ಭೈರಪ್ಪ ಮತ್ತು ತರ್ಲೆ ರಾಜ್ಯ ರಾಜಕೀಯ…
-ಶಂಶೀರ್, ಬುಡೋಳಿ
ಇವರೆಗೆ ನೀವು ಜೆಡಿಎಸ್, ಕಾಂಗ್ರೆಸ್ಸನ್ನು ಬಿಜೆಪಿ ತಮ್ಮ ತರಲೆ ಮನೋಸ್ಥಿತಿಯ ಮೂಲಕ ತರಾಟೆಗೆ ತೆಗೆದುಕೊಂಡಿರುವುದನ್ನು ನೋಡಿರಬಹುದು. ಆದರೆ ಈಗ ನಡೆದಿರುವುದು ವಿಶೇಷವೇನೂ ಅಲ್ಲವಾದರೂ ರಾಜಕೀಯ ವ್ಯಕ್ತಿಯಲ್ಲದ, ರಾಜಕೀಯ ಪರ ಮಾತನಾಡುವ ಸಾಹಿತಿಯೊಬ್ಬರು ತಮ್ಮ ಮನೋಸ್ಥಿತಿಯನ್ನು, ಕೋಮುವಾದಿ ಸಾಹಿತಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ಕನ್ನಡ ಸಾಹಿತಿ ಎಸ್.ಎಲ್.ಭೈರಪ್ಪ ಹೊರಗೆಡುವ ಮೂಲಕ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ. 
ಹೆಚ್ಚಿನದಾಗಿ ತಮ್ಮ ಕೃತಿಗಳಲ್ಲಿ ಜಾತಿ, ಧರ್ಮಗಳ ಬಗ್ಗೆ ಮಾತನಾಡುತ್ತಿದ್ದ ಭೈರಪ್ಪನವರು, ಏಕಾಏಕಿ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರ ಹೊತ್ತಿನಲ್ಲಿ ಗುಜರಾತ್ ಮಾದರಿ ರಾಜಕೀಯವನ್ನು ಮುಂದಿಟ್ಟುಕೊಂಡು ಕರ್ನಾಟಕ ಸರಕಾರವನ್ನು ಬೆಂಬಲಿಸಬೇಕೆಂದು ಪರೋಕ್ಷವಾಗಿ ಕರೆ ಕೊಟ್ಟಿದ್ದಾರೆ. ತಾನು ವಾಸಿಸುವ, ಜನ್ಮ ತಾಳಿದ ಕರ್ನಾಟಕದ ರಾಜ್ಯದ ಜನರ ಮನಸ್ಥಿತಿಯನ್ನು ತರಲೆಗೆ ಹೊಲಿಸಿರುವ ಇಂತಹವರನ್ನು ಏನೆನ್ನಬೇಕು? ಕರ್ನಾಟಕ ರಾಜ್ಯದ ಜನರ ತರ‍್ಲೆ ಮನೋಸ್ಥಿತಿಯೇ ರಾಜ್ಯದ ಅಭಿವೃದ್ದಿಗೆ ಅಡ್ಡಿಯಾಗಿದೆ ಎಂದು ಇವರು ಹೇಳಿದ್ದು ತಪ್ಪಾಗಿದೆ ಎಂದೆನಿಸುತ್ತದೆ. ನಿಜವಾದ ಕಾರಣವೆಂದರೆ ರಾಜ್ಯ ಸಚಿವ ಸಂಪುಟದ ತರ‍್ಲೆ ಮನೋಸ್ಥಿತಿಯೆ ರಾಜ್ಯದ ಅಭಿವೃದ್ದಿಗೆ ಅಡ್ಡಿಯಾಗುತ್ತಿದೆ ಎಂದು ಹೇಳಬೇಕಾಗಿತ್ತು. ಆದರೆ ಭೈರಪ್ಪನವರು ಬೇಕೆಂತಲೂ ಅಥವಾ ಗೊತ್ತಿಲ್ಲದೆಯೋ ಇಂತಹ ಹೇಳಿಕೆ ಕೊಡುವ ಮೂಲಕ ಮತ್ತೊಮ್ಮೆ ತಮ್ಮ ಮನೋಸ್ಥಿತಿಯ ಅತಂತ್ರತೆಯನ್ನು ಬಿಚ್ಚಿಟ್ಟಿದ್ದಾರೆ ಎಂದೆನಿಸುತ್ತದೆ.
ಗುಜರಾತ್ ಎಂದಾಕ್ಷಣ ನೆನಪಿಗೆ ಬರುವುದು ಗುಜರಾತ್ ಹತ್ಯಾಕಾಂಡ. ಇದನ್ನೇ ಮೋದಿ ಮಾದರಿ ಎಂದು ಹೇಳುವ ಭೈರಪ್ಪನವರು ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಆಡಳಿತಕ್ಕೆ ಬಂದ ಬಿಜೆಪಿ ನೇತೃತ್ವದ ಸರಕಾರ ಕರ್ನಾಟಕದಲ್ಲಿ ತಮ್ಮ ನಿರೀಕ್ಷೆಗನುಗುಣವಾಗಿ ಮುಸ್ಲಿಮರ ಹತ್ಯಾಕಾಂಡ ಮಾಡಿಲ್ಲವೆಂಬುದು ಇವರ ಈ ಹೇಳಿಕೆಯ ಕಳಕಳಿಯಾಗಿದೆ. ಇದನ್ನು ಮಾಡಿಬಿಟ್ಟರೆ ಇದನ್ನು ಮುಂದೆ ಭೈರಪ್ಪನವರು ಹೋದ ಕಡೆಯಲ್ಲೆಲ್ಲಾ ಯಡ್ಡಿ ಮಾದರಿ ಎನ್ನಬಹುದು. ಕರ್ನಾಟಕ ರಾಜ್ಯ ನಿರೀಕ್ಷಿತ ಮಟ್ಟದಲ್ಲಿ ಶೈಕ್ಷಣಿಕ, ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ದಿ ಸಾಧಿಸಲು ಆಗಿಲ್ಲವೆಂಬುದು ನಿಜ. ಆರಂಭದಿಂದಲೂ ಶನಿಕಾಟವೆಂಬಂತೆ ಯಡಿಯೂರಪ್ಪ ಸರಕಾರ ಗೊಂದಲ, ಅತಂತ್ರಗಳ ಮೂಲಕ ಮೂರು ವರ್ಷ ಪೂರೈಸಿದೆ. ಇನ್ನು ಉಳಿದಿರುವ ಎರಡು ವರ್ಷಗಳ ಕಾಲ ಇವರು ಆಡಳಿತ ಮಾಡುವುದು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಭಾಗ್ಯಲಕ್ಷ್ಮಿ, ಉಚಿತ ಮಧ್ಯಾಹ್ನದೂಟ, ಉಚಿತ ಸೈಕಲ್ ವಿತರಣೆ, ಉದ್ಯೋಗ ಖಾತ್ರಿ ಯೋಜನೆ ಹೀಗೆ ಕೆಲ ಅಭಿವೃದ್ದಿಯಾತ್ಮಕ ಯೋಜನೆಗಳನ್ನು ಬಿಟ್ಟರೆ ರಾಜ್ಯ ಸರಕಾರ ಹಗ್ಗಾಜಗ್ಗಾಟದಲ್ಲಿಯೇ ಕಾಲ ಕಳೆಯುತ್ತಿದೆ.
ಕೇವಲ ಅಭಿವೃದ್ದಿಗಿಂತ ಆಡಳಿತದಾಸೆಯೇ ನಮ್ಮ ಧ್ಯೇಯವೆಂಬತೆ ವರ್ತಿಸಿದರೆ ಯಾವ ರಾಜ್ಯದ ಜನತೆ ಆ ಸರಕಾರಕ್ಕೆ ಬೆಂಬಲ ನೀಡಿತು? ನೀವೇ ಹೇಳಿ? ಅಭಿವೃದ್ದಿಯ ವಿಷಯ ಬಂದಾಗ ಭೈರಪ್ಪನವರಿಗೆ ದೇಶದಲ್ಲಿ ಗುಜರಾತ್ ಮಾತ್ರ ಉದಾಹರಣೆಯಾಗಿ ಸಿಕ್ಕಿದ್ದು ವಿಪರ್ಯಾಸವೆನಿಸುತ್ತದೆ. ತಮ್ಮ ಮನೋಸ್ಥಿತಿಯನ್ನು ಬಲಪಂಥೀಯರಿಗೆ ಮೀಸಲಿಟ್ಟಿರುವಂತೆ ಕಾಣುವ ಭೈರಪ್ಪನನವರು ಇತ್ತೀಚಿಗೆ ಕವಲು ಕಾದಂಬರಿ ಮೂಲಕ ತಮ್ಮ ಮನೋಸ್ಥಿತಿಯ ಕರಾಳತೆಯನ್ನು ಪ್ರದರ್ಶಿಸಿದ್ದರು. ಹಾಲಪ್ಪ ಪ್ರಕರಣ, ಅಕ್ರಮ ಗಣಿಗಾರಿಕೆ, ಕೆಐಎಡಿಬಿ ಪ್ರಕರಣ,ಮುಖ್ಯಮಂತ್ರಿ ಕುಟುಂಬದ ಭೂಹಗರಣ, ಭ್ರಷ್ಟಾಚಾರ ಹಾಗೂ ಕಟ್ಟಾ ಹಗರಣ ಹೀಗೆ ಮುಂತಾದ ಭ್ರಷ್ಟಾಚಾರದಂತಹ ಪ್ರಕರಣಗಳಿಗೆ ರಾಜ್ಯದ ಜನತೆ ಬೆಂಬಲ ನೀಡದಿದ್ದುದು ಭೈರಪ್ಪನವರಿಗೆ ಕೋಪ ತಂದಿದೆ. ಹೀಗಾಗಿ ಒಮ್ಮೆಲೆ ರಾಜ್ಯದ ಜನತೆಯ ಮನೋಸ್ಥಿತಿ ತರಲೆ ಎಂದು ಬೊಬ್ಬಿಟ್ಟಿದ್ದಾರೆ. ಇಷ್ಟಕ್ಕೆ ರಾಜ್ಯದ ಜನತೆಯೇನೂ ಹೆದರಬೇಕಾಗಿಲ್ಲ.
ರಾಜ್ಯ ಸರಕಾರದ ಅಧಿಕಾರದಾಸೆಯ ಹಗ್ಗಾಜಗ್ಗಾಟವನ್ನು ಕೇವಲ ವಿರೋಧ ಪಕ್ಷಗಳು ಮಾತ್ರ ವಿರೋಧಿಸುತ್ತಿಲ್ಲ. ಬದಲಾಗಿ ರಾಜ್ಯದ ಜನತೆಗೇನೆ ರಾಜ್ಯ ಸಚಿವ ಸಂಪುಟದೊಳಗಿನ ಭಿನ್ನಮತವನ್ನು ನೋಡಿ ಹೇಸಿಗೆ ಮೂಡಿಸಿದೆ.ಸದ್ಯ ಯಡಿಯೂರಪ್ಪ ನೇತೃತ್ವದವರು ಸ್ಪಲ್ಪ ಮೌನವಾಗಿರಬಹುದು. ಆದರೆ ರಾಜ್ಯ ಸರಕಾರ ಸಂಪುಟದೊಳಗೆ ಯಾವಾಗ, ಏನು ನಡೆಯುತ್ತದೆ ಎಂಬುದು ಕೂತೂಹಲ.ಯಾಕೆಂದರೆ ರೆಡ್ಡಿ ಬಣ, ಯಡ್ಡಿ ಬಣವನ್ನು ಹೊಡೆದುರುಳಿಸಿ ತಾವು ಸರಕಾರ ಏರುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ರಾಜ್ಯ ಸಚಿವ ಸಂಪುಟದೊಳಗೆ ಎರಡು ಬಣ ಸೃಷ್ಟಿಯಾಗಿದೆ. ಹೀಗಾಗಿ ಅಭಿವೃದ್ದಿ, ಒಗ್ಗಟ್ಟಿಗರು ಎಂದು ಪ್ರತಿಜ್ಞೆಗೈದು ಅಧಿಕಾರಕ್ಕೇರಿದ್ದ ಬಿಜೆಪಿ ನೇತೃತ್ವದ ರಾಜ್ಯ ಸರಕಾರದೊಳಗೆ ಭಿನ್ನಮತ ಸ್ಪೋಟಗೊಂಡಿದ್ದನ್ನು ನೋಡಿದರೆ, ಬಸವಣ್ಣನವರ ಮನೆಯೊಳಗನ …ವಚನ ನೆನಪಿಗೆ ಬರುತ್ತದೆ.
ಒಂಥರಾ ಜನವಿರೋಧಿ ಮನೋಭಾವನೆಯನ್ನು ಭೈರಪ್ಪನವರು ಬೆಳೆಸಿಕೊಂಡಿದ್ದಾರೆ. ಬೆಲೆ ಕುಸಿತಕ್ಕಾಗಿ ರಾಜ್ಯ ಸರಕಾರದ ವಿರುದ್ದ ತಮ್ಮ ಬೆಲೆಗೆ ಸೂಕ್ತ ಬೆಲೆ ನಿಗದಿ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದ ರೈತರನ್ನು ತರಾಟೆಗೆ ತೆಗೆದುಕೊಂಡಿರುವ ಭೈರಪ್ಪನವರಿಗೆ ರಾಜ್ಯದ ರೈತರ ಹಿತ ಬೇಕಾಗಿಲ್ಲ. ಬದಲು ಬಂಡವಾಳಶಾಹಿ ಕಂಪನಿಗಳ ಸ್ಥಾಪನೆಗೆ ರಾಜ್ಯದ ರೈತರು ತಮ್ಮ ಕೃಷಿ ಭೂಮಿಯನ್ನು ಮಾರಾಟ ಬೇಕಾಗಿತ್ತು ಎಂದು ಹೇಳಿರುವುದು ಜನವಿರೋಧಿ ಹೇಳಿಕೆಯಲ್ಲವೇ? ಯಾಕೆ ರಾಜ್ಯ ಸರಕಾರ, ಭೈರಪ್ಪನವರ ಮೇಲೆ ಪ್ರಕರಣ ದಾಖಲಿಸಿಲ್ಲ?
ಭೈರಪ್ಪನವರು ಸಾಹಿತಿಯಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ. ಆದರೆ ಸಾಹಿತಿಯಾದ ಇವರು ತಮ್ಮನ್ನು ತಾವು ವಿಚಾರವಂತ ಎನಿಸಿಕೊಳ್ಳಲು ಜನವಿರೋಧಿ ಮನೋಭಾವವನ್ನು ಪಸರಿಸುತ್ತಿರುವುದು ಹಾಗೂ ಜನವಿರೋಧಿ ಬರೆಹಗಳನ್ನು ಬರೆಯುತ್ತಿರುವುದು ಯಾಕೆ? ಸುದ್ದಿಗೆ ಗ್ರಾಸವಾಗಬೇಕೆಂದರೆ ಇಂತಹ ಹೇಳಿಕೆ ಕೊಡುತ್ತಿರುವುದು ಇಂದು ಸಾಮಾನ್ಯವಾಗಿಬಿಟ್ಟಿದೆ ಎಂದು ಹೇಳುವುದಕ್ಕಿಂತ ಇದೊಂದು ಸಂಪ್ರಾದಾಯವಾಗಿಬಿಟ್ಟಿದೆ ಎಂದು ಹೇಳಬಹುದು. ಕರ್ನಾಟಕದಲ್ಲಿ ನ್ಯಾನೋ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ ಎದುರಾದ ವಿರೋಧ ಸಹ ಇವರಿಗೆ ಬೇಸರ ತಂದಿದೆಯಂತೆ. ಹೀಗಾಗಿ ಈ ಕುರಿತು ಸಹ ರಾಜ್ಯದ ಜನತೆ ತರ‍್ಲೆ ಎಂದು ಅಪಾದಿಸಿದ್ದಾರೆ ಇವರು. ಇದಕ್ಕಾಗಿ ನಾವು ಅಳಬೇಕೋ? ನಗಬೇಕೋ? ನೀವೇ ಹೇಳಿ.?
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಇವರೆಗಿನ ರಾಜಕೀಯದಲ್ಲಿ ಕಂಡರಿಯದ ಭ್ರಷ್ಟಾಚಾರ, ಭೂಕಬಳಿಕೆ ಸಾಮಾನ್ಯ ಎಂದ ಭೈರಪ್ಪನವರೇ, ನೀವು ಈ ಮೂಲಕ ರಾಜ್ಯದ ಜನತೆ ಇದಕ್ಕೆಲ್ಲಾ ಕಣ್ಣುಮುಚ್ಚಿಕೊಂಡು ಮುಖ್ಯಮಂತ್ರಿ ಮತ್ತು ಇತರ ಸಚಿವರನ್ನು ನೀವು ಮಾಡಿದ್ದು ಸರಿ ಎಂದು ಬೆನ್ನುತಟ್ಟಬೇಕಾಗಿತ್ತೇ? ಭೂಕಬಳಿಕೆ ಮೂಲಕ ರಾಜ್ಯದ ಸಂಪತ್ತನ್ನೇ ಕಬಳಿಸಿದ ಮುಖ್ಯಮಂತ್ರಿ ಮತ್ತು ರಾಜ್ಯ ಸಚಿವ ಸಂಪುಟದವರನ್ನು ಛಿ, ಥೂ ಎನ್ನುವ ಬದಲು ಹಾಗೂ ವಿರೋಧಿಸುವ ಬದಲು ಇದಕ್ಕೆಲ್ಲಾ ಸಮ್ಮತಿ ನೀಡಬೇಕೆಂದು ಹೇಳಿರುವುದು ಭೈರಪ್ಪನವರು ರಾಜ್ಯಕ್ಕೆ ಎಸಗಿದ ದ್ರೋಹವಾಗಿದೆ.
ಇವತ್ತು ಕರ್ನಾಟಕ ರಾಜಕೀಯ ರಂಗದಲ್ಲಿ ಉಂಟಾಗಿರುವುದು ಕೇವಲ ಒಂದು ಪಕ್ಷದ ಮೇಲಿನ ಅಸಮಾಧಾನ ಮಾತ್ರವಲ್ಲ, ರಾಜ್ಯ ಸರಕಾರದ ಮೇಲೆ ರಾಜ್ಯದ ಜನತೆಗೆ ಅಸಮಾಧಾನ ಮೂಡಿದೆ. ಅಭಿವೃದ್ದಿ..ಅಭಿವೃದ್ದಿ ಎಂದು ಹೇಳುತ್ತಾ ಕುರ್ಚಿಗಾಗಿ ಕಾಲೆಳೆಯುವ ಕಸರತ್ತು ಮೂಲಕ ವರ್ಷ ಕಳೆದರೆ ಅದನ್ನು ಅಭಿವೃದ್ದಿ ಎಂದರೆ ನಿಜವಾದ ಅಭಿವೃದ್ದಿಯ ಹೆಸರಿಗೆ ಅಪಚಾರ ಮಾಡಿದಂತಾಗುತ್ತದೆ. ಇನ್ನಾದರೂ, ಎಸ್.ಎಲ್.ಭೈರಪ್ಪನವರು ಅಭಿವೃದ್ದಿ ಎಂಬುದರ ಕುರಿತು ಸರಿಯಾಗಿ ಅರ್ಥಮಾಡಿಕೊಂಡರೆ ಸಾಕು. ಅದು ಬಿಟ್ಟು ತಾನು ಅಥವಾ ಯಡಿಯೂರಪ್ಪ ಹೇಳಿದಾಗೆ ರಾಜ್ಯದ ಜನತೆ ಕೇಳಬೇಕೆಂದು ಬಯಸಿದರೆ ಜನತೆಗೇನೂ ಸ್ವಂತಿಕೆಯೆಂಬುದು ಇಲ್ಲವೇನೂ?
(The views expressed here are of the respective author(s) and Nilume administration does not necessarily subscribe to them)





ಅವರು ಹೇಳಿದ್ದೇನು ಅನ್ನುವುದರ ಬಗ್ಗೆ ಅವರೇ ಎರಡು ದಿನಗಳ ನಂತರ ಸ್ಪಷ್ಟೀಕರಣ ನೀಡಿದ್ದು, ಅದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ನೀವು ಅದನ್ನೊಮ್ಮೆ ಓದಿಕೊಂಡಿದ್ದರೆ, ಈ ಬರಹದ ಆವಶ್ಯಕತೆ ಇರುತ್ತಿರಲಿಲ್ಲವೇನೋ.
ಭೈರಪ್ಪನವರು ಅವರ ವೈಯುಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿರಬಹುದು ಅಷ್ಟೆ. ಆಸು ಹೆಗ್ಡೆ ಅವರು ಹೇಳಿದಂತೆ, ಅವರ ಸ್ಪಷ್ಟೀಕರಣ ಓದಿದ್ದರೆ ಈ ಬರಹವೇ ಬೇಕಿರಲಿಲ್ಲ. ಗುಜರಾತ್ ಎಂದರೆ, ಹತ್ಯಾಕಾಂಡ ಒಂದೇ ನಿಮ್ಮ ತಲೆಗೆ ಬಂದರೆ, ಅದು ನಿಮ್ಮ ದುರ್ದೈವ. ಭೈರಪ್ಪನವರು ಗುಜರಾತ್ ಅನ್ನು ಮಾಧರಿ ರಾಜ್ಯವೆನ್ನುವುದರಲ್ಲಿ ತಪ್ಪೇನು ಇಲ್ಲ, ಅದು ಖಂಡಿತವಾಗಿಯು ಪ್ರಗತಿಯಲ್ಲಿ ಸಾಗಿರುವ ರಾಜ್ಯವೇ ಹೌದು.
bhariappanavaru yeddi supportge nilluvudu bekiralilla. sukaa-summane tarle maadi-kondiddare.kevala kelavara udyoga ,srimanthike-goskara saavirraru ekere uluva bhoomi ,noooraaru krushikarannu kangaalu maaduva abhivruddhiya naataka-kke tere eleyuvudu yaaru?
{ಗುಜರಾತ್ ಎಂದಾಕ್ಷಣ ನೆನಪಿಗೆ ಬರುವುದು ಗುಜರಾತ್ ಹತ್ಯಾಕಾಂಡ}
ಯಾರಿಗೆ? ಸ್ವರತಿ ಮಾಡಿಕೊಳ್ಳುವ ಕೆಲವರಿಗಷ್ಟೇ ಇರಬಹುದು. ನನಗೆ ನೆನಪಿಗೆ ಬರುವುದು ಸ್ವಚ್ಚ ಆಡಳಿತ ಮತ್ತು ಮೈನಾರಿಟಿಗಳನ್ನು ಓಲೈಸದೇ ಚುನಾವಣೆಗಳನ್ನು ಗೆಲ್ಲಬಲ್ಲ ಛಾತಿ.
ಗುಜರಾತ್ ಎಂದಾಕ್ಷಣ ನನಗೆ ನೆನಪಿಗೆ ಬರುವುದು ಪೋರ್ ಬಂದರ್, ಮೋಹನದಾಸ ಕರಮ ಚಂದ ಗಾಂಧಿ, ಸಾಬರಮತಿ ಆಶ್ರಮ ಹಾಗೂ ದಂಡೀ ಯಾತ್ರೆ!
ಗುಜರಾತ್ – ಗಾಂಧೀಜಿ (ಬೌದ್ಧಿಕ ಸಾಮಾಜಿಕ) ಇರಬಹುದು ಮೋದಿ (ಆರ್ಥಿಕ) ಇರಬಹುದು, ಅಭಿವೃದ್ಧಿಯೇ ಅವರ ಮಂತ್ರ.
ಪರರನ್ನು ದೂಷಿಸುವ ನಮ್ಮ ಜಾಣ್ಮೆಯನ್ನು (hypocrisy) ಬಿಟ್ಟು, ನಮ್ಮ ದೋಷಗಳನ್ನ ನಾವು ತಿದ್ದಿಕೊಂಡರೆ ಉದ್ಧಾರವಾಗುವುದು ನಾವೆ.
ಬಹುಷಃ ಬುದ್ಧಿಜೀವಿಗಳು ಕಾದಂಬರಿಕಾರರು ಹೀಗೆ ಹೇಳಿದ್ದರೆ ನಿಮ್ಮಂತಹ ಉಪ-ಬುದ್ಧಿಜೀವಿಗಳು ಈ ರೀತಿ ಬರೆಯುತ್ತಿರಲಿಲ್ಲ.
ಕಾಂಗ್ರೆಸ್ ೫೦ ವರ್ಷ ಮಾಡಿದ ಕೆಟ್ಟು ಕೆಲಸಗಳನ್ನ, ಗೌಡತ್ರಯರು ಮಾಡಿದ ಘನಕಾರ್ಯಗಳನ್ನ ಮರೆತು ಬರಿ ಯಡ್ಡಿ ಚಡ್ಡಿ ಎಳೆದು ಪುನಃ ಕಾಂಗ್ರೆಸ್/ಗೌಡರಿಗೆ ಲಾಭ ಮಾಡುವಂಥಹ ಕೆಲಸ ಮಾಡ್ಬೇಡಿ.
ಕನ್ನಡದ ಒಳಿತಾಗುವ ಕೆಲಸ ಮಾತ್ರ ಮಾಡಿ, ಅಪ್ರತಿಮ ಕಾದಂಬರಿಕಾರನನ್ನು ದೂಷಿಸುವ ಕೆಲಸ ಅಲ್ಲ. (ಅವರ ಧರ್ಮಶ್ರೀ/ಆವರಣ ನಾನೂ ಓದಿದ್ದು, ಅವರ ಎಲ್ಲ ದೃಷ್ಟಿಕೋನವನ್ನು ಒಪ್ಪಿಲ್ಲ, ಆದರೆ ಅವರ ಕಾದಂಬರಿ ಕಲೆ ಮಾತ್ರ ಅತ್ಯದ್ಭುತ)
ಒಟ್ಟಿನಲ್ಲಿ ಅತ್ತ ಪುಲಿ ಇತ್ತ ದರಿ ಅನ್ನೋಹಂಗೆ ದೇಶದಲ್ಲಿ, ಈ ಕಡೆ ಧರ್ಮ ಮೂಲಭೂತವಾದಿಗಳು ಆ ಕಡೆ ಬುದ್ಧಿಜೀವಿಗಳು, ಮಧ್ಯದಲ್ಲಿ ಸಾಮಾನ್ಯ ಜನ ತೇಲಿಹೋಗುತ್ತಿರುವುದು ವಿಪರ್ಯಾಸ.
ಇಂತಿ,
ಕಾನಾರಾ
ಶಂಸೀರ್ ,
ಇನ್ನೂ ನೂರಾರು ಶತಮಾನಗಳೇ ಹೋದ್ರೂ ನೀವು ಧರ್ಮದ ಸಂಕೋಲೆಯಿಂದ ಹೊರಬರುವ, ನಿಮ್ಮದಲ್ಲದ ಧರ್ಮವನ್ನು ಒಪ್ಪುವ ಬುದ್ದಿ ಬರುವುದೇ ಇಲ್ಲ ಎಂದೆನಿಸುತ್ತದೆ. ಅಂತಹ ಒಂದು ಮನಸ್ತಿತಿಯಲ್ಲಿ ಬರೆದ ಲೇಖನ ಪ್ರಕಟಿಸುವುದಕ್ಕೆ ಮುನ್ನ ಯೋಚಿಸಬೇಕಿತ್ತು. ಆದರೆ ಯೋಚಿಸಿ ಕೆಲಸ ಮಾಡುವುದು ನಿಮ್ಮ ಜಾಯಮಾನದಲ್ಲೆ ಇಲ್ಲ ಅನ್ಸುತ್ತೆ. ನೀವು ಯೋಚಿಸುವುದೇನಿದ್ದರೂ ನಾಶ ಪಡಿಸುವುದರತ್ತ ಮಾತ್ರವೆ?