ವಿಷಯದ ವಿವರಗಳಿಗೆ ದಾಟಿರಿ

Posts tagged ‘backward community leader’

26
ಡಿಸೆ

ನನ್ನ ಬದುಕು ಪರಿವರ್ತಿಸಿದ ಬಂಗಾರಪ್ಪ

-ಬನವಾಸಿ ಸೋಮಶೇಖರ್, ಮಂಗಳೂರು
“1992 ನೇ ಇಸ್ವಿ.ನಾನು ಆಗಷ್ಟೇ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು ಮುಗಿಸಿದ್ದೆ.ಫಲಿತಾಂಶ ಇನ್ನೂ ಬಂದಿರಲಿಲ್ಲ.ಅತ್ಯಂತ ಕಡು ಬಡತನದ ಕುಟುಂಬ ನಮ್ಮದು.ಒಂದು ಹೊತ್ತಿನ ತುತ್ತಿಗೂ ತತ್ವಾರ ಪಡುವಂತ ದಯನೀಯ ಮತ್ತು ಶೋಚನೀಯ ಸ್ಥಿತಿ.ತಂದೆ ನಾ ಮಗುವಾಗಿರುವಾಗಲೇ ಗತಿಸಿದ್ದರು.ಮೂರು ಜನ ಅಣ್ಣಂದಿರು, ಒಬ್ಬಳು ಸಹೋದರಿ.ದೊಡ್ಡಣ್ಣ 10-11ರ ಪ್ರಾಯದಲ್ಲಿಯೇ ಮನೆ ಬಿಟ್ಟು ಹೋದವನು ನಾಪತ್ತೆಯಾಗಿದ್ದ.ಅಮ್ಮ ಅವನಿಗಾಗಿ ಹುಡುಕಾಡಿ ಹುಡುಕಾಡಿ ಹೈರಾಣಾಗಿದ್ದರು.ಉಳಿದ ಇಬ್ಬರು ಅಣ್ಣಂದಿರಲ್ಲಿ ಒಬ್ಬ ಮಾತ್ರ ಅತ್ಯಂತ ಶ್ರಮಜೀವಿ.ಇಬ್ಬರೂ ಕೂಲಿ ಕೆಲಸ ಮಾಡಿ ತುತ್ತಿನ ಚೀಲ ತುಂಬಿಸುತ್ತಿದ್ದರು. ಅನ್ನಕ್ಕಾಗಿ ಹಾತೊರೆಯುವ ಪರಿಸ್ಥಿತಿ ಅದಾಗಿತ್ತು. ಅದಕ್ಕಾಗಿ ಒಮ್ಮೊಮ್ಮೆ ಅಕ್ಕ,ಅಣ್ಣಂದಿರೊಂದಿಗೆ ಜಗಳವಾಡಿದ್ದು ಇಂದಿಗೂ ನೆನಪಿದೆ. ಕೊನೆಯ ಮಗನಾದ ನನ್ನನ್ನು ಓದಿಸಬೇಕೆಂಬುದು ಅಮ್ಮನ ಮಹದಾಸೆ ಅಣ್ಣಂದಿರ ಹಿರಿಯಾಸೆಯಾಗಿತ್ತು.
ನಾನಾದರೋ ಮನೆಯ ದೈನ್ಯೇಸಿ ಸ್ಥಿತಿಯನ್ನು ನೋಡಿ ಮನೆ ಬಿಟ್ಟು ಹೋಗಿ ಏನಾದರೂ ಕೆಲಸ ಮಾಡಿ ಮನೆಗೆ ಆಸರೆಯೊದಗಿಸಬೇಕೆಂದು ಹಾತೊರೆದು ಮನೆ ತೊರೆದು ಬೆಂಗಳೂರಿನತ್ತ ಮುಖ ಮಾಡಿಯೇ ಬಿಟ್ಟಿದ್ದೆ. ಕೈಯಲ್ಲಿ  ಸಂಗ್ರಹಿಸಿಟ್ಟಿದ್ದ ಇಪ್ಪತ್ತು ರೂಪಾಯಿ ಇತ್ತಷ್ಟೇ.ಯಾವ್ಯಾವುದೋ ಬಸ್ ಹತ್ತಿ ನಿರ್ವಾಹಕನ ಕಣ್ ತಪ್ಪಿಸಿ ಟಿಕೇಟು ತೆಗೆಸದೇ ಬೆಂಗಳೂರಿಗೆ ಬಂದಿಳಿದಿದ್ದೆ.ಆಗ ನಾಡಿನ ದೊರೆಯಾಗಿದ್ದವರೇ ನಮ್ಮ ಸಾರೆಕೊಪ್ಪ ಬಂಗಾರಪ್ಪನವರು.ಅವರು ನಮ್ಮ ಪಕ್ಕದ ತಾಲೂಕಿನವರಾಗಿದ್ದರಿಂದಲೂ ನಮ್ಮೂರಲ್ಲಿ ಅವರ ಬಗ್ಗೆ ಅಪಾರ ಜನಪ್ರೀಯತೆ ಇದ್ದುದರಿಂದಲೂ ಅವರಲ್ಲಿಗೆ ಹೋಗಿ ಏನಾದರೂ ಸಹಾಯ ಪಡೆದು ಬೆಂಗಳೂರಲ್ಲಿ ಕೆಲಸ ಮಾಡಬಹುದೆಂದು ಯೋಚಿಸಿ ಸೊರಬದವನೆಂದು ಸುಳ್ಳು ಹೇಳಿ ಮುಖ್ಯಮಂತ್ರಿಗಳ ಗೃಹ ಕಛೇರಿಯನ್ನು ಹರಸಾಹಸ ಮಾಡಿ ಪ್ರವೇಶಿಸಿದ್ದೆ.ಸಾವಿರಾರು ಸಾರ್ವಜನಿಕರು ಅಹವಾಲು ಸಲ್ಲಿಸಲು ಸರತಿಯಲ್ಲಿ ನಿಂತು ಕಾಯುತ್ತಿದ್ದರು.ನಾನೂ ಹಾಗೆಯೇ ಮಾಡಿದೆ. ಮತ್ತಷ್ಟು ಓದು »