ರಾಹುಲ್ ಗಾ೦ಧಿ ,ಬೆ೦ಗಳೂರು ರಾಜ್ಯ ಮತ್ತು ಕನ್ನಡ
– ಗುರುರಾಜ ಕೊಡ್ಕಣಿ,ಯಲ್ಲಾಪುರ
’ಕರ್ನಾಟಕ ಮತ್ತು ಬೆ೦ಗಳೂರಿಗೆ ಜನ ಉದ್ಯೋಗ ಅರಸಿ ಹೋಗುತ್ತಾರೆ,ಏಕೆ೦ದರೆ ಇವೆರಡೂ ಕಾ೦ಗ್ರೆಸ್ ಆಡಳಿತವಿರುವ ರಾಜ್ಯಗಳು ’ ಎ೦ದು ಹೇಳಿಕೆ ನೀಡಿದ್ದರೆ೦ಬ ಕಾರಣಕ್ಕೇ ದೇಶದ ಅತೀ ದೊಡ್ಡ ರಾಜಕೀಯ ಪಕ್ಷದ ನಾಯಕ ರಾಹುಲ್ ಗಾ೦ಧಿ ಅಪಹಾಸ್ಯಕ್ಕೀಡಾಗಿದ್ದರು.ಆದರೆ ನಿಜಕ್ಕೂ ಅವರು ಹಾಗೆ ಹೇಳಿದ್ದರಾ ಎನ್ನುವುದರ ಬಗ್ಗೆ ಅನೇಕ ಅನುಮಾನಗಳಿವೆ. ಒ೦ದು ವೇಳೆ ಅವರು ಹಾಗೆ ಹೇಳಿದ್ದೇ ಹೌದಾದಲ್ಲಿ ರಾಜ್ಯದ ರಾಜಧಾನಿಯ ಬಗ್ಗೆಯೇ ಯುವನಾಯಕನಿಗೆ ತಿಳಿಯದಿರುವುದು ಅತ್ಯ೦ತ ಖೇದಕರ. ರಾಹುಲ್ ಗಾ೦ಧಿ ಹೇಳಿದ್ದಾರಾ ,ಇಲ್ಲವಾ ಎನ್ನುವುದನ್ನು ಪಕ್ಕಕ್ಕಿಟ್ಟು ಮೇಲಿನ ಮಾತನ್ನು ಒಮ್ಮೆ ಗ೦ಭೀರವಾಗಿ ಪರಾಮರ್ಶಿಸಬೇಕಾದ ಪರಿಸ್ಥಿತಿ ಇ೦ದು ಕನ್ನಡಿಗರಿಗಿದೆ ಎನ್ನುವುದೂ ಸತ್ಯವೇ. ಇ೦ದಿಗೂ ಅನೇಕ ಉತ್ತರ ಭಾರತೀಯರಿಗೆ ಬೆ೦ಗಳೂರು ಕರ್ನಾಟಕಕ್ಕೆ ಸೇರಿದುದು ಎ೦ಬುದು ತಿಳಿದ೦ತಿಲ್ಲ.ಕೆಲವರ೦ತೂ ಇದನ್ನೊ೦ದು ’ಕೇ೦ದ್ರಾಡಳಿತ ಪ್ರದೇಶ’ ಎ೦ದೂ ಭಾವಿಸಿರಲಿಕ್ಕೆ ಸಾಕು..!!
ಹಿಂದಿ ಬೇಕು …. ಕೂಪಮಂಡೂಕತನ ಬೇಡ……..
*ಅನಿರುದ್ಧ ಕುಮಟ
ಮಕ್ಕಳ ಜಗಳದಲ್ಲಿ ಅಮ್ಮ ಬಡಪಾಯಿಯಾದಳು ಅಂತ ಒಂದು ಗಾದೆ ಮಾತು ಇದೆಯಾ? ಇಲ್ಲದಿರಲೂಬಹುದು. ಆದರೆ ನಿಮ್ಮ ಕನ್ನಡದ ಜಗಳ, ಆ ನೀರಿನ ಜಗಳ, ಆ ಧಾರ್ಮಿಕ ಕಲಹ ಇವನ್ನೆಲ್ಲ ನೋಡಿದಾಗ ನನಗೆನಿಸಿದ್ದು ಅಮ್ಮ ಬಡವಾಗಿದ್ದಾಳೆ ಅಂತ. ಅಲ್ಲಾರಿ ನೀವು ಪಕ್ಕದ ಮರಾಠಿಗರನ್ನು ಕಂಡರೆ ಬೆಂಕಿಕಾರುತ್ತಿರಿ. ಪಾಪ ಆ ತಮಿಳರು ಇಲ್ಲಿ ಬೆಳೆದರೆ ಕರಬುತ್ತೀರಿ. ಅಥವಾ ನೀರಿನ ವಿಷಯ ಹಿಡಿದುಕೊಂಡು ಸುನಾಮಿಯಂತೆ ಜಗಳ ಮಾಡುತ್ತೀರಿ…ಥಕ್ ನಿಮ್ಮ ಇಂತಹ ಜಗಳದಲ್ಲಿ ಬಡವಾದದ್ದು ಯಾರು. ಭಾರತವಲ್ಲವೇ. ಇಡೀ ಭಾರತದ ಬಗ್ಗೆ ಯೋಚಿಸಬೇಕಾದ ನಾವೆಲ್ಲ, ದಾಯಾದಿಗಳ ತರಹ ಯಾಕೆ ಕಿತ್ತಾಡಿಕೊಳ್ಳಬೇಕು? ನಿಮಗೆ ನಿಮ್ಮ ಬಗ್ಗೆಯೇ ಅಸಹ್ಯ ಎನಿಸುವುದಿಲ್ಲವೇ?
ಹಿಂದಿ ಜ್ವರಕ್ಕೆ ತುತ್ತಾದ ವಿಜಯ ಕರ್ನಾಟಕ ಅನ್ನೋ ಹೆಡ್ ಲೈನ್ ನಲ್ಲಿ ಪ್ರಕಟವಾದ ಲೇಖನವನ್ನೇ ನೋಡಿ. ಪತ್ರಿಕೆಯಲ್ಲಿ ವಿದೇಶಿಯರ ಹಿಂದಿ ಮೋಹ ಅನ್ನೋ ಲೇಖನ ಪ್ರಕಟಗೊಂಡರೆ ಸಾಕು. ಜಗತ್ತಿನಲ್ಲಿರುವ ಸಮಸ್ತ ಕನ್ನಡ ಪುಸ್ತಕಗಳೆಲ್ಲ ಬೆಂಕಿಯಲ್ಲಿ ಉರಿದು ಹೋಯ್ತು ಅನ್ನೋ ತರಹ ಯಾಕೆ ಉರಿದು ಹೋಗ್ತಿರಿ. ಅರೇ ಅದೊಂದು ಪತ್ರಿಕೆ. ಅದರಲ್ಲಿ ಭಿನ್ನ, ವಿಭಿನ್ನ ವಿಚಾರಧಾರೆಯ ಲೇಖನಗಳು ಪ್ರಕಟಗೊಳ್ಳುತ್ತವೆ. ಅವರೇನೂ ಹಿಂದಿಯಲ್ಲಿ ಬರೆದಿಲ್ಲ ನನಗಂತೂ ಕನ್ನಡಿಗರಲ್ಲಿ ಹಿಂದಿ ಕಲಿಸುವ ಒಂದು ಪ್ರಯತ್ನದಂತೆ ಆ ಲೇಖನ ಕಾಣಲೇ ಇಲ್ಲ. ನನ್ನ ಪ್ರಕಾರ ಕನ್ನಡಿಗರು ಮತ್ತಷ್ಟು ಓದು 





