ರಾಜೀವ್ ಮಲ್ಹೋತ್ರ ಸಂವಾದ : ಭಾಗ ೨
ಆಂಗ್ಲಮೂಲ : ಶ್ರೀ ರಾಜೀವ್ ಮಲ್ಹೋತ್ರ
ಕನ್ನಡ ಅನುವಾದ : ಶ್ರೀ ಹುಲ್ಲುಮನೆ ಶ್ರೀಧರ
ರಾಜೀವ್ ಮಲ್ಹೋತ್ರ ಸಂವಾದ : ಅಯೋಧ್ಯೆ,ಸತಿ ಪದ್ಧತಿ ಮತ್ತಿತರ ವಿಷಯಗಳು – 1
ಉದಾರವಾದಿಗಳು ಮತ್ತು ಕ್ರಿಶ್ಚಿಯನ್ ಮತಕ್ಕೆ ಸೇರಿಸಿಕೊಳ್ಳುವ/ ಪ್ರಚಾರಕರ (ಇವಾನ್ಜಲಿಸ್ಟ್‌ಗಳ) ನಡುವೆ ಹೊಂದಾಣಿಕೆ:
ಬ್ರಿಟಿಷ್ ಸಂಸತ್ತಿನಲ್ಲಿ ಎಡ್ವಿನ್ ಬೆರ್ಕ್ ಸ್ಪಷ್ಟವಾಗಿ ಹೇಳಿದ್ದಿದೆ- ’ಓಕ್ ಮರಗಳನ್ನು ಥೇಮ್ಸ್ ನದಿಯ ದಂಡೆಯಿಂದ ತೆಗೆದುಕೊಂಡು ಹೋಗಿ ಗಂಗಾನದಿಯ ದಂಡೆಯುದ್ದಕ್ಕೂ ನೆಡಲಾಗದು’ ಎಂದು. ಭಾರತೀಯ ಸಂಸ್ಥಾನಗಳು ಭಾರತೀಯರ ಅಗತ್ಯಗಳನ್ನು ಪೂರೈಸುತ್ತಿದ್ದವು. ಆ ಸಂಸ್ಥೆಗಳಲ್ಲಿ ಪುನರುಜ್ಜೀವನದ ಅಗತ್ಯವಿತ್ತೇ ವಿನಃ ಅವುಗಳನ್ನು ಬದಲಿಸುವ ಅಗತ್ಯವಿರಲಿಲ್ಲ. ಆಂಗ್ಲರಲ್ಲಿ, ಸಂಸತ್ತಿನಲ್ಲಿ ಹಾಗೂ ಭಾರತದ ಆಂಗ್ಲ ಅಧಿಕಾರಿಗಳಲ್ಲಿ ಒಂದು ಬಲವಾದ ಗುಂಪಿದ್ದು ಅವರು ಭಾರತೀಯ ಸಂಸ್ಥಾನಗಳನ್ನು ಮರುನಿರ್ಮಾಣ ಮಾಡಲಿಚ್ಛಿಸಿದ್ದರು. ನಮ್ಮ ಕುತೂಹಲಕ್ಕೆ ’ಸಂಪ್ರದಾಯವಾದಿಗಳು’ (ಕನ್ಸರ್ವೇಟಿವ್‌ಗಳು) ಗಂಭೀರತೆಯಿಂದ ಭಾರತೀಯ ಸಂಸ್ಥಾನಗಳನ್ನು ಹೇಗಿದ್ದವೋ ಹಾಗೆಯೇ ಬಿಡಬೇಕೆನ್ನುತ್ತಿದ್ದರು. ’ಆಂಗ್ಲ ಉದಾರವಾದಿಗಳು’ ಭಾರತದ ಸಂಸ್ಥಾನಗಳನ್ನು ಗೊಂದಲಮಯವಾಗಿಸಲು/ ಅವ್ಯವಸ್ಥಿತಗೊಳಿಸಲು ಇಚ್ಛಿಸಿದ್ದರು. ಮತ್ತಷ್ಟು ಓದು 
ಭಾರತೀಯ ವೈಶಿಷ್ಟ್ಯ ಕಲ್ಪನೆ
ಆಂಗ್ಲಮೂಲ : ಶ್ರೀ ರಾಜೀವ್ ಮಲ್ಹೋತ್ರಾ
ಕನ್ನಡ ಅನುವಾದ : ಡಾ.ಉದಯನ ಹೆಗಡೆ
(“ಭಾರತೀಯ ಕಲ್ಪನೆ” – ಅಂತಾರಾಷ್ಟ್ರೀಯ ಸಮ್ಮೇಳನ)
ಈ ಭಾಷಣದಲ್ಲಿ, ನಾನು “ಭಾರತೀಯ ವೈಶಿಷ್ಟ್ಯ” ಎಂಬ ಕಲ್ಪನೆಯ ಬಗ್ಗೆ, ಅದರ ತಾತ್ಪರ್ಯ ಮತ್ತು ವಿವಿಧ ಕಾರ್ಯಕ್ಷೇತ್ರಗಳಲ್ಲಿ ಈ ಕಲ್ಪನೆಯು ಹೇಗೆ ಹರಡಿದೆ ಎಂಬುದರ ಬಗ್ಗೆ ಚರ್ಚಿಸಲಿದ್ದೇನೆ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿನ ನನ್ನ ಜೀವನದ ಅನುಭವಗಳು “ಅಮೇರಿಕಾ ವೈಶಿಷ್ಟ್ಯ” ಎಂಬ ಕಲ್ಪನೆಯನ್ನು ಅರ್ಥ ಮಾಡಿಸಿದವು. ಇದು ಇನ್ನುಳಿದ ದೇಶಗಳ ಜನರಲ್ಲಿ ಇರಬಹುದಾದ ಸಮಾನರೀತಿಯ ಭಾವನೆಗಳನ್ನು ಹುಡುಕಲು ಪ್ರೇರೇಪಿಸಿತು. ಆನಂತರ “ಭಾರತೀಯ ವೈಶಿಷ್ಟ್ಯ” ಎಂಬುದರ ವಿವರಣೆಯ ತಾರ್ಕಿಕ ಹುಡುಕಾಟ ಆರಂಭವಾಯಿತು.
ಅಮೇರಿಕೀಯ ವೈಶಿಷ್ಟ್ಯಭಾವನೆ :
ತಮ್ಮ ಶ್ರೇಷ್ಠತೆ ಮತ್ತು ವಿಭಿನ್ನತೆಯ ಬಗ್ಗೆ ಅಮೆರಿಕನ್ನರಲ್ಲಿರುವ ಸಾಮೂಹಿಕ ಭಾವನೆಯ ಒಂದು ವಿಶಿಷ್ಟ ಸ್ಥಿತಿಯನ್ನು “ಅಮೇರಿಕೀಯ ವೈಶಿಷ್ಟ್ಯ ಭಾವನೆ” ಎನ್ನಬಹುದು. ಈ ಶ್ರೇಷ್ಠತಾಭಾವನೆ ಕ್ರೀಡೆಯಿಂದ ಹಿಡಿದು ವಿಜ್ಞಾನದವರೆಗೆ ಎಲ್ಲಾ ರಂಗಗಳಲ್ಲಿಯೂ ಹರಡಿದೆ. ಬಾಲ್ಯದಿಂದಲೇ ಈ ಭಾವನೆಯು ಜನರಲ್ಲಿ ಪೋಷಿಸಲ್ಪಡುತ್ತದೆ. ಇದರರ್ಥ ಕೆಲವು ಜನರನ್ನು ಅಲ್ಲಲ್ಲಿ ಸೇರಿಸಿ ಶ್ರೇಷ್ಠರನ್ನಾಗಿಸಲಾಗುತ್ತದೆ ಎಂದಲ್ಲ, ಆ “ವ್ಯವಸ್ಥೆಯು” ಶ್ರೇಷ್ಠ ಜನರನ್ನು ಹೇಗೆ ರೂಪಿಸುತ್ತದೆ ಎಂಬ ಭಾವನೆಯ ಬಗ್ಗೆ ಹೇಳುತ್ತಿದ್ದೇನೆ. ಭಾರತದಲ್ಲಿ ಕೆಲವು ಅತಿಶ್ರೇಷ್ಠ ವ್ಯಕ್ತಿಗಳ ಸ್ತುತಿಯನ್ನು ನಾವು ಕಾಣುತ್ತೇವೆ. ಆದರೆ ಅಮೇರಿಕೀಯ ಭಾವನೆಯು ತನ್ನ ವೈಶಿಷ್ಟ್ಯ ಅಮೇರಿಕದ “ವ್ಯವಸ್ಥೆ”ಯಲ್ಲಿದೆ ಎಂದು ಸಾಧಿಸುತ್ತದೆ, ಈ ಸಂದರ್ಭದಲ್ಲಿ “ವ್ಯವಸ್ಥೆ” ಮತ್ತು ಸಂಸ್ಕೃತಿಗಳನ್ನು ಸಮಾನಾರ್ಥಕಗಳನ್ನಾಗಿ ತೆಗೆದುಕೊಂಡಿದ್ದೇವೆ. ಹಾಗಾಗಿ ಅಮೇರಿಕದ ಸಂಸ್ಕೃತಿಯೇ ಸರ್ವಶ್ರೇಷ್ಠ ಎಂಬ ಭಾವನೆ ಅಮೇರಿಕದ “ವೈಶಿಷ್ಟ್ಯ ಭಾವನೆ” ಎಂದಾಗುತ್ತದೆ.




