ವಿಷಯದ ವಿವರಗಳಿಗೆ ದಾಟಿರಿ

Posts tagged ‘ಸಾವರ್ಕರ್’

22
ಆಗಸ್ಟ್

ನೆಹರೂ,ಗಾಂಧಿಗೊಂದು ನ್ಯಾಯ, ಸಾವರ್ಕರ್’ರಿಗೊಂದು ನ್ಯಾಯವೇ?

  • ರಾಕೇಶ್ ಶೆಟ್ಟಿ

ಸಾವರ್ಕರ್ ಅವರ ಹೆಸರು ಕೇಳಿದರೆ ದ್ವೇಷಕಾರುವ ಸಿದ್ದರಾಮಯ್ಯನವರು, ಸುಳ್ಳುಗಳೇ ತುಂಬಿರುವ ಲೇಖನವೊಂದನ್ನು ಬರೆದು ಮುಖ್ಯಮಂತ್ರಿಗಳನ್ನು ಚರ್ಚೆಗೆ ಕರೆದಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರು ಹೀಗೆ ಆಧಾರ ರಹಿತ ಸುಳ್ಳುಗಳ ಸರಮಾಲೆಯನ್ನು ಹೇಗೆ ಬರೆಯಲು ಸಾಧ್ಯ? ಅವರ ಲೇಖನದ ಕೆಲವು ಪ್ರಶ್ನೆಗಳು, ಸುಳ್ಳುಗಳ ಬಗ್ಗೆ ಮಾತನಾಡುತ್ತಲೇ, ಸಾವರ್ಕರ್, ಗಾಂಧಿ, ನೆಹರೂ ಅವರ ಜೈಲುವಾಸಗಳ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಳ್ಳಬೇಕು.

10 ಡಿಸೆಂಬರ್ 1934 – ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಜವಹರಲಾಲ್ ನೆಹರೂ ಅವರ ಜೈಲುವಾಸದ ಬಗ್ಗೆಯೊಂದು ಚರ್ಚೆಯಾಗುತ್ತದೆ. ಸದಸ್ಯರಾದ ಹಾರಾಲ್ದ್ ಹೇಲ್ಸ್ ಅವರು, ನೆಹರೂ ಅವರ ಪತ್ನಿ ಕಮಲಾ ನೆಹರೂ ಅವರ ಅನಾರೋಗ್ಯದ ಸ್ಥಿತಿಯನ್ನು ಗಮನಿಸಿ, ಜವಹರಲಾಲ್ ನೆಹರೂ ಅವರನ್ನು ಶೀಘ್ರ ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸುವಂತೆ ಆಗ್ರಹಿಸುತ್ತಾರೆ.

ಅದಕ್ಕೆ ಉತ್ತರವಾಗಿ, ಅಂದಿನ ಬ್ರಿಟಿಷ್ ಭಾರತದ ಅಧೀನ ಕಾರ್ಯದರ್ಶಿಯಾಗಿದ್ದ ಬಟ್ಲರ್ ಉತ್ತರಿಸುತ್ತಾ : ಅವರ ಹೆಂಡತಿಯನ್ನು ನೋಡಿಕೊಳ್ಳಲಿ ಎನ್ನುವ ಕಾರಣಕ್ಕಾಗಿಯೇ, ಕಳೆದ ಬೇಸಿಗೆಯಲ್ಲಿಯೇ ಅವರನ್ನು ಕೆಲವು ದಿನಗಳ ಕಾಲ ಬಿಡುಗಡೆ ಮಾಡಿದ್ದೆವು. ಈಗ ಅವರನ್ನು ಆಸ್ಪತ್ರಗೆ ಹತ್ತಿರ ಇರುವ ಜೈಲಿಗೆ ವರ್ಗಾವಣೆ ಮಾಡಲಾಗಿದ್ದು, ವಾರದಲ್ಲಿ ಒಂದು ಅಥವಾ ಎರಡು ದಿನ ವೈದ್ಯರ ಸಲಹೆಯಂತೆ ಅವರು ಹೋಗಿ ನೋಡಿಕೊಂಡು ಬರಲು ಅನುಮತಿ ನೀಡಲಾಗಿದೆ.

ಸರ್ಕಾರದ ವಿರುದ್ಧದ ಪಿತೂರಿಯ ಆರೋಪದಲ್ಲಿ ನೆಹರೂ ಎರಡು ವರ್ಷಗಳ ಸಾಮಾನ್ಯ ಶಿಕ್ಷೆಗೆ ಗುರಿಯಾಗಿದ್ದರು. ಆ ಜೈಲು ಶಿಕ್ಷೆಯ ಅವಧಿಯ ಕುರಿತು ನಡೆದ ಚರ್ಚೆಯಿದು. ಕೇಸ್ ದಾಖಲಾಗಿ ಬಂಧನವಾದ ನಂತರ, ನೆಹರೂ ಅವರ ಭಾವನೆಗಳಿಗೆ ಘಾಸಿ(!)ಯಾಗುವುದಾದರೆ ಪ್ರಕರಣದ ವಿಚಾರಣೆಯನ್ನು ಖಾಸಗಿಯಾಗಿಯೇ ಮಾಡುವ ಆಫರ್ ಅನ್ನು ಬ್ರಿಟಿಷ್ ಅಧಿಕಾರಿ ನೀಡುತ್ತಾರೆ! ಕಡೆಗೆ, 6 ತಿಂಗಳ ಮೊದಲೇ ಬಿಡುಗಡೆ ಮಾಡುತ್ತದೆ ಬ್ರಿಟಿಷ್ ಸರ್ಕಾರ. ನೆಹರೂ ಅವರ ಮೇಲೆ ಇಂತಹ ಪ್ರೀತಿಯನ್ನು ಇದೇ ಮೊದಲ ಬಾರಿಯೇನೂ ಬ್ರಿಟಿಷ್ ಸರ್ಕಾರ ತೋರಿಸಿದ್ದಲ್ಲ.

ಅಕ್ಟೋಬರ್ 24 ,1930 ರಂದು ಕೂಡ ಎರಡು ವರ್ಷಗಳ ಸಾಮಾನ್ಯ ಶಿಕ್ಷೆಗೆ ಗುರಿಯಾದಗಲೂ, ಅವರನ್ನು ಕೇವಲ 97 ದಿನಗಳಲ್ಲೇ ಬಿಡುಗಡೆ ಮಾಡಿತ್ತು ಬ್ರಿಟಿಷ್ ಸರ್ಕಾರ. ಬ್ರಿಟಿಷರಿಗೆ ನೆಹರೂ ಅವರ ಮೇಲೆ ಅದಿನ್ನೆಂತಹ ಪ್ರೀತಿ! ಅಥವಾ ನೆಹರೂ ಅವರು ಜೈಲಿನ ಒಳಗಿದ್ದರೂ, ಹೊರಗಿದ್ದರೂ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಪಾಯಕಾರಿಯಲ್ಲ ಅಂತಲೇ? ನೆಹರೂ ಅವರ ರಾಜಕೀಯ ಜೀವನದಲ್ಲಿ, ಒಂದೇ ಕೇಸಿನಲ್ಲಿ ಗರಿಷ್ಟ ಜೈಲು ವಾಸ ಅಂತ ಅವರಿಗೆ ಆಗಿದ್ದು ಕ್ವಿಟ್ ಇಂಡಿಯಾ ಎಂಬ Failed ಚಳವಳಿಯಲ್ಲಿ. 2 ವರ್ಷ 8 ತಿಂಗಳ ಸೆರೆವಾಸವದು. ಹಾಗೆಂದು ನೆಹರೂ ಅವರ ಸೆರೆವಾಸಗಳೇನು ಸೆಲ್ಯುಲಾರ್ ಜೈಲಿನಂತೆ ಒಂಟಿಯಾಗಿ, ಕತ್ತಲೆ ಹಾಗೂ ಕೆಟ್ಟ ಸೆಲ್ಲಿನೊಳಗಿನ ವಾಸವೇನು ಆಗಿರಲಿಲ್ಲ. ಮೇಲಿನ ಉದಾಹರಣೆಯಂತೆ ಬ್ರಿಟಿಷರ ಉದಾರತೆ ಹೇಗಾದರೂ ನೆಹರೂ ಅವರಿಗೆ ಸಿಗುತ್ತಿತ್ತು. ಉದಾಹರಣೆಗೆ, ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ನಂತರ ನೆಹರೂ ಅವರನ್ನು ನೈನಿಯಲ್ಲಿ ಜೈಲಿಗೆ ಹಾಕಿದರು. ಜೈಲಿನಲ್ಲಾದರೂ ಬಡಪಾಯಿ ನೆಹರೂ ಅವರಿಗೆ ಹೆಚ್ಚೇನು ಸೌಲಭ್ಯ ಸಿಗಲಿಲ್ಲ. ಅಬ್ಬಬ್ಬಾ ಎಂದರೆ ಒಬ್ಬ ಖೈದಿಯನ್ನು ಅವರ ಅಡುಗೆಯವನನ್ನಾಗಿ ನೇಮಿಸಲಾಯಿತು, ಗಾಳಿ ಬೀಸಲು ಮತ್ತೊಬ್ಬ ಖೈದಿ ನಿಯುಕ್ತಿಯಾದ. ಜೈಲಿನ ಊಟ ತಿಂದು ನಾಲಗೆ ಜಡ್ಡುಗಟ್ಟದಿರಲೆಂದು ಮನೆಯ ಊಟ, ಹಣ್ಣು ಹಂಪಲು ತರಿಸಿಕೊಳ್ಳುವ ಅವಕಾಶ ನೀಡಲಾಗಿತ್ತು.ನೆಹರೂ ಅವರ ದರ್ಶನಕ್ಕೆಂದು ಬರುತ್ತಿದ್ದ ಖೈದಿಗಳು ಬೇಕಾದ ಸಣ್ಣಪುಟ್ಟ ಸೇವೆಗಳನ್ನು ಮಾಡಿಕೊಡುತ್ತಿದ್ದರು. ತೀರಾ ನೆಹರೂ ಅವರ ಭಾಷೆಯಲ್ಲಿಯೇ ಹೇಳುವುದಾದರೆ, ಶೇ.95 ರಾಜಕೀಯ ಖೈದಿಗಳಿಗೆ ಇಂತಹ ಸೌಲಭ್ಯಗಳು ಸಿಗುತ್ತಿರಲಿಲ್ಲ. ನೆಹರೂ-ಗಾಂಧಿಯಂತವರು 5% ನೊಳಗಿದ್ದವರು. ಬ್ರಿಟಿಷರ ಪಾಲಿಗೆ ನಿರುಪದ್ರವಿಗಳಾಗಿರಬಹುದೇ?

ಮತ್ತಷ್ಟು ಓದು »
30
ಮೇ

ಸಾವರ್ಕರ್ ಮತ್ತು ನೆಹರೂ : ಹೋಲಿಸಬಾರದ ವ್ಯಕ್ತಿಗಳು

– ಚಕ್ರವರ್ತಿ ಸೂಲಿಬೆಲೆ

NS(ಮೇ ೨೮) ಸಾವರ್ಕರ್ ಜನ್ಮ ದಿನ. ಈ ಸಂಧರ್ಭದಲ್ಲಿ ಭಾರತದ ದಿಕ್ಕು ಬದಲಿಸಿದ ಇಬ್ಬರು ವ್ಯಕ್ತಿಗಳ ತುಲನಾತ್ಮಕ ಬರಹ ಇಲ್ಲಿದೆ. ಯಾರು ಯಾವ ಬಗೆಯಲ್ಲಿ ದಿಕ್ಕು ಬದಲಿಸಿದರು ಅಥವಾ ತಪ್ಪಿಸಿದರು ಎನ್ನುವುದು ಓದುಗರ ವಿವೇಚನೆಗೆ ಬಿಟ್ಟಿದ್ದು…

ಇತಿಹಾಸದ ಪುಟಗಳು ಅದೆಷ್ಟು ಬೇಗ ಹಿಂದೆ ಹಿಂದೆ ಹೋಗಿಬಿಡುತ್ತವಲ್ಲ! ಒಂದು ಪುಟವನ್ನು ತಿರುವಿಹಾಕಿದಂತೆ ಆ ಪುಟದಲ್ಲಿರುವ ಸಂಗತಿಗಳನ್ನೆಲ್ಲಾ ಮರೆತುಬಿಟ್ಟರೆ ಮುಗಿದೇಹೋಯಿತು. ನೆನಪಿಟ್ಟುಕೊಂಡು ಮುಂದಡಿ ಇಡುವವ ಮಾತ್ರ ವಿಜಯಿಯಾದಾನು. ನಮ್ಮ ಇತಿಹಾಸ ಒಂಥರಾ ಸೆಮಿಸ್ಟರ್ ಪದ್ಧತಿಯ ಶಿಕ್ಷಣದಂತಾಗಿಬಿಟ್ಟಿದೆ. ಈ ಸೆಮಿಸ್ಟರ್ ನಲ್ಲಿ ಕಲಿತದ್ದು ಮುಂದಿನ ಬಾರಿಗೆ ಬೇಕಾಗಲಾರದು. ಸದ್ಯಕ್ಕೆ ಸಾವರ್ಕರ್ ಭಾರತೀಯರ ಪಾಲಿಗೆ ಹಾಗೆಯೇ ಆಗಿಬಿಟ್ಟಿದ್ದಾರೆ. ಅವರು ಹುಟ್ಟಿ125 ವರ್ಷ ಕಳೆಯುವುದರೊಳಗಾಗಿ ಅವರು ಸಮಾಜದ ಕಣ್ಣಿಂದ ದೂರವೇ ಆಗಿಬಿಟ್ಟಿದ್ದಾರೆ. ಯಾವ ರಾಷ್ಟ್ರದ ಏಕತೆ- ಅಖಂಡತೆಗಾಗಿ; ಯಾವ ಪರಿಪೂರ್ಣ ಸಮಾಜದ ಪರಿಪೂರ್ಣ ಉನ್ನತಿಗಾಗಿ ತಮ್ಮ ಜೀವನವನ್ನೇ ತೇಯ್ದುಬಿಟ್ಟರೋ ಆ ವ್ಯಕ್ತಿ ಅದೇ ದೇಶದ ಸ್ಮೃತಿಯಿಂದ ದೂರವಾಗೋದು ದುರಂತವೇ ಸರಿ.

ಹಾಗೆ ನೋಡಿದರೆ ಕಳೆದ ಶತಕದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬೌದ್ಧಿಕವಾಗಿ ಹಾಗೆಯೇ ಪ್ರತ್ಯಕ್ಷವಾಗಿ ಪಾಲ್ಗೊಂಡ ಅಪರೂಪದ ಸಾಹಸಿ ಸಾವರ್ಕರರೇ ಎಂಬುದರಲ್ಲಿ ಅನುಮಾನವಿಲ್ಲ. ಸಿಕ್ಕಸಿಕ್ಕಲ್ಲಿ ಗುಂಡು ಹೊಡೆದು ಅದನ್ನೇ ಕ್ರಾಂತಿ ಎನ್ನುತ್ತಿರಲಿಲ್ಲ ಸಾವರ್ಕರ್. ಅವರ ಪ್ರತಿಯೊಂದು ಕೆಲಸದ ಹಿಂದೆ ಬೆಟ್ಟದಷ್ಟು ಚಿಂತನೆ, ಫಲಿತಾಂಶದ ನಂತರದ ಪರಿಸ್ಥಿತಿಯ ಕುರಿತು ಮುಂದಾಲೋಚನೆ- ಎಲ್ಲವೂ ಇರುತ್ತಿತ್ತು. ಅವರು ಲೇಖನಿ ಹಿಡಿದರೆ ಆ ಕಾಲಘಟ್ಟದ ಮಹಾಮಹಿಮ ಲೆಖಕರನ್ನೂ ಮೀರಿಸುವಷ್ಟು ಪ್ರತಿಭಾವಂತ. ಪಿಸ್ತೂಲು ಹಿಡಿದರೆ, ಎದುರಾಳಿಗಳ ರಕ್ತವೇ ತಣ್ಣಗಾಗುವಷ್ಟು ಕೆಚ್ಚೆದೆ. ಮಾತಿಗೆ ನಿಂತರೆ ಮೈಯೆಲ್ಲ ಕಿವಿಯಾಗಿ ಕೇಳಬೇಕೆನ್ನಿಸುವ ಮಧುರ ದನಿ, ಅಸ್ಖಲಿತ ವಿಚಾರಗಳ ಧಾರಾಪ್ರವಾಹ. ಬಿಡಿ. ಅಂತಹ ವ್ಯಕ್ತಿ ಯುಗಕ್ಕೊಬ್ಬರೇ!

ಮತ್ತಷ್ಟು ಓದು »

27
ಫೆಬ್ರ

“ಸ್ವಾತಂತ್ರ್ಯವೀರ”ನ ವ್ಯಕ್ತಿತ್ವ ಅನಾವರಣ..!!

ಭೀಮಸೇನ್ ಪುರೋಹಿತ್

“ಭಗತ್ ಸಿಂಗ್, ರಾಜಗುರು,ಆಜಾದ್ ಮುಂತಾದ ಕ್ರಾಂತಿಕಾರಗಳ ಹೆಸರುಗಳನ್ನು ಕೇಳಿದಾಗಲೆಲ್ಲ ನಾವು ಆದರದಿಂದ ತಲೆಬಾಗುತ್ತೇವೆ.ಆದರೆ, ಇಂತಹ ನೂರಾರು ಕ್ರಾಂತಿಕಾರಗಳನ್ನ ನಿರ್ಮಿಸಿದ ‘ಸಾವರ್ಕರ’ರನ್ನು ಸ್ಮರಿಸುವಾಗ ಸಂಕೋಚಕ್ಕೆ ಒಳಗಾಗುವುದು ಬಹಳ ದೌರ್ಭಾಗ್ಯದ ಸಂಗತಿ. ವೀರ ಸಾವರ್ಕರರ ಬಗ್ಗೆ ಅನೇಕ ಭ್ರಮೆಗಳನ್ನು ಹಬ್ಬಿಸಿರುವುದೇ ಇದಕ್ಕೆ ಕಾರಣ..”

ಮಾಜಿ ಕೇಂದ್ರಮಂತ್ರಿ ಹಾಗು ಕಾಂಗ್ರೆಸ್ ನಾಯಕ  ‘ವಸಂತ ಸಾಠೆ’ ಯವರ ಈ ಮಾತು ಯಾವಾಗಲೂ ನನ್ನನ್ನು ಕಾಡಿವೆ.. ಇಲ್ಲಸಲ್ಲದ, ಮಿಥ್ಯಾ ಆರೋಪಗಳನ್ನೇ ನಿಜವೆಂದು ನಂಬಿ, ಒಬ್ಬ ರಾಷ್ಟ್ರೀಯ ಪುರುಷನನ್ನು ಹಿಂಬದಿಗೆ ಸರಿಸಿ, ಅವರ ತೇಜೋವಧೆಯನ್ನೇ ನಿರಂತರವಾಗಿ ಮುಂದುವರೆಸಿಕೊಂಡು ಬಂದಿರುವುದು ನಿಜಕ್ಕೂ ಬೇಸರದ ಸಂಗತಿಯೇ..

ಕೇವಲ ಸಾವರ್ಕರರ ಮೇಲಿನ ವೃಥಾ ಅಭಿಮಾನದಿಂದ ಈ ಲೇಖನ ಹೊರಟಿಲ್ಲ.. ಬದಲಾಗಿ ಸಾವರ್ಕರರ ನಿಜಜೀವನದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಷ್ಟೇ..

ಮತ್ತಷ್ಟು ಓದು »

28
ಸೆಪ್ಟೆಂ

ಕ್ರಾಂತಿಕಾರಿ ಹೇಗೆ ತಾನೇ ಕಾಮ್ರೆಡ್ ಆಗಬಲ್ಲ?

 -ಸಂತೋಶ್ ತಮ್ಮಯ್ಯ

ಕೇರಳದ ತ್ರಿಶೂರ್‌ನಿಂದ ಕಣ್ಣೂರಿಗೆ ಹೋಗುತ್ತಿದ್ದರೆ ದಾರಿಯುದ್ದಕ್ಕೂ ವಿಚಿತ್ರಗಳು. ಕೆಂಪು ಕಮ್ಯುನಿಸ್ಟರ ಕಛೇರಿಗಳು. ರಸ್ತೆ ಬದಿಯುದ್ದಕ್ಕೂ ಬಂಟಿಂಗ್ಸ್‌ಗಳು. ದೊಡ್ಡ ದೊಡ್ಡ ಕೌಟೌಟ್‌ಗಳು,ಫ್ಲೆಕ್ಸ್‌ಗಳು,ಬ್ಯಾನರ್‌ಗಳು.ಈ ಬ್ಯಾನರ್‌ಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ’ಬೇಕಾಗಿದ್ದಾರೆ’ ಎಂದು ಹಾಕುವಲ್ಲಿ ಕಾಣಬಹುದಾದ ಭಾವಚಿತ್ರಗಳು.ವೊದಲ ನೋಟಕ್ಕೇ ಗೂಂಡಗಾಳು ಎಂದು ತಿಳಿದುಬಿಡುವ ವೃತ್ತಿಪರ ರೌಡಿಗಳ ಚಿತ್ರಗಳು. ಅವರೆಲ್ಲರೂ ಎಂದೋ ಸತ್ತುಹೋದವರು. ಕಮ್ಯುನಿಸ್ಟ್ ಕಾಮ್ರೆಡರ ಪ್ರಕಾರ ಅವರೆಲ್ಲರೂ ಹುತಾತ್ಮ ಕಾಮ್ರೆಡ್‌ಗಳು.ಇವನು ಕಮ್ಯುನಿಷ್ಟರ ಪ್ರಾರಬ್ಧ,ಸಾಯಲಿ ಎನ್ನುವಂತೆಯೂ ಇಲ್ಲ.ಏಕೆಂದರೆ ಈ ಸತ್ತ ಗೂಂಡಾಗಳ ಪಕ್ಕದಲ್ಲೇ ಹ್ಯಾಟು ಹಾಕಿದ ಭಗತ್ ಸಿಂಗ್ ಚಿತ್ರ. ಕಮ್ಯುನಿಸ್ಟರ ಪ್ರಕಾರ ದೇಶಕ್ಕಾಗಿ ಪ್ರಾಣ ಕೊಟ್ಟ ಭಗತ್‌ಸಿಂಗನೂ ಎಲ್ಲೋ ಕೊಲೆಯಾಗಿ ಹೋದ ರೌಡಿಗಳಿಬ್ಬರೂ ಕಾಮ್ರೆಡ್‌ಗಳು,ಶಹೀದ್‌ಗಳು. ಇಬ್ಬರಿಗೂ ಅವರದು ಲಾಲ್ ಸಲಾಂ. ಇನ್ನೊಂದೆಡೆ ದೇಶವನ್ನೇ ಅರಿಯದ ಲೋಕಲ್ ರೌಡಿ! ಕಮ್ಯುನಿಸ್ಟರ್ ಹಾಗೆಯೆ. ಅವರು ರೌಡಿಯನ್ನು ಕಾಣುವಂತೆಯೆ ಭಗತ್‌ಸಿಂಗ್‌ರನ್ನೂ ಕಾಣುತ್ತಾರೆ.ಇಬ್ಬರನ್ನೂ ಕಾಮ್ರೆಡ್ ಎಂದೇ ಭಾವಿಸುತ್ತಾರೆ.

ಈಗೊಂದು ಐದಾರು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಫ್ರೀಡಂ ಪೆರೇಡ್ ಎಂಬ ಕಾರ್ಯಕ್ರಮ ನಡೆಯಿತು. ಕೆಎಫ್‌ಡಿಯ ಜನರನ್ನು ಎಲ್ಲೆಲ್ಲಿಂದಲೋ ಕರೆಸಿಕೊಳ್ಳಲಾಯಿತು. ಎಲ್ಲೆಲ್ಲಿಂದಲೋ ಬಸ್ಸುಗಳು ಬಂದವು. ಗಡ್ಡಧಾರಿಗಳು,ಆರ್ಮಿಯಂತೆ ಸಮವಸ್ತ್ರ ಭರಿಸಿದವರು ಬಂದಿಳಿದಿದ್ದರು. ಮುಂದೆ ಹುಣಸೂರಿನಲ್ಲಿ ಮಕ್ಕಳನ್ನು ಕೊಂದ ಆ ಸಂಘಟನೆಯ ಜನರನ್ನು ನೋಡುತ್ತಾ ಕೆಲವರು ’ಕರಾಚಿಯಾ?’ ಎಂದು ಮಾತಾಡಿಕೊಂಡರು.ಅವರೆಲ್ಲರೂ ಮಂಗಳಾ ಸ್ಟೇಡಿಯಂನಲ್ಲಿ ಸೇರಿ ಮಿಲಿಟರಿಯಂತೆ ಕವಾಯತು ನಡೆಸಿದರು. ಹಿಂದಿಯಲ್ಲಿ ಅವರನ್ನುದ್ದೇಶಿಸಿ ಒಬ್ಬ ಮಾತಾಡಿದ್ದ. ಸಾವರ್ಕರ್‌ರನ್ನು ಹಿಗ್ಗಾಮುಗ್ಗಾ ಬೈದಿದ್ದ. ಹೋಗಿ, ದನ ಕಡಿಯಿರಿ ಎಂದಿದ್ದ. ಆತ ಮಾತನಾಡುತ್ತಿದ್ದ ವೇದಿಕೆಯ ಹೆಸರು ’ಶಹೀದ್ ಭಗತ್ ಸಿಂಗ್ ವೇದಿಕೆ’ ಆಗಿತ್ತು. ಯಾವ ಭಗತ್ ಸಿಂಗ್ ದೇಶದ ಬಗ್ಗೆ ಕನಸು ಕಂಡಿದ್ದನೋ,ಯಾವ ಭಗತ್‌ಸಿಂಗ್‌ಗೆ ಸ್ಪಷ್ಟ ಸಾಮರಸ್ಯ ಸಮಾಜದ ಕಲ್ಪನೆಯಿತ್ತೋ , ಯಾವ ಭಗತ್‌ಸಿಂಗ್‌ಗೆ ದೇಶವೆನ್ನುವುದು ಉಸಿರಾಗಿತ್ತೋ ಅಂತಹ ಭಗತ್ ಸಿಂಗ್ ಇಂದು ಇವರೆಲ್ಲರ ಸ್ವತ್ತಂತೆ. ದಾಸ್ಯದ ಬಿಡುಗಡೆ ಕ್ರಾಂತಿಯಿಂದ ಅಸಾಧ್ಯ ಎಂದಿದ್ದ  ಭಗತ್ ಸಿಂಗ್‌ನ ಹೆಸರಲ್ಲಿ ಸಾವರ್ಕರ್‌ರನ್ನು ಬಯ್ಯುವುದು, ಧಾರ್ಮಿಕತೆ ಅಷ್ಟಕ್ಕಷ್ಟೇ ಎಂಬಂತಿದ್ದ ಭಗತ್‌ಸಿಂಗ್‌ನನ್ನು ನೆಪವಾಗಿಟ್ಟುಕೊಂಡು ಗೋಹತ್ಯೆಯನ್ನು ಸಮರ್ಥಿಸುವುದು , ದೇಶಪ್ರೇಮಕ್ಕೆ ಬಣ್ಣವನ್ನು  ಬಿತ್ತುವುದು ಇಂದು ನಿರಂತರ ನಡೆಯುತ್ತಿದೆ.

ಮತ್ತಷ್ಟು ಓದು »