ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 20, 2010

ಶಿವರಾಮ ಕಾರ೦ತರ ಸಾಹಿತ್ಯವನ್ನು ಪಸರಿಸಲು ಸಾಹಿತ್ಯಾಸಕ್ತರ ನೆರವು ಕೋರಿ

‍ನಿಲುಮೆ ಮೂಲಕ

ಕೆ ಎಸ್ ರಾಘವೇಂದ್ರ ನಾವಡ


ಮಿತ್ರ ಮಹನೀಯರುಗಳೇ ಹಾಗೂ ಓದುಗ ಬ೦ಧುಗಳೇ,
೧೦-೧೦-೨೦೧೦ ರ೦ದು ದ್ಯುತಿ ಟೆಕ್ನಾಲಜೀಸ್ (ಶ್ರೀಹರ್ಷ ಸಾಲೀಮಠ್)ಹಾಗೂ ಕು೦ಭಾಶಿ ಸ೦ಪತ್ ಕುಮಾರ್ ನೇತೃತ್ವದ ತ೦ಡದ ಶ್ರಮದಿ೦ದ ಹಾಗೂ ಸಾಹಿತ್ಯ ಕಕ್ಕುಲತೆಯಿ೦ದ ಕೋಟ ಶಿವರಾಮ ಕಾರ೦ತರ ಅಧಿಕೃತ ವೆಬ್ ಸೈಟ್ http://www.shivaramkarantha.in/ ಸಾಲಿಗ್ರಾಮದ ಕಾರ೦ತ ರ೦ಗ ಪಥದಲ್ಲಿ ಅಧಿಕೃತವಾಗಿ ಉಧ್ಘಾಟನೆ ಗೊ೦ಡು,ಕಾರ್ಯಾರ೦ಭ ಮಾಡಿದೆ.ಈ ಹಿ೦ದೆಯೇ ತಿಳಿಸಿದ೦ತೆ, ಕಾರ೦ತರ ಎಲ್ಲಾ ಗ್ರ೦ಥಗಳನ್ನು ಹಾಗೂ ಹಸ್ತಪ್ರತಿಗಳನ್ನು ಆನ್ ಲೈನ್ ಮೂಲಕ ಉಚಿತವಾಗಿ ಕನ್ನಡ ಸಾಹಿತ್ಯ ಪ್ರೇಮಿಗಳೆಲ್ಲರಿಗೂ ನೀಡಬೇಕೆ೦ಬುದು ಸಾಲೀಮಠ್ ತ೦ಡದ ಬಯಕೆ. ಕನ್ನಡ ಸಾಹಿತ್ಯ ಪ್ರೇಮಿಗಳ ಎಲ್ಲಾ ರೀತಿಯ ನೆರವಿನ ಅಪೇಕ್ಷೆಯನ್ನಿಟ್ಟುಕೊ೦ಡು ಸಾಲೀಮಠ್ ರವರು ಈ ಮಹ ತ್ಕಾರ್ಯಕ್ಕೆ ಮು೦ದಡಿ ಯಿಟ್ಟಿದ್ದಾರೆ.ಶಿವರಾಮ ಕಾರ೦ತರ ಸ೦ಪೂರ್ಣ ಪರಿಚಯ,ಅವರ ಕೃತಿಗಳು,ಯಕ್ಷಗಾನ ಮು೦ತಾದ ಎಲ್ಲಾ ಅವರ ಬಗ್ಗೆಗಿನ ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು,ಕನ್ನದ ಸಾಹಿತ್ಯಾಸಕ್ತರು, ಅಭಿಮಾನಿಗಳು,ಕೋಟ ಶಿವರಾಮ ಕಾರ೦ತರ ಅನುಯಾಯಿಗಳು ಈ ಆನ್ ಲೈನ್ ವೆಬ್ ಸೈಟಿನ ಸ೦ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆ೦ದು, ಕೋಟ ಶಿವರಾಮ ಕಾರ೦ತ ಟ್ರಸ್ಟ್ ನ ಪದಾಧಿಕಾರಿಗಳು, ಶ್ರೀದ್ಯುತಿ ಟೆಕ್ನಾಲಜೀಸ್ ನ ಶ್ರೀಹರ್ಷ ಸಾಲೀಮಠರು ಆಶಿಸಿದ್ದಾರೆ.24-10-2010 ರ೦ದು ಬೆ೦ಗಳೂರಿನಲ್ಲೂ ಒ೦ದು ಕಾರ್ಯಕ್ರಮವನ್ನೂ ನಡೆಸಲು ಸಾಲೀಮಠ್ ರವರ ತ೦ಡ ನಿರ್ಧರಿಸಿದೆ.

ಈ ಎಲ್ಲಾ ಕಾರ್ಯಗಳನ್ನು ಮಾಲಿನಿ ಮಲ್ಯ ಅಧ್ಯಕ್ಷರು, ಕೋಟ ಶಿವರಾಮ ಕಾರ೦ತ ಸ೦ಶೋಧನಾ ಮತ್ತು ಅಧ್ಯಯನ ಸ೦ಸ್ಥೆ, ರಿ. ಸಾಲಿಗ್ರಾಮ, ಇವರ ಮಾರ್ಗದರ್ಶನ ದಲ್ಲಿ, ಶ್ರೀ ಮುರಳಿ ಕೃಷ್ಣ, ಪ್ರಾ೦ಶುಪಾಲರು, ಶ್ರೀಮಾತಾ ಕಾಲೇಜು ಕುಡತಿನಿ, ಬಳ್ಳಾರಿ ಇವರ ಅಧ್ಯಕ್ಷತೆ ಹಾಗೂ ಪರಿಕಲ್ಪನೆಯ ಮೇರೆಗೆ, ಸ೦ವಹನಾಕಾರರಾಗಿ ಕು೦ಭಾಶಿ ಸ೦ಪತ್ ಕುಮಾರ್ ಹಾಗೂ ವಿನ್ಯಾಸಕಾರ ಹಾಗೂ ನಿರ್ವಹಣಾಕಾರರಾಗಿ ಶ್ರೀ ದ್ಯುತಿ ಟೆಕ್ನಾಲಜೀಸ್ ನ ಮಾಲೀಕರಾದ ಶ್ರೀಹರ್ಷ ಸಾಲೀಮಠ್ ರವರು ಸದ್ಯೋಭವಿಷ್ಯದಲ್ಲಿ ಕಾರ್ಯ ನಿರ್ವಹಿಸ ಲಿದ್ದಾರೆ. ಈ ಮಹತ್ಕಾರ್ಯಕ್ಕೆ ಸಾರ್ವಜನಿಕರಿ೦ದ, ಸ೦ಘ-ಸ೦ಸ್ಥೆಗಳಿ೦ದ ಹಾಗೂ ಸಹಾಯ ಮಾಡಲಿಚ್ಛಿಸುವವರಿ೦ದ ಧನ ಸಹಾಯವನ್ನು ಅಪೇಕ್ಷಿಸಿದ್ದು,ಮಾಡಲಿಚ್ಛಿಸುವವರು ಈ ಮೇಲ್ ಮೂಲಕ್ ಮಾಹಿತಿ ಪಡೆಯಬಹುದಾಗಿದ್ದು, ಈ ಮೇಲ್ ವಿಳಾಸ ಹಾಗೂ ಚರವಾಣಿ ಸ೦ಖ್ಯೆ ಇ೦ತಿದೆ:

ಈ ಮೇಲ್: thesalimath@gmail.com

ಚರವಾಣಿ: ೯೪೮೧೩೬೦೫೦೧

ಶ್ರೀಹರ್ಷ ಸಾಲೀಮಠ್,
ವ್ಯವಸ್ಥಾಪಕ ನಿರ್ದೇಶಕರು,ದ್ಯುತಿ ಟೆಕ್ನಾಲಜೀಸ್,
ನ೦ ೩೦-೩ ನೇ ತಿರುವು,ಮಣಿಕಾ೦ತ ಸ೦ಕೀರ್ಣ,

ಜವರಯ್ಯ ಗಾರ್ಡನ್,ಶ್ರೀ ಗ೦ಗಮ್ಮ ದೇವಸ್ಥಾನದ ಹತ್ತಿರ

ತ್ಯಾಗರಾಜ ನಗರ

ಬೆ೦ಗಳೂರು-೫೬೦೦೨೮

ಹೆಸರಿಗೂ ಹಾಗೂ ವಿಳಾಸಕ್ಕೂ ಕೊರಿಯರ್ ಮೂಲಕವಾಗಲೀ ಯಾ ಅ೦ಚೆಯ ಮೂಲಕವಾಗಲೀ ಕಳುಹಿಸಬಹುದು.ದೊಡ್ಡ ಮೊತ್ತದ ಧನಸಹಾಯ ಮಾಡುವವರು ಅಧ್ಯಕ್ಷರು, ಕೋಟ ಶಿವರಾಮ ಕಾರ೦ತ ಸ೦ಶೋಧನಾ ಮತ್ತು ಅಧ್ಯಯನ ಸ೦ಸ್ಥೆ, ರಿ. ಸಾಲಿಗ್ರಾಮ, ದ ಹೆಸರಿಗೆ ಹಾಗೂ ವಿಳಾಸಕ್ಕೆ ಕಳುಹಿಸಿಕೊಟ್ಟಲ್ಲಿ, ಆದಾಯ ತೆರಿಗೆಯ ೮೦ ಜಿ ಮೂಲಕ ವಿನಾಯಿತಿ ರಸೀದಿಯನ್ನು ಪಡೆಯಬಹುದು.

ಅ೦ತರ್ಜಾಲದ ಮೂಲಕವೇ ಸಹಾಯಧನವನ್ನು ತಲುಪಿಸುವವರು ಈ ಕೆಳಗೆ ಲೇಖಿಸಿರುವ ಬ್ಯಾ೦ಕ್ ಖಾತೆಗೆ ತಲುಪಿಸಬಹುದು:

A/c No 20002715655
ಸ್ಟೇಟ್ ಬ್ಯಾ೦ಕ್ ಆಫ್ ಇ೦ಡಿಯಾ, ಟೆಕ್ನೋಪಾರ್ಕ್,ತ್ರಿವೇ೦ಡ್ರಮ್ ಶಾಖೆ.

ಯಾವುದೇ ಖಾತೆಗೆ ಸಹಾಯಧನವನ್ನು ತಲುಪಿಸಿದ ನ೦ತರ ಚರವಾಣಿಯ ಮೂಲಕ ಯಾ ಎಸ್.ಎಮ್.ಎಸ್. ಮೂಲಕ ಕರೆ ಮಾಡಿ ತಿಳಿಸಿದರೆ, ಸೂಕ್ತ ರಸೀದಿಯನ್ನು ಕಳುಹಿಸುವ ಏರ್ಪಾಟನ್ನೂ ಸಹ ಮಾಡಲಾಗುವುದು.

ವಿ.ಸೂ: ಶಿವರಾಮ ಕಾರಂತರು ಅಭಿನಯಿಸಿದ ಯಕ್ಷಗಾನದ ಸಿಡಿಗಳೂ,ಅವರು ನಿರ್ದೇಶಿಸಿದ ಸಿಡಿಗಳೂ ಮಾರಾಟಕ್ಕೆ ಲಭ್ಯ ವಿದೆ.ಮೇಲೆ ಹೇಳಿದ ಮಹತ್ಕಾರ್ಯಕ್ಕೆ ಕಡಿಮೆ ಬೀಳಬಹುದಾದ ಅಥವಾ ಅಗತ್ಯವಾಗಿರುವ ಧನವನ್ನು ,ಈ ಸಿ.ಡಿ.ಗಳನ್ನು ಮಾರಾಟ ಮಾಡುವುದರ ಮೂಲಕ ಗಳಿಸಬೇಕೆ೦ಬುದು ತ೦ಡದ ಉದ್ದೇಶ.ಕಡಿಮೆ ಬೀಳುವ ಅಷ್ಟೂ ಹಣ ವನ್ನು ಈ ಸಿ.ಡಿ.ಗಳ ಮಾರಾಟವೊ೦ದರಿ೦ದಲೇ ಗಳಿಸಲಾಗದೆ೦ಬ ಕಹಿಸತ್ಯವನ್ನು ನಮ್ರನಾಗಿತಮ್ಮಲ್ಲಿ ಒಪ್ಪಿಸುತ್ತಿದ್ದಾರೆ.ಆದರೂ ಸ್ವಲ್ಪವಾದರೂ ಕೊರತೆಯನ್ನು ನೀಗಿಸಬಹುದಲ್ಲ ಎ೦ಬ ನಿರೀಕ್ಷೆ ತ೦ಡದ್ದು. ಆದ್ದರಿ೦ದಲೇ ಆಸಕ್ತ ಸ೦ಪದಿಗರು ಪ್ರತಿಯೊಬ್ಬರೂ ಕನಿಷ್ಠ ೫ ಸಿ.ಡಿ.ಗಳನ್ನಾದರೂ ಕೊಳ್ಳಬೇಕೆ೦ಬುದು ತ೦ಡದ ಮನವಿ. ಒ೦ದು ಸಿ.ಡಿ.ಯ ಬೆಲೆ ನೂರು ರೂಪಾಯಿಗಳು.ನಿಮ್ಮ ಸಹಾಯ ಮಾತ್ರದಿ೦ದಲೇ ಈ ಮಹತ್ಕಾರ್ಯ ನೆರವೇರಬಲ್ಲುದೆ೦ಬ ಖಚಿತತೆಯಿ೦ದಲೇ ನಿಮ್ಮಲ್ಲಿ ಈ ಅರಿಕೆಯನ್ನು ಇಟ್ಟಿದ್ದಾರೆ. ಸಿ.ಡಿ. ಬೇಕಾದವರು ಮೇಲಿನ ಸಾಲೀಮಠರ ಚರವಾಣಿಗೆ ಕರೆಯನ್ನು ಮಾಡುವುದರ ಯಾ ಎಸ್.ಎಮ್.ಎಸ್. ಕಳಿಸುವುದರ ಮೂಲಕ ವಾಗಲೀ ಹಣ ಸ೦ದಾಯದ ಬಗೆಯನ್ನು ಅರುಹಿ ,ಅಗತ್ಯವಿರುವ ಸಿ.ಡಿಗಳ ಸ೦ಖ್ಯೆಯನ್ನು ತಿಳಿಸಿದರೆ, ತಮಗೆ ರಸೀದಿಯ ಸಹಿತವಾಗಿ ಸಿ.ಡಿಗಳನ್ನು ಕೊರಿಯರ್ ಮೂಲಕ ಕಳುಹಿಸಿಕೊಡುತ್ತಾರೆ.ಸಾಲೀಮಠ್ ಹಾಗೂ ತ೦ಡ ಈ ವಿಚಾರವಾಗಿ ತಮ್ಮೆ ಲ್ಲರಿ೦ದ ಎಲ್ಲಾ ರೀತಿಯ ಸಹಾಯವನ್ನೂ ಅಪೇಕ್ಷಿಸುತ್ತಿದ್ದಾರೆ.ದಯವಿಟ್ಟು ಅವರ ಮನವಿಗೆ ಸ್ಪ೦ದಿಸಬೇಕೆ೦ದು ಆಶಿಸುತ್ತಿದ್ದೇನೆ. ನೀವೂ ಈ ಮಹತ್ಕಾರ್ಯದಲ್ಲಿ ಭಾಗಿಯಾಗಿ ಹಾಗೂ ನಿಮ್ಮ ಗೆಳೆಯರಿಗೂ ತಿಳಿಸಿ. ನಾವೆಲ್ಲರೂ ಈ ಮೂಲಕ ನಿಜವಾದ ಕನ್ನಡ ಸಾಹಿತ್ಯ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣವೆ೦ಬುದೇ ನನ್ನ ಮಹದಾಸೆ.

ಈ ಸಿ.ಡಿಗಳು ಅತ್ಯಂತ ಅಪರೂಪದವುಗಳಾಗಿದ್ದು ಜಗತ್ತಿನ ಯಾವ ಭಾಗದಲ್ಲೂ ಲಭ್ಯವಿಲ್ಲ. ಕಾರಂತರ ವೆಬ್ ಸೈಟ್ ನ ವಿನ್ಯಾಸದ ಹಾಗೂ ಅಭಿವೃದ್ಧಿಯ ವೆಚ್ಚಕ್ಕಾಗಿ ಈ ಸಿಡಿಗಳ ಮಾರಾಟದಿಂದ ಬರುವ ಸಂಪೂರ್ಣ ಹಣ ವನ್ನು ವಿನಿಯೋಗಿಲು ಉದ್ದೇಶಿಸಲಾಗಿದೆ.ಸಿಡಿಗಳಲ್ಲಿ ಸ್ವತಃ ಕಾರಂತರೇ ನಿರ್ದೇಶಿಸಿದ ಹಾಗೂ ವಿವರಣೆ ನೀಡಿದ ಯಕ್ಷಗಾನ ಬ್ಯಾಲೆಗಳ ವಿಡಿಯೋ ಇವೆ. ಒಂದು ಸೆಟ್ ನಲ್ಲಿ ಐದು ಸಿಡಿಗಳಿದ್ದು ಸಿಡಿಗಳಲ್ಲಿರುವ ವಿಡಿಯೋಗಳು ಹೀಗಿವೆ,
೧. ರಾಮಾಯಣ
೨. ಗಯನ ಚರಿತ್ರೆ
೩. ಕನಕಾಂಗಿ ಕಲ್ಯಾಣ.
೪. ಚಿತ್ರಾಂಗದಾ.
೫. ನಳದಮಯಂತಿ.

ವಿ.ಸೂ: ಈ ಸಿಡಿ ಗಳು ಅತ್ಯಂತ ನಿಯಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿದ್ದು ಮೊದಲು ಬಂದವರಿಗೆ ಆದ್ಯತೆ ಮೇಲೆ ನೀಡಲಾಗುತ್ತದೆ. ಒಂದು ಸೆಟ್ ನಲ್ಲಿ ಐದು ಸಿಡಿಗಳಿದ್ದು ಒಂದು ಸೆಟ್ ನ ಬೆಲೆ ರೂ.೫೦೦/- ಮಾತ್ರ. ಸಿಡಿಗಳು ಬೇಕಿರುವ ಅಭಿಮಾನಿಗಳು ಈ ಸಂದೆಶಕ್ಕೆ ಪ್ರತಿಕ್ರಿಯೆಯಾಗಿ ತಮ್ಮ ವಿಳಾಸವನ್ನು ಹಾಗೂ ತಲುಪಿಸಬೇಕಾದ ಸಮಯವನ್ನು ಬರೆಯಬಹುದು. ಮನೆಗೆ ಸಿಡಿ ಗಳನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು.

(ಲೇಖಕರು ಕಳುಹಿಸಿದ ಇ-ಮೇಲ್ ನ ಅನ್ವಯ ಈ ಲೇಖನ ಪ್ರಕಟಿಸಲಾಗಿದೆ- ನಿಲುಮೆ ತಂಡ)

Read more from ಲೇಖನಗಳು

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments