ವಿಷಯದ ವಿವರಗಳಿಗೆ ದಾಟಿರಿ

Posts from the ‘ಕಥೆ’ Category

18
ಜನ

ಹಸಿರ ಪಯಣ …

– ಸುಜಿತ್ ಕುಮಾರ್

maurice-de-vlaminck-la-moisson-1945ಶಾಂತ ಸಂಜೆಯ ತಿಳಿತಂಪಿನ ಹಿತಕ್ಕೆ ಭಂಗ ತರುವಂತೆ ಬಿಸಿಯಾದ ಗಾಳಿ ಒಮ್ಮೆಲೇ ಬೀಸತೊಡಗಿತ್ತು. ಗಾಳಿಯ ಬೀಸುವಿಕೆಯ ದಿಕ್ಕನ್ನು ಪರಿಗಣಿಸದೆಯೆ ಹಕ್ಕಿಗಳ ಗುಂಪು ತಮ್ಮ ತಮ್ಮ ಗೂಡುಗಳೆಡೆಗೆ ಮುಖಮಾಡಿ ಹಾರತೊಡಗಿದ್ದವು. ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್, ಅದೇ ಬಣ್ಣದ ಟಿ ಶರ್ಟ್ ಹಾಗು ಅತಿ ದುಬಾರಿಯಾದೊಂದು ಸ್ಪೋರ್ಟ್ಸ್ ಶೋವನ್ನು ಧರಿಸಿ ಮೋಹನ ಜಾಗಿಂಗ್ ಗೆ ಇಳಿದಿದ್ದ. ವಾಹನಗಳಿಗೆ ಪಾರ್ಕ್ ಮಾಡಲೂ ಸರಿಯಾದ ಸ್ಥಳ ಸಿಗದಿರುವ ಸಿಟಿಯಲ್ಲಿ ಆಟೋಟ, ವ್ಯಾಯಾಮಗಳಿಗೆ ಜಾಗವನ್ನು ಕೊಡುವವರ್ಯಾರು? ವಾಹನಗಳೊಟ್ಟಿಗೆಯೇ ರಸ್ತೆಯ ಪಾದಚಾರಿ ಮಾರ್ಗದ ಮೇಲೆಯೇ ಈತನ ಪ್ರತಿದಿನದ ಓಟ. ಹೃದಯ ಸಿಡಿದು ಹೊರಬರುವವರೆಗೂ ಓಡುವುದ ನಿಲ್ಲಿಸಲಾರೆ ಎಂಬುವಂತಿರುತ್ತದೆ ಈತನ ಓಟದ ಧಾಟಿ. ಸುಮಾರು ಮೂರ್ನಾಲ್ಕು ಕಿಲೋಮೀಟರ್ನಷ್ಟು ಓಡಿದ ನಂತರ ಕಾಫಿ ಶಾಪೊಂದರ ಮುಂದೆ ಕೂತು ಕೊಂಚ ದಣಿವಾರಿಸಿಕೊಳ್ಳುತ್ತಾನೆ. ಅಲ್ಲೂ ತನ್ನ ಮೊಬೈಲನ್ನು ಹೊರಗೆಳೆದು ಆಫೀಸಿನ ಇಮೇಲ್ ಗಳನ್ನು ನೋಡತೊಡಗುತ್ತಾನೆ. ಆಗಷ್ಟೇ ಡವಡವ ಬಡಿದು ಶಾಂತವಾಗಿದ್ದ ಹೃದಯ, ಕ್ಲೈಂಟ್ ಒಬ್ಬನ ಇಮೇಲ್ ಅನ್ನು ಕಂಡು ಪುನಃ ಬಡಿಯಹತ್ತಿತು. ಇನ್ನೊಂದು ಸುತ್ತು ಓಡಲು ಬಾಕಿ ಇದ್ದರೂ ತನ್ನ ರೂಮಿನೆಡೆ ದಾಪುಗಾಲು ಹಾಕುತ್ತಾನೆ ಮೋಹನ. ರೂಮಿಗೆ ಬಂದವನೆ ಬೆವರಿನ ದಸೆಯಿಂದ ಅಂಟು-ಅಂಟಾಗಿದ್ದ ಬಟ್ಟೆಯನ್ನೂ ಲೆಕ್ಕಿಸದೆ ತನ್ನ ಆಫೀಸಿನ ಲ್ಯಾಪ್ಟಾಪ್ ಅನ್ನು ಹೊರಗೆಳೆದು ಕೆಲಸದಲ್ಲಿ ನಿರತನಾಗುತ್ತಾನೆ. ನೆಟ್ಟ ದೃಷ್ಟಿಯನ್ನು ಒಂತಿಷ್ಟೂ ಕದಲಿಸದೆ, ಕೀಲಿಮಣೆಗಳ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಟಕಟಕ ಕುಟ್ಟಿದ ನಂತರ ಗಡಿಯಾರವನ್ನು ನೋಡುತ್ತಾನೆ, ಸಮಯ ಅದಾಗಲೇ ರಾತ್ರಿ ಹನ್ನೊಂದು! ಕೂಡಲೇ ಎದ್ದು ಪಕ್ಕದ ಹೋಟೆಲಿನಿಂದ ಊಟವೊಂದಕ್ಕೆ ಆರ್ಡರ್ ಕೊಟ್ಟು, ಸ್ನಾನಾದಿಗಳನ್ನು ಮುಗಿಸಿ ಹೊರಬಂದು ಊಟವನ್ನು ಮುಗಿಸುವಷ್ಟರಲ್ಲಿ ಮಧ್ಯರಾತ್ರಿ 12! ಒಂತಿಷ್ಟು ಸುದ್ದಿ ಸಮಾಚಾರಗಳನ್ನು ನೋಡಲು ಟಿವಿಯನ್ನು ಆನ್ ಮಾಡಿದ ಕೂಡಲೇ ಕಣ್ಣುಗಳ ರೆಪ್ಪೆಗಳು ಒಂದನ್ನೊಂದು ತಬ್ಬಿಕೊಳ್ಳತೊಡಗುತ್ತವೆ. ಅದೆಷ್ಟೋ ಬಾರಿ ಹೀಗೆಯೇ ಸೋಫಾದ ಮೇಲೆಯೇ ಬೆಳಗಿನವರೆಗೂ ಕೂತೇ ನಿದ್ರಿಸಿರುವುದುಂಟು! ಬೆಳಗೆದ್ದು ಮತ್ತದೇ ಓಟದ ಜೀವನ. ವಾರ, ವಾರಾಂತ್ಯ ಎಂಬ ಯಾವುದೇ ವ್ಯತ್ಯಾಸಗಳಿಲ್ಲದೆ 24*7 ಕಾಲದ ಕೆಲಸ. ಮೊದ ಮೊದಲು ಕಿರಿಕಿರಿಗುಡುತ್ತಿದ್ದ ಮೋಹನ ಕಾಲ ಕಳೆದಂತೆ ಇದೆ ಜೀವನಕ್ಕೆ ಒಗ್ಗಿಕೊಂಡಿದ್ದಾನೆ. ಅದೆಷ್ಟರ ಮಟ್ಟಿಗೆಂದರೆ ಆಗೊಮ್ಮೆ ಈಗೊಮ್ಮೆ ಸಿಗುವ ರಜೆಯ ಸಮಯವನ್ನೂ ಮನೆಯಲ್ಲಿ ಕಳೆಯಲಾಗದೆ ಆಫೀಸಿಗೆ ಬಂದು ಒಬ್ಬನೇ ಕೆಲಸ ಮಾಡುವುದುಂಟು! ಮತ್ತಷ್ಟು ಓದು »

25
ಆಕ್ಟೋ

ಆಲಾಪ..

– ಸುಜಿತ್ ಕುಮಾರ್

young-couple-breaking-up-girl-450w-239389240‘ಎಕ್ಸ್ ಕ್ಯೂಸ್ ಮೀ .. ನೀವು ರಿಸರ್ವ್ಡ್ ಸೀಟಲ್ಲಿ ಕೂತಿದ್ದೀರಾ ಅನ್ಸುತ್ತೆ?’

‘ಇಸ್ ಇಟ್?.. ಸ್ವಲ್ಪ ತಾಳಿ, ಒಮ್ಮೆ ಚೆಕ್ ಮಾಡ್ಕೊಬಿಡ್ತೀನಿ’ ಎನುತ ಆಕೆ ಮೊಬೈಲ್ ಅನ್ನು ಹೊರಗೆಳೆದಳು.

‘ಓ ಗಾಡ್, ಮೊಬೈಲ್ ಸ್ವಿಚ್ ಆಫ್ ಬರ್ತಾ ಇದೆ. ಏನ್ ಹುಡುಗ್ರಪ್ಪ ಇವ್ರು.. ಎನಿವೇಸ್ ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ’ ಎಂದು ಕೂಡಲೇ ಆಕೆ ಎದ್ದು ಕಾಫಿ ಡೇಯಿಂದ ಹೊರನಡೆದಳು.

ಈತನಿಗೆ ಅಷ್ಟರಲ್ಲಾಗಲೇ ತನ್ನ ಅನುಮಾನ ನಿಜವೆನಿಸಿದ್ದರಿಂದ ಒಂದರೆಕ್ಷಣ ಮಾತು ಬಾರದಂತಾಗುತ್ತದೆ. ತನ್ನ ಮೊಬೈಲ್ ಅನ್ನು ಹೊರಗೆಳೆದು ಸ್ವಿಚ್ ಆನ್ ಮಾಡಿದ ಕೂಡಲೇ ಆಕೆಯ ನಂಬರ್ ಎಂದು ಕಳಿಸಲ್ಪಟ್ಟಿದ್ದ ನಂಬರ್ನಿಂದ ಎರಡು ಮಿಸ್ಡ್ ಕಾಲ್ ಗಳು ಬಂದಿರುತ್ತವೆ. ಇದೇಗೆ ಸಾಧ್ಯ!? ಅದೆಷ್ಟೇ ಯೋಚಿಸಿದರೂ ಉತ್ತರ ಹೊಳೆಯಲಿಲ್ಲ. ಕೂಡಲೇ ಆಕೆಯ ಅಪ್ಪನಿಗೆ ಫೋನಾಯಿಸಿ ನಾಲ್ಕು ಬೈದುಬಿಡಬೇಕೆಂಬ ಮನಸ್ಸಾದರೂ ಏಕೋ ಸುಮ್ಮನಾಗುತ್ತಾನೆ. ‘ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ’ ಎಂದ ಆಕೆಯ ಮಾತುಗಳಲ್ಲಿ ಅದೇನೋ ಒಂದು ಬಗೆಯ ಮುಗ್ದತೆ ಆತನನ್ನು ಕಾಡಿತು. ಅಂತಃಕರಣ ರೋಧಿಸಿತು. ತಾನು ಫೋಟೋದಲ್ಲಿ ನೋಡಿದ ಚೆಲುವೆ ನಿಜವಾಗಿಯೂ ಇವಳೇನಾ ಅಂತಂದುಕೊಳ್ಳುತ್ತಾ ಆಕೆಯ ಫೋಟೋಗಳನ್ನೇ ಒಂದೊಂದಾಗೆ ನೋಡತೊಡಗಿದ. ಮತ್ತಷ್ಟು ಓದು »

30
ಜುಲೈ

ಬಾಡೂಟವೊಂದರ ಐತಿಹ್ಯ…!

 – ಸುಜಿತ್ ಕುಮಾರ್

ಹೊತ್ತು ಮುಳುಗಿ ಅದಾಗಲೇ ಕಪ್ಪು ಆಗಸದಲ್ಲಿ ತುಂತುರು ಚುಕ್ಕಿಗಳು ಮಿನುಗತೊಡಗಿವೆ. ತನ್ನೊಟ್ಟಿಗಿದ್ದ ನಾಲ್ವರು ಸೈನಿಕರು ತಮ್ಮ ತಮ್ಮ ಖಡ್ಗಗಳಿಂದ ಖಣಖಣ ಶಬ್ದವನ್ನು ಹೊಮ್ಮಿಸುತ್ತಾ ಯುದ್ಧಕ್ಕೆ ತಯಾರಿ ನೆಡೆಸುತ್ತಿದ್ದಾರೆ. ಯುದ್ಧದ ಸ್ಥಳ ತಾನಿರುವ ಜಾಗದಿಂದ ಸುಮಾರು ಐವತ್ತು ಕ್ರೋಶ ದೂರದ್ಲಲಿದೆ. ಆನೆ, ಕುದುರೆ, ಒಂಟೆಗಳ ಜೊತೆಗೆ ಎರಡೂ ಕಡೆಯ ಲಕ್ಷಾಂತರ ಸೈನಿಕರ ರೋಷ, ಭಯ, ಧೈರ್ಯ, ಚೀರುವಿಕೆ, ರೋಧನೆ, ರಕ್ತ, ಬಳಲಿಕೆ, ದುಃಖ, ಸಾವು.. ಅಬ್ಬಬ್ಬಾ ಎಷ್ಟೆಲ್ಲಾ ಭಾವಸ್ಥಿತಿಗಳುಗಳು! ನಾನೊಬ್ಬ ಅಡುಗೆಯವ. ಡೇರೆಯಲ್ಲಿರುವ ದಿನಸಿಗಳನ್ನು ಕಾಪಾಡುವ ಸಲುವಾಗಿ ಇರುವ ಈ ನಾಲ್ಕು ಸೈನಿಕರ ರಣೋನ್ಮಾದ ಭಾವಗಳನ್ನು ಕಂಡೇ ಮೈಕೈಗಳೆಲ್ಲ ನಡುಗುತ್ತಿವೆ, ಇನ್ನು ಯುದ್ಧವನ್ನು ಸಾಕ್ಷಾತ್ ಕಣ್ಣುಗಳಿಂದ ನೋಡುವ ಧೈರ್ಯವಿದೆಯೇ? ಯಾ ಅಲ್ಲಾ… ನನ್ನನು ಜೀವಮಾನವಿಡೀ ಒಬ್ಬ ಅಡುಗೆಯುವನಾಗಿಯೇ ಇರಿಸು. ಯುದ್ಧದಲ್ಲಿ ಸಾಧ್ಯವಾಗದ್ದನ್ನು ನನ್ನೀ ಪಾಕಜ್ಞಾನದಲ್ಲಿ ಗಳಿಸಿಕೊಳ್ಳುವೆ. ಸಾಧಿಸುವೆ. ಮರುಭೂಮಿಯ ನೆಲಕ್ಕೆ ನೀರನ್ನು ಸುರಿದಂತೆ ಕಣ್ಮುಚ್ಚಿ ಬಿಡುವಷ್ಟರಲ್ಲಿ ತಟ್ಟೆಯನ್ನೇ ಖಾಲಿ ಮಾಡುವ ದೇಹಗಳಿಗೆ ರುಚಿಕಟ್ಟಾದ ಊಟವನ್ನು ಮಾಡಿ ತಣಿಸುವುದು ಸಹ ಏನು ಸುಲಭದ ಕೆಲಸವೇ? ಅದೇನೇ ಆಗಲಿ. ನನ್ನ ಅಡುಗೆಯ ಕೈಚಳಕದಿಂದ ಸೈನಿಕರೆಲ್ಲರ ವಿಶ್ವಾಸವನ್ನು ಗಳಿಸಕೊಳ್ಳಬೇಕು. ಮುಂದೊಂದು ದಿನ ರಾಜರಮನೆಯ ಮುಖ್ಯ ಅಡುಗೆಯ ಭಟ್ಟನಾಗಿ ನಾಲ್ಕಾರು ಜನರಿಂದ ಸಲಾಂಗಳನ್ನು ಗಿಟ್ಟಿಸಿಕೊಳ್ಳಬೇಕು ಎನ್ನುತ್ತಿರುವಾಗಲೇ ಒಬ್ಬ ಸೈನಿಕ ಏದುಸಿರು ಬಿಡುತ್ತ ನಾನಿರುವಲ್ಲಿಗೆ ಓಡಿ ಬಂದು ‘ರಣರಂಗದಲ್ಲಿ ಯುದ್ಧ ತೀವ್ರಗೊಂಡಿದ್ದು ಅದು ಬೇಗನೆ ಮುಗಿಯುವ ಹಾಗೆ ಕಾಣುತ್ತಿಲ್ಲವಂತೆ. ನಾಳೆಯ ಅಪರಾಹ್ನದ ಹೊತ್ತಿಗೆ ಗಾಯಗೊಂಡ ಹತ್ತಿಪ್ಪತ್ತು ಸೈನಿಕರು ನಮ್ಮ ಡೇರೆಗೆ ವಿಶ್ರಾಂತಿಗೆ ಬರಲಿದ್ದಾರಂತೆ.ಅತಿ ರುಚಿಕಟ್ಟಾದ ಮಾಂಸದ ಊಟವನ್ನು ಮಾಡಿ ಬಡಿಸಿ ಅವರ ಆರೋಗ್ಯವನ್ನು  ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಜ್ಞೆ ಸ್ವತಃ ಶೆಹನ್ ಶಾ ರಿಂದ ಬಂದಿದೆ..’ ಪಾರಿವಾಳದ ಕಾಲಿಗೆ ಕಟ್ಟಿದ್ದ ಬಟ್ಟೆಯ ಮೇಲೆ ಬರೆದಿದ್ದ ಅಕ್ಷರಗಳನ್ನು ಓದುತ್ತಾ ನನಗೆ ಕೇಳುವಂತೆ ಹೇಳಿದನಾತ.

ಶೆಹನ್ ಶಾರ ಹೆಸರು ಕೇಳಿಯೇ ಅರ್ಧ ಅಧೀರನಾದ ನಾನು ಮುಂದೇನು ಮಾಡಬೇಕೆಂದು ತೋಚಲಿಲ್ಲ. ಗೋಧಾಮಿನಲ್ಲಿ ಹೇಳಿಕೊಳ್ಳುವಂತಹ ವಿಶಿಷ್ಟ ಪದಾರ್ಥಗಳೇನೂ ಇರಲಿಲ್ಲ. ದೇಶದ ಉತ್ತರ ಪ್ರಾಂತ್ಯದಿಂದ ತರಿಸಿರುವ, ರಾಜಮನೆಯಲ್ಲಿ ಮಾಡುವ ವಿಶಿಷ್ಟವಾದ ಅಕ್ಕಿಯೇನೋ ಇದೆ. ಜೊತೆಗೆ ಒಂತಿಷ್ಟು ಈರುಳ್ಳಿ, ಶುಂಠಿ, ಕೆಂಪುಮೆಣಸು, ತುಪ್ಪ, ಸಂಬಾರ, ಹಸಿರುಮೆಣಸು, ಬೆಳ್ಳುಳ್ಳಿ, ಚಕ್ಕೆ, ಲವಂಗಗಳಿಂದ ಹಾಗು ಇತರೆ ಮಸಾಲ ಪದಾರ್ಥಗಳಿಂದ  ಕೂಡಿದ  ಒಂದೆರೆಡು ಗಂಟುಗಳಿವೆ. ತುಸು ಹೊತ್ತು ಸುಮ್ಮನಾದ ನಾನು ನನ್ನೊಳಗೆ ಜರುಗುತ್ತಿದ್ದ ಗೊಂದಲದ ಅಲೆಗಳನ್ನು ಮುಖದ ಮೇಲೆ ವ್ಯಕ್ತಪಡಿಸಲಾಗದೆ ಕೂತೆ. ಸೈನಿಕ ಅತ್ತ ಹೋದಮೇಲೆ ಮತ್ತದೇ ಚಿಂತೆ ಕಾಡತೊಡಗಿತು. ಹಸಿರು ಬಾಳೆಎಲೆಯ ಮೇಲೆ ಅಚ್ಚಬಿಳಿಯ ಹಬೆಯಾರುವ  ಬಿಸಿಬಿಸಿಯಾದ  ಅನ್ನದ ರಾಶಿಯೊಂದಿದ್ದರೆ ಒಂದಿನಿತು ಉಪ್ಪಿನ ಕಾಯಿಯೂ ಮುಷ್ಟಾನ್ನ ಭೋಜನದ ಸವಿಯನ್ನು ಒದಗೀಸಿತು. ಜೊತೆಗೆ ಮಡಕೆಯಲ್ಲಿ ತುಂಬಿ ಹಸಿ ಮಣ್ಣಿನಲ್ಲಿ ಹುದುಗಿಸಿರುವ ಮೊಸರೆನೋ ಇದೆ. ಒಂದೆರೆಡು ಸೌಟು ಗಟ್ಟಿ ಮೊಸರು, ಬೆಂಕಿಯ ಕೆಂಡಕ್ಕೆ ಒಡ್ಡಿ ಬಾಡಿಸಿದ ಒಂದು ಸಣ್ಣ ಗಾತ್ರದ ಈರುಳ್ಳಿ, ಒಂದೆರೆಡು ಎಳೆಯ ಹಸಿರುಮೆಣಸಿನ ಕಾಯಿ  ಜೊತೆಗೆ ತುರಿತುರಿಯಾದ ಬಿಸಿಮಾಡಿದ ತುಪ್ಪ… ಇಷ್ಟು ಸಾಕು ಸೈನಿಕರ ನಾಲಿಗೆಯನ್ನು ತಣಿಸಲು. ಮೇಲಾಗಿ ಸೈನಿಕರು ಪೆಟ್ಟು ತಿಂದು ಧಣಿದು ಬಂದವರು. ಹಸಿದು ಬರಬಿದ್ದ ಹೊಟ್ಟೆಗೆ ಏನಾದರೇನು? ಎಂದು ಸಮಾಧಾನ ತಂದುಕೊಳ್ಳಲು ಪ್ರಯತ್ನಿಸಿದರೂ ರಾಜನ ಕಟ್ಟಾಜ್ಞೆಯನ್ನು ಅಷ್ಟು ಹಗುರವಾಗಿ ಪರಿಗಣಿಸಲು ಸಾಧ್ಯವಾಗಲಿಲ್ಲ. ತುಸು ಹೊತ್ತು ಆಕಾಶವನ್ನು ಧಿಟ್ಟಿಸತೊಡಗಿದೆ. ಕೂಡಲೇ ಉಪಾಯವೊಂದು ಹೊಳೆಯಿತು. ಪರಿಣಾಮ ರಾತ್ರಿಯ ಊಟಕ್ಕೆ ಮಾಡುವ ಅಡುಗೆಯಲ್ಲಿ ಆ ಪ್ರಯೋಗವನ್ನು ಮಾಡಬಯಸಿದೆ. ಆದರೆ ಗುರಿ ಗೊತ್ತಿಲ್ಲದ ಕವಲೊಡೆದ ಹಲವು ದಾರಿಗಳ ಕೇಂದ್ರಬಿಂದುವಿನಲ್ಲಿ ನಿಂತಂತಾಯಿತು. ಊಟ ರುಚಿಯಾಗದಿದ್ದರೆ ನಾಲ್ವರು ಸೈನಿಕರನ್ನು ಹೇಗೋ ಸಂಭಾಳಿಸಬಹುದು. ಆದರೆ ಹತ್ತಾರು ಗಜಕಾಯದ ದಾಂಡಿಗರ ಮುನಿಸು ನನ್ನ ಪ್ರ್ರಾಣಕ್ಕೇ ಕುತ್ತು ತರುವುದಂತೂ ಸುಳ್ಳಲ್ಲ!

ಮತ್ತಷ್ಟು ಓದು »

30
ಮೇ

ಎಲೆಕ್ಷನ್ ಪುರಾಣ

– ಎಸ್ ಜಿ ಅಕ್ಷಯ್ ಕುಮಾರ್

“ಅಜ್ಜಿ, ಅಂಗಡಿಗೆ ಯಾರೋ ಪೋಲಿಸರು ಬಂದ” ಹೇಳಿ ಕೂಗಿ ವಿನಾಯಕ ಹಗುರ ಅಂಗಡಿ ಮತ್ತು ಮನೆಯ ಮಧ್ಯವಿದ್ದ ಅರ್ಧ ಗೋಡೆಯ ಹತ್ರ ಬಂದು ಬದಿಗೆ ನಿಂತುಕೊಂಡ. ಆನೊಳ್ಳಿಯಂತಹ ಹಳ್ಳಿಗೆ ಪೋಲಿಸರು ಇಪ್ಪತ್ತು ಕಿಮೀ ದೂರದ ಹೊನ್ನಾವರದಿಂದ ಬರುವಂತಹದ್ದು ಎಂತಾ ಆಗಿದೆ ಹೇಳಿ ತಿಳಕಳುವ ಕುತೂಹಲ ಇದ್ದರೂ ಓದುತ್ತಿದ್ದ ಪುಸ್ತಕ ತುಂಬಾ ಇಂಟರೆಸ್ಟಿಂಗ್ ಆಗಿದ್ರಿಂದ ನಾನು ಅಂಗಳದಲ್ಲಿ ಕುಳಿತಲ್ಲೇ ಮಾತುಕತೆ ಕೇಳಿದರಾಯ್ತು ಅಂತ ಅಲ್ಲೇ ಕೂತಿದ್ದೆ. ಹಿಂದೆ ಅಡುಗೆ ಮನೆಯ ಹತ್ರ ಇದ್ದ ಅಜ್ಜಿ ಅಲ್ಲಿಂದಲೇ, ಮತ್ತಷ್ಟು ಓದು »

10
ಫೆಬ್ರ

ನಂಬಿಕೆ

– ಪ್ರಶಾಂತ್ ಭಟ್

‘ಇದು ಹೀಗಾಗುತ್ತದೆ ಅಂತ ನನಗೆ ಗೊತ್ತಿತ್ತು’ ಪಕ್ಕದ ಸೀಟಿನವನ‌ ಮಾತು ಕೇಳಿ ಮೊಬೈಲಿಂದ ತಲೆ ಎತ್ತಿ ನೋಡಿದಾಗ ಬಸ್ಸು ನಿಂತದ್ದು ಅರಿವಿಗೆ ಬಂತು. ಇವ ಯಾರು ಮಾರಾಯ, ಬಸ್ಸು ಹೊರಟಾಗಿಂದ ತನ್ನೊಳಗೇ ಏನೋ ಗುನುಗುತ್ತಾ ಕೈ ಸನ್ನೆ ಮಾಡ್ತಾ ಕಿರಿಕಿರಿ ಉಂಟುಮಾಡಿದ್ದ. ನಮ್ಮದೇ ಸಾವಿರ ಇರಬೇಕಾದರೆ ಈ ತರಹದ ಆಸಾಮಿ ಸಿಕ್ಕರೆ ಪ್ರಯಾಣವೂ ಪ್ರಯಾಸವೇ! ಅವಳ ಮೆಸೇಜು ಬಂತಾ ಅಂತ ನೋಡುವಾ ಅಂದರೆ ಹಾಳಾದ ನೆಟ್ವರ್ಕ್ ಕೂಡಾ ಇಲ್ಲ. ಅದು ಸರಿ ಈ ಬಸ್ಸು ನಿಂತದ್ದಾದರೂ ಯಾಕೆ? ಓಹ್, ಎದುರೆಲ್ಲ ವಾಹನಗಳ ಸಾಲೇ ಸಾಲು! ಅಲ್ಲದೆ ಈ ಘಾಟಿಯಲ್ಲಿ ಇದೊಂದು ಗೋಳು. ಒಂದು ಗುಡ್ಡ ಕುಸಿದರೆ, ಜೋರು ಮಳೆಗೆ ಮರ ಉರುಳಿಬಿದ್ದರೆ, ನಿದ್ದೆಯ ಮತ್ತಲ್ಲಿ ಯಾವನಾದರು ಟ್ಯಾಂಕರ್ನವ ಮಗುಚಿಕೊಂಡರೆ ಮುಗಿಯಿತು. ಅದರ ನಡುವೆ ಜೀವ ಬಿಟ್ಟು ರಾಂಗ್ ವೇನಲ್ಲಿ ಮುನ್ನುಗ್ಗಿ ಬರುವ ಹುಚ್ಚು ಚಾಲಕರು. ತಾವೂ ಸಿಲುಕಿ ಉಳಿದವರನ್ನೂ ಸಿಕ್ಕಿಸಿ ರಂಪ ರಾದ್ಧಾಂತ. ಓಹ್, ನಂದೂ ಇದೇ ಕತೆಯಲ್ವಾ? ಮತ್ತಷ್ಟು ಓದು »

24
ಮೇ

ಟ್ರಿಗೋನೋಮೆಟ್ರಿ

– ಎಸ್. ಎನ್. ಸೇತುರಾಂ

“ಅನಾಥ ಆಗ್ಹೋಗಿದ್ದೀನಿ, ಅಪ್ಪಾ, ಅಮ್ಮ, ತಂಗಿ ಯಾರೂ ತಲೆ ಹಾಕಲ್ಲ. ನಂದೇ ಹಣೆಬರಹ ಅನ್ನೋ ಹಾಗೆ ಬಿಟ್ಟಿದ್ದಾರೆ. ಬಂದೋರೂ ಅಷ್ಟೇ. ನೋಡ್ತಾರೆ. ಚೆನ್ನಾಗಿ ಮಾತಾಡ್ತಾರೆ. ಹೆಚ್ಚು ಕಮ್ಮಿ ದಿನವೇ ನಿರ್ಧಾರವಾಗಿ ಹೋಗುತ್ತೆ. ಮಿಕ್ಕಿದ್ದಕ್ಕೆ phone ಮಾಡ್ತೀವಿ ಅಂತಂದು ಹೋಗ್ತಾರೆ. ಮತ್ತೆ phone ಇರೋಲ್ಲ.”

ಅಳ್ತಿದ್ದ ಮಾಧವ, ಮಗಳಿಗೆ ಮೂವತ್ತಾಗಿದೆ, B.E. ಓದಿದ್ದಾಳೆ, ಎಮ್ಮೆಸ್ಸು ಈಗ MBA ಮಾಡ್ತಿದ್ದಾಳೆ. ಮದುವೆಯಾಗಬೇಕು!

“70 ಸಾವಿರ ಬರ್ತಿದೆ ತಿಂಗಳಿಗೆ, ಅವಳ್ದೇ 25 ಲಕ್ಷ ಇಟ್ಟಿದ್ದೀನಿ. ಗಂಡು ಹೂಂ ಅಂದ್ರೆ.. ಎರಡೇ ದಿನದ notice, ಅವ್ರು ಹೇಳಿದ ಛತ್ರದಲ್ಲಿ ಮದುವೆ ಮಾಡ್ತೀನಿ. ನೋಡು ಗುರು.. please” ಅಂಗಲಾಚ್ತಿದ್ದ.

ನಾನೇನು ಮಾಡಬಹುದಿತ್ತು. ಕೂತು ಕೇಳಬಹುದು ಅಷ್ಟೇ. ತಲೆ ಆಡಿಸ್ದೆ.

“ಬದುಕಿನಲ್ಲಿ ಸೋಲೇ ಕಂಡಿರಲಿಲ್ಲ. ಇದೊಂದು ವಿಷಯದಲ್ಲಿ ಸೋತಿದ್ದೀನಿ. ಆಗ್ತಿಲ್ಲ ನನ್ನ ಕೈನಲ್ಲಿ. ನೀನು ಹೇಳಿದ ಹಾಗೆ ಕೇಳ್ತೀನಿ. ಕೂತ್ಕೋ ಅಂದ್ರೆ ಕೂಡ್ತೀನಿ.. ನಿಲ್ಲು ಅಂದ್ರೆ ನಿಲ್ತೀನಿ.. ಒಂದು ಗಂಡು ಹುಡುಕಿ ಕೊಡೊ. ನಂದು ಮಾತು ಸರಿ ಇಲ್ಲ ಅಂತಾರೆ. ನೀನೇ ಮಾತಾಡು… ಮಗಳ ಹತ್ತಿರ ನೇರ ಮಾತಾಡೋದಿದ್ರೂ ಸರೀನೆ. ನನ್ನ ಮನೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ನಿಂದು. ದಯವಿಟ್ಟು ಏನಾದ್ರೂ ಮಾಡು.”
ಬಿಕ್ಕುತ್ತಿದ್ದ, ಕಣ್ಣಲ್ಲಿ ನೀರು ಧಾರಾಕಾರ ಹರೀತಿತ್ತು. ಒಂದು ಕ್ಷಣ ಅಂತಃಕರಣ ಕಲುಕ್ತು. ನನ್ನ ಕಣ್ಣಲ್ಲು ಮನುಷ್ಯನ ಅಸಹಾಯಕ ಸ್ಥಿತಿಗೆ ಮರುಗಿ ನೀರು ತುಂಬ್ತು. ನಂತರದ ಕ್ಷಣದಲ್ಲಿ ಮನುಷ್ಯನ ಪರಿಸ್ಥಿತಿ ಬಗ್ಗೆ ಅಸಹ್ಯ ಬಂತು.
ಮತ್ತಷ್ಟು ಓದು »

3
ಮೇ

ಪೀರಾಯರು ಬರೆದ ಕಥೆ – ‘ತ್ರಿಕೋನ’ ( ಮುಂದುವರೆದ ಭಾಗ )

– ಮು. ಅ ಶ್ರೀರಂಗ ಬೆಂಗಳೂರು

ರಾಮಾಚಾರ್ಯರು ಸಂಜೆ ಐದು ಗಂಟೆಗೆ ಆಶ್ರಮದ ಶಾಲೆಯಿಂದ ಬಂದು ತಮ್ಮ ಕೊಠಡಿಯಲ್ಲಿ ಕೂತಿದ್ದರು. ಎಂದಿನಂತೆ ಅಡುಗೆಯವನು ಫ್ಲಾಸ್ಕಿನಲ್ಲಿ ಕಾಫಿ ತಂದು ಅವರ ಟೇಬಲ್ ಮೇಲೆ ಇಟ್ಟು ‘ಆಚಾರ್ಯರೇ ರಾತ್ರಿಗೆ ಏನು ಅಡಿಗೆ ಮಾಡಲಿ’ ಎಂದ.

‘ಬೆಳಗ್ಗೆಯ ಸಾರು ಮಿಕ್ಕಿರಬಹುದು. ಯಾವುದಾದರೊಂದು ಪಲ್ಯ ಮಾಡು ಸಾಕು. ಇವತ್ತು ಚಪಾತಿ ಬೇಡ’.

‘ಆಗಲಿ ಸ್ವಾಮಿ’ ಎಂದು ಅವನು ಕೊಠಡಿಯ ಬಾಗಿಲನ್ನು ಮುಂದಕ್ಕೆ ಎಳದು ಕೊಂಡು ಹೋದ. ಮತ್ತಷ್ಟು ಓದು »

3
ಏಪ್ರಿಲ್

ಪೀರಾಯರ ಒಂದು ಕಥಾನಕ (ನೀಳ್ಗತೆ ಭಾಗ-೫)

– ಮು. ಅ ಶ್ರೀರಂಗ ಬೆಂಗಳೂರು

ಪೀರಾಯರು ನಾಲ್ಕೈದು ದಿನಗಳಲ್ಲಿ ತಾವು ಬರೆಯಬೇಕೆಂದುಕೊಂಡಿದ್ದ ಕಥೆಯನ್ನು ಬರೆದು ಮುಗಿಸಿದರು. ಕೊನೆಯ ಸಾಲು ಬರೆದು ಮುಗಿಸಿದಾಗ ಏನೋ ಒಂದು ಭಾರ ತಲೆಯಿಂದ ಇಳಿದ ಹಾಗೆ ಅನಿಸಿತು. ಇದುವರೆಗೆ ಭಾರ ಹೊತ್ತುಕೊಂಡವನಂತೆ ಇದ್ದದ್ದು ಈಗ ನಿರಾಳ ಅನಿಸುತ್ತಿದೆ ಎಂದು ಭಾವಿಸುವುದು ಕೇವಲ ನನ್ನ ಕಲ್ಪನೆಯೇ? ಹೀಗೆಲ್ಲಾ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳಬಾರದೆಂದು ಅನಿಸಿತು. ತಮ್ಮ ಗಂಡ ಮೂರ್ನಾಲಕ್ಕು ದಿನಗಳಿಂದ ಸಂಜೆ ವಾಕಿಂಗೂ ಬಿಟ್ಟು ಮತ್ತೆ ಲಾಪ್ಟಾಪ್ ಹಿಡಿದು ಕುಳಿತಿದ್ದು ಕಂಡು ರಾಯರ ಹೆಂಡತಿ ‘ಏನು ಮತ್ತೆ ಶುರು ಮಾಡಿದಿರಲ್ಲ ನಿಮ್ಮ ಹಳೇ ಚಾಳಿ? ಸಂಜೆ ವಾಕಿಂಗೂ ಬಿಟ್ಟಿದ್ದೀರಿ. ಏಕೆ? ಯಾರ ಜೊತೆಯಾದರೂ ಚಾಟಿಂಗೋ?’ ಮತ್ತಷ್ಟು ಓದು »

22
ಮಾರ್ಚ್

ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ ೪

– ಮು. ಅ. ಶ್ರೀರಂಗ, ಬೆಂಗಳೂರು

ಪೀರಾಯರು ಎದ್ದಾಗ ಎಂಟು ಗಂಟೆಯಾಗಿತ್ತು. ರಾತ್ರಿ ಕೃಷ್ಣಾಚಾರ್ಯ ಮಲಗಿದ್ದ ಹಾಸಿಗೆ ನೀಟಾಗಿ ಸುತ್ತಿ ಇಟ್ಟಿತ್ತು. ರಾಯರು ಮುಖ ತೊಳೆದು ಬಂದು ಅಂದಿನ ಪೇಪರ್ ಹಿಡಿದು ಕೂತರು. ಕಾಫಿ ತಂದ ರಾಯರ ಹೆಂಡತಿ
‘ಕೃಷ್ಣಾಚಾರ್ಯರು ಏಳು ಗಂಟೆಗೆ ಎದ್ದು ಮನೆಗೆ ಹೋದ್ರು.. ತಿಂಡಿ ತಿಂದು ಹೋಗಿ ಎಂದು ನಾನು ಬಲವಂತ ಮಾಡಿದರೂ ಇನ್ನೊಂದು ಸಲ ಬರ್ತೀನಿ’ ಅಂದ್ರು..
‘ನನ್ನನ್ನು ನೀನು ಎಬ್ಬಿಸಬಾರದಿತ್ತೇ?’
‘ಅವರೇ ಬೇಡ, ನಿದ್ದೆ ಮಾಡಲಿ. ನಿನ್ನೆ ರಾತ್ರಿ ನಾವು ಹಳೆ ಸಂಗತಿಗಳನ್ನೆಲ್ಲಾ ಎರಡು ಗಂಟೆ ತನಕ ಮಾತಾಡುತ್ತಾ ಇದ್ವು ಎಂದ್ರು.. ಏನು ಅಂತ ರಾಜ ರಹಸ್ಯನಪ್ಪ ಅದು?’
‘ಏನೂ ಇಲ್ಲ ಕಣೆ. ಹೀಗೆ ಸುಮ್ಮನೆ’.
‘ಆಯ್ತು ನಂಗೆ ಅಡಿಗೆ ಮನೇಲಿ ಕೆಲಸ ಇದೆ ಹೋಗ್ತೀನಿ’ ಮತ್ತಷ್ಟು ಓದು »

1
ಮಾರ್ಚ್

ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ ೩

– ಮು. ಅ. ಶ್ರೀರಂಗ, ಬೆಂಗಳೂರು

ಭಾಗ ೧

ಭಾಗ ೨

7156f0038b88254b2b6a5a3ab7307424_cartoon-floating-guru-indian-guru-clipart_1242-1300ಭಾನುವಾರ ಬೆಳಗ್ಗೆ ಪೀರಾಯರು ಎಂದಿನಂತೆ ವಾಯುವಿಹಾರ ಮುಗಿಸಿಕೊಂಡು ಬಂದು, ಸ್ನಾನ ಮುಗಿಸಿ ತಿಂಡಿ ತಿನ್ನಲು ಹೊರಡಬೇಕು ಆ ವೇಳೆಗೆ ಮೊಬೈಲ್ ರಿಂಗಾಯಿತು. Raju Vasishtha calling ಎಂದು ಮೊಬೈಲ್ ಸ್ಕ್ರೀನ್ ಮೇಲೆ ಮೂಡಿ ಬಂದ ಪದಗಳನ್ನು ನೋಡಿ ಇವತ್ತು ಬರುತ್ತೇನೆ ಎಂದು ಹೇಳಲು ಫೋನ್ ಮಾಡಿರಬೇಕು ಎಂದು ಕೊಂಡು ಕಾಲ್ ರಿಸೀವ್ ಮಾಡಿದರು. ‘ಹಲೋ ಪೀರಾವ್ ಸಾರಿ ಕಣಯ್ಯಾ. ಇವತ್ತು ನಾನು ಬರಕ್ಕೆ ಆಗ್ತಿಲ್ಲ. ಅರ್ಜೆಂಟ್ ಆಗಿ ಡೆಲ್ಲಿಗೆ ಹೋಗಬೇಕಾಗಿದೆ. ಈಗ ಏರ್ ಪೋರ್ಟ್ಗೆ ಆಫೀಸ್ ಕಾರ್ ನಲ್ಲಿ ಹೋಗ್ತಾಯಿದೀನಿ. ನಿನಗೆ ನಮ್ಮೂರು ಬೇಸರವಾದರೆ ಬೆಂಗಳೂರಿಗೆ ಹೊರಡು. ನಾನು ಬೆಂಗಳೂರಿಗೆ ಬಂದ ಮೇಲೆ ಫೋನ್ ಮಾಡ್ತೀನಿ. ಈಗ ಇನ್ನೂ ಒಂದಿಬ್ಬರಿಗೆ ಫೋನ್ ಮಾಡಬೇಕು. see you’ ಎಂದು ಒಂದೇ ಉಸಿರಲ್ಲಿ ಹೇಳಿ ಮುಗಿಸಿದ. ಕಾಲ್ ಕಟ್ ಆಯ್ತು. ಮತ್ತಷ್ಟು ಓದು »