ವಿಷಯದ ವಿವರಗಳಿಗೆ ದಾಟಿರಿ

Posts tagged ‘ಹೆಗ್ಗುರುತು’

17
ಸೆಪ್ಟೆಂ

‘ನಕ್ಸಲ್ ವರಸೆ’ ಮತ್ತು ‘ಹೆಗ್ಗುರುತು’ ಕಥಾ ಸಂಕಲನಗಳನ್ನು ಕುರಿತಂತೆ … ಭಾಗ ೨

ಮು. ಅ. ಶ್ರೀರಂಗ,ಬೆಂಗಳೂರು

ನಕ್ಸಲ್ ವರಸೆ ಮತ್ತು ಹೆಗ್ಗುರುತು“ಹೆಗ್ಗುರುತು”ಗೆ ಪ್ರವೇಶ ರೂಪದಲ್ಲಿ ಮುನ್ನುಡಿ ಬರೆದಿರುವ ಮಲ್ಲಿಕಾರ್ಜುನ ಹೀರೆಮಠರು ಆ ಕತೆಗಳ ಸಾರಾಂಶ / ತಾತ್ಪರ್ಯ/ ಭಾಷ್ಯ ಹೀಗೆ ಬರೆದಿರುವುದರಿಂದ ಅದರಲ್ಲಿ ಚರ್ಚಿಸುವ ಅಂಶಗಳು ಅಷ್ಟಾಗಿ ಇಲ್ಲ. “ನಿಜಕವಲು”ಜತೆಗೆ ಸ್ತ್ರ್ರೀ ವಾದಿಗಳೂ ಸೇರಿದಂತೆ ಹಲವರ ಕೋಪಕ್ಕೆ ಕಾರಣವಾದ ಭೈರಪ್ಪನವರ “ಕವಲು”ಕಾದಂಬರಿಯನ್ನು ಹೋಲಿಸಿದ್ದಾರೆ. ಈ ತೌಲನಿಕ ಅಧ್ಯಯನ ಹೇಗೆ ಸಾಧ್ಯವೋ ತಿಳಿಯದಾಗಿದೆ. ಕವಲು ಮತ್ತು ನಿಜಕವಲುವಿನ ನೆಲೆಗಳೇ ಬೇರೆ ಬೇರೆ. ಕಾನೂನಿಗೂ ನ್ಯಾಯ-ನೀತಿಗೂ ನಡುವೆ ಇರುವ ಕಂದರ ಕವಲುವಿನ ಮುಖ್ಯ ಸಮಸ್ಯೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ,ಜನ ಹಿತಕ್ಕಾಗಿ ಮಾಡಿದ ಕಾನೂನನ್ನೇ ಅದಕ್ಕೆ ವಿರುದ್ದವಾಗಿಯು ಉಪಯೋಗಿಸಿದಾಗ ಏನಾಗಬಹುದು ಎಂಬುದರಕದೆಗೆ ನಮ್ಮ ಗಮನವನ್ನು ಸೆಳೆಯುವುದು ಆ ಕಾದಂಬರಿಯ ಉದ್ದೇಶ. ದಾಂಪತ್ಯದಲ್ಲಿ ಹೊಂದಾಣಿಕೆ ಎಂಬುದು ಕೇವಲ ಗಂಡಸಿಗೆ ಮಾತ್ರ ಸೇರಿದ್ದಲ್ಲ;ಹೆಣ್ಣಿಗೂ ಆ ಕರ್ತವ್ಯದಲ್ಲಿ ಪಾಲಿದೆ. ತೀರ ಸಹಿಸಲು ಆಸಾಧ್ಯವಾದಾಗ ಬಿಡುಗಡೆ ಪಡೆಯುವುದರಲ್ಲಿ ತಪ್ಪೇನಿಲ್ಲ. ಇದನ್ನು ಭೈರಪ್ಪನವರು ವಿರೋಧಿಸುತ್ತಾರೆ ಎಂದು ಊಹಿಸುವುದು ತಪ್ಪಾಗುತ್ತದೆ.”ನಿಜ ಕವಲು”ವಿನಲ್ಲಿ ಬರುವ ಮಹಿಳಾ ಕಂಡಕ್ಟರ್ ರೀತಿಯಲ್ಲೇ ಇತರೆ ಉದ್ಯೋಗಸ್ಥ ಮಹಿಳೆಯರೂ ಸಹ ಒಂದಲ್ಲ ಒಂದು ವಿಧದಲ್ಲಿ ಸನ್ನಿವೇಶದಲ್ಲಿ :ವಾರೆ ನೋಟ”ಕ್ಕೆ ತುತ್ತಾಗ ಬಹುದಾದಂತಹವರೆ.”ಚಿಕ್ಕತಾಯಿ”ಕತೆ ಇದಕ್ಕೆ ಉದಾಹರಣೆ. ಕೊನೆಯಲ್ಲಿ ಅದು ಬೇರೆ ತಿರುವು ಪಡೆದರು ಸಹ ಪ್ರಾರಂಭದ ಹಂತಗಳನ್ನು ಮರೆಯಬಾರದಲ್ಲವೆ ಹೀಗಾಗಿ ದುಡಿಯುವ ಆಧುನಿಕ ಮಹಿಳೆಯ ಬಗ್ಗೆ ಭೈರಪ್ಪನವರದ್ದು “ವಾರೆ ನೋಟ”ಎಂಬ ಹಿರೇಮಠರ ಅಭಿಪ್ರಾಯ ಸರಿಯಿಲ್ಲ. ಜತೆಗೆ ಆಧುನಿಕ ಉದ್ಯೋಗಸ್ಥ ಮಹಿಳೆಯಿಂದಾಗಿ ನಮ್ಮ ಸನಾತನ ಸಂಸ್ಕೃತಿ ಕವಲು ದಾರಿ ಹಿಡಿದು ಹಾಳಾಗುತ್ತಿದೆ ಎಂಬ ಆತಂಕ ಭೈರಪ್ಪನವರನ್ನು ಕಾಡುತ್ತಿದೆ ಎಂಬ ಹಿರೇಮಠರ ಆರೋಪದಲ್ಲೂ ಹುರುಳಿಲ್ಲ. ಸನಾತನ ಸಂಸ್ಕೃತಿ ನಂಬಿಕೆಗಳಿಗೆ ಮುಜುಗುರ ತಂದಂತಹ “ಪರ್ವ”(ಮಹಾಭಾರತವನ್ನು”ಆಧರಿಸಿದ್ದು) ಕಾದಂಬರಿಯನ್ನು ಬರೆದ ಭೈರಪ್ಪನವರನ್ನು “ಸನಾತನ ಮಠದ ಸ್ವಾಮಿಗಳ ಪೀಠ”ದಲ್ಲಿ ಕೂರಿಸುವುದು ಕುಚೋದ್ಯವಾಗಬಹುದು. ಅಷ್ಟೆ.

ಮತ್ತಷ್ಟು ಓದು »

10
ಸೆಪ್ಟೆಂ

‘ನಕ್ಸಲ್ ವರಸೆ’ ಮತ್ತು ‘ಹೆಗ್ಗುರುತು’ ಕಥಾ ಸಂಕಲನಗಳನ್ನು ಕುರಿತಂತೆ … ಭಾಗ ೧

-ಮು. ಅ. ಶ್ರೀರಂಗ,ಬೆಂಗಳೂರು

ನಕ್ಸಲ್ ವರಸೆ ಮತ್ತು ಹೆಗ್ಗುರುತುಕಥಾಸಂಕಲನಗಳು, ಕಾದಂಬರಿಗಳು, ಕವನಸಂಕಲನಗಳು … ಹೀಗೆ ಸಾಹಿತ್ಯದ ಯಾವುದೇ ಪ್ರಕಾರವಿರಲಿ ಅವುಗಳಿಗೆ ಮುನ್ನುಡಿಗಳು ಸಾಮಾನ್ಯವಾಗಿ ಇರುತ್ತವೆ.ಈ ಮುನ್ನುಡಿಗಳು ಕೆಲವೊಮ್ಮೆ ಸ್ನೇಹದ ಕುರುಹಾಗಿರಬಹುದು, ಅಥವಾ ಉದಯೋನ್ಮುಖರನ್ನು ಪ್ರೋತ್ಸಾಹಿಸುವ, ಅವರಲ್ಲಿ ಧೈರ್ಯ ತುಂಬುವ ಆಶೀರ್ವಚನಗಳಾಗಿರಬಹುದು. ಇನ್ನು ಕೆಲವು ಪರಸ್ಪರ ಸಹಕಾರದ (ಅವರದ್ದಕ್ಕೆ ಇವರು ಇವರದ್ದಕ್ಕೆ ಅವರು) ಸ್ವರೂಪದ್ದೂ  ಆಗಿರುವುದುಂಟು.

ಕೆ.ಸತ್ಯನಾರಾಯಣರ ಇತ್ತೀಚಿನ ಸಣ್ಣ ಕಥೆಗಳ ಸಂಕಲನ ‘ನಕ್ಸಲ್ ವರಸೆ’ (ಪ್ರಕಾಶಕರು : ಅಕ್ಷರಪ್ರಕಾಶನ ಹೆಗ್ಗೋಡು , ೨೦೧೦)ಗೆ  ಮುನ್ನುಡಿ ಬರೆದಿರುವ ಕೆ.ಫಣಿರಾಜ್  ಮತ್ತು ‘ಹೆಗ್ಗುರುತು’ (ಮನೋಹರ ಗ್ರಂಥಮಾಲ , ಧಾರವಾಡ ,೨೦೧೨)ಗೆ ಪ್ರವೇಶ ರೂಪದಲ್ಲಿ ಮುನ್ನುಡಿ ಬರೆದಿರುವ ಮಲ್ಲಿಕಾರ್ಜುನ ಹಿರೆಮಠರದ್ದು ಮೇಲೆ ಹೇಳಿದ್ದ ಪ್ರಭೇಧಗಳಿಗೆ ಸೇರುವಂಥಹದಲ್ಲ.

ಫಣಿರಾಜರು ತಮ್ಮ ಮುನ್ನುಡಿಯಲ್ಲಿ ಸತ್ಯನಾರಾಯಣರ ಕಥೆಗಳ ಹಿನ್ನಲೆಯಲ್ಲಿ ಸಧ್ಯದ ಕೆಲವೊಂದು ವಾದ-ವಿವಾದಗಳ್ಳನ್ನು ಚರ್ಚಿಸಿರುವುದರಿಂದ ಆಸಕ್ತಿದಾಯಕವಾಗಿದೆ.ಹಿರೇಮಠರದ್ದು ಕಥೆಗಳ ಸಾರಾಂಶ ಅವುಗಳ ಬಗ್ಗೆ ಅವರ ಒಂದೆರೆಡು ಅಭಿಪ್ರಾಯಗಳು/ಅನಿಸಿಕೆಗಳಿಗೆ ಸೀಮಿತವಾಗಿದೆ.ಕಥೆಗಳ ಬಗ್ಗೆ ನೇರವಾಗಿ ಬರೆಯದೆ ಮುನ್ನುಡಿಗಳನ್ನು ಕುರಿತಂತೆ ಚರ್ಚಿಸುವುದಕ್ಕೆ ಒಂದು ಕಾರಣವಿದೆ.ಮುನ್ನುಡಿಗಳೂ ಒಂದು ರೀತಿಯ ವಿಮರ್ಶೆ ಆಗಿರುವುದರಿಂದ ಅದರ ನಿಲುವುಗಳ,ತೀರ್ಮಾನಗಳ ಬಗ್ಗೆ ಮಾತನಾಡುವುದೂ ಸಹ ಪರೋಕ್ಷವಾಗಿ ಆ ಕಥೆಗಳನ್ನು ಕುರಿತಂತೆ ಓದುಗನಾಗಿ ನನ್ನ ಅಭಿಪ್ರಾಯಗಳೂ ಆಗಿರುವ ಸಾಧ್ಯತೆಗಳಿವೆ

ಮತ್ತಷ್ಟು ಓದು »