ಕಮ್ಯೂನಿಸ೦ ಎ೦ದರೆ ನರಮೇಧ.. ನರಮೇಧವೆ೦ದರೆ ಕಮ್ಯೂನಿಸ೦!?
– ಕೆ.ಎಸ್ ರಾಘವೇಂದ್ರ ನಾವಡ
“ಕಮ್ಯೂನಿಸ೦ ಎ೦ದರೆ ನರಮೇಧ.. ನರಮೇಧವೆ೦ದರೆ ಕಮ್ಯೂನಿಸ೦ “ ಎ೦ಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆಯಲ್ಲ!!
ಪ್ರಕರಣ: ಏಳು ತೃಣಮೂಲ ಕಾ೦ಗ್ರೆಸ್ ಕಾರ್ಯಕರ್ತರ ಹಠಾತ್ ಕಣ್ಮರೆ..
ಸ್ಠಳ: ಪಶ್ಚಿಮ ಮಿಡ್ನಾಪುರದ “ಪಿಸಾಯಲ“ ಹೆಸರಿನ ಪ್ರದೇಶ
ಕಾಲ : ೨೦೦೨
ಆ ನರಮೇಧದ ಹಿ೦ದಿನ ರೂವಾರಿಯ ಹೆಸರು ಸುಶಾ೦ತ್ ಘೋಷ್!!
ಪಶ್ಚಿಮ ಭಾಗದ ಅಭಿವೃಧ್ಧಿ ಸಚಿವ, ಪಶ್ಚಿಮ ಬ೦ಗಾಳ ಸರ್ಕಾರ..
ಅ೦ತೂ ಕಮ್ಯೂನಿಸ್ಟರ ಬಣ್ಣ ಬಯಲಾಗತೊಡಗಿದೆ. ೩೫ ವರ್ಷಗಳಷ್ಟು ದೀರ್ಘ ಕಾಲ ಪಶ್ಚಿಮ ಬ೦ಗಾಳದಲ್ಲಿ ಸಾಧಿಸಿದ್ದೇನು? ಎ೦ಬುದಕ್ಕೆ ಈಗ ಉತ್ತರಗಳು ಸಿಗತೊಡಗಿವೆ! ಆದರೆ ಈ ರೀತಿಯ ಉತ್ತರ ಮಾತ್ರ ಯಾರೂ ನಿರೀಕ್ಷಿಸಿರಲಾರರು! ಒಮ್ಮೆ ಮಮತಾ ದೀದಿ ಥರಗುಟ್ಟಿ ಹೋಗಿದ್ದಾರೆ! ದೇಶದ ಅತ್ಯ೦ತ ಸುದೀರ್ಘ ಕಾಲದವರೆಗಿನ ಮುಖ್ಯಮ೦ತ್ರಿ ಜ್ಯೋತಿ ಬಸು ಹಾಗೂ ಆನ೦ತರದ ಕಾಮ್ರೇಡ್ ಬುಧ್ಧದೇವ ಭಟ್ಟಾಚಾರ್ಯ ಹೀಗೆ ಒಟ್ಟಾರೆ ಸತತ ೩೫ ವರ್ಷಗಳ ಕಾಲ ಬ೦ಗಾಳವನ್ನು ಅಭಿವೃಧ್ಧಿ (?)ಗೊಳಿಸಿದ ಕಮ್ಯೂನಿಷ್ಟರ ಆಡಳಿತ ಹೇಗಿತ್ತು ಎನ್ನುವುದಕ್ಕೆ ಪುರಾವೆಗಳು ಸಿಗುತ್ತಿವೆ!
ಅಣ್ಣಾ ಹಜಾರೆ – ಶ್ರೀ ಸಾಮಾನ್ಯನ ಮನೆ – ಮನಗಳ ದೀಪ.
– ಹೊಳೆನರಸೀಪುರ ಮಂಜುನಾಥ್
ಅಣ್ಣಾ ಹಜಾರೆಯವರ ಬೇಡಿಕೆಗಳನ್ನು ಕೇ೦ದ್ರ ಸರ್ಕಾರ ಒಪ್ಪಿಕೊಳ್ಳುವುದರ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ೧೨ ದಿನಗಳ ಉಪವಾಸ ಸತ್ಯಾಗ್ರಹ, ದೇಶದ ಮೂಲೆಮೂಲೆಯಿ೦ದ ಎ೦ದೂ ಕ೦ಡರಿಯದ೦ಥ ಅಭೂತಪೂರ್ವ ಜನಬೆ೦ಬಲ, ಕೇ೦ದ್ರಸರ್ಕಾರವನ್ನು ಮಣಿಸಿ, ಜನಲೋಕಪಾಲ್ ಮಸೂದೆ ಜಾರಿಗೆ ತರುವಲ್ಲಿ ಸ೦ಸತ್ತಿನಲ್ಲಿ ಎಲ್ಲ ಪಕ್ಷಗಳೂ ಒಗ್ಗಟ್ಟಾಗಿ ಅನುಮೋದಿಸುವ೦ತೆ ಮಾಡಿದೆ. ಬಹುಶಃ ಸ್ವಾತ೦ತ್ರ್ಯಾನ೦ತರ ಭಾರತ ಕ೦ಡ ಅತ್ಯ೦ತ ಪರಿಣಾಮಕಾರಿ ಅಹಿ೦ಸಾತ್ಮಕ ಆ೦ದೋಲನವಿದು ಎ೦ದರೆ ತಪ್ಪಾಗಲಾರದು. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಿಕ್ಕಿರುವ ಜಯ, ಯಾವುದೇ ಒ೦ದು ಪಕ್ಷಕ್ಕೆ, ಸ೦ಘಟನೆಗೆ ಅಥವಾ ವ್ಯಕ್ತಿಗೆ ಸಿಕ್ಕಿರುವ ಜಯವಲ್ಲ. ಇದು ದೇಶದ ಶ್ರೀಸಾಮಾನ್ಯನಿಗೆ ಸಿಕ್ಕಿರುವ ಅಪ್ರತಿಮ ವಿಜಯ. ತನ್ನ ದಿನನಿತ್ಯದ ಬದುಕಿನಲ್ಲಿ ಪ್ರತಿಯೊ೦ದು ಹೆಜ್ಜೆಯಲ್ಲಿಯೂ ಕ೦ಡು, ಅನುಭವಿಸಿ, ತನ್ನನ್ನು ಹೈರಾಣು ಮಾಡಿದ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ಈ ದೇಶದ ಸಾಮಾನ್ಯ ನಾಗರಿಕನ ಸಾತ್ವಿಕ ಕೋಪಕ್ಕೆ ಸಿಕ್ಕ ವಿಜಯ ಇದಾಗಿದೆ.
ಮತ್ತಷ್ಟು ಓದು 
ಜನಲೋಕಪಾಲ ಅನ್ನುವುದು ಮಾಯದಂಡವೇನಲ್ಲ…!
– ರಾಕೇಶ್ ಶೆಟ್ಟಿ
ಒಂದೆಡೆ ಅಣ್ಣಾರನ್ನ ಬೆಂಬಲಿಸಿ ಜನ ಬೀದಿಗಿಳಿದರೆ, ಇನ್ನೊಂದೆಡೆ ಅಣ್ಣಾ ಹೋರಾಟವನ್ನ ಪ್ರಶ್ನಿಸಿ ಹಲವಾರು ಪ್ರಶ್ನೆಗಳೆದ್ದಿವೆ.
’ಜನಲೋಕಪಾಲ್’ ಬಂದ ತಕ್ಷಣ ಎಲ್ಲ ಭ್ರಷ್ಟರು ಮಾಯವಾಗ್ತಾರೆ ಅಂತ ಖುದ್ದು ಅಣ್ಣಾ ಮತ್ತು ಸಿವಿಲ್ ಸೊಸೈಟಿಯವರ್ಯಾರು ಸಹ ಎಲ್ಲೂ ಹೇಳಿಲ್ಲ.ಹಾಗಾಗ್ಯೂ ಇಂತ ವಾದ ಹುಟ್ಟು ಹಾಕಿದ್ದು ಯಾರು? ಬಹುಷಃ ಕಪಿಲ್ ಸಿಬಲ್ ಇರಬೇಕು ಅದನ್ನೆ ಹಿಡಿದು ಕೆಲವರು ’ಜನಲೋಕಪಾಲ್’ ಬಂದ್ರೆ ಭ್ರಷ್ಟಚಾರ ಮಾಯವಾಗುತ್ತಾ!? ಅಂತ ಕೇಳ್ತಾ ಇದ್ದಾರೆ ಕೆಲವರು. ಅಂತವರಿಗೊಂದು ಪ್ರಶ್ನೆ ಪೋಲಿಸ್ ಇಲಾಖೆ ಅನ್ನುವುದು ಬಂದು ಎಷ್ಟು ವರ್ಷಗಳಾಯ್ತು? ಕಳ್ಳತನ-ಕೊಲೆ-ದರೋಡೆ ನಿಂತಿದೆಯಾ ಸ್ವಾಮಿ!? ಇಲ್ಲ ತಾನೆ..! ಆದರೆ ಜನ್ರಿಗೊಂದು ಹೆದರಿಕೆಯಂತೂ ಇರುತ್ತದೆ ತಪ್ಪು ಮಾಡೋಕೆ ಹಾಗೆ ತಪ್ಪು ಮಾಡಿದವರನ್ನ ಹಿಡಿದು ಜೈಲಿಗೆ ಅವರು ನೂಕುತಿದ್ದಾರಲ್ವಾ? ಹಾಗೆಯೇ ಜನಲೋಕಪಾಲ ಅನ್ನುವುದು ಸಹ.ಅದು ಬಂದ ತಕ್ಷಣ ಎಲ್ಲ ಸರಿ ಹೋಗದು.ಅದು ಸುಧಾರಣೆಯ ಒಂದು ಅಸ್ತ್ರವಷ್ಟೆ.
ಈ ಎಡವಟ್ಟುಗಳು ಯಾಕೆ ಹೀಗೆ ಅಂತ?
– ಸಚಿನ್ ಕೆ
ನಮಸ್ಕಾರ ಸಾ. ಎಂಗಿದೀರಾ.
ನೋಡಿ ಸಾ, ಪ್ರಪಂಚ ಹೆಂಗೈತೆ ಅಂದ್ರೆ ಹಿಂಗೂ ಜನ ಇರ್ತಾರ ಅಂತ ಗೊತ್ತಿರ್ಲಿಲ್ಲ.
ಗಾಂಧಿ ಮಆತ್ಮ್ ನ ತರ ನೀವು ಉಪ್ವಾಸ ಮಾಡಿದ್ರೆ ಜನ ಅದರಲ್ಲೂ ಹುಳುಕು ಕಂಡಿಡಿತಾರೆ ಅಂದ್ರೆ, ಈ ಜನ ಎಷ್ಟು ಗಬ್ಬೆದ್ದು ಹೋಗಿದ್ದಾರೆ ಅಂತ. ಆ ಬ್ರಹ್ಮ ಇವರ ತಲೆ ಒಳಗೆ ಮಿದುಳು ಇಟ್ಟಿಲ್ಲ ಅನ್ಸುತ್ತೆ, ಅದರೆ ಬದಲು ಸಗಣಿ ಮಡಗವ್ನೆ. ಈ ಬಡ್ಡೆತ್ತೇವು ಬರೀ ಉಲ್ಟಾ ಮಾತಾಡೋದೆ ಆಗ್ವಾಯ್ತು.
ಅವಯ್ಯ ದೇಸಾನ ಏನೋ ಬದಲಾವ್ಣೆ ಮಾಡ್ತೀನಿ ಅಂತ ಮಾತಾಡ್ತಿಲ್ಲ. ಲಂಚ ತಿನ್ನೋ ಎಲ್ಲ ಬೇವರ್ಸಿ ಮುಂಡೇವು ಗಳಿಗೆ ಸರ್ಯಾದ ಸಿಕ್ಸೆ ಆಗ್ಲಿ ಅಂತ ಗೋರ್ಮೆಂಟ್ ನೋರು ಸರಿಯಾದ ರೂಲ್ಸ್ ಮಾಡ್ಲಿ ಅಂತ. ಆದರೆ ಈ ಉಲ್ಟಾ ಮಾತಾಡ್ತ ಇರೋ ಈ ಹೈಕಳು ಕೇಳೋ ಪ್ರಸ್ನೆಗಳನ್ನು ನೋಡಿದ್ರೆ ನಗ ತಡ್ಯಾಕಾಗ್ತಿಲ್ಲ.
ಭ್ರಷ್ಟಾಚಾರ ಎಂದರೆ ಅನುಕೂಲ ಸಿಂಧು
– ಪವನ್ ಪರುಪತ್ತೆದಾರ
ನನಗೊಬ್ಬ ಸ್ನೇಹಿತ ಇದ್ದಾನೆ ಪ್ರವೀಣ್ ಅಂತ, ನನ್ನ ಜೊತೆ ಓದಿಲ್ಲವಾದರೂ ನನ್ನ ಸಹಪಾಠಿ ಅವನು, ಒಂದೇ ತರಗತಿ ಆದರೆ ಬೇರೆ ಶಾಲೆ. ಅವನ ಕೆಲಸ ತಾಲ್ಲೂಕು ಕಚೇರಿಯಲ್ಲಿ. ಸರ್ಕಾರದಿಂದ ಕೊಟ್ಟ ಕೆಲಸ ಅಲ್ಲ, ಅವನೇ ಹುಡುಕಿ ಕೊಂಡಿರುವ ವೃತ್ತಿ. ನಿಜ ಹೇಳಬೇಕೆಂದರೆ ನಮ್ಮೂರಿನ ತಾಲ್ಲೂಕು ಕಚೇರಿಯೋಳಗಿರುವರಿಗಿಂತ ಇವನು ಹೆಚ್ಚು ಕೆಲಸ ಮಾಡುತ್ತಾನೆ. ಪಹಣಿ, registration, ಖಾತೆ ಬದಲಾವಣೆ, encumberance ಸರ್ಟಿಫಿಕೇಟ್, survey sketch ಕಾಪಿ, ನಿಮಗೇನು ಬೇಕು?? ತಾಲ್ಲೂಕು ಕಚೇರಿಯ ಗೇಟ್ ನ ಪ್ಯೂನ್ ಇಂದ ಹಿಡಿದು ತಹಶೀಲ್ದಾರ್ ತನಕ, ಏನು ಕೆಲಸ ಬೇಕಾದರುಮಾಡಿಕೊಡುತ್ತಾನೆ(ಮಾಡಿಸಿಕೊಡುತ್ತಾನೆ).
ಇತ್ತೀಚಿಗೆ ನನಗೆ ಬಹಳ ಜರೂರಾಗಿ ನಮ್ಮ ಜಮೀನಿನ ಪಹಣಿ ಬೇಕಾಗಿತ್ತು. ನಮ್ಮ ಊರಿನ ಪಹಣಿ ಕೇಂದ್ರ ಬಹಳ ದಿನಗಳಿಂದ ದುರಸ್ಥಿಯಲ್ಲಿತ್ತು. ಆಗಷ್ಟೇ ಕೊಡಲು ಶುರು ಮಾಡಿದ್ದರು. ಅದ್ದರಿಂದ ತಾಲ್ಲೂಕು ಕಚೇರಿ ಬಳಿ ಹೋಗಿ ಸಾಲು ನೋಡಿದೊಡನೆ ಭಯವಾಯ್ತು. ಅದರಲ್ಲೂ ನಮ್ಮ ಸರ್ಕಾರೀ ಕಛೇರಿಯೋಳಗಿನ ಗಣಕ ಯಂತ್ರಗಳು ಯಾವಾಗ ಕೆಡುತ್ತವೋ ಗೊತ್ತಿಲ್ಲ. ಇವತ್ತು ಕೆಟ್ಟರೆ ಇನ್ನು ರಿಪೇರಿ ಆಗುವುದು ಯಾವಾಗಲೋ??? ಅಲ್ಲಿವರೆಗೂ ನನಗೂ ಕಾಯುವ ಅವಕಾಶವಿರಲಿಲ್ಲ. ಮತ್ತಷ್ಟು ಓದು 
ಪೌರ ಕಾರ್ಮಿಕರ ಬದುಕು ಹಸನಾಗುವುದು ಯಾವಾಗ?
– ಪವನ್ ಯಂ.ಟಿ
ನಾಳೆ ಬೆಳಗ್ಗೆ ೫ ಗಂಟೆಗೆ ಅಲಾರಾಮ್ ಇಡು ಮಗಳೆ ೫:೩೦ ರ ಬಸ್ಸು ಮಿಸ್ ಆಗೋದ್ರೆ ಕಸವೆಲ್ಲ ಅಲ್ಲೇ ಉಳಿದು ಬಿಡುತ್ತೆ, ನಿನ್ನೆ ದಿನ ಸಂತೆ ಬೇರೆ ಇತ್ತು. ಕಸದ ರಾಶಿಯೇ ಬಿದ್ದಿರ ಬಹುದು. ಬೇಗ ಹೋಗಿ ಕ್ಲೀನ್ ಮಾಡಬೇಕು…! ಎಂದು ಪೌರಕಾರ್ಮಿಕೆ ಮಲ್ಲಮ್ಮ ತನ್ನ ಮಗಳಿಗೆ ಹೇಳಿ ಮಲಗಿಕೊಂಡಳು. ಮಲ್ಲಮ್ಮನಿಗಿರುವ ಒಂದೇ ಆಲೋಚನೆ ತನಗೆ ವಹಿಸಿದ ವಾರ್ಡನಂಬರ್ ೭ರಲ್ಲಿ ಬಿದ್ದಿರುವ ಕಸವನ್ನು ತೆಗೆದು ಶುಚಿಗೊಳಿಸುವುದು. ಎಲ್ಲಿ ಬೆಳಗ್ಗೆ ಬಸ್ಸು ಮಿಸ್ಸಾದರೆ ಕಸದ ರಾಶಿ ಅಲ್ಲಿಯೇ ಉಳಿದು ಮೇಲಾಧಿಕಾರಿಗಳು, ಗುತ್ತಿಗೆದಾರರು ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಯೋ ಅನ್ನುವ ಭಯ ಮಲ್ಲಮ್ಮನಿಗೆ. ಇದು ಕೇವಲ ಒಬ್ಬ ಪೌರಕಾರ್ಮಿಳ/ನ ಚಡಪಡಿಕೆಯಲ್ಲ. ನಮ್ಮ ದೇಶದಲ್ಲಿ ಅಥವಾ ರಾಜ್ಯದಲ್ಲಿ ದುಡಿಯುತ್ತಿರುವ ಎಲ್ಲಾ ಪೌರ ಕಾರ್ಮಿಕರ ಚಡಪಡಿಕೆಯಾಗಿದೆ. ಪೌರ ಕಾರ್ಮಿಕರಿಗೆ ದಿನಬೆಳಗಾದರೆ ಸ್ವಚ್ಚತೆಯದ್ದೇ ಚಿಂತೆ. ಅವರು ಈ ಕೆಲಸವನ್ನು ತಮ್ಮ ಒಟ್ಟೆ ಪಾಡಿಗಾಗಿ ಮಾಡಿದರೂ ಸಹ ಅದರ ಹಿಂದೆ ಪ್ರತಿಯೊಬ್ಬ ನಾಗರೀಕನ ಆರೋಗ್ಯದ ಕುರಿತ ಕಾಳಜಿ ಅವರಲ್ಲಿ ಮನೆ ಮಾಡಿರುತ್ತದೆ.
ನಾವು ಬೆಳಗ್ಗೆ ಎದ್ದು ಸುಮಾರು ೭ ಗಂಟೆಯ ಸಮಯಕ್ಕೆ ಪಟ್ಟಣಕ್ಕೆ ಒಂದು ಸುತ್ತು ಬಂದರೆ ಸಾಕು ಪೌರ ಕಾರ್ಮಿಕರು ಪಡುವ ಕಷ್ಟ, ಅವರು ಮಾಡುವ ಕೆಲಸ, ನಮ್ಮ ಕಣ್ಣಿಗೆ ಕಾಣುತ್ತದೆ. ನಮಗೆ ಅಸಯ್ಯ ಎನ್ನಿಸುವ ಕೆಲಸವನ್ನು ಅವರು ಮಾಡಿದಂತೆ ಕಂಡರೂ ಅವರೆಲ್ಲ ನಮ್ಮ ಪಾಲಿನ ದೇವರಿದ್ದಂತೆ, ಇಂದು ನಾವೆಲ್ಲ ಒಳ್ಳೆಯ, ಕೈತುಂಬಾ, ಹಣ ಬರುವ ಕೆಲಸವನ್ನು ಮಾತ್ರ ಹುಡುಕುತ್ತೇವೆ. ಒಂದು ವೇಳೆ ಪೌರ ಕಾರ್ಮಿಕರೇ ಇಲ್ಲವೆಂದಿದ್ದರೇ ಇಂದು ನಮ್ಮ ಆರೋಗ್ಯದ ಪರಿಸ್ಥಿತಿ ಏನಾಗುತ್ತಿತ್ತು ಎನ್ನುವುದನ್ನು ನೀವೇ ಯೋಚಿಸಿ.
ಕಾಸರಗೋಡಿನ ಕನ್ನಡಿಗರ ತ್ಯಾಗ ಮತ್ತು ಬಲಿದಾನಗಳನ್ನು ಕರ್ನಾಟಕ ಮರೆತಿದೆಯೇ..!?
– ಕುಮಾರ ರೈತ
“ಕಾಸರಗೋಡು, ಕರ್ನಾಟಕದ ಕನ್ಯಾಕುಮಾರಿ. ಉತ್ತರದಲ್ಲಿ ಬೆಳಗಾವಿ, ಬಳ್ಳಾರಿಗಳಂತೆ ದಕ್ಷಿಣ ಕನ್ನಡದಲ್ಲಿ ನಮ್ಮದು ಕರ್ನಾಟಕದ ಕನ್ಯಾಕುಮಾರಿ. ಕನ್ನಡನಾಡಿನ ಈ ತೆಂಕಣ ಬಾಗಿಲನ್ನು ತೆರೆದಿಟ್ಟು ಕನ್ನಡಿಗರು ಎಚ್ಚರತಪ್ಪಿ ನಿದ್ರೆ ಹೋದುದ್ದೇ ಆದರೆ ನಮ್ಮ ಜನರಿಗೂ, ನಮ್ಮ ನಾಡಿಗೂ ಅಮೂಲ್ಯವಾದ ಕನ್ನಡ ಸಂಸ್ಕೃತಿಗೂ ಪ್ರಮಾದ ಒದಗುವುದರಲ್ಲಿ ಸಂಶಯವಿಲ್ಲ. ವಿಶಾಲ ಕೇರಳ ಚಳವಳಿಯು ಆರಂಭವಾಗಿ ಹತ್ತು ವರ್ಷಗಳು ಸಂದುಹೋದವು. ದಕ್ಷಿಣ ಕನ್ನಡ, ಕೊಡಗು, ನೀಲಗಿರಿ ಜಿಲ್ಲೆಗಳು ಮಲಬಾರಿನೊಂದಿಗೆ ಜತೆಗೊಂಡು ಕೇರಳ ಸಂಸ್ಥಾನ ಅಥವಾ ಪಶ್ಚಿಮ ಪ್ರಾಂತ ಸಂಸ್ಥಾನವೊಂದು ನಿರ್ಮಾಣವಾಗಬೇಕೆಂದು ಈ ಚಳವಳಿಯು ಪ್ರಬಲವಾಗುತ್ತಾ ನಡೆದಿದೆ. ಈ ಚಳವಳಿಯ ಮರ್ಮವನ್ನು ತಿಳಿದುಕೊಂಡು ಕನ್ನಡಿಗರು ಅದನ್ನು ಸಕಾಲದಲ್ಲಿಯೇ ಪ್ರತಿಭಟಿಸದೇ ಹೋದರೆ ಸ್ವಲ್ಪಕಾಲದೊಳಗಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡಾದರೂ ಮಲಬಾರಿನವರ ಮಡಿಲಿಗೆ ಬೀಳಬೇಕಾಗಬಹುದು”
ಭಾಷಾವಾರು ಪ್ರಾಂತ್ಯ ರಚನೆಯಾಗುವುದಕ್ಕೂ ಒಂಭತ್ತು ವರ್ಷಗಳಿಗೂ ಮೊದಲೇ ಶ್ರೀಧರ ಕಕ್ಕಿಲಾಯರು ಹೇಳಿದ್ದ ಖಚಿತ ಅಭಿಪ್ರಾಯವಿದು. ಇವರು ಕಾಸರಗೋಡಿನ ಸುಪ್ರಸಿದ್ಧ ವಕೀಲರಾಗಿದ್ದರು. ಕಾಸರಗೋಡನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸಲು ಸತತ ೨೫ ವರ್ಷ ಹೋರಾಟ ಮಾಡಿದರು. ಅವರ ಜೀವಿತಾವಧಿಯವರೆಗೂ ಈ ಹೋರಾಟದಲ್ಲಿ ಸಕ್ರಿಯರಾಗಿದ್ದರು. ೧೯೪೭ರ ಡಿಸೆಂಬರ್ನಲ್ಲಿ ಕಾಸರಗೋಡಿನ ಬೋರ್ಡ್ ಹೈಸ್ಲೂಲ್ ಆವರಣದಲ್ಲಿ ೩೧ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆತು. ಈ ಸಂದರ್ಭದಲ್ಲಿ ಹೊರಬಂದ ಸ್ಮರಣ ಸಂಚಿಕೆ ‘ತೆಂಕುನಾಡು’ ಸ್ಮರಣ ಸಂಚಿಕೆಯಲ್ಲಿ ಶ್ರೀಧರ ಕಕ್ಕಿಲಾಯರ ಈ ಲೇಖನ ಪ್ರಕಟವಾಯಿತು. ಅದರ ಶೀರ್ಷಿಕೆ ‘ಕನ್ನಡ-ಮಲೆಯಾಳ ಸಮಸ್ಯೆ’
ಇದನ್ನೆಲ್ಲ ಪ್ರಸ್ತಾಪಿಸಲು ಕಾರಣವಿದೆ. ಕಾಸರಗೋಡಿಗೆ ಹೋದಾಗಲೆಲ್ಲ ನಾನು ಭೇಟಿ ಕೊಡುವ ಖಾಯಂ ಸ್ಥಳಗಳ ಸಾಲಿನಲಿಬೇಕಲ್ ಕೋಟೆ ಸೇರಿದೆ. ಇಲ್ಲಿ ಪ್ರಾಣದೇವರ ಗುಡಿಯಿದೆ. ಹೊರಭಾಗದಲ್ಲಿ ಗುಡಿ ಹೆಸರನ್ನು ಕನ್ನಡದಲ್ಲಿ ಬರೆಯಲಾಗಿದೆ. ಬೇಕಲ್ ಕೋಟೆ ನಿರ್ಮಾಣ ಮಾಡಿದ್ದು ಕನ್ನಡಿಗ ರಾಮನಾಯಕ. (ಟಿಪ್ಪು ಸುಲ್ತಾನ್ ಸೈನ್ಯದ ದಂಡನಾಯಕ ( ಮೂಲತಃ ಬೇಕಲ್ ಕೋಟೆ ಕನ್ನಡ ಪ್ರದೇಶ. ಇದಕ್ಕೆ ಅನೇಕ ಕುರುಹುಗಳಿವೆ. ಕೋಟೆ ಇರುವ ಊರಿನ ಹೆಸರು ‘ಅಗಸರ ಹೊಳೆ. ಈ ಎರಡೂ ಪದಗಳು ಅಚ್ಚಗನ್ನಡ.
ಕಥೆಯಾದಳು ಹುಡುಗಿ!
– ಚಿತ್ರ ಸಂತೋಷ್
ವೇಶ್ಯಾವಾಟಿಕೆ ಎನ್ನುವುದು ಗಂಡಸು ಸೃಷ್ಟಿಸುವ ಸಮಸ್ಯೆ ಎಂದವನು ಚಾಣಕ್ಯ. ಆದರೆ, ನನಗನಿಸಿದ ಮಟ್ಟಿಗೆ ಇದು ಸಮಾಜವೇ ಸೃಷ್ಟಿಸುವ ಸಮಸ್ಯೆ. ಉತ್ತರ ಕರ್ನಾಟಕದ ಕೆಲಭಾಗಳಲ್ಲಿ ಈಗಲೂ ಹೆಣ್ಣನ್ನು ವೇಶ್ಯಾವಾಟಿಕೆಗೆ ತಳ್ಳುವ ಕೆಟ್ಟಪದ್ಧತಿ ಚಾಲ್ತಿಯಲ್ಲಿದೆ. ಇಲ್ಲಿ ಯಾವ ಕಾನೂನುಗಳೂ ಕೆಲಸಮಾಡುತ್ತಿಲ್ಲ.
ನನಗೆ ೨೨ ವರ್ಷ. ನಾವು ಐವರು ಹೆಣ್ಣುಮಕ್ಳು. ಮನೆಯಲ್ಲಿ ಬಡತನ. ನಮ್ಮ ಮದುವೆ ಕುರಿತು ಯೋಚನೆ ಮಾಡಿ ಮಾಡಿ ಅಪ್ಪಹಾಸಿಗೆ ಡಿದಿದ್ದ. ನಾನೇ ದೊಡ್ಡವಳು. ನನ್ನ ಕೊನೆಯ ತಂಗಿಯ ಹುಟ್ಟುವಾಗಲೇ ಹೆರಿಗೆಯಲ್ಲಿ ತೊಂದರೆಯಾಗಿ ಅಮ್ಮ ಸಾವನ್ನಪ್ಪಿದ್ದಳು. ನಾನು ದೊಡ್ಡವಳಾಗಿದ್ದರಿಂದ ನನಗೆ ಸಣ್ಣ ವಯಸ್ಸಿನಲ್ಲೇ ಒಬ್ಬ ಮುದುಕನ ಜೊತೆ ಅಪ್ಪ ಮದುವೆ ಮಾಡಿದ್ದ. ಆದರೆ, ಅವನಿಗೆ ಆಗಲೇ ಮೂರು ಮಂದಿ ಪತ್ನಿಯರಿದ್ದರು. ಮರಳಿ ಮನೆಗೆ ಬಂದೆ. ಕೆಲಸ ಹುಡುಕುವುದು ಅನಿವಾರ್ಯವಾಯಿತು. ನಮ್ಮೂರಿನ ಅಂಕಲ್ ಒಬ್ರು ಕೆಲಸ ಕೊಡಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಅಪ್ಪನಿಗೂ ಹೇಳದೆ ಅವನನ್ನು ನಂಬಿ ಮುಂಬೈಗೆ ತೆರಳಿದೆ.
ಕನ್ನಡದ ಕತ್ತು ಹಿಚುಕುತ್ತಿರುವ ಕೇರಳ ಸರಕಾರ…!?
– ಕುಮಾರ ರೈತ
ಶೀರ್ಷಿಕೆ ಓದಿದಾಗ ಆಶ್ವರ್ಯ-ಪ್ರಶ್ನಾರ್ಥಕ ಭಾವಗಳು ಮೂಡುವುದು ಸಹಜ. ಆದರೆ ‘ಕನ್ನಡದ ಕತ್ತು ಹಿಚುಕುತ್ತಿರುವ ಕೇರಳ ಸರಕಾರ ಎನ್ನುವುದು ಅಕ್ಷರಶಃ ಸತ್ಯ. ಗಡಿ ಅಂಚಿನ ಕಾಸರಗೋಡಿನಿಂದ ಕನ್ನಡಕ್ಕೆ ಸ್ಥಾನವೇ ಇಲ್ಲದಂತೆ ಮಾಡುವ ನಿಟ್ಟಿನಲ್ಲಿ ಆ ಸರಕಾರ ನಾನಾ ಬಗೆಯ ತಂತ್ರಗಾರಿಕೆಯನ್ನು ಮಾಡುತ್ತಲೇ ಬಂದಿದೆ. ಭಾಷಾವಾರು ಪ್ರಾಂತ್ಯ ರಚನೆಯಾಗಿ 54 ವರ್ಷ ಸಂದರೂ ಕಾಸರಗೋಡಿನಲ್ಲಿ ಕನ್ನಡ ಉಳಿದಿರುವುದನ್ನು ಕಂಡು ಈ ಬಾರಿ ಪ್ರಬಲ ಅಸ್ತ್ತ ಪ್ರಯೋಗಿಸಿದೆ. ಇದಕ್ಕೆ ತಕ್ಕ ಪ್ರತ್ಯಸ್ತ್ರ ಹೂಡದೇ ಇದ್ದರೆ ಸಂಭವಿಸುವ ಅಪಾಯಗಳು ಅನೇಕ. ಅವುಗಳೇನು…..?





