಿಸಲ್ಪಟ್ಟಿರುವೆ. ಕೃಪೆ ಮಾಡಿ ಆಶೀರ್ವದಿಸಿ
ಅಡ್ವಾನಿ: ಛೀ! ಗುರುದ್ರೋಹಿ, ತೊಲಗಿಲ್ಲಿಂದ! ನಿನ್ನ ಮುಖ ತೋರಿಸಬೇಡ ನನಗೆ..!
ಮೋದಿ: ಈ ದುರಾಗ್ರಹವೇಕೆ ಗುರುವೇ! ಇದು ನೀವೇ ಕಲಸಿಕೊಟ್ಟ ಪಟ್ಟು.. ಏಕೀ ವಿರೋಧ? ಗುರು ಮಿಂಚಿನ ಶಿಷ್ಯಡು ಎಂದು ಎದೆ ತಟ್ಟಿ ಹೇಳುವುದು ಬಿಟ್ಟು! ನಿಮ್ಮ ಮುಖವಾಣಿಯಾಗಿದ್ದ ನನಗೇ ನೀವು ಅಡ್ಡವಾಣಿಯಾಗುವುದೇ?
ಅಡ್ವಾನಿ: ರಥ ಹತ್ತಿ ಅತಳ ಸುತಳ ಪಾತಾಳ ಸುತ್ತಿದ ಈ ಅತಿರಥ ಮಹಾರಥನ ಮುಂದೆ ನೀನ್ಯಾವ ಲೆಕ್ಕ?
ಮೋದಿ: ಯಾರು ತಿಳಿಯರು ನಿಮ್ಮ ರಥಬಲದ ಪರಾಕ್ರಮ
ಸಂದಿಗೊಂದಿಗಳೊಳ್ ಸಂಚರಿಸಿದ ನಿಮ್ಮ ರಥಯಾತ್ರೆಗಳ ಕರ್ಮ
ಎಲ್ಲದಕೂ ಕಾರಣವು ಶ್ರೀ ರಾಮ ನಾಮ
ಕಲ್ಯಾಣಸಿಂಗ್ ಇಲ್ಲದಿದ್ದರೆ ಮೂರು ನಾಮ
ಕಡಾಣಿ ಮುರಿದ ರಥದೊಡೆಯ ನೀವು ತೃಣಕ್ಕೆ ಸಮಾನ..!
ಅಡ್ವಾನಿ: ಜನಸಂಘ ಶೂರ ನಾ ಶ್ರೀರಾಮ ಬಲನೋ, ಸಂಘದೊಡನೆ ಹೋರಾಡಿ ಅಧ್ಯಕ್ಷ ಗಾದಿಯಂ ಪಡೆದವನೋ,ಗಡ್ಕರಿಯ ಉತ್ಸವಕೆ ಸಂಚಕಾರ ತಂದವನೋ? ಪ್ರಧಾನಿ ಪಟ್ಟಕ್ಕೆ ಎದುರಾಗೋ ಕುರಿಗಳಂ ನೀವಾಳಿಸೋ ವ್ಯಾಘ್ರನಿವನೋ..ಉಗ್ರ ಪ್ರತಾಪಿ..
೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ಹೋಗಿತ್ತು!
-ರಾಘವೇಂದ್ರ ನಾವಡ
ಭಾ.ಜ.ಪಾ. ದ ಪ್ರಾಥಮಿಕ ಸದಸ್ಯತ್ವನ್ನೊ೦ದು ಬಿಟ್ಟು ಪಕ್ಷದಲ್ಲಿ ತನಗಿದ್ದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ ಅಡ್ವಾಣಿಯ ಹತಾಶ ನಡೆ ಆಶ್ಚರ್ಯವನ್ನೇನೂ ತರಲಿಲ್ಲ! ಬದಲಿಗೆ ಬೇಸರವನ್ನು೦ಟು ಮಾಡಿತು. ಗೋವಾದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಗೆ ಗೈರು ಹಾಜರಾದಾಗಲೇ ಏನೋ ಮಹತ್ತರವಾದುದು ನಡೆಯುತ್ತದೆ ಎ೦ಬುದನ್ನು ಊಹೆಯಿತ್ತು! ಆದರೆ ಅಡ್ವಾಣಿಯ ಈ ನಡೆಯನ್ನಲ್ಲ! ಮೋದಿಯ ಮೇಲಿನ ಅಡ್ವಾಣಿಯವರ ವಿರೋಧದ ಅ೦ತ್ಯ ಹೇಗಾಗಬಹುದೆ೦ದು ಯೋಚಿಸುತ್ತಿದ್ದೆ.. ಮೋದಿಯ ಪದೋನ್ನತಿಯನ್ನು ಊಹಿಸಿಯಾಗಿತ್ತು! ಅದಕ್ಕಿದ್ದ ಅಡ್ವಾಣಿಯವರ ವಿರೋಧವನ್ನೂ ಅರ್ಥೈಸಿಕೊ೦ಡಿತ್ತು! ಆದರೆ ಅಡ್ವಾಣಿಯವರ ಈ ನಡೆ ಪಕ್ಷವನ್ನಷ್ಟೇ ಅಲ್ಲ! ಸಮಸ್ತ ಭಾ.ಜ.ಪಾ ಕಾರ್ಯಕರ್ತರಲ್ಲದೆ ಅದರ ಲಕ್ಷಾ೦ತರ ಅಭಿಮಾನಿಗಳಿಗೂ ಕ್ಷಣ ನಿಟ್ಟುಸಿರು ಬಿಡ್ಶುವ೦ತೆ ಮಾಡಿದೆ! ಕೇವಲ “ ಕೃಷ್ಣ “ ನ ಕೈಯಲ್ಲಿ ಆಯುಧ ಹಿಡಿಸಲೆ೦ದೇ ಕುರುಕ್ಷೇತ್ರದಲ್ಲಿ ಪಾ೦ಡವರೊ೦ದಿಗೆ ಹಿಗ್ಗಾಮುಗ್ಗ ಹೋರಾಡಿದ ಭೀಷ್ಮರು ತನ್ನ ಗುರಿ ಈಡೇರಿದ ನ೦ತರ ಶರಶಯ್ಯೆಯಲ್ಲಿ ಮಲಗಿದ೦ತೆ.. ಭಾಜಪಾದ “ ಲಾಲಕೃಷ್ಣ“ ಶಸ್ತ್ರ ತ್ಯಾಗ ಮಾಡಿರುವುದು ಬೇಸರವನ್ನು೦ಟು ಮಾಡಿದುದರ ಜೊತೆಗೆ… ಹೆ೦ಡತಿಯ ಒತ್ತಾಯಕ್ಕೋ… ವಯಸ್ಸಿನ ಪ್ರಭಾವವೋ… ಶಕ್ತಿಯ ಕೊರತೆಯೋ ಎ೦ಬುದರ ಗೊ೦ದಲದಲ್ಲಿ ತನ್ನ ಅಪ್ರಸ್ತುತತೆಯನ್ನು ಮನಗ೦ಡ ತ೦ದೆಯೊಬ್ಬ ಏಕದ೦ ಕುಟು೦ಬದ ಜವಾಬ್ದಾರಿಯನ್ನು ಮಕ್ಕಳಿಗೆ ತಲ್ಲಣದಿ೦ದಲೇ ನೀಡಿ, ಹೊರಬರುವುದನ್ನು ಕಲ್ಪಿಸಿಕೊಳ್ಳುವ೦ತೆ ಮಾಡುತ್ತದೆ!
ಅದು ೧೯೮೦ ರ ಕಾಲ.. ಜನಸ೦ಘದಿ೦ದ ಬೇರ್ಪಟ್ಟು ಭಾ.ಜ.ಪಾದ ಹುಟ್ಟಿಗೆ ಕಾರಣಕರ್ತರಾದವರಿಬ್ಬರಲ್ಲಿ ವಾಜಪೇಯಿಯ ಜೊತೆಗೆ ಅಡ್ವಾಣಿಯೂ ಒಬ್ಬರು. ೧೯೮೬ ರಲ್ಲಿ ಆ ಪಕ್ಷದ ರಾಷ್ತ್ರೀಯ ಅಧ್ಯಕ್ಷರಾಗುವವರೆಗೂ ಚುನಾವಣೆಗಳಲ್ಲಿ ಭಾಜಪಾದ ಸಾಧನೆಯೇನೂ ಹೇಳಿಕೊಳ್ಳುವ೦ತಹದ್ದಾಗಿರಲಿಲ್ಲ! ಆದರೆ ನ೦ತರದ್ದು ಇತಿಹಾಸ.. ಚುನಾವಣೆಯಿ೦ದ ಚುನಾವಣೆಗೆ ಸುಧಾರಿಸುತ್ತಲೇ ಹೋದ ಭಾಜಪಾ.. ಅಡ್ವಾಣಿಯವರು ಆರ೦ಭಿಸಿದ “ಶ್ರೀರಾಮ ರಥಯಾತ್ರೆಯ“ ಲಾಭವನ್ನು ಭರಪೂರವಾಗಿ ಪಡೆದುಕೊ೦ಡಿತು! ಕಾ೦ಗ್ರೆಸ್ಸಿಗೆ ಸಮಾನವಾಗಿ ಸೆಡ್ದುಹೊಡೆದು ನಿಲ್ಲಲು ಭಾಜಪಾಕ್ಕೆ ಶಕ್ತಿ ತು೦ಬಿದವರೆ೦ದರೆ ಇಬ್ಬರೇ.. ವಾಜಪೇಯಿ ಹಾಗೂ ಅಡ್ವಾಣಿ! ಲಕ್ಷಾ೦ತರ ಕಾರ್ಯಕರ್ತರ ಅಮಿತೋತ್ಸಾಹವೂ ಇವರೊ೦ದಿಗಿತ್ತು! ಬೆನ್ನಿಗೆ ಉಗ್ರ ಹಿ೦ದುತ್ವದ ಅಜೆ೦ಡಾ… ಬೆನ್ನು ಬೆನ್ನಿಗೆ ರಥಯಾತ್ರೆಗಳು.. ಭಾರತ ರಾಜಕೀಯದಲ್ಲಿ “ ರಾಮ-ಲಕ್ಷ್ಮಣ“ರೆ೦ದೇ ಖ್ಯಾತವಾದ ಈ ಜೋಡಿ ಕಾ೦ಗ್ರೆಸ್ ಗೆ ಪರ್ಯಾಯವಾಗಿ ಭಾ.ಜ.ಪಾವನ್ನು ಬೆಳೆಸಿದ್ದಲ್ಲದೆ, ದೇಶದ ರಾಜಕೀಯದಲ್ಲಿ ಕಾ೦ಗ್ರೆಸ್ಸಿಗೆ ಬಹುದೊಡ್ಡ ಪರ್ಯಾರವಾಗಿ ಬೆಳೆದು ನಿ೦ತಿತು. ೧೯೯೬ ರ ಚುನಾವಣೆಯಲ್ಲಿ ಏಕೈಕ ಬಲು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಾ.ಜ.ಪಾಕ್ಕೆ ವಾಜಪೇಯಿ ನೇತಾರರಾದರು. ಚುನಾವಣೆಗೂ ಮುನ್ನ ಅಡ್ವಾಣಿ ವಾಜಪೇಯಿಯವರನ್ನು ಬಾ.ಜ.ಪಾ ದ ಪ್ರಧಾನ ಮ೦ತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದು ಫಲ ನೀಡಿತು! “ ಬದಲಾವಣೆಗಾಗಿ ಭಾ.ಜ.ಪಾ.ವನ್ನು ತನ್ನಿ“ , “ ಈ ಬಾರಿ ಬಿ.ಜೆ.ಪಿ“ ಎ೦ಬ ಕಾರ್ಯಕರ್ತರ ಚುನಾವಣಾ ಘೋಷಣೆಗಳು ಫಲ ನೀಡಿದವು. ವಾಜಪೇಯಿಯವರ ಅಕಳ೦ಕಿತ ವ್ಯಕ್ತಿತ್ವ, ರಾಜಕೀಯ ಅನುಭವ ಹಾಗೂ ಅಡ್ವಾಣಿಯವರ ಪ್ರಖರ ಹಿ೦ದುತ್ವವಾದಕ್ಕೆ ಮತದಾರರು ಮಣೆ ಹಾಕಿದರು!
ಎರಡು ರಾಷ್ಟ್ರೀಯ ಪಕ್ಷಗಳ ತುಲನೆ
– ಚಕ್ರವರ್ತಿ ಸೂಲಿಬೆಲೆ
ಬ್ರಿಟಿಷರ ಕೊನೆಯ ವೈಸ್‌ರಾಯ್ ಮೌಂಟ್ ಬ್ಯಾಟನ್. ಹಾಗಾದರೆ ಭಾರತದ ಮೊದಲ ವೈಸ್‌ರಾಯ್ ಯಾರು ಗೊತ್ತ? ಮತ್ಯಾರು? ಈ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ!
ನೆಹರೂ ಅತ್ಯಂತ ಶ್ರದ್ಧೆಯಿಂದ ಆಂಗ್ಲರ ರಾಜನೀತಿಯನ್ನು ಅರಿತುಕೊಂಡರು. ಅದನ್ನು ಹಂತಹಂತವಾಗಿ ಪ್ರಯೋಗಿಸಲಾರಂಭಿಸಿದರು. ಅಧಿಕಾರ ಕೈಗೆ ದಕ್ಕುವ ಮುನ್ನಿನ ಚುನಾವಣೆಗಳಲ್ಲಿ ತಮ್ಮ ಚಾಕಚಕ್ಯತೆಯನ್ನು, ವಿಭಜಿಸಿ ಗೆಲ್ಲುವ ತಂತ್ರವನ್ನು ಚೆನ್ನಾಗಿಯೇ ಬಳಸಿದರು. ಒಂದೆಡೆ ಮುಸಲ್ಮಾನರನ್ನು ಓಲೈಸಿ ಗೆಲ್ಲುವುದು, ಮತ್ತೊಂದೆಡೆ ಪಟೇಲರನ್ನು ಕಡು ಹಿಂದೂವಾಗಿ ಬಿಂಬಿಸಿ ಹಿಂದೂಗಳ ಮತವನ್ನು ಸೆಳೆದುಕೊಳ್ಳುವ ತಂತ್ರಗಾರಿಕೆ ಯಶಸ್ವಿಯಾಯ್ತು. ನೆಹರೂ ಪಕ್ಕಾ ಇಂಗ್ಲೀಶ್ ಬಾಬುವಾಗಿಬಿಟ್ಟರು. ಆಗಲೇ ಗಾಂಧೀಜಿ ಗಾಬರಿಯಿಂದ ಹೇಳಿದ್ದು, ‘ದೇಶ ವಿಭಜನೆಗೊಂಡು ಸ್ವಾತಂತ್ರ್ಯ ಬಂತು. ಇನ್ನು ಮುಂದೆ ಕಾಂಗ್ರೆಸ್ಸನ್ನು ವಿಸರ್ಜಿಸಿಬಿಡೋಣ.’ ಸ್ವತಃ ಗಾಂಧೀಜಿಗೆ ಅಸಹ್ಯವಾಗಿತ್ತು. ತಾನೇ ಮೂಲೆ ಮೂಲೆಗೆ ಕೊಂಡೊಯ್ದ ಕಾಂಗ್ರೆಸ್ಸು ಮುಂದೊಮ್ಮೆ ದೇಶದ ದುರ್ಗತಿಗೆ ಕಾರಣವಾಗುತ್ತದೆಂಬ ಸ್ಪಷ್ಟ ಅರಿವು ಅವರಿಗಿತ್ತು.
ಬಿಜೆಪಿಗೂ ಕಾಂಗ್ರೆಸ್ಸಿಗೂ ಒಂದು ಎದ್ದುಕಾಣುವಂತಹ ಭಿನ್ನತೆ ಇದೆ. ಒಂದು, ಕಾರ್ಯಕರ್ತರಿಂದಲೇ ನಿರ್ಮಾಣಗೊಂಡ, ಕೆಡರ್ ಆಧಾರಿತ ಪಕ್ಷ. ಮತ್ತೊಂದು, ಅಗತ್ಯ ಬಿದ್ದಾಗ ಕಾರ್ಯಕರ್ತರನ್ನು ಕೊಂಡುಕೊಳ್ಳುವ ಪಕ್ಷ. ಇವತ್ತಿಗೂ ನಾನು ಕಾಂಗ್ರೆಸ್ಸಿಗ ಎಂದು ಎದೆ ತಟ್ಟಿ ಹೇಳುವ ಸಾಮಾನ್ಯ ಕಾರ್ಯಕರ್ತರನ್ನು ತೋರಿಸಿ ನೋಡೋಣ. ಅಲ್ಲಿ ಕರುಳ ಸಂಬಂಧಗಳಿಲ್ಲ. ಅದೊಂಥರಾ ನಕಲು ಮಾಡಿಸಿ ನೂರು ಪ್ರತಿಶತ ಅಂಕ ಗಳಿಸುವ ಶಾಲೆಯಿದ್ದಂತೆ. ಆ ಶಾಲೆಯಲ್ಲಿ ಕೆಲಸ ನಡೆಯುವುದೇ ಕೊನೆಯ ಆರು ದಿನಗಳಲ್ಲಿ. ಹೀಗಾಗಿ ಬಂದ ಫಲಿತಾಂಶಕ್ಕೆ ಬೆನ್ನು ತಟ್ಟಿಕೊಳ್ಳುವವರು ಇರುತ್ತಾರೆಯೇ ಹೊರತು, ಆನಂದ ಪಡುವವರಲ್ಲ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಬಿಟ್ಟು ಹೊರಬಂದಾಗ ತಾನು ತಾಯಿಯ ಮಡಿಲಿನಿಂದ ಹೊರಗೆ ಬಂದುಬಿಟ್ಟಿದ್ದೇನೆಂದು ಯಾರಿಗೂ ಅನ್ನಿಸೋದೇ ಇಲ್ಲ. ಅಲ್ಲಿ ತಪ್ಪಾದಾಗ ಪ್ರಶ್ನೆ ಯಾರನ್ನು ಕೇಳಬೇಕೆಂದು ಯಾರಿಗೂ ಗೊತ್ತೇಇರುವುದಿಲ್ಲ. ಗೋಹತ್ಯೆ ನಿಷೇಧ ಹಿಂತೆಗೆದುಕೊಂಡಿದ್ದನ್ನು ಕೇಳಿ ಅನೇಕ ಕಾಂಗ್ರೆಸ್ಸಿಗರೇ ಗರಮ್ ಆಗಿದ್ದಾರೆ. ದುರ್ದೈವ, ಈ ದರ್ದನ್ನು ಯಾರೆದುರು ತೋಡಿಕೊಳ್ಳಬೇಕೆಂದು ಗೊತ್ತಿಲ್ಲವಷ್ಟೆ. ಮುಖ್ಯಮಂತ್ರಿ ಸ್ಥಾನ ಸಿಗದಿದ್ದುದಕ್ಕೆ ಖರ್ಗೆಯ ಬಳಗ ಜಿಲ್ಲೆ ಜಿಲ್ಲೆಗಳಲ್ಲಿ ರಾಡಿ ಎಬ್ಬಿಸಿತಲ್ಲ, ಅದಕ್ಕೆಲ್ಲ ಪ್ರಚಾರವೇ ಸಿಗಲಿಲ್ಲ ಏಕೆ? ಬಹಳ ಸಿಂಪಲ್ಲು. ಈ ರೀತಿ ಜೀವ ಕೊಡುವ ಕಾರ್ಯಕರ್ತರು ಅಲ್ಲಿಲ್ಲ; ಖರೀದಿಸಿದವರಿಗಾಗಿ ತಲೆಕೆಡಿಸಿಕೊಳ್ಳಬೇಕಿಲ್ಲ ಅಂತರ್ಥ! ಇಷ್ಟು ಮಾತ್ರ ಬಿಜೆಪಿಯೊಳಗೆ ಕಿರಿಕಿರಿಯಾಗಿಬಿಟ್ಟಿದ್ದರೆ ಮಾಧ್ಯಮಗಳಿಗೆ ಹಬ್ಬವಾಗಿಬಿಟ್ಟಿರುತ್ತಿತ್ತು. ಏಕೆ ಗೊತ್ತೇನು? ರಾಯಚೂರಿನಲ್ಲಾಗುವ ಒಂದು ಸಣ್ಣ ಬೆಳವಣಿಗೆಗೂ ಮಡಿಕೇರಿಯ ಕಾರ್ಯಕರ್ತ ನೊಂದುಕೊಳ್ಳುತ್ತಾನೆ. ಅವನ ಹೃದಯ ಕಂಪಿಸುತ್ತದೆ.
ಬಿಜೆಪಿಯ ಅಪಸ್ವರಕ್ಕೆ ‘ಆರ್.ಎಸ್.ಎಸ್’ನದ್ದೇ ಟ್ಯೂನ್
– ರಾಕೇಶ್ ಶೆಟ್ಟಿ
ಅಂದು ಪಾಕಿಸ್ತಾನದ ನೆಲದಲ್ಲಿ ನಿಂತು “ಜಿನ್ನಾ ಜಾತ್ಯಾತೀತರಾಗಿದ್ದರು” ಅನ್ನುವ ಸತ್ಯ ಹೇಳಿದ್ದೆ ಆ ಹಿರಿಯ ಮಾಡಿದ ದೊಡ್ಡ ತಪ್ಪು(!).ಆ ಒಂದು ಮಾತು ಅವರು ಅಲ್ಲಿವರೆಗೂ ದೇಶದ ಮೂಲೆ ಮೂಲೆಗೆ ಹೋಗಿ ಅವರು ಪಕ್ಷಕಟ್ಟಲು ಪಟ್ಟ ಶ್ರಮ,೨ ಸೀಟಿನಿಂದ ಅಧಿಕಾರದ ಚುಕ್ಕಾಣಿ ಹಿಡಿಯುವವರೆಗೂ ಪಕ್ಷ ಸಾಗಿ ಬಂದ ಹಾದಿಯಲ್ಲಿ ಅವರು ವಹಿಸಿದ ಜವಬ್ದಾರಿ ಎಲ್ಲವನ್ನು ಮರೆಸಿಹಾಕಿತ್ತು.ಧುತ್ತನೆ ಅವರ ಮಾತೃ ಸಂಘಟನೆಗೆ ಈ ಹಿರಿಯ ನಾಯಕ ಮತ್ತು ಮುಂದಿನ ಲೋಕಸಭೆ ಚುನಾವಣೆಯ ಪ್ರಧಾನಿ ಅಭ್ಯರ್ಥಿಯಾಗಿದ್ದವರಿಗೆ ವಯಸ್ಸಾಯಿತು ಅನ್ನುವ ಜ್ನಾನೋದಯ ಅರ್ಧ ರಾತಿಯಲ್ಲಿ ಆಗಿಬಿಟ್ಟಿತ್ತಲ್ಲ,ಅಷ್ಟೇ ಸಾಕಿತ್ತು ಅವಮಾನಕಾರಿಯಾಗಿ ಅವರನ್ನು ಪಕ್ಕಕ್ಕೆ ತಳ್ಳಿ,ಅಲ್ಲಿಯವರೆಗೂ ಮಹಾರಾಷ್ಟ್ರ ಬಿಟ್ಟು ಹೊರಗೆ ಹೆಸರೇ ಕೇಳಿರದ ‘ಯುವ ನಾಯಕ(?)’ ನನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.
ಇವತ್ತಿಗೆ ‘ಆ ಹಿರಿಯ’ರನ್ನು ಮರೆತು ಮುಂದೆ ಹೋದ ಆ ಪಕ್ಷದ ಪಾಡು, ಅಹಂಕಾರದಿಂದ ಕೃಷ್ಣ ಪರಮಾತ್ಮನನ್ನು ಬಿಟ್ಟು ಬಿಲ್ವಿದ್ಯೆ ಮರೆತು ನಿಂತ ‘ಅರ್ಜುನ’ನಂತೆಯೇ ಆಗಿದೆ.ಕೂದಲು ಬೆಳೆಯೋ ಜಾಗವೆಲ್ಲ ತಲೆ ಅಂದುಕೊಂಡವರಂತೆ ಆ ಪಕ್ಷದಲ್ಲಿರುವ ಜನರೆಲ್ಲಾ ತಾವೇ ‘ಪ್ರಧಾನಿ ಅಭ್ಯರ್ಥಿ’ಗಳು ಅಂದುಕೊಂಡಿದ್ದಾರೆ.ಅಂದ ಹಾಗೆ,ಆ ಹಿರಿಯರ ಹೆಸರು ಲಾಲ್ ಕೃಷ್ಣ ಅಡ್ವಾಣಿ,ಪಕ್ಷ ಬಿಜೆಪಿ,ಮಾತೃ ಸಂಘಟನೆಯ ಹೆಸರು ‘ಆರ್.ಎಸ್.ಎಸ್’ ಮತ್ತೆ ಆ ಯುವನಾಯಕ(?) ಮೊನ್ನೆ ಮೊನ್ನೆ ತಾನೇ ಎಕರೆಗಟ್ಟಲೆ ರೈತರ ಜಮೀನು ಸ್ವಾಹ ಮಾಡಿದ್ದಾರೆ ಅನ್ನುವ ಆರೋಪ ಹೊತ್ತ ನಿತಿನ್ ಗಡ್ಕರಿ.





