ವಿಷಯದ ವಿವರಗಳಿಗೆ ದಾಟಿರಿ

ಜನವರಿ 22, 2011

6

ರಾಜ್ಯಪಾಲರು…ಅತಿರೇಕ ಹಾಗೂ ಯಡಿಯೂರಪ್ಪ…..

‍ನಿಲುಮೆ ಮೂಲಕ

  ‘ ನಂದನವನ’
                                        
ಭ್ರಷ್ಟಚಾರ, ಸ್ವಜನಪಕ್ಷಪಾತ, ಅಧಿಕಾರ ದುರಪಯೋಗ ಕಾರಣಗಳಿಂದಾಗಿ ಮುಖ್ಯಮಂತ್ರಿ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ ಹೂಡಲು ರಾಜ್ಯಪಾಲ ಹನ್ಸ್ರಾಜ್ ಭಾರದ್ವಾಜ್ ಅನುಮತಿ ನೀಡಿದ್ದಾರೆ. ಕಟ್ಟರ್ ಕಾರ್ಯಕರ್ತರ ಪಕ್ಷವಾದ ಬಿಜೆಪಿ, ಸಂಘಪರಿವಾರಿಗಳು ನಾಚುವ ಬದಲು ರಾಜ್ಯಪಾಲರ ವಿರುದ್ಧವೇ ತೊಡೆತಟ್ಟಿ ನಿಂತಿರುವುದು ನಾಚಿಕೇಡು. ಭ್ರಷ್ಟಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಕಾನೂನಿನಲ್ಲಿ ಒಬ್ಬ ಸಾಮಾನ್ಯ ಮನುಷ್ಯನಿಂದ ಹಿಡಿದು ಮುಖ್ಯಮಂತ್ರಿಯವರಿಗೆ ಒಂದೇ ನ್ಯಾಯ ಎಂಬ ಘೋಷ ವ್ಯಾಕ್ಯವನ್ನು ವಕೀಲರಾದ ಸಿರಾಜ್ ಭಾಷಾ, ರಾಮಚಂದ್ರ ಸಿಎಂ ವಿರುದ್ದ ಮೊಕದ್ದಮೆಗೆ ಅವಕಾಶ ನೀಡುವಂತೆ ರಾಜ್ಯಪಾಲರ ಅನುಮತಿ ಕೋರುವ ಮೂಲಕ ಎತ್ತಿ ಹಿಡಿದಿದ್ದಾರೆ.
ಮೊದಲಿನಿಂದಲೂ ರಾಜ್ಯದಲ್ಲಿ ಒಂದು ರೀತಿ ವಿರೋಧ ಪಕ್ಷದಂತೆಯೇ ವತರ್ಿಸಿಕೊಂಡು ಬಂದ ರಾಜ್ಯಪಾಲರು ಸಿಎಂ  ವಿರುದ್ಧ ಮೊಕದ್ದಮೆ ಹೂಡಲು ಖಂಡಿತಾ ಅನುಮತಿ ಕೊಟ್ಟೆ ಕೊಡುತ್ತಾರೆ ಎಂಬುದರಲ್ಲಿ ಎರಡು ಮಾತು ಇರಲಿಲ್ಲ. ರಾಜ್ಯಪಾಲರು ಈ ಹಿಂದಿನ ಕೆಲವು ಪ್ರಕರಣಗಳಲ್ಲಿ ಸಿಎಂ ಹಾಗೂ ಬಿಜೆಪಿ ಸಕರ್ಾರದ ವಿರುದ್ಧದ ತೋರಿದ ಅಸಹಕಾರ ನಿಜಕ್ಕೂ ಅವರ ಹುದ್ದೆಗೆ  ಘನತೆ ತರುವಂಥದ್ದಲ್ಲ. ಆದರೂ ಭ್ರಷ್ಟಾಚಾರದ ವಿಷಯದಲ್ಲಿ ಅವರು ತೆಗೆದುಕೊಂಡಿರುವ ನಿಧರ್ಾರಕ್ಕೆ ಹ್ಯಾಸ್ಟ್ ಅಫ್ ಹೇಳಲೇಬೇಕು.
ರಾಜಕೀಯವಾಗಿ ರಾಜ್ಯಪಾಲರ ಕ್ರಮ ದುರುದ್ದೇಶಪೂರಿತ ವಿರಬಹುದು. ಆದರೆ ಸಾಂವಿಧಾನಿಕವಾಗಿ, ಈ ನೆಲದ ಕಾನೂನು, ಪ್ರಜಾಪ್ರಭುತ್ವವನ್ನು ಗೌರವಿಸುವ ಪ್ರತಿಯೊಬ್ಬ ವ್ಯಕ್ತಿಯು ರಾಜ್ಯಪಾಲರ ಈ ನಿರ್ಣಯವನ್ನು ಗೌರವಿಸುವಂಥದೇ ಆಗಿದೆ. ಮುಖ್ಯಮಂತ್ರಿ ವಿರುದ್ಧದದ ಭ್ರಷ್ಟಾಚಾರದ ಪ್ರಕರಣಗಳು ಪುಂಖಾನುಫುಂಖವಾಗಿ ಮಾಧ್ಯಮಗಳಲ್ಲಿ ಈ ಹಿಂದೆಯೇ ವರದಿಯಾಗಿದ್ದವು. ಒಮ್ಮೆ ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗಕ್ಕೆ ಕಾಲಿಟ್ಟರೂ ಅಲ್ಲಿಯ ಸಾಮಾನ್ಯ ಜನರು ಕೂಡ ಸಿಎಂ ಅವರ ಪ್ರವರ ಹೇಳುತ್ತಾರೆ. ಅಷ್ಟೂ ಅಲ್ಲದೇ ರಾಜ್ಯಪಾಲರಿಗೆ ಆ ಇಬ್ಬರು ವಕೀಲರು ಕೇವಲ ಅನುಮತಿ ಕೋರಿ ಅಜರ್ಿ ಬರೆದಿಲ್ಲ, ಬದಲಿಗೆ 2000 ಸಾವಿರ ಪುಟಗಳಷ್ಟು ದಾಖಲೆ, ಇನ್ನೂರು ಪುಟಗಳ ವರದಿಯನ್ನು ನೀಡಿದ್ದಾರೆ.


ಕೇಂದ್ರದಲ್ಲಿ ಲೋಕಪಾಲ್ ಮಸೂದೆಯನ್ನು ಜಾರಿಗೆ ತರಬೇಕೆಂಬ ಚಚರ್ೆ ನಡೆದಿರುವ ಸಮಯದಲ್ಲೇ ರಾಜ್ಯಪಾಲರ ಈ ನಿಧರ್ಾರ ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಹೊಸ ಹೆಜ್ಜೆಯಾಗಲಿದೆ ಎಂದು ಆಶಿಸಬಹುದು. ಆದರೆ ಇದೇ ದಾರಿ ಮುಂದುವರೆಯಬೇಕಷ್ಟೆ…. ಕಟ್ಟಲೆ ಹೂಡಿದ ತಕ್ಷಣ ಸಿಎಂ ರಾಜೀನಾಮೆ ಕೊಡಬೇಕಾಗಿ ಬರಬೇಕೆಂಬುದು ಸಂಕಷ್ಟವಿರಬಹುದು. ಆದರೆ ಅವರು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ವೆಸಗಿರುವುದು ಬೆಳಕಿಗೆ ಬಂದ ಡಿನೋಟಿಫಿಕೈಷನ್ ಹಗರಣಗಳಿಂದ ತಿಳಿದುಬರುತ್ತದೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ಈ ಹೋರಾಟ ಎಲ್ಲ ಭ್ರಷ್ಟ ರಾಜಕಾರಣಿಗಳಿಗೆ ವಿಸ್ತರಿಸಿದರೆ ದೇಶ, ರಾಜ್ಯ ಕ್ಲೀನ್ ಆಗಲಿದೆ.

ಚಿತ್ರಕೃಪೆ: news.in.msn.com

6 ಟಿಪ್ಪಣಿಗಳು Post a comment
  1. Asthra's avatar
    Asthra
    ಜನ 22 2011

    Good point of view..

    ಉತ್ತರ
  2. Manjunatha HT's avatar
    ಜನ 22 2011

    ದುರ೦ತ ನಾಯಕರಾದ ಯಡ್ಯೂರಪ್ಪ!

    ರೈತ ಹೋರಾಟದ ಹಿನ್ನೆಲೆಯಿ೦ದ ಬ೦ದು, ವಿರೋಧಪಕ್ಷದ ನಾಯಕರಾಗಿ ಸುದೀರ್ಘಕಾಲ ಹೋರಾಡಿ, ಕೊನೆಗೆ ಭಾಜಪವನ್ನು ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದು ಇತಿಹಾಸ. ತಮ್ಮದೇ ಪಕ್ಷದವರಿ೦ದ ಸಾಕಷ್ಟು ಕಿರಿಕಿರಿ ಅನುಭವಿಸಿ, ವಿರೋಧಪಕ್ಷಗಳಿ೦ದಲೂ ಸಾಲು ಸಾಲಾಗಿ ಅವಮಾನ್ನಿತರಾಗಿ, ಕೊನೆಗೆ ತಾವೇ ಮಾಡಿದ ಸ್ವಯ೦ಕೃತಾಪರಾಧಗಳಿ೦ದ ಇ೦ದು ರಾಜ್ಯಪಾಲರ ಕೆ೦ಗಣ್ಣಿಗೆ ಗುರಿಯಾಗಿ ನ್ಯಾಯಾಲಯದಲ್ಲಿ ಅಪರಾಧಿಯಾಗಿ ನಿಲ್ಲಬೇಕಾಗಿ ಬ೦ದಿದ್ದು ನಿಜಕ್ಕೂ ದುರ೦ತ. ಕರ್ನಾಟಕದ ಇತಿಹಾಸದಲ್ಲಿಯೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸಲಿರುವ ಮೊದಲ ಮುಖ್ಯಮ೦ತ್ರಿ ಎ೦ಬ ಕಳ೦ಕ ಅ೦ಟಿಕೊ೦ಡಿದೆ. ಇ೦ತಹ ಸ೦ದರ್ಭದಲ್ಲಿ ಯೋಗ್ಯರಾದವರೊಬ್ಬರನ್ನು ಆರಿಸಿ, ಸರ್ಕಾರ ಸುಸೂತ್ರವಾಗಿ ನಡೆಯುವ೦ತೆ ಮಾಡಿ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ತು೦ಬಾ ಸೂಕ್ತ. ಆದರೆ ಆ ನೈತಿಕತೆ ಯಡ್ಯೂರಪ್ಪನವರಲ್ಲಿದೆಯೇ ಎನ್ನುವುದು ಯಕ್ಷಪ್ರಶ್ನೆ.

    ಉತ್ತರ
  3. Iranagouda patil's avatar
    Iranagouda patil
    ಜನ 23 2011

    BJP ge matha neediddakke naachike yaaguttide. yeddyya jaathi bhalakke hedaruttiruva kendra BGP naayakarige naachike yaaguttillave..?
    dirty politicians.

    ಉತ್ತರ
  4. ashwin's avatar
    ಜನ 24 2011

    As of now, none knows where is the state heading to..? but for sure I dread the ensuing days of dirty dominance of caste politics, never heard before or after the Independent Republic India. When will our state rise above these petty minded who rule us.?

    ಉತ್ತರ
  5. Narendra Kumar.S.S's avatar
    Narendra Kumar.S.S
    ಜನ 25 2011

    ವಿಚಾರಣೆಗೆ ಮೊದಲೇ ವ್ಯಕ್ತಿಯನ್ನು ಕಳ್ಳನೆಂದು ನಿರ್ಧರಿಸಿಬಿಟ್ಟರೆ ವಿಚಾರಣೆ ಏತಕ್ಕೆ?
    ದಿನ ಬೆಳಗಾದರೆ ರಾಜಕೀಯದ ಹೇಳಿಕೆಗಳನ್ನು ನೀಡುತ್ತಿರುವ ರಾಜ್ಯಪಾಲರು, ಮೊದಲು ತಮ್ಮ ನಡೆಯನ್ನು ತಿದ್ದಿಕೊಳ್ಳಬೇಕು.
    “ತಾನು ಮೊದಲಿಗೆ ಕಾಂಗ್ರೆಸ್ಸಿಗ” ಎಂಬ ಹೇಳಿಕೆಯನ್ನು ನೀಡಿರುವ ರಾಜ್ಯಪಾಲರು ಪಕ್ಷಪಾತಿಗಳಾಗದೆ ವರ್ತಿಸುವುದಾದರೂ ಹೇಗೆ?
    ಈ ರಾಜ್ಯಪಾಲರನ್ನು ಕರ್ನಾಟಕಕ್ಕೆ ಕಳುಹಿಸಿದಾಗಲೇ ಎಲ್ಲರಿಗೂ ತಿಳಿದಿತ್ತು ಅದರ ಉದ್ದೇಶ.

    ಇನ್ನು ಇವರು ಕೇಂದ್ರದಲ್ಲಿ ಮಂತ್ರಿಗಳಾಗಿದ್ದಾಗ ಬೊಫ಼ೊರ್ಸ್ ಹಗರಣದಲ್ಲಿ ಭಾಗಿಯಾಗಿದ್ದ ಕಳಂಕವನ್ನೂ ಹೊತ್ತವರು.
    ತಾವು ಶುದ್ಧರಾಗಿಲ್ಲದ ವ್ಯಕ್ತಿಯೊಬ್ಬರು ಬೇರೊಬ್ಬರ ಶುದ್ಧತೆಯನ್ನು ಪರೀಕ್ಷಿಸುವ ಅರ್ಹತೆಯನ್ನೇ ಹೊಂದಿರುವುದಿಲ್ಲ.

    ಯೆಡ್ಯೂರಪ್ಪನವರು ಸ್ವಜನಪಕ್ಷಪಾತ ಮಾಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
    ಅದಕ್ಕಾಗಿ ಅವರನ್ನು ಕೆಳಗಿಳಿಸಲೇಬೇಕು.
    ಅಂತಹವರನ್ನು ಆರಿಸಿದ್ದಕ್ಕೆ ನಾವೆಲ್ಲಾ ನಾಚಿಕೆಯಿಂದ ತಲೆತಗ್ಗಿಸಬೇಕು.

    ಆದರೆ, ಯೆಡ್ಯೂರಪ್ಪನವರಿಗಿಂತ ಮೊದಲು ಸ್ಥಾನ ತ್ಯಾಗ ಮಾಡಬೇಕಾದವರು ರಾಜ್ಯಪಾಲರು.
    ಯೆಡ್ಯೂರಪ್ಪನವರ ತಪ್ಪುಗಳ ನಡುವೆ ರಾಜ್ಯಪಾಲರ ಸ್ವಜನಪಕ್ಷಪಾತವನ್ನು, ಭ್ರಷ್ಟಾಚಾರವನ್ನು, ರಾಜಭವನದಲ್ಲಿ ರಾಜಕೀಯ ನಡೆಸಿದ್ದನ್ನು ಮರೆಯುವುದು ಬೇಡ.
    ಎಲ್ಲರಿಗೂ ಒಂದೇ ಕಾನೂನು.
    ರಾಜಕೀಯ ನಡೆಸುವ ರಾಜ್ಯಪಾಲರು ಕರ್ನಾಟಕಕ್ಕೆ ಬೇಡವೇ ಬೇಡ.

    ಉತ್ತರ
  6. Shivakumar Katte's avatar
    Shivakumar Katte
    ಜನ 25 2011

    ರಾಜ್ಯಪಾಲರ ಕ್ರಮ ಸಂವಿಧಾನಿಕವಾಗಿ ಸರಿ ಎಂದಾದಾರೂ ಸ್ವತಃ ಅವರ ನೈತಿಕತೆಯ ಪ್ರಶ್ನೆ ಬಂದಾಗ ಅವರೂ ಸಹ ರಾಜಕೀಯದಿಂದ ಹೊರತಲ್ಲ ಎನ್ನುವುದನ್ನು ಅವರ ನಡವಳಿಕೆಯ ಮೂಲಕ ಅವರೇ ಅನೇಕ ಬಾರಿ ಸಾಬೀತು ಮಾಡಿದ್ದಾರೆ. ಕೇಂದ್ರ ಕಾನೂನು ಸಚಿವರಾಗಿದ್ದಾಗ ಕ್ವಟ್ರೋಚಿಯವರ ಬ್ಯಾಂಕ್ ಖಾತೆಗಳನ್ನು ತೆರೆಸುವ ಮೂಲಕ ಸಾಚಾತನವನ್ನು ತೋರಿಸಿಲ್ಲವೇ? ಹಾಗಂತ ಮುಖ್ಯಮಂತ್ರಿ ಮಾಡಿದ್ದು ಸರಿ ಎನ್ನುವ ಹಾಗಿಲ್ಲ. ಆದರೆ ಅವರು ಪೂರ್ವಾಗ್ರಹ ಪೀಡೀತರು ಎನ್ನುವುದು ಸಂಶಯಾತೀತ. ಕೊನೆ ಪಕ್‍ಚ್ ಮುಖ್ಯಮಂತ್ರಿಯವರಿಗೆ ಆರೋಪಗಳನ್ನು ಅಲ್ಲಗಳೆಯಲು ಅವಕಾಶವನ್ನೂ ಕೊಡಬಾರದೇ?

    ಒಟ್ಟಾರೆ ರಾಜಕೀಯ ವ್ಯಕ್ತಿಗಳನ್ನು ರಾಜ್ಯಪಾಲರಾಗಿ ನೇಮಿಸುವುದರ ಪರಿಣಾಮವೇ ಇಂದಿನ ಈ ಪರಿಸ್ಥಿತಿಗೆ ಕಾರಣ.

    ಉತ್ತರ

Leave a reply to ashwin ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments