ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 22, 2010

ವೈದೇಹಿಯವರ ಭೇಟಿ ಎಂಬ ಕೌತುಕ

‍ನಿಲುಮೆ ಮೂಲಕ

ಸಾತ್ವಿಕ್

’ನನಗೆ ನಿಮ್ಮ ಕೈಯನ್ನೊಮ್ಮೆ ಮುಟ್ಟಬೇಕೆಂಬ ಆಸೆ’ , ಇದು ವೈದೇಹಿಯವರು ತುಂಬಿದ ಸಭೆಯಲ್ಲಿ ತಾರಿಣಿಯವನ್ನು ಕುರಿತು ಹೇಳಿದ ಮಾತು. ಯಾಕೆಂದರೆ ರಾಷ್ಟ್ರಕವಿ ಕುವೆಂಪು ಅವರ ಮಗಳು ತಾರಿಣಿಯವರನ್ನು ಮುಟ್ಟಿದರೆ ಕುವೆಂಪು ಅವರನ್ನೇ ಸ್ಪರ್ಷಿಸಿದಂತೆ ಎಂಬ ಮುಗ್ಧಭಾವ ಅವರ ಮಾತಿನಲ್ಲಿತ್ತು.

ವೈದೇಹಿಯವರ ಜೊತೆ ಪ್ರತಾಪಚಂದ್ರಶೆಟ್ಟಿ, ಸಾತ್ವಿಕ್, ಚಂದ್ರಶೇಖರ್ ಮಂಡೆಕೋಲು

(ಚಿತ್ರದಲ್ಲಿ ಕ್ರಮವಾಗಿ ಪ್ರತಾಪಚಂದ್ರಶೆಟ್ಟಿ, ಸಾತ್ವಿಕ್, ಚಂದ್ರಶೇಖರ ಮಂಡೆಕೋಲು ಮತ್ತು ವೈದೇಹಿಯವರು)ಜನಸಾಮಾನ್ಯರಲ್ಲಿ ಇರಬಹುದಾದ ಭಾವುಕ ಆಲೋಚನೆಗಳನ್ನು ಹತ್ತು ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡ ನಂತರವೂ ಉಳಿಸಿಕೊಂಡವರು ವೈದೇಹಿಯವರು. ಇಂಥ ಪ್ರಸಿದ್ಧ ಸಾಹಿತಿ, ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಶ್ರೀಮತಿ ವೈದೇಹಿಯವರನ್ನು ಭೇಟಿಯಾಗಬೇಕೆಂದಾಗ ನಮ್ಮ ಮನಸ್ಸಿನಲ್ಲೂ ಒಂದು ಪುಳಕ. ಅವರು ಎಂದಿನಂತೆಯೇ ತಮ್ಮ ಚೂಟಿಯಾದ ಮಾತುಗಳಿಂದ ನಮ್ಮನ್ನು ಇದಿರುಗೊಂಡರು. ಭೇಟಿಯಾಗಿದ್ದಾಗ ತೆಗೆದ ಫೋಟೋ ಇದು.

 

ಚಿತ್ರ ಕೃಪೆ : ಎಚ್.ಪಿ. ನಾಡಿಗ್

Read more from ಲೇಖನಗಳು

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments