ವಿಷಯದ ವಿವರಗಳಿಗೆ ದಾಟಿರಿ

Posts tagged ‘delhi rape case’

1
ಜನ

ಅಪರಾಧ ಮತ್ತು ಸ್ಥಳದ ಮಹಿಮೆ.

ಡಾ ಅಶೋಕ್ ಕೆ ಆರ್

ಆ ದೌರ್ಭಾಗ್ಯೆಯsoni-sori ಹೆಸರು ಸೋನಿ ಸೋರಿ. ಛತ್ತೀಸಗಢದ ಆದಿವಾಸಿ ಹಳ್ಳಿಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆದಿವಾಸಿ ಮಹಿಳೆ. ಪಾಠ ಹೇಳಿಕೊಡುವುದಕ್ಕಷ್ಟೇ ಮೀಸಲಾಗದೆ ಆದಿವಾಸಿ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾಕೆ. ಆಕೆಯ ಬಂಧನವಾಗುತ್ತದೆ. ನಕ್ಸಲರಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆಂಬ ಆರೋಪ. ಛತ್ತೀಸಗಢದ ಆದಿವಾಸಿ, ಮೇಲಾಗಿ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದವಳು ಎಂದ ಮೇಲೆ ನಕ್ಸಲಳೇ ಇರಬಹುದೆಂದು ಸರಕಾರದ ಅಂದಾಜು! ಕ್ರೂರ ವ್ಯಂಗ್ಯವೆಂದರೆ ಆಕೆಯ ತಂದೆಯ ಮೇಲೆ ಪೋಲೀಸ್ ಮಾಹಿತಿದಾರನೆಂಬ ಶಂಕೆಯಿಂದ ನಕ್ಸಲರು ಗುಂಡು ಹಾರಿಸಿದ್ದರು! ಕಾಲಿಗೆ ತಗುಲಿದ ಗುಂಡು ಶಾಶ್ವತ ಅಂಗವಿಕಲತೆಯನ್ನುಂಟುಮಾಡಿದೆ. ಇಷ್ಟೇ ಆಗಿದ್ದರೆ ನಕ್ಸಲರ ಹತ್ತಿಕ್ಕುವನೆಪದಲ್ಲಿ ನಡೆದ ಮತ್ತೊಂದು ಬಂಧನ ಎಂದು ‘ಮೌನ’ವಹಿಸಬಹುದಿತ್ತೇನೋ? ಆಕೆಗೆ ಪೋಲೀಸ್ ಬಂಧನದಲ್ಲಿ ನೀಡಿದ ಹಿಂಸೆ ‘ನಾಗರೀಕ’ ಸಮಾಜದ ನಿಲುಕಿಗೆ ದಕ್ಕದ್ದು. ಬೆತ್ತಲುಗೊಳಿಸಿ ಅತ್ಯಾಚಾರವೆಸಗಿ, ಅದೂ ಸಾಲದೆಂಬಂತೆ ಜನನಾಂಗ, ಗುದದ್ವಾರದಲ್ಲಿ ಕಲ್ಲು ತೂರಿದ್ದರು ದುರುಳ ಪೋಲೀಸರು. ಸುಪ್ರೀಂಕೋರ್ಟ್ ನಿರ್ದೇಶನದಂತೆ ನಡೆದ ವೈದ್ಯಕೀಯ ಪರೀಕ್ಷೆಯಲ್ಲೂ ಇದು ದೃಡಪಟ್ಟಿತ್ತು. ಸೋನಿ ಸೋರಿ ನೀಡಿರುವ ಹೇಳಿಕೆಯಂತೆ ಆ ಹಿಂಸಾಚಾರ ನಡೆದ ಸಮಯದಲ್ಲಿ ಅಲ್ಲಿನ ಎಸ್ ಪಿ ಅಂಕಿತ್ ಗರ್ಗ್ ಕೂಡ ಹಾಜರಿದ್ದ. ನಂತರದಲ್ಲಿ ಅಂಕಿತ್ ಗರ್ಗನಿಗೆ ರಾಷ್ಟ್ರಪತಿ ಗೌರವವೂ ದೊರೆತಿದೆ! ಈ ಘಟನೆಯಾಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಲಿಲ್ಲ? ಜನಮಾನಸದ ಮನವನ್ನು ಕಲಕಿ ಪ್ರತಿಭಟನೆಗೆ ಇಳಿಯುವಂತೆ ಪ್ರೇರೇಪಿಸಲಿಲ್ಲ? ಮತ್ತಷ್ಟು ಓದು »