ವಿಷಯದ ವಿವರಗಳಿಗೆ ದಾಟಿರಿ

Posts tagged ‘ಸುಪ್ರೀಂ ಕೋರ್ಟು’

30
ಜನ

ಜಲ್ಲಿಕಟ್ಟು ಹೆಸರಿನಲ್ಲಿ ಹೊಸದೊಂದು ಸಂಸ್ಕೃತಿ ಸಾಧ್ಯವಿಲ್ಲ ಅಂತೀರಾ?

– ನರೇಂದ್ರ ಎಸ್ ಗಂಗೊಳ್ಳಿ

08ma_jallikattu_dg_1748590fನಾಡು ನುಡಿ ಸಂಸ್ಕೃತಿ ಸಂಪ್ರದಾಯದ ಅಭಿಮಾನದ ವಿಚಾರಕ್ಕೆ ಬಂದಾಗ ತಮಿಳುನಾಡಿನ ಜನರು ಯಾವತ್ತಿಗೂ ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ. ಇದು ಹೊಗಳಿಕೆ ಅಂತೇನೂ ಅಲ್ಲ. ನಮ್ಮ ಜನರ ಅಭಿಮಾನದ ನೆಲೆಯಲ್ಲಿ ನೋಡಿದಾಗ ಹಾಗನ್ನಿಸುವುದು ಸಹಜ. ಮೊನ್ನೆ ಮೊನ್ನೆ ಪ್ರಸ್ತುತ ಜಲ್ಲಿಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ನಡೆದ ಹೋರಾಟದ ಪರಿ ಇದೆಯಲ್ಲಾ ಅದು ನಿಜಕ್ಕೂ ಪ್ರತಿಯೊಬ್ಬರಿಗೂ ಪ್ರೇರಣೆಯನ್ನು ನೀಡುವಂತಾದ್ದು. ಅವರಿಗೊಂದು ಮೆಚ್ಚುಗೆಯಿರಲಿ. ಆದರೆ ಈ ಜಲ್ಲಿಕಟ್ಟು ವಿಚಾರವನ್ನು ತೀರಾ ಭ್ರಮೆಗಳಿಗೆ ಕಟ್ಟುಬೀಳದೆ ವಾಸ್ತವದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ ತೀರ್ಮಾನಕ್ಕೆ ಬರುವ ಅವಶ್ಯಕತೆ ಇಲ್ಲ ಎನ್ನುತ್ತೀರಾ? ಮತ್ತಷ್ಟು ಓದು »

24
ನವೆಂ

ಕಾನೂನಿನ ಹೆಸರಲ್ಲಿ ಮರೆಯಾಗಲಿದೆಯೆ ಕರಾವಳಿಯ ಕಂಬಳ ಕ್ರೀಡೆ?

– ರಾಘವೇಂದ್ರ ಅಡಿಗ. ಹೆಚ್.ಎನ್

ಕಂಬಳಶತಮಾನಗಳ ಇತಿಹಾಸ ಹೊಂದಿರುವ ಕರ್ನಾಟಕದ ಕರಾವಳಿಯಲ್ಲಿನ ಕಂಬಳ ಕ್ರೀಡೆಗೆ ಇದೀಗ ಕಂಟಕವು ಎದುರಾಗಿದೆ. ಹೋರಿಗಳನ್ನು ಹಿಂಸಾತ್ಮಕವಾಗಿ ಬೆದರಿಸುವ ತಮಿಳುನಾಡಿನ ಜಲ್ಲಿಕಟ್ಟು ಸ್ಪರ್ಧೆ ಮತ್ತು ಮಹಾರಾಷ್ಟ್ರದ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಸುಪ್ರೀಂ ಕೋರ್ಟ್ 2014ರ ಮೇ 7ರಂದು ನಿಷೇಧಿಸಿ ಆದೇಶ ಹೊರಡಿಸಿತ್ತು. ಪ್ರಾಣಿಗಳನ್ನು ಮನರಂಜನೆಗಾಗಿ ಹಿಂಸಾತ್ಮಕವಾಗಿ ನಡೆಸಿಕೊಳ್ಳಬಾರದು ಎಂಬುದು ನ್ಯಾಯಾಲಯದ ತೀರ್ಪಿನ ತಾತ್ಪರ್ಯವಾಗಿತ್ತು. ಇದೀಗ ಸುಪ್ರೀಂ ಕೊರ್ಟ್ ತೀರ್ಪಿನ ಹಿನ್ನೆಲೆಯನ್ನಿಟ್ಟುಕೊಂಡು ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕಂಬಳ ನಡೆಸದಂತೆ ಸೂಚಿಸಿದೆ. ಹೀಗಾಗಿ ದ.ಕ ಜಿಲ್ಲಾಡಳಿತದ ಕ್ರೀಡೆಗೆ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಕಂಬಳದ ಆಚರಣೆ, ಇತಿಹಾಸ, ಹಿನ್ನೆಲೆಯ ಮೇಲೆಂದು ಇಣುಕು ನೋಟವಿಲ್ಲಿದೆ.

ಕರಾವಳಿ ಕರ್ನಾಟಕದ ಬೇಸಾಯ ವೃತ್ತಿಯೇ ಪ್ರಮುಖವಾಗಿರುವ ಸಮಾಜದಲ್ಲಿ ಕೋಣಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ.  ಬೇಸಾಯಗಾರರು ಭತ್ತದ ಗದ್ದೆಗಳಲ್ಲಿ ಉತ್ತಿದ ಬಳಿಕ ಕೋಣ ಎತ್ತುಗಳನ್ನು ಓಡಿಸುತ್ತಿದ್ದ ಆಚರಣೆ ಮತ್ತು ಆಟ ‘ಕಂಬಳ’. ಕಂಬಳ ಅತವಾ ತುಳು ಭಾಷೆಯಲ್ಲಿ ಹೇಳುವಂತೆ ‘ಕಂಬುಲ’ ಎಂದರೆ ಉಳುವುದಕ್ಕೆ ಮತ್ತು ಬೀಜಗಳ ಬಿತ್ತನೆಗೆ ಸಿದ್ದವಾಗಿರುವ ಕೆಸರುಗದ್ದೆ ಎಂದೇ ಹುರುಳು. ಕೆಸರುಗದ್ದೆಯಲ್ಲಿ, ಬಾಕಿಮಾರು ಗದ್ದೆಯಲ್ಲಿ, ಕಂಬಳ ಗದ್ದೆಯಲ್ಲಿ ದಪ್ಪನೆ ಮಯ್ಯ, ಸಾಕಿದ ಕೋಣಗಳನ್ನು ಓಡಿಸುವುದು ಒಂದು ಮನೋರಂಜನೆ ಆಟ. ಹೀಗೆಂದ ಮಾತ್ರಕ್ಕೆ ಕಂಬಳವು ಕೇವಲ ಕೋಣಗಳ ಓಟದ ಸ್ಪರ್ಧೆಯು ಮಾತ್ರವೇ ಎಂದು ತಿಳಿಯಬೇಕಿಲ್ಲ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿನ ರೈತರು ಭತ್ತದ ಕೊಯ್ಲಿನ ಬಳಿಕದಲ್ಲಿ ಮನರಂಜನೆಗಾಗಿ ಏರ್ಪಡಿಸುತ್ತಿದ್ದ ಆಟವಿದಾಗಿದ್ದು ಇಂತಹಾ ಆಚರಣೆಯ ಜತೆಗೆ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆಯೂ ಮಿಳಿತಗೊಂಡಿದೆ.

ಮತ್ತಷ್ಟು ಓದು »

29
ಡಿಸೆ

ಸರ್ವಾಧಿಕಾರಿ ಧೋರಣೆಯ ಪ್ರಗತಿಪರರು ಮತ್ತು ಮೋದಿ

– ಪ್ರಸನ್ನ,ಬೆಂಗಳೂರು

Modiಅಹಮದಾಬಾದಿನ ಮೆಟ್ರೊಪಾಲಿಟನ್ ನ್ಯಾಯಾಲಯ ಪ್ರಗತಿಪರರಿಗೆ ಒಂದು ತಡೆಯಲಾರದ ಆಘಾತ ನೀಡಿದೆ. ಈ ಆಘಾತವನ್ನು ಸಹಿಸಿಕೊಂಡು ಈಗಲಾದರೂ ಈ ಬುದ್ದಿಗೇಡಿಗಳು ತಮ್ಮ ಮಾರ್ಗ ಸರಿ ಪಡಿಸಿಕೊಳ್ಳುತ್ತರೇನೋ ಎಂಬ ನಮ್ಮ ನಿರೀಕ್ಷೆ ಹುಸಿಯಾಗುವಂತಿದೆ, ಯಥಾ ಪ್ರಕಾರ ಅವರು ತಮ್ಮ ಪ್ರಜಾಪ್ರಭುತ್ವ ವಿರೋಧಿ ಧೋರಣೆಯಲ್ಲೇ ಇನ್ನೂ ಬಿದ್ದು ಒದ್ದಾಡುತ್ತಿದ್ದಾರೆ. ನಾನಂತೂ ಇವರನ್ನು ಪ್ರಜಾಪ್ರಭುತ್ವ ನ್ಯಾಯಾಂಗ ವ್ಯವಸ್ಥೆ ಮತ್ತು ಭಾರತದ ಕಾನೂನಗಳನ್ನು ಗೌರವಿಸದ ದೇಶದ್ರೋಹಿಗಳೆಂದೆ ಪರಿಗಣಿಸುತ್ತೇನೆ. ಹೇಗೆಂದಿರಾ?

ನೀವೆ ಗಮನಿಸಿ ೨೦೦೨ದಿಂದೀಚೆಗೆ ಇವರು ಹಾಡುತ್ತಿದ್ದುದು ಒಂದೇ ರಾಗ ಅದು ಮೋದಿ ನರಹಂತಕ ಎಂಬುದು, ಇವರ ಅಧಿನಾಯಕಿಯಂತೂ ಆತನನ್ನು ಸಾವಿನ ವ್ಯಾಪಾರಿಯೆಂದು ಜರೆದು ನಾಲಿಗೆ ಕುಲ ಹೇಳುತ್ತದೆಂಬುವುದನ್ನು ತೋರಿಸಿಕೊಟ್ಟುಬಿಟ್ಟಿದ್ದಲ್ಲದೇ ತನ್ನ ನಾಲಿಗೆಯನ್ನು ತಾನೆ ಕಚ್ಚಿ ಕೊಳ್ಳುವಂತಾಯ್ತು. ಗುಜರಾತಿನ ಜನರು ಸತತ ೩ ಬಾರಿ ಇವರ ತಲೆಯ ಮೇಲೆ ಕಲ್ಲು ಹಾಕಿದ್ದೂ ಆಯ್ತು. ಆದರೂ ನಮ್ಮ ಕರ್ನಾಟಕದ ಪ್ರಗತಿಪ್ರರು ಮಾತ್ರ ಇನ್ನೂ ಆ ರೋಗದಿಂದ ಹೊರಬರಲೇ ಇಲ್ಲ.

ಮತ್ತಷ್ಟು ಓದು »