ವಿಷಯದ ವಿವರಗಳಿಗೆ ದಾಟಿರಿ

Posts tagged ‘ಸ್ವಾತಂತ್ರ್ಯ ಸಂಭ್ರಮ’

7
ಸೆಪ್ಟೆಂ

ಅಣ್ಣಾ ಹಜಾರೆ – ಶ್ರೀ ಸಾಮಾನ್ಯನ ಮನೆ – ಮನಗಳ ದೀಪ.

– ಹೊಳೆನರಸೀಪುರ ಮಂಜುನಾಥ್

ಅಣ್ಣಾ ಹಜಾರೆಯವರ ಬೇಡಿಕೆಗಳನ್ನು ಕೇ೦ದ್ರ ಸರ್ಕಾರ ಒಪ್ಪಿಕೊಳ್ಳುವುದರ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ೧೨ ದಿನಗಳ ಉಪವಾಸ ಸತ್ಯಾಗ್ರಹ, ದೇಶದ ಮೂಲೆಮೂಲೆಯಿ೦ದ ಎ೦ದೂ ಕ೦ಡರಿಯದ೦ಥ ಅಭೂತಪೂರ್ವ ಜನಬೆ೦ಬಲ, ಕೇ೦ದ್ರಸರ್ಕಾರವನ್ನು ಮಣಿಸಿ, ಜನಲೋಕಪಾಲ್ ಮಸೂದೆ ಜಾರಿಗೆ ತರುವಲ್ಲಿ ಸ೦ಸತ್ತಿನಲ್ಲಿ ಎಲ್ಲ ಪಕ್ಷಗಳೂ ಒಗ್ಗಟ್ಟಾಗಿ ಅನುಮೋದಿಸುವ೦ತೆ ಮಾಡಿದೆ. ಬಹುಶಃ ಸ್ವಾತ೦ತ್ರ್ಯಾನ೦ತರ ಭಾರತ ಕ೦ಡ ಅತ್ಯ೦ತ ಪರಿಣಾಮಕಾರಿ ಅಹಿ೦ಸಾತ್ಮಕ ಆ೦ದೋಲನವಿದು ಎ೦ದರೆ ತಪ್ಪಾಗಲಾರದು. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಿಕ್ಕಿರುವ ಜಯ, ಯಾವುದೇ ಒ೦ದು ಪಕ್ಷಕ್ಕೆ, ಸ೦ಘಟನೆಗೆ ಅಥವಾ ವ್ಯಕ್ತಿಗೆ ಸಿಕ್ಕಿರುವ ಜಯವಲ್ಲ. ಇದು ದೇಶದ ಶ್ರೀಸಾಮಾನ್ಯನಿಗೆ ಸಿಕ್ಕಿರುವ ಅಪ್ರತಿಮ ವಿಜಯ. ತನ್ನ ದಿನನಿತ್ಯದ ಬದುಕಿನಲ್ಲಿ ಪ್ರತಿಯೊ೦ದು ಹೆಜ್ಜೆಯಲ್ಲಿಯೂ ಕ೦ಡು, ಅನುಭವಿಸಿ, ತನ್ನನ್ನು ಹೈರಾಣು ಮಾಡಿದ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ಈ ದೇಶದ ಸಾಮಾನ್ಯ ನಾಗರಿಕನ ಸಾತ್ವಿಕ ಕೋಪಕ್ಕೆ ಸಿಕ್ಕ ವಿಜಯ ಇದಾಗಿದೆ.
ಮತ್ತಷ್ಟು ಓದು »

15
ಆಗಸ್ಟ್

ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ…!

– ರಾಕೇಶ್ ಶೆಟ್ಟಿ

ಇವತ್ತು ೬೫ನೇ ಸ್ವಾತಂತ್ರ್ಯ ಸಂಭ್ರಮ,ದೆಹಲಿಯ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿ ಭಾಷಣ ಮಾಡಲಿದ್ದಾರೆ ನಮ್ಮ ಪ್ರಾಮಾಣಿಕ ಪ್ರಧಾನಿ.ಮತ್ತೆ ನಾಳೆ ಇದೇ ಪ್ರಾಮಾಣಿಕ ಪ್ರಧಾನಿಯ ಸರ್ಕಾರದ ಅನೈತಿಕತೆಯ ವಿರುದ್ಧ ಅಣ್ಣಾ ಹಜ಼ಾರೆ ಮತ್ತೆ ಉಪವಾಸ ಕೂರುತಿದ್ದಾರೆ.ಅಣ್ಣಾ ಇದನ್ನ ಎರಡನೇ ಸ್ವಾತಂತ್ರ್ಯ ಹೋರಾಟ ಅನ್ನುತಿದ್ದಾರೆ.ಆದರೆ ಮೊದಲ ಸ್ವಾತಂತ್ರ್ಯ ಹೋರಾಟದ ಆಳ-ಅಗಲಗಳನ್ನ ಸರಿಯಾಗಿ ತಿಳಿಯಲಾಗದೇಯೆ ಶಾಲೆ-ಕಾಲೇಜು ಪಾಸಾಗಿ ಬಂದ ನಮ್ಮಲ್ಲಿ ಅದಿನ್ನೆಷ್ಟು ಜನಕ್ಕೆ ಈ ಎರಡನೇ ಹೋರಾಟ ಕಿಚ್ಚು ಹಚ್ಚಬಹುದು,ಅದನ್ನ ಕಾಲವೇ ಉತ್ತರಿಸಲಿದೆ.

ಅಣ್ಣಾ ಉಪವಾಸ ಹೋರಾಟಕ್ಕೆ ಜಯವಾಗಲಿ ಅಂತ ಹಾರೈಸುತ್ತ,ಅಣ್ಣಾ ಉಪವಾಸ ಸತ್ಯಾಗ್ರಹಕ್ಕೆ ಆರಂಭದಲ್ಲೆ ಕಲ್ಲು ಹಾಕಿ ತಲೆಕೆಟ್ಟವರಂತೆ ಮಾತನಾಡುತ್ತಿರುವ ಕಾಂಗ್ರೆಸ್ಸಿನ ಮಂದಿಗೂ ಮತ್ತು ಕೇಂದ್ರ ಗೃಹ ಸಚಿವರಿಗೂ ಮತ್ತು ಕನಿಷ್ಠ ದೆಹಲಿ ಪೋಲಿಸ್ ಪರ್ಮಿಷನ್ ಸಹ ಕೊಡಿಸಲಾಗದ ಅಸಾಹಯಕ ಆದರೆ At the same time ಪ್ರಾಮಾಣಿಕ ಪ್ರಧಾನಿಯ ಶೋಚನೀಯ ಸ್ಥಿತಿಗೆ ಕಂಬನಿ ಮಿಡಿಯುತ್ತ, ಉಪವಾಸ ಸತ್ಯಾಗ್ರಹದಂತ ಹೋರಾಟದ ಅಸ್ತ್ರ ಹಿಡಿದು ನಿಲ್ಲುವವರ ಮನಸ್ಥಿತಿಯ ಕುರಿತಾಗಿ ಮಹಮ್ಮದ್ ಅಲಿ ಜಿನ್ನಾ ಹೇಳಿರುವ ಮಾತುಗಳು ನೆನಪಿಸಿಕೊಳ್ಳುತಿದ್ದೇನೆ.

“ಯಾವ ಮನುಷ್ಯ ಉಪವಾಸ ಸತ್ಯಾಗ್ರಹಕ್ಕೆ ಇಳಿಯುತ್ತಾನೋ ಅಂತವನು ಅವನ ಮನಸಿನ ಮಾತಿನಂತೆ ನಡೆಯುತ್ತಾನೆ ಮತ್ತು ಅವನಿಗೆ ಅವನೇನು ಮಾಡುತ್ತಿದ್ದಾನೆ ಎಂಬುದರ ಸಂಪೂರ್ಣ ಅರಿವಿರುತ್ತದೆ.ಅವರನ್ನು ಹಾದಿ ತಪ್ಪಿದವರು ಅನ್ನುವ ಮೊದಲು ಅವರನ್ನು ಹಾದಿ ತಪ್ಪಿಸಿರುವುದು ಈ ವ್ಯವಸ್ತೆ ಅನ್ನುವುದನ್ನ ಮರೆಯಬಾರದು,ಮತ್ತು ಈ ವ್ಯವಸ್ತೆಯ ವಿರುದ್ಧ ಯುವಕರು ಸಿಡಿದಿದ್ದಾರೆ” . ಅವರು ಹಾಗೇ ಹೇಳಿದ್ದು ಕ್ರಾಂತಿಕಾರಿ ಭಗತ್ ಸಿಂಗ್ ಮತ್ತು ಸಂಗಡಿಗರು ಬ್ರಿಟಿಶ್ ಕೈದಿಗಳಂತೆ ಭಾರತೀಯ ಕೈದಿಗಳಿಗೂ ಜೈಲಿನಲ್ಲಿ ಸಮಾನ ಹಕ್ಕು ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಹೋರಾಟವನ್ನ ಬಹಿರಂಗವಾಗಿ ಬೆಂಬಲಿಸಿ.ಆಗಲೂ ಸಹ ಕಾಂಗ್ರೆಸ್ಸ್ ಭಗತ್ ಸಿಂಗ್ ಅವರ ಉಪವಾಸದ ಹೋರಾಟದ ಬಗ್ಗೆ ಈಗ ಅಣ್ಣಾ ಅವರ ಹೋರಾಟದ ವಿರುದ್ಧ ಇರುವಂತೆಯೆ ಇತ್ತು. ಅದಿರಲಿ, ಈ ಹೋರಾಟ ನಡೆದಿದ್ದು ಬರೋಬ್ಬರಿ ೬೩ ದಿನಗಳ ಕಾಲ! ಕಡೆಗೂ ಭಗತ್ ಸಿಂಗ್ ಮತ್ತವರ ಗೆಳೆಯರ ಎದುರು ಬ್ರಿಟಿಷ್ ಸರ್ಕಾರ ಮಂಡಿಯೂರಲೇ ಬೇಕಾಯಿತು,ಆದರೆ ಅಷ್ಟರೊಳಗಾಗಲೇ ನಾವು ’ಜತೀನ್ ದಾ’ ಅವರನ್ನ ಕಳೆದುಕೊಂಡಾಗಿತ್ತು 😦

ಮತ್ತಷ್ಟು ಓದು »

15
ಆಗಸ್ಟ್

ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ

– ಪವನ್ ಪರುಪತ್ತೆದಾರ್

ಮೊದಲಿಗೆ ನಿಲುಮೆಯ ಎಲ್ಲ ಓದುಗರಿಗೆ ಸ್ವಾತಂತ್ರ್ಯದಿನದ ಶುಭಾಶಯಗಳು. ೬೫ ನೆ ಸ್ವತಂತ್ರ ದಿನದ ಆಚರಣೆ ಎಲ್ಲ ಕಡೆ ಭರ್ಜರಿಯಿಂದ ಸಾಗಲಿ ಎಂದು ಆಶಿಸೋಣ. ೧೯೪೭ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ಸಿಕ್ಕಿದ ವಿಷಯ ನಮಗೆಲ್ಲ  ತಿಳಿದಿದ್ದೆ. ಇಂದು  ನಮಗೆ  ಅ  ಸ್ವಾತಂತ್ರ್ಯ ಎಷ್ಟರ ಮಟ್ಟಿಗೆ  ಸಿಕ್ಕಿದೆಯೆಂದರೆ ನಮ್ಮ ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸುವ  ಮಟ್ಟಿಗೆ ಸಿಕ್ಕಿದೆ. ನಾ ಬೇಕಾದರೆ ಬಾಜಿ ಕಟ್ಟುತ್ತೇನೆ ನಾಳಿನ ಪೇಪರ್ ನೋಡಿ ನಮ್ಮ ರಾಜ್ಯದಲ್ಲೇ  ಒಂದೆರಡು  ಕಡೆಯಾದರು ಧ್ವಜವನ್ನು ಉಲ್ಟಾ ಹಾರಿಸಿರುತ್ತಾರೆ. ಬ್ರಿಟಿಷರ ದಬ್ಬಾಳಿಕೆ ಹದ್ದು ಮೀರಿದಾಗ ಹಿಂಸೆಯ ನಾನಾ ಮಾರ್ಗಗಳು ಪ್ರಯೋಗಿಸಿ ಹುತಾತ್ಮರಾದವರು, ನಂತರ ದೇಶವನ್ನೆಲ್ಲ ಒಟ್ಟಿಗೆ ಸಂಘಟಿಸಿ ಅಹಿಂಸೆಯಿಂದ ಮಾತ್ರ ನಮಗೆ ಸ್ವಾತಂತ್ರ್ಯ ಸಾಧ್ಯ ಎಂದು ತೋರಿಸಿಕೊಟ್ಟು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ  ಮಹಾತ್ಮರು, ನಮ್ಮ ಈಗಿನ ಸ್ವಾತಂತ್ರ್ಯವನ್ನೇನಾದರು ನೋಡಿದ್ದರೆ, ಇವರಿಗೆ  ಯಾಕಾದ್ರು ಸ್ವಾತಂತ್ರ್ಯ ಕೊಡಿಸಿದೆವೋ ಎಂದು ಮರುಗುತಿದ್ದರೆನೋ…..

ನನ್ನ  ಮಾತುಗಳು ಅತಿಶಯೋಕ್ತಿ ಎನಿಸಬಹುದು. ಆದರೆ ನಮ್ಮ ದೇಶದಲ್ಲಿ ಎಲ್ಲರಿಗು ಎಷ್ಟು ಸ್ವಾತಂತ್ರ್ಯವಿದೆ ಅಂತ ನಿಮಗೆ ಗೊತ್ತು. ಟ್ರಾಫಿಕ್ ಪೋಲಿಸ್ ಡಾಕುಮೆಂಟ್ ಸರಿ ಇದ್ದರು ಲಂಚ ಪಡೆಯುವ ಸ್ವಾತಂತ್ರ್ಯ, ಖಾತೆ ಬದಲಾವಣೆ ಮಾಡಿಸಬೇಕಾದರೆ ಪತ್ರ ಸ್ಕಾನ್ನಿಂಗ್ ಮಾಡುವನಿಂದ ಹಿಡಿದು, ಮೊಹರು ಹಾಕುವ ಗುಮಸ್ತನಿಂದ ಹಿಡಿದು, revinue inspector ತನಕ ಲಂಚ ಪಡೆಯುವ ಸ್ವಾತಂತ್ರ್ಯ. ಗೆದ್ದೊಡನೆ ತಮ್ಮ ಕ್ಷೇತ್ರದ ಜನತೆಯನ್ನು ಮರೆತು ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡುವ ಸ್ವಾತಂತ್ರ್ಯ, ಪಕ್ಷದ ತತ್ವ ಸಿದ್ಧಾಂತಗಳನ್ನು ಮರೆತು ಪಕ್ಷಾಂತರ ಮಾಡುವ ಸ್ವಾತಂತ್ರ್ಯ, ರೈತನ ಜಮೀನನ್ನು ಕಸಿದು ಅಧುನಿಕರಣದ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಸ್ವಾತಂತ್ರ್ಯ, ನಮ್ಮ ಭೂಮಿಯ ಸಂಪತ್ತಲ್ಲದೆ ಅಂತರಂಗದಲ್ಲಿರುವ ತರಂಗಾಂತರಗಳನ್ನು ಮೋಸದಿಂದ ಮಾರುವ ಸ್ವಾತಂತ್ರ್ಯ, ಇನ್ನು ತಮಾಷೆಯೆಂದರೆ ತಪ್ಪು ಮಾಡಿ ದುಷ್ಕ್ರುತ್ಯಗಳನ್ನೆಸಗಿ ವಾರ್ಷಿಕ ೧೧ ಕೋಟಿ ಹಣವನ್ನು ಸರ್ಕಾರದಿಂದ ಖರ್ಚು ಮಾಡಿಸಿಕೊಳ್ಳೋ ಸ್ವಾತಂತ್ರ್ಯ ಮತ್ತು ತಪ್ಪಿತಸ್ತ ಎಂದು ಖಾತರಿಯಾದ ಮೇಲು ಶಿಕ್ಷೆ ಇಲ್ಲದೆ ಐಶಾರಾಮಿ ಜೀವನ ನಡೆಸುವ ಸ್ವಾತಂತ್ರ್ಯ, ಇಂತಹದ್ದೆನ್ನಲ್ಲ ವಿರೋಧಿಸಿದರೆ ವಿರೋಧಿಸಿದವರ ವಿರುದ್ದವೇ ಕೇಸು ಜಡಿಯುವ ಸ್ವಾತಂತ್ರ್ಯ.ಆಹಾ ಹೇಳುತ್ತಾ ಹೋದರೆ ಪುಟಗಟ್ಟಲೆ ಇಂತಹ ಸ್ವಾತಂತ್ರ್ಯಗಳು ಸಿಗುತ್ತವೆ.

ಮತ್ತಷ್ಟು ಓದು »

15
ಆಗಸ್ಟ್

ಸ್ವಾತಂತ್ರ್ಯ ಸಂಭ್ರಮ