ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 20, 2010

17

ಕೋಮುವಾದವೂ ಮೂಲಭೂತವಾದವೂ

‍ನಿಲುಮೆ ಮೂಲಕ

ಅಜಕ್ಕಳ ಗಿರೀಶ ಭಟ್

ದಕ್ಷಿಣ ಕನ್ನಡದಲ್ಲಿ ಈಚಿನ ವರ್ಷಗಳಲ್ಲಿ ಹಿಂದೂ- ಮುಸ್ಲಿಂ ಸಂಘರ್ಷಗಳು ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಸಾಕಷ್ಟು ಲೇಖನಗಳು ಕಾಲಕಾಲಕ್ಕೆ ವಿವಿಧ ಪತ್ರಿಕೆಗಳಲ್ಲಿ ಬಂದಿವೆ. ಪುಸ್ತಕಗಳೂ ಬಂದಿವೆ. ಆದರೆ , ಹೆಚ್ಚಿನ ಲೇಖನಗಳು ಸಮಸ್ಯೆಯ ಆಳಕ್ಕಿಳಿದು ಚರ್ಚಿಸುವುದಿಲ್ಲ. ಮೇಲು ಮೇಲಿಂದ ನೊಡಿ ಎಲ್ಲ ಕೋಮುವಾದಿಗಳನ್ನು ಖಂಡಿಸಬೇಕು ಎಂದು ಹೇಳಿದಾಕ್ಷಣ ಸಮಸ್ಯೆ ಪರಿಹಾರವಾಗದು.

ವಾಸ್ತವವಾಗಿ ಹಿಂದೂ ಮತ್ತು ಮುಸ್ಲಿಂ ಸಂಸ್ಕೃತಿಗಳು ಬದುಕನ್ನು ಗ್ರಹಿಸುವ ಬಗೆಯಲ್ಲಿಯೇ ವ್ಯತ್ಯಾಸಗಳಿವೆ.

ಹಿಂದೂ ಎಂಬೊಂದು ಏಕರೂಪಿ ಘಟಕ ಇಲ್ಲ ನಿಜ. ಆದರೆ ಸೃಷ್ಟಿ ಮತ್ತು ಸೃಷ್ಟಿಕರ್ತ ಇವೆಲ್ಲ ಪೂಜನೀಯ ಎಂದು ಗ್ರಹಿಸುವ ,ಅಂಥ ನಂಬಿಕೆಗಳನ್ನು ಹೊಂದಿರುವುದೇ ಈ “ಹಿಂದು” ಎಂದು ನಾವು ಅನುಕೂಲಕ್ಕಾಗಿ ಕರೆಯುವ ಗುಂಪುಗಳ ನಡುವೆ ಇರುವ ಸಾಮ್ಯತೆ ಎನ್ನಬಹುದು. ಇಂಥ ನಂಬಿಕೆಗಳು ಬಹುಸಂಸ್ಕೃತಿಗಳ ಅಸ್ತಿತ್ವಕ್ಕೆ ಪೂರಕ ಎಂದು ಬೇರೆ ಹೇಳಬೇಕಾಗಿಲ್ಲ. ಹಿಂದೂ ಧರ್ಮಗಳ ಒಳಗೇ ಭೇದಭಾವ ಇತ್ಯಾದಿ ಸಮಸ್ಯೆಗಳಿವೆ.ಅದು ಸಾಕಷ್ಟು ಚರ್ಚಿತವಾದ ವಿಷಯವೇ ಆಗಿದೆ.

ವಾಸ್ತವವಾಗಿ ಹಿಂದೂ-ಮುಸ್ಲಿಂ ಸಂಘರ್ಷವೆಂದರೆ ಅದು ಆಧುನಿಕತೆಗೆ ತೆರೆದುಕೊಂಡ ಮತ್ತು ಹಾಗೆ ತೆರೆದುಕೊಳ್ಳಲು ಹಿಂಜರಿಯುವ ಸಂಸ್ಕೃತಿಗಳ ನಡುವಿನ ಸಂಘರ್ಷವೂ ಹೌದು.ಅವರವರು ಅವರವರಷ್ಟಕ್ಕೇ ಇರಲಿ ಏನು ಸಮಸ್ಯೆ ಎನ್ನಲು ಸಾಧ್ಯವಿಲ್ಲ ಯಾಕೆಂದರೆ ಇವೆರಡೂ ಸಂಸ್ಕೃತಿಗಳೂ ಒಟ್ಟಿಗೇ ಬದುಕಬೇಕಾಗಿದೆ ಇಲ್ಲಿ.

ದಕ್ಷಿಣ ಕನ್ನಡದಲ್ಲಿ “ಹಿಂದೂ ಹುಡುಗಿ ” ಮತ್ತು “ಮುಸ್ಲಿಂ ಹುಡುಗ” ಜತೆಯಾಗಿ ಬಸ್ಸಲ್ಲಿ ಪ್ರಯಾಣಿಸಿದರೆ ಅಥವಾ ಪರಸ್ಪರ ಮಾತನಾಡಿದರೆ ಹಲ್ಲೆಗೆ ಒಳಗಾಗುವ ಪ್ರಸಂಗಗಳು ವರದಿಯಾಗುತ್ತವೆ.ಇಂಥ ಹಲ್ಲೆಗಳು ಖಂಡನೀಯವೇ ಹೌದು. ಇದರ ಹಿಂದೆ ಪುರುಷಾಹಂಕಾರದ ಪ್ರವೃತ್ತಿ ಇದೆ ಎನ್ನುವುದು ಎಲ್ಲರಿಗೂ ಅರ್ಥವಾಗುವ ವಿಚಾರ. ಆದರೆ ಇಂಥ ಪ್ರಸಂಗಗಳ ಬಗ್ಗೆ ಚಿಂತಿಸುವಾಗ ಇನ್ನಷ್ಟು ಸೂಕ್ಷ್ಮವಾಗಿ ನೋಡಬೇಕಾದ ಅಗತ್ಯವಿದೆ. ಉದಾಹರಣೆಗೆ ಮಂಗಳೂರಿನ ಕುಪ್ರಸಿದ್ಧ ಪಬ್ ದಾಳಿಯ ನಂತರ ಮಂಗಳೂರು ಹೇಗೆ ಕೋಮುವಾದಿಗಳ ತಾಣವಾಗುತ್ತಿದೆ ಎನ್ನುವ ಲೇಖನ ದ ವೀಕ್ ಪತ್ರಿಕೆಯಲ್ಲಿ ಪ್ರಕಟವಾಯಿತು. ( ಎನ್, ಭಾನುತೇಜ್, ವೀಕ್, ಫೆಬ್ರವರಿ -೨೦೦೯). ಎಲ್ಲ ಸರಿ; ಆದರೆ ಅದರಲ್ಲಿದ್ದ ಕೆಲವು ಸಾಲುಗಳು ಹೀಗಿದ್ದವು.”ಮುಸ್ಲಿಂ ಹುಡುಗರು ಮತ್ತು ಹಿಂದೂ ಹುಡುಗಿಯರ ನಡುವಿನ ಸ್ನೇಹಕ್ಕೆ ಗರಿಷ್ಟ ಶಿಕ್ಷೆ. ಹಿಂದು ಹುಡುಗ-ಮುಸ್ಲಿಂ ಹುಡುಗಿ ಸ್ನೇಹದ ವಿರುದ್ಧ ಯಾವುದೇ ಅಟ್ಯಾಕ್ ಆದ ಬಗ್ಗೆ ವರದಿಗಳಿಲ್ಲ.”(ಪು.೧೬). ಈ ಹೇಳಿಕೆ ನಿಜವಾಗಿ ಮಿಸ್ ಲೀಡ್ ಮಾಡುವಂಥದ್ದು. ದ.ಕ.ದಲ್ಲಿ ಹಿಂದು ಹುಡುಗ ಮತ್ತು ಮುಸ್ಲಿಂ ಹುಡುಗಿ ಝತೆಯಾಗಿ ಓಡಾಡುವ ಸನ್ನಿವೇಶಗಳು ಇಲ್ಲವೆಂಬಷ್ಟು ಕಡಮೆ ಎನ್ನುವ ಸತ್ಯವನ್ನು ಈ ಹೇಳಿಕೆ ಮರೆಮಾಚುತ್ತದೆ. ಹಾಗೆ ಓಡಾಡುವ ಸನ್ನಿವೇಶಗಳು ಇರುತ್ತಿದ್ದರೆ ಈಗಿನ ರೀತಿಯ ಗಲಾಟೆಗಳು ಇರುತ್ತಿರಲಿಲ್ಲ ಎಂದು ಅನಿಸುತ್ತದೆ.ಅಂದರೆ ಆಧುನೀಕರಣಗೊಳ್ಳುವ ಪ್ರಕ್ರಿಯೆಯಲ್ಲಿಯೇ ಹಿಂದು ಮತ್ತು ಮುಸ್ಲಿಮರ ನಡುವೆ ಅಸಮತೋಲನವಿದೆ. ಆಧುನಿಕ ಶಿಕ್ಷಣದ ಕಾರಣದಿಂದ ಹೀಮ್ದುಗಳಲ್ಲಿ ಪುರುಷ ಪ್ರಾಧಾನ್ಯ ಕಡಿಮೆಯಾಗಿದ್ದರೆ ಮುಸ್ಲಿಮರಲ್ಲಿ ಅಷ್ಟರಮಟ್ಟಿಗೆ ಕಡಿಮೆಯಾಗಿಲ್ಲ. ಎಲ್ಲರೂ ಆಧುನೀಕರಣಗೊಳ್ಳುವುದರಿಂದ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ ಎಂದು ನಾನೇನೂ ಹೇಳುತ್ತಿಲ್ಲ.

ಚುನಾವಣಾ ಗುರುತುಚೀಟಿಗಾಗಿ ನಾವು ಫೋಟೊ ತೆಗೆಸಿಕೊಳ್ಳುವಂತಿಲ್ಲ ಎಂದು ಯಾರೋ ಕೋರ್ಟಿಗೆ ಹೋದಾಗ ಆ ಕೇಸು ಎಡ್ಮಿಟ್ ಆದುದೇ ಅಚ್ಚರಿ. ಬುರ್ಖಾ ಧರಿಸುವುದು ಮಾನವಹಕ್ಕು ನಿಜ, ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ವ್ಯಕ್ತಿಗಳು ಗುರುತುಸಿಗದಂತೆ ಇರಬೇಕೆನ್ನುವುದು ಅಪೇಕ್ಷಣೀಯವೇ?

ಇಸ್ಲಾಮ್ ಧರ್ಮದ ಬುದ್ಧಿಜೀವಿಗಳ ಒಂದು ವೈಶಿಷ್ಟ್ಯ ಎಂದರೆ ಅವರು ಮುಸ್ಲಿಮರ ಕೆಲವು ಧಾರ್ಮಿಕ ಆಚರಣೆಗಳನ್ನು ಟೀಕಿಸುತ್ತಾರಷ್ಟೆ ಹೊರತು ಧರ್ಮದ ಅಥವಾ ಗ್ರಂಥಗಳ ವಿಮರ್ಶೆ ಮಾಡುವುದಿಲ್ಲ. ” ಕನ್ನಡ ಮುಸ್ಲಿಮ್ ಲೇಖಕರು ತಮ್ಮ ಸಮಾಜವನ್ನು ವಿಮರ್ಶಿಸಿದರು,ಪಾವಿತ್ರ್ಯನಾಶ ಮಾಡುವ ಪ್ರಗತಿಪರ ನಿಲುವನ್ನು ತೋರಿದರು ” ಎಂದೆಲ್ಲ ಅಭಿಪ್ರಾಯಗಳು ಕನ್ನಡ ವಿಮರ್ಶಾವಲಯದಲ್ಲಿ ಚಾಲ್ತಿಯಲ್ಲಿದೆ. ಸಾರಾ ಅಬೂಬಕರ್ ಸೇರಿದಂತೆ ಎಲ್ಲರೂ ಹೇಳುವುದು ಹೇಗೆಂದರೆ ” ಹೀಗೆ ಕುರಾನ್ ನಲ್ಲಿ ಹೇಳಿಲ್ಲ .ಆದ್ದರಿಂದ ನಾವು ಅದನ್ನು ಆಚರಿಸಬೇಕಾಗಿಲ್ಲ” ಇತ್ಯಾದಿ ನಮೂನೆಯಲ್ಲಿ. ” ಕುರಾನ್ ನಲ್ಲಿ ಹೀಗೆ ಹೇಳಿದೆ ಆದರೆ ಇಂದು ಅದು ಪ್ರಸ್ತುತವಲ್ಲ ನಾವು ಕುರಾನ್ ನಲ್ಲಿ ಹೇಳಿದಂತೆ ಆಚರಿಸಬೇಕಾಗಿಲ್ಲ” ಅಂತ ಈ ಯಾವ ಲೇಖಕರೂ ಹೇಳುವುದಿಲ್ಲ. ಈ ಸ್ವಾತಂತ್ರ್ಯ ಯಾಕಿಲ್ಲ ಎಂದು ನಾವೆಲ್ಲ ಕೇಳಿಕೊಳ್ಳಬೇಕಾಗಿದೆ.(ಈ ಅರ್ಥದ ಕಮೆಂಟ್ ಒಂದನ್ನು ಕಟ್ಪಾಡಿಯವರ ಲೇಖನಕ್ಕೆ ಬರೆದದ್ದು ನಾನೇ. ಅವಸರದಲ್ಲಿ ಹೆಸರು ಕುಟ್ಟುವ ಮೊದಲೇ ಸಬ್ಮಿಟ್ ಒತ್ತಿಬಿಟ್ಟಿದ್ದೆ.ಕ್ಷಮಿಸಿ.). ಇದರ ಒಂದು ಪರೋಕ್ಷ ಪರಿಣಾಮವೆಂದರೆ ಹಿಂದು ಧರ್ಮ ಕೂಡ ವಿಮರ್ಶಾತೀತವೆಂಬ ಮನೋಭಾವ ಬೆಳೆಯುತ್ತಿರುವುದು. ಹುಸೇನರಂಥವರು ಹೆದರಬೇಕಾಗಿಬರುವುದು. ಆದರೆ ಹಿಂದುಗಳಲ್ಲಿ ಬಹುಸಂಖ್ಯಾತರು ಈಧೋರಣೆಯನ್ನು ಹೊಂದಿಲ್ಲ ಎನ್ನುವುದನ್ನೂ ಗಮನಿಸಬೇಕು. ವಿಮರ್ಶೆಗೆ ಹಿಂದು ಧರ್ಮ ಮತ್ತು ಅದರ ಗ್ರಂಥಗಳು ತೆರೆದುಕೊಂಡಿವೆ ಎಂದೇ ಬಹುಸಂಖ್ಯಾತ ಹಿಂದುಗಳು ಸರಿಯಾಗಿಯೇ ಒಪ್ಪುತ್ತಾರೆ.

ಮುಸ್ಲಿಮ್ ಬುದ್ಧಿಜೀವಿ ಎಂದೇ ಪ್ರಸಿದ್ಧರಾದ ಜಿಯವುದ್ದೀನ್ ಸರ್ದಾರ್ ಹೇಳುವ ಈ ಮಾತುಗಳನ್ನು ಗಮನಿಸಿ.”ಇಸ್ಲಾಮ್ ಗಿವ್ಸ್ ಫುಲ್ ಫ್ರೀಡಮ್ ಅಫ್ ರೇಶನಲ್ ಆಂಡ್ ಇಂಟಲ್ಲೆಕ್ಚುವಲ್ ಎನ್ಕ್ವಯರಿ ವಿತಿನ್ ದ ಸರ್ಕಂಫರೆನ್ಸ್ ಅಫ್ ಇಟ್ಸ್ ನಾರ್ಮ್ಸ್ ಅಂಡ್ ವ್ಯಾಲ್ಯೂಸ್” (ಅಕ್ಬರ್ ಅಹ್ಮದ್ ಸಂ.ಟು ಮುಸ್ಲಿಮ್ ಇಂತಲ್ಲೆಕ್ಚುವಲ್ಸ್ ಇನ್ ದ ಪೋಸ್ಟ್ ಮಾಡರ್ನ್ ವೆಸ್ಟ್, ಪು. ೧೯೭) ಪೂರ್ಣ ಸ್ವತಂತ್ರ್ಯವಿರುವುದು ಧರ್ಮದ ಪರಿಧಿಯ ಒಳಗೆ ಎನ್ನುವುದನ್ನು ಗಮನಿಸಿ.

ಕೆಲವು ವಿದ್ವಾಂಸರು ಮೂಲಭೂತವಾದ ಮತ್ತು ಕೋಮುವಾದ ಇವುಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಎರಡನೆಯದು ಮೊದಲನೆಯದಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸುವುದುಂಟು. ಮುಸ್ಲಿಮರದು ಮೂಲಭೂತವಾದ ; ಹಿಂದುಗಳದು ಕೋಮುವಾದ ಎಂಬ ಗ್ರಹಿಕೆ. ಅನಂತಮೂರ್ತಿಯವರು ಎಲ್ಲೋ ಹೇಳಿದ್ದು ನೆನಪು.” ಮುಸ್ಲಿಮರ ಮೂಲಭೂತವಾದದಿಂದ ಅವರು ನಾಶವಾಗುತ್ತಾರೆ; ಹಿಂದುಗಳ ಕೋಮುವಾದದಿಂದ ದೇಶವೇ ಸರ್ವನಾಶವಾಗುತ್ತದೆ ” ಎಂಬರ್ಥದಲ್ಲಿ. ಇದು ಪೂರ್ತಿ ಸರಿಯಲ್ಲ. ಇಲ್ಲಿ ಮೂಲಭೂತವಾದವೆನ್ನುವುದು ಐಸೋಲೇಟೆಡ್ ಆಗಿ ಇರಲು ಸಾಧ್ಯವಿಲ್ಲ. ಒಟ್ಟಿಗೇ ಬದುಕುವಾಗ ಅದರ ಪರಿಣಾಮ ಇನ್ನೊಬ್ಬನ ಮೇಲೂ ಆಗಿಯೇ ಆಗುತ್ತದೆ. ತರೀಕೆರೆಯವರೂ ಇಂಥದೇ ವ್ಯತ್ಯಾಸವನ್ನು ಮಾಡುತ್ತಾರೆನಿಸುತ್ತದೆ. ಇಲ್ಲ ಅಂತಾದರೆ ತಿದ್ದಿಕೊಳ್ಳಲು ತಯಾರಿದ್ದೇನೆ.

ಮುಸ್ಲಿಮರು ಹೆಚ್ಚು ಕರ್ಮಠರಾಗುವುದಕ್ಕೆ ಹಿಂದುತ್ವವಾದವೇ ಕಾರಣ ;ಬಾಬ್ರಿ ಮಸೀದಿ ಬೀಳಿಸಿದ್ದೇ ಕಾರಣ ಎನ್ನುವ ಪೊಪ್ಯುಲರ್ ನಂಬಿಕೆಯೊಂದಿದೆ.ಇದು ಕೂಡ ಸರಳೀಕರಣ. ವಾಸ್ತವವಾಗಿ ಬೆಹ್ರೆನ್ ಇಂಡೋನೇಶಿಯಗಳಂಥ ದೇಶಗಳಲ್ಲೂ ಮುಸ್ಲಿಮರು ಹೆಚ್ಚು ಕರ್ಮಠರಾಗುತ್ತಿದ್ದಾರೆ. ಪಾಕಿಸ್ತನ ತಾಲಿಬಾನ್ ಇತ್ಯಾದಿ ಹೇಗೂ ಇವೆಯಲ್ಲ? ಈಚೆಗೆ ಕರ್ಮಠತೆ ಹೆಚ್ಚಾಗುತ್ತಿರುವುದು ಧರ್ಮಗಳಲ್ಲಿಒಂದು ಜಾಗತಿಕ ವಿದ್ಯಮಾನವೋ ಏನೋ? ಜಾಗತಿಕ ಧರ್ಮವಾದ ಇಸ್ಲಾಮಿನಲ್ಲಿ ಇದು ಬಹುಶಃ ಹೆಚ್ಚಾಗಿ ಕಂಡರೆ ಅಚ್ಚರಿಯಿಲ್ಲ. ಗಲ್ಫ್ ದೇಶಗಳಲ್ಲಿ ಉದ್ಯೋಗ, ಅಲ್ಲಿ ಉಪವಾಸ ಮಾಸದಲ್ಲಿ ಬಹಿರಂಗವಾಗಿ ಆಹಾರ ಸೇವಿಸಲು ಅವಕಾಶ ಇಲ್ಲದಿರುವುದು,ಇತ್ಯಾದಿ ಸಮ್ಗತಿಗಳನ್ನು ಕಡೆಗಣಿಸಿ ಹಿಂದುತ್ವವಾದವನ್ನು ಕೇಂದ್ರೀಕರಿಸಿ ನಡೆಸುವ ವಿಶ್ಲೇಷಣೆಗಳು ಮೇಲುಸ್ತರದ ವಿಶ್ಲೇಷಣೆಗಳೇ ಆಗುತ್ತವೆ. ದ.ಕ.ವೇನೂ ನಿರ್ವಾತದಲ್ಲಿಲ್ಲ.ಕರಾವಳಿಯ ಹಿಂದುಗಳಿಗೂ ಮುಸ್ಲಿಮರಿಗೂ ಇಸ್ಲಮ್ ರಾಷ್ಟ್ರಗಳ ಸಂಪರ್ಕ ಹೆಚ್ಚು.ಅದು ಇಬ್ಬರ ಮೇಲೂ ವಿಭಿನ್ನ ರೀತಿಯಲ್ಲಿ ಪ್ರಭಾವ ಬೀರದೇ ಇರಲು ಸಾಧ್ಯವಿಲ್ಲ.

ಕೊನೆಬೆಡಿ:

ಕನ್ನಡಕ ಹಾಕದಿದ್ದರೆ ಕಣ್ಣು ಕಾಣುವುದಿಲ್ಲ. ಹಾಕಿದರೆ ಕನ್ನಡಕ ತೋರಿಸಿದ್ದೇ ಕಾಣುವುದು.

17 ಟಿಪ್ಪಣಿಗಳು Post a comment
  1. chukkichandira's avatar
    ನವೆಂ 22 2010

    ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ಕೋಮುಗಲಭೆ ಆಗಿರುವ ಸುದ್ಧಿ ಓದಿದ ನೆನಪು ನನಗಿಲ್ಲ. ಆದರೆ ರಾಜ್ಯದ ಇತರೆಡೆ ಆಗಾಗ ಆಗುತ್ತಿರುತ್ತದೆ. ಮೊನ್ನೆ ಯಲ್ಲಾಪುರದಲ್ಲೂ ನಡೆದಿತ್ತು. ಆದರೆ ದಕ್ಷಿಣ ಕನ್ನಡದಲ್ಲಿ ಸಣ್ಣ ಗಲಭೆಯಾದರೂ ವೈಭವಿಕರಿಸಲಾಗುತ್ತಿದೆ. ಯಾಕೆ ಹೀಗೆ..?

    ಉತ್ತರ
  2. ರವಿ's avatar
    Ravi
    ನವೆಂ 22 2010

    ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುವ ಸ್ವೇಚ್ಚಾಚಾರ ದೊಡ್ಡ ದುರಂತ. ಮಾಡುವ ಕೆಟ್ಟ ಕೆಲಸಗಳಿಗೆಲ್ಲ ಆಧುನಿಕತೆ, ಜಾತ್ಯತೀತತೆ ಇತ್ಯಾದಿ ಸೋಗು ಹಾಕುವ ನಾವು ಅದೇ ವೇಷದಲ್ಲಿ ದೇಶೋದ್ಧಾರದ ಕೆಲಸಗಳನ್ನು ಮಾಡುವುದಿಲ್ಲ. ಹೊಟ್ಟೆ ತುಂಬಿದ ಜನರೇ ಇಸಂ, ಹೋರಾಟ, ಮುಷ್ಕರಗಳನ್ನ ಮಾಡೋದು. ಕಮ್ಯುನಿಸಂನ ಕೊಡುಗೆ ಇದಕ್ಕೆ ಬಹಳ. ಕಮ್ಯುನಿಸಂ ಯಾವಾಗ ದೇಶದ ಹೊರಗೆ ಹೋಗುತ್ತದೋ ಅವತ್ತು ಜನ ಸೋಗಲಾಡಿತನವನ್ನ ಬಿಡ್ತಾರೆ. ಕೆಲಸ ಮಾಡ್ತಾರೆ. ಕೋಮುವಾದ ಆಗ್ಲಿ, ಮೂಲಭೂತವಾದ ಆಗ್ಲಿ ಹಾಗೂ ಮುಷ್ಕರಗಳನ್ನ ಆಗ್ಲಿ ಮರೀತಾರೆ. ಹಸಿವೆ ತಣಿಸೋ ಬಗ್ಗೆ ಯೋಚಿಸ್ತಾರೆ.

    ಉತ್ತರ
  3. ಮಹೇಶ ಪ್ರಸಾದ ನೀರ್ಕಜೆ's avatar
    ಮಹೇಶ ಪ್ರಸಾದ ನೀರ್ಕಜೆ
    ನವೆಂ 25 2010

    ಲೇಖಕರ ನಿಲುವಿಗೆ ನನ್ನದೂ ಸಹಮತವಿದೆ. ಈ ಬಗ್ಗೆ ಇನ್ನೂ ಹೆಚ್ಚು ಚರ್ಚೆ ಆಗಬೇಕಿದೆ.

    ಉತ್ತರ
  4. shihaullal's avatar
    ನವೆಂ 29 2010

    ಕೇವಲ ನಾಮ “ಸಾರಾ, ತಸ್ಲೀಮ” ಎ೦ದು ಇದ್ದರೆ ಅ೦ತವರನ್ನು ಮುಸ್ಲಿ೦ ಎ೦ದು ಹೇಳಲು ಸಾದ್ಯವಿಲ್ಲ. ಕೆಲವೊ೦ದು ನಾಮಗಳು ನಾವು ಸಾಕುವ ಮ್ರಗಗಳಿಗೆ ಸಮಾನವಾಗಿರುತ್ತದೆ ಅ೦ದ ಮಾತ್ರಕ್ಕೆ ಅದನ್ನು ಮುಸ್ಲಿ೦ ನಾಯಿ ,ಮುಸ್ಲಿ ಕುದುರೆ ,ಮುಸ್ಲಿ೦ ಒ೦ಟೆ ಎ೦ದು ಕರೆಯಲು ಸಾದ್ಯವಿಲ್ಲ.

    ಇಸ್ಲಾ೦ ಮಿನ ತತ್ವಗಳನ್ನು ಪಾಲಿಸಬೇಕು,ಇಸ್ಲಾ೦ ನ ಆಚಾರ ವಿಚಾರಗಳನ್ನು ತಪ್ಪದೇ ಚಾಚು ತಪ್ಪದೇ ಪಾಲಿಸಬೇಕು ಅ೦ತವರು ಮಾತ್ರ ಮುಸ್ಲಿ೦ ಆಗಿರುತ್ತಾರೆ.

    ಸಾರಾ ಅಬೂಬಕರ್ ರವರು ಕುರ್ ಆನ್ ನಲ್ಲಿ ಪರ್ದಾ ಬಗ್ಗೆ ಹೇಲಿಲ್ಲ ಎ೦ಬುವುದು ಅವರು ಕುರ್ ಆನ್ ಕಲಿಯದ ತಪ್ಪು. ಕುರ್ ಆನ್ ನಲ್ಲಿ ಬಹಳ ಸ್ಪಷ್ಟವಾಗಿ ಪರ್ದಾ ಬಗ್ಗೆ ಅಲ್ಲಹನು ಹೇಳಿದ್ದಾನೆ.

    ಸೂರ ನೂರ್ C24 V 31:

    (ಪೈಗಬರರೇ,) ಸತ್ಯವಿಶ್ವಾಸಿನಿಯರಿಗೆ ಹೇಳೀರಿ.

    “ಅವರು ತಮ್ಮ ದ್ರಷ್ಟಿಗಳನ್ನು ತಗ್ಗಿಸಿಕೊಳ್ಳಲಿ.ತಮ್ಮ ಸೌ೦ದರ್ಯವನ್ನು ಅದರಿ೦ದ ಪ್ರಕಟವಾಗುವ ಬಾಗವನ್ನು ಹೊರತು ಪಡಿಸಿ ತೋರಿಸದಿರಿ ತಮ್ಮ ಎದೆಯ ಮೇಲೆ ತಮ್ಮ ಮುಖ ಪರದೆಯನ್ನು ಎಳೆದು ಹಾಕಲಿ.”

    ಸೂರ ಅಲ್ ಅಝಾಬ್ C33 V59

    “ಓ ನಬಿಯವರೇ ತಮ್ಮ ಪತ್ನಿಯರಿಗೆ ,ಪುತ್ರಿಯರಿಗೆ ಸತ್ಯವಿಶ್ವಾಸಿಗಳಿಗೆ ಹೇಳಿರಿ ,ಅವರು ತಮ್ಮ ಚಾದರಗಳ ಸೆರಗನ್ನು ತಲೆಯ ಮೇಲಿ೦ದ ಇಳಿ ಬಿಟ್ಟು ಮುಖವನ್ನು ಮುಚ್ಚಿರಿ,ಇದು ಸ್ತ್ರೀಯರ ಮಾನ ಮರ್ಯಾದೆಯನ್ನು ರಕ್ಷಿಸಿ ಸಮಾಜವನ್ನು ಅಶ್ಲೀಲತೆ ,ಅನೈತಿಕತೆ ಮತ್ತು ಕೆಡಕುಗಳಿ೦ದ ರಕ್ಶಿಸುವ ಉತ್ತಮ ಮಾದ್ಯಮವಾಗಿದೆ.”

    ಇವೆರಡು ಪರ್ದಾ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಕೊಡುತ್ತದೆ, ಖ್ಯಾತ ಬರಹಗಾರ್ತಿ “ಕಮಲ” “ಸುರಯ್ಯ” ಆಗಿ ಪರಿವರ್ತನೆಯಾಗಲು ಕಾರಣ ಪರ್ದಾ ವಾಗಿದೆ .

    ಪರ್ದಾ ವು ಸ್ತ್ರೀಯರ ಸ್ವಾತ್ಯ೦ತ್ರವನ್ನು ಕಸಿಯುದಲ್ಲ ,ಸ್ತ್ರೀಯರ ರಕ್ಷಣೆಯಾಗಿದೆ. ಪರ್ದಾದಾರಿನಿಯ ಮೇಲೆ ಅತ್ಯಾಚಾರ ನಡೆದ ಒ೦ದೇ ಒ೦ದು ಕೇಸು ನಮಗೆ ಸಿಗಲು ಸಾದ್ಯವೇ ..?

    *ಅಮೇರಿಕಾ ಅಧ್ಯಕ್ಷ ಬೇರೆ ಕಡೆ ಹೋಗುವಾಗ ಹಿ೦ದೆ ಮು೦ದೆ ಅವರ ಬೋಡಿ ಗಾರ್ಡ್,(ಸೆಕ್ಯೂರೆಟಿ,) ಬೆನ್ನೆತ್ತುತ್ತಿರುತ್ತಾರೆ ,ಅ೦ದ ಮಾತ್ರಕ್ಕೆ ಅಧ್ಯಕ್ಷನ ಸ್ವಾತ್ಯ೦ತ್ರ ಕಸಿಯೂದಲ್ಲ ಅಲ್ಲಿ ,ಅದು ಅವರ ರಕ್ಷಣೆಯಾಗಿದೆ ಹೊರತು ಸ್ವಾತ್ಯ೦ತ್ರ ದ ಮೇಲೆ ನಿರ್ಬ೦ದ ಅಲ್ಲ. *

    ಉತ್ತರ
  5. ಮಹೇಶ ಪ್ರಸಾದ ನೀರ್ಕಜೆ's avatar
    ಮಹೇಶ ಪ್ರಸಾದ ನೀರ್ಕಜೆ
    ಡಿಸೆ 15 2010

    @shihaullal{ಅವರು ತಮ್ಮ ಚಾದರಗಳ ಸೆರಗನ್ನು ತಲೆಯ ಮೇಲಿ೦ದ ಇಳಿ ಬಿಟ್ಟು ಮುಖವನ್ನು ಮುಚ್ಚಿರಿ,ಇದು ಸ್ತ್ರೀಯರ ಮಾನ ಮರ್ಯಾದೆಯನ್ನು ರಕ್ಷಿಸಿ ಸಮಾಜವನ್ನು ಅಶ್ಲೀಲತೆ ,ಅನೈತಿಕತೆ ಮತ್ತು ಕೆಡಕುಗಳಿ೦ದ ರಕ್ಶಿಸುವ ಉತ್ತಮ ಮಾದ್ಯಮವಾಗಿದೆ}
    ಬುರ್ಖಾ ಕಡ್ಡಾಯವಾಗಿರುವ ಪಾಕಿಸ್ಥಾನ, ಅಫ್ಘಾನಿಸ್ಥಾನಗಳಲ್ಲಿ ಅತ್ಯಾಚಾರ ಎನ್ನುವುದು ಉಂಡು ಕೈತೊಳೆದಂತೆಯೇ ಸಾಮಾನ್ಯವಾಗಿರುವುದು ನಿಮ್ಮ ಮಾತಿಗೆ ವಿರೋಧಾಭಾಸದಂತೆ ಕಾಣುವುದಿಲ್ಲವೆ? ಅಲ್ಲದೆ ಅರಬ್ಬರು ಹೊರದೇಶದ ಹೆಣ್ಣುಗಳನ್ನೇಕೆ ದುಡ್ಡು ಕೊಟ್ಟು ಕೊಳ್ಳುತ್ತಾರೆ? ಬುರ್ಖಾಧಾರಿ ಮಹಿಳೆಯರು ಅವರಿಗೆ ರುಚಿಸುವುದಿಲ್ಲವೇ? ಇವೆಲ್ಲ ನನಗೆ ಉತ್ತರವಿಲ್ಲದ ಪ್ರಶ್ನೆಗಳು. ಉತ್ತರ ನಿಮಗೆ ಗೊತ್ತಿದ್ದರೆ ಹೇಳಿ ದಯವಿಟ್ಟು.

    ಉತ್ತರ
  6. shihaullal's avatar
    ಡಿಸೆ 16 2010

    ಮಹೇಶ್ ಪ್ರಸಾದ್ ರವರೇ,,
    ನನ್ನ ಮಾತಿಗೆ ವಿರೋದಬಾಸ ಎಲ್ಲಿ ಬ೦ತು ? ನಾನು ಮೊದಲೇ ಹೇಳಿದ೦ತೆ “ಕೇವಲ ನಾಮದಿ೦ದ ಒಬ್ಬ ನ/ಳ ನ್ನು ಮುಸ್ಲಿ೦ ಎ೦ದು ಕರೆಯಲು ಸಾದ್ಯವಿಲ್ಲ” ..ಬುರ್ಖಾ ಕಡ್ಡಾಯದ ಬಗ್ಗೆ ಹೊಲಸು ಪಾಕಿಸ್ತಾನ ವನ್ನು ಯಾಕೆ ತೋರಿಸುತ್ತೀರಿ?,

    ಮತ್ತೆ ..,ರುಚಿ ನೋಡುವರಿಗೆ “ರುಚಿ ಕೊಡ್ತೇವೆ ಬನ್ನಿ ಅನ್ನುವುದಾದರೆ ” ಬುರ್ಖಾ ಉಟ್ಟರೇನು? ಕಾವಿ ಉಟ್ಟರೇನು..? ನಿತ್ಯಾ ನ೦ದ ಸ್ವಾಮಿ ಯ ಹಾಗೆ…..

    ಉತ್ತರ
    • Mohammed Riyaz's avatar
      Mohammed Riyaz
      ಆಗಸ್ಟ್ 2 2011

      ಮಹೇಶ್ ಪ್ರಸಾದ್ ರವರೇ,
      ನೀವು ಯಾವುದೇ ಧರ್ಮದ ಬಗ್ಗೆ ತಿಳಿಯಬೇಕಾದರೆ, ಆ ಧರ್ಮದ ಅನುಯಾಯಿಗಳನ್ನು ನೋಡಿ ತಿಳಿಯಲು ಪ್ರಯತ್ನಿಸಬೇಡಿ. ಅದರಿ೦ದ ನಿಮಗೆ ಆ ಧರ್ಮದ ಬಗ್ಗೆ ತಪ್ಪು ಮಾಹಿತಿ ಸಿಗಬಹುದು.. ನೀವು ಆ ಧರ್ಮದ ಗ್ರ೦ಥವನ್ನು ಓದಿ ತಿಳಿಯಿರಿ.
      ಬುರ್ಖಾ ಧರಿಸುವುದು ಇಸ್ಲಾ೦ ನಲ್ಲಿ ಕಡ್ಡಾಯ. ಯಾಕೆ೦ದರೆ, ಕುರಾನ್ ನಲ್ಲಿ ಅಲ್ಲಾಹನು ಹೇಳುತ್ತಾನೆ ” “ಅವರು ತಮ್ಮ ದ್ರಷ್ಟಿಗಳನ್ನು ತಗ್ಗಿಸಿಕೊಳ್ಳಲಿ.ತಮ್ಮ ಸೌ೦ದರ್ಯವನ್ನು ಅದರಿ೦ದ ಪ್ರಕಟವಾಗುವ ಬಾಗವನ್ನು ಹೊರತು ಪಡಿಸಿ ತೋರಿಸದಿರಿ ತಮ್ಮ ಎದೆಯ ಮೇಲೆ ತಮ್ಮ ಮುಖ ಪರದೆಯನ್ನು ಎಳೆದು ಹಾಕಲಿ.” ಸೂರ ನೂರ್ C24 V 31:.
      ಬುರ್ಖಾ ಧರಿಸುವುದು, ಕೇವಲ ಇಸ್ಲಾ೦ನಲ್ಲಿ ಮಾತ್ರವಲ್ಲ ಹಿ೦ದು ಧರ್ಮದಲ್ಲಿ ಕೂಡ ಕಡ್ದಾಯ. ಆದರೆ ನಿಮಗೆ ಅದರಬಗ್ಗೆ ಅರಿವಿಲ್ಲಬಹುದು. ಮಹಾವೀರ ಚರಿತ್ರೆ, ಭಾಗ ೨, ಪುಟ ೭೧., ರಾಮ ಸೀತೆಗೆ ಹೇಳುತ್ತಾನೆ ” ಯಾವಾಗ ಪರಶುರಾಮ ಬರುತ್ತಾನೆ, ನೀವು ನಿಮ್ಮ ದ್ರಷ್ತಿಗಳನ್ನು ತಗ್ಗಿಸಿಕೊಳ್ಲಿ, ಹಾಗು, ತಲೆಯನ್ನು, ಬಟ್ಟೆಯಿ೦ದ ಮುಚ್ಚಿಕೊಳ್ಲಿ.”
      ಇನ್ನು, ವೇದಗಳೂ ಕೂಡ ಬುರ್ಖಾ ಪದ್ದತಿಯಬಗ್ಗೆ ಹೇಳುತ್ತವೆ.
      “ಬ್ರಹ್ಮ ನಿಮ್ಮನ್ನು ಹೆಣ್ಣಾಗಿ ಮಾಡಿದ್ದಾನೆ. ಆದ್ದರಿ೦ದ ನೀವು ನಿಮ್ಮ ದ್ರಷ್ಟಿಗಳನ್ನು ತಗ್ಗಿಸಿಕೊಳ್ಳಿ. ಕಣ್ಣೆತ್ತಿ ನೋಡಬೇಡಿರಿ. ನಿಮ್ಮ ಕಾಲುಗಳನ್ನು ಜೋಡಿಸಿ ನಿಲ್ಲಿರಿ. ಹಾಗು, ನಿಮ್ಮ ಬಟ್ಟೆ ಹಾಗು ದೇಹವನ್ನು ಮುಚ್ಚಿಕೊಳ್ಳಿರಿ. (ರಿಗ್ ವೇದ. ಪುಸ್ತಕ ೮, ಅದ್ಯಾಯ ೩೩, ವಾಕ್ಯ ೧೯)
      ಇನ್ನು, (ರಿಗ್ ವೇದ. ಪುಸ್ತಕ ೧೦ಅದ್ಯಾಯ ೮೫ವಾಕ್ಯ ೩೦.
      ಒಟ್ಟಿನಲ್ಲಿ ಹೆಳುವುದಾದರೆ, ಎಲ್ಲಾ ಧರ್ಮವು ಹೇಳುವುದು, ಒ೦ದೇ ಸಿದ್ದಾ೦ತ. ಆದರೆ, ಜನರು ದೇವರ ಮಾತಿಗಿ೦ತ, ಸ್ವಾಮಿಗಳು, ಇಮಾಮ್ ಗಳು, ಪಾದ್ರಿಗಳು ಹೇಳಿದ ಮಾತನ್ನು, ನ೦ಬುತ್ತಾರೆ. ದೇವರು ಕೊಟ್ಟ ಪುಸ್ತಕವನ್ನು, ಓದಿ ನೋಡಿದರೆ, ಎಲ್ಲ್ಲಾ ಸಮಸ್ಯೆ ಗಳಿಗೂ ಪರಿಹಾರ ಸಿಗುತ್ತದೆ.
      ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ, ನನಗೆ ಮಾಡಿ. ನಾನು ಯಾವಾಗಲೂ ಚರ್ಚೆಗೆ ಸಿದ್ದ.

      ಉತ್ತರ
  7. shihaullal's avatar
    ಡಿಸೆ 16 2010

    “ಉ೦ಡು ಕೈತೊಳೆದಷ್ಟು ಈಸಿ ಅ೦ದರೆ ಅದು ಅತ್ಯಾಚಾರ ಅಲ್ಲರೀ ಅದು “ಮೈಮಾರಾಟ” .
    ಅಸ್ಟಕ್ಕೂ ವಿಕೀಲೀಕ್ಸ್ ಗೂ ಸಿಗದ೦ತಹ ಈ ಮಾಹಿತಿ ನಿಮಗೆ ಎಲ್ಲಿ೦ದ ಸಿಕ್ಕಿತು ಹೇಳುವಿರಾ??

    ಉತ್ತರ
    • ಮಹೇಶ ಪ್ರಸಾದ ನೀರ್ಕಜೆ's avatar
      ಮಹೇಶ ಪ್ರಸಾದ ನೀರ್ಕಜೆ
      ಜನ 8 2011

      ನಿಮಗು ತಿಳಿಯುವ ಮನಸ್ಸಿದ್ದರೆ ಗೂಗಲ್ ನಲ್ಲಿ ಹುಡುಕಿ. ನಾನು ಹುಡುಕಿ ಕೊಟ್ಟರೆ ಏನು ಉಪಯೋಗ! ಮತ್ತೆ ಜಾಣ ಕುರುಡು ಇದ್ದವರಿಗೆ ಅಂಥವೆಲ್ಲ ಕಣಿಸದು, ಅದು ಬೇರೆ ವಿಷಯ.

      ಉತ್ತರ
  8. Panduranga's avatar
    Panduranga
    ಜನ 7 2011

    Dear Shiaullal

    pleas find one example. hope your qustion ಪರ್ದಾದಾರಿನಿಯ ಮೇಲೆ ಅತ್ಯಾಚಾರ ನಡೆದ ಒ೦ದೇ ಒ೦ದು ಕೇಸು ನಮಗೆ ಸಿಗಲು ಸಾದ್ಯವೇ ..? answered.

    24 Jun 2006 … Pakistan: Woman Raped for Leaving Islam. Another story about the desperate trouble in which apostates from Islam all too often find …
    link: http://www.jihadwatch.org/…/pakistan-woman-raped-for-leaving-islam.html

    ಉತ್ತರ
  9. iqbal's avatar
    iqbal
    ಆಗಸ್ಟ್ 2 2011

    “Women should not be like the moon which everyone sees uncovered, but women should be like the sun which makes eyes bow down before seeing it”

    ಉತ್ತರ
    • maaysa's avatar
      maaysa
      ಆಗಸ್ಟ್ 3 2011

      ಹೆಂಗಸರಿಗೆ ತಮ್ಮ ಜೀವನ ಹೇಗಿರಬೇಕು, ತಾವು ಹೀಗೆ ಬಟ್ಟೆ ತೊಡಬೇಕು ಎಂದು ತಾವೇ ನಿರ್ಧರಿಸುವ ಬುದ್ಧಿವಂತಿಕೆ ಇರುವುದಿಲ್ಲವೋ? ಬರುವುದಿಲ್ಲವೋ?

      ಅದು ಯಾಕೋ ಹೆಂಗಸೊಬ್ಬಳು ಎಂದೋ ಪ್ರವಾದಿ, ಗುರು, “ದೇವರ ಪುತ್ರಿ”, ಕಾಮ್ಮುನಿಸ್ತ ನಾಯಕಿ, ಜ್ಯೋತಿಷಿ ಆಗಿದ್ದೆ ಇಲ್ಲ.

      ರಣರಂಗದಲ್ಲಿ ಹೋರಾಡಿದ /ಆಡಳಿತಗಾರ್ತಿಯರಾದ ಅಬ್ಬಕ್ಕ, ಚೆನ್ನಮ್ಮ, ಓಬವ್ವ, ಎಲಿಜಬೆಥ್, ಇಂದಿರಾ ಗಾಂಧೀ, ಇವರೆಲ್ಲ ಹೆಂಗಸರಿಗೂ ಬುದ್ಧಿಮತ್ತೆ ಹಾಗು ಧೈರ್ಯ ಇದೆ ಎಂದು ತೋರಿಸಿದ್ದಾರಲ್ಲ.! ಅದು ಯಾಕೋ ಹೆಚ್ಚಿನ ಧರ್ಮಗಳಿಗೆ ಹೆಂಗಸರು ಮಾತ್ರ ಎಂದೂ ಮೈಲಿಗೆ.

      ಉತ್ತರ
  10. parupattedara's avatar
    ಆಗಸ್ಟ್ 2 2011

    bahala uttamavada lekhana 🙂 illi yava dharma hechu yava dharma kadimeyu alla. namma dharmavannu acharisona adaralliruva kandacharagalannu alisona, bere dharmagalanna gowravisona avara dharmada kandacharagalige avarige arividdalli tiddukollali ilavadare anubhavisali,

    ಉತ್ತರ
  11. maaysa's avatar
    maaysa
    ಆಗಸ್ಟ್ 3 2011

    ರಿಲಿಜನ್ ಎಂಬುದು ಎರಡು ತೆರನಾದುದು ..
    ೧) ದೇವರು ಎಂಬ ಸಂಗತಿಯ ಸುತ್ತ ಇರುವುವು .. ಇಸ್ಲಾಂ, ಕ್ರಿಸ್ತೀಯ, ಹೀಗೆ.
    ೨) ರಾಜ್ಯ ಹೇರುವ ಕಟ್ಟುಪಾಡು ಹಾಗು ನಂಬಿಕೆಗಳ ರಿಲಿಜನ್… ಕಾಮ್ಮುನಿಸಂ, ಫ್ಯಾಸಿಸಂ, ಅತಿ-ರಾಷ್ಟ್ರೀಯತೆ(ನನ್ನ ದೇಶ ಮಿಕ್ಕ ಎಲ್ಲದಕ್ಕಿಂದ ಮೇಲು), ರಸಿಸಂ.. ಹೀಗೆ.

    ಆದರೆ ಈ ಸಂಗತಿಯ ಉಸಾಬರಿಯೇ ಬೇಡ ಎಂದು ಈ ‘ಧರ್ಮಸಂಕಟ’ದಿಂದ ದೂರವಿರುವ ನಾಸ್ತಿಕವರ್ಗವೂ ಇದೆ. ಇವರಿಗೆ ಇವರೇ ಸ್ವೇಚ್ಛೆ ಯಂತೆ ಬದುಕಲು ಒಂದು ಸ್ವತಂತ್ರವಾದ ಸಾಮಾಜಿಕ ವಾತಾವರಣ ಕಾನೂನಿನಿಂದ ಬೇಕಷ್ಟೇ.

    ಯಾವ ಧಾರ್ಮಿಕ/ಅಧಾರ್ಮಿಕ ಗುಂಪು ಹೇರ-ಮತದ ಜತೆ ಸಹಿಷ್ಣು-ವಾಗಿ ಇರುವುದೋ ಅದಕ್ಕೆ ಎಲ್ಲೂ ಹೆಚ್ಚಿನ ವಿರೋಧವಿಲ್ಲ. ಅಸಹಿಷ್ಣು ರಿಲಿಜನ್ಗಳು ಎಲ್ಲ ಗುಂಪಿನಿಂದಲೂ ತಿರಸ್ಕರಿಸಲ್ಪಡುವುವು.

    ಉತ್ತರ
  12. Kumar's avatar
    Kumar
    ಆಗಸ್ಟ್ 3 2011

    Religion ಅಂದರೆ ಧರ್ಮ ಅಲ್ಲ.
    ಧರ್ಮ ಎನ್ನುವ ಪದಕ್ಕೆ ಇಂಗ್ಲಿಷಿನಲ್ಲಿ ಪರ್ಯಾಯ ಪದವಿಲ್ಲ.
    Religion ಅಂದರೆ ಮತ ಅಥವಾ ಸಂಪ್ರದಾಯ ಎನ್ನಬಹುದು.
    ಧರ್ಮ ಎನ್ನುವುದು ದೇವರಿಗೆ ಸಂಬಂಧಿಸಿದ್ದಲ್ಲ – ಧರ್ಮದೊಳಗೆ ನಾಸ್ತಿಕನೂ ಬರುತ್ತಾನೆ, ವಿಗ್ರಹಾರಾಧಕನೂ ಬರುತ್ತಾನೆ, ನಿರ್ಗುಣೋಪಾಸಕನೂ ಬರುತ್ತಾನೆ.
    ಧರ್ಮಕ್ಕೂ ಮತ-ಸಂಪ್ರದಾಯಗಳಿಗೂ ಸಂಬಂಧವಿಲ್ಲ.

    ಉತ್ತರ
  13. Discover Success's avatar
    ಆಗಸ್ಟ್ 3 2011

    ಅತ್ಯಂತ ಮುಖ್ಯವಾಗಿ ನಮ್ಮ ಮದ್ಯೆ ಇರುವ socalled ಬುದ್ದಿಜೀವಿಗಳನ್ನು ನಾವು ವಿರೋದಿಸಬೇಕು. ಅದೇ ಒಬ್ಬ ಮುಸ್ಲಿಂ ಬೋದಕ ಹಿಂದೂಗಳ ಬಾವನೆಗಳಿಗೆ ಒತ್ತಾಸೆಯಾಗಿ ನಿಂತರೆ ಆ ವ್ಯಕ್ತಿಯನ್ನು ಅವರ ಧರ್ಮದವರೇ ನೋಡುವ ರೀತಿ ಬೇರೆ. ಆದರೆ ಹಿಂದೂಗಳಲ್ಲಿ ಅಂತಹವರನ್ನೆ ಬುದ್ದಿಜೀವಿಗಳೆಂದು ಪರಿಗಣಿಸಿ ನಾವು ಅವರ ಮಾತಿಗೆ ಬೆಲೆ ಕೊಡುತ್ತಿದ್ದೇವೆ. ತಪ್ಪಾಗುತ್ತಿರುವುದು ಅಲ್ಲಿಯೇ.

    ಉದಾಹರಣೆಗೆ ಇಷ್ಟು ವರ್ಷಗಳಲ್ಲಿ ಕಾಂಗ್ರೆಸ್ ಎಂದೂ ಮುಸ್ಲಿಂ ಭಯೋತ್ಪಾದನೆ ಎಂದು ಹೇಳಿರಲಿಲ್ಲ, ಆದರೆ ಒಂದು ಘಟನೆಯ ನಂತರ ಹಿಂದೂ ಭಯೋತ್ಪಾದನೆ ಎಂಬ ಪದವನ್ನು ಮಾನ್ಯ ಚಿದಂಬರಂ ಸಾರ್ವಜನಿಕವಾಗಿ ಹೇಳಿದರು. ಇಂತಹವರನ್ನು ನಾವು ವಿರೋದಿಸಬೇಕು…
    ಕೊನೆಗೂ..
    ಹಿಂದೂ ದರ್ಮ ಹೇಳುವುದೇ.. ಸರ್ವೆ ಜನೋ ಸುಖಿನೋಭವಂತೂಃ.,

    ಉತ್ತರ

Leave a reply to ಮಹೇಶ ಪ್ರಸಾದ ನೀರ್ಕಜೆ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments