ರಾಮಸೇತು ಒಡೆದರೆ ಥೋರಿಯಮ್ ನಿಕ್ಷೇಪಕ್ಕೆ ಎಳ್ಳು ನೀರು…
-ಚಕ್ರವರ್ತಿ ಸೂಲಿಬೆಲೆ
ನಮಗೇ ಅರಿವಿಲ್ಲದೇ ಭಯಾನಕ ಪರಿಸ್ಥಿತಿಯತ್ತ ತೆವಳಿಕೊಂಡು ಹೋಗುತ್ತಿದ್ದೇವೆ! ನಾವು ಬಳಸುವ ಪೆಟ್ರೋಲು – ಡೀಸೆಲ್ಲಿನ ಮುಕ್ಕಾಲು ಭಾಗ ಆಮದು ಮಾಡಿಕೊಳ್ಳುತ್ತಿದ್ದೇವೆ. ಕಳೆದ ವರ್ಷದ ಲೆಕ್ಕಾಚಾರದ ಪ್ರಕಾರ ೧೩೪ ಶತಕೋಟಿ ಡಾಲರುಗಳಷ್ಟು ತೈಲ ಆಮದು ಮಾಡಿಕೊಂಡಿದ್ದೇವೆ. ಆಮದು ಮಿತಿಮೀರಿ ರಫ್ತು ನೆಲ ಕಚ್ಚುತ್ತಿರುವುದರಿಂದ ಡಾಲರಿನೆದುರು ರೂಪಾಯಿ ಸೋಲುತ್ತಲೇ ಸಾಗುತ್ತಿದೆ. ಒಂದಷ್ಟು ಜನಕ್ಕೆ ರೂಪಾಯಿಯ ಅಪಮೌಲ್ಯ ಲಾಭದಾಯಕವೆನಿಸಿದರೂ ಭಾರತದ ದೃಷ್ಟಿಯಿಂದ ಬಲು ಭಯಾನಕ.
ಅದೇಕೋ ನೆಹರೂ ಕಾಲದಿಂದಲೂ ಈ ದೇಶಕ್ಕೆ ದೂರದೃಷ್ಟಿಯ ಕೊರತೆ ಇದೆ. ಮುಂದಿನ ನೂರು ವರ್ಷಗಳಿಗೆ, ಸಾವಿರ ವರ್ಷಗಳಿಗೆ ಯೋಜನೆ ರೂಪಿಸುವ ಪ್ರಯತ್ನಗಳೇ ಇಲ್ಲ. ಅದು ಬಿಡಿ, ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದು ಇರುವ ಸಂಪತ್ತನ್ನೂ ನಾಶ ಮಾಡಿಕೋಳ್ಳುವ ಜಾಯಮಾನ ನಮ್ಮದು.
ಎನರ್ಜಿ ಇನ್‌ಫರ್ಮೇಶನ್ ಏಜೆನ್ಸಿಯ ಪ್ರಕಾರ ಅಮೆರಿಕಾ, ಚೀನಾ, ರಷ್ಯಾ ಬಿಟ್ಟರೆ ಹೆಚ್ಚು ತೈಲ ಬಳಸುವ ರಾಷ್ಟ್ರ ನಮ್ಮದೇ. ಉಳಿದ ಮೂರು ರಾಷ್ಟ್ರಗಳೂ ತೈಲ ಹೊರತೆಗೆದು ಸಂಸ್ಕರಿಸಿ ಬಳಸುವಲ್ಲಿ ಸ್ವಾವಲಂಬಿಯಾಗುವತ್ತ, ಅಷ್ಟೇ ಅಲ್ಲ, ತಮ್ಮ ತೈಲ ಕಂಪನಿಗಳನ್ನು ತೈಲ ರಾಷ್ಟ್ರಗಳಿಗೆ ಕಳಿಸುವತ್ತಲೂ ಗಮನ ನೀಡುತಿವೆ. ನಾವು ಮಾತ್ರ ಕಂಡುಹಿಡಿದಿರುವ ತೈಲ ಸಂಪತ್ತನ್ನು ಹೊರತೆಗೆಯಲೂ ಮೀನಾಮೇಷ ಎಣಿಸುತ್ತ ಬಿಲಿಯನ್‌ಗಟ್ಟಲೆ ಡಾಲರುಗಳನ್ನು ವ್ಯರ್ಥ ಮಾಡುತ್ತ, ಕಾಲ ಕಳೆಯುತ್ತಿದ್ದೇವೆ. ಅದೇ ಏಜೆನ್ಸಿಯ ಅಂಕಿ ಅಂಶದ ಪ್ರಕಾರ ೨೦೧೦ರಲ್ಲಿ ನಾವು ಏಳುವರೆ ಲಕ್ಷ ಬ್ಯಾರಲ್‌ನಷ್ಟು ತೈಲವನ್ನು ಪ್ರತಿ ನಿತ್ಯ ಹೊರತೆಗೆದರೆ, ಆ ವರ್ಷ ೩೨ ಲಕ್ಷ ಬ್ಯಾರಲ್‌ನಷ್ಟು ತೈಲವನ್ನು ಪ್ರತಿನಿತ್ಯ ಬಳಸಿದ್ದೇವೆ. ಅಂದಮೇಲೆ ಅಂತಾರಾಷ್ಟ್ರೀಯ ಒತ್ತಡಗಳು ನಮ್ಮ ಮೇಲೆ ಹೇಗಿರಬಹುದೆಂದು ಲೆಕ್ಕ ಹಾಕಿ. ನಮಗೆ ಪೆಟ್ರೋಲು- ಡೀಸೆಲ್ಲು ಕಳಿಸುವುದಿಲ್ಲವೆಂದು ತೈಲ ರಾಷ್ಟ್ರಗಳು ನಿರ್ಬಂಧ ಹೇರಿ ಕುಂತುಬಿಟ್ಟರೆ ನಮ್ಮ ಕಥೆ ಮುಗಿದೇಹೋಯ್ತು. ಹಾಹಾಕಾರ ಉಂಟಾಗಿಬಿಡುತ್ತೆ.
ರಾಮಸೇತು: ಭಕ್ತಿ ಭಾವನೆಯ ಜೊತೆಗೆ ಜೀವನೋಪಾಯದ ಪ್ರಶ್ನೆಯೂ ಹೌದು
– ಅಜಿತ್ ಶೆಟ್ಟಿ,ಉಡುಪಿ
ರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಹಿಂದೂಗಳಿಗೆ ಧಾರ್ಮಿಕ ಪವಿತ್ರ ಗ್ರಂಥಗಳಾಗಿದ್ದು, ಈ ಎರಡೂ ಕೃತಿಗಳು ಇತಿಹಾಸದ ಕಥೆಗಳಾಗಿವೆ .ಅನಾದಿಕಾಲದಿಂದ ಮಹಾಪಂಡಿತರು, ತಿಳಿದವರು ಇವನ್ನು ಪಂಚಮವೇದವೆಂದು ಕೈ ಮುಗಿಯುತ್ತಾರೆ. ಸಾವಿರಾರು ವರ್ಷಗಳಿಂದ ಭಾರತೀಯರ ಜನಜೀವನದಲ್ಲಿ ಮಿಳಿತವಾಗಿರುವ ಈ ಪವಿತ್ರ ಗ್ರಂಥಗಳ ಯಥಾರ್ಥವೇನು ಎಂದು ಕೇಳಿದರೆ ಏನೂಂತ ಹೇಳಬೇಕು? ಆರ್ಯ-ದ್ರಾವಿಡರು ವೈರಿಗಳೆಂದು ಕಥೆ ಕಲ್ಪಿಸಿ, ರಾಮ ಯಾವ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದನೆಂದು ಸರ್ಟಿಫಿಕೇಟ್ ಕೊಡಿ,ಸಾಕ್ಷಧಾರ ಕೊಡಿ ಎನ್ನುವ ಮೂರ್ಖ ಕರುಣಾನಿಧಿಯಂಥವರಿಗೆ ಏನೆಂದು ಉತ್ತರಿಸಬೇಕು ?
ಮೊದಲು ಹಿಂದೂ ರಾಷ್ಟ್ರ ಅಖಂಡ ಭಾರತದ ಮೇಲೆ ಮಹಮದೀಯರ ಆಕ್ರಮಣವಾಯಿತು . ನಂತರ ವ್ಯವಹಾರಕ್ಕೆ ಬಂದ ಕ್ರೈಸ್ತ ಯುರೋಪಿಯನ್ನರ ಆಕ್ರಮಣ . ಮಹಮದೀಯರು ಹೆದರಿಸಿ ಬೆದರಿಸಿ,ಕೊಲೆ ಸುಲಿಗೆ ಮಾಡುತ್ತ ನಮ್ಮ ಸಂಪತ್ತು ಲೂಟಿ ಹೊಡೆದರು.ಮೋಸದಿಂದ, ವಿಶ್ವಾಸಘಾತುಕ ಕೆಲಸದಿಂದ,ಕುಟಿಲ ತಂತ್ರದಿಂದ ಹಿಂದೂ ದೊರೆಗಳನ್ನು ಸೋಲಿಸಿ,ಪ್ರಜೆಗಳನ್ನು ಹೆದರಿಸಿ,ಒಪ್ಪದವರ ಕೊಲೆ ಮಾಡಿ ಅವರ ಮತ ಪ್ರಚಾರ ಮಾಡಿ ಮತಾಂತರಿಸಿದರು.ಅಲ್ಲಾವುದ್ದೀನ್ ಖಿಲ್ಜಿ, ಔರಂಗಜೇಬ್,ತುಘಲಕ್ ಅವರಿಂದ ಟಿಪ್ಪುವಿನವರೆಗೆ ಎಲ್ಲರೂ ಭಾರತೀಯ ಸಂಸ್ಕೃತಿಯ ಮೇಲೆ ಆಕ್ರಮಣದ ಆಡಳಿತ ನಡೆಸಿದವರೇ. ಅದಕ್ಕೆ ಇರಬೇಕು ವಿಲ್ ದುರಂಟ್ STORY OF CIVILIZATION ಕೃತಿಯಲ್ಲಿ ಭಾರತದ ಮೇಲೆ ನಡೆದ ಇಸ್ಲಾಮಿನ ಆಕ್ರಮಣ ವಿಶ್ವದ ಇತಿಹಾಸದ ಅತ್ಯಂತ ರಕ್ತಸಿಕ್ತ ಅದ್ಯಾಯವೆಂದಿದ್ದು.ಯುರೋಪಿಯನ್ನರು ಭಾರತೀಯರ ಶಕ್ತಿ ಅಡಗಿರುವುದು ಭಾರತೀಯ ಸಂಸ್ಕೃತಿಯಲ್ಲಿ ಎಂದು ಮನಗಂಡು ಹಿಂಸಾ ಮಾರ್ಗವನ್ನು ಬದಿಗಿಟ್ಟು, ಹಿಂದೂ ನಂಬಿಕೆ , ಅಚಾರ ವಿಚಾರ ದೇವರನ್ನು ಪ್ರಶ್ನಿಸುತ್ತಾ,ಲೇವಡಿ ಮಾಡುತ್ತ,ಹಣದ ಆಮಿಷವೊಡ್ಡಿ ಮಿಷನರಿಗಳ ಮೂಲಕ ಉಪಾಯದಿಂದ ಮತಾಂತರದ ಕ್ರೈಸ್ತಿಕರಣಕ್ಕೆ ಮುಂದಾದರು.ಹಿಂದೂ ಧರ್ಮ ಪ್ರಸಾರಕ್ಕೆ ಇಲ್ಲಿತನಕ ಎಲ್ಲಿಯೂ ಹಿಂದೂಗಳು ಯುದ್ದ ಮಾಡಿಲ್ಲ,ಇನ್ನೊಂದು ಧರ್ಮವನ್ನು ನಿಂದಿಸಿಲ್ಲ ತೀರ ವಿಪರೀತವಾಗುತ್ತಿದೆ,ಸ್ವಾಭಿಮಾನಕ್ಕೆ ದಕ್ಕೆಯಾಗುತ್ತಿದೆ ಎಂದೆನಿಸಿದಾಗ ಅದಕ್ಕೆ ಉತ್ತರಿಸಿದ್ದಾರೆ.
ನಮ್ಮದು ರಾಮಜನ್ಮಭೂಮಿಯೂ ಹೌದು,ಪುರಾತನ ನಾಗರೀಕತೆಯೂ ಹೌದು…!
– ಕೆ.ಎಸ್ ರಾಘವೇಂದ್ರ ನಾವಡ
ಇದು ಬಹಳ ಆಸಕ್ತಿದಾಯಕವಾದ ಸಾಧಾರಸಹಿತವಾದ ಬರಹ. ನಾವುಗಳು ಇದನ್ನು ಓದುತ್ತಾ ಹೋದ೦ತೆ “ಶ್ರೀ ರಾಮ“ ಮತ್ತು “ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣ ಕಟ್ಟುಕಥೆಯಲ್ಲ” ಹಾಗೂ ನಮ್ಮ ನಾಗರೀಕತೆಯೇ ಪುರಾತನ ನಾಗರೀಕತೆ ಎ೦ಬುದು ನಮಗರಿವಾಗುತ್ತದೆ.ಈ ಲೇಖನದಲ್ಲಿ ವೈಜ್ಞಾನಿಕವಾಗಿ ಅದನ್ನು ಸಾದರ ಪಡಿಸಲು ಪ್ರಯತ್ನಿಸಿದ್ದೇನೆ. ನಾಸಾದವರು ತಿಳಿಸಿದ೦ತೆ, ಶ್ರೀ ರಾಮ ಜನಿಸಿದ್ದನೇ? ಶ್ರೀ ರಾಮಾಯಣ ನಡೆದಿತ್ತೇ ಎನ್ನುವ ಪ್ರಶ್ನೆಗಳಿಗೆ ಈ ಲೇಖನ ಅತ್ಯುತ್ತಮ ಹಾಗೂ ನ೦ಬಲರ್ಹವಾದ ದಾಖಲೆ.
ಮಹರ್ಷಿ ವಾಲ್ಮೀಕಿಗಳು ಶ್ರೀರಾಮನು ಅಯೋಧ್ಯೆಯ ರಾಜನಾಗಿ ಪಟ್ಟಾಭಿಷೇಕದ ನ೦ತರ ಮೊದಲ ಬಾರಿಗೆ ಶ್ರೀರಾಮಾಯಣವನ್ನು ಬರೆದರೆ೦ಬುದು ನಮಗೆ ತಿಳಿದ ವಿಷಯ.ಆದ್ದರಿ೦ದ ಇದೇ ಮೂಲ ರಾಮಾಯಣ.ಮಹರ್ಷಿ ವಾಲ್ಮೀಕಿಗಳು ಮಹಾ ಜ್ಯೋತಿಷಿಗಳಾಗಿದ್ದರು. ಅವರು ರಾಮಾಯಣದ ಮಹತ್ತರ ದಿನಗಳ ಬಗ್ಗೆ ಆ ದಿನಗಳಲ್ಲಿ ಗ್ರಹ ಹಾಗೂ ನಕ್ಷತ್ರಗಳು ಯಾವ ಯಾವ ಮನೆಗಳಲ್ಲಿದ್ದವು ಎ೦ಬುದರ ಸಮೇತ ವಿವರಿಸುತ್ತಾರೆ. ಪ್ರತಿ ದಿನವೂ ಗ್ರಹಗತಿಗಳು ಬದಲಾಗುತ್ತಿರುತ್ತವೆ ಎ೦ಬುದು ನಮಗೆ ವೇದ್ಯವಿರುವ ವಿಚಾರ.“ಪ್ಲಾನೆಟರಿಯಮ್“ ಎನ್ನುವ ಸಾಫ್ಟ್ ವೇರ್ ನಲ್ಲಿ ಮಹರ್ಷಿ ವಾಲ್ಮೀಕಿ ಹೆಸರಿಸಿರುವ ಗ್ರಹಗತಿಗಳನ್ನು ಬರೆಯುವುದರ ಮೂಲಕ ಅದಕ್ಕೆ ಸರಿಯಾದ ಆ೦ಗ್ಲ ವಾರ್ಷಿಕ ದಿನಗಳನ್ನು ಪಡೆಯಬಹುದು. ಇದನ್ನು ನಾಸಾದವರು ಸಿಧ್ಢಪಡಿಸಿದ್ದಾರೆ.
ಭಾರತೀಯ ಕ೦ದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಪುಷ್ಕರ್ ಭಟ್ನಾಗರ್ ಈ ಸಾಫ್ಟ್ ವೇರ್ ಅನ್ನು ಯು.ಎಸ್. ನಿ೦ದ ಪಡೆದುಕೊ೦ಡರು. ಇದನ್ನು ಸೂರ್ಯಗ್ರಹಣ, ಚ೦ದ್ರಗ್ರಹಣ ಹಾಗೂ ಭೂಮಿಯಿ೦ದ ಇತರೆ ಗ್ರಹಗಳಿರುವ ದೂರವನ್ನು ಲೆಕ್ಕ ಹಾಕಲು ಬಳಸುತ್ತಿದ್ದರು.ಭಟ್ನಾಗರ್ ಅವರು ಅದರಲ್ಲಿ ಮಹರ್ಷಿ ವಾಲ್ಮೀಕಿ ಬರೆದಿರುವ ಎಲ್ಲಾ ಗ್ರಹಗಳ ಮಾಹಿತಿಗಳನ್ನು ಆಯಾ ದಿನಗಳಿಗೆ ಸ೦ಬ೦ಧಿಸಿದ೦ತೆ ನೀಡಲಾಗಿ, ಅದರಿ೦ದ ಮಹತ್ತರವಾದ ಹಾಗೂ ಉತ್ತಮ ಫಲಿತಾ೦ಶವನ್ನು ಪಡೆದರು. ಬಹುತೇಕವಾಗಿ ಶ್ರೀ ರಾಮನ ಜನನದಿ೦ದ ಹಾಗೂ ಅವನು ವನವಾಸವನ್ನು ಪೂರೈಸಿ ಅಯೋಧ್ಯೆಗೆ ಮರಳಿ ಬರುವವರೆಗಿನ ಎಲ್ಲಾ ಮಾಹಿತಿಗಳನ್ನು ಆ೦ಗ್ಲ ವಾರ್ಷಿಕ ದಿನಾ೦ಕದ೦ತೆ ಪಡೆದರು.
ಮತ್ತಷ್ಟು ಓದು 




