ಹಲಾಲ್ ಉದ್ಯಮದ ಒಳಸುಳಿಗಳು
– ರಾಕೇಶ್ ಶೆಟ್ಟಿ
ಹಲಾಲ್ ಅಂದರೆ ಕೋಳಿ ಮತ್ತಿತ್ತರ ಪ್ರಾಣಿಗಳನ್ನು ಕತ್ತರಿಸುವ ಒಂದು ವಿಧಾನ ಅಷ್ಟೇ ಅಲ್ವಾ? ಅದಕ್ಕೇಕೆ ನಿಮ್ಮ ತಕರಾರು…? ಇದು ಹಲವರ ಪ್ರಶ್ನೆ
ನಾವ್ ವೆಜಿಟೆರಿಯನ್ಸ್ ನಮಗೆ ಈ ಹಲಾಲ್ ನಿಂದೇನೂ ಚಿಂತೆ ಇಲ್ಲಪ್ಪ. ಇದು ಒಂದಿಷ್ಟು ಜನರ ವಾದ…
ಹಲಾಲ್ ಅಂದರೆ ಕೇವಲ ಕೋಳಿಯನ್ನು ಕುಯ್ಯುವ ಒಂದು ವಿಧಾನ ಆಗಿದ್ದಿದ್ದರೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಹೀಗೊಂದು ಹತ್ತು ವರ್ಷಗಳ ಹಿಂದೆ ಹಾಗೆಯೇ ಇದ್ದಾಗ ಯಾರೂ ತಲೆಕೆಡಿಸಿಕೊಳ್ಳುತ್ತಲೂ ಇರಲಿಲ್ಲ. ಈಗಲೂ ಅವರ ಅಂಗಡಿಯಲ್ಲಿ ಹೋಗಿ ತೆಗೆದುಕೊಂಡು ಬರುವವರಿಗೇನು ಕಡಿಮೆಯೇ? ಸಮಸ್ಯೆ ಮತ್ತು ವಿರೋಧ ಇರೋದು ಅವರ “Religion ಆಚರಣೆ” ಬಗ್ಗೆ ಅಲ್ಲ. ಆಚರಣೆ ನೆಪದಲ್ಲಿ “ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವ, ತಮ್ಮವರಿಗೆ ಮಾತ್ರ ಉದ್ಯೋಗ ದಕ್ಕಿಸಿ ಇತರರ (ಮುಖ್ಯವಾಗಿ ಹಿಂದುಳಿದ,ದಲಿತ ವರ್ಗ) ಉದ್ಯೋಗವನ್ನು ಕಸಿದುಕೊಳ್ಳುವ Long Term ನೀತಿಯ” ಬಗ್ಗೆ.
ಮೊದಲೆಲ್ಲಾ ಅವರ ಅಂಗಡಿಗಳಲ್ಲಿ ಮಾತ್ರ ಆ ಆಚರಣೆ ಆಗ್ತಾ ಇತ್ತು. ನಂತರ ಮಾಂಸದ ಹೋಟೆಲುಗಳ ಬೋರ್ಡುಗಳಲ್ಲಿ ‘ಹಲಾಲ್ ಚಿಕನ್/ಮಟನ್’ ದೊರೆಯುತ್ತದೆ ಎನ್ನುವಲ್ಲಿಗೆ ಬಂತು. ಆ ನಂತರ ದೊಡ್ಡ ಮಟ್ಟದಲ್ಲಿ ಹಲಾಲ್ ಸರ್ಟಿಫಿಕೇಟು (ವರ್ಷ ವರ್ಷಕ್ಕೆ Renew ಮಾಡುವ ಕರಾರಿನೊಂದಿಗೆ) ಉದ್ಯಮ ಆರಂಭವಾಗಿ ಇವತ್ತಿಗೆ ಆ ಸರ್ಟಿಫಿಕೇಟಿನ ಕಬಂಧ ಬಾಹು ಗೋಧಿ, ಮೈದಾ, ಬಿಸ್ಕೆಟ್ಸ್, ಚಾಕೊಲೇಟ್ಸ್, ಸೌಂದರ್ಯವರ್ಧಕ ವಸ್ತುಗಳು, ಹಾಸ್ಪಿಟಲ್,ಟೂರಿಸಂ,ಲಾಜಿಸ್ಟಿಕ್ಸ್, ಏರ್ಲೈನ್ಸ್ ಕ್ಯಾಟರಿಂಗ್, ಕ್ಯಾಟರಿಂಗ್,ಫಾರ್ಮಾಸೆಟಿಕಲ್ಸ್ ಹೀಗೆ ಪಟ್ಟಿ ಬೆಳೆದು ನಿಂತಿದೆ. ಕಂಪೆನಿಗಳು ಪ್ರತಿವರ್ಷ ಹಲಾಲ್ ಸರ್ಟಿಫಿಕೇಟನ್ನು ಪಡೆಯಲು ಇಂತಿಷ್ಟು ಹಣ ಕಟ್ಟಬೇಕಾಗುತ್ತದೆ,ಅದರ ಮೇಲೆ ಯಾವೆಲ್ಲ ವಸ್ತುಗಳಿಗೆ ಹಲಾಲ್ ಸೀಲ್ ಬೇಕೋ ಅದಕ್ಕೆ ಪ್ರತ್ಯೇಕ ಅಂತೆಲ್ಲ ಇದೆ. ಇದು ಒತ್ತಟ್ಟಿಗಿರಲಿ. ಈ ಸರ್ಟಿಫಿಕೇಟ್ ಯಾಕೆ ಅಪಾಯಕಾರಿ ಎನ್ನುವ ಉದಾಹರಣೆ ನೋಡೋಣ