ವಿಷಯದ ವಿವರಗಳಿಗೆ ದಾಟಿರಿ

Posts tagged ‘Inspiring India’

19
ಮಾರ್ಚ್

ಕ್ಯಾರೆಟ್ ಅಂದ್ರೆ ಕ್ಯಾ ಅನ್ನುತ್ತಿದ್ದವರನ್ನು, ವಾಹ್ ಎನ್ನಿಸಿದ ವಲ್ಲಭಬಾಯಿ

– ರಾಘವೇಂದ್ರ ಎಮ್‌ ಸುಬ್ರಹ್ಮಣ್ಯ

D1XMuOVWkAAfYQ1ನಿಮಗ್ಗೊತ್ತೇ! 1940ರ ಆಸುಪಾಸಿನಲ್ಲಿ ಕ್ಯಾರೆಟ್ ಅನ್ನೋದನ್ನ ಮನುಷ್ಯರೂ ತಿನ್ನಬಹುದು ಅನ್ನೋ ವಿಷಯ ಗುಜರಾತಿನ ಜನರಿಗೆ ತಿಳಿದೇ ಇರಲಿಲ್ಲ. ಆಗೆಲ್ಲ ಜಮೀನಿನಲ್ಲಿ ಬೆಳೆದ ಕ್ಯಾರೆಟ್ ಅನ್ನು ಬರೀ ದನ-ಕರುಗಳಿಗೆ ತಿನ್ನಲಷ್ಟೇ ಕೊಡುತ್ತಿದ್ದರು. ಜಮೀನಿನಲ್ಲಿ ತನ್ನಷ್ಟಕ್ಕೇ ತಾನೇ ಬೆಳೆಯುತ್ತಿದ್ದ ಕ್ಯಾರೆಟ್ ಅನ್ನು, ಹುಲ್ಲು, ಕಲಗಚ್ಚಿನ ನೀರಿನೊಂದಿಗೆ ಸೇರಿಸಿ ಜಾನುವಾರುಗಳಿಗೆ ಆಹಾರವಾಗಿ ಕೊಡುತ್ತಿದ್ದರು.

ಗುಜರಾತಿನ ಜುನಾಗಡ್ ಜಿಲ್ಲೆಯ ಖಾಮ್ಡ್ರೋಲ್ ಎಂಬ ಗ್ರಾಮದ ವಲ್ಲಭಭಾಯ್ ಎಂಬ ಹುಡುಗ, ತನ್ನಮನೆಯಲ್ಲೂ ಹೀಗೇ ಕ್ಯಾರೆಟ್ ಅನ್ನು ಜಾನುವಾರಿಗೆ ತಿನ್ನಿಸುವಾಗ, ಒಂದು ದಿನ ಆಕಸ್ಮಿಕವಾಗಿಯೋ ಅಥವಾ ವಯೋಸಹಜ ಕುತೂಹಲದಿಂದಲೋ ಒಂಚೂರು ಕ್ಯಾರೆಟ್ ಅನ್ನು ತಾನೇ ತಿಂದ. ಸಿಹಿಸಿಹಿಯಾಗಿದ್ದ ಆ ಕ್ಯಾರೆಟ್ ಆತನ ಕಣ್ಣರಳಿಸಿತು. ಅಪ್ಪನಿಗೆ “ನಾವು ನಮ್ಮ ಹೊಲದಲ್ಲಿ ಬರೀ ಬೇಳೆ, ಶೇಂಗಾ, ಜೋಳ, ನವಣೆ ಮತ್ತು ರಜ್ಕೋ (ಮೇವಿಗೆ ಬಳಸುವ ಹುಲ್ಲು) ಮಾತ್ರ ಬೆಳೀತಾ ಇದ್ದೀವಿ. ಈ ಇದಿದೆಯಲ್ಲಾ ಕೆಂಪನೆ ಈ ಉದ್ದನೆಯದ್ದು, ಇದನ್ನ ಇನ್ನೂ ಹೆಚ್ಚೆಚ್ಚು ಬೆಳೆದು ಜನರಿಗೆ ಮಾರಬೇಕಪ್ಪಾ. ಚೆನ್ನಾಗಿದೆ ಇದು” ಅನ್ನೋ ಸಲಹೆ ಕೊಟ್ಟದ್ದಕ್ಕೆ, ಅಪ್ಪನಿಂದ ತಲೆಮೇಲೊಂದು ಪಟಕ್ಕನೆ ಪೆಟ್ಟು ಬಿತ್ತಷ್ಟೇ. ಈತನ ಮಾತನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದ ಅಪ್ಪನ ಲೇವಡಿಯನ್ನ ಇವನೂ ಅಷ್ಟೇನೂ ಸೀರಿಯಸ್ಸಾಗಿ ತೆಗೆದುಕೊಳ್ಳದೆ, ಮರುದಿನ ಬೆಳಿಗ್ಗೆ ತಾನೇ ಕ್ಯಾರೆಟ್ಟುಗಳನ್ನ ಅಗೆದು, ತೊಳೆದು ಎರಡು ಚೀಲದಲ್ಲಿ ತುಂಬಿ ಮಾರುಕಟ್ಟೆಗೆ ತೆಗೆದುಕೊಂಡು ಹೋದ. ಇದು 1943ರ ಕಥೆ. ಆಗಿನ್ನೂ ಅವನಿಗೆ 13 ವರ್ಷ ವಯಸ್ಸು. ಐದನೇ ಕ್ಲಾಸಿಗೇ ಶಾಲೆಗೆ ಹೋಗುವುದನ್ನ ನಿಲ್ಲಿಸಿದ್ದ ವಲ್ಲಭನಿಗೆ, ತಮ್ಮ 5 ಎಕರೆ ಜಮೀನಿನಲ್ಲಿ ಅಪ್ಪನಿಗೆ, ಮನೆಯಲ್ಲಿ ಅಮ್ಮನಿಗೆ ಸಹಾಯಮಾಡುವುದೇ ಕೆಲಸವಾಗಿತ್ತು. ಕ್ಯಾರೆಟ್ಟಲ್ಲದಿದ್ದರೆ ರಜ್ಕೋ ಮೂಟೆ ಹೊತ್ತು ಮಾರಲು ಹೋಗುತ್ತಿದ್ದವ, ಇವತ್ತು ಕ್ಯಾರೆಟ್ ಮೂಟೆ ಹಿಡಿದುಹೊರಟ. ಮತ್ತಷ್ಟು ಓದು »