ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 19, 2010

8

ಭಾರತಕ್ಕೆ ರಾಹುಲ್ ಡೇಂಜರ್!

‍ರಾಕೇಶ್ ಶೆಟ್ಟಿ ಮೂಲಕ

ರಾಕೇಶ್ ಶೆಟ್ಟಿ

’ಭಾರತಕ್ಕೆ ರಾಹುಲ್ ಡೇಂಜರ್!’ ಅನ್ನೋ ಹೇಳಿಕೆಯನ್ನ ಕೊಟ್ರೆ ಕಾಂಗ್ರೆಸ್ಸಿಗರು,ರಾಹುಲ್ ಅಭಿಮಾನಿಗಳಿಗೆ ನನ್ನ ಅಟ್ಟಾಡಿಸಿಕೊಂಡು ಹೊಡಿಬೇಕು ಅನ್ನಿಸೋದಿಲ್ವಾ? ಅವ್ರಿಗ್ ಯಾಕೆ ಬೇರೆಯವರಿಗೂ ಇದೆಂತ ಎಡಬಿಡಂಗಿ ಹೇಳಿಕೆ ಮಾರಾಯ? ಅಂತ ಅನ್ನಿಸ್ಬಹುದು.ಆದ್ರೆ,ಒಂದ್ನಿಮಿಷ ಕೆಳಗೆ ಓದಿಬಿಡೀಪ್ಪಾ 😉

ಜಗತ್ತಿನ ರಾಜತಾಂತ್ರಿಕರ ಅದರಲ್ಲೂ ಮುಖ್ಯವಾಗಿ ಅಮೆರಿಕಾದ ಇಬ್ಬಗೆ ನೀತಿಯನ್ನ ಬಯಲು ಮಾಡುತ್ತ ಬಂದ ಜುಲಿಯನ್ ಅಸಾಂಜ್ನ ವಿಕಿಲೀಕ್ಸ್ ವರದಿಯಿಂದ ಈವರೆಗೂ ಭಾರತದಲ್ಲಿ ಅಂತ ಹಂಗಾಮವೇನು ಆಗಿರ್ಲಿಲ್ಲ,ಆದ್ರೆ ಮೊನ್ನೆ ಮೊನ್ನೆ ಕಾಂಗ್ರೆಸ್ಸಿನ ಪ್ರಧಾನಿ ರಾಹುಲ್ ಗಾಂಧಿ (ಸದ್ಯ! ಭಾರತದ ಪ್ರಧಾನಿ ಅಲ್ಲ! 😉 ) “ಮುಸ್ಲಿಂ ಉಗ್ರ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾದಂಥ ಸಂಘಟನೆಗಳಿಗೆ ಭಾರತದ ಕೆಲ ಮುಸ್ಲಿಂ ಸಂಘಟನೆಗಳಿಂದ ಬೆಂಬಲವಿದೆ. ಆದರೆ, ಅವರಿಗಿಂತ ಹಿಂದೂ ಉಗ್ರವಾದಿಗಳಿಂದ ಹೆಚ್ಚು ಆತಂಕವನ್ನು ಭಾರತ ಎದುರಿಸುತ್ತಿದೆ” ಅಂತ ಅಮೆರಿಕಾದ ರಾಜತಾಂತ್ರಿಕನ ಜೊತೆ ಹೇಳ್ಕೊಂಡಿದ್ರು ಅನ್ನೋ ಕೇಬಲ್ ಬಿಡುಗಡೆ ಮಾಡಿದಾಗ ನಂಗೂ ಮೇಲೆ ಹೇಳಿದಂತೆ ಅನ್ನಿಸಿತ್ತು,ಕಾಮನ್ ಸೆನ್ಸ್ ಇರೋ ಭಾರತದ ಬಹುತೇಕರಿಗೆ ರಾಹುಲ್ನ ಹೇಳಿಕೆಯು ಎಡಬಿಡಂಗಿತನದ್ದು ಅನ್ನಿಸಿರಿಬಹ್ದು.

ಹೇಳಿಕೆ ವೀರ ರಾಹುಲ್ ಗಾಂಧಿಗೆ ನನ್ನ ಮೂರು ಬಹಿರಂಗ ಪ್ರಶ್ನೆಗಳು.

ಮೊದಲನೆ ಪ್ರಶ್ನೆ : ಈ ’ಹಿಂದೂ ಭಯೋತ್ಪಾದಾನೆ’ ಅನ್ನೋ coined word ಏನಾದ್ರು ಇದ್ರೆ ಅದು ಈ ದೇಶದ ಆಂತರಿಕ ಸಮಸ್ಯೆ ಅಷ್ಟೆ.ಅದನ್ನ ಅಮೇರಿಕಾದವನ ಬಳಿ ಹೇಳಿಕೊಂಡು ಅಳುವಂತದ್ದೆನಾಗಿತ್ತು ಮಿ.ರಾಹುಲ್?ಸಮಸ್ಯೆ ಪರಿಹರಿಸಲು ಅಧಿಕಾರದಲ್ಲಿರೊ ತಮ್ಮ ಪಕ್ಷಕ್ಕೆ ಸಾಧ್ಯವಾಗದೆ ಇದ್ರೆ ಕೆಳಗಿಳಿಯೋದ್ ತಾನೆ,ಅದು ಬಿಟ್ಟು ದೇಶದ ಆಂತರಿಕ ವಿಷಯಗಳನ್ನ ವಿದೇಶಿಯವರ ಬಳಿ ಹೇಳಿಕೊಂಡಿದ್ದು ಯಾಕೆ?ಈ ಬಗ್ಗೆ ದೇಶದ ಜನತೆಗೆ ಉತ್ತರ ಕೊಡಬಲ್ಲಿರಾ?ಮೊದ್ಲೆ ಭಾರತದ ಸರ್ಕಾರಗಳು ಕೈಲಾಗದವು ಅಂದುಕೊಳ್ಳೊ ಪಾಕಿಗಳಿಗೆ, ಅಲ್ಲಿನ ಉಗ್ರರಿಗೆ ಮತ್ತು ಇಲ್ಲಿದ್ದುಕೊಂಡು ಅವರಿಗೆ ಸಹಾಯ ಮಾಡ್ತಾ ಇರೋ ದೇಶ ದ್ರೋಹಿಗಳಿಗೆ ನಿಮ್ಮ ಎಡಬಿಡಂಗಿ ಹೇಳಿಕೆಯಿಂದ ಎಷ್ಟು ಖುಷಿ ಆಗಿರ್ಬಹುದು ಅಂತ ಯೊಚಿಸಿದ್ದೀರಾ?

ಎರಡನೆಯ ಪ್ರಶ್ನೆ : ಹೀಗೂ ಒಂದು ಭಯೊತ್ಪಾದನೆಯಿದೆ ಅಂತ ಕಂಡು ಹಿಡಿದಿದ್ದು ಕಳೆದ ಬಾರಿ ನಿಮ್ಮದೆ ಸರ್ಕಾರ ಅಧಿಕಾರದಲ್ಲಿದ್ದಾಗ ಅಲ್ವಾ?,ಆ ಆರೋಪವನ್ನ ಮೊದಲು ಸಾಬೀತುಪಡಿಸಿ.ಅಪರಾಧ ಮಾಡಿರೋದೆ ನಿಜ ಆಗಿದ್ರೆ ಗಲ್ಲಿಗಾದ್ರು ಏರಿಸಿ, ಸುಮ್ನ್ಯಾಕೆ ’ದಿಗ್ಗನೆ’ ಅರ್ಧ ನಿದ್ರೆಯಲ್ಲೆದ್ದವರಂತೆ ಅನವಶ್ಯಕವಾಗಿ ಹುತಾತ್ಮ ಕರ್ಕರೆ ಹೆಸರೇಳಿಕೊಂಡು ಕಿರಿಕಿರಿ ಮಾಡ್ತಿರಾ?

ಭಯೋತ್ಪಾದನೆ ವಿಷ್ಯದಲ್ಲಿ ಬೇರೆಯವ್ರ ಮೇಲೆ ಗೂಬೆಕೂರಿಸುವ ಮೊದಲು ’ಅಫ಼್ಜಲ್ ಗುರು’ ಅನ್ನೊ ಕ್ರಿಮಿಯನ್ನ ಇನ್ನು ಎಷ್ಟು ದಿನ ಸಾಕ್ಬೇಕು ಅಂತ ಇದ್ದೀರಾ ಹೇಳಿ?ಯುದ್ಧ ವಿಮಾನದಲ್ಲಿ ಕೂರೋದಿಕ್ಕೆ-ಸಭೆ ಸಮಾರಂಭಗಳಿಗೆ ಹೋಗೊಕೆ ಸಮಯದ ಅಭಾವವಿಲ್ಲದ ಪ್ರತಿಭಾ ಪಾಟೀಲ್ ಅನ್ನೊ ರಾಷ್ಟ್ರಪತಿಗೆ (ಮೊದಲ ಮಹಿಳೆ ಅಂದ್ರೆ ಸರಿನಾ!?), ಆ ಕ್ರಿಮಿಯ ಕ್ಷಮಾದಾನದ ಅರ್ಜಿಯನ್ನ ಕಸದ ಬುಟ್ಟಿಗೆಸೆಯಲು ಇನ್ನ ಎಷ್ಟು ದಿನ ಬೇಕು ಅಂತ ನೀವಾದ್ರು ಕೇಳಿ ಮಿ.ರಾಹುಲ್,ಇಲ್ಲ ನಿಮ್ಮ ಅಮ್ಮ ಸೋನಿಯಾ ಅವ್ರಿಗಾದ್ರು ಕೇಳೊಕ್ ಹೇಳಿ.ಆಗುತ್ತಾ?, ಅವನನ್ನ ಗಲ್ಲಿಗೇರಿಸಿದರೆ ’ಕಾನೂನು ಸುವ್ಯವಸ್ಠೆ ನೆಪ ಹೇಳಿ – ವೋಟ್ ಬ್ಯಾಂಕ್ ಜಪ’ ಮಾಡ್ತಾ ಇರೋದು ಯಾರಿಗು ಗೊತ್ತಾಗೋದಿಲ್ಲ ಅಂತ ನೀವಂದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ ಅಷ್ಟೆ! ಇನ್ನ ಕಸಬ್ ಅನ್ನೊ ಕ್ರಿಮಿಯ ಕೇಸ್ ಈಗ ಕೋರ್ಟ್ನಲ್ಲಿರುವುದರಿಂದ ಅದು ಮುಗಿಯುವವರೆಗೂ ಅವ್ನು ನಮ್ಮ ತೆರಿಗೆಯ ಹಣದಿಂದ ಬಿರಿಯಾನಿ ತಿನ್ಕೊಂಡು ಇರ್ತಾನೆ! ಅದಿಕ್ಕ್ ನಾನ್ ನಿಮ್ಮನ್ನ ದೂರೊದಿಲ್ಲ ಬಿಡಿ.ಅದು ಈ ದೇಶದ ನ್ಯಾಯ!

’ಕೇಸರಿ-ಹಸಿರು ಭಯೊತ್ಪಾದನೆ’ ಆಯಿತು, ಇನ್ನ ಸದ್ದಿಲ್ಲದೆ ಏನಾದ್ರು ’ಬಿಳಿ ಭಯೋತ್ಪಾದನೆ’ ಇದೆಯಾ? ಅಂತ ಭಯೋತ್ಪಾದನೆಗೆ ಬಣ್ಣ ಹಚ್ಚಿದ ನಿಮ್ಮ ಸರ್ಕಾರದ ಗೃಹ ಮಂತ್ರಿ ಚಿದಂಬರಂ ಅವ್ರಿಗೆ ಒಮ್ಮೆ ಕೇಳಿ ನೋಡ್ರಿ ಮಿ.ರಾಹುಲ್.

ಮೂರನೆಯ ಪ್ರಶ್ನೆ : ರೀ ರಾಹುಲ್ ತಮ್ಗೆ ಈ ದೇಶದ ಬಗ್ಗೆ ನಿಜವಾದ ಕಾಳಜಿ ಅನ್ನೋದೆನಾದ್ರು ಇದ್ರೆ, ’ಅಸಲಿಗೆ ಈ ’ಕೇಸರಿ ಭಯೋತ್ಪಾದನೆ’ ಅನ್ನೋದು (ಇರೋದೆ ನಿಜ ಆದ್ರೆ!) ಯಾಕೆ ಹುಟ್ಟಿಕೊಂಡಿತು ಅಂತ ನಿಮ್ಮ ವಂಧಿ-ಮಾದಿಗರಾದಂತ ದಿಗ್ವಿಜಯ ಅವರಂತವರ ಬಳಿ ಕೇಳದೆ,ತಾವೇ ಸ್ವಲ್ಪ ರಾಜಕೀಯ ಮುಕ್ತವಾಗಿ,ಪೂರ್ವಾಗ್ರಹ ಪೀಡಿತರಾಗದೆ,ನಿರ್ಮಲ ಮನಸ್ಸಿನಿಂದ ಒಮ್ಮೆ, ’ಸರ್ವೆ ಭವಂತು ಸುಖಿನಾ,ಸರ್ವೆ ಸಂತು ನಿರಾಮಯಾಃ’ ಅಂತ ಸರ್ವರ ಏಳಿಗೆ ಬಯಸುತಿದ್ದ ಸಮುದಾಯದ ’ಕೆಲವರು ದಾರಿ ತಪ್ಪಿ’ ರಕ್ತ ಪಾತಕ್ಕೆ ಕೈ ಹಾಕುವಂತೆ ಪ್ರೇರೆಪಿಸಿದ ಅಂಶಗಳಾದರು ಏನಿರಬಹುದು ಅಂತ ಯೋಚಿಸಬಲ್ಲಿರಾ?

ದೇಶದ ಮೇಲೆ ತಮ್ಗೆ ಇರೋ ಪ್ರೀತಿ,ಕಾಳಜಿಯನ್ನ ಸಿಕ್ಯುಲರ್ ರಾಜಕಾರಣದ ಹೆಸರಲ್ಲಿ, ಎಂಜಲು ಮತದ ಆಸೆಗೆ ಬಿದ್ದ ಲಾಲು,ಮುಲಾಯಮ್,ಪಾಸ್ವಾನ್ರಂತ ರಾಜಕಾರಣಿಗಳು ’ದೇಶ ದ್ರೋಹ’ದ ಆರೋಪದ ಮೇಲೆ ನಿಷೇಧಿಸಲ್ಪಟ್ಟಿರೋ ’ಸಿಮಿ’ ಯಂತ ಸಂಘಟನೆ ಮೇಲಿನ ನಿಷೇಧವನ್ನ ಹಿಂತೆಗೆದುಕೊಳ್ಳಿ ಅಂತ ಬಾಯಿ ಬಡಿದುಕೊಳ್ಳುವಾಗ ’ಹೇಳಿಕೆ’ ಕೊಡೊಕ್ ಏನಾಗಿತ್ತು?

ತಮಗೆ ಯೋಚಿಸೋಕ್ ಸಮಯವಿಲ್ಲ ಅನ್ನೋದಾದ್ರೆ ಈ ಸಮಸ್ಯೆಯನ್ನ ತೀರ ಸರಳವಾಗಿ ಹೇಳಿಬಿಡ್ತೆನೆ.’ಮನೆಯಲ್ಲಿ ತಪ್ಪು ಮಾಡುತ್ತಿರೋ ಮಗನನನ್ನ ಗದರದೆ, ತಪ್ಪನ್ನ ತೋರಿಸುತಿದ್ದ,ತಪ್ಪು ಮಾಡದಂತೆ ಗದರುತಿದ್ದ ಇನ್ನೊಬ್ಬ ಮಗನ ಮಾತಿಗು ಬೆಲೆ ಕೊಡದೆ ಅವನನ್ನ ಕಡೆಗಣಿಸಿ,ತಪ್ಪು ಮಾಡಿದ ಮಗನಿಗೆ ಅತಿಯಾಗಿ ಮುದ್ದು ಮಾಡಿ,ತಪ್ಪಿಗೂ ಗದರದೆ ’ಧೃತರಾಷ್ಟ್ರ ಪ್ರೇಮ’ ತೋರಿಸಿ ’ಮನೆ’ ಹಾಳಾದ್ರು ಪರ್ವಾಗಿಲ್ಲ ’ನೀನು ನನ್ನ್ ಮುದ್ದು ಪುಟ್ಟ ಕಣೋ’ ಅನ್ನೊ ರೀತಿ ವರ್ತಿಸುತ್ತಿರುವ ಸಿಕ್ಯುಲರ್ ರಾಜಕಾರಣವೆ ಇಂದು ಕೆಲಯುವಕರು ಹಾದಿ ತಪ್ಪಿ ಅಮಾಯಕರ ರಕ್ತ ಹರಿಸಲು ಮೂಲ ಪ್ರೇರಣೆ.ಅದನ್ನ ಮೊದಲು ಅರಿತುಕೊಳ್ಳಿ.

ಎಂಜಲು ವೋಟಿನ ಆಸೆಗೆ ಬಿದ್ದು ’ವೋಟ್ ಬ್ಯಾಂಕ್ ರಾಜಕಾರಣ’ ಮಾಡುವುದನ್ನ ನಿಲ್ಲಿಸಿ ಮನೆಯ ಮಕ್ಕಳೆಲ್ಲರನ್ನು ಪ್ರೀತಿಯಿಂದ ನೋಡುವುದನ್ನ ಕಲಿಯಿರಿ.ಅಧಿಕಾರದಲಿದ್ದುಕೊಂಡು ಸಮಸ್ಯೆಗಳಿಗೆ ಬೇರೊಬ್ಬರನ್ನ ದೂರುವ ಬದಲು ಸಮಸ್ಯೆ ಮೂಲ

ತಿಳಿದುಕೊಂಡು ಚಿಕಿತ್ಸಕನಂತೆ ವರ್ತಿಸಿ.ಹಾಂ! ಹಾಗೆ ಇನ್ನೊಂದು ಮಾತು ಕಣ್ರಿ ಇನ್ಮೆಲಾದ್ರು ದೇಶದ ಆಂತರಿಕ ಸಮಸ್ಯೆಗಳನ್ನ ವಿದೇಶಿಯರ ಜೊತೆ ಮಾತಾಡುವುದನ್ನ ನಿಲ್ಲಿಸಿಬಿಡಿ ಪ್ಲೀಸ್.

8 ಟಿಪ್ಪಣಿಗಳು Post a comment
  1. ಆಸು ಹೆಗ್ಡೆ's avatar
    ಡಿಸೆ 20 2010

    ವಿದೇಶಿಯರು ವಿದೇಶಿಯವರ ಶೈಲಿಯಲ್ಲಿ ಮಾತನಾಡದೇ ಇನ್ನೇನು ಮಾಡಿಯಾರು ಹೇಳಿ, ರಾಕೇಶ್.
    ಈ ಸೋನಿಯಾ, ರಾಹುಲರೆಂಬ ನಕಲಿ ಗಾಂಧಿಗಳ ಬಂಡವಾಳ ಏನು, ಅವರ ಪೂರ್ವಾಪರ ಏನು ಅನ್ನುವುದರ ಬಗ್ಗೆ ಕೂಲಂಕಶ ತನಿಖೆ ನಡೆಸಿ ಇಟಲಿಗೆ ಅಟ್ಟಬೇಕು. ಆಗಷ್ಟೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆತೀತು.

    ಉತ್ತರ
    • rakeshshetty1's avatar
      rakeshshetty1
      ಡಿಸೆ 20 2010

      ಇವರನ್ನೇ ಭವಿಷ್ಯದ ಆಶಾಕಿರಣ ಅಂತ ಬೇರೆ ನಂಬಿಸಲಾಗುತ್ತಿದೆ.ಮಾಧ್ಯಮಗಳಲಲ್ಲಿ ಭರ್ಜರಿ ಪ್ರಚಾರ ಇರುವಾಗ ಇವ ಪ್ರಧಾನಿ ಕುರ್ಚಿ ಏರಿಬಿಡುತ್ತಾನೆ ಅನ್ನಿಸುತ್ತೆ, ನಮ್ಮ ಕರ್ಮ ! 😦

      ಉತ್ತರ
  2. ರವಿ's avatar
    Ravi
    ಡಿಸೆ 20 2010

    ಪೀಪಲ್ ವಿಥ್ ಬ್ರೈನ್ಸ್ ಅಂತೆ. ಏನೋಪ “ಬ್ರೈನ್” ಅರ್ಥ ಬದಲಾಗಿದೆಯೋ ಏನೋ. ಚಿದಂಬರಂ (ಭಯೋತ್ಪಾದನೆಗೆ ಬಣ್ಣ ಕೊಡೋ ಮನುಷ್ಯ), ದಿಗ್ವಿಜಯ್ (ಕನಸುಗಾರ), ಕಪಿಲ್ ಸಿಬಲ್ (ಜರ್ನೆಲ್ ಸಿಂಗ್ ಶೂ ಎಸೆದ ಘಟನೆ) ಈಗ ರಾಹುಲ್ ಗಾಂಧಿ.. ಯಾವಾಗ ಏನು ಮಾತಾಡುತ್ತಾರೋ ಗೊತ್ತೇ ಆಗಲ್ಲ.

    ಉತ್ತರ
    • rakeshshetty1's avatar
      rakeshshetty1
      ಡಿಸೆ 20 2010

      ಮಂಗಕ್ಕೆ ಹೆಂಡ ಕುಡಿಸಿ ಬಿಟ್ರೆ ಹೆಂಗಾಗುತ್ತೋ ಹಂಗೆ ಇವರ ಕತೆಗಳು 🙂 ಧನ್ಯವಾದ ರವಿ 🙂

      ಉತ್ತರ
  3. ಪ್ರಸನ್ನ's avatar
    ಡಿಸೆ 31 2010

    ಸುದರ್ಶನ್ ಹೇಳಿದ್ದು ಅತಿ ಅನ್ಸಿದ್ರೂ ಅದ್ರಲ್ಲಿ ಹುರುಳಿಲ್ಲ ಅಂತ ಹೇಳಲಿಕ್ಕೆ ಬರಲ್ಲ. C I A ಅಲ್ದೇ ಇದ್ರೂ, ರೋಂ ನಿಂದ ಬಂದಿರುವ ಕ್ರಿಶ್ಚಿಯನ್ ಏಜೆಂಟ್ ಅಂದ್ರೆ ತಪ್ಪೇನೂ ಇಲ್ಲ ಅನ್ಸುತ್ತೆ. ಭರತೀಯತೆ ನಾಶ ಪಡಿಸಿದರಷ್ಟೆ ಈ ದೇಶ ಸುಲಭ ತುತ್ತಾಗುವುದು ಎಂದು ಎಲ್ಲರೂ ಕಾಯುತ್ತಿದ್ದಾರೆ.

    ಉತ್ತರ
    • ಪ್ರಸನ್ನ,
      ಎಣ್ಣೆ ಬಳಿದುಕೊಂಡು ಅಖಾಡಕ್ಕಿಳಿದವರ ಜೊತೆಗಿನ ಯುದ್ಧದಲ್ಲಿ ಹುಶಾರಗಿರಬೆಕು.ಒರಟರಂತೆ ಆಡಿದರೆ ಅವರೆ ಗೆಲ್ಲೋದು.ಏನಿದ್ರು ಅವರದೆ ರೀತಿಯಲ್ಲಿ ನಯವಾಗಿ ತಿರುಗೇಟು ನೀಡ್ಬೆಕು 🙂

      ಉತ್ತರ
  4. ಮಹೇಶ ಪ್ರಸಾದ ನೀರ್ಕಜೆ's avatar
    ಮಹೇಶ ಪ್ರಸಾದ ನೀರ್ಕಜೆ
    ಜನ 8 2011

    ಕೊನೇ ಪಕ್ಷ ನಮ್ಮ ಕರ್ನಾಟಕದಲ್ಲಿ ಇಂಥೋರು ಕಾಲಿಡದಂಗೆ ನೋಡ್ಕೋಬೇಕು. ಏನಂತೀರಿ? ಈಗಾಗಲೇ ರೆಡ್ಡಿಗಳು, ಲಾಡುಗಳು ನಮ್ಮ ರಾಜ್ಯವನ್ನು ಬೋಳಿಸಿದ್ದು ಸಾಕು.

    ಉತ್ತರ
    • ಹೌದು ಮಹೇಶ್. ಸೋನಿಯಮ್ಮನ ಮುದ್ದು ಕಂದ ಕಾಂಗ್ರೆಸ್ಸಿಗಷ್ಟೇ ಅನಿವಾರ್ಯ ಕರ್ನಾಟಕಕ್ಕಲ್ಲ

      ಉತ್ತರ

Leave a reply to ರಾಕೇಶ್ ಶೆಟ್ಟಿ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments