ಸರ್ಜಿಕಲ್ ಆಪರೇಶನ್
– ವಿನಾಯಕ ಹಂಪಿಹೊಳಿ
ಸರ್ಜರಿ ಎಂದರೆ ಶಸ್ತ್ರಚಿಕಿತ್ಸೆ. ದೇಹದ ಒಂದು ಭಾಗಕ್ಕೆ ಚಿಕಿತ್ಸೆ ಅಗತ್ಯವಾದಲ್ಲಿ ಅಲ್ಲಷ್ಟೇ ದೇಹವನ್ನು ಕೊಯ್ಯುವಂತೆ, ಸೈನಿಕ ಕಾರ್ಯಾಚರಣೆಯಲ್ಲಿಯೂ ಒಂದಾನೊಂದು ಪ್ರದೇಶದಲ್ಲಷ್ಟೇ ನಡೆಸುವ ಸೀಮಿತ ಕಾರ್ಯಾಚರಣೆಯೇ ಸರ್ಜಿಕಲ್ ಆಪರೇಶನ್. ಅಮೇರಿಕದ ಸೈನ್ಯ ಒಸಾಮಾ ಬಿನ್ ಲಾಡೆನ್ ವಾಸವಾಗಿರುವ ಸ್ಥಳದ ಮಾಹಿತಿ ತಿಳಿದಾಗ ಹೀಗೆಯೇ ದಾಳಿ ಮಾಡಿತ್ತು. ಈ ಹಿಂದೆ ಇರಾಕಿನಲ್ಲಿ ನ್ಯೂಕ್ಲಿಯರ್ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಸಿಕ್ಕಾಗ ಇಸ್ರೇಲ್ ದೇಶವು ಒಪೆರಾ ಕಾರ್ಯಾಚರಣೆಯನ್ನು ರೂಪಿಸಿ, ತನ್ನ ವಾಯುಸೇನೆಯನ್ನು ಉಪಯೋಗಿಸಿಕೊಂಡು ಆ ನ್ಯೂಕ್ಲಿಯರ್ ರಿಯಾಕ್ಟರನ್ನು ಧ್ವಂಸ ಮಾಡಿ ಬಂದಿತ್ತು. ಇಸ್ರೇಲಿನ ವಿಮಾನವೊಂದನ್ನು ಅಪಹರಿಸಿ ದೂರದ ಎಂಟೆಬ್ಬೆಯಲ್ಲಿ ಇಳಿಸಿದಾಗ ಆಪರೇಶನ್ ಥಂಡರ್ಬೋಲ್ಟ್ ಯೋಜಿಸಿ ಏಕಾಏಕಿ ಅಲ್ಲಿನ ಭಯೋತ್ಪಾದಕರ ಮೇಲೆ ದಾಳಿ ಮಾಡಿ ಬಂಧಿತರನ್ನು ಬಿಡುಗಡೆಗೊಳಿಸಿತು. ಮತ್ತಷ್ಟು ಓದು 




