ಚುನಾವಣಾ ಸಮೀಕ್ಷೆಗಳನ್ನೆಲ್ಲಾ ಸುಳ್ಳು ಮಾಡಬಹುದಾ ೨೦೧೪ ರ ಚುನಾವಣಾ ಫಲಿತಾಂಶ ?
– ಅನಿಲ್ ಚಳಗೇರಿ
೨೦೧೪ ರ ಚುನಾವಣಾ ಸಮೀಪಿಸುತ್ತಲೇ ರಾಜಕೀಯ ಪಕ್ಷಗಳ ಪ್ರಚಾರದ ಕಾವು ಏರುತ್ತಿದೆ, ಒಂದಡೆ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರದ ಅಬ್ಬರ, ಮತ್ತೊಂದಡೆ ರಾಹುಲ್ ಗಾಂಧಿಯನ್ನು ಶತಾಯ ಗತಾಯ ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕೆನ್ನುವ ಕಾಂಗ್ರೆಸ್ ನಾಯಕರ ಹಠ, ನಾವು ಕಾಂಗ್ರೆಸ್ಸಿನ ಜೊತೆಗೂ ಇಲ್ಲ, ಬಿಜೆಪಿಯ ಜೊತೆಗೂ ಇಲ್ಲ ಎನ್ನುವ ಥರ್ಡ್ ಫ್ರಂಟ್ ನ ಎನ್ನುವ ಪ್ರಾದೇಶಿಕ ಪಕ್ಷಗಳ ಗುಂಪು, ಈ ತ್ರಿಕೋಣ ಪೈಪೋಟಿಯಲ್ಲಿ ಅತ್ಯಂತ ಮುಂಚುಣಿಯಲ್ಲಿರುವವರು ನರೇಂದ್ರ ಮೋದಿ ಎನ್ನುವದರಲ್ಲಿ ಯಾವುದೇ ಸಂಶವೇಯಿಲ್ಲ, ಆದರೆ ೨೦೦೯ ರ ಚುನಾವಣೆಯಲ್ಲಿ ಒಂಬತ್ತು ರಾಜ್ಯಗಳಲ್ಲಿ ತನ್ನ ಖಾತೆಯನ್ನೇ ತಗೆಯದ ಬಿಜೆಪಿ ೨೦೧೪ ಚುನಾವಣೆಯಲ್ಲಿ ೨೭೨ ಮುಟ್ಟಬಹುದೆ? ಎನ್ನುವ, ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಮೋದಿಯವರು ಸುಳ್ಳು ಮಾಡುವ ಎಲ್ಲ ಲಕ್ಷಣಗಳು ಎದ್ದು ಕಾಣಿಸುತಲ್ಲಿವೆ.
೯ ರಾಜ್ಯಗಳಲ್ಲಿ ನಿಮ್ಮ ಖಾತೆಯೇ ತೆರೆದಿಲ್ಲ, ಅಂದರೆ ಒಂದು ಲೋಕಸಭಾ ಸೀಟ್ ಗೆಲ್ಲಿಸಲಾಗಿಲ್ಲ, ಅದ್ಹೇಗೆ ಬಿಜೆಪಿ ದೆಹಲಿಯ ಕನಸು ಕಾಣುತ್ತಿದೆ ಎನ್ನುವವರು ಇತ್ತೀಚಿಗಿನ ಮೋದಿಯವರ ಜನಪ್ರೀಯತೆ ಹಾಗು ಹಿಂದೆಂದಿಗೂ ಇರದ ರಾಜ್ಯಗಳಲ್ಲಿ ಬಿಜೆಪಿಯ ದೊಡ್ಡ ಸಂಖ್ಯೆಯ ಕಾರ್ಯಕರ್ತರನ್ನು ನೋಡಿ ಹುಬ್ಬೇರಿಸುವಂತೆ ಮಾದಿದೆ. ೨೦೦೯ ರಲ್ಲಿ ನಡೆದ ಚುನಾವಣೆ ಫಲಿತಾಂಶ ನೋಡಿದರೆ ಆಂಧ್ರ ಪ್ರದೇಶ, ದೆಹಲಿ, ಹರ್ಯಾಣ, ಜಮ್ಮು ಕಾಶ್ಮೀರ , ಕೇರಳ, ಒರಿಸ್ಸಾ, ತಮಿಳ್ ನಾಡು ಹಾಗು ಉತ್ತರಾಖಂಡದಲ್ಲಿ ಬಿಜೆಪಿ ಒಬ್ಬ ಲೋಕಸಭಾ ಸದಸ್ಯನನ್ನು ಗೆಲ್ಲಿಸಲಾಗಲಿಲ್ಲ, ಅದನ್ನೇ ಗುರಿಯಾಗಿಟ್ಟುಕೊಂಡ ಬಿಜೆಪಿ ನರೇಂದ್ರ ಮೋದಿಯವರ ಈ ಅಲೆಯನ್ನು ಈ ರಾಜ್ಯಗಳಲ್ಲಿ ತನ್ನ ಪ್ರಭಾವ ಹೆಚ್ಚಿಸುವದರಲ್ಲಿ ಒಂದಿಷ್ಟರ ಮಟ್ಟಿಗೆ ಯಶಸ್ವಿಯಾಗಿದೆ. ಯಾವ ಜಮ್ಮು ಹಾಗು ಕಾಶ್ಮೀರ ಅಬ್ದುಲ್ಲಾ ಗಳ ಕೈಯಲ್ಲಿ ಕಳೆದ ೬೦ ವರ್ಷಗಳಿಂದ ಬೇರೆ ರಾಜಕೀಯ ವಿಕಲ್ಪವೇ ಇಲ್ಲವೇನು ಅನ್ನುತ್ತಿತ್ತೋ ಅಲ್ಲಿಂದ ಪ್ರಾರಂಭಿಸಿ, ಬರಿ ಡಿಎಂಕೆ ಹಾಗು ಎಐಡಿಎಂಕೆಗಳಿಗೆ ಮಾತ್ರ ಇಲ್ಲಿ ಉಳಿಗಾಲ ಎನ್ನುವ ತಮಿಳು ನಾಡಿನ ರಾಜಕೀಯ ಲೆಕ್ಕಾಚಾರವನ್ನು ಸುಳ್ಳು ಮಾಡಲು ಹೊರಟಿದೆ, ಇದಕ್ಕೆ ಸಾಕ್ಷಿಯಾಗಿದ್ದೆ ಜಮ್ಮು ಹಾಗು ತಮಿಳು ನಾಡಿನಲ್ಲಿ ನಡೆದ ಬೃಹತ್ತ್ ಸಮಾವೇಶ ಹಾಗು ಸಾಲು ಸಾಲು ಬಿರುಸಿನ ರಾಜಕೀಯ ಚಟುವಟಿಕೆಗಳೇ ಸಾಕ್ಷಿ.
ಮತ್ತಷ್ಟು ಓದು 




