ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 28, 2010

1

ಭಾವನೆಗಳಿಗೆ ಪೆಟ್ಟು ಕೊಟ್ಟು ನೀ ಯಾಕೆ ದೂರಾದೆ ?

‍ನಿಲುಮೆ ಮೂಲಕ

ಜಗನ್ನಾಥ್ ಶಿರ್ಲಾಲ್

“ನನಗೆ ನೀನಂದರೆ ತುಂಬಾ ಇಷ್ಟ, ನನಗೆ ನೀನೆ ಬೇಕು ನಿನ್ನಲ್ಲಿ ತುಂಬಾ ಮಾತಾಡಬೇಕು, ನೀನು ಎಲ್ಲೇ ಇದ್ದರೂ ನಾನಲ್ಲೇ  ಇರುವೆ, ನಿನ್ನಲ್ಲಿ ಮಾತಾಡದೆ ಒಂದು  ಕ್ಷಣವೂ ಇರಲಾರೆ, ನಿನ್ನ ಧ್ವನಿಯನ್ನು ಕೇಳದ ನನ್ನ ಕಿವಿಯು   ಬೇರೇನನ್ನು ಆಲಿಸಲ್ಲ ನಿನ್ನ ನೋಡದೆ ನನ್ನ ಕಣ್ಣಿಗೂ ನಿದ್ದೆ ಬರಲ್ಲಾ, ನೀನಂದರೆ ಪ್ರಾಣ, ಹೃದಯದ ಬಡಿತ ” ಎನ್ನುತ್ತಿದ್ದ ನೀನು ಯಾಕೆ ನನ್ನ ಬಿಟ್ಟು ದೂರಾದೆ ?
ಗೆಳೆತಿ ನಾವಿಬ್ಬರು ಆಪ್ತರಾದ ಸಂದರ್ಭ ನೆನಪಿದೆಯ ? ಕಾಲೇಜಿನ ಆ ಮೊದಲ  ದಿನ ಹೊಸ ಮುಖಗಳ ಪರಿಚಯದ ಕುತೂಹಲ, ಅನಿರೀಕ್ಸಿತವಾಗಿ ಪಿಳಿಪಿಳಿ ನೋಡ್ದುತ್ತಿದ್ದ  ಕಣ್ಣುಗಳು ಅದೇನೋ ಮೋಡಿ ಮಾಡಿದವೋ ನನ್ನನೆ ತಟ್ಟನೆ ನೋಡುವ ನಾಚಿಕೆಯಿಂದ ತಿರುಗುತ್ತಿದ  ನೀನು, ಮೊದಮೊದಲು ಪರಸ್ಪರ ಕಣ್ಣಲ್ಲಿ ಕಣ್ಣು ಇಟ್ಟು ನೋಡದೆ ಮಾತಾಡುವ ನಿನ್ನ ಅ ಮಾತುಗಳಿಂದ ನಮ್ಮಿಬ್ಬರನ್ನು ಸೇಹಿತರನ್ನಗಿಸಿದವು. ಪ್ರೀತಿ ಏನೆಂಬುದು ತಿಳಿಯದ ನಮಗೆ, ನಾವು ಕಂಡುಕೊಂಡ ಪ್ರೀತಿ  ಬಾವನೆಯ ಮಾತೆ ಪ್ರೀತಿ. ಪ್ರೀತಿ ಹೇಗಿರಬೇಕೆಂದು ತೋರಿಸಿಕೊಟ್ಟ  ನಾವು ಹಲವಾರು ನೋವುಗಳನ್ನು ಎದುರಿಸಿದರು ನಾವಿಬ್ಬರು ನೈಜ ಸ್ನಹಿತರಾಗಿದ್ದೆವು . ಸಮಾಜದ ಎಲ್ಲರೆದುರು  ನಮ್ಮ ನಡೆ ನುಡಿಗಳನ್ನು  ತೋರ್ಪಡಿಸಿ ಕೆಲವೊಬ್ಬರ ಕುರುಡು ಕಣ್ಣಿಗೆ ಮತ್ಸರ ಮಾಡಿದೆವು. ನಮ್ಮಿಬ್ಬರಲ್ಲಿ ಎಷ್ಟೇ  ಜಗಳ , ಕೋಪ ತಾಪಗಳಿದ್ದರು ಕ್ಷಣ   ಮಾತ್ರದಲ್ಲಿ ಕರಗಿ ಹೋಗಿ ಮನಸಿನೊಡನೆ ಮಾತಾಡುತ್ತಿದ್ದೆವು.  ನನ್ನ ಪ್ರತಿ ಉಸಿರಿನಲ್ಲೂ  ನಿನ್ನ ನಾಮಂಕುರವಾಗುತ್ತಿತು, ನನ್ನ ಕನಸು ಮನಸಿನಲ್ಲು  ನಿನ್ನದೇ ಚಿತ್ರ ಮೂಡುತ್ತಿತ್ತು. ನಾನು ಭಾವನಾತ್ಮಕ  ಜೀವಿಯದೆ. ನಿನಗೆ ನೋವಾದರೆ ನನಗು ಸಂಕಟವಾಗುತ್ತಿತು. ಮೌನವಾಗಿರುತಿದ್ದ ನಮ್ಮ ಮನಸುಗಳು ಅಂತರಾಳದಲ್ಲಿ ಮಾತಾಡಿಕೊಲ್ಲುತಿದ್ದವು. ನಾನು ನಿನ್ನನು ತುಂಬಾ ಇಷ್ಟ ಪಡುತಿದ್ದೆ. ಆದರೆ ಇದ್ದಕಿದ್ದ ಹಾಗೆ ನಿನ್ನ ಮನಸ್ಸು ಯಾಕೆ ಬದಲಾಯಿತು? ಯಾಕೆ ಮಾತು ನಿಲ್ಲಿಸಿಬಿಟ್ಟೆ? ನನ್ನ ಮುಖವನ್ನೇ ನೋಡಲು ತಪ್ಪಿಸಿದೆ. ನಾವಿಬ್ಬರು ದೂರ ಇದ್ದ ಕಾರಣ ನನ್ನ ದೂರವಾಣಿ ಕರೆಯನ್ನು ಸ್ವಿಕರಿಸದೇ ನಿರ್ಲಕ್ಸಿದಲ್ಲದೆ… ದ್ವೇಷಿಸಿದೆ….

ಎಲ್ಲಿದಿಯ ಗೆಳೆತಿ? ನನ್ನ ಬಿಟ್ಟು ನೀ ಸಂತೋಷದಿಂದುರುವೆಯ ? ಒಬ್ಬೋರನ್ನ್ಬ್ಬೋರು ಆಳವಾಗಿ ಅರಿತಿರುವ ನಾವು ಒಮ್ಮಿಂದೊಮ್ಮೆಲೆ ದೂರಾಗಳು  ಹೇಗೆ ಸಾದ್ಯ? ಅಂತಹ ಮನಸ್ತಿತಿ ನಿನಗೆ ಹೇಗೆ ಬಂತು? ನನ್ನ ಮನದ ನೋವನ್ನು ನೀನು ಗ್ರಹಿಸಿದೆಯ? ನಿನಗಾಗಿ ಈ  ಮನ ಎಸ್ಷ್ಟೊಂದು ಹಾತೊರೆಯುತ್ತ್ತಿದೆ!
ಗೆಳೆತಿ ನಿನ್ನ ಮುಖ ಬಾವ ನನ್ನ ಕಣ್ಣೆದುರಲ್ಲಿ ಹಸಿರಾಗಿಯೇ ಇದೆ. ಅದು ನನ್ನನು ಬದುಕುವಂತೆಯೇ ಮಾಡಿದೆ. ಗಾಯವಿಲ್ಲದೆಯೇ ನೋಯುವಂತೆ ಮಾಡಿದೆ. ನನ್ನ ಹೃದಯದ ನೋವನ್ನು ಯಾರಲ್ಲಿ ಹೇಳಲಿ? ನೀನು ನನ್ನೊಂದಿಗೆ ಕೊನೆಯ ಮಾತಿಗಾದರೂ ಸಿಗುತ್ತಿಯ ಎಂದು ಹಾತೊರೆಯುತ್ತಿದೇನೆ. ಹೃದಯ ನೋವಿನಿಂದ ಅಳುತ್ತಿರುವಾಗ ಯಾಕೆ ಇ ಜೀವನ ಎಂದೆನಿಸಿದೆ! ನೋವು ಕಣ್ಣಿರಾಗಿ ಹರಿದರೂ ನೀನೂ ಮಾತ್ರ ನನ್ನಿಂದ ದೂರಾವಾಗಿದ್ದಿ, ನನ್ನ ಅರ್ಥ  ಮಾಡಿಕೊಂಡಿದ್ದು ಇಷ್ಟೇನಾ ಗೆಳೆತಿ? ಸ್ನೇಹಕ್ಕೆ ಒಳ್ಳೆಯ ಅರ್ಥ ಕೊಟ್ಟಿದ್ದ ನೀನು  ಈಗ  ಯಾಕೆ ನನ್ನ ಭಾವನೆಗಳಿಗೆ ಘಾಸಿ ಮಾಡಿ ದೂರಾದೆ? ನನ್ನ ಹೃದಯ  ಹೇಳುತ್ತಿದೆ ಒಂದೇ.

ನೂರಾರು ಪ್ರೀತಿ ಮಾತು

ನೂರಾರು ಸಾರಿ ಹಾಡಿ, ನೀನೇನೆ ಜೀವ ಎಂದು…

ಕಾರಣವೇ ಹೇಳದೆ ಯಾಕೆ ನನ್ನ ಬಿಟ್ಟು ಹೋದೆ ?
ಇತಿ ನಿನ್ನ ಗೆಳೆಯ

Read more from ಲೇಖನಗಳು
1 ಟಿಪ್ಪಣಿ Post a comment
  1. Sneha's avatar
    Sneha
    ಜನ 7 2016

    Bhavanegala jothegina payana adara novu anubhavisidavarige mathra gottu….all the best

    ಉತ್ತರ

Leave a reply to Sneha ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments